ಟಾಟಾ ಟಿಗೋರ್ ಇನ್ಶೂರೆನ್ಸ್
Get Instant Policy in Minutes*

Third-party premium has changed from 1st June. Renew now

ಟಾಟಾ ಟಿಗೋರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿ ಅಥವಾ ರಿನೀವ್ ಮಾಡಿ

ಟಾಟಾ ಟಿಗೋರ್ ಕಾರ್, ಮಾರ್ಚ್ 2017 ರಂದು ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿದ ಸಬ್‌ಕಾಂಪ್ಯಾಕ್ಟ್ ಸೆಡಾನ್ ಆಗಿದೆ. ಈ ಫೋರ್-ಡೋರ್ ಸೆಡಾನ್, ತನ್ನ ಆಧುನಿಕ ಫೀಚರ್‌ಗಳು ಮತ್ತು ಕಡಿಮೆ ಬೆಲೆಯಿಂದಾಗಿ ಥರ್ಡ್ ರಿಯರ್ ವಾಲ್ಯೂಮ್‌ನೊಂದಿಗೆ ಭಾರತದ ಮಾರ್ಕೆಟ್‌ನಲ್ಲಿ ಜನಪ್ರಿಯತೆಯನ್ನು ಗಳಿಸಿತು. ಪರಿಣಾಮವಾಗಿ, ಅಕ್ಟೋಬರ್ 2018 ರಲ್ಲಿ, ಕಂಪನಿಯು ಈ ಕಾರಿನ ಸ್ಪೋರ್ಟಿಯರ್ ವರ್ಷನ್ ಅನ್ನು ಬಿಡುಗಡೆ ಮಾಡಿತು.

ಈ ಕಾರಿನ ಫೇಸ್‌ಲಿಫ್ಟೆಡ್ ವರ್ಷನ್ ಅನ್ನು ಮಾರ್ಕೆಟ್‌ಗೆ ಪರಿಚಯಿಸಿದ ಪರಿಣಾಮವಾಗಿ, ಭಾರತದ ಕಾರ್ ತಯಾರಕರು ಸೆಪ್ಟೆಂಬರ್ 2021 ರಲ್ಲಿ ಸುಮಾರು 5,100 ಯುನಿಟ್ ಟಿಗೋರ್ ಅನ್ನು ಮಾರಾಟ ಮಾಡಿದರು.

ಈ ಕಾರು ಇತ್ತೀಚಿನ ಡ್ರೈವಿಂಗ್ ಸೇಫ್ಟಿ ಫೀಚರ್‌ಗಳನ್ನು ಹೊಂದಿದ್ದರೂ ಸಹ, ಇದು ಇತರ ವಾಹನಗಳಂತೆ ಅಪಾಯಗಳು ಮತ್ತು ಹಾನಿಗಳಿಗೆ ಒಳಗಾಗುತ್ತದೆ. ಹಾಗಾಗಿ ನೀವು ಈ ಕಾರನ್ನು ಖರೀದಿಸಲು ಪ್ಲ್ಯಾನ್ ಮಾಡುತ್ತಿದ್ದರೆ, ನೀವು ಟಾಟಾ ಟಿಗೋರ್ ಇನ್ಶೂರೆನ್ಸ್ ಪ್ಲ್ಯಾನ್ ಪಡೆದುಕೊಳ್ಳುವುದರ ಬಗ್ಗೆಯೂ ಯೋಚಿಸಬೇಕು. ವ್ಯಾಲಿಡ್ ಆಗಿರುವ ಇನ್ಶೂರೆನ್ಸ್ ಪಾಲಿಸಿಯು, ಅಪಘಾತದಿಂದ ಉಂಟಾಗುವ ನಿಮ್ಮ ಫೈನಾನ್ಸಿಯಲ್ ಮತ್ತು ಲೀಗಲ್ ಲಯಬಿಲಿಟಿಗಳನ್ನು ಕವರ್ ಮಾಡುತ್ತದೆ.

ನಿಮ್ಮ ಅಗತ್ಯಗಳನ್ನು ಪರಿಗಣಿಸಿ, ಹಲವಾರು ಕಂಪನಿಗಳು ಇನ್ಶೂರೆನ್ಸ್ ಪ್ರಾಡಕ್ಟ್‌ಗಳನ್ನು ನೀಡುತ್ತವೆ. ಅಂತಹ ಒಂದು ಕಂಪನಿಯೇ ಡಿಜಿಟ್.

ಈ ಕೆಳಗಿನ ಸೆಗ್ಮೆಂಟ್, ಡಿಜಿಟ್‌ನಂತಹ ಹೆಸರಾಂತ ಇನ್ಶೂರೆನ್ಸ್ ಪೂರೈಕೆದಾರರಿಂದ ಟಾಟಾ ಟಿಗೋರ್‌ಗೆ ಕಾರ್ ಇನ್ಶೂರೆನ್ಸ್ ಅನ್ನು ಪಡೆಯುವ ಪ್ರಯೋಜನಗಳನ್ನು ವಿವರಿಸುತ್ತದೆ.

ಟಾಟಾ ಟಿಗೋರ್ ಕಾರ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?

ನೀವು ಡಿಜಿಟ್‌ನ ಟಾಟಾ ಟಿಗೋರ್ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಟಾಟಾ ಟಿಗೋರ್‌ಗಾಗಿ ಕಾರ್‌ ಇನ್ಶೂರೆನ್ಸ್ ಪ್ಲ್ಯಾನ್‌ಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದ ಕಾರಣದಿಂದಾಗಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು

×

ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು

×

ಥರ್ಡ್ ಪಾರ್ಟಿ ವೆಹಿಕಲ್‌ಗೆ ಉಂಟಾಗುವ ಹಾನಿ

×

ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಉಂಟಾಗುವ ಹಾನಿ

×

ಪರ್ಸನಲ್ ಆ್ಯಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯ/ಮರಣ

×

ನಿಮ್ಮ ಕಾರ್‌ನ ಕಳ್ಳತನ

×

ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್‌ನ ವ್ಯತ್ಯಾಸದ ಬಗ್ಗೆ ಮತ್ತಷ್ಟು ತಿಳಿಯಿರಿ

ಕ್ಲೈಮ್ ಸಲ್ಲಿಸುವುದು ಹೇಗೆ?

ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿದ ನಂತರ, ನೀವು ಚಿಂತಾ ಮುಕ್ತರಾಗಿ ಬದುಕಬಹುದು. ಏಕೆಂದರೆ ನಾವು ಸರಳವಾದ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!

ಹಂತ 1

1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ನಲ್ಲಿ ಸೆಲ್ಫ್- ಇನ್‌ಸ್ಪೆಕ್ಷನ್‌ಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾದ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವೆಹಿಕಲ್‌ನ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ರಿಇಂಬರ್ಸ್‌ಮೆಂಟ್ ಅಥವಾ ಕ್ಯಾಶ್‌ಲೆಸ್ ಈ ಎರಡು ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ಟಾಟಾ ಟಿಗೋರ್ ಇನ್ಶೂರೆನ್ಸ್‌ಗಾಗಿ ಡಿಜಿಟ್ ಅನ್ನೇ ಏಕೆ ಆಯ್ಕೆ ಮಾಡಬೇಕು?

ನಿಮ್ಮ ಟಾಟಾ ಕಾರಿಗೆ ಉತ್ತಮ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಆಯ್ಕೆ ಮಾಡಲು, ಸರಿಯಾದ ರಿಸರ್ಚ್ ಮಾಡಿ, ಆನಂತರ ನೀವು ವಿವಿಧ ಇನ್ಶೂರೆನ್ಸ್ ಕಂಪನಿಗಳ ಹಲವಾರು ಪಾಲಿಸಿಗಳನ್ನು ಆನ್‌ಲೈನ್‌ನಲ್ಲಿ ಹೋಲಿಸಬೇಕು.

ಹಾಗೆ ಮಾಡುವಾಗ, ನೀವು ಡಿಜಿಟ್‌ನ ಟಾಟಾ ಟಿಗೋರ್‌ ಇನ್ಶೂರೆನ್ಸ್ ಅನ್ನು ಖರೀದಿಸಬಹುದು ಮತ್ತು ನಿಮ್ಮ ಆಯ್ಕೆಗಳನ್ನು ಸರಳಗೊಳಿಸಬಹುದು.

1. ಅನೇಕ ಇನ್ಶೂರೆನ್ಸ್ ಆಯ್ಕೆಗಳು

ನೀವು ಡಿಜಿಟ್ ಇನ್ಶೂರೆನ್ಸ್ ಅನ್ನು ಆಯ್ಕೆಮಾಡಿಕೊಂಡರೆ, ಈ ಕೆಳಗಿನ ಆಯ್ಕೆಗಳಿಂದ ನೀವು ಬಯಸುವ ಪಾಲಿಸಿಯನ್ನು ನೀವು ಆಯ್ಕೆ ಮಾಡಬಹುದು:

  • ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್: ಅಪಘಾತದ ಸಮಯದಲ್ಲಿ ನಿಮ್ಮ ಟಾಟಾ ಕಾರ್, ಥರ್ಡ್ ಪಾರ್ಟಿ ವಾಹನ, ವ್ಯಕ್ತಿ ಅಥವಾ ಪ್ರಾಪರ್ಟಿಗೆ ಹಾನಿಯನ್ನುಂಟುಮಾಡಿದಾಗ ಈ ಬೇಸಿಕ್ ಇನ್ಶೂರೆನ್ಸ್ ಪ್ರಯೋಜನಕಾರಿಯಾಗಿರುತ್ತದೆ. ಅಂತಹ ಅಪಘಾತಗಳಿಂದ ಉಂಟಾಗುವ ಲಿಟಿಗೇಶನ್ ಸಮಸ್ಯೆಗಳನ್ನು ಸಹ ಇದು ನೋಡಿಕೊಳ್ಳುತ್ತದೆ. ಹೀಗಾಗಿ, ನೀವು ಡಿಜಿಟ್‌ನಿಂದ ಥರ್ಡ್ ಪಾರ್ಟಿ ಟಿಗೋರ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಬಹುದು ಮತ್ತು ನಿಮ್ಮ ಲಯಬಿಲಿಟಿಗಳನ್ನು ಕಡಿಮೆ ಮಾಡಬಹುದು.
  • ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ : ನಿಮ್ಮ ಟಾಟಾ ಕಾರಿನ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಪ್ಲ್ಯಾನ್ ಥರ್ಡ್ ಪಾರ್ಟಿಗೆ ಉಂಟಾಗುವ ಹಾನಿಯನ್ನು ಕವರ್ ಮಾಡುತ್ತದೆಯಾದರೂ, ಇದು ಸ್ವಂತ ಕಾರ್ ಹಾನಿಗಳ (ಓನ್ ಕಾರ್ ಡ್ಯಾಮೇಜ್) ವಿರುದ್ಧ ಕವರೇಜ್ ನೀಡುವುದಿಲ್ಲ. ಈ ನಿಟ್ಟಿನಲ್ಲಿ, ನೀವು ಈ ಇನ್ಶೂರೆನ್ಸ್ ಕಂಪನಿಯಿಂದ ಕಾಂಪ್ರೆಹೆನ್ಸಿವ್ ಟಾಟಾ ಟಿಗೋರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಬಹುದು ಮತ್ತು ನಿಮ್ಮ ಸ್ವಂತ ಕಾರ್ ಹಾನಿಯನ್ನು ಸರಿಪಡಿಸುವಾಗ ನಿಮ್ಮ ಹಣಕಾಸನ್ನು ಸುರಕ್ಷಿತಗೊಳಿಸಬಹುದು.

2. ಸುಲಭ ಕ್ಲೈಮ್ ಪ್ರಕ್ರಿಯೆ

ಟೆಕ್ನಾಲಜಿ-ಡ್ರೈವನ್ ಪ್ರಕ್ರಿಯೆಗಳಿಂದಾಗಿ ಡಿಜಿಟ್ ಕ್ಲೈಮ್ ಪ್ರಕ್ರಿಯೆಯು ತಡೆರಹಿತ ಮತ್ತು ತೊಂದರೆ-ಮುಕ್ತವಾಗಿದೆ. ಇದರರ್ಥ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನೀವು ಆನ್‌ಲೈನ್‌ನಲ್ಲಿ ನಿಮ್ಮ ಟಾಟಾ ಟಿಗೋರ್ ಇನ್ಶೂರೆನ್ಸ್ ಪ್ಲ್ಯಾನ್‌ನ ವಿರುದ್ಧ ಕ್ಲೈಮ್ ಮಾಡಬಹುದು. ಇದಲ್ಲದೆ, ನಿಮ್ಮ ಫೋನ್‌ನ ಸೆಲ್ಫ್-ಇನ್‌ಸ್ಪೆಕ್ಷನ್ ಫೀಚರ್‌ನ ಕಾರಣದಿಂದಾಗಿ ನಿಮ್ಮ ಕಾರಿನ ಹಾನಿಯನ್ನು ನೀವು ಶೂಟ್ ಮಾಡಬಹುದು ಮತ್ತು ಕ್ಲೈಮ್ ಮೊತ್ತವನ್ನು ಸ್ವೀಕರಿಸುವಾಗ, ಪ್ರಕ್ರಿಯೆ ಪೂರ್ಣಗೊಳ್ಳಲು ಕಡಿಮೆ ಸಮಯವನ್ನು ನಿರೀಕ್ಷಿಸಬಹುದು.

3. ನೆಟ್‌ವರ್ಕ್ ಗ್ಯಾರೇಜುಗಳ ಶ್ರೇಣಿ

ಭಾರತದಾದ್ಯಂತ ಹಲವಾರು ಡಿಜಿಟ್ ನೆಟ್‌ವರ್ಕ್ ಗ್ಯಾರೇಜ್‌ಗಳಿವೆ. ನಿಮ್ಮ ಟಾಟಾ ಟಿಗೋರ್ ರಿಪೇರಿಗಾಗಿ ನೀವು ಕ್ಯಾಶ್‌ಲೆಸ್ ಸೌಲಭ್ಯವನ್ನು ಪಡೆಯಬಹುದು. ಕ್ಯಾಶ್‌ಲೆಸ್ ರಿಪೇರಿ ವಿಧಾನದ ಅಡಿಯಲ್ಲಿ, ರಿಪೇರಿ ಸೆಂಟರ್‌ಗೆ ನಿಮ್ಮ ಪರವಾಗಿ ಇನ್ಶೂರೆನ್ಸ್ ಕಂಪನಿಯು ಪಾವತಿಸುವುದರಿಂದ, ರಿಪೇರಿ ಸರ್ವೀಸ್‌ಗಳನ್ನು ಪಡೆಯಲು ನೀವು ಏನನ್ನೂ ಪಾವತಿಸಬೇಕಾಗಿಲ್ಲ.

4. ಆ್ಯಡ್-ಆನ್ ಪ್ರಯೋಜನಗಳು

ಹಾನಿಗಳ ವಿರುದ್ಧ ಹೆಚ್ಚುವರಿ ರಕ್ಷಣೆಗಾಗಿ, ಡಿಜಿಟ್‌ನ ನಿಮ್ಮ ಟಾಟಾ ಟಿಗೋರ್ ಇನ್ಶೂರೆನ್ಸ್ ಪ್ಲ್ಯಾನ್ ಜೊತೆಗೆ ಕೆಲವು ಆ್ಯಡ್-ಆನ್ ಕವರ್‌ಗಳನ್ನು ನೀವು ಸೇರಿಸಿಕೊಳ್ಳಬಹುದು. ಇದು ಹೆಚ್ಚುವರಿ ಶುಲ್ಕಗಳ ವಿರುದ್ಧ ನಿಮಗೆ ರಕ್ಷಣೆ ನೀಡುತ್ತದೆ.

  • ಕೆಲವು ಆ್ಯಡ್-ಆನ್ ಪ್ರಯೋಜನಗಳು ಸೇರಿವೆ:
  • ಕನ್ಸ್ಯೂಮೆಬಲ್ ಕವರ್
  • ಝೀರೋ ಡೆಪ್ರಿಸಿಯೇಶನ್ ಕವರ್
  • ರಿಟರ್ನ್ ಟು ಇನ್‌ವಾಯ್ಸ್ ಕವರ್‌
  • ರೋಡ್‌ಸೈಡ್ ಅಸಿಸ್ಟೆನ್ಸ್
  • ಇಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್ ಕವರ್

ಹೀಗಾಗಿ, ನಿಮ್ಮ ಟಾಟಾ ಟಿಗೋರ್ ಇನ್ಶೂರೆನ್ಸ್ ವೆಚ್ಚವನ್ನು ನಾಮಿನಲ್ ಆಗಿ ಹೆಚ್ಚಿಸುವ ಮೂಲಕ, ನೀವು ಮೇಲಿನ ಯಾವುದೇ ಆ್ಯಡ್-ಆನ್ ಪಾಲಿಸಿಗಳನ್ನು ಸೇರಿಸಿಕೊಳ್ಳಬಹುದು.

5. ಸರಳ ಆನ್‌ಲೈನ್‌ ಖರೀದಿ

ಡಿಜಿಟ್‌ನಿಂದ ಟಾಟಾ ಟಿಗೋರ್ ಇನ್ಶೂರೆನ್ಸ್ ರಿನೀವಲ್ ಅನ್ನು ಆಯ್ಕೆ ಮಾಡುವ ಮೂಲಕ, ನಿಮ್ಮ ಸ್ಮಾರ್ಟ್‌ಫೋನ್‌ಗಳ ಮೂಲಕ ನೀವು ಆನ್‌ಲೈನ್‌ನಲ್ಲಿ ಪ್ಲ್ಯಾನ್‌ಗಳನ್ನು ಖರೀದಿಸಬಹುದು. ಈ ಪ್ರಕ್ರಿಯೆಯಲ್ಲಿ, ನೀವು ಡಾಕ್ಯುಮೆಂಟ್‌ಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬಹುದು ಮತ್ತು ಕೆಲವೇ ನಿಮಿಷಗಳಲ್ಲಿ ನಿಮ್ಮ ಖರೀದಿಯನ್ನು ಪೂರ್ಣಗೊಳಿಸಬಹುದು.    

6. ಬೋನಸ್‌ಗಳು ಮತ್ತು ಡಿಸ್ಕೌಂಟ್‌ಗಳು

ಡಿಜಿಟ್, ನಿಮ್ಮ ಟಾಟಾ ಟಿಗೋರ್ ಇನ್ಶೂರೆನ್ಸ್ ರಿನೀವಲ್ ಬೆಲೆಯಲ್ಲಿ ನಿಮಗೆ 50% ವರೆಗೆ ನೋ ಕ್ಲೈಮ್ ಬೋನಸ್‌ಗಳನ್ನು ನೀಡುತ್ತದೆ. ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ನಿಮ್ಮ ಪಾಲಿಸಿ ಅವಧಿಯೊಳಗೆ ನೀವು ಯಾವುದೇ ಕ್ಲೈಮ್‌ಗಳನ್ನು ಮಾಡದಿದ್ದರೆ ಮಾತ್ರ ನೀವು ಈ ಡಿಸ್ಕೌಂಟ್‌ಗಳನ್ನು ಪಡೆಯಬಹುದು ಮತ್ತು ನಿಮ್ಮ ಪಾಲಿಸಿ ಪ್ರೀಮಿಯಂ ಅನ್ನು ಕಡಿಮೆ ಮಾಡಬಹುದು.

7. ಐಡಿವಿ (IDV) ಕಸ್ಟಮೈಸೇಶನ್

ಡಿಜಿಟ್‌ನಂತಹ ಇನ್ಶೂರೆನ್ಸ್ ಕಂಪನಿಯು ನಿಮ್ಮ ಪ್ರಯೋಜನಗಳನ್ನು ಗರಿಷ್ಠಗೊಳಿಸಲು ನಿಮ್ಮ ಕಾರಿನ ಐಡಿವಿ ಅನ್ನು ಕಸ್ಟಮೈಸ್ ಮಾಡುವ ಆಯ್ಕೆಯನ್ನು ಸ್ವತಃ ನಿಮಗೇ ನೀಡುತ್ತದೆ.

ಟಾಟಾ ಟಿಗೋರ್ ಇನ್ಶೂರೆನ್ಸ್ ರಿನೀವಲ್‌ನ ಬೆಲೆಯು, ನಿಮ್ಮ ಕಾರಿನ 'ಇನ್ಸೂರೆನ್ಸ್‌ನ ಘೋಷಿತ ಮೌಲ್ಯ'ವನ್ನು (ಐಡಿವಿ) ಅವಲಂಬಿಸಿರುತ್ತದೆ. ಹೀಗಾಗಿ, ಗರಿಷ್ಠ ಪ್ರಯೋಜನಗಳಿಗಾಗಿ ನಿಮ್ಮ ಕಾರಿಗೆ ನೀವು ಸೂಕ್ತವಾದ ಐಡಿವಿ ಅನ್ನು ಆಯ್ಕೆ ಮಾಡಬೇಕು. ಡಿಜಿಟ್‌ನಂತಹ ಇನ್ಶೂರೆನ್ಸ್ ಕಂಪನಿಯು ಯಾವುದೇ ಹಸ್ತಕ್ಷೇಪ ಮಾಡದೆ, ಈ ಮೌಲ್ಯವನ್ನು ಕಸ್ಟಮೈಸ್ ಮಾಡುವ ಅವಕಾಶವನ್ನು ನಿಮಗೇ ಕೊಡುತ್ತಾರೆ

8. ಅನುಕೂಲಕರ ಕಸ್ಟಮರ್ ಸಪೋರ್ಟ್

ಯಾವುದೇ ಪ್ರಶ್ನೆಗಳು ಅಥವಾ ಸಂದೇಹಗಳಿದ್ದಲ್ಲಿ, ನೀವು ಡಿಜಿಟ್‌ನ ಕಸ್ಟಮರ್ ಸರ್ವೀಸ್ ಟೀಮ್ ಅನ್ನು ಯಾವುದೇ ಸಮಯದಲ್ಲಾದರೂ ಸಂಪರ್ಕಿಸಬಹುದು. ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ ಅವರು ಪ್ರಾಯೋಗಿಕವಾಗಿ 24x7 ಲಭ್ಯವಿರುತ್ತಾರೆ. ಆದ್ದರಿಂದ, ನಿಮ್ಮ ಪ್ರಶ್ನೆಗಳಿಗೆ ಶೀಘ್ರ ಪರಿಹಾರಗಳನ್ನು ನೀವು ನಿರೀಕ್ಷಿಸಬಹುದು. ಡಿಜಿಟ್‌ನ ಕ್ರಿಯಾಶೀಲ ಕಸ್ಟಮರ್ ಸಪೋರ್ಟ್‌ಗೆ ಧನ್ಯವಾದಗಳು

ಇದಲ್ಲದೆ, ಡಿಜಿಟ್‌ನ ಪ್ರಯೋಜನಗಳ ಪಟ್ಟಿ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ನಿಮ್ಮ ಟಾಟಾ ಟಿಗೋರ್ ಇನ್ಶೂರೆನ್ಸ್ ಪ್ಲ್ಯಾನ್‌ನ ವಿರುದ್ಧ ನೀವು ಕಡಿಮೆ ಕ್ಲೈಮ್‌ಗಳನ್ನು ಮಾಡಲು ಒಲವು ತೋರಿದರೆ ಮತ್ತು ಕಡಿಮೆ ಪ್ರೀಮಿಯಂನಲ್ಲಿ ಅದನ್ನು ಖರೀದಿಸಲು ಬಯಸಿದರೆ, ಅದರ ಹೆಚ್ಚಿನ ಡಿಡಕ್ಟಿಬಲ್ ಪ್ಲ್ಯಾನ್‌ ನಿಮಗೆ ಸೂಕ್ತವಾಗಬಹುದು.

ಟಾಟಾ ಟಿಗೋರ್‌ಗಾಗಿ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯವಾಗಿದೆ?

ಈ ಸಬ್‌ಕಾಂಪ್ಯಾಕ್ಟ್ ಸೆಡಾನ್‌ನಲ್ಲಿ ಪ್ಯಾಕ್ ಮಾಡಲಾದ ಎಲ್ಲ ಅಂಶಗಳೊಂದಿಗೆ, ನೀವದನ್ನು ರಕ್ಷಿಸಲು ಬಯಸುವುದಿಲ್ಲವೇ? ನಿಮ್ಮ ಉತ್ತರ ಹೌದು ಎಂದು ನಮಗೆ ಖಚಿತವಾಗಿ ತಿಳಿದಿದೆ! ಅನಿರೀಕ್ಷಿತ ಘಟನೆಗಳಿಂದ ನಿಮ್ಮ ಕಾರ್‌ಗಾಗುವ ಹಾನಿ, ಅಪಘಾತ, ಕಳ್ಳತನ ಅಥವಾ ಪ್ಯಾಸೆಂಜರ್‌ಗಳಿಗೆ, ಡ್ರೈವರ್‌ಗಳಿಗೆ ಉಂಟಾಗುವ ಹಾನಿಗಳ ವೆಚ್ಚಗಳನ್ನು ಇದು ಕವರ್ ಮಾಡುವುದರಿಂದ, ಕಾರ್ ಇನ್ಶೂರೆನ್ಸ್ ನಿಮಗೆ ಅತ್ಯಗತ್ಯವಾಗಿರುತ್ತದೆ.

  • ಫೈನಾನ್ಸಿಯಲ್ ಲಯಬಿಲಿಟಿಗಳಿಂದ ರಕ್ಷಣೆ: ಕಾರನ್ನು ಮೆಂಟೇನ್ ಮಾಡುವುದು ದುಬಾರಿ ಎಂದು ನಮಗೆಲ್ಲರಿಗೂ ತಿಳಿದಿದೆ. ಹಾಗಿದ್ದಾಗ, ನೀವು ಅಪಘಾತ, ಗಲಭೆ ಅಥವಾ ವಿಧ್ವಂಸಕ ಕೃತ್ಯದಂತಹ ಕೆಲವು ದುರದೃಷ್ಟಕರ ಸಂದರ್ಭಗಳನ್ನು ಎದುರಿಸುತ್ತಿದ್ದರೆ, ನಿಮ್ಮ ಕಾರಿಗೆ ಹಾನಿಯಾಗುವ ಸಾಧ್ಯತೆಗಳಿಗೆ. ನೀವು ಹೆಚ್ಚು ಜನದಟ್ಟಣೆಯ ನಗರ ಪ್ರದೇಶದಲ್ಲಿ ಕಾರನ್ನು ಹೊಂದಿದ್ದರೆ, ಬಂಪರ್ ಟು ಬಂಪರ್ ಟ್ರಾಫಿಕ್ ಕಾರಣದಿಂದಾಗಿ ಕಾರಿನ ಮೇಲೆ ಗೀಚುಗಳು ಮತ್ತು ಡೆಂಟ್ ಆಗುವ ಸಂಭವನೀಯತೆ ಹೆಚ್ಚಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ, ನಿಮ್ಮ ಕಾರನ್ನು ರಿಸ್ಟೋರ್ ಮಾಡಿ ನಿಮ್ಮ ಹಣವನ್ನು ಉಳಿಸಲು, ಇನ್ಶೂರೆನ್ಸ್ ನಿಮಗೆ ಸಹಾಯ ಮಾಡಬಹುದು.
  • ಕಾನೂನುಬದ್ಧವಾದ ಕಂಪ್ಲೈಂಟ್: ಸರಿಯಾದ ಇನ್ಶೂರೆನ್ಸ್ ಇಲ್ಲದೆ ನಿಮ್ಮ ಟಾಟಾ ಟಿಗೋರ್ ಅನ್ನು ಡ್ರೈವ್ ಮಾಡುವುದು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು. ಕಾರ್ ಇನ್ಶೂರೆನ್ಸ್ ಇಲ್ಲದೇ ಡ್ರೈವ್ ಮಾಡುವುದು ಕಾನೂನುಬಾಹಿರವಾಗಿದೆ ಮತ್ತು ಭಾರೀ ದಂಡವನ್ನು (2000-4000 ರೂಪಾಯಿಗಳು) ತೆರಬೇಕಾಗಬಹುದು. ಮತ್ತು ಸೆಪ್ಟೆಂಬರ್ 2019 ರಲ್ಲಿ ಮೋಟಾರ್ ವೆಹಿಕಲ್ ಆ್ಯಕ್ಟ್‌ನ ಹೊಸ ತಿದ್ದುಪಡಿಯ ಪ್ರಕಾರ 3 ತಿಂಗಳ ಜೈಲು ಶಿಕ್ಷೆಗೂ ಕಾರಣವಾಗಬಹುದು.
  • ಥರ್ಡ್-ಪಾರ್ಟಿ ಲಯಬಿಲಿಟಿಯನ್ನು ಕವರ್ ಮಾಡುತ್ತದೆ : ಅಪಘಾತ ಅಥವಾ ಅದರಂತಹ ದುರದೃಷ್ಟಕರ ಘಟನೆಯಲ್ಲಿ ಬೇರೊಬ್ಬರ ಕಾರ್ ಅಥವಾ ಪ್ರಾಪರ್ಟಿಯ ಹಾನಿ/ಗಾಯಕ್ಕೆ ನೀವು ಜವಾಬ್ದಾರರಾಗಿದ್ದರೆ, ಈ ರೀತಿಯ ಇನ್ಶೂರೆನ್ಸ್ ನಿಮಗೆ ರಕ್ಷಣೆಯ ಕವರೇಜ್ ಅನ್ನು ನೀಡುತ್ತದೆ. ಅಂತಹ ವೆಚ್ಚಗಳು ಹೆಚ್ಚಾಗಿ ಹಠಾತ್ ಆಗಿ ಸಂಭವಿಸುತ್ತವೆ ಮತ್ತು ಅನಿರೀಕ್ಷಿತವಾಗಿರುತ್ತವೆ. ಹಾಗಾಗಿ ಅಂತಹ ಸಮಯದಲ್ಲಿ, ಪರಿಸ್ಥಿತಿಯನ್ನು ಆರ್ಥಿಕವಾಗಿ ನಿಭಾಯಿಸಲು ನೀವು ಸಿದ್ಧರಿಲ್ಲದಿರಬಹುದು. ಇಂತಹ ಸಮಯದಲ್ಲಿಯೇ ಈ ಇನ್ಸೂರೆನ್ಸ್ ಉತ್ತಮವಾಗಿ ಕೆಲಸಕ್ಕೆ ಬರುತ್ತದೆ ಹಾಗೂ ನಿಮ್ಮನ್ನು ಮತ್ತು ನಿಮ್ಮ ಜೇಬನ್ನು ಉಳಿಸುತ್ತದೆ.
  • ವಿಸ್ತೃತ ಕವರೇಜಿನೊಂದಿಗೆ ಹಾಂಪ್ರೆಹೆನ್ಸಿವ್ ಕವರ್: ಇದನ್ನು ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಮಾರ್ಪಡಿಸಬಹುದು; ನಿಮ್ಮ ಟಿಗೋರ್‌ಗೆ ಹೆಚ್ಚುವರಿ ಇನ್ಶೂರೆನ್ಸ್ ಕವರ್ ಆಗಿ ಅಂತಹ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವುದು ಸಹ ಸೂಕ್ತವೆಂದು ಪರಿಗಣಿಸಲಾಗುತ್ತದೆ. ಹಾಂಪ್ರೆಹೆನ್ಸಿವ್ ಕವರ್, ಹೆಸರೇ ಸೂಚಿಸುವಂತೆ ಇದು ಬೆಂಕಿ, ಕಳ್ಳತನ, ನೈಸರ್ಗಿಕ/ಮಾನವ ನಿರ್ಮಿತ ವಿಪತ್ತುಗಳು, ವಿಧ್ವಂಸಕತೆ, ಪ್ರಕೃತಿ/ಹವಾಮಾನ ಇತ್ಯಾದಿಗಳಂತಹ ನಿಮ್ಮ ನಿಯಂತ್ರಣಕ್ಕೆ ಮೀರಿದ ಅಂಶಗಳಿಂದ ಉಂಟಾಗುವ ಎಲ್ಲಾ ಹಾನಿಗಳನ್ನು ವಿಶಾಲವಾಗಿ ಕವರ್ ಮಾಡುತ್ತದೆ. ಲಭ್ಯವಿರುವ ಅನೇಕ ಆ್ಯಡ್-ಆನ್‌ಗಳೊಂದಿಗೆ ಇದನ್ನು ತೆಗೆದುಕೊಳ್ಳಿ ಮತ್ತು 100% ಕವರೇಜನ್ನು ಆನಂದಿಸಿ. ಈ ರೀತಿಯ ಕವರೇಜ್ ನಿಜವಾಗಿಯೂ ಅಗತ್ಯವಿರುವ ನಿಮ್ಮ ಸ್ನೇಹಿತನಂತೆ.

ಟಾಟಾ ಟಿಗೋರ್ ಬಗ್ಗೆ ಇನ್ನಷ್ಟು ತಿಳಿಯಿರಿ

ಭಾರತದಲ್ಲಿ ಟಾಟಾ ಮೋಟಾರ್ಸ್‌ನಿಂದ ಮಾರ್ಚ್ 2017 ರಲ್ಲಿ ಬಿಡುಗಡೆಯಾದ ಟಿಗೋರ್, ಒಂದು ಸಬ್‌ಕಾಂಪ್ಯಾಕ್ಟ್ ಸೆಡಾನ್ ಆಗಿದೆ. ಸದ್ಯ ಟಾಟಾ ಮೋಟಾರ್ಸ್ ಇದನ್ನು 'ಸೆಡಾನ್ ಫಾರ್ ದಿ ಸ್ಟಾರ್ಸ್' ಎಂದು ಕರೆಯುತ್ತಿದೆ. ಅತ್ಯದ್ಭುತ ಲುಕ್ ಹೊಂದಿರುವ, ಪರ್ಫಾಮೆನ್ಸ್‌ನಲ್ಲಿ ಅದ್ಭುತ ಮತ್ತು ಸಮಕಾಲೀನವಾಗಿರುವ, ಈ ಕಾರ್ ಖಂಡಿತವಾಗಿಯೂ ಸ್ಟಾರ್‌ಗಳಿಗಾಗಿ ಇದೆ. ಟಿಯಾಗೊಗೆ ಹೋಲಿಸಿದರೆ, ಟಾಟಾ ಟಿಗೋರ್, ಹ್ಯಾಚ್‌ಬ್ಯಾಕ್‌ನೊಂದಿಗೆ ಅದರ ಅಂಡರ್‌ಪಿನ್ನಿಂಗ್ ಮತ್ತು ಡಿಸೈನ್ ಅನ್ನು ಹಂಚಿಕೊಳ್ಳುತ್ತದೆ ಮತ್ತು ಪೆಟ್ರೋಲ್ ಇಂಜಿನ್‌ಗೆ ₹5.75 ಲಕ್ಷ ಮತ್ತು ಡೀಸೆಲ್ ಇಂಜಿನ್‌ಗೆ ₹6.22 ಲಕ್ಷಗಳು. ಟಾಟಾ ಮೋಟಾರ್ಸ್ ಈ ವರ್ಷ ಖಾಸಗಿ ಖರೀದಿದಾರರಿಗೆ ಟಾಟಾ ಟಿಗೋರ್ ಇ.ವಿ (EV) ಯ ಹೆಚ್ಚು ಪವರ್‌ಫುಲ್ ವರ್ಷನ್ ಅನ್ನು ಪರಿಚಯಿಸಲಿದೆ.

ನೀವು ಟಾಟಾ ಟಿಗೋರ್ ಅನ್ನು ಏಕೆ ಖರೀದಿಸಬೇಕು?

ಟಿಗೋರ್, ಸ್ಟೇಟ್‌ಮೆಂಟ್ ಅನ್ನು ನೀಡುವುದಕ್ಕಾಗಿ, ಟಾಟಾದ ಈ ಸೊಗಸಾದ ಕಾಂಪ್ಯಾಕ್ಟ್ ಸೆಡಾನ್ ಹೈವೇ, ಬೆಟ್ಟಗಳು, ನಗರ ಮತ್ತು ಸ್ವಲ್ಪ ಮಟ್ಟಿಗೆ ಆಫ್-ರೋಡಿಂಗ್‌ನಂತಹ ಎಲ್ಲಾ ರೀತಿಯ ರಸ್ತೆಗಳಿಗೆ ಸೂಕ್ತವಾಗಿದೆ. ಕಾರಿನಲ್ಲಿ 'ಡ್ರೈವಿಂಗ್‌ನ ಸಂತೋಷ'ವನ್ನು ಹುಡುಕುತ್ತಿರುವ ಯುವ ಖರೀದಿದಾರರಿಗೆ ಟಿಗೋರ್ ಸರಿಯಾದ ಆಯ್ಕೆಯಾಗಿದೆ.

ಈ ಕಾರ್ ಸ್ಲೀಕ್, ಕ್ರೋಮ್-ಲೇನ್ಡ್ ಡೋರ್ ಹ್ಯಾಂಡಲ್‌ಗಳು, ಸ್ಟೈಲೈಸ್ಡ್ ಮತ್ತು ಗಮನ ಸೆಳೆಯುವ ಎಲ್ಇಡಿ ಟೈಲ್ ಲ್ಯಾಂಪ್‌ಗಳು, ಸಿಗ್ನೇಚರ್ ಲುಕ್‌ಗಾಗಿ ಸ್ಟೈಲಿಶ್ ಆಗಿರುವ ಇಂಟಿಗ್ರೇಟೆಡ್ ಹೈ-ಮೌಂಟೆಡ್ ಎಲ್‌ಇಡಿ ಸ್ಟಾಪ್ ಲ್ಯಾಂಪ್ ಮತ್ತು ಶಾರ್ಕ್-ಫಿನ್ ಆಂಟೆನಾದಂತಹ ಫೀಚರ್‌ಗಳೊಂದಿಗೆ ಶಕ್ತಿಶಾಲಿಯಾಗಿದೆ. ಎಕ್ಸ್‌ಟೀರಿಯರ್ ಅನ್ನು ಸೊಗಸಾಗಿ ಡಿಸೈನ್ ಮಾಡಲಾಗಿದ್ದು, ಇಂಟೀರಿಯರ್ ಸಹ ಹಿಂದೆ ಉಳಿದಿಲ್ಲ. ಟೈಟಾನಿಯಂ ಬಣ್ಣದ ಫಾಕ್ಸ್ ಲೆದರ್ ಸೀಟ್‌ಗಳು, ಪ್ರೀಮಿಯಂ ಬ್ಲ್ಯಾಕ್ ಮತ್ತು ಗ್ರೇ ಥೀಮ್, ಸಾಕಷ್ಟು ಯುಟಿಲಿಟಿ ಸ್ಪೇಸ್ ಮುಂತಾದವುಗಳೊಂದಿಗೆ ಟಿಗೋರ್ ಕಾರ್ ಸೊಗಸಾಗಿ ಕಾಣುತ್ತದೆ.

ಟಾಟಾ ಟಿಗೋರ್ ಈಜಿಪ್ಟಿಯನ್ ಬ್ಲೂ, ರೋಮನ್ ಸಿಲ್ವರ್, ಬೆರ್ರಿ ರೆಡ್, ಟೈಟಾನಿಯಂ ಗ್ರೇ ಇತರ ಬಣ್ಣಗಳಲ್ಲಿ ಬರುತ್ತದೆ ಮತ್ತು 6 ವೇರಿಯಂಟ್‌ಗಳಲ್ಲಿ, XE, XM, XMA, XZ, XZ+ ಮತ್ತು XZA+ ಬರುತ್ತದೆ. ಇವುಗಳಲ್ಲಿ 4 ಮ್ಯಾನುವಲ್ ಮತ್ತು 2 ಆಟೋಮ್ಯಾಟಿಕ್ ಆಗಿವೆ.

ಟಿಗೋರ್‌ನ 2018 ರ ಮಾಡಿಫೈಡ್ ವರ್ಷನ್, ಫ್ರಂಟ್ ಹೆಡ್‌ಲೈಟ್‌ಗಳು ಮತ್ತು ಗ್ರಿಲ್ ಹಾಗೂ ಹೊಸ ಕ್ರೋಮ್, ಸೀಟ್‌ಗಳಿಗೆ ಹೊಸ ಬಣ್ಣಗಳು ಮತ್ತು ಅಲಾಯ್ ವೀಲ್‌ಗಳಲ್ಲಿ ಬದಲಾವಣೆಗಳನ್ನು ಹೊಂದಿದೆ. ಆಂತರಿಕವಾಗಿ, ಇದು ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಹೊಂದಾಣಿಕೆಯೊಂದಿಗೆ ಹೊಸ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಸಹ ಸಜ್ಜುಗೊಳಿಸುತ್ತದೆ.

ಟಾಟಾ ಟಿಗೋರ್ ವೇರಿಯಂಟ್‌ಗಳ ಬೆಲೆ ಪಟ್ಟಿ

ಟಾಟಾ ಟಿಗೋರ್ ವೇರಿಯಂಟ್‌ಗಳು ಬೆಲೆ (ಮುಂಬೈನಲ್ಲಿ, ಉಳಿದ ನಗರಗಳಲ್ಲಿ ಬೆಲೆ ಬದಲಾಗಬಹುದು)
XE ₹6.70 ಲಕ್ಷ
XM ₹7.39 ಲಕ್ಷ
XZ ₹7.86 ಲಕ್ಷ
XMA AMT ₹8.02 ಲಕ್ಷ
XZ ಪ್ಲಸ್ ₹8.56 ಲಕ್ಷ
XZA ಪ್ಲಸ್ AMT ₹9.19 ಲಕ್ಷ

ಪದೇ ಪದೇ ಕೇಳಲಾದ ಪ್ರಶ್ನೆಗಳು

ಟಾಟಾ ಟಿಗೋರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಪಡೆಯುವುದು ಕಡ್ಡಾಯವೇ?

ಮೋಟಾರ್ ವೆಹಿಕಲ್ಸ್ ಆ್ಯಕ್ಟ್, 1988 ರ ಪ್ರಕಾರ, ಭಾರೀ ಟ್ರಾಫಿಕ್ ದಂಡವನ್ನು ತಪ್ಪಿಸಲು ಪ್ರತಿಯೊಬ್ಬ ಡ್ರೈವರ್, ಕನಿಷ್ಠ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು.

ಟಾಟಾ ಟಿಗೋರ್‌ನ ಟೈರ್ ಪ್ರೊಟೆಕ್ಟ್ ಕವರ್‌ನ ಅಡಿಯಲ್ಲಿ ಯಾವ ರೀತಿಯ ಟೈರ್ ಡ್ಯಾಮೇಜುಗಳು ಕವರ್ ಆಗುತ್ತವೆ?

ಟೈರ್ ಪ್ರೊಟೆಕ್ಟ್ ಕವರ್‌ನ ಅಡಿಯಲ್ಲಿ ಟೈರ್ ಕಡಿತಗಳು, ಉಬ್ಬುಗಳು ಅಥವಾ ಸ್ಫೋಟಗಳು ಕವರ್ ಆಗುತ್ತವೆ. ಹೆಚ್ಚುವರಿ ವೆಚ್ಚಗಳ ವಿರುದ್ಧ ನಿಮ್ಮ ಟಾಟಾ ಟಿಗೋರ್ ಇನ್ಶೂರೆನ್ಸ್ ಪ್ಲ್ಯಾನ್‌ನಲ್ಲಿ ನೀವು ಈ ಪ್ರಯೋಜನವನ್ನು ಪಡೆಯಬಹುದು.