ಟಾಟಾ ಟಿಯಾಗೊ ಕಾರ್ ಇನ್ಶೂರೆನ್ಸ್
Get Instant Policy in Minutes*

Third-party premium has changed from 1st June. Renew now

ಟಾಟಾದ ಹ್ಯಾಚ್‌ಬ್ಯಾಕ್‌ ಕಾರುಗಳು ದಶಕಗಳ ಕಾಲ ಬಾರತೀಯ ಗ್ರಾಹಕರ ಸಾರ್ವಕಾಲಿಕ ಫೇವರಿಟ್ ಆಗಿದೆ ಮತ್ತು ಟಿಯಾಗೊ ಮಾಡೆಲ್ ಆ ಫ್ಯಾನ್‌ಫೇರ್‌ಗೆ ಖಂಡಿತವಾಗಿಯೂ ಹೆಚ್ಚುವರಿಯಾಗಿ ಸೇರಿದೆ. ಬಿಡುಗಡೆಯಾಗಿದ್ದು 2016ರಲ್ಲಿ, ಬಿಎಸ್-VI ಅನುಸರಣೆಯ ವೇರಿಯಂಟ್ ಅನಾವರಣಗೊಂಡಿದ್ದು 2020ರಲ್ಲಿ, ಟಾಟಾ ಟಿಯಾಗೊ 5 ಸೀಟಿಂಗ್ ಕೆಪಾಸಿಟಿಯೊಂದಿಗೆ ಬರುತ್ತದೆ, ಭಾರತೀಯ ಅರ್ಬನ್ ಮಂದಿಗೆ ಹೊಂದಿಕೊಳ್ಳುವಂತೆ ರೂಪುಗೊಂಡಿದೆ.

2018ರಲ್ಲಿ ಅತಿ ಹೆಚ್ಚು ಮಾರಾಟವಾಗುವ ವೆಹಿಕಲ್‌ಗಳ ಟಾಪ್‌ ಟೆನ್‌ನಲ್ಲಿ ಟಿಯಾಗೊ ಸ್ಥಾನ ಪಡೆಯುವುದರೊಂದಿಗೆ, ಭಾರತದಲ್ಲಿ ಟಾಟಾ ಟಿಯಾಗೊ ಇನ್ಶೂರೆನ್ಸ್ ಪಾಲಿಸಿಗಳ ಖರೀದಿಯಲ್ಲಿ ಹೆಚ್ಚಳವೂ ಪ್ರತಿಬಿಂಬಿತಗೊಂಡಿದೆ.

1988ರ ಮೋಟಾರ್‌ ವೆಹಿಕಲ್‌ಗಳ ಆ್ಯಕ್ಟ್ ಪ್ರಕಾರ ಭಾರತದ ರಸ್ತೆಗಳಲ್ಲಿ ಕಾನೂನುಬದ್ಧವಾಗಿ ಸಂಚರಿಸಲು ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿ ಹೊಂದಿರುವುದು ಕಡ್ಡಾಯ ಎಂಬ ವಿಚಾರ ನಿಮಗೆ ಗೊತ್ತಿರಬಹುದು. ಒಂದು ವೇಳೆ ನೀವು ವ್ಯಾಲಿಡ್ ಆದ ಥರ್ಡ್-ಪಾರ್ಟಿ ಲಯಬಿಲಿಟಿ ಪಾಲಿಸಿ ಹೊಂದಿಲ್ಲದೆ ಟಿಯಾಗೊ ಡ್ರೈವ್ ಮಾಡುವಾಗ ಸಿಕ್ಕಿ ಬಿದ್ದರೆ, ನಿಮಗೆ ರೂ.2000 ಟ್ರಾಫಿಕ್ ಫೈನ್ ಮೂಲಕ ದಂಡ ವಿಧಿಸಬಹುದು ಅಥವಾ ಪುನರಾವರ್ತಿತ ಅಪರಾಧಗಳಿಗೆ ರೂ.4000 ದಂಡ ಹೇರಬಹುದು.

ಕಾನೂನುಬದ್ಧವಾಗಿ ಕಡ್ಡಾಯ ಆಗಿರುವ ಹೊರತಾಗಿ, ನಿಮ್ಮ ಟಿಯಾಗೊ ಇನ್ನೊಬ್ಬ ವ್ಯಕ್ತಿ, ವೆಹಿಕಲ್ ಅಥವಾ ಅವರ ಪ್ರಾಪರ್ಟಿಯೊಂದಿಗೆ ಅಪಘಾತ ಘರ್ಷಣೆ ಉಂಟಾದ ಸಂದರ್ಭದಲ್ಲಿ ಉಂಟಾಗುವ ಆರ್ಥಿ ಲಯಬಿಲಿಟಿಗಳನ್ನು ಥರ್ಡ್-ಪಾರ್ಟಿ ಟಾಟಾ ಟಿಯಾಗೊ ಇನ್ಶೂರೆನ್ಸ್ ಖರೀದಿ ಅಥವಾ ರಿನೀವಲ್ ಮಾಡುವುದರಿಂದ ಕವರ್ ಆಗುತ್ತದೆ. ಮತ್ತೊಂದೆಡೆ, ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿ ನಿಮ್ಮ ಟಿಯಾಗೊದ ಅಪಘಾತದ ಡ್ಯಾಮೇಜ್‌ಗಳಿಗೆ ಆರ್ಥಿಕ ಅಸಿಸ್ಟೆನ್ಸ್ ಒದಗಿಸುತ್ತದೆ.

ಆದರೆ, ಕೇವಲ ಇನ್ಶೂರೆನ್ಸ್ ಪಾಲಿಸಿ ಖರೀದಿಸಿದರೆ ಸಾಕೇ?

ಸರಿ, ನಿಮ್ಮ ಪ್ರೀತಿಯ ಕಾರಿಗೆ ಅತ್ಯುತ್ತಮ ರಕ್ಷಣೆ ಪಡೆಯಲು ನೀವು ಕಾರ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಸಿಗುವ ಪ್ರಯೋಜನಗಳನ್ನು ಗಮನಿಸಲೇಬೇಕು. ಈ ನಿಟ್ಟಿನಲ್ಲಿ, ಡಿಜಿಟ್‌ನ ಕಾರ್‌ ಇನ್ಶೂರೆನ್ಸ್ ಪಾಲಿಸಿ ಅತ್ಯುತ್ತಮ ಆಯ್ಕೆ ಆಗಬಹುದು!

ಟಾಟಾ ಟಿಯಾಗೊ ರಿನೀವಲ್ ಬೆಲೆ

ರಿಜಿಸ್ಟ್ರೇಷನ್ ದಿನಾಂಕ ಪ್ರೀಮಿಯಂ (ಕಾಂಪ್ರೆಹೆನ್ಸಿವ್ ಪಾಲಿಸಿಗೆ ಮಾತ್ರ)
ಜುಲೈ-2018 5,306
ಜುಲೈ-2017 5,008
ಜುಲೈ-2016 4,710

**ಡಿಸ್‌ಕ್ಲೈಮರ್ - ಟಾಟಾ ಟಿಯಾಗೊ ಮಾಡೆಲ್ ಎಚ್‌ಟಿಪಿ ಪೆಟ್ರೋಲ್‌ಗೆ ಮಾಡಿದ ಪ್ರೀಮಿಯಂ ಕ್ಯಾಲ್ಕುಲೇಷನ್ 1199. ಜಿಎಸ್‌ಟಿ ಹೊರತುಪಡಿಸಲಾಗಿದೆ.

ನಗರ- ಬೆಂಗಳೂರು, ಪಾಲಿಸಿ ಎಕ್ಸ್‌ಪೈರಿ ದಿನಾಂಕ - 31ನೇ ಜುಲೈ, ಎನ್‌ಸಿಬಿ- 50%, ಆ್ಯಡ್-ಆನ್‌ಗಳು ಇಲ್ಲ. ಜುಲೈ-2020ರಲ್ಲಿ ನಡೆಸಿದ ಪ್ರೀಮಿಯಂ ಕ್ಯಾಲ್ಕುಲೇಷನ್. ದಯವಿಟ್ಟು ಮೇಲೆ ನಿಮ್ಮ ವೆಹಿಕಲ್‌ನ ಮಾಹಿತಿಗಳನ್ನು ತುಂಬುವುದರ ಮೂಲಕ ಅಂತಿಮ ಪ್ರೀಮಿಯಂ ಚೆಕ್ ಮಾಡಿ.

ಟಾಟಾ ಟಿಯಾಗೊ ಕಾರ್ ಇನ್ಶೂರೆನ್ಸ್‌ನಲ್ಲಿ ಏನೆಲ್ಲಾ ಕವರ್ ಆಗುತ್ತದೆ

ಡಿಜಿಟ್‌ನ ಟಾಟಾ ಟಿಯಾಗೊ ಕಾರ್ ಇನ್ಶೂರೆನ್ಸ್ ಅನ್ನು ನೀವು ಯಾಕೆ ಖರೀದಿಸಬೇಕು?

ಟಾಟಾ ಟಿಯಾಗೊಗೆ ಕಾರ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು

ಥರ್ಡ್-ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಥರ್ಡ್-ಪಾರ್ಟಿ ವೆಹಿಕಲ್‌ಗೆ ಉಂಟಾದ ಡ್ಯಾಮೇಜ್‌ಗಳು

×

ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್‌ಗಳು

×

ಪರ್ಸನಲ್ ಆ್ಯಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ

×

ನಿಮ್ಮ ಕಾರಿನ ಕಳ್ಳತನ

×

ಡೋರ್‌ಸ್ಟೆಪ್‌ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನೀವು ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!

ಹಂತ 1

1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್‌ಗಳನ್ನೂ ತುಂಬಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೇ ನಿಮ್ಮ ವೆಹಿಕಲ್‌ನ ಡ್ಯಾಮೇಜ್‌ಗಳನ್ನು ತಿಳಿಸಿರಿ.

ಹಂತ 3

ನಮ್ಮ ನೆಟ್‌ವರ್ಕ್‌ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ಅಥವಾ ರಿಇಂಬರ್ಸ್‌ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.

ಎಷ್ಟು ವೇಗವಾಗಿ ಡಿಜಿಟಲ್ ಇನ್ಶೂರೆನ್ಸ್ ಕ್ಲೈಮ್‌ಗಳು ಸೆಟಲ್ ಆಗುತ್ತವೆ? ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬಹುದು. ಒಳ್ಳೆಯದು , ನೀವೀಗ ಅದನ್ನೇ ಮಾಡುತ್ತಿದ್ದೀರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಓದಿ

ಡಿಜಿಟ್‌ನ ಟಾಟಾ ಟಿಯಾಗೊ ಕಾರ್ ಇನ್ಶೂರೆನ್ಸ್‌ ಪಾಲಿಸಿಯನ್ನು ಯಾಕೆ ಆರಿಸಿಕೊಳ್ಳಬೇಕು?

ಕಾರ್ ಇನ್ಶೂರೆನ್ಸ್ ಪಾಲಿಸಿ ಕುರಿತ ನಿಮ್ಮ ನಿರ್ಧಾರವು ಕಾನೂನು ಕಾರಣಕ್ಕೆ ಮಾತ್ರ ಖರೀದಿಸುವ ಅಥವಾ ರಿನೀವ್ ಮಾಡುವುದಕ್ಕಿಂತ ಹೆಚ್ಚಿನ ಉದ್ದೇಶವನ್ನು ಹೊಂದಿರಬೇಕು.

ನಿಮ್ಮ ಟಾಟಾ ಟಿಯಾಗೊಗೆ ನೀವು ಯಾರಿಂದ ಇನ್ಶೂರೆನ್ಸ್ ಪಾಲಿಸಿ ಪಡೆಯಲು ಬಯಸುತ್ತೀರೋ ಆ ಇನ್ಶೂರರ್‌ನ ವಿಶ್ವಾಸಾರ್ಹತೆಯನ್ನು ಪರಿಗಣಿಸಲು ನೀವು ಬಯಸಬಹುದು.

ಹಾಗೆ ಮಾಡುವ ಮೂಲಕ, ನೀವು ಥರ್ಡ್-ಪಾರ್ಟಿ ಲಯಬಿಲಿಟಿ ಪಾಲಿಸಿ ಅಥವಾ ಟಾಟಾ ಟಿಯಾಗೊ ಬಂಪರ್ ಟು ಬಂಪರ್ ಇನ್ಶೂರೆನ್ಸ್ ಪಾಲಿಸಿ ಯಾವುದಕ್ಕೆ ಹೋದರೂ, ಅದರಿಂದ ಪಡೆಯಬಹುದಾದ ಪ್ರಯೋಜನಗಳನ್ನು ಹೆಚ್ಚಿಸಬಹುದು ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅರ್ಥಪೂರ್ಣವಾಗಿದೆ.

ಡಿಜಿಟ್‌ನಂಥ ಪ್ರತಿಷ್ಟಿತ ಇನ್ಸೂರೆನ್ಸ್ ಕಂಪನಿಯೊಂದಿಗೆ, ನಿಮ್ಮ ಟಿಯಾಗೊಗೆ ಇನ್ಶೂರೆನ್ಸ್ ಪಾಲಿಸಿ ಖರೀದಿಸುವುದರ ಅಥವಾ ರಿನೀವಲ್ ಮಾಡುವುದರ ಮೂಲಕ ನೀವು ಅನುಕೂಲಕರ ಸ್ಥಾನವನ್ನು ಆರಿಸಿಕೊಳ್ಳುತ್ತಿದ್ದೀರಿ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬಹುದು.

ಇಲ್ಲಿ ಟಾಟಾ ಟಿಯಾಗೊ ಇನ್ಶೂರೆನ್ಸ್ ಪಾಲಿಸಿಯ ಕೆಲವು ವೈಶಿಷ್ಟ್ಯಗಳಿವೆ, ಅವುಗಳು ಅದರ ಪ್ರತಿಸ್ಪರ್ಧಿಗಳ ನಡುವೆ ಸ್ಟಾಂಡ್ ಔಟ್ ಆಗಿ ನಿಲ್ಲುವಂತೆ ಮಾಡಿವೆ:

  • ಔಟ್-ಆ್ಯಂಡ್-ಔಟ್ ಡಿಜಿಟಲ್ ಪ್ರೊಸೆಸ್ - ಈ ಡಿಜಿಟಲ್ ಯುಗದಲ್ಲಿ ಕ್ಲೈಮ್‌ಗಳನ್ನು ರೈಸ್ ಮಾಡಲು ರೆಡ್‌ ಟೇಪ್‌ಗಳ‍ು ಅಡ್ಡಿಯಾಗಬಾರದು. ಆದ್ದರಿಂದ, ಡಿಜಿಟ್‌ನೊಂದಿಗೆ, ಸುಲಭವಾಗಿ ಸೆಟಲ್ ಮಾಡುವ ಸಲುವಾಗಿ ಕ್ಲೈಮ್ ರೈಸ್ ಮಾಡಲು ಸಂಪೂರ್ಣ ಡಿಜಿಟೈಸ್‌ಡ್ ಮತ್ತು ಆನ್‌ಲೈನ್‌ ಪ್ರೊಸೆಸ್ ಅನ್ನು ನೀವು ಎಂಜಾಯ್ ಮಾಡಬಹುದು. ಒಂದು ವೇಳೆ ನಿಮ್ಮ ಟಿಯಾಗೊ ಜೊತೆ ಅಫಘಾತದಲ್ಲಿ ಒಳಗೊಂಡರೆ ಮತ್ತು ಕಾರು ಗಣನೀಯ ಪ್ರಮಾಣದ ಡ್ಯಾಮಜ್‌ಗಳಿಗೆ ಒಳಗಾದರೆ. ನೀವು ಡಿಜಿಟ್‌ನಲ್ಲಿ ಕಾಂಪ್ರೆಹೆನ್ಸಿವ್ ಟಿಯಾಗೊ ಇನ್ಶೂರೆನ್ಸ್ ಪಾಲಿಸಿ ಪಡೆದಿದ್ದರೆ, ನಿಮ್ಮ ಕ್ಲೈಮ್ ರೈಸ್ ಮಾಡಲು ನಿಮ್ಮ ಸ್ಮಾರ್ಟ್‌ಫೋನಿನಿಂದ ನೀವು ಆ ಡ್ಯಾಮೇಜ್‌ನ ಫೋಟೋ ಕ್ಲಿಕ್ ಮಾಡಿ ಮತ್ತು ತಪಾಸಣೆಗಾಗಿ ನಮಗೆ ಕಳುಹಿಸಿ. ಅದಾದ ಬಳಿಕ, ನಾವು ಡ್ಯಾಮೇಜ್ ಅನ್ನು ಪರಿಶೀಲಿಸುತ್ತೇವೆ, ತರುವಾಯ ಕ್ಲೈಮ್ ಸೆಟಲ್ ಮಾಡುತ್ತೇವೆ. ಕನಿಷ್ಠ ಶ್ರಮದೊಂದಿಗೆ ಇವೆಲ್ಲವೂ ಆನ್‌ಲೈನ್‌ ಮೂಲಕ ನಡೆಯುತ್ತದೆ.
  • ಟೈಲರ್‌ಡ್‌ ಇನ್ಸೂರ್ಡ್‌ ಡಿಕ್ಲೇರ್‌ಡ್‌ ವ್ಯಾಲ್ಯೂ - ಡಿಜಿಟ್‌ನಲ್ಲಿ ನಿಮ್ಮ ಟಿಯಾಗೊ ಪಾಲಿಸಿಯ ಐಡಿವಿಯನ್ನು ಕಸ್ಟಮೈಸ್‌ ಮಾಡುವುದನ್ನು ಆಯ್ಕೆ ಮಾಡಬಹುದು. ಸಾಮಾನ್ಯವಾಗಿ, ಐಡಿವಿ ಕ್ಯಾಲ್ಕ್ಯುಲೇಟ್ ಮಾಡಲು ನಾವು ಮಾರಾಟಗಾರರು ಪಟ್ಟಿ ಮಾಡಿದ ಬೆಲೆಯಿಂದ ಅನ್ವಯವಾಗುವ ಡೆಪ್ರಿಸಿಯೇಷನ್ ಅನ್ನು ಡಿಡಕ್ಟ್ ಮಾಡುತ್ತೇವೆ - ನಿಮ್ಮ ಟಿಯಾಗೊ ಒಂದು ವೇಳೆ ಕಳ್ಳತನವಾದರೆ ಅಥವಾ ರಿಪೇರಿ ಮಾಡಲಾಗದ ಡ್ಯಾಮೇಜ್ ಆದ ಸಂದರ್ಭದಲ್ಲಿ ನಿಮ್ಮ ಪಾಲಿಸಿ ವಿರುದ್ಧ ನೀವು ಸ್ವೀಕರಿಸುವ ಅಮೌಂಟ್. ಒಂದು ವೇಳೆ ನೀವು ಅದಕ್ಕಿಂತ ಹೆಚ್ಚಿನ ಐಡಿವಿ ಪಡೆಯಲು ಬಯಸುವುದಾದರೆ, ಟಾಟಾ ಟಿಯಾಗೊ ಇನ್ಶೂರೆನ್ಸ್ ವೆಚ್ಚದಲ್ಲಿ ಸೂಕ್ಷ್ಮ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಹಾಗೆ ಮಾಡಬಹುದು.
  • ಸ್ವಿಫ್ಟ್ ಕ್ಲೈಮ್ ಸೆಟಲ್‌ಮೆಂಟ್‌ - ಅಪಘಾತಕ್ಕೆ ಒಳಗಾಗುವುದು ಅಥವಾ ಇನ್ನಿತರ ಕಾರಣಗಳಿಂದ ನಿಮ್ಮ ಟಿಯಾಗೊ ಡ್ಯಾಮೇಜ್ ಆಗುವುದು ಇತ್ಯಾದಿ ಇನಿರೀಕ್ಷಿತ ಘಟನೆಗಳು ನಡೆದಾಗ ಅವುಗಳನ್ನು ಎದುರಿಸುವುದು ಎಂಥ ಎದೆಗುಂದಿಸುವ ಸಂದರ್ಭ ಎಂದು ನಾವು ಅರ್ಥಮಾಡಿಕೊಳ್ಳಬಲ್ಲೆವು. ಆದ್ದರಿಂದ, ಆದಷ್ಟು ಬೇಗ ಶ್ರಮಪಟ್ಟು ನಿಮ್ಮ ಕ್ಲೈಮ್ ಸೆಟಲ್ ಮಾಡುವ ಮೂಲಕ ನಿಮ್ಮ ತೊಂದರೆಗಳನ್ನು ತ್ವರಿತವಾಗಿ ತಗ್ಗಿಸುವ ಭರವಸೆಯನ್ನು ನಾವು ಒದಗಿಸುತ್ತೇವೆ.
  • ವ್ಯಾಪಕವಾಗಿ ಹರಡಿರುವ ನೆಟ್‌ವರ್ಕ್ ಗ್ಯಾರೇಜ್‌ಗಳ ಸರಣಿ - ಅಪಘಾತದ ರಿಪೇರಿಗಳಿಗೆ ಕ್ಯಾಶ್‌ ಕಡಿಮೆ ಇದೆಯೇ? ನೀವು ನಿಮ್ಮ ಡ್ಯಾಮೇಜ್ ಆಗಿರುವ ಟಿಯಾಗೊವನ್ನು ನಮ್ಮ 1400+ ನೆಟ್‌ವರ್ಕ್‌ ಗ್ಯಾರೇಜ್‌ಗಳಲ್ಲಿ ಯಾವುದಾದರೊಂದಕ್ಕೆ ತಂದು ಕ್ಯಾಶ್‌ಲೆಸ್‌ ರಿಪೇರಿಗಳನ್ನು ಪಡೆಯಬಹುದು. ನಮ್ಮ ನೆಟ್‌ವರ್ಕ್‌ ಗ್ಯಾರೇಜ್‌ಗಳ ವ್ಯಾಪಕವಾದ ಸರಣಿ ದೇಶದಾದ್ಯಂತ ಹರಡಿಕೊಂಡಿದೆ, ಹಾಗಾಗಿ ನೀವು ಎಮರ್ಜೆನ್ಸಿ ಸಂದರ್ಭಗಳಲ್ಲಿ ಅಸಿಸ್ಟೆನ್ಸ್‌ಗೆ ನಿಮ್ಮ ಪಕ್ಕದಲ್ಲೇ ಫ್ರೆಂಡ್ಲಿ ಗ್ಯಾರೇಜ್ ಅನ್ನು ಹೊಂದುತ್ತೀರಿ.
  • ಆ್ಯಡ್‌-ಆನ್ ಗಳ ರೇಂಜ್ - ಡಿಜಿಟ್‌ನೊಂದಿಗೆ, ನೀವು ಆ್ಯಡ್‌-ಆನ್‌ಗಳನ್ನು ಹೊಂದುವುದರ ಮೂಲಕ ನಿಮ್ಮ ಇನ್ಶೂರೆನ್ಸ್ ಪಾಲಿಸಿಯನ್ನು ಪುಷ್ಟೀಕರಿಸಿಕೊಳ್ಳಬಹುದು. ಈ ಆ್ಯಡ್‌-ಆನ್‌ಗಳ ಮೂಲಕ ನಿಮ್ಮ ಟಿಯಾಗೊಗೆ ಪಾಲಿಸಿಯನ್ನು ಕಸ್ಟಮೈಸ್ ಮಾಡಬಹುದು ಮತ್ತು ಕೊಂಚು ಹೆಚ್ಚುವರಿ ಟಾಟಾ ಟಿಯಾಗೊ ಇನ್ಶೂರೆನ್ಸ್ ಬೆಲೆಗೆ ಸಮಗ್ರ ಆರ್ಥಿಕ ಕವರೇಜ್ ಹೊಂದಬಹುದು. ನಾವು 7 ಆ್ಯಡ್‌-ಆನ್‌ಗಳನ್ನು ಒದಗಿಸುತ್ತೇವೆ, ಅವುಗಳೆಂದರೆ ರಿಟರ್ನ್‌ ಟು ಇನ್‌ವಾಯ್ಸ್‌ ಕವರ್‌, ರೋಡ್‌ಸೈಡ್‌ ಅಸಿಸ್ಟೆನ್ಸ್‌ ಕವರ್‌, ಪ್ಯಾಸೆಂಜರ್‌ ಕವರ್‌, ಝೀರೋ ಡೆಪ್ರಿಸಿಯೇಷನ್ ಕವರ್, ಎಂಜಿನ್ ಮತ್ತು ಗೇರ್‌ಬಾಕ್ಸ್‌ ಪ್ರೊಟೆಕ್ಷನ್ ಕವರ್ ಇತ್ಯಾದಿ. ಉದಾಹರಣೆ ಕೊಡುವುದಾದರೆ, ನಿಮ್ಮ ಪಾಲಿಸಿಯಲ್ಲಿ ರೋಡ್‌ಸೈಡ್‌ ಅಸಿಸ್ಟೆನ್ಸ್‌ ಕವರ್ ಸೇರಿಸಿಕೊಂಡಿದ್ದರೆ, ನಿಮ್ಮ ಟಿಯಾಗೊ ರಸ್ತೆಮಧ್ಯದಲ್ಲಿ ಮೆಕ್ಯಾನಿಕಲ್‌ ಬ್ರೇಕ್‌ಡೌನ್‌ ಆಗಿ ಒದ್ದಾಡಬೇಕಾದ ಸಂದರ್ಭ ಎದುರಾದರೆ ನೆರವು ಒದಗುತ್ತದೆ.
  • ಹಗಲಿರುಳು ಅಸಿಸ್ಟೆನ್ಸ್  - ನಮ್ಮ ಗ್ರಾಹಕ ನೆರವು ತಂಡ ರಾಷ್ಟ್ರೀಯ ರಜಾದಿನಗಳನ್ನೂ ಸೇರಿದಂತೆ 24/7 ನಿಮಗೆ ಅಸಿಸ್ಟ್ ಮಾಡಲು ಲಭ್ಯವಿರುತ್ತದೆ. ಹಾಗಾಗಿ, ವಾರದ ದಿನವೇ ಆಗಿರಲಿ, ಸೋಮಾರಿ ಭಾನುವಾರವೇ ಆಗಿರಲಿ, ನೀವು ಒಂದು ವೇಳೆ ಸಮಸ್ಯೆ ಸಿಲುಕಿಕೊಂಡರೆ ನಮ್ಮ ಸಪೋರ್ಟ್ ತಂಡವನ್ನು ಸಂಪರ್ಕಿಸಿ ಮತ್ತು ನಾವು ಆದ್ಯತೆ ಮೇರೆಗೆ ನಿಮಗೆ ಅಸಿಸ್ಟ್ ಮಾಡುತ್ತೇವೆ.
  • ಮನೆಬಾಗಿಲಿಗೆ ಸರ್ವೀಸ್‌ - ಡಿಜಿಟ್‌ನ ಟಾಟಾ ಟಿಯಾಗೊ ಇನ್ಶೂರೆನ್ಸ್ ಪಾಲಿಸಿಯಲ್ಲಿ, ಒಂದು ವೇಳೆ ನೀವು ನಮ್ಮ ನೆಟ್‌ವರ್ಕ್‌ ಗ್ಯಾರೇಜ್‌ಗಳಿಂದ ಅಸಿಸ್ಟೆನ್ಸ್ ಬಯಸಿದರೆ ನಿಮ್ಮ ಟಿಯಾಗೊಗೆ ಡೋರ್‌ಸ್ಟೆಪ್‌ ಸರ್ವೀಸ್‌ ಅನ್ನು ನೀವು ಪಡೆಯಬಹುದು. ನಮ್ಮನ್ನು ಸಂಪರ್ಕಿಸಿ ಮತ್ತು ನಾವು ನಿಮ್ಮ ಸ್ಥಳದಿಂದ ಕಾರ್ ಪಿಕ್ ಮಾಡುವ ವ್ಯವಸ್ಥೆ ಮಾಡುತ್ತೇವೆ ಮತ್ತು ರಿಪೇರಿಯಾದ ಬಳಿಕ ವಾಪಸ್ ಡ್ರಾಪ್ ಮಾಡುತ್ತೇವೆ.

ಹಾಗಾಗಿ, ಇವುಗಳು ನೀವು ಟಾಟಾ ಟಿಯಾಗೊ ಕಾರ್ ಇನ್ಶೂರೆನ್ಸ್ ರಿನೀವಲ್ ಅಥವಾ ಖರೀದಿಗೆ ಡಿಜಿಟ್‌ಗೆ ಯಾಕೆ ಹೋಗಬೇಕು ಎಂಬುದಕ್ಕೆ ಇರುವ ಹಲವಾರು ಕಾರಣಗಳಲ್ಲಿ ಕೆಲವು ಕಾರಣಗಳು.

ಆದಾಗ್ಯೂ, ಪಾಲಿಸಿ ಖರೀದಿಸುವ ಮೊದಲು, ಗರಿಷ್ಠ ಪ್ರಯೋಜನಗಳನ್ನು ಪಡೆಯುವ ಸಲುವಾಗು ಏನೆಲ್ಲಾ ಕವರ್‌ ಆಗುತ್ತದೆ, ಯಾವುದೆಲ್ಲಾ ಕವರ್ ಆಗುವುದಿಲ್ಲ ಎಂಬುವುದನ್ನು ಗಮನಿಸಿ ಖಚಿತಪಡಿಸಿಕೊಳ್ಳಬೇಕು.

ಟಾಟಾ ಟಿಯಾಗೊ ಕಾರ್ ಇನ್ಶೂರೆನ್ಸ್ ಖರೀದಿಸುವುದು/ ರಿನೀವ್ ಮಾಡುವುದು ಯಾಕೆ ಮುಖ್ಯ?

ಟಿಯಾಗೊ ನಿಮ್ಮ ಸ್ಟೈಲ್ ಸ್ಟೇಟ್‌ಮೆಂಟ್‌ ಆಗಿದೆ ಮತ್ತು ಅದನ್ನು ಹಾಗೇ ಇರಿಸಿಕೊಳ್ಳಲು ನಿಮಗೆ ಕಾರ್ ಇನ್ಶೂರೆನ್ಸ್ ಅಗತ್ಯವಿದೆ. ಎದುರಾಗಬಹುದಾದ ಅನಿರೀಕ್ಷಿತ ದುರ್ಘಟನೆಗಳಿಂದ ನಿಮ್ಮ ಟಿಯಾಗೊವನ್ನು ಇದು ರಕ್ಷಣೆ ಮಾಡುತ್ತದೆ.

  • ಆರ್ಥಿಕ ಲಯಬಿಲಿಟಿಗಳಿಂಗ ರಕ್ಷಣೆ : ಕಳ್ಳತನ, ಅಪಘಾತ ಅಥವಾ ನೈಸರ್ಗಿಕ ವಿಪತ್ತು ನಿಮ್ಮ ಆರ್ಥಿಕತೆಗೆ ದೊಡ್ಡ ಆಘಾತವನ್ನು ಉಂಟು ಮಾಡಬಹುದಾಗಿದೆ. ಅನಿರೀಕ್ಷಿತ ಥರ್ಡ್ ಪಾರ್ಟಿ ಡ್ಯಾಮೇಜ್‌ಗಳ ಅಡಿಯಲ್ಲಿ ಇನ್ಶೂರೆನ್ಸ್ ನಿಮಗೆ ಆರ್ಥಿಕ ನಿರಾಳತೆ ಒದಗಿಸುತ್ತದೆ. ಇಲ್ಲಿ ಇನ್ಶೂರೆನ್ಸ್ ಕಂಪನಿ ನಿಮ್ಮ ರಕ್ಷಣೆಗೆ ಬರಬಹುದು ಮತ್ತು ದೊಡ್ಡ ನಷ್ಟದಿಂದ ನಿಮ್ಮನ್ನು ರಕ್ಷಿಸಬಹುದು.
  • ಕಾನೂನುಬದ್ದ ಅನುಸರಣೆ : ಕಾರ್ ಇನ್ಶೂರೆನ್ಸ್ ಹೊಂದುವುದು ಕಡ್ಡಾಯವಾಗಿದೆ; ವ್ಯಾಲಿಡ್ ಆದ ಇನ್ಶೂರೆನ್ಸ್ ಇಲ್ಲದ ಡ್ರೈವ್ ಮಾಡುವುದು ಕಾನೂನುಬಾಹಿರವಾಗಿದೆ. ಪಾಲಿಸಿ ಇಲ್ಲದಿದ್ದರೆ, ನಿಮ್ಮ ಮೇಲೆ ರೂ.2,000 ದಂಡವನ್ನು ಹೇರಬಹುದು ಮತ್ತು ನಿಮ್ಮ ಲೈಸೆನ್ಸ್ ಕ್ಯಾನ್ಸಲ್ ಆಗಬಹುದು. ನಿಮ್ಮನ್ನು 3 ತಿಂಗಳ ಸೆರೆವಾಸಕ್ಕೂ ಕಳುಹಿಸಬಹುದು.
  • ಥರ್ಡ್-ಪಾರ್ಟಿ ಲಯಬಿಲಿಟಿ ಕವರ್ : ಕನಿಷ್ಠ ಪಕ್ಷ ಥರ್ಡ್-ಪಾರ್ಟಿ ಲಯಬಿಲಿಟಿಗಳನ್ನು ಕವರ್ ಮಾಡುವ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿ ಪಡೆಯುವುದು ಕಡ್ಡಾಯವಾಗಿದೆ. ಅನಿರೀಕ್ಷಿತ ಸಂದರ್ಭಗಳಲ್ಲಿ, ಅಪಘಾತದಲ್ಲಿ ಥರ್ಡ್-ಪಾರ್ಟಿ ಅಥವಾ ಪ್ರಯಾಣಿಕರಿಗೆ ಆಗುವ ಡ್ಯಾಮೇಜ್‌ಗಳು ಭಾರಿ ಆಗಿದ್ದು, ಅದರ ರಿಇಂಬರ್ಸ್‌ಮೆಂಟ್‌ ಪ್ರಮಾಣ ಸಾಮರ್ಥ್ಯವನ್ನು ಮೀರಿ ಹೋಗಬಹುದು. ಒಂದು ವೇಳೆ ನಿಮ್ಮ ಟಿಯಾಗೊಗೆ ನೀವು ಇನ್ಶೂರೆನ್ಸ್ ಪಾಲಿಸಿ ಹೊಂದಿದ್ದರೆ, ನೀವು ಒತ್ತಡ-ಮುಕ್ತರಾಗಿ ಇರಬಹುದು.
  • ಹೆಚ್ಚುವರಿ ಕವರೇಜ್‌ನೊಂದಿಗೆ ಕಾಂಪ್ರೆಹೆನ್ಸಿವ್ ಕವರ್ : ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಆಯ್ಕೆ ಮಾಡಿಕೊಳ್ಳುವುದು ಬಹಳ ಉತ್ತಮ, ಇದು ಥರ್ಡ್-ಪಾರ್ಟಿ ಲಯಬಿಲಿಟಿಗಳಿಂದ ಮಾತ್ರ ನಿಮ್ಮನ್ನು ರಕ್ಷಣೆ ಮಾಡುವುದಿಲ್ಲ, ಬದಲಾಗಿ ಅಪಘಾತಗಳು, ನೈಸರ್ಗಿಕ ವಿಪತ್ತುಗಳು, ಕಳ್ಳತನ ಇತ್ಯಾದಿ ಅನಿರೀಕ್ಷಿತ ಸಂದರ್ಭಗಳಲ್ಲಿ ನಿಮಗೆ ಮತ್ತು ನಿಮ್ಮ ಟಿಯಾಗೊಗೆ ಉಂಟಾಗುವ ನಷ್ಟಗಳು ಮತ್ತು ಡ್ಯಾಮೇಜ್‌ಗಳನ್ನೂ ಕವರ್‌ ಮಾಡುತ್ತದೆ. ಬಂಪರ್ ಟು ಬಂಪರ್, ಬ್ರೇಕ್‌ಡೌನ್‌ ಅಸಿಸ್ಟೆನ್ಸ್‌, ಎಂಜಿನ್ ಮತ್ತು ಗೇರ್‌ಬಾಕ್ಸ್‌ ಪ್ರೊಟೆಕ್ಷನ್, ಟೈರ್ ಪ್ರೊಟೆಕ್ಷನ್ ಇತ್ಯಾದಿ ಆ್ಯಡ್‌-ಆನ್‌ಗಳ ಜೊತೆಗೆ ತೆಗೆದುಕೊಂಡರೆ ನಿಮ್ಮ ಕಾರಿಗೆ ವಿಸ್ತಾರವಾದ ರಕ್ಷಣೆಯನ್ನು ಒದಗಿಸುತ್ತದೆ.

ಟಾಟಾ ಟಿಯಾಗೊ ಕಾರ್ ಬಗ್ಗೆ ಇನ್ನಷ್ಟು

ವರ್ಷದ ಕಾರ್, ವರ್ಷದ ಹ್ಯಾಚ್‌ಬ್ಯಾಕ್‌, ಮೇಕ್ ಇನ್ ಇಂಡಿಯಾ ಅವಾರ್ಡ್, ವ್ಯಾಲ್ಯೂ ಆಫ್ ಮನಿ ಅವಾರ್ಡ್, ನೀವು ಯಾವ ಪ್ರಶಸ್ತಿಯನ್ನು ಬೇಕಾದರೂ ಹೆಸರಿಸಿ ಮತ್ತು ಅವುಗಳನ್ನು ಈಗಾಗಲೇ ಟಿಯಾಗೊ ತನ್ನ ಚೀಲಕ್ಕೆ ಸೇರಿಸಿಕೊಂಡಿರುತ್ತದೆ. ಟಾಟಾ ಟಿಯಾಗೊ ಪವರ್‌ಫುಲ್, ಸ್ಟೈಲಿಶ್ ಮತ್ತು ಕಂಟೆಂಪರರಿ ಕಾರ್, ನೀವು ಪ್ರೀಮಿಯಂ ಸೌಕರ್ಯ, ಕಾರ್ಯಕ್ಷಮತೆ ಬಯಸುವಿರಾದರೆ ಇದರ ಅಗತ್ಯ ನಿಮಗೆ ಇದೆ.

ಸ್ಮಾರ್ಟ್-ಲುಕಿಂಗ್ ಹ್ಯಾಚ್‌ಬ್ಯಾಕ್‌ಗೆ ಏನೇನು ಅವಶ್ಯವಿದೆಯೇ ಅವೆಲ್ಲವೂ ಟಿಯಾಗೊ ತುಂಬಿಕೊಂಡಿದೆ. ಕೈಗೆಟಕುವ ದರ, ವಿಶಾಲವಾದ ಜಾಗ, ಶಕ್ತಿಶಾಲಿ ವೈಶಿಷ್ಟ್ಯಗಳನ್ನು ಹೊಂದಿದ ಪ್ರೀಮಿಯಂ-ಲುಕಿಂಗ್ ಇಂಟೀರಿಯರ್‌ ಎಲ್ಲವೂ ಇದೆ. ಕೈಗೆಟಕುವ ರೇಂಜಿನ ಬೆಲೆ ಹೊಂದಿರುವ ಇದರ ಬೆಲೆ 4.4 ಲಕ್ಷದಿಂದ ಆರಂಭವಾಗುತ್ತದೆ, ಟಿಯಾಗೊ ಖಂಡಿತವಾಗಿಯೂ ವ್ಯಾಲ್ಯೂ ಫಾರ್ ಮನಿ ಕಾರು.

ಒಟ್ಟಾರೆಯಾಗಿ ಹೇಳುವುದಾದರೆ, ನಾಜೂಕಾಗಿರುವ, ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ, ವಿಶಾಲವಾದ ಜಾಗ ಇರುವ ಹ್ಯಾಚ್‌ಬ್ಯಾಕ್ ಅನ್ನು ನೀವು ಹುಡುಕುತ್ತಿದ್ದರೆ, ನಿಮಗೆ ಬೇಕಾದುದೆಲ್ಲವೂ ಟಿಯಾಗೊದಲ್ಲಿ ಇದೆ.

ನೀವು ಯಾಕೆ ಟಾಟಾ ಟಿಯಾಗೊ ಖರೀದಿಸಬೇಕು?

  • ಹೊಸ ಫೀಚರ್‌ಗಳು: ಆ್ಯಂಡ್ರಾಯ್ಡ್ ಆಟೋ ಜೊತೆಗೆ ಇನ್‌ಫೋಟೈನ್‌ಮೆಂಟ್‌ ಸಿಸ್ಟಮ್‌, ಅಟೋಮ್ಯಾಟಿಕ್‌ ಕ್ಲೈಮೇಟ್ ಕಂಟ್ರೋಲ್, 15 ಇಂಚಿನ ಎಲಾಯ್ ವೀಲ್‌ಗಳು ಮತ್ತು ಪ್ರೊಜೆಕ್ಟರ್‌ ಲ್ಯಾಂಪ್‌ಗಳು, ಗ್ಲಾಸಿ ಬ್ಲಾಕ್ ರೂಫ್ ಮತ್ತು ಸ್ಪಾಯ್ಲರ್, ಬಾಡಿ-ಹಗ್ಗಿಂಗ್ ಸೀಟ್ ಬೋಲ್‌ಸ್ಟರ್ಸ್ ಇತ್ಯಾದಿ ಫೀಚರ್‌ಗಳನ್ನು ಹೊಂದಿರುವ ಆ ಸೆಗ್‌ಮೆಂಟಿನ ದೊಡ್ಡ ಫೀಚರ್‌-ರಿಚ್‌ ಕಾರುಗಳಲ್ಲಿ ಟಾಟಾ ಟಿಯಾಗೊ ಒಂದಾಗಿದೆ.
  • ವೇರಿಯಂಟ್‌ಗಳು: ಟಿಯಾಗೊ ಎಂಟು ವೇರಿಯಂಟ್‌ಗಳಲ್ಲಿ ಬರುತ್ತದೆ: XE, XM, XM, XT, XT (O), XZ ಮತ್ತು XZ+ ಮತ್ತು ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ: 1.2-litre (85PS/114Nm) ಪೆಟ್ರೋಲ್ ಎಂಜಿನ್ ಮತ್ತು 1.05-litre (70PS/140Nm) ಡೀಸೆಲ್ ಮೋಟಾರ್. ಅಷ್ಟೇ ಅಲ್ಲ, ನೀವು ಆರಿಸಿಕೊಳ್ಳಲು 8 ಬಣ್ಣಗಳ ಆಯ್ಕೆ ಲಭ್ಯವಿದೆ. ಬೆರ್ರಿ ರೆಡ್ ನಿಂದ ಹಿಡಿದು ಕಾನ್ಯನ್ ಆರೆಂಜ್, ಓಶಿಯನ್ ಬ್ಲೂ, ಎಕ್ಸ್‌ಪ್ರೆಸ್ಸೊ ಬ್ರೌನ್, ಪ್ಲಾಟಿನಮ್ ಸಿಲ್ವರ್, ಟೈಟಾನಿಯಮ್ ಗ್ರೇ, ಪರ್ಲಸೆಂಟ್ ವೈಟ್‌ವರೆಗೆ, ಟಾಟಾ ನಿಮಗೆ ಆಯ್ಕೆ ಮಾಡಿಕೊಳ್ಳಲು ಬಹುಕಾಂತೀಯ ಬಣ್ಣಗಳ ರೇಂಜನ್ನುಒದಗಿಸುತ್ತದೆ.
  • ದಿ ಸ್ಪೈಸ್ ಆಫ್ ರೇಸಿಂಗ್: ಈಗಾಗಲೇ ಲಭ್ಯವಿರುವ ಟಾಟಾ ಟಿಯಾಗೊ ವೇರಿಯಂಟ್‌ಗಳಿಗೆ ಟಿಯಾಗೊ ಜೆಟಿಪಿಯು ಹೊಸ ಮತ್ತು ಅಪ್‌ಗ್ರೇಡೆಡ್ ಸೇರ್ಪಡೆ ಆಗಿದೆ. ನಿಮ್ಮೊಳಗಿನ ರೇಸರ್‌ಗಳಿಗೆ ಈ ಜೆಟಿಪಿ ಇದೆ, ಇದು ಸ್ಟೈಲಿಶ್‌ಲಿ ಬೋಲ್ಡ್ ಆಗಿದೆ ಮತ್ತು ವೇಗವಾಗಿ ಸಾಗಲು ಹಾಗೂ ಆಕರ್ಷಕವಾಗಿ ಕಾಣಲು ಅವಶ್ಯವಿರುವ ಎಲ್ಲಾ ಪವರ್‌-ಪ್ಯಾಕ್ಡ್ ವೈಶಿಷ್ಟ್ಯಗಳನ್ನು ಹೊಂದಿದೆ. ಒಬ್ಬ ರೇಸರ್‌ಗೆ, ಈ ಕಾರು ಒಂದು ಸಂಪೂರ್ಣ ಶೋ ಸ್ಟಾಪರ್ ಆಗಿದೆ.

ವಿಶ್ವಾಸಾರ್ಹ ಎಂಜಿನ್ ಹೊಂದಿರುವ ಸ್ಪೋರ್ಟಿ-ಲುಕಿಂಗ್ ಹ್ಯಾಚ್‌ಬ್ಯಾಕ್ ಹುಡುಕುತ್ತಿರುವ ಖರೀದಿದಾರರಿಗೆ ಈ ಕಾರು ಹಿಡಿಸುತ್ತದೆ. ಮತ್ತು ಇದು ಬಜೆಟ್-ಫ್ರೆಂಡ್ಲಿ ಆಗಿರುವುದಿಂದ ಹಲವಾರು ಯುವ ಖರೀದಿದಾರರನ್ನು ಆಕರ್ಷಿಸುತ್ತದೆ.

ಟಾಟಾ ಟಿಯಾಗೊ - ವೇರಿಯಂಟ್‌ಗಳು ಮತ್ತು ಎಕ್ಸ್‌-ಶೋರೂಮ್‌ ಬೆಲೆ

ವೇರಿಯಂಟ್‌ಗಳು ಎಕ್ಸ್‌-ಶೋರೂಮ್‌ ಬೆಲೆ (ನಗರಕ್ಕೆ ತಕ್ಕಂತೆ ಬದಲಾಗಬಹುದು)
XE1199 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 23.84 kmpl ₹ 4.39 ಲಕ್ಷ
XM1199 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 23.84 kmpl ₹ 4.74 ಲಕ್ಷ
XZ1199 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 23.84 kmpl ₹ 5.14 ಲಕ್ಷ
XE Diesel1047 ಸಿಸಿ, ಮ್ಯಾನ್ಯುವಲ್, ಡೀಸೆಲ್, 27.28 kmpl ₹ 5.24 ಲಕ್ಷ
XZ Opt1199 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 23.84 kmpl ₹ 5.34 ಲಕ್ಷ
XZA1199 ಸಿಸಿ, ಅಟೋಮ್ಯಾಟಿಕ್, ಪೆಟ್ರೋಲ್, 23.84 kmpl ₹ 5.59 ಲಕ್ಷ
XM Diesel1047 ಸಿಸಿ, ಮ್ಯಾನ್ಯುವಲ್, ಡೀಸೆಲ್, 27.28 kmpl ₹ 5.59 ಲಕ್ಷ
XZ Plus1199 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 23.84 kmpl ₹ 5.69 ಲಕ್ಷ
XZ Plus Dual Tone1199 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 23.84 kmpl ₹ 5.76 ಲಕ್ಷ
XZ Diesel1047 ಸಿಸಿ, ಮ್ಯಾನ್ಯುವಲ್, ಡೀಸೆಲ್, 27.28 kmpl ₹ 5.99 ಲಕ್ಷ
XZA Plus1199 ಸಿಸಿ, ಅಟೋಮ್ಯಾಟಿಕ್, ಪೆಟ್ರೋಲ್, 23.84 kmpl ₹ 6.14 ಲಕ್ಷ
XZ Opt Diesel1047 ಸಿಸಿ, ಮ್ಯಾನ್ಯುವಲ್, ಡೀಸೆಲ್, 27.28 kmpl ₹ 6.19 ಲಕ್ಷ
XZA Plus Dual Tone1199 ಸಿಸಿ, ಅಟೋಮ್ಯಾಟಿಕ್, ಪೆಟ್ರೋಲ್, 23.84 kmpl ₹ 6.21 ಲಕ್ಷ
XZ Plus Diesel1047 ಸಿಸಿ, ಮ್ಯಾನ್ಯುವಲ್, ಡೀಸೆಲ್, 27.28 kmpl ₹ 6.54 ಲಕ್ಷ
XZ Plus DualTone Diesel1047 ಸಿಸಿ, ಮ್ಯಾನ್ಯುವಲ್, ಡೀಸೆಲ್, 27.28 kmpl ₹ 6.61 ಲಕ್ಷ

ಭಾರತದಲ್ಲಿ ಟಾಟಾ ಟಿಯಾಗೊ ಕಾರ್ ಇನ್ಶೂರೆನ್ಸ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು

ಒಂದು ವೇಳೆ ನಾನು ನನ್ನ ಟಿಯಾಗೊದಲ್ಲಿ ಪ್ರಯಾಣಿಕರ ಜೊತೆ ಪ್ರಯಾಣ ಮಾಡುತ್ತಿದ್ದಾಗ ಅಪಘಾತ ನಡೆದು ಅವರು ಗಾಯಗೊಂಡರೆ ಏನಾಗುತ್ತದೆ? ಆ ರೀತಿಯ ಆರ್ಥಿಕ ಲಯಬಿಲಿಟಿಗೆ ನಾನು ಕವರೇಜ್ ಸ್ವೀಕರಿಸುತ್ತೇನೆಯೇ?

ಸ್ಟಾಂಡರ್ಡ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಪ್ರಯಾಣಿಕರಿಗೆ ಆಗುವ ಗಾಯಗಳು ಕವರ್ ಆಗುವುದಿಲ್ಲ. ಆದಾಗ್ಯೂ, ನೀವು ನಿಮ್ಮ ಟಾಟಾ ಟಿಯಾಗೊ ಇನ್ಶೂರೆನ್ಸ್‌ ಜೊತೆಗೆ ಪ್ಯಾಸೆಂಜರ್ ಕವರ್ ಸೇರಿಸಿಕೊಂಡರೆ ಅದೇ ಕಾರಣಕ್ಕೆ ನೀವು ಅಸಿಸ್ಟೆನ್ಸ್ ಪಡೆಯಬಹುದಾಗಿದೆ.

ಟಿಯಾಗೊ ಇನ್ಶೂರೆನ್ಸ್ ಪಾಲಿಸಿಗೆ ಕಂಪಲ್ಸರಿ ಡಿಡಕ್ಟಿಬಲ್ ಅಮೌಂಟ್ ಎಷ್ಟು?

ಆಐರ್‌ಡಿಎಐ ಪ್ರಕಾರ, 1500ಕ್ಕಿಂದ ಕಡಿಮೆ ಕ್ಯುಬಿಕ್ ಕೆಪಾಸಿಟಿ ಹೊಂದಿರುವ ಕಾರುಗಳಿಗೆ ರೂ.1000 ಕಂಪಲ್ಸರಿ ಡಿಡಕ್ಟಿಬಲ್ ಮತ್ತು 1500ಸಿಸಿಗಿಂತ ಹೆಚ್ಚಿನದಕ್ಕೆ ರೂ.2000 ಇರುತ್ತದೆ. ಹಾಗಾಗಿ, ಟಿಯಾಗೊದ ಎಂಜಿನ್ ಸಿಸಿ 1500ಕ್ಕಿಂತ ಕಡಿಮೆ ಇರುವುದರಿಂದ ಡಿಡಕ್ಟಿಬಲ್ ಅಮೌಂಟ್ ರೂ.1000.

ಡಿಜಿಟ್‌ನ ಕಾರ್‌ ಇನ್ಶೂರೆನ್ಸ್‌ ಪಾಲಿಸಿಯು ನನ್ನ ಕಾರಿನ ಎಂಜಿನ್ ಡ್ಯಾಮೇಜ್ ಕವರ್ ಮಾಡುತ್ತದೆಯೇ?

ಸಾಮಾನ್ಯವಾಗಿ, ಕವರ್ ಮಾಡುವುದಿಲ್ಲ. ಆದರೆ, ಎಂಜಿನ್ ಮತ್ತು ಗೇರ್‌ಬಾಕ್ಸ್‌ ಪ್ರೊಟೆಕ್ಷನ್‌ ಆ್ಯಡ್‌-ಆನ್‌ ಆಯ್ಕೆ ಮಾಡುವ ಮೂಲಕ ಯಾವುದೇ ಅಪಘಾತದಿಂದ ನಿಮ್ಮ ಟಿಯಾಗೊ ಎಂಜಿನ್‌ಗೆ ಆದ ಡ್ಯಾಮೇಜ್‌ಗೆ ನೀವು ಆರ್ಥಿಕ ಅಸಿಸ್ಟೆನ್ಸ್‌ ಪಡೆಯಬಹುದು.

ನನ್ನ ಟಾಟಾ ಟಿಯಾಗೊ ಇನ್ಶೂರೆನ್ಸ್ ಪಾಲಿಸಿಗೆ ಪರ್ಸನಲ್ ಆ್ಯಕ್ಸಿಡೆಂಟ್ ಕವರ್ ಸೇರಿಸಲು ಸಾಧ್ಯವಿಲ್ಲವೇ?

ಐಆರ್‌ಡಿಎಐ ನಿರ್ದೇಶನದ ಪ್ರಕಾರ, ಕಾರ್‌ ಇನ್ಶೂರೆನ್ಸ್ ಪಾಲಿಸಿ ಜೊತೆಗೆ ಪರ್ಸನಲ್ ಆ್ಯಕ್ಸಿಡೆಂಟ್ ಕವರ್‌ ಹೊಂದುವುದು ಕಡ್ಡಾಯವಾಗಿದೆ.

ನನ್ನ ಟಿಯಾಗೊ ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿನ ಪ್ರೀಮಿಯಂ ಅನ್ನು ನಾನು ಹೇಗೆ ಕಡಿಮೆ ಮಾಡಬಹುದು?

ಟಾಟಾ ಟಿಯಾಗೊ ಇನ್ಶೂರೆನ್ಸ್ ಬೆಲೆ ಕಡಿಮೆ ಮಾಡಲು ಇರುವ ಒಂದೇ ಮಾರ್ಗ ವಾಲಂಟರಿ ಡಿಡಕ್ಟಿಬಲ್ ಅಮೌಂಟ್ ಆಯ್ಕೆ ಮಾಡುವುದು. ಆ ಅಮೌಂಟ್ ಹೆಚ್ಚಿದ್ದಷ್ಟೂ ನಿಮ್ಮ ಪ್ರೀಮಿಯಂ ಕಡಿಮೆಯಾಗುತ್ತದೆ.

ಆದಾಗ್ಯೂ, ಇಂಥಾ ಸಂದರ್ಭದಲ್ಲಿ, ನಿಮ್ಮ ಪಾಲಿಸಿಯ ವಿರುದ್ಧ ನೀವು ಕ್ಲೈಮ್ ರೈಸ್ ಮಾಡಲು ಬಯಸಿದರೆ, ನಿಮ್ಮ ಪಾಲಿಸಿ ಉಳಿದವುಗಳನ್ನು ಕವರ್ ಮಾಡುವ ಮೊದಲು ಡಿಡಕ್ಟಿಬಲ್ ರೂಪದಲ್ಲಿ ಗಣನೀಯ ಪ್ರಮಾಣದ ಅಮೌಂಟ್ ಅನ್ನು ಪಾವತಿಸಬೇಕಾಗುತ್ತದೆ.