Third-party premium has changed from 1st June. Renew now
ಕಾರ್ ಇನ್ಶೂರೆನ್ಸ್ ಕವರ್ ಮಾಡುವ ನಿಮಗೆ ಗೊತ್ತಿಲ್ಲದ 10 ವಿಷಯಗಳು
ಅನೇಕ ವೇಳೆ, ಕಾರ್ ಓನರ್‌ಗಳು ಕೇವಲ ಕಾರ್ ಇನ್ಶೂರೆನ್ಸ್ ಅನ್ನು ಮಾತ್ರ ಪಡೆಯುತ್ತಾರೆ ಏಕೆಂದರೆ ಅದು ಕಡ್ಡಾಯವಾಗಿದೆ*, ಮತ್ತು ರಿನೀವಲ್‌ನ ಸಮಯ ಬಂದಾಗಲೂ ವಿವರಗಳನ್ನು ಚೆಕ್ ಮಾಡಲು ಹೋಗುವುದಿಲ್ಲ.
ಆದರೆ, ನಿಮ್ಮ ಪಾಲಿಸಿ ಡಾಕ್ಯುಮೆಂಟ್ ಅನ್ನು ಚೆಕ್ ಮಾಡದೆಯೇ ಅದರ ಕವರೇಜ್‌ನ ಯಾವುದೇ ಪ್ರಮುಖ ಫೀಚರ್‌ಗಳು ಮತ್ತು ಪ್ರಯೋಜನಗಳನ್ನು ನೀವು ಕಳೆದುಕೊಳ್ಳುತ್ತಿದ್ದರೆ, ಅದು ನಿಮಗೆಂದಿಗೂ ತಿಳಿಯುವುದಿಲ್ಲ.
ನಿಮ್ಮ ಕಾರನ್ನು ನೀವು ಹೆಮ್ಮೆ ಮತ್ತು ಸಂತೋಷದಿಂದ ಪ್ರೀತಿಸುತ್ತೀರಿ ಎಂಬುದು ನಮಗೆ ಖಾತರಿಯಿದೆ ಮತ್ತು ಆ ಕಾರನ್ನು ಆಯ್ಕೆಮಾಡುವ ಮೊದಲು ನೀವು ತಿಂಗಳುಗಟ್ಟಲೆ ಚರ್ಚ್, ರಿಸರ್ಚ್ ಮತ್ತು ಉಳಿತಾಯವನ್ನು ಸಹ ಮಾಡಿರುತ್ತೀರಿ. ಹಾಗಾದರೆ ನಿಮ್ಮ ಕಾರಿನ ರಕ್ಷಣೆಯ ವಿಷಯಕ್ಕೆ ಬಂದಾಗ ಅಂತಹ ರಿಸರ್ಚ್ ಮಾಡುವುದನ್ನು ಏಕೆ ನೀವು ಬಿಟ್ಟುಬಿಡುತ್ತೀರಿ? ಕಾರ್ ಇನ್ಶೂರೆನ್ಸ್ ನಿಮ್ಮ ಕಾರನ್ನು ಅನಿರೀಕ್ಷಿತ ಅಪಾಯ ಮತ್ತು ನಷ್ಟಗಳ ಚಂಡಮಾರುತದಿಂದ ರಕ್ಷಿಸುವ ತಡೆಗೋಡೆಯಂತೆ.
ಆದರೂ ಚಿಂತಿಸಬೇಡಿ! ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ನೀವು ಮಿಸ್ ಮಾಡಿರುವ (ಅಥವಾ ನಿಮಗೆ ಗೊತ್ತಿಲ್ಲದ) ಎಲ್ಲಾ ವಿಷಯಗಳ ಕುರಿತು ನಿಮಗೆ ಗೈಡ್ ಮಾಡಲು ನಾವು ಇಲ್ಲಿದ್ದೇವೆ. ಇದರಿಂದ ನೀವು ನಿಮ್ಮ ಪಾಲಿಸಿಯ ಪ್ರಯೋಜನಗಳನ್ನು ಹೆಚ್ಚಿಸಬಹುದು. ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯ ಬಗ್ಗೆ ನೀವು ಮಿಸ್ ಮಾಡಿಕೊಂಡಿರುವ ಕೆಲವು ವಿಷಯಗಳು ಇಲ್ಲಿವೆ:
*ಭಾರತದಲ್ಲಿ, ಕಾನೂನಿನನ್ವಯ ಕನಿಷ್ಠ ಥರ್ಡ್ ಪಾರ್ಟಿ ಲಯಬಿಲಿಟಿ ಇನ್ಶೂರೆನ್ಸ್ ಅನ್ನು ಹೊಂದುವುದು ಅವಶ್ಯಕ.
1. ನಿಮ್ಮ ಕವರೇಜ್ ಕೇವಲ ಆ್ಯಕ್ಸಿಡೆಂಟ್ಸ್ ಕವರ್‌ಗಿಂತಲೂ ಹೆಚ್ಚಿನದನ್ನು ಮಾಡುತ್ತದೆ
ನಿಮ್ಮ ಕಾರ್ ಹಾನಿಗೊಳಗಾದಾಗ ಅಥವಾ ಅಪಘಾತಗಳಿಂದ ನಷ್ಟವನ್ನು ಅನುಭವಿಸಿದಾಗ ಮಾತ್ರ ಕಾರ್ ಇನ್ಶೂರೆನ್ಸ್ ಕೆಲಸಕ್ಕೆ ಬರುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಕಾರ್ ಇನ್ಶೂರೆನ್ಸ್ ಅದಕ್ಕಿಂತ ಹೆಚ್ಚಿನದನ್ನು ಕವರ್ ಮಾಡುತ್ತದೆ!
ಥರ್ಡ್-ಪಾರ್ಟಿ ಲಯಬಿಲಿಟಿ ಪಾಲಿಸಿಯು ಕೇವಲ ನಿಮ್ಮಿಂದ ಯಾವುದೇ ಥರ್ಡ್ ಪಾರ್ಟಿಗೆ ಅಥವಾ ಅವರ ಪ್ರಾಪರ್ಟಿಗೆ ಉಂಟಾಗುವ ಹಾನಿಯನ್ನು ಮಾತ್ರ ಕವರ್ ಮಾಡುತ್ತದೆ. ಆದರೆ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯು ಕಳ್ಳತನ, ನೈಸರ್ಗಿಕ ವಿಪತ್ತುಗಳು, ಬೆಂಕಿ ಇತ್ಯಾದಿಗಳಿಂದ ಉಂಟಾಗುವ ನಷ್ಟ ಮತ್ತು ಹಾನಿಗಳಿಂದ ನಿಮ್ಮ ಸ್ವಂತ ಕಾರನ್ನು ಕವರ್ ಮಾಡುತ್ತದೆ.
2. ನೀವು ಉಚಿತ-ವೆಚ್ಚದ ಟೋಯಿಂಗ್ ಅನ್ನು ಪಡೆಯಬಹುದು
ನಿಮ್ಮ ಕಾರು ಅಪಘಾತಕ್ಕೀಡಾದಾಗ ಅಥವಾ ಕೆಟ್ಟುಹೋದಾಗ, ವಿಶೇಷವಾಗಿ ಹೈವೇಗಳಲ್ಲಿ ಅಥವಾ ದೂರದ ಪ್ರದೇಶಗಳಲ್ಲಿ ಇಂತಹ ಘಟನೆಗಳು ನಡೆದಾಗ, ನಿಮ್ಮ ಕಾರನ್ನು ಗ್ಯಾರೇಜ್‌ಗೆ ಎಳೆಯಲು ಮೆಕ್ಯಾನಿಕ್‌ಗಳು ಕೆಲವೊಮ್ಮೆ ಅತಿಯಾದ ಮೊತ್ತವನ್ನು ವಿಧಿಸಬಹುದು.
ಆದಾಗ್ಯೂ, ಕಾಂಪ್ರೆಹೆನ್ಸಿವ್ ಪ್ಲ್ಯಾನ್‌ನೊಂದಿಗೆ, ಹೆಚ್ಚಿನ ಕಾರ್ ಇನ್ಶೂರೆನ್ಸ್ ಪೂರೈಕೆದಾರರು ಸಾಮಾನ್ಯವಾಗಿ ನಿರ್ದಿಷ್ಟ ಮೊತ್ತದವರೆಗೆ ಅಥವಾ ನಿರ್ದಿಷ್ಟ ದೂರದವರೆಗೆ ಉಚಿತ-ವೆಚ್ಚದ ಟೋಯಿಂಗ್ ಸಹಾಯವನ್ನು ನೀಡುತ್ತಾರೆ ಎನ್ನುವುದು ನಿಮಗೆ ತಿಳಿದಿದೆಯೇ?
ಆದ್ದರಿಂದ, ಮುಂದಿನ ಬಾರಿ ನಿಮ್ಮ ಕಾರ್ ಕೆಟ್ಟುಹೋದಾಗ, ನಿಮ್ಮ ಕಾರ್ ಇನ್ಶೂರೆನ್ಸ್ ಪೂರೈಕೆದಾರರನ್ನು ಸಂಪರ್ಕಿಸಿ ಮತ್ತು ಈ ಪ್ರಯೋಜನದಿಂದ ಹೆಚ್ಚಿನದನ್ನು ಪಡೆದುಕೊಳ್ಳಿ.
3. ನೀವು ಪೇಪರ್‌ಲೆಸ್ ಮತ್ತು ಇನ್ಸ್ಟಂಟ್ ರಿನೀವಲ್‌ಗಳ ಪ್ರಯೋಜನವನ್ನು ಹೊಂದುತ್ತೀರಿ
ಡಾಕ್ಯುಮೆಂಟ್‌ಗಳನ್ನು ಒಳಗೊಂಡಿರುವ ಯಾವುದೇ ಕೆಲಸವಾಗಿರಲಿ, ಅದು ದೀರ್ಘವಾಗಿರುತ್ತದೆ ಮತ್ತು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿರುತ್ತದೆ ಎಂದು ನೀವು ಭಾವಿಸಬಹುದು. ಆದರೆ ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯ ರಿನೀವಲ್‌ನ ವಿಷಯಕ್ಕೆ ಬಂದರೆ, ಇತ್ತೀಚಿನ ದಿನಗಳಲ್ಲಿ ಅನೇಕ ಇನ್ಶೂರೆನ್ಸ್ ಪೂರೈಕೆದಾರರು ನಿಮಗೆ ಸುಲಭ ಮತ್ತು ಇನ್ಸ್ಟಂಟ್ ಆನ್‌ಲೈನ್ ರಿನೀವಲ್ ಅನ್ನು ನೀಡುತ್ತಾರೆ. ಅದು ಶೂನ್ಯ ಅಥವಾ ಕನಿಷ್ಠ ಪೇಪರ್‌ವರ್ಕ್ ಅನ್ನು ಒಳಗೊಂಡಿರುತ್ತದೆ ಮತ್ತು ಯಾವುದೇ ಕಷ್ಟಕರವಾದ ಫಾರ್ಮ್‌ಗಳನ್ನು ಭರ್ತಿ ಮಾಡುವ ಅವಶ್ಯಕತೆಯಿರುವುದಿಲ್ಲ. ಎಲ್ಲವನ್ನೂ ಕೆಲವೇ ಕ್ಲಿಕ್‌ಗಳಲ್ಲಿ ಮಾಡಬಹುದು! 😊
4. ಹಾನಿಯ ಸಂದರ್ಭದಲ್ಲಿ ನೀವು ಕ್ಯಾಶ್‌ಲೆಸ್ ರಿಪೇರಿಯನ್ನು ಆಯ್ಕೆ ಮಾಡಬಹುದು
ನೀವು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ, ನೀವು ಕ್ಯಾಶ್‌ಲೆಸ್ ಕಾರ್ ಇನ್ಶೂರೆನ್ಸ್‌ನ ಪ್ರಯೋಜನಗಳನ್ನು ಪಡೆಯಬಹುದು.
ಈ ತೊಂದರೆ-ಮುಕ್ತ ಪ್ರಕ್ರಿಯೆಯು ನಿಮ್ಮ ಕಾರನ್ನು ಯಾವುದೇ ಅಥರೈಸ್ಡ್ ಗ್ಯಾರೇಜ್‌ನಲ್ಲಿ ರಿಪೇರಿ ಮಾಡಿಸಲು ಅನುಮತಿಸುತ್ತದೆ - ಇದನ್ನು ನೆಟ್‌ವರ್ಕ್ ಗ್ಯಾರೇಜ್ ಎಂದೂ ಕರೆಯುತ್ತಾರೆ - ಅಪಘಾತದಿಂದಾದ ಯಾವುದೇ ಹಾನಿಗಾಗಿ ನೀವು ನಿಮ್ಮ ಸ್ವಂತ ಜೇಬಿನಿಂದ ಏನನ್ನೂ ಪಾವತಿಸುವಂತಿಲ್ಲ. ಬದಲಾಗಿ, ಈ ರಿಪೇರಿಯ ಬಿಲ್‌ಗಳನ್ನು ನೇರವಾಗಿ ನಿಮ್ಮ ಇನ್ಶೂರರ್‌ಗಳಿಗೆ ಕಳುಹಿಸಲಾಗುತ್ತದೆ ಮತ್ತು ಅವರು ಅದನ್ನು ಗ್ಯಾರೇಜ್‌ನೊಂದಿಗೆ ಇತ್ಯರ್ಥಪಡಿಸುತ್ತಾರೆ.
5. ನಿಮ್ಮ ಕಾರಿನ ಬಿಡಿಭಾಗಗಳನ್ನು ಮತ್ತು ಮಾರ್ಪಾಡುಗಳನ್ನೂ ಸಹ ನೀವು ಕವರ್ ಮಾಡಬಹುದು
ಒಂದು ವೇಳೆ ನಿಮ್ಮ ಕಾರು ಹಾನಿಗೊಳಗಾದರೆ ಅಥವಾ ಅಪಘಾತದಲ್ಲಿ ಕಳೆದುಹೋದರೆ, ಹೆಚ್ಚಿನ ಕಾರ್ ಇನ್ಶೂರೆನ್ಸ್ ಪಾಲಿಸಿಗಳು ಆ ಕಾರನ್ನು ಕವರ್ ಮಾಡುತ್ತದೆಯೇ ಹೊರತು ನೀವು ಅದಕ್ಕೆ ಮಾಡಿದ ಯಾವುದೇ ಬಿಡಿಭಾಗಗಳನ್ನು ಅಥವಾ ಮಾರ್ಪಾಡುಗಳನ್ನು ಕವರ್ ಮಾಡುವುದಿಲ್ಲ (ಉದಾಹರಣೆಗೆ CNG ಫ್ಯೂಯೆಲ್ ಕಿಟ್ ಅನ್ನು ಅಳವಡಿಸುವುದು).
ಆದಾಗ್ಯೂ, ಈ ಹೊಸ ಬಿಡಿಭಾಗಗಳ ಬಗ್ಗೆ ನಿಮ್ಮ ಇನ್ಶೂರರ್‌ಗಳಿಗೆ ತಿಳಿಸುವ ಮೂಲಕ ನೀವು ಇವುಗಳನ್ನು ಸಹ ಕವರ್ ಮಾಡಿಕೊಳ್ಳಬಹುದು. ಇದು ನಿಮ್ಮ ಪ್ರೀಮಿಯಂ ಅನ್ನು ಹೆಚ್ಚಿಸಬಹುದು, ಆದರೆ ಇದು ಸಂಪೂರ್ಣ ಹೊಸ ಬಿಡಿಭಾಗಗಳನ್ನು ಖರೀದಿಸುವುದಕ್ಕಿಂತ ಹೆಚ್ಚು ವೆಚ್ಚ-ಪರಿಣಾಮಕಾರಿ ಎಂಬುದನ್ನು ಸಾಬೀತುಪಡಿಸುತ್ತದೆ! 😄
6. ನೀವು ನೋ ಕ್ಲೈಮ್ ಬೋನಸ್‌ಗೆ ಅರ್ಹರಾಗಬಹುದು
ನೋ ಕ್ಲೈಮ್ ಬೋನಸ್ (ಅಥವಾ ಎನ್‌ಸಿಬಿ) ಎನ್ನುವುದು ಹಿಂದಿನ ವರ್ಷದಲ್ಲಿ ಯಾವುದೇ ಕ್ಲೈಮ್‌ಗಳನ್ನು ಮಾಡದವರಿಗೆ ಇನ್ಶೂರೆನ್ಸ್ ಕಂಪನಿಗಳು ನೀಡುವ ಒಂದು ರೀತಿಯ ಡಿಸ್ಕೌಂಟ್ ಆಗಿದೆ.
ಆದ್ದರಿಂದ, ಪಾಲಿಸಿ ವರ್ಷದಲ್ಲಿ ನೀವು ಸುರಕ್ಷಿತವಾಗಿ ಡ್ರೈವ್ ಮಾಡುತ್ತಿದ್ದರೆ, ರಿನೀವಲ್‌ನ ಸಮಯದಲ್ಲಿ ಇನ್ಶೂರೆನ್ಸ್ ಕಂಪನಿಯು ನಿಮ್ಮ ಪ್ರೀಮಿಯಂನಲ್ಲಿ ಡಿಸ್ಕೌಂಟ್‌ಗಳನ್ನು ನೀಡುತ್ತದೆ.
ಈ ನೋ ಕ್ಲೈಮ್ ಬೋನಸ್ ಡಿಸ್ಕೌಂಟ್ 20%-50% ವರೆಗೆ ಇರುತ್ತದೆ ಮತ್ತು ಪ್ರತಿ ಕ್ಲೈಮ್-ಫ್ರೀ ವರ್ಷದೊಂದಿಗೆ ಹೆಚ್ಚಾಗುತ್ತದೆ. ಈ ಕಡಿತವು ನಿಮ್ಮ ಪ್ರೀಮಿಯಂನಲ್ಲಿ ಎಷ್ಟು ವ್ಯತ್ಯಾಸವನ್ನು ಮಾಡಬಹುದು ಎಂಬುದನ್ನು ಪರಿಗಣಿಸಿ, ಸುರಕ್ಷಿತವಾಗಿ ಡ್ರೈವ್ ಮಾಡಲು ಮರೆಯದಿರಿ.
ನೀವು ಕೆಲವು ಸಣ್ಣ ಕ್ಲೈಮ್‌ಗಳನ್ನು ಮಾಡಿದರೂ ಸಹ ನಿಮ್ಮ ಎನ್‌ಸಿಬಿ ವ್ಯಾಲಿಡ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನೀವು ಕೆಲವು ಇನ್ಶೂರರ್‌ಗಳಿಂದ ಆ್ಯಡ್-ಆನ್‌ಗಳಾಗಿ ನೋ-ಕ್ಲೈಮ್ ಬೋನಸ್ ಪ್ರೊಟೆಕ್ಷನ್ ಕವರ್ ಅನ್ನು ಸಹ ಖರೀದಿಸಬಹುದು.
7. ನಿಮ್ಮ ನೋ ಕ್ಲೈಮ್ ಬೋನಸ್ ಅನ್ನು ನೀವು ವರ್ಗಾಯಿಸಬಹುದು
ನಿಮ್ಮ ಕಾರನ್ನು ಅಪ್‌ಗ್ರೇಡ್ ಮಾಡಲು ನೀವು ಪ್ಲ್ಯಾನ್ ಮಾಡುತ್ತಿದ್ದರೆ ಮತ್ತು ನಿಮ್ಮ ಪ್ರಸ್ತುತ ವಾಹನದೊಂದಿಗೆ ನೀವು ನೋ ಕ್ಲೈಮ್ಸ್ ಬೋನಸ್ (ಎನ್‌ಸಿಬಿ) ಅನ್ನು ಸಂಗ್ರಹಿಸಿದ್ದರೆ, ನೀವು ಆ ಎನ್‌ಸಿಬಿ ಅನ್ನು ಕಳೆದುಕೊಳ್ಳಬೇಕಾಗಿಲ್ಲ.
ನೀವು ಇದನ್ನು ನಿಮ್ಮ ಹೊಸ ಕಾರಿಗೆ ವರ್ಗಾಯಿಸಬಹುದು. ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ವರ್ಗಾಯಿಸಲು ನೀವು ಪ್ಲ್ಯಾನ್ ಮಾಡುತ್ತಿದ್ದರೂ ಸಹ, ನಿಮ್ಮ ಪ್ರಸ್ತುತ ಎನ್‌ಸಿಬಿ ಅನ್ನು ನಿಮ್ಮ ಹೊಸ ಪಾಲಿಸಿಯ ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಇರಿಸಬಹುದು.
8. ಝೀರೋ ಡೆಪ್ರಿಸಿಯೇಶನ್ ಕವರ್‌ನೊಂದಿಗೆ ನೀವು ಹೆಚ್ಚು ಸೇವ್ ಮಾಡಬಹುದು
ನಿಮ್ಮ ವಾಹನ ಮತ್ತು ಅದರ ಭಾಗಗಳ ನಿಜವಾದ ಮೌಲ್ಯವು, ಕಾಲಾನಂತರದಲ್ಲಿ ಸವಕಳಿಯಾಗುತ್ತದೆ. ಇದು ಹೆಚ್ಚಾಗಿ ಸವೆತ ಕಾರಣದಿಂದ ಆಗುತ್ತದೆ. ನಿಜವಾಗಿಯೂ, ಎರಡನೇ ಹೊಚ್ಚಹೊಸ ಕಾರನ್ನು ಶೋರೂಮ್‌ನಿಂದ ಹೊರತಂದರೂ, ಅದರ ಮೌಲ್ಯದಲ್ಲಿ 5% ರಷ್ಟು ಸವಕಳಿಯಾಗಿದೆ ಎಂದು ಪರಿಗಣಿಸಲಾಗುತ್ತದೆ! 😲
ಝೀರೋ ಡೆಪ್ರಿಸಿಯೇಶನ್ ಆ್ಯಡ್-ಆನ್‌ನೊಂದಿಗೆ, ರಿಪೇರಿ ಅಥವಾ ರಿಪ್ಲೇಸ್‌ಮೆಂಟ್‌ಗಾಗಿ ಕ್ಲೈಮ್ ಸೆಟಲ್‌ಮೆಂಟ್ ಮೊತ್ತವನ್ನು ಕ್ಯಾಲ್ಕುಲೇಟ್ ಮಾಡುವಾಗ, ನಿಮ್ಮ ವಾಹನ ಮತ್ತು ಅದರ ಭಾಗಗಳ ಮೌಲ್ಯದ ಈ ಸವಕಳಿಯನ್ನು ನಿಮ್ಮ ಇನ್ಶೂರೆನ್ಸ್ ಕಂಪನಿಯು ಪರಿಗಣಿಸುವುದಿಲ್ಲ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬಹುದು.
9. ಸಾಮಾನ್ಯ ರಿಪೇರಿಗಳ ಹೊರತಾಗಿ, ನಿಮ್ಮ ಇಂಜಿನ್ ಅನ್ನು ಸಹ ನೀವು ರಕ್ಷಿಸಬಹುದು
ಇದು ಅಪಘಾತದಿಂದ ಉಂಟಾಗದ ಹೊರತು, ನಿಮ್ಮ ಇಂಜಿನ್ ಅನ್ನು ರಿಪೇರಿ ಮಾಡುವುದು ಅಥವಾ ಯಾವುದೇ ಕಾರಣಕ್ಕಾಗಿ ನಿಮ್ಮ ಇಂಜಿನ್ ಅನ್ನು ರಿಪ್ಲೇಸ್ ಮಾಡುವುದು ನಿಮಗೆ ತುಂಬಾ ದುಬಾರಿಯಾಗಬಹುದು ಮತ್ತು ಅವು ಸ್ಟ್ಯಾಂಡರ್ಡ್ ಪಾಲಿಸಿಯ ಅಡಿಯಲ್ಲಿ ಕವರ್ ಆಗುವುದಿಲ್ಲ.
ಆದಾಗ್ಯೂ, ನೀವು ಇಂಜಿನ್ ಪ್ರೊಟೆಕ್ಷನ್ ಆ್ಯಡ್-ಆನ್ ಅನ್ನು ಪಡೆದಿದ್ದರೆ, ಆಯಿಲ್ ಲಿಕೇಜ್ ಅಥವಾ ವಾಟರ್ ಇಂಗ್ರೇಶನ್‌ನಿಂದ ನಿಮ್ಮ ಕಾರ್ ಇಂಜಿನ್ ಸ್ಥಗಿತಗೊಂಡರೂ ಸಹ ನಿಮ್ಮನ್ನು ರಕ್ಷಿಸಲಾಗುತ್ತದೆ.
10. ನಿಮ್ಮ ಕಳೆದುಹೋದ ಕೀಗಳನ್ನು ಸಹ ನೀವು ರಿಪ್ಲೇಸ್ ಮಾಡಬಹುದು!
ನಿಮ್ಮ ಕಾರಿನ ಕೀಗಳನ್ನು ಕಳೆದುಕೊಳ್ಳುವುದು ಎಂದರೆ ಅದೊಂದು ನಿಜಕ್ಕೂ ಒತ್ತಡದ ಅನುಭವ. ಆದರೆ ನೀವು ಬ್ರೇಕ್‌ಡೌನ್ ಅಸಿಸ್ಟೆನ್ಸ್ ಆ್ಯಡ್-ಆನ್ ಕವರ್ ಅನ್ನು ಪಡೆದಿದ್ದರೆ, ನೀವು ನಿಮ್ಮ ವಾಹನದ ಟೋಯಿಂಗ್‌ಗಾಗಿ ಸಹಾಯವನ್ನು ಪಡೆಯುವುದಲ್ಲದೇ, ಅದರೊಂದಿಗೆ ನಿಮ್ಮ ಇನ್ನೊಂದು ಸೆಟ್ ಕೀಗಳನ್ನು ನಿಮಗೆ ನೀಡಿ ಸಹಾಯ ಮಾಡುತ್ತಾರೆ.
ಅಥವಾ, ನೀವು ಆಕಸ್ಮಿಕವಾಗಿ ನಿಮ್ಮ ಕಾರಿನೊಳಗೆ ಕೀಗಳನ್ನು ಲಾಕ್ ಮಾಡಿದ್ದರೆ, ಕಾರನ್ನು ಅನ್ಲಾಕ್ ಮಾಡಲು ಮತ್ತು ಅವುಗಳನ್ನು ಹೊರತೆಗೆಯಲು ನೀವು ಸಹಾಯವನ್ನು ಪಡೆಯಬಹುದು!
ಆದ್ದರಿಂದ, ನಿಮಗೆ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಕಡ್ಡಾಯವಾಗಿದ್ದರೂ (ಕನಿಷ್ಠ, ಥರ್ಡ್ ಪಾರ್ಟಿ ಲಯಬಿಲಿಟಿ ಓನ್ಲಿ ಪ್ಲ್ಯಾನ್), ನಿಮ್ಮ ಪಾಲಿಸಿಯ ಎಲ್ಲಾ ಪ್ರಯೋಜನಗಳನ್ನು ನೀವು ಎಂದೂ ಚೆಕ್ ಮಾಡುವುದಿಲ್ಲ ಎಂಬುದು ಇದರ ಅರ್ಥವಲ್ಲ.
ನಿಮ್ಮ ಪಾಲಿಸಿಯು ಏನನ್ನು ನೀಡುತ್ತದೆ ಎಂಬುದನ್ನು ನೀವು ನಿಖರವಾಗಿ ತಿಳಿದಿದ್ದರೆ, ನಿಮಗೆ ಲಭ್ಯವಿರುವ ಹಲವು ಆಯ್ಕೆಗಳನ್ನು ನೀವು ಹೋಲಿಕೆ ಮಾಡಬಹುದು ಮತ್ತು ಸರಿಯಾದ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಎಲ್ಲಾ ಅವಶ್ಯಕತೆಗಳಿಗೆ ಉತ್ತಮವಾಗಿ ಹೊಂದುವ ಪಾಲಿಸಿಯನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ನೀವು ಹೆಚ್ಚು ಉಪಯುಕ್ತವಾಗಿ ಬಳಸಿಕೊಳ್ಳಬಹುದು.
ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ!