Third-party premium has changed from 1st June. Renew now
ಉಪಯೋಗಿಸಿದ ಕಾರನ್ನು ಖರೀದಿಸಲು ಟಿಪ್ಸ್
ನಿಮ್ಮ ಪೋಷಕರು ನಿಮಗಾಗಿ ಮೊದಲ ಸೈಕಲ್ ಖರೀದಿಸಿದ ಸಮಯವನ್ನು ನೆನಪಿಸಿಕೊಳ್ಳಿ? ಇದು ಬಹಳ ಹಿಂದಿನ ವಿಷಯವೆಂದು ನಮಗೆ ತಿಳಿದಿದೆ. ಆದರೆ ಆ ಸಂತೋಷವನ್ನು ಇಂದಿಗೂ ಅನುಭವಿಸಬಹುದು.
ಆ ವಯಸ್ಸಿನಲ್ಲಿ ನಾವು ಚಿಕ್ಕವರು ಮತ್ತು ನಮ್ಮ ಪೋಷಕರ ಮೇಲೆ ಅವಲಂಬಿತರಾಗಿದ್ದೇವು. ಈಗ ಅದರ ಬಗ್ಗೆ ಮಾತನಾಡುವುದಾದರೆ, ಇಂದು ನಾವು ಆರಾಮದಾಯಕವಾದ ಕಾರ್ ಒಂದನ್ನು ಖರೀದಿಸಲು ನಿರ್ಧರಿಸುವ ಸ್ವತಂತ್ರ ವ್ಯಕ್ತಿಗಳಾಗಿ ನಿಂತಿದ್ದೇವೆ.
ಆದರೆ ಪ್ರತಿ ಬಾರಿಯೂ ನಾವು ಹೊಸ ಕಾರನ್ನು ಖರೀದಿಸಲು ಸಾಧ್ಯವಿಲ್ಲ. ಹಾಗಾಗಿ ನಾವು ಉಪಯೋಗಿಸಿದ ಕಾರ್‌ಗಳನ್ನು ಖರೀದಿಸುವುದರ ಬಗ್ಗೆ ಯೋಚಿಸುತ್ತೇವೆ. ಉಪಯೋಗಿಸಿದ ಕಾರ್‌ನ ಖರೀದಿಯ ಮೇಲೆ ನಿಜವಾಗಿಯೂ ಪರಿಣಾಮ ಬೀರುವ ಕೆಲವು ಅಂಶಗಳಿವೆ. ಅವುಗಳೆಂದರೆ ಕಾರ್‌ನ ಮೌಲ್ಯ, ವೈಶಿಷ್ಟ್ಯಗಳು, ವಯಸ್ಸು, ಕ್ಲೈಮ್‌ಗಳು ಅಥವಾ ರಿಪೇರಿಗಳು ಮತ್ತು ಉದ್ದೇಶವನ್ನು ಒಳಗೊಂಡಿರುತ್ತದೆ.
ಭಾರತದಲ್ಲಿ ಉಪಯೋಗಿಸಿದ ಕಾರನ್ನು ಖರೀದಿಸುವ ಮೊದಲು ಪರಿಶೀಲಿಸಬೇಕಾದ 10 ವಿಷಯಗಳು
ಉಪಯೋಗಿಸಿದ ಕಾರ್‌ನ ಇತಿಹಾಸವನ್ನು ತಿಳಿದುಕೊಳ್ಳಿ: ಉಪಯೋಗಿಸಿದ ಕಾರ್‌ನ ಇತಿಹಾಸವನ್ನು, ಅದರ ವಯಸ್ಸು, ಅದನ್ನು ಮಾರಾಟ ಮಾಡುತ್ತಿರುವ ಕಾರಣ ಮತ್ತು ಅದು ಒಳಗೊಂಡಿರುವ ಅಪಘಾತಗಳ ಬಗ್ಗೆ ಕಂಡುಹಿಡಿಯಲು ಪ್ರಯತ್ನಿಸಿ. ಯಾವುದಾದರೂ ಕ್ಲೈಮ್‌ಗಳ ವಿವರಗಳು ಇದ್ದಲ್ಲಿ, ಅದನ್ನು ನೀಡುವಂತೆ ಸೆಲ್ಲರ್ ಅಥವಾ ಇನ್ಶೂರೆನ್ಸ್ ಕಂಪನಿಯನ್ನು ಕೇಳಿ. ಈ ಹಿಂದೆ ಕಾರಿಗೆ ಯಾವುದಾದರೂ ಹಾನಿಯಾಗಿದೆಯೇ ಎಂದು ಕಂಡುಹಿಡಿಯಲು ನಿಮ್ಮ ರಿಸರ್ಚ್ ಮಾಡಿ.
ಪೇಸ್‌ಮೇಕರ್ ಅನ್ನು ಪರಿಶೀಲಿಸಿ- ಕಾರಿನ ಎಂಜಿನ್: ಎಂಜಿನ್ ಯಾವುದೇ ಕಾರಿನ ಪ್ರಮುಖ ಭಾಗವಾಗಿದೆ. ಯಾವುದೇ ಲಿಕೇಜ್, ಕ್ರ್ಯಾಕ್ಡ್ ಹೋಸ್‌ಗಳು, ತುಕ್ಕು ಮತ್ತು ಬೆಲ್ಟ್‌ಗಾಗಿ ನೀವು ಎಂಜಿನ್ ಅನ್ನು ಸರಿಯಾಗಿ ಪರಿಶೀಲಿಸುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅಲ್ಲದೆ, ಡಿಸ್‌ಕಲರೇಶನ್‌ಗಾಗಿ ಆಯಿಲ್ ಮತ್ತು ಟ್ರಾನ್ಸಮಿಷನ್ ಫ್ಲೂಯಿಡ್ ಅನ್ನು ಪರೀಕ್ಷಿಸಿ. ಆರೋಗ್ಯಕರ ಎಂಜಿನ್‌ನಲ್ಲಿ, ಆಯಿಲ್ ತಿಳಿ ಕಂದು ಬಣ್ಣದ್ದಾಗಿರಬೇಕು ಮತ್ತು ಟ್ರಾನ್ಸಮಿಷನ್ ಫ್ಲೂಯಿಡ್ ಗುಲಾಬಿ ಅಥವಾ ಕೆಂಪು ಬಣ್ಣದ್ದಾಗಿರಬೇಕು.
ಯಾವುದಾದರೂ ತುಕ್ಕು ಅಥವಾ ಪೇಂಟ್‌ನ ಹಾನಿ: ನೀವು ಖರೀದಿಸಲು ಬಯಸುವ ಕಾರ್ ದೊಡ್ಡದಾದ ತುಕ್ಕು ತೇಪೆಗಳನ್ನು ಹೊಂದಿದ್ದರೆ, ಯೋಚಿಸಿ ಖರೀದಿಸಲು ಗಮನ ನೀಡಿ. ನೀವು ಉತ್ತಮ ಡೀಲ್ ಪಡೆಯುತ್ತಿದ್ದರೆ ಸಣ್ಣ ಚಿಪ್ ಆಫ್‌ಗಳನ್ನು ನಿರ್ಲಕ್ಷಿಸಬಹುದು.
ಕಾರ್ ಓಡಿದ ಮೈಲುಗಳು: ಉಪಯೋಗಿಸಿದ ಕಾರ್‌ನ ವಯಸ್ಸಿಗೆ ಹೋಲಿಸಿದರೆ, ಅದು ಓಡಿದ ಮೈಲುಗಳನ್ನು ನೀವು ತಿಳಿದಿರಬೇಕು. ಕಾರ್‌ನ ಕಾಂಪೋನೆಂಟ್‌ಗಳ ಹಾನಿಯನ್ನು ಗುರುತಿಸಲು ಅಥವಾ ಮೌಲ್ಯಮಾಪನ ಮಾಡಲು ಇದು ಸಹಾಯ ಮಾಡುತ್ತದೆ.
ಟೈರ್‌ಗಳ ಸ್ಥಿತಿ: ಸಮವಲ್ಲದ ಟೈರ್‌ಗಳು ಕಾರ್‌ನ ಅಲೈನ್‌ಮೆಂಟ್ ಮೇಲೆ ಪರಿಣಾಮ ಬೀರಬಹುದು. ಎಲ್ಲಾ ನಾಲ್ಕು ವೀಲ್‌ಗಳು ಸಮವಾಗಿ ಮ್ಯಾಚ್ ಆಗುತ್ತಿವೆಯೇ ಎಂಬುದನ್ನು ನೀವು ಪರಿಶೀಲಿಸಬೇಕು. ಕಳಪೆಯಾಗಿ ಅಲೈನ್ ಮಾಡಲಾದ ಕಾರ್ ಬಲಕ್ಕೆ ಅಥವಾ ಎಡಕ್ಕೆ ಎಳೆಯುತ್ತದೆ. ಆದ್ದರಿಂದ ನೀವು ಟೈರ್‌ಗಳನ್ನು ಪರಿಶೀಲಿಸಲು ಬಯಸಿದರೆ, ಟೆಸ್ಟ್ ಡ್ರೈವ್ ತೆಗೆದುಕೊಳ್ಳಿ.
ಎಲೆಕ್ಟ್ರಾನಿಕ್ ವಸ್ತುಗಳನ್ನು ಪರಿಶೀಲಿಸಿ: ಮ್ಯೂಸಿಕ್ ಸಿಸ್ಟಮ್, ಏರ್ ಕಂಡಿಷನರ್ ಮತ್ತು ಎಲೆಕ್ಟ್ರಾನಿಕ್ ಡಿಸ್‌ಪ್ಲೇ ಸರಿಯಾಗಿ ಕಾರ್ಯನಿರ್ವಹಿಸುತ್ತಿರಬೇಕು. ಅವು ವರ್ಕಿಂಗ್ ಕಂಡೀಷನ್‌ಲ್ಲಿವೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಅವುಗಳನ್ನು ಆಪರೇಟ್ ಮಾಡಿ.
ಕುಶನ್ ಮತ್ತು ಕವರ್‌ಗಳನ್ನು ಪರಿಶೀಲಿಸಿ: ಕಾರ್ ಸೀಟ್ ಕವರ್‌ಗಳನ್ನು ರಿಪೇರಿ ಮಾಡುವುದು ನಿಜವಾಗಿಯೂ ದುಬಾರಿಯಾಗಿದೆ. ಲೆದರ್ ಕವರ್‌ನಲ್ಲಿ ಯಾವುದೇ ಕ್ರ್ಯಾಕ್ಸ್, ಕಲೆಗಳು ಮತ್ತು ಕಟ್‌ಗಳು ಇರಬಾರದು.
ಟೆಸ್ಟ್ ಡ್ರೈವ್‌ಗೆ ಹೋಗಿ: ನೀವು ಕಾರನ್ನು ಟೆಸ್ಟ್ ಡ್ರೈವ್‌ಗೆ ತೆಗೆದುಕೊಂಡು ಹೋಗುವುದು ಅತ್ಯಗತ್ಯವಾಗಿದೆ. ಸಮವಾದ ರಸ್ತೆಯಿರದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಿ. ಬ್ರೇಕ್‌ಗಳು, ಸಸ್ಪೆನ್ಸ್ಷನ್ ಮತ್ತು ಆ್ಯಕ್ಸಿಲರೇಶನ್ ಅನ್ನು ಪರಿಶೀಲಿಸಲು ಇದು ನಿಮಗೆ ಸಹಾಯ ಮಾಡುತ್ತದೆ.
ಮೆಕ್ಯಾನಿಕ್ ಜೊತೆ ಪರೀಕ್ಷಿಸಿ: ನೀವು ಖರೀದಿಸುತ್ತಿರುವ ಕಾರ್‌ನಲ್ಲಿ ಉಳಿದ ವಸ್ತುಗಳ ಬಗ್ಗೆ ನಿಮಗೆ ತೃಪ್ತಿಯಾಗಿದ್ದರೆ, ಮೆಕ್ಯಾನಿಕ್ ಪರೀಕ್ಷೆಯನ್ನು ಸಹ ಮಾಡಿಬಿಡಿ. ಇದು ಕೊನೆಯದಾದರೂ ಅತ್ಯಂತ ಮುಖ್ಯವಾದ ಕೆಲಸವಾಗಿದೆ. ಸೆಕೆಂಡ್ ಹ್ಯಾಂಡ್ ಕಾರ್ ಮತ್ತು ಅದರ ಪ್ರಮುಖ ಭಾಗಗಳಾದ ಬೆಲ್ಟ್, ಎಂಜಿನ್, ಬ್ಯಾಟರಿ ಇತ್ಯಾದಿಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸಲು ನಿಮ್ಮ ವಿಶ್ವಾಸಾರ್ಹ ಮೆಕ್ಯಾನಿಕ್‌ನನ್ನು ಕೇಳಿ. ಅಂತಿಮ ಖರೀದಿಯ ಮೊದಲು ನೀವು ಮಾಡಬಹುದಾದ ಇನ್ನೊಂದು ಬುದ್ಧಿವಂತ ಕೆಲಸ ಇದಾಗಿದೆ.
- ಕಾರ್‌ನ ಪೇಪರ್‌ಗಳನ್ನು ಪರೀಕ್ಷಿಸಲು ಮರೆಯಬೇಡಿ: ನೀವು ಪರಿಶೀಲಿಸಬೇಕಾದ ಕೆಲವು ಪ್ರಮುಖ ಡಾಕ್ಯುಮೆಂಟುಗಳೆಂದರೆ:
- ಕಾರ್‌ನ ರಿಜಿಸ್ಟ್ರೇಷನ್ ಕಾಪಿಯನ್ನು ಪರಿಶೀಲಿಸಿ ಮತ್ತು ಅದರ ಮೇಲೆ ನಮೂದಿಸಲಾದ ವಿವರಗಳು ಕಾರ್‌ನೊಂದಿಗೆ ಸಿಂಕ್ ಆಗಿವೆಯೇ ಎನ್ನುವುದನ್ನು ಪರಿಶೀಲಿಸಿ. ಎಂಜಿನ್ ನಂಬರ್ ಮತ್ತು ಚಾಸಿಸ್ ನಂಬರ್ ಸರಿಯಾಗಿರಬೇಕು. ಇಲ್ಲದಿದ್ದರೆ ಕ್ಲೈಮ್ ಮಾಡುವ ಸಮಯದಲ್ಲಿ ಇದು ನಿಮಗೆ ಗೊಂದಲಗಳನ್ನು ಉಂಟುಮಾಡುತ್ತದೆ.
- ನೀವು ಖರೀದಿಸುತ್ತಿರುವ ಸೆಕೆಂಡ್ ಹ್ಯಾಂಡ್ ಕಾರ್‌ನ ಮೇಲೆ ಯಾವುದೇ ಪೆಂಡಿಂಗ್ ಲೋನ್‌ಗಳು ಇರಬಾರದು. ಅದನ್ನು ತಿಳಿಯಲು ಆರ್‌ಟಿಒ ನಲ್ಲಿ ಲಭ್ಯವಿರುವ ಫಾರ್ಮ್ 32 ಮತ್ತು 35 ಅನ್ನು ಪರಿಶೀಲಿಸಿ.
- ಹಿಂದಿನ ಮಾಲೀಕರಿಂದ ಕಾರನ್ನು ಫೈನಾನ್ಸ್‌ನಲ್ಲಿ ಖರೀದಿಸಿದ್ದರೆ, ಅವರಿಂದ ನೋ-ಆಬ್ಜೆಕ್ಷನ್-ಸರ್ಟಿಫಿಕೇಟ್ ಅನ್ನು ಕೇಳಿ.
- ಎಲ್.ಪಿ.ಜಿ/ಸಿ.ಎನ್.ಜಿ ಫಿಟ್ಟಿಂಗ್‌ಗಳನ್ನು ಹೊಂದಿದ್ದರೆ ಕಾರಿನ ಬೈ-ಫ್ಯೂಯೆಲ್ ಸರ್ಟಿಫಿಕೇಟ್ ಅನ್ನು ಕೇಳಿ.
- ವ್ಯಾಲಿಡ್ ಆಗಿರುವ ಪೊಲ್ಯುಷನ್ ಅಂಡರ್ ಕಂಟ್ರೋಲ್ (ಪಿಯುಸಿ) ಸರ್ಟಿಫಿಕೇಟ್.
- ಎಲ್ಲಾ ರೋಡ್ ಟ್ಯಾಕ್ಸ್‌ಗಳನ್ನು ಪಾವತಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಸರ್ವೀಸ್ ಬುಕ್ ಅನ್ನು ಕೇಳಿ.
ನಿಮ್ಮ ಕನಸಿನ ಕಾರನ್ನು ನೀವು ಪರಿಶೀಲಿಸಿದ ನಂತರ, ನೀವೀಗ ಪರಿಶೀಲಿಸಬೇಕಾದ ಮುಂದಿನ ಪ್ರಮುಖ ವಿಷಯವೆಂದರೆ ಇನ್ಶೂರೆನ್ಸ್ ಪಾಲಿಸಿ. ನೀವು ಕಾರ್‌ನ ಮಾಲೀಕರನ್ನು ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ ಅಥವಾ ಇಲ್ಲವೇ? ಎಂಬುದನ್ನು ಕೇಳಬೇಕು ಇದು ನಿಮಗೆ ಕೆಲವು ಮುಖ್ಯವಾದ ಅಂಶಗಳನ್ನು ಸೂಚಿಸುತ್ತದೆ:
ಮಾಲೀಕರು ಕಾರನ್ನು ತುಂಬಾ ಚೆನ್ನಾಗಿ ನೋಡಿಕೊಂಡಿರಬೇಕು. ಜವಾಬ್ದಾರಿಯುತ ನಾಗರಿಕನು ಖಂಡಿತವಾಗಿಯೂ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುತ್ತಾನೆ.
ಹಿಂದಿನ ಕ್ಲೈಮ್ ಅನುಭವಗಳು. ಭಾರತದಲ್ಲಿ ಇದನ್ನು ಕಂಡುಹಿಡಿಯಲು ಬೇರೆ ಮಾರ್ಗವಿಲ್ಲ.
ಸೆಕೆಂಡ್ ಹ್ಯಾಂಡ್ ಕಾರ್‌ನ ಪಾಲಿಸಿಯು ಇನ್ನೂ ಅಸ್ತಿತ್ವದಲ್ಲಿದ್ದರೆ, ಇನ್ಶೂರೆನ್ಸ್ ಪಾಲಿಸಿಯನ್ನು ನಿಮ್ಮ ಹೆಸರಿಗೆ ವರ್ಗಾಯಿಸುವ ಅವಶ್ಯಕತೆಯಿದೆ.
ಕಾರ್ ಇನ್ಶೂರೆನ್ಸ್ ವಿಶೇಷವಾಗಿ ನಿಮ್ಮ ಕಾರ್ ಅಪಘಾತಕ್ಕೀಡಾದಾಗ, ಯಾವುದೇ ಕಾನೂನು ಸಮಸ್ಯೆಗಳಿಂದ ದೂರವಿರಲು ನೀವು ಬಯಸುವುದಾದರೆ, ನೀವು ಖರೀದಿಸಬೇಕಾದ ಪ್ರಮುಖ ಡಾಕ್ಯುಮೆಂಟ್ ಆಗಿದೆ. ಇನ್ಶೂರೆನ್ಸ್ ಪಾಲಿಸಿಯು ಅಪಘಾತದ ನಂತರ ಉದ್ಭವಿಸಬಹುದಾದ ಫೈನಾನ್ಸಿಯಲ್ ಲಯಬಿಲಿಟಿಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಇದು ಕಾರ್ ಹಾಗೂ ಯಾವುದೇ ಗಾಯಗೊಂಡ ಥರ್ಡ್ ಪಾರ್ಟಿ ಎರಡನ್ನೂ ಕವರ್ ಮಾಡುವ ಗರಿಷ್ಠ ರಕ್ಷಣೆಯಾಗಿದೆ.
ಭಾರತದಲ್ಲಿ, ಮಾಲೀಕ-ಚಾಲಕರ ವೈಯಕ್ತಿಕ ಅಪಘಾತದ ಕವರ್‌ನೊಂದಿಗೆ ಥರ್ಡ್ ಪಾರ್ಟಿ ಲಯಬಿಲಿಟಿ ಪಾಲಿಸಿಯನ್ನು ಹೊಂದುವುದು ಕಡ್ಡಾಯವಾಗಿದೆ. ನೀವು ಖರೀದಿಸುತ್ತಿರುವ ಉಪಯೋಗಿಸಿದ ಕಾರ್, ಈಗಾಗಲೇ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದೆ ಎಂಬುದು ನೀವು ತಿಳಿದಿದೆ ಎಂದುಕೊಳ್ಳಿ. ಅಂತಹ ಸಂದರ್ಭದಲ್ಲಿ, ನೀವು ಕಾರ್‌ನ ಆರ್‌ಸಿ ವರ್ಗಾವಣೆಯೊಂದಿಗೆ ಇನ್ಶೂರೆನ್ಸ್ ವರ್ಗಾವಣೆಯನ್ನು ತ್ವರಿತಗೊಳಿಸಬೇಕಾಗುತ್ತದೆ.
ಇನ್ಸೂರೆನ್ಸ್ ಅನ್ನು ಹೇಗೆ ವರ್ಗಾವಣೆ ಮಾಡುವುದು ಎಂದು ತಿಳಿದಿಲ್ಲವೇ? ಹಾಗಿದ್ರೆ ಅದಕ್ಕೂ ಮೊದಲು ಸ್ವಲ್ಪ ಕಾಯಿರಿ. ಏಕೆಂದರೆ ಮೊದಲು ಸೆಕೆಂಡ್ ಹ್ಯಾಂಡ್ ಕಾರ್‌ನ ಆರ್‌ಸಿಯನ್ನು ನೀವು ನಿಮ್ಮ ಹೆಸರಿನಲ್ಲಿರುವ ಪಡೆಯಬೇಕು.
ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಅನ್ನು ನಿಮ್ಮ ಹೆಸರಿಗೆ ವರ್ಗಾಯಿಸುವುದು ಹೇಗೆ?
ನಿಮ್ಮ ಹೆಸರಿಗೆ ಆರ್‌ಸಿ ಅನ್ನು ವರ್ಗಾಯಿಸಲು, ಹತ್ತಿರದ ಆರ್‌ಟಿಒ ಗೆ ಭೇಟಿ ನೀಡಿ ಮತ್ತು ಈ ಹಂತಗಳನ್ನು ಅನುಸರಿಸಿ.
ಫಾರ್ಮ್ 29 ಮತ್ತು ಫಾರ್ಮ್ 30 ಗಾಗಿ ಕೇಳಿ. ಈ ಫಾರ್ಮ್‌ಗಳನ್ನು ಭರ್ತಿ ಮಾಡಬೇಕು ಹಾಗೂ ಇದಕ್ಕೆ ನೀವು ಮತ್ತು ಹಿಂದಿನ ಮಾಲೀಕರು ಸರಿಯಾಗಿ ಸಹಿ ಮಾಡಬೇಕು.
ನೀವು ಖರೀದಿಸುತ್ತಿರುವ ಸೆಕೆಂಡ್ ಹ್ಯಾಂಡ್ ಕಾರ್ ನಿಮ್ಮ ವ್ಯಾಪ್ತಿಗಿಂತ ಪ್ರತ್ಯೇಕ ಅಧಿಕಾರ ವ್ಯಾಪ್ತಿಯಲ್ಲಿದ್ದರೆ ಆರ್‌ಟಿಒ ನಿಂದ ಎನ್ಒಸಿ ಗಾಗಿ ವ್ಯವಸ್ಥೆ ಮಾಡಿ.
ವರ್ಗಾವಣೆಯನ್ನು ಪ್ರಾರಂಭಿಸಲು ಸ್ಥಳೀಯ ಆರ್‌ಟಿಒ ಅನುಮತಿಸುವ ಫಾರ್ಮ್‌ಗಳನ್ನು ಸಲ್ಲಿಸಿ.
ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಆರ್‌ಟಿಒ ನಿಮಗೆ 15 ರಿಂದ 18 ದಿನಗಳಲ್ಲಿ ರಿಸಿಪ್ಟ್ ನೀಡುತ್ತದೆ. ನೀವು ಕೇವಲ 40-45 ದಿನಗಳಲ್ಲಿ ವರ್ಗಾವಣೆಯಾದ ಆರ್‌ಸಿ ಯ ಫೈನಲ್ ಕಾಪಿಯನ್ನು ಸ್ವೀಕರಿಸುತ್ತೀರಿ.
ಈಗ ಮತ್ತೆ ಇನ್ಶೂರೆನ್ಸ್‌ಗೆ ಹಿಂತಿರುಗೋಣ. ಇನ್ಶೂರೆನ್ಸ್ ಅನ್ನು ನಮ್ಮ ಹೆಸರಿಗೆ ವರ್ಗಾಯಿಸುವ ವಿಧಾನಗಳನ್ನು ನಾವೀಗ ತಿಳಿಯೋಣ. ನಿಮ್ಮ ಹೆಸರಿನಲ್ಲಿ ಆರ್‌ಸಿ ಪಡೆದಿದ್ದರೂ ಸಹ, ಇನ್ಶೂರೆನ್ಸ್ ಹಿಂದಿನ ಮಾಲೀಕರ ಹೆಸರಿನಲ್ಲಿಯೇ ಇದ್ದರೆ, ಅದರಿಂದ ನಿಮಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಸಮಯವನ್ನು ಉಳಿಸಲು ಮತ್ತು ನಿಮ್ಮ ಸೆಕೆಂಡ್ ಹ್ಯಾಂಡ್ ಕಾರಿನೊಂದಿಗೆ ಹೋಗಲು, ನೀವು ಇನ್ಶೂರೆನ್ಸ್‌ನ ವರ್ಗಾವಣೆಯನ್ನು ಅದರೊಟ್ಟಿಗೆ ಪ್ರಕ್ರಿಯೆಗೊಳಿಸಿದರೆ ಅದು ಬುದ್ಧಿವಂತ ಹೆಜ್ಜೆಯಾಗುತ್ತದೆ. ಆದರೆ ಅದನ್ನು ಹೇಗೆ ಮಾಡುವುದು. ಏನಾದರೂ ಸುಳಿವು ಸಿಗಬಹುದೇ?
ಉಪಯೋಗಿಸಿದ ಕಾರ್‌ನ ಇನ್ಶೂರೆನ್ಸ್ ಅನ್ನು ಹೇಗೆ ವರ್ಗಾಯಿಸುವುದು?
ಸೆಕೆಂಡ್ ಹ್ಯಾಂಡ್ ಕಾರ್‌ನ ಇನ್ಶೂರೆನ್ಸ್ ಪಾಲಿಸಿಯು ಅಸ್ತಿತ್ವದಲ್ಲಿದ್ದರೆ, ನೀವು ಮಾಡಬಹುದಾದ ಒಂದೇ ಕೆಲಸವೆಂದರೆ ಹೆಸರು ಬದಲಾವಣೆಗಾಗಿ ಕೇಳುವುದು. ವಿವರಗಳ ಈ ಬದಲಾವಣೆಯನ್ನು ಇನ್ಶೂರೆನ್ಸ್ ಕಾಪಿಯಲ್ಲಿ ಮಾಡಬೇಕು. ಫಾರ್ಮ್ 29 ಮತ್ತು ಫಾರ್ಮ್ 30 ರ ಇನ್ಶೂರರ್ ರಿಸಿಪ್ಟ್‌ಗಳೊಂದಿಗೆ ಸಲ್ಲಿಸಿ.
ನೀವು ಇನ್ಶೂರೆನ್ಸ್ ಆಫೀಸಿಗೆ ಹೋಗಿ ಇದನ್ನು ಮಾಡಬಹುದು ಅಥವಾ ಯಾವುದೇ ಇನ್ಶೂರೆನ್ಸ್ ಏಜೆಂಟ್ ಅಥವಾ ಬ್ರೋಕರ್ ಅನ್ನು ಸಂಪರ್ಕಿಸಬಹುದು. ಕೇವಲ ಕೆಲವೇ ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಚಿಯರ್ಸ್!! ನಿಮ್ಮ ಸೆಕೆಂಡ್ ಹ್ಯಾಂಡ್ ಕಾರನ್ನು ನೀವು ಇನ್ಶೂರೆನ್ಸ್ ಮಾಡಿದ್ದೀರಿ.
ಕ್ಲೈಮ್-ಫ್ರೀ ವರ್ಷಕ್ಕಾಗಿ, ನೀವು ನೋ ಕ್ಲೈಮ್ ಬೋನಸ್ ಅನ್ನು ಗಳಿಸುತ್ತೀರಿ ಎನ್ನುವುದನ್ನು ತಿಳಿದಿರಬೇಕು. ಈಗ ಉಪಯೋಗಿಸಿದ ಕಾರ್‌ನ ಆರ್‌ಸಿಯನ್ನು ವರ್ಗಾಯಿಸಬಹುದು, ಆದರೆ ಎನ್‌ಸಿಬಿ ಅನ್ನು ವರ್ಗಾಯಿಸಲಾಗುವುದಿಲ್ಲ. ಆದ್ದರಿಂದ, ಪಾಲಿಸಿಯ ಉಳಿದ ಅವಧಿಗೆ, ಸೆಕೆಂಡ್ ಹ್ಯಾಂಡ್ ಕಾರ್‌ನ ಖರೀದಿದಾರರು, ಅಗತ್ಯವಿರುವ ವ್ಯತ್ಯಾಸದ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ಉಪಯೋಗಿಸಿದ ಕಾರ್‌ಗೆ ಇನ್ಶೂರೆನ್ಸ್ ಪಾಲಿಸಿ ಇಲ್ಲದಿದ್ದರೆ ಏನು ಮಾಡುವುದು?
ನೀವು ಖರೀದಿಸಲು ಯೋಜಿಸುತ್ತಿರುವ ಉಪಯೋಗಿಸಿದ ಕಾರ್ ಯಾವುದೇ ಇನ್ಶೂರೆನ್ಸ್ ಕವರ್ ಅನ್ನು ಹೊಂದಿರದಿದ್ದರೆ ಒಂದು ನಿಲುವಿರಬಹುದು. ಹಾಗಾದರೆ ಮುಂದೆ ನೀವೇನು ಮಾಡುತ್ತೀರಿ? ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಸ್ವತಃ ನೀವೇ ಖರೀದಿಸಿ!
ಯಾವ ಇನ್ಶೂರೆನ್ಸ್ ಕವರ್ ಉತ್ತಮವಾಗಿದೆ - ಕಾಂಪ್ರೆಹೆನ್ಸಿವ್ ಅಥವಾ ಥರ್ಡ್ ಪಾರ್ಟಿ ಲಯಬಿಲಿಟಿ?
ಕಾರ್ ಪ್ರೈವೇಟ್ ಆಗಿರಲಿ ಅಥವಾ ಕಮರ್ಷಿಯಲ್ ಆಗಿರಲಿ, ನಿಮ್ಮ ಕಾರ್‌ಗೆ ಇನ್ಶೂರೆನ್ಸ್ ಕವರ್ ಆಯ್ಕೆ ಮಾಡುವುದು ಸಂಪೂರ್ಣವಾಗಿ ಮಾಲೀಕರ ಮೇಲೆ ಅವಲಂಬಿತವಾಗಿರುತ್ತದೆ. ಮೋಟಾರ್ ವೆಹಿಕಲ್ಸ್ ಆ್ಯಕ್ಟ್, 1988 ರ ಪ್ರಕಾರ ಥರ್ಡ್ ಪಾರ್ಟಿ ಲಯಬಿಲಿಟಿ ಕವರ್ ಕಡ್ಡಾಯವಾಗಿದೆ ಆದರೆ ಓನ್ ಡ್ಯಾಮೇಜ್ ಆಪ್ಷನಲ್ ಆಗಿದೆ. ಆದರೆ ಇದು ವಿಶಾಲ ಕವರೇಜನ್ನು ನೀಡುವುದರಿಂದ ಕಾಂಪ್ರೆಹೆನ್ಸಿವ್ ಕವರ್ ಅನ್ನು ಆಯ್ಕೆ ಮಾಡಲು ಸಲಹೆ ನೀಡಲಾಗುತ್ತದೆ.
ನೀವು ಈ ಸಂದರ್ಭಗಳಲ್ಲಿ ನಿಮ್ಮ ಕಾರ್‌ಗಾಗಿ ಕೇವಲ ಥರ್ಡ್ ಪಾರ್ಟಿ ಲಯಬಿಲಿಟಿ ಕವರ್ ಅನ್ನು ಮಾತ್ರ ಆಯ್ಕೆ ಮಾಡಬಹುದು:
ಉಪಯೋಗಿಸಿದ ಕಾರ್‌ನ ವಯಸ್ಸು 10 ವರ್ಷ ಅಥವಾ ಅದಕ್ಕಿಂತ ಹೆಚ್ಚಾಗಿದ್ದರೆ.
ಕಾರ್‌ನ ಬಳಕೆ ಕಡಿಮೆಯಿದ್ದರೆ, ಉಂಟಾಗಬಹುದಾದ ಹಾನಿಯು ಕಡಿಮೆ. ಅಂದರೆ, ನೀವು ಭಾರತದ ಹೊರಗೆ ವಾಸಿಸುತ್ತಿದ್ದರೆ ಮತ್ತು ನೀವು ಭಾರತಕ್ಕೆ ಭೇಟಿ ನೀಡಿದಾಗ ಮಾತ್ರ ಕಾರನ್ನು ಬಳಸುತ್ತಿದ್ದರೆ.
ಕಾರ್‌ನ ಹಾನಿಗಾಗಿ ನೀವು ಯಾವುದೇ ರೀತಿಯ ವೆಚ್ಚವನ್ನು ಭರಿಸಲು ಸಿದ್ದರೆಂದು ಭಾವಿಸುತ್ತಿದ್ದರೆ.
ಎಲ್ಲವೂ ಮುಗಿದಮೇಲೆ ಮತ್ತು ಇನ್ಶೂರೆನ್ಸ್ ಪಾಲಿಸಿಯೊಂದಿಗೆ ಕಾರನ್ನು ನಿಮ್ಮ ಹೆಸರಿಗೆ ವರ್ಗಾಯಿಸಿದಾಗ, ನೀವು ಅತ್ಯಂತ ಉತ್ಸಾಹ ಮತ್ತು ಆತ್ಮವಿಶ್ವಾಸದಿಂದ ಸಿದ್ಧರಾಗುತ್ತೀರಿ. ಈಗ ನೀವು ಕಾರನ್ನು ಪಡೆದಿದ್ದೀರಿ, ಅದನ್ನು ಸುರಕ್ಷಿತವಾಗಿ ಡ್ರೈವ್ ಮಾಡಿ ಮತ್ತು ಜಗತ್ತನ್ನೇ ಆಳಿ. ಹ್ಯಾಪಿ ಡ್ರೈವಿಂಗ್.