ವೋಕ್ಸ್‌ವ್ಯಾಗನ್ ಕಾರ್ ಇನ್ಶೂರೆನ್ಸ್

Get Instant Policy in Minutes*

Third-party premium has changed from 1st June. Renew now

ವೋಕ್ಸ್‌ವ್ಯಾಗನ್ ಕಾರ್ ಇನ್ಶೂರೆನ್ಸ್ ಪ್ಲಾನ್ ಅನ್ನು ಖರೀದಿಸಿ ಅಥವಾ ರಿನೀವ್ ಮಾಡಿ

ವೋಕ್ಸ್‌ವ್ಯಾಗನ್ 1937ರಲ್ಲಿ ಸ್ಥಾಪನೆಯಾದ ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾಗಿದೆ ಮತ್ತು 2016 ಹಾಗೂ 2017 ಸಂದರ್ಭದಲ್ಲಿ ವಿಶ್ವಾದ್ಯಂತ ಕಾರ್ ಮಾರಾಟ ಮಾಡುವ ಮೂಲಕ ಅತಿದೊಡ್ಡ ಕಾರ್ ತಯಾರಕ ಕಂಪನಿಯಾಗಿ ರೂಪುಗೊಂಡಿದೆ. ಈ ಬ್ರ್ಯಾಂಡ್‌ನಿಂದ ಹಲವಾರು ಎ, ಬಿ ಮತ್ತು ಸಿ- ಸೆಗ್ಮೆಂಟಿನ ಹ್ಯಾಚ್‌ಬ್ಯಾಕ್‌ಗಳು ಮತ್ತು ಎಸ್‌ಯುವಿ ಕ್ರಾಸ್‌ಓವರ್‌ಗಳು ಬಂದಿವೆ- 2019ರಲ್ಲಿ ಬೆಸ್ಟ್ ಸೆಲ್ಲಿಂಗ್ ಮಾಡೆಲ್‌ಗಳಾಗಿ ಹೆಸರು ಮಾಡಿವೆ. ಅದರ ವಿವಿಧ ಶ್ರೇಣಿಯ ಕಾರುಗಳು ಮತ್ತು ನವೀಕರಿಸಿದ ತಂತ್ರಜ್ಞಾನದಿಂದಾಗಿ, ಇದು 2019ರಲ್ಲಿ ಸುಮಾರು 11 ಮಿಲಿಯನ್ ಯುನಿಟ್‌ಗಳನ್ನು ಮಾರಾಟ ಮಾಡಿತ್ತು.

ಇದಲ್ಲದೆ, ವೋಕ್ಸ್‌ವ್ಯಾಗನ್‌ನ ಭಾರತೀಯ ಅಂಗಸಂಸ್ಥೆಯ ಕಾರಣದಿಂದಾಗಿ ಈ ಜರ್ಮನ್-ಎಂಜಿನಿಯರ್ಡ್ ಕಾರುಗಳು ಭಾರತೀಯ ಪ್ರಯಾಣಿಕ ಕಾರುಗಳ ಮಾರುಕಟ್ಟೆಯಲ್ಲಿ ಲಭ್ಯವಿದೆ. ಭಾರತದಲ್ಲಿನ ಕೆಲವು ಜನಪ್ರಿಯ ವೋಕ್ಸ್‌ವ್ಯಾಗನ್ ಕಾರುಗಳಲ್ಲಿ ವೆಂಟೊ, ಪೋಲೋ, ಪೋಲೋ ಜಿಟಿ ಇತ್ಯಾದಿ ಸೇರಿವೆ. 2021ರ ಉದ್ದಕ್ಕೂ, ಈ ಕಂಪನಿಯು ಭಾರತದಾದ್ಯಂತ ಸುಮಾರು 26,000 ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ.

ಈ ವರ್ಷ ಮೇಲೆ ತಿಳಿಸಲಾದ ಯಾವುದೇ ಮಾಡೆಲ್ ಗಳನ್ನು ಖರೀದಿಸಲು ನೀವು ಪ್ಲಾನ್ ಮಾಡುತ್ತಿದ್ದರೆ, ಅಪಘಾತದ ಸಮಯದಲ್ಲಿ ಅದು ಉಂಟುಮಾಡುವ ಡ್ಯಾಮೇಜ್ ಗಳ ಬಗ್ಗೆಯೂ ನೀವು ತಿಳಿದಿರಬೇಕು. ಇದನ್ನು ಗಮನದಲ್ಲಿಟ್ಟುಕೊಂಡು, ನೀವು ವೋಕ್ಸ್‌ವ್ಯಾಗನ್ ಕಾರ್ ಇನ್ಶೂರೆನ್ಸ್ ಅನ್ನು ಪ್ರತಿಷ್ಠಿತ ಇನ್ಶೂರರ್ ರಿಂದ ಪಡೆಯಬೇಕು.

ಕಾರ್ ಇನ್ಶೂರೆನ್ಸ್ ಪಾಲಿಸಿಗಳು ಅಪಘಾತದಿಂದ ಉಂಟಾಗುವ ಗಣನೀಯ ಡ್ಯಾಮೇಜ್ ಗಳಿಂದ ಉಂಟಾಗುವ ಅತಿಯಾದ ದುರಸ್ತಿ ಶುಲ್ಕಗಳನ್ನು ಕವರ್ ಮಾಡುತ್ತವೆ. ಈ ವೆಚ್ಚಗಳನ್ನು ಪಾವತಿಸುವುದು ನಿಮಗೆ ಭಾರಿ ಆಗಲಿದೆ ಮತ್ತು ನಿಮ್ಮ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತದೆ. ಹೀಗಾಗಿ, ವೋಕ್ಸ್‌ವ್ಯಾಗನ್ ಕಾರುಗಳಿಗೆ ಇನ್ಶೂರೆನ್ಸ್ ಅನ್ನು ಪಡೆಯುವುದು ನಿಮ್ಮ ಹಣಕಾಸಿನ ಲಯಬಿಲಿಟಿಯನ್ನು ಕಡಿಮೆ ಮಾಡುತ್ತದೆ ಮತ್ತು ಭವಿಷ್ಯದ ಉದ್ದೇಶಗಗೆ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ.

ಇದಲ್ಲದೆ, ಮೋಟಾರ್ ವೆಹಿಕಲ್ ಆ್ಯಕ್ಟ್ 1988ರ ಪ್ರಕಾರ, ಪೆನಲ್ಟಿಗಳನ್ನು ತಪ್ಪಿಸಲು ವೋಕ್ಸ್‌ವ್ಯಾಗನ್‌ಗೆ ಬೇಸಿಕ್ ಕಾರ್ ಇನ್ಶೂರೆನ್ಸ್ ಪ್ಲಾನ್ ಅನ್ನು ಪಡೆಯುವುದು ಕಡ್ಡಾಯವಾಗಿದೆ. ಬೇಸಿಕ್ ಇನ್ಶೂರೆನ್ಸ್ ಪ್ಲಾನ್ ವೋಕ್ಸ್‌ವ್ಯಾಗನ್ ಕಾರಿಗೆ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಆಗಿದ್ದು, ಅದು ಥರ್ಡ್-ಪಾರ್ಟಿ ವ್ಯಕ್ತಿ, ಪ್ರಾಪಟ್ರಿ ಅಥವಾ ವಾಹನಕ್ಕೆ ಉಂಟಾಗುವ ಡ್ಯಾಮೇಜ್ ಅನ್ನು ಕವರ್ ಮಾಡುತ್ತದೆ. ಆದಾಗ್ಯೂ, ಓನ್ ಕಾರ್ ಡ್ಯಾಮೇಜ್ ಗಳ ವಿರುದ್ಧ ಹೆಚ್ಚುವರಿ ಕವರೇಜ್ ಪಡೆಯಲು ನೀವು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪ್ಲಾನ್ ಅನ್ನು ಪರಿಗಣಿಸಬಹುದು.

ಭಾರತದಲ್ಲಿನ ಹಲವಾರು ಇನ್ಶೂರೆನ್ಸ್ ಕಂಪನಿಗಳು ನಿಮ್ಮ ಅಗತ್ಯಗಳನ್ನು ಸರಿಹೊಂದಿಸುವಂತೆ, ಇತರ ಆಕರ್ಷಕ ಕೊಡುಗೆಗಳ ಜೊತೆಗೆ ಥರ್ಡ್-ಪಾರ್ಟಿ ಮತ್ತು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಅನ್ನು ನೀಡುತ್ತವೆ. ಈ ನಿಟ್ಟಿನಲ್ಲಿ, ಸ್ಪರ್ಧಾತ್ಮಕ ವೋಕ್ಸ್‌ವ್ಯಾಗನ್ ಕಾರ್ ಇನ್ಶೂರೆನ್ಸ್ ಬೆಲೆ, ಆನ್‌ಲೈನ್ ಪ್ರೊಸೆಸ್ ಗಳು, ನೆಟ್‌ವರ್ಕ್ ಗ್ಯಾರೇಜ್‌ಗಳಿಂದ ಕ್ಯಾಶ್ ಲೆಸ್ ರಿಪೇರಿ ಮತ್ತು ಹೆಚ್ಚಿನವುಗಳಂತಹ ಪ್ರಯೋಜನಗಳನ್ನು ಒದಗಿಸುವುದರಿಂದಾಗಿ ನೀವು ಡಿಜಿಟ್ ಇನ್ಶೂರೆನ್ಸ್ ಅನ್ನು ಪರಿಗಣಿಸಬಹುದು.

ಆದಾಗ್ಯೂ, ನೀವು ಯಾವುದೇ ಪ್ಲಾನ್ ಅನ್ನು ಆಯ್ಕೆಮಾಡುವ ಮೊದಲು ಗರಿಷ್ಠ ಪ್ರಯೋನಗಳೊಂದಿಗೆ ಬರುವ ವೋಕ್ಸ್‌ವ್ಯಾಗನ್ ಕಾರ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಹೋಲಿಸಬೇಕು.

ವೋಕ್ಸ್‌ವ್ಯಾಗನ್ ಕಾರ್ ಇನ್ಶೂರೆನ್ಸ್‌ ನಲ್ಲಿ ಏನೆಲ್ಲಾ ಕವರ್‌

ಏನೆಲ್ಲಾ ಕವರ್ ಆಗುವುದಿಲ್ಲ

ನಿಮ್ಮ ಕಾರು ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನೆಲ್ಲಾ ಕವರ್ ಆಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಕೂಡ ಅಷ್ಟೇ ಮುಖ್ಯ, ಹಾಗೆ ಮಾಡುವುದರಿಂದ ಕ್ಲೈಮ್ ಮಾಡುವ ಸಂದರ್ಭದಲ್ಲಿ ನೀವು ಯಾವುದೇ ಅಚ್ಚರಿಗೆ ಒಳಗಾಗುವ ಸಾಧ್ಯತೆ ಎದುರಾಗುವುದಿಲ್ಲ. ಅಂತಹ ಕೆಲವು ಸಂದರ್ಭಗಳು ಇಲ್ಲಿವೆ:

ಥರ್ಡ್-ಪಾರ್ಟಿ ಪಾಲಿಸಿ ಹೋಲ್ಡರ್‌ಗೆ ಓನ್‌-ಡ್ಯಾಮೇಜ್‌ಗಳು

ಥರ್ಡ್-ಪಾರ್ಟಿ ಅಥವಾ ಲಯಬಿಲಿಟಿ ಓನ್ಲಿ ಕಾರ್ ಪಾಲಿಸಿಯ ಸಂದರ್ಭದಲ್ಲಿ, ಓನ್ ವೆಹಿಕಲ್ ಡ್ಯಾಮೇಜ್‌ಗಳನ್ನು ಕವರ್ ಮಾಡಲಾಗುವುದಿಲ್ಲ.

ಮದ್ಯ ಸೇವಿಸಿ ಅಥವಾ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸುವುದು

ನೀವು ಕುಡಿದು ಅಥವಾ ವ್ಯಾಲಿಡ್ ಆದ ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲದೆ ವಾಹನ ಚಾಲನೆ ಮಾಡುತ್ತಿರುವಾಗ.

ವ್ಯಾಲಿಡ್ ಆದ ಡ್ರೈವಿಂಗ್ ಲೈಸೆನ್ಸ್ ಹೋಲ್ಡರ್ ಇಲ್ಲದೆ ವಾಹನ ಚಾಲನೆ

ನೀವು ಲರ್ನರ್ಸ್(ಕಲಿಯುವವರ) ಲೈಸೆನ್ಸ್ ಅನ್ನು ಹೊಂದಿದ್ದೀರಿ ಮತ್ತು ಮುಂಭಾಗದ ಪ್ರಯಾಣಿಕರ ಸೀಟಿನಲ್ಲಿ ವ್ಯಾಲಿಡ್ ಆದ ಡ್ರೈವಿಂಗ್ ಲೈಸೆನ್ಸ್-ಹೋಲ್ಡರ್ ಇಲ್ಲದೆ ಚಾಲನೆ ಮಾಡುತ್ತಿರುವಾಗ.

ಕಾನ್‌ಸೀಕ್ವೆನ್ಷಿಯಲ್‌ ಡ್ಯಾಮೇಜ್‌ಗಳು

ಅಪಘಾತದ ನೇರ ಪರಿಣಾಮವಲ್ಲದ ಯಾವುದೇ ಡ್ಯಾಮೇಜ್ (ಉದಾ. ಅಪಘಾತದ ನಂತರ, ಡ್ಯಾಮೇಜ್ ಆದ ಕಾರನ್ನು ತಪ್ಪಾಗಿ ಚಲಾಯಿಸಿದರೆ ಮತ್ತು ಎಂಜಿನ್ ಡ್ಯಾಮೇಜ್ ಆದರೆ, ಅದನ್ನು ಕವರ್ ಮಾಡಲಾವುದಿಲ್ಲ)

ನಿರ್ಲಕ್ಷ್ಯದಿಂದಾದ ಅನಾಹುತಗಳು

ನಿರ್ಲಕ್ಷ್ಯದಿಂದಾಗುವ ಯಾವುದೇ ಅನಾಹುತಗಳು (ಉದಾ. ಪ್ರವಾಹದಲ್ಲಿ ಕಾರನ್ನು ಚಾಲನೆ ಮಾಡುವುದರಿಂದ ಉಂಟಾಗುವ ಡ್ಯಾಮೇಜ್, ಅದನ್ನು ತಯಾರಕರ ಮ್ಯಾನ್ಯುವಲ್ ಪ್ರಕಾರ ಶಿಫಾರಸು ಮಾಡಲಾಗಿರುವುದಿಲ್ಲ, ಡ್ಯಾಮೇಜ್ ಕವರ್ ಆಗುವುದಿಲ್ಲ)

ಆ್ಯಡ್-ಆನ್‌ಗಳನ್ನು ಖರೀದಿಸಲಾಗಿಲ್ಲ

ಕೆಲವು ಸನ್ನಿವೇಶಗಳನ್ನು ಆ್ಯಡ್-ಆನ್‌ಗಳ ಮೂಲಕ ಕವರ್ ಮಾಡಬಹುದಾಗಿದೆ. ನೀವು ಆ ಆ್ಯಡ್ -ಆನ್‌ಗಳನ್ನು ಖರೀದಿಸದಿದ್ದರೆ, ಅನುಗುಣವಾದ ಸಂದರ್ಭಗಳ ಡ್ಯಾಮೇಜ್ ಅನ್ನು ಕವರ್ ಮಾಡಲಾಗುವುದಿಲ್ಲ.

ಡಿಜಿಟ್‌ನ ವೋಕ್ಸ್‌ವ್ಯಾಗನ್ ಇನ್ಶೂರೆನ್ಸ್ ಅನ್ನು ನೀವು ಯಾಕೆ ಖರೀದಿಸಬೇಕು?

ವೋಕ್ಸ್‌ವ್ಯಾಗನ್ಗೆ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದಾಗಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟ

×

ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟಗಳು

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟ

×

ಥರ್ಡ್ ಪಾರ್ಟಿ ವಾಹನಕ್ಕೆ ಆಗುವ ಹಾನಿ

×

ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಆಗುವ ಹಾನಿ

×

ಪರ್ಸನಲ್ ಆಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು

×

ನಿಮ್ಮ ಕಾರಿನ ಕಳ್ಳತನ

×

ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ ಮಾಡಿದ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ.

ಕ್ಲೈಮ್ ಅನ್ನು ಹೇಗೆ ಫೈಲ್ ಮಾಡುವುದು?

ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ, ನೀವು ಚಿಂತಾ-ಮುಕ್ತರಾಗಿ ಬದುಕುತ್ತೀರಿ! ಏಕೆಂದರೆ, ನಾವು ಕೇವಲ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.

ಹಂತ 1

1800-258-5956 ಸಂಖ್ಯೆಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ.

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವಯಂ ತಪಾಸಣೆಗಾಗಿ (self inspection) ಲಿಂಕ್ ಪಡೆಯಿರಿ. ಹಂತ ಹಂತವಾಗಿ ನೀಡುವ ಮಾರ್ಗದರ್ಶನದಂತೆ, ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನದ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ನೀವು ರಿಇಂಬರ್ಸ್ಮೆಂಟ್ ಅಥವಾ ಕ್ಯಾಶ್‌ಲೆಸ್ ಆಯ್ಕೆಗಾಗಿ, ರಿಪೇರಿ ವಿಧಾನವನ್ನು ಆರಿಸಿ.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು ನೀವೀಗ ಅದನ್ನೇ ಮಾಡುತ್ತಿರುವಿರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ವೋಕ್ಸ್‌ವ್ಯಾಗನ್ ಕುರಿತು ಮತ್ತಷ್ಟು ತಿಳಿಯಿರಿ

ವೋಕ್ಸ್‌ವ್ಯಾಗನ್, ಅಂದರೆ ಜರ್ಮನ್ ಭಾಷೆಯಲ್ಲಿ "ಪೀಪಲ್ಸ್ ಕಾರ್", ಇದು ನಿಜವಾಗಿಯೂ ತನ್ನ ಹೆಸರಿಗೆ ತಕ್ಕಂತೆ ಇರುವ ಬ್ರಾಂಡ್ ಆಗಿದೆ. ಇದು ಪ್ರೀಮಿಯಂ ಐಷಾರಾಮಿ ಕಾರುಗಳಿಂದ ಹಿಡಿದು ಕೈಗೆಟುಕುವ ಬೆಲೆಗಳ ಕಾರುಗಳವರೆಗೆ ವ್ಯಾಪಕ ಶ್ರೇಣಿಯ ಕಾರುಗಳನ್ನು ಮಾರಾಟ ಮಾಡುತ್ತದೆ.

ವೋಕ್ಸ್‌ವ್ಯಾಗನ್ ತನ್ನ ಕಾರು ಪಸಾಟ್‌ನೊಂದಿಗೆ ಜಾಗತಿಕ ಯಶಸ್ಸನ್ನು ಗಳಿಸಿತು. ಅದೇ ಕಾರಿನೊಂದಿಗೆ 2007ರಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತು. ಅದರ ಮುಂದಿನ ವರ್ಷ ಜುಲೈನಲ್ಲಿ ಅವರು ಪ್ರಬಲ ಮಾಡೆಲ್ ಜೆಟ್ಟಾದೊಂದಿಗೆ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಪ್ರಬಲತೆ ಸಾಧಿಸಿದರು. 2007ರಲ್ಲಿ ಅವರ ಅತ್ಯಂತ ಪ್ರಸಿದ್ಧ ಕಾರು ಪೋಲೋ ಅನ್ನು ಪರಿಚಯಿಸಲಾಯಿತು. ಮುಂದಿನ ವರ್ಷಗಳಲ್ಲಿ, ಅವರು ವೆಂಟೊ ಮತ್ತು ಅವರ ಐಷಾರಾಮಿ ಕಾರು ಫೈಟನ್ ಅನ್ನು ಪರಿಚಯಿಸಿದರು.

2016ರಲ್ಲಿ, ವೋಕ್ಸ್‌ವ್ಯಾಗನ್ ಪ್ರಬಲವಾದ ಕಾಂಪ್ಯಾಕ್ಟ್ ಸೆಡಾನ್ ಅಮಿಯೊವನ್ನು ಪರಿಚಯಿಸಿತು ಮತ್ತು ನಂತರ 2017ರಲ್ಲಿ ಪ್ರೀಮಿಯಂ ಎಸ್‌ಯುವಿ ವೋಕ್ಸ್‌ವ್ಯಾಗನ್ ಟಿಗ್ವಾನ್ ಅನ್ನು ಪರಿಚಯಿಸಿತು. ಬ್ರ್ಯಾಂಡ್‌ನಲ್ಲಿ ಅಗ್ಗದ ಕಾರುಗಳು ರೂ.5.84 ಲಕ್ಷ ಬೆಲೆಯಿಂದ ಪ್ರಾರಂಭವಾಗುತ್ತದೆ ಮತ್ತು ಉನ್ನತ ಮಾದರಿಗೆ ರೂ.30.88 ಲಕ್ಷ ಆಗುತ್ತದೆ.

ಪುಣೆ ಮತ್ತು ಔರಂಗಾಬಾದ್ ವೋಕ್ಸ್‌ವ್ಯಾಗನ್ ಕಾರುಗಳನ್ನು ತಯಾರಿಸುವ ಭಾರತದ ಎರಡು ಪ್ರಮುಖ ಘಟಕಗಳಾಗಿವೆ.

ವಿನ್ಯಾಸ ಮತ್ತು ಲುಕ್ ಎರಡೂ ವಿಭಾಗದಲ್ಲಿ ಬ್ರ್ಯಾಂಡ್ ಉತ್ತಮವಾಗಿದೆ. ವೋಕ್ಸ್‌ವ್ಯಾಗನ್ ಪಸ್ಸಾಟ್ 2018ರ ಎನ್‌ಡಿ ಟಿವಿ ಕಾರ್‌ ಆ್ಯಂಡ್‌ ಬೈಕ್‌ ಅವಾರ್ಡ್ಸ್‌ನಲ್ಲಿ ‘ಫುಲ್‌ಸೈಜ್‌ ಸೆಡಾನ್‌ ಆಫ್‌ ದಿ ಯಿಯರ್‌ ಟ್ರೋಫಿ’ ಅನ್ನು ಪಡೆದುಕೊಂಡಿತು. ಆ ಮೂಲಕ ಇದು ವಿಶ್ವಾಸಾರ್ಹ ಆಟೋಮೊಬೈಲ್ ಬ್ರ್ಯಾಂಡ್ ಎಂದು ಪದೇ ಪದೇ ಸಾಬೀತು ಪಡಿಸಿದೆ.

ನೀವು ಒಂದೋ ದುಬಾರಿಯಲ್ಲದ ಲೈನ್ ಮಾಡೆಲ್ ಅಥವಾ ಟಾಪ್ ಮಾಡೆಲ್‌ಗಳನ್ನು ಆಯ್ಕೆ ಮಾಡಿಕೊಳ್ಳಿ, ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಮಾತ್ರ ಮುಖ್ಯವಾಗಿದೆ. ಮೋಟಾರ್ ವೆಹಿಕಲ್ ಆ್ಯಕ್ಟ್ ಪ್ರಕಾರ, ಕಾರ್ ಇನ್ಶೂರೆನ್ಸ್ ಇಲ್ಲದೆ ಡ್ರೈವಿಂಗ್ ಮಾಡುವುದು ಅಪರಾಧವಾಗಿದ್ದು, ನೀವು ರೂ.2000/- ಪೆನಲ್ಟಿಯನ್ನು ಪಾವತಿಸಬೇಕಾಗುತ್ತದೆ.

ನೀವು ವೋಕ್ಸ್‌ವ್ಯಾಗನ್ ಕಾರನ್ನು ಏಕೆ ಖರೀದಿಸಬೇಕು?

  • ಹೆಚ್ಚಿನ ಮರುಮಾರಾಟ ಮೌಲ್ಯ: ವೋಕ್ಸ್‌ವ್ಯಾಗನ್ ಕಾರುಗಳು ನಿಮಗೆ ಹೆಚ್ಚಿನ ಮರುಮಾರಾಟ ಮೌಲ್ಯವನ್ನು ನೀಡುತ್ತವೆ. ಆದ್ದರಿಂದ ನೀವು ನಿಮ್ಮ ಕಾರನ್ನು ಮಾರಾಟ ಮಾಡಲು ಪ್ಲಾನ್ ಮಾಡಿದಾಗಲೂ, ನೀವು ಹೆಚ್ಚು ಬೆಲೆಯನ್ನು ಕಳೆದುಕೊಳ್ಳುವುದಿಲ್ಲ.
  • ಅಪ್‌ಬೀಟ್ ತಂತ್ರಜ್ಞಾನದ ವೈಶಿಷ್ಟ್ಯಗಳು: ವೋಕ್ಸ್‌ವ್ಯಾಗನ್ ಕಾರುಗಳು ವರ್ಧಿತ ನ್ಯಾವಿಗೇಷನ್, ಟ್ರಾಫಿಕ್ ಅಪ್‌ಡೇಟ್‌ಗಳು, ಕ್ರೀಡಾ ಸ್ಕೋರ್‌ಗಳು ಮತ್ತು ಹವಾಮಾನ ಮಾಹಿತಿಗಳನ್ನು ನೀಡುವಂತೆ ಸಜ್ಜುಗೊಂಡಿವೆ.
  • ಸ್ಮಾರ್ಟ್ ಕೌಂಟನೆನ್ಸ್: ಕಾರುಗಳು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಅಟೋ ಎರಡಕ್ಕೂ ಸ್ಮಾರ್ಟ್‌ಫೋನ್ ಮೂಲಕ ಹೊಂದಿಕೆಯಾಗುತ್ತವೆ. ಅವರ ಪ್ರೀಮಿಯಂ ಗುಣಮಟ್ಟದ ಸಂಗೀತ ವ್ಯವಸ್ಥೆಯು ನಿಮಗೆ ನಿರಂತರ ಮನರಂಜನಾ ಅನುಭವವನ್ನು ನೀಡುತ್ತದೆ.
  • ಸ್ಟ್ರಾಂಗ್ ಡ್ರೈವ್ ಅಸಿಸ್ಟ್ ಮತ್ತು ಸೇಫ್ಟಿ ಫೀಚರ್ಸ್: ಅದ್ಭುತ ಡ್ರೈವಿಂಗ್ ಅನುಭವಕ್ಕಾಗಿ, ವೋಕ್ಸ್‌ವ್ಯಾಗನ್ ಕಾರುಗಳು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾನಿಟರ್, ಲೇನ್ ಅಸಿಸ್ಟ್, ಫ್ರಂಟ್ ಅಸಿಸ್ಟ್, ಏರ್‌ಬ್ಯಾಗ್‌ಗಳು ಮತ್ತು ಹಿಂಭಾಗದ ಟ್ರಾಫಿಕ್ ಅಲರ್ಟ್‌ ಫೀಚರ್ ಗಳನ್ನು ಹೊಂದಿದೆ.
  • ಅಪೀಯರೆನ್ಸ್ ಮತ್ತು ವಿನ್ಯಾಸ: ವೋಕ್ಸ್‌ವ್ಯಾಗನ್ ಕಾರುಗಳು ತೀಕ್ಷ್ಣವಾದ ರೇಖೆಗಳು ಮತ್ತು ಅಥ್ಲೆಟಿಕ್ ವಿನ್ಯಾಸಗಳೊಂದಿಗೆ ಬೋಲ್ಡ್ ಆಗಿವೆ. ಬ್ರ್ಯಾಂಡ್ ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಸರಳ ವಿನ್ಯಾಸಗಳಿಂದ ಸಮ್ಮಿಳಿತಗೊಂಡಿದೆ.
  • ವಿಶ್ವಾಸಾರ್ಹ: ವೋಕ್ಸ್‌ವ್ಯಾಗನ್‌ನ ಎಲ್ಲಾ ಮಾಡೆಲ್ ಗಳು ವಿಶ್ವಾಸಾರ್ಹವಾಗಿವೆ ಮತ್ತು ಹೆಚ್ಚಿನ ಕಾರ್ಯಕ್ಷಮತೆಯನ್ನು ಪ್ರದರ್ಶಿಸುತ್ತವೆ.

ವೋಕ್ಸ್‌ವ್ಯಾಗನ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯ?

ವೋಕ್ಸ್‌ವ್ಯಾಗನ್ ಕಾರ್ ಇನ್ಶೂರೆನ್ಸ್ ಖರೀದಿಸಲು ಕಾರಣಗಳು ಇಲ್ಲಿವೆ:

  • ಮೋಟಾರ್ ವೆಹಿಕಲ್ಸ್ ಆ್ಯಕ್ಟ್ ಪ್ರಕಾರ ಕಡ್ಡಾಯ: ಮೋಟಾರ್ ವೆಹಿಕಲ್ಸ್ ಆ್ಯಕ್ಟ್ ಪ್ರಕಾರ, ಕಾರ್ ಇನ್ಸೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಕಡ್ಡಾಯವಾಗಿದೆ. ಇನ್ಶೂರೆನ್ಸ್ ಇಲ್ಲದೇ ಡ್ರೈವಿಂಗ್ ಮಾಡುವುದು ಅಪರಾಧ. ಹಾಗೆ ಮಾಡಿದರೆ ರೂ.2000/- ದಂಡವನ್ನು ವಿಧಿಸಲಾಗುವುದು.
  • ಓನ್ ಡ್ಯಾಮೇಜ್ ವೆಚ್ಚಗಳನ್ನು ನಿರ್ವಹಿಸಲು: ಕೆಲವೊಮ್ಮೆ ಕಾರಿನ ಡ್ಯಾಮೇಜ್ ಭಾರಿ ಆಗಿರಬಹುದು. ದುರಸ್ತಿ ವೆಚ್ಚವು ದೊಡ್ಡದಾಗಿರುತ್ತದೆ ಮತ್ತು ಪಾವತಿಸುವ ನಿಮ್ಮ ಸಾಮರ್ಥ್ಯವನ್ನು ಮೀರುತ್ತದೆ. ಹಾಗಾಗಿ ಬೆಂಕಿ, ಕಳ್ಳತನ, ಅಪಘಾತ ಅಥವಾ ಯಾವುದೇ ನೈಸರ್ಗಿಕ ವಿಕೋಪದಿಂದ ಡ್ಯಾಮೇಜ್ ಸಂಭವಿಸಿದಾಗ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮಗೆ ಪಾವತಿ ಮಾಡುತ್ತದೆ.
  • ಥರ್ಡ್ ಪಾರ್ಟಿ ಕಾನೂನು ಲಯಬಿಲಿಟಿಯನ್ನು ಪಾವತಿಸಲು: ನಿಮ್ಮ ಕಾನೂನು ಲಯಬಿಲಿಟಿಯನ್ನು ಪಾವತಿಸಲು ಕಾರ್ ಇನ್ಸೂರೆನ್ಸ್ ಪಾಲಿಸಿ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಕಾರಿನೊಂದಿಗೆ ಥರ್ಡ್ ಪಾರ್ಟಿಗೆ ಡ್ಯಾಮೇಜ್ ಉಂಟುಮಾಡಿದಾಗ ನೀವು ಪ್ರಾಪರ್ಟಿ ಡ್ಯಾಮೇಜ್ ಅಥವಾ ದೈಹಿಕ ಗಾಯಕ್ಕೆ ಪಾವತಿಸುವ ಲಯಬಿಲಿಟಿಯನ್ನು ಹೊಂದುವಂತಾಗಬಹುದು.
  • ಬೇಸ್ ಕಾರ್ ಪಾಲಿಸಿಯನ್ನು ವರ್ಧಿಸಿ: ಕಾರ್ ಪಾಲಿಸಿಯ ಅಡಿಯಲ್ಲಿ ಒಳಗೊಂಡಿರದ ನಷ್ಟಗಳಿಗಾಗಿ (ಎಂಜಿನ್‌ಗೆ ಆಕಸ್ಮಿಕವಾಗಿ ಡ್ಯಾಮೇಜ್ ಆಗದಂತೆ), ನೀವು ಆ್ಯಡ್-ಆನ್ ಕವರ್‌ಗಳನ್ನು ಖರೀದಿಸಬೇಕಾಗುತ್ತದೆ. ನೀವು ಆಯ್ಕೆ ಮಾಡಬಹುದಾದ ಕೆಲವು ಆ್ಯಡ್-ಆನ್ ಕವರ್‌ಗಳೆಂದರೆ ಝೀರೋ ಡೆಪ್ರಿಸಿಯೇಶನ್ ಕವರ್, ರಿಟರ್ನ್-ಟು-ಇನ್‌ವಾಯ್ಸ್ ಕವರ್, ಬ್ರೇಕ್‌ಡೌನ್ ಅಸಿಸ್ಟೆನ್ಸ್, ಟೈರ್ ಪ್ರೊಟೆಕ್ಟ್ ಕವರ್ ಮತ್ತು ಪ್ಯಾಸೆಂಜರ್ ಕವರ್.

ವೋಕ್ಸ್‌ವ್ಯಾಗನ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು

ವೋಕ್ಸ್‌ವ್ಯಾಗನ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು ಇಲ್ಲಿವೆ:

  • ಕಾರಿನ ಮೌಲ್ಯ: ನಿಮ್ಮ ಕಾರಿನ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (ಐಡಿವಿ) ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚಿನ ಐಡಿವಿಗಾಗಿ, ಪ್ರೀಮಿಯಂ ಹೆಚ್ಚಾಗಿರುತ್ತದೆ ಮತ್ತು ವೈಸ್ ವರ್ಸಾ.
  • ಆ್ಯಡ್ -ಆನ್ ಕವರ್‌ಗಳು: ಪ್ರತಿ ಆ್ಯಡ್-ಆನ್ ಕವರ್ ಹೆಚ್ಚುವರಿ ಪ್ರೀಮಿಯಂ ಪಾವತಿಯೊಂದಿಗೆ ಬರುತ್ತದೆ. ನೀವು ಆ್ಯಡ್-ಆನ್ ಕವರ್‌ಗಳನ್ನು ಆಯ್ಕೆ ಮಾಡಿದಂತೆ, ಪ್ರೀಮಿಯಂ ಹೆಚ್ಚಾಗುತ್ತದೆ.
  • ನೋ ಕ್ಲೈಮ್ ಬೋನಸ್ (ಎನ್‌ಸಿಬಿ): ನೀವು ಒಂದು ಸಂಪೂರ್ಣ ವರ್ಷ ಒಂದೂ ಕ್ಲೈಮ್ ಮಾಡಿಲ್ಲದೆ ಹೋದರೆ, ಮುಂದಿನ ರಿನೀವಲ್ ಗೆ ನೀವು ಎನ್‌ಸಿಬಿ ಅನ್ನು ಪಡೆಯುತ್ತೀರಿ.
  • ಭೌಗೋಳಿಕ ಸ್ಥಳ: ಕಾರುಗಳ ಸಂಖ್ಯೆ ಹೆಚ್ಚಿರುವ ನಗರಗಳಲ್ಲಿ, ಅಪಘಾತಗಳ ಸಂಭವನೀಯತೆಯೂ ಹೆಚ್ಚು. ಆದ್ದರಿಂದ, ಅಲ್ಲಿಗೆ ನೀವು ಹೆಚ್ಚಿನ ಕಾರ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಪಾವತಿಸಬೇಕಾಗುತ್ತದೆ. ಇದು ವಿಶೇಷವಾಗಿ ಮೆಟ್ರೋಪಾಲಿಟನ್ ನಗರಗಳಿಗೆ ಅನ್ವಯವಾಗುತ್ತದೆ.
  • ಕಾರಿನ ವಯಸ್ಸು: ಕಾರಿನ ವಯಸ್ಸು ಹೆಚ್ಚಾದಾಗ, ಡೆಪ್ರಿಸಿಯೇಷನ್ ವ್ಯಾಲ್ಯೂ ಹೆಚ್ಚಾಗುತ್ತದೆ. ಆದ್ದರಿಂದ ನಿಮ್ಮ ಕಾರಿನ ಐಡಿವಿ ಕಡಿಮೆಯಾಗುತ್ತದೆ, ಇದು ಪ್ರೀಮಿಯಂನಲ್ಲಿನ ಇಳಿಕೆಗೆ ಕಾರಣವಾಗಬಹುದು.
  • ಎಂಜಿನ್ ಸಾಮರ್ಥ್ಯ: ಇನ್ಶೂರೆನ್ಸ್ ಪ್ರೀಮಿಯಂನಲ್ಲಿನ ಥರ್ಡ್-ಪಾರ್ಟಿ ಅಂಶವು ಕಾರಿನ ಎಂಜಿನ್ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ. ಹೆಚ್ಚಿನ ಎಂಜಿನ್ ಸಾಮರ್ಥ್ಯಕ್ಕೆ ಹೆಚ್ಚಿನ ಟಿಪಿ ಪ್ರೀಮಿಯಂ ಇರುತ್ತದೆ.
  • ವಾಲಂಟರಿ ಡಿಡಕ್ಟಿಬಲ್: ಕ್ಲೈಮ್‌ನ ಸಂಪೂರ್ಣ ಅಮೌಂಟ್ ಅನ್ನು ಇನ್ಶೂರೆನ್ಸ್ ಕಂಪನಿಯು ಕವರ್ ಮಾಡಲು ಅವಕಾಶ ನೀಡುವ ಬದಲು, ನೀವು ಕ್ಲೈಮ್ ಅಮೌಂಟ್ ಗೆ ಕೊಡುಗೆ ನೀಡುವ ಆಯ್ಕೆ ಮಾಡಬಹುದು. ಇದನ್ನು ವಾಲಂಟರಿ ಡಿಡಕ್ಟಿಬಲ್ ಎಂದು ಕರೆಯಲಾಗುತ್ತದೆ. ಹೆಚ್ಚಿನ ವಾಲಂಟರಿ ಡಿಡಕ್ಟಿಬಲ್ ನಿಮಗೆ ಕಡಿಮೆ ಪ್ರೀಮಿಯಂ ಅನ್ನು ಒದಗಿಸುತ್ತದೆ.

ವೋಕ್ಸ್‌ವ್ಯಾಗನ್ ಕಾರ್ ಇನ್ಶೂರೆನ್ಸ್ ಖರೀದಿಸಲು ಡಿಜಿಟ್ ಅನ್ನು ಏಕೆ ಆರಿಸಬೇಕು?

ನೀವು ಡಿಜಿಟ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳಲು ಕಾರಣಗಳು ಇಲ್ಲಿವೆ:

  • ಇನ್ಶೂರೆನ್ಸ್ ಪಾಲಿಸಿಯ ಆಯ್ಕೆಗಳು: ಡಿಜಿಟ್ ಇನ್ಶೂರೆನ್ಸ್ ನಿಮಗೆ ಆಯ್ಕೆ ಮಾಡಲು ಎರಡು ರೀತಿಯ ಕಾರ್ ಇನ್ಶೂರೆನ್ಸ್ ಅನ್ನು ನೀಡುತ್ತದೆ. ಓನ್ ಡ್ಯಾಮೇಜ್ ಮತ್ತು ಥರ್ಡ್-ಪಾರ್ಟಿ ಲಯಬಿಲಿಟಿ ಕವರೇಜ್‌ಗೆ ರಕ್ಷಣೆ ನೀಡುವ ಕಾಂಪ್ರಹೆನ್ಸಿವ್ ಕಾರ್ ಇನ್ಶೂರೆನ್ಸ್ ಎಂಬ ಪ್ಯಾಕೇಜ್ ಪಾಲಿಸಿ ಒಂದು. ಎರಡನೆಯದು ಸ್ವತಂತ್ರ ಥರ್ಡ್-ಪಾರ್ಟಿ ಪಾಲಿಸಿಯಾಗಿದ್ದು, ಅದು ಥರ್ಡ್-ಪಾರ್ಟಿಗೆ ಗಾಯ ಅಥವಾ ಪ್ರಾಪರ್ಟಿ ಡ್ಯಾಮೇಜ್ ಗಾಗಿ ಉಂಟಾದ ಯಾವುದೇ ಕಾನೂನು ಲಯಬಿಲಿಟಿಯನ್ನು ಪಾವತಿಸುತ್ತದೆ.
  • ಆ್ಯಡ್-ಆನ್ ಕವರ್‌ಗಳನ್ನು ನೀಡುತ್ತದೆ: ಯು ಟೈರ್ ಪ್ರೊಟೆಕ್ಟ್ ಕವರ್, ಝೀರೋ ಡೆಪ್ರಿಸಿಯೇಷನ್ ಕವರ್, ಬ್ರೇಕ್‌ಡೌನ್ ಅಸಿಸ್ಟೆನ್ಸ್, ಎಂಜಿನ್ ಆಂಡ್ ಗೇರ್‌ಬಾಕ್ಸ್ ಪ್ರೊಟೆಕ್ಷನ್ ಮತ್ತು ಕನ್ಸ್ಯೂಮೇಬಲ್ ಕವರ್‌ನಂತಹ ಆ್ಯಡ್-ಆನ್ ಕವರ್‌ಗಳನ್ನು ನೀಡುತ್ತದೆ. ಇವುಗಳು ಹೆಚ್ಚುವರಿ ಪ್ರೀಮಿಯಂ ಪಾವತಿಗಳೊಂದಿಗೆ ಬರುತ್ತವೆ. ವೋಕ್ಸ್‌ವ್ಯಾಗನ್‌ಗಾಗಿ, ನೀವು ಝೀರೋ ಡೆಪ್ರಿಸಿಯೇಷನ್ ಕವರ್ ಅನ್ನು ಖರೀದಿಸಬಹುದು. ಕ್ಲೈಮ್‌ನ ಸಮಯದಲ್ಲಿ ಬಿಡಿ ಭಾಗಗಳಿಗೆ ಅನ್ವಯವಾಗುವ ಡೆಪ್ರಿಸಿಯೇಷನ್ ಅನ್ನು ಉಳಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ನೀವು ಈ ಆ್ಯಡ್-ಆನ್ ಕವರ್ ಅನ್ನು ಖರೀದಿಸಿದಾಗ, ನಿಮ್ಮ ಇನ್ಶೂರರ್ ನಷ್ಟದ ಒಟ್ಟು ಅಮೌಂಟ್ ಅನ್ನು ಪಾವತಿಸುತ್ತಾರೆ. ಬೇಸಿಕ್ ಪಾಲಿಸಿಯ ಅಡಿಯಲ್ಲಿ ಕವರ್ ಆಗಿಲ್ಲದ ಸಹ-ಪ್ರಯಾಣಿಕರನ್ನು ರಕ್ಷಿಸಲು ನೀವು ಪ್ಯಾಸೆಂಜರ್ ಕವರ್ ಅನ್ನು ಸಹ ಖರೀದಿಸಬಹುದು.
  • ಕಸ್ಟಮೈಸ್ ಮಾಡಬಹುದಾದ ಐಡಿವಿ: ನಿಮ್ಮ ಕಾರಿಗೆ ಸರಿಯಾದ ಐಡಿವಿ ಅನ್ನು ಕಸ್ಟಮೈಸ್ ಮಾಡಲು ಮತ್ತು ಆಯ್ಕೆ ಮಾಡಲು ಡಿಜಿಟ್ ಇನ್ಶೂರೆನ್ಸ್ ನಿಮಗೆ ಅನುಮತಿಸುತ್ತದೆ. ಅದಕ್ಕೆ ತಕ್ಕಂತೆ ಪ್ರೀಮಿಯಂ ಬದಲಾಗುತ್ತದೆ.
  • ನ್ಯಾಯಯುತ ಪ್ರೀಮಿಯಂ ದರಗಳು: ಡಿಜಿಟ್ ಇನ್ಶೂರೆನ್ಸ್ ಯಾವುದೇ ಗುಪ್ತ ವೆಚ್ಚವಿಲ್ಲದೆ ನ್ಯಾಯಯುತ ಮತ್ತು ಸ್ಪರ್ಧಾತ್ಮಕ ಪ್ರೀಮಿಯಂ ದರಗಳನ್ನು ಒದಗಿಸುತ್ತದೆ.
  • ಆನ್‌ಲೈನ್ ಮತ್ತು ಸ್ಮಾರ್ಟ್‌ಫೋನ್-ಎನೇಬಲ್ಡ್ ಪ್ರೊಸೀಜರ್: ಡಿಜಿಟ್ ನೊಂದಿಗೆ ನೀವು ಆನ್‌ಲೈನ್‌ನಲ್ಲಿ ಪಾಲಿಸಿಯನ್ನು ಆಯ್ಕೆ ಮಾಡಬಹುದು. ಪಾಲಿಸಿಯನ್ನು ಕ್ಲೈಮ್ ಮಾಡಲು, ನಿಮ್ಮ ಸ್ಮಾರ್ಟ್‌ಫೋನ್ ಮೂಲಕ ನೀವು ಅಗತ್ಯ ಡಾಕ್ಯುಮೆಂಟ್ ಗಳನ್ನು ಅಪ್‌ಲೋಡ್ ಮಾಡಬಹುದು.
  • ಹೈ-ಕ್ಲೈಮ್ ಸೆಟ್ಲ್‌ಮೆಂಟ್ ಅನುಪಾತ: ಡಿಜಿಟ್ ಇನ್ಶೂರೆನ್ಸ್ ವೇಗದ ಕ್ಲೈಮ್ ಮಾಡುವ ಸೇವೆಗಳನ್ನು ಒದಗಿಸುತ್ತದೆ. ಅವರು ಹೆಚ್ಚಿನ ಕ್ಲೈಮ್ ಸೆಟಲ್ಮೆಂಟ್ ಅನುಪಾತವನ್ನು ಹೊಂದಿದ್ದಾರೆ.
  • ಗ್ಯಾರೇಜ್‌ಗಳ ವ್ಯಾಪಕ ನೆಟ್‌ವರ್ಕ್: ನಿಮಗೆ ಸುಲಭವಾದ ರಿಪೇರಿ ಸೇವೆಗಳನ್ನು ನೀಡಲು ಡಿಜಿಟ್ ಇನ್ಶೂರೆನ್ಸ್ ವ್ಯಾಪಕ ಶ್ರೇಣಿಯ ಗ್ಯಾರೇಜ್‌ಗಳೊಂದಿಗೆ ಸಹಯೋಗ ಹೊಂದಿದೆ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ವೋಕ್ಸ್‌ವ್ಯಾಗನ್ ಕಾರ್ ಇನ್ಶೂರೆನ್ಸ್ ಪ್ಲಾನ್ ನಲ್ಲಿ ಕನ್ಸ್ಯೂಮೇಬಲ್ ಕವರ್ ಏನನ್ನು ಒಳಗೊಂಡಿದೆ?

ನಿಮ್ಮ ಅಸ್ತಿತ್ವದಲ್ಲಿರುವ ಇನ್ಶೂರೆನ್ಸ್ ಪ್ಲಾನ್ ಮೇಲೆ ಕನ್ಸ್ಯೂಮೇಬಲ್ ಕವರ್ ಪಡೆದರೆ, ಅದು ನಿಮ್ಮ ವೋಕ್ಸ್‌ವ್ಯಾಗನ್ ಕಾರಿನ ಎಲ್ಲಾ ವಸ್ತುಸ್ಥಿತಿಗೆ ಕವರೇಜ್ ಅನ್ನು ವಿಸ್ತರಿಸುತ್ತದೆ. ಹೆಚ್ಚುವರಿ ಶುಲ್ಕಗಳ ವಿರುದ್ಧ ರಕ್ಷಣೆ ಒದಗಿಸುವ ಈ ಕವರ್ ಎಂಜಿನ್ ತೈಲಗಳು, ಗ್ರೀಸ್, ನಟ್ಸ್ ಮತ್ತು ಬೋಲ್ಟ್‌ ಗಳ ವೆಚ್ಚಗಳನ್ನು ಒಳಗೊಂಡಿರುತ್ತದೆ.

ವೋಕ್ಸ್‌ವ್ಯಾಗನ್ ಕಾರ್ ಇನ್ಶೂರೆನ್ಸ್ ಪಾಲಿಸಿಯು ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ನ್ನು ಒದಗಿಸುತ್ತದೆಯೇ?

ಹೌದು, ನಿಮ್ಮ ಇನ್ಶೂರೆನ್ಸ್ ಪ್ಲಾನ್ ಪ್ರಕಾರವನ್ನು ಲೆಕ್ಕಿಸದೆಯೇ, ಶಾಶ್ವತ ಅಂಗವೈಕಲ್ಯ ಅಥವಾ ಸಾವಿಗೆ ಕಾರಣವಾಗುವ ಅಪಘಾತಗಳ ಸಂದರ್ಭದಲ್ಲಿ ನೀವು ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ಸ್ವೀಕರಿಸಲು ಲಯಬಲ್ ಆಗಿರುತ್ತೀರಿ.

ನನ್ನ ಸೆಕೆಂಡ್ ಹ್ಯಾಂಡ್ ವೋಕ್ಸ್‌ವ್ಯಾಗನ್ ಕಾರಿಗೆ ನಾನು ಇನ್ಶೂರೆನ್ಸ್ ನ್ನು ಪಡೆಯಬೇಕೇ?

ನಿಮ್ಮ ಕಾರಿನ ಹಿಂದಿನ ಮಾಲೀಕರು ವ್ಯಾಲಿಡ್ ಆದ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ, ನೀವು ಮಾಡಬೇಕಾಗಿರುವುದು ನಿಮ್ಮ ಸ್ವಂತ ಪ್ಲಾನ್ ಗೆ ವರ್ಗಾಯಿಸುವುದು. ಇಲ್ಲದಿದ್ದರೆ, ನೀವು ಹೊಸ ಪಾಲಿಸಿಯನ್ನು ಖರೀದಿಸಬೇಕಾಗುತ್ತದೆ.