Third-party premium has changed from 1st June. Renew now
ಟಾಟಾ ಸಫಾರಿ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿ ಅಥವಾ ರಿನೀವ್ ಮಾಡಿ
ಟಾಟಾ ಸಫಾರಿಯು 1998 ರಲ್ಲಿ ಭಾರತೀಯ ಆಟೋಮೇಕರ್ ಆದಂತಹ ಟಾಟಾ ಮೋಟಾರ್ಸ್ ಪರಿಚಯಿಸಿದ ಮಿಡ್-ಸೈಜ್ ಎಸ್‌ಯುವಿ ಆಗಿದೆ. ಈ ಮಾಡೆಲ್‌ನ ಮೊದಲ ಜನರೇಶನ್‌ನ ಸೆವೆನ್-ಸೀಟರ್‌ಗಳ ಎಸ್‌ಯುವಿ, ಮಡಿಚಬಹುದಾದ ಮೂರನೇ ಸಾಲು ಮತ್ತು ವಿಶಾಲವಾದ ಇಂಟೀರಿಯರ್‌ನೊಂದಿಗೆ ಬರುತ್ತದೆ. ಈ ಎಲ್ಲಾ ಫೀಚರ್‌ಗಳು ಕೈಗೆಟುಕುವ ದರದಲ್ಲಿ ಬರುತ್ತವೆ. ಇವೆಲ್ಲವೂ ಈ ಕಾರನ್ನು ಇತರ ಬ್ರ್ಯಾಂಡ್‌ಗಳ ಆಫ್-ರೋಡ್ ವೆಹಿಕಲ್‌ಗಳಿಗೆ, ಅತ್ಯುತ್ತಮ ಪರ್ಯಾಯವನ್ನಾಗಿ ಮಾಡುತ್ತವೆ.
2021 ರಲ್ಲಿ, ಕಂಪನಿಯು ಈ ಮಾಡೆಲ್‌ನ ಎರಡನೇ ಜನರೇಶನ್ ಅನ್ನು ಬಿಡುಗಡೆ ಮಾಡಿತು, ಇದು ಫ್ರಂಟ್-ವೀಲ್ ಡ್ರೈವ್ ಅನ್ನು ಹೊಂದಿದೆ ಮತ್ತು ಮುಖ್ಯವಾಗಿ ಮೊನೊಕಾಕ್ ಕ್ರಾಸ್ಒವರ್ ಎಸ್‌ಯುವಿ ಆಗಿದೆ.
ಅದರ ಡ್ರೈವಿಂಗ್ ಸೇಫ್ಟಿ ಫೀಚರ್‌ಗಳು ಮತ್ತು ಇತರ ಗುಣಲಕ್ಷಣಗಳ ಹೊರತಾಗಿಯೂ, ಈ ಕಾರ್ ಅಪಘಾತದಿಂದ ಉಂಟಾಗುವ ಅಪಾಯ ಮತ್ತು ಹಾನಿಗಳಿಗೆ ಒಳಗಾಗುತ್ತದೆ. ಇದನ್ನು ಪರಿಗಣಿಸಿ, ನೀವು ಈ ಕಾರನ್ನು ಖರೀದಿಸಲು ಪ್ಲ್ಯಾನ್ ಮಾಡುತ್ತಿದ್ದರೆ, ನೀವು ವ್ಯಾಲಿಡ್ ಆಗಿರುವ ಟಾಟಾ ಸಫಾರಿ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಬೇಕು. ಪ್ರಸ್ತುತ ಇನ್ಶೂರೆನ್ಸ್ ಹೊಂದಿರುವ ಮಾಲೀಕರು, ತಮ್ಮ ಇನ್ಶೂರೆನ್ಸ್ ಪಾಲಿಸಿಗಳನ್ನು ರಿನೀವ್ ಮಾಡಿಸಬಹುದು ಮತ್ತು ಕಾರಿನ ಹಾನಿಗಳನ್ನು ಸರಿಪಡಿಸುವಾಗ ತಮ್ಮ ಹಣಕಾಸನ್ನು ಸುರಕ್ಷಿತ ಮಾಡಿಕೊಳ್ಳಬಹುದು.
ಈ ನಿಟ್ಟಿನಲ್ಲಿ, ಡಿಜಿಟ್‌ನಂತಹ ಇನ್ಶೂರೆನ್ಸ್ ಕಂಪನಿಯನ್ನು ನೀವು ಅದರ ಪ್ರಯೋಜನಗಳ ರಾಶಿಯಿಂದ ತಿಳಿಯಬಹುದು. ಇನ್ನಷ್ಟು ತಿಳಿಯಲು ಓದುವುದನ್ನು ಮುಂದುವರೆಸಿ.
ಟಾಟಾ ಸಫಾರಿ ಕಾರ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?
ನೀವು ಡಿಜಿಟ್‌ನ ಟಾಟಾ ಸಫಾರಿ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?
ಟಾಟಾ ಸಫಾರಿಗಾಗಿ ಕಾರ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು
ಥರ್ಡ್ ಪಾರ್ಟಿ | ಕಾಂಪ್ರೆಹೆನ್ಸಿವ್ |
ಅಪಘಾತದ ಕಾರಣದಿಂದಾಗಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
|
ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
|
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
|
ಥರ್ಡ್ ಪಾರ್ಟಿ ವೆಹಿಕಲ್‌ಗೆ ಉಂಟಾಗುವ ಹಾನಿ |
|
ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಉಂಟಾಗುವ ಹಾನಿ |
|
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ |
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯ/ಮರಣ |
|
ನಿಮ್ಮ ಕಾರ್‌ನ ಕಳ್ಳತನ |
|
ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
|
ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ |
|
ಕಸ್ಟಮೈಸ್ಡ್ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ |
|
Get Quote | Get Quote |
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್‌ನ ವ್ಯತ್ಯಾಸದ ಬಗ್ಗೆ ಮತ್ತಷ್ಟು ತಿಳಿಯಿರಿ
ಕ್ಲೈಮ್ ಸಲ್ಲಿಸುವುದು ಹೇಗೆ?
ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿದ ನಂತರ, ನೀವು ಚಿಂತಾ ಮುಕ್ತರಾಗಿ ಬದುಕಬಹುದು. ಏಕೆಂದರೆ ನಾವು ಸರಳವಾದ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!
ಹಂತ 1
1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ
ಹಂತ 2
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ನಲ್ಲಿ ಸೆಲ್ಫ್- ಇನ್‌ಸ್ಪೆಕ್ಷನ್‌ಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾದ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವೆಹಿಕಲ್‌ನ ಹಾನಿಯನ್ನು ಶೂಟ್ ಮಾಡಿ.
ಹಂತ 3
ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ರಿಇಂಬರ್ಸ್‌ಮೆಂಟ್ ಅಥವಾ ಕ್ಯಾಶ್‌ಲೆಸ್ ಈ ಎರಡು ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ
ಟಾಟಾ ಸಫಾರಿ ಇನ್ಶೂರೆನ್ಸ್‌ಗಾಗಿ ಡಿಜಿಟ್ ಅನ್ನೇ ಏಕೆ ಆಯ್ಕೆ ಮಾಡಬೇಕು?
ಸೂಕ್ತವಾದ ಒಂದು ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆಮಾಡುವ ಮೊದಲು, ನೀವು ಅನೇಕ ಇನ್ಶೂರೆನ್ಸ್ ಪ್ಲ್ಯಾನ್‌ಗಳನ್ನು ಆನ್‌ಲೈನ್‌ನಲ್ಲಿ ಹೋಲಿಸಬೇಕು. ಹಾಗೆ ಮಾಡುವಾಗ, ನಿಮ್ಮ ಆಯ್ಕೆಗಳನ್ನು ಸ್ಟ್ರೀಮ್‌ಲೈನ್‌ಗೊಳಿಸಲು, ಈ ವಿಷಯದಲ್ಲಿ ನೀವು ಡಿಜಿಟ್‌ನ ಆಫರ್‌ಗಳನ್ನು ನೋಡಲು ಬಯಸಬಹುದು. ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರಾಗಿ ಡಿಜಿಟ್ ಅನ್ನು ಆಯ್ಕೆ ಮಾಡುವ ಕೆಲವು ಪ್ರಯೋಜನಗಳು ಇಲ್ಲಿವೆ:
1. ಸರಳವಾದ ಆನ್‌ಲೈನ್ ಪ್ರಕ್ರಿಯೆ
ನಿಮ್ಮ ಸ್ಮಾರ್ಟ್‌ಫೋನ್ ಮೂಲಕ ಆನ್‌ಲೈನ್‌ನಲ್ಲಿ ಟಾಟಾ ಸಫಾರಿ ಇನ್ಶೂರೆನ್ಸ್ ಅನ್ನು ಪಡೆಯಲು ಡಿಜಿಟ್ ನಿಮ್ಮನ್ನು ಅನುಮತಿಸುತ್ತದೆ. ಸಾಂಪ್ರದಾಯಿಕ ಆಫ್‌ಲೈನ್ ವಿಧಾನಕ್ಕೆ ಹೋಲಿಸಿದರೆ, ಈ ಟೆಕ್ನಾಲಜಿ-ಡ್ರೈವನ್ ಖರೀದಿ ವಿಧಾನವು ತುಂಬಾ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಇದಕ್ಕಾಗಿ ನೀವು ಕೆಲವು ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡುವ ಅಗತ್ಯವಿದೆ. ಇದು ಹಾರ್ಡ್‌ಕಾಪಿ ಸಲ್ಲಿಸುವ ಅಗತ್ಯವನ್ನು ತೆಗೆದುಹಾಕುತ್ತದೆ.
2. ಕ್ಯಾಶ್‌ಲೆಸ್ ಗ್ಯಾರೇಜ್‌ಗಳ ದೊಡ್ಡ ನೆಟ್‌ವರ್ಕ್
ಡಿಜಿಟ್‌ನಿಂದ ಸಫಾರಿ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವ ಮೂಲಕ, ನೀವು ಭಾರತದಾದ್ಯಂತ ಹಲವಾರು ಡಿಜಿಟ್-ಅಥರೈಸ್ಡ್ ನೆಟ್‌ವರ್ಕ್ ಗ್ಯಾರೇಜ್‌ಗಳಿಂದ ಪ್ರೊಫೆಷನಲ್ ರಿಪೇರಿ ಸರ್ವೀಸ್‌ಗಳನ್ನು ಪಡೆಯಬಹುದು. ಇದಲ್ಲದೆ, ನೀವು ಈ ರಿಪೇರಿ ಸೆಂಟರ್‌ಗಳಿಂದ ಕ್ಯಾಶ್‌ಲೆಸ್ ಸೌಲಭ್ಯವನ್ನು ಆಯ್ಕೆ ಮಾಡಬಹುದು ಮತ್ತು ಟಾಟಾ ಕಾರ್ ಡ್ಯಾಮೇಜಿನ ರಿಪೇರಿ ಸಮಯದಲ್ಲಿ ನಿಮ್ಮ ಜೇಬಿನ ಹೊರೆಯನ್ನು ಇಳಿಸುತ್ತದೆ.
3. ಸುಲಭ ಕ್ಲೈಮ್ ಪ್ರಕ್ರಿಯೆ
ಡಿಜಿಟ್‌ನ ಸ್ಮಾರ್ಟ್‌ಫೋನ್-ಎನೆಬಲ್ಡ್ ಕ್ಲೈಮ್ ಪ್ರಕ್ರಿಯೆಯಿಂದಾಗಿ, ನಿಮ್ಮ ಟಾಟಾ ಸಫಾರಿ ಇನ್ಶೂರೆನ್ಸ್‌ನ ವಿರುದ್ಧ ಕ್ಲೈಮ್ ಮಾಡಿದಾಗ, ನೀವು ಕಡಿಮೆ ಸಮಯವನ್ನು ನಿರೀಕ್ಷಿಸಬಹುದು. ಈ ಫೀಚರ್ ನಿಮ್ಮ ಸ್ಮಾರ್ಟ್‌ಫೋನ್ ಮೂಲಕ ನಿಮ್ಮ ಕಾರಿನ ಹಾನಿಯನ್ನು ಆಯ್ಕೆ ಮಾಡಲು ಮತ್ತು ಸರಿಯಾದ ರಿಪೇರಿ ವಿಧಾನವನ್ನು ಅಂದರೆ ರಿಇಂಬರ್ಸ್‌ಮೆಂಟ್ ಅಥವಾ ಕ್ಯಾಶ್‌ಲೆಸ್ ಅನ್ನು ಆಯ್ಕೆಮಾಡಲು ಅನುಮತಿಸುತ್ತದೆ. ಒಟ್ಟಾರೆಯಾಗಿ, ಒಬ್ಬ ವ್ಯಕ್ತಿ ಈ ಸಂಪೂರ್ಣ ಪ್ರಕ್ರಿಯೆಯನ್ನು ಅತೀ ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಬಹುದು.
4. ಹಲವಾರು ಇನ್ಶೂರೆನ್ಸ್ ಆಯ್ಕೆಗಳು
ಟಾಟಾ ಸಫಾರಿಗಾಗಿ ಡಿಜಿಟ್‌ನ ಕಾರ್ ಇನ್ಶೂರೆನ್ಸ್ ನಿಮಗೆ ಈ ಕೆಳಗಿನ ವಿಧಗಳಿಂದ ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ:
- ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ಲ್ಯಾನ್: ನೀವು ಈ ಟಾಟಾ ಸಫಾರಿ ಇನ್ಶೂರೆನ್ಸ್ ಅನ್ನು ಡಿಜಿಟ್‌ನಿಂದ ಪಡೆಯಬಹುದು ಮತ್ತು ಥರ್ಡ್ ಪಾರ್ಟಿ ಲಯಬಿಲಿಟಿಗಳಿಗೆ ಕವರೇಜನ್ನು ಪಡೆಯಬಹುದು. ನಿಮ್ಮ ಟಾಟಾ ಕಾರ್ ಹಾಗೂ ಥರ್ಡ್ ಪಾರ್ಟಿ ವ್ಯಕ್ತಿ, ವಾಹನ ಅಥವಾ ಪ್ರಾಪರ್ಟಿಯನ್ನು ಒಳಗೊಂಡ ಅಪಘಾತವು, ಆ ನಂತರದಲ್ಲಿ ಉಂಟಾಗುವ ಹಾನಿಗಳ ವಿಪರೀತ ರಿಪೇರಿ ವೆಚ್ಚಗಳಿಗೆ ಕಾರಣವಾಗಬಹುದು. ಹೀಗಾಗಿ, ಈ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸುವ ಮೂಲಕ ನೀವು ನಿಮ್ಮ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು.
- ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪ್ಲ್ಯಾನ್: ನಿಮ್ಮ ಟಾಟಾ ಕಾರಿನ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪ್ಲ್ಯಾನ್ ಇದು ಥರ್ಡ್ ಪಾರ್ಟಿ ಮತ್ತು ಓನ್ ಕಾರ್ ಡ್ಯಾಮೇಜ್ ಎರಡನ್ನೂ ಕವರ್ ಮಾಡುತ್ತದೆ. ನಿಮ್ಮ ಟಾಟಾ ಕಾರ್ ಅಪಘಾತಕ್ಕೀಡಾಗಬಹುದು, ಇದರ ಪರಿಣಾಮವಾಗಿ ಹೆಚ್ಚಿನ ಹಾನಿಗಳು ಉಂಟಾಗಬಹುದು ಮತ್ತು ಅಂತಹ ಹಾನಿಗಳನ್ನು ರಿಪೇರಿ ಮಾಡಿಸುವುದು ನಿಮಗೆ ಹೊರೆಯಾಗಬಹುದು. ಆದ್ದರಿಂದ, ಭಾರೀ ದುರಸ್ತಿ ವೆಚ್ಚಗಳನ್ನು ಭರಿಸುವುದಕ್ಕಿಂತ, ಒಂದು ಕಾಂಪ್ರೆಹೆನ್ಸಿವ್ ಪ್ಲ್ಯಾನ್‌ಗಾಗಿ ಕೈಗೆಟುಕುವ ಟಾಟಾ ಸಫಾರಿ ಇನ್ಶೂರೆನ್ಸ್ ಬೆಲೆಯನ್ನು ಪಾವತಿಸುವುದು ನಿಜಕ್ಕೂ ಬುದ್ಧಿವಂತರ ಲಕ್ಷಣವಾಗಿದೆ.
5. ಸಾಕಷ್ಟು ಆ್ಯಡ್-ಆನ್ ಪಾಲಿಸಿಗಳು
ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪ್ಲ್ಯಾನ್ ನಿಮ್ಮ ಟಾಟಾ ಕಾರಿಗೆ ಸಂಪೂರ್ಣ ರಕ್ಷಣೆಯನ್ನು ಒದಗಿಸುವುದಿಲ್ಲ. ಈ ನಿಟ್ಟಿನಲ್ಲಿ, ನೀವು ಹೆಚ್ಚುವರಿ ಶುಲ್ಕಗಳ ವಿರುದ್ಧ ಡಿಜಿಟ್‌ನ ಆ್ಯಡ್-ಆನ್ ಪ್ರಯೋಜನಗಳನ್ನು ಪಡೆಯಲು ಬಯಸಬಹುದು. ಟಾಟಾ ಸಫಾರಿ ಇನ್ಶೂರೆನ್ಸ್ ವೆಚ್ಚವನ್ನು ಹೆಚ್ಚಿಸುವ ಮೂಲಕ ನಿಮ್ಮ ಇನ್ಶೂರೆನ್ಸ್ ಬೇಸ್ ಪ್ಲ್ಯಾನ್‌ಗಿಂತಲೂ ಹೆಚ್ಚಿನ ಕೆಲವು ಆ್ಯಡ್-ಆನ್ ಕವರ್‌ಗಳನ್ನು ನೀವು ಸೇರಿಸಬಹುದು. ಕೆಲವು ಆ್ಯಡ್-ಆನ್ ಪಾಲಿಸಿಗಳೆಂದರೆ ಕನ್ಸ್ಯೂಮೆಬಲ್ ಕವರ್, ರಿಟರ್ನ್ ಟು ಇನ್‌ವಾಯ್ಸ್ ಕವರ್, ಇಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್ ಕವರ್, ರೋಡ್‌ಸೈಡ್ ಅಸಿಸ್ಟೆನ್ಸ್ ಇತ್ಯಾದಿ.
6. ಡೋರ್‌ಸ್ಟೆಪ್ ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯ
ಡಿಜಿಟ್‌ನಿಂದ ಕಾಂಪ್ರೆಹೆನ್ಸಿವ್ ಟಾಟಾ ಸಫಾರಿ ಇನ್ಶೂರೆನ್ಸ್ ರಿನೀವಲ್ ಅನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ, ನಿಮ್ಮ ಟಾಟಾ ಕಾರಿನ ಹಾನಿಗೊಳಗಾದ ಭಾಗಗಳಿಗೆ ಅನುಕೂಲಕರವಾದ ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯವನ್ನು ನೀವು ಪಡೆಯಬಹುದು. ಈ ಸೌಲಭ್ಯವು, ನೀವು ನಿಮ್ಮ ಮನೆಯಿಂದಲೇ ಸೂಕ್ತ ರಿಪೇರಿ ಸರ್ವೀಸ್‌ಗಳನ್ನು ಪಡೆಯಲು ನಿಮ್ಮನ್ನು ಅನುಮತಿಸುತ್ತದೆ.
7. ಐಡಿವಿ (IDV) ಕಸ್ಟಮೈಸೇಶನ್
ಟಾಟಾ ಸಫಾರಿ ಇನ್ಶೂರೆನ್ಸ್ ರಿನೀವಲ್‌ನ ಬೆಲೆಯು, ನಿಮ್ಮ ಕಾರಿನ 'ಇನ್ಸೂರೆನ್ಸ್‌ನ ಘೋಷಿತ ಮೌಲ್ಯ'ವನ್ನು (ಐಡಿವಿ) ಅವಲಂಬಿಸಿರುತ್ತದೆ. ಈ ಮೌಲ್ಯದ ಆಧಾರದ ಮೇಲೆ ಕಾರು ಕಳ್ಳತನ ಅಥವಾ ದುರಸ್ತಿಗೆ ಮೀರಿದ ಹಾನಿಯಾದಲ್ಲಿ, ಇನ್ಶೂರೆನ್ಸ್ ಕಂಪನಿಯು ನಿಮಗೆ ರಿಟರ್ನ್ಸ್ ನೀಡುತ್ತದೆ. ಡಿಜಿಟ್‌ನಂತಹ ಇನ್ಶೂರೆನ್ಸ್ ಕಂಪನಿಯು ನಿಮ್ಮ ಪ್ರಯೋಜನಗಳನ್ನು ಗರಿಷ್ಠಗೊಳಿಸಲು ನಿಮ್ಮ ಕಾರಿನ ಐಡಿವಿ ಅನ್ನು ಕಸ್ಟಮೈಸ್ ಮಾಡುವ ಆಯ್ಕೆಯನ್ನು ಸ್ವತಃ ನಿಮಗೇ ನೀಡುತ್ತದೆ.
8. 24x7 ಕಸ್ಟಮರ್ ಸರ್ವೀಸ್
ನಿಮ್ಮ ಟಾಟಾ ಸಫಾರಿ ಇನ್ಶೂರೆನ್ಸ್ ಪ್ಲ್ಯಾನ್‌ಗೆ ಸಂಬಂಧಿಸಿದ ಪ್ರಶ್ನೆ-ಸಂದೇಹಗಳಿಗೆ, ನೀವು ಡಿಜಿಟ್‌ನ ಕ್ರಿಯಾಶೀಲ ಕಸ್ಟಮರ್ ಸಪೋರ್ಟ್ ಅನ್ನು ಸಂಪರ್ಕಿಸಬಹುದು. ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ ಅವರು ನಿಮ್ಮ ಸೇವೆಗಾಗಿ 24x7 ಲಭ್ಯವಿರುತ್ತಾರೆ.
ಇದಲ್ಲದೆ, ಡಿಜಿಟ್‌ನಿಂದ ಅಧಿಕ ಡಿಡಕ್ಟಿಬಲ್ ಪ್ಲ್ಯಾನ್ ಅನ್ನು ಖರೀದಿಸುವ ಮೂಲಕ, ನಿಮ್ಮ ಟಾಟಾ ಸಫಾರಿ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ನೀವು ಕಡಿಮೆ ಮಾಡಬಹುದು.
ಆದಾಗ್ಯೂ, ನಿಮ್ಮ ಇನ್ಶೂರೆನ್ಸ್ ಪ್ಲ್ಯಾನ್‌ನ ವಿರುದ್ಧ ನೀವು ಕಡಿಮೆ ಕ್ಲೈಮ್‌ಗಳನ್ನು ಮಾಡಲು ಬಯಸಿದರೆ, ಈ ಪ್ಲ್ಯಾನ್ ಒಂದು ಪ್ರ್ಯಾಕ್ಟಿಕಲ್ ಆಯ್ಕೆಯಾಗಬಹುದು.
ಟಾಟಾ ಸಫಾರಿಗಾಗಿ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯವಾಗಿದೆ?
ಸುರಕ್ಷತೆ ಮತ್ತು ರಕ್ಷಣೆ ಎಲ್ಲದಕ್ಕಿಂತ ಮೊದಲು ಬರುತ್ತದೆ. ಮೊದಲನೆಯದಾಗಿ, ಪ್ರತಿಯೊಬ್ಬ ಕಾರ್ ಮಾಲೀಕರು ತಮ್ಮ ವಾಹನಕ್ಕಾಗಿ ಇನ್ಶೂರೆನ್ಸ್ ಪಡೆದುಕೊಳ್ಳುವುದು ಕಾನೂನಿನ ಪ್ರಕಾರ ಕಡ್ಡಾಯವಾಗಿದೆ ಇಲ್ಲದಿದ್ದರೆ ಅವನು/ಅವಳು ಭಾರಿ ದಂಡ ಮತ್ತು ಪೆನಲ್ಟಿಯನ್ನು ಎದುರಿಸಲು ಸಿದ್ಧರಾಗಿರಬೇಕು. ಎರಡನೆಯದಾಗಿ, ಕಾರ್ ಇನ್ಶೂರೆನ್ಸ್ ನಿಮ್ಮನ್ನು ಮತ್ತು ನಿಮ್ಮ ಜೇಬನ್ನು ದುರದೃಷ್ಟಕರ/ಅನಿರೀಕ್ಷಿತ ಘಟನೆಗಳಿಂದ ರಕ್ಷಿಸುತ್ತದೆ.
- ಹಣಕಾಸಿನ ಹೊಣೆಗಾರಿಕೆಗಳಿಂದ ರಕ್ಷಿಸಿ: ನಿಮ್ಮ ಟಾಟಾ ಸಫಾರಿ ಕಾರ್ ಎಷ್ಟೇ ಕಠಿಣ ಅಥವಾ ಶಕ್ತಿಶಾಲಿಯಾಗಿದ್ದರೂ ಸಹ, ಅನಿರೀಕ್ಷಿತ/ಹಠಾತ್ ನೈಸರ್ಗಿಕ ವಿಕೋಪ, ಹವಾಮಾನ/ ಪ್ರಕೃತಿ, ಅಪಘಾತ, ಬೆಂಕಿ ಅಥವಾ ಕಳ್ಳತನದ ಮುಂದೆ ಅದು ದುರ್ಬಲವಾಗಬಹುದು. ಕಾರ್ ಇನ್ಶೂರೆನ್ಸ್ ಅಂತಹ ಅನಿರೀಕ್ಷಿತ ವೆಚ್ಚಗಳಿಂದ ನಿಮ್ಮನ್ನು ಉಳಿಸಿ, ನಿಮ್ಮ ನಿಜವಾದ ಸ್ನೇಹಿತನಾಗುತ್ತಾನೆ.
ಈಗ ನಿಮ್ಮ ತಪ್ಪಿನಿಂದ ನಿಮ್ಮ ಕಾರಿಗೆ ಹಾನಿಯಾಗಿದ್ದರೆ, ಅದು ಕಡಿಮೆ ನೋವುಂಟುಮಾಡುತ್ತದೆ ಮತ್ತು ನೀವು ಆ ವೆಚ್ಚವನ್ನು ನಿಮ್ಮ ಜೇಬಿನಿಂದ ಭರಿಸಬಹುದು. ಆದರೆ ಅದು ನಿಮ್ಮೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲದಿದ್ದರೆ, ಅದು ನಿಮ್ಮನ್ನು ಹೆಚ್ಚು ಮಾಡುತ್ತದೆ ಮತ್ತು ಇದನ್ನು ನೀವು ತಪ್ಪಿಸಬಹುದು.
- ಕಾನೂನಾತ್ಮಕವಾದ ಕಂಪ್ಲೈಂಟ್: ಮೋಟಾರ್ ವೆಹಿಕಲ್ ಆ್ಯಕ್ಟ್ ಪ್ರಕಾರ, ನಿಮ್ಮ ವಾಹನಕ್ಕಾಗಿ ಇನ್ಶೂರೆನ್ಸ್ ಅನ್ನು ಪಡೆಯುವುದು ಕಾನೂನುಬದ್ಧ ಅಗತ್ಯವಾಗಿದೆ. ಇದು ಇಲ್ಲದಿರುವುದು ಶಿಕ್ಷಾರ್ಹ ಅಪರಾಧವಾಗಿದೆ. ವೆಹಿಕಲ್ ಇನ್ಶೂರೆನ್ಸ್ ಇಲ್ಲದೆ ನಿಮ್ಮ ಕಾರನ್ನು ಡ್ರೈವ್ ಮಾಡುವುದು ಕಾನೂನುಬಾಹಿರವಾಗಿದೆ. ಇನ್ಶೂರೆನ್ಸ್ ಇಲ್ಲದೆ ವಾಹನ ಚಲಾಯಿಸುವವರಿಗೆ ವಿಧಿಸುವ ಪ್ರಸ್ತುತ ದಂಡ ₹2000 ಆಗಿದೆ ಮತ್ತು ಬಹುಶಃ ಜೈಲು ಶಿಕ್ಷೆಯನ್ನು ಸಹ ವಿಧಿಸಬಹುದು. ಆದ್ದರಿಂದ ನೀವು ಥ್ರಿಲ್-ಬಯಸುವವರಾಗಿದ್ದರೂ ಸಹ, ಇನ್ಶೂರೆನ್ಸ್ ಪಡೆಯದಿರುವಂತೆ ನಿಮಗೆ ಸಲಹೆಯನ್ನು ನೀಡುವುದಿಲ್ಲ.
- ಥರ್ಡ್-ಪಾರ್ಟಿ ಲಯಬಿಲಿಟಿಯನ್ನು ಕವರ್ ಮಾಡುತ್ತದೆ: ಅಪಘಾತದಂತಹ ದುರದೃಷ್ಟಕರ ಘಟನೆಯಲ್ಲಿ, ಕಾರ್ ಇನ್ಶೂರೆನ್ಸ್ ಪಾಲಿಸಿಯು ಥರ್ಡ್ ಪಾರ್ಟಿ ನಷ್ಟವನ್ನು ಕವರ್ ಮಾಡುತ್ತದೆ. ಕೆಲವೊಮ್ಮೆ ಇಂತಹ ಸಂದರ್ಭಗಳಲ್ಲಿ, ಹಾನಿಗಳು ದೊಡ್ಡದಾಗಿರುತ್ತವೆ ಮತ್ತು ಸರಿಪಡಿಸದಷ್ಟು ವೆಚ್ಚದಾಯಕವಾಗಿರುತ್ತವೆ ಹಾಗೂ ಇದು ಬಹುಶಃ ವ್ಯಕ್ತಿಯೊಬ್ಬನ ಪ್ರಸ್ತುತ ಹಣಕಾಸಿನ ಸಾಮರ್ಥ್ಯವನ್ನು ಮೀರಿರುತ್ತದೆ. ಈ ಸಮಯದಲ್ಲಿಯೇ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಮುಖ್ಯ ಪಾತ್ರವನ್ನು ವಹಿಸುತ್ತದೆ. ಇದು ಹೆಚ್ಚಿನ ಹಣಕಾಸಿನ ನಷ್ಟವನ್ನು ನೋಡಿಕೊಳ್ಳುತ್ತದೆ ಮತ್ತು ನಷ್ಟವನ್ನು ಅನುಭವಿಸಿದ ಪಾರ್ಟಿಗೆ ರಕ್ಷಕನಾಗಿ ನಿಲ್ಲುತ್ತದೆ.
- ಕಾಂಪ್ರೆಹೆನ್ಸಿವ್ ಕವರ್‌ನೊಂದಿಗೆ ಹೆಚ್ಚುವರಿ ರಕ್ಷಣೆ: ಈ ರೀತಿಯ ಕವರ್ ಯಾವಾಗಲೂ ಉತ್ತಮವಾಗಿರುತ್ತದೆ ಏಕೆಂದರೆ ಇದು ಕೇವಲ ಇತರ ಪಾರ್ಟಿಯನ್ನು ಮಾತ್ರವಲ್ಲದೆ ನಿಮಗೂ ಮತ್ತು ನಿಮ್ಮ ಟಾಟಾ ಸಫಾರಿ ಕಾರಿಗೂ ರಕ್ಷಣಾತ್ಮಕ ಕವಚವಾಗಿ ಕೆಲಸ ಮಾಡುತ್ತದೆ. ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಸಂಪೂರ್ಣ ಮನಃಶಾಂತಿಯನ್ನು ನೀಡುತ್ತದೆ, ಏಕೆಂದರೆ ಇದು ಉಂಟಾದ ನಷ್ಟವನ್ನು ನೋಡಿಕೊಳ್ಳುತ್ತದೆ ಮತ್ತು ವಾಹನಕ್ಕೆ ಉತ್ತಮ ಕವರೇಜನ್ನು ನೀಡುತ್ತದೆ.
ನೀವು ಕಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಅನ್ನು ಬಳಸಿಕೊಂಡು ಪ್ರೀಮಿಯಂ ಅನ್ನು ಕ್ಯಾಲ್ಕುಲೇಟ್ ಮಾಡಬಹುದು ಮತ್ತು ಮಾರ್ಕೆಟ್‌ನಲ್ಲಿ ಲಭ್ಯವಿರುವ ಅನೇಕ ಆ್ಯಡ್-ಆನ್‌ಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು ಹಾಗೂ ನಿಮಗೆ ಮತ್ತು ನಿಮ್ಮ ಜೇಬಿಗೆ ಸೂಕ್ತವಾದ ಪಾಲಿಸಿಯನ್ನು ಆಯ್ಕೆಮಾಡಿ ಮತ್ತು ಕಸ್ಟಮೈಸ್ ಮಾಡಬಹುದು. ಈ ವಿಧವನ್ನು ಆಯ್ಕೆಮಾಡಲು ಯಾವಾಗಲೂ ಸಲಹೆ ನೀಡಲಾಗುತ್ತದೆ; ಇದನ್ನು ನಿಮ್ಮ ಟಾಟಾ ಸಫಾರಿಗೆ ಹೆಚ್ಚುವರಿ ಇನ್ಶೂರೆನ್ಸ್ ಪಾಲಿಸಿಯಾಗಿ ತೆಗೆದುಕೊಳ್ಳಬಹುದು.
ಟಾಟಾ ಸಫಾರಿ ಬಗ್ಗೆ ಇನ್ನಷ್ಟು ತಿಳಿಯಿರಿ
ಟಾಟಾ ಸಫಾರಿಯನ್ನು, ನಮ್ಮದೇ ದೇಶದ ಆಟೋಮೊಬೈಲ್ 'ಟಾಟಾ ಮೋಟಾರ್ಸ್ ಲಿಮಿಟೆಡ್' 1998 ರಿಂದ ತಯಾರಿಸುತ್ತಿದೆ. 'ನಿಮ್ಮ ಜೀವನವನ್ನು ಮರುಪಡೆಯಿರಿ', 'ನಿಮ್ಮ ಸ್ವಂತ ದಾರಿಯನ್ನು ನಿರ್ಮಿಸಿ' ಎಂಬ ಆ್ಯಡ್ ಕ್ಯಾಂಪೇನ್‌ನೊಂದಿಗೆ, ಟಾಟಾ ಸಫಾರಿ ಭಾರತೀಯ ರಸ್ತೆಗಳನ್ನು ಸ್ಟಾರ್ಮ್‌ನಂತೆ ತನ್ನತ್ತ ಸೆಳೆದುಕೊಂಡಿತು. ಟಾಟಾ ಮೋಟಾರ್ಸ್ ಅದನ್ನು ಅಕ್ಷರಶಃ ನೋಡಿತು ಹಾಗೂ ನಂತರದಲ್ಲಿ ಈ ಬೀಸ್ಟ್‌ನ ಹೊಸ ಸುಧಾರಿತ ವರ್ಷನ್ ಅನ್ನು ಟಾಟಾ ಸಫಾರಿ 'ಸ್ಟ್ರೋಮ್' ಎಂದು ಬಿಡುಗಡೆ ಮಾಡಿತು.
ಒರಿಜಿನಲ್ ಟಾಟಾ ಸಫಾರಿಯನ್ನು 1998 ರಲ್ಲಿ ಭಾರತದ ಮಾರ್ಕೆಟ್‌ನಲ್ಲಿ ಪರಿಚಯಿಸಲಾಯಿತು, ಸಮಯ ಕಳೆದಂತೆ ಅದಕ್ಕೆ ಹೆಚ್ಚಿನ ಆಕರ್ಷಣೆಯನ್ನು ನೀಡಲಾಯಿತು. ಟಾಟಾ ಮೋಟಾರ್‌ಗಳು ಒರಿಜಿನಲ್ ಡಿಸೈನ್‌ನಲ್ಲಿ ಕೆಲವು ಬದಲಾವಣೆಗಳನ್ನು ಮತ್ತು ಎನ್‌ಹಾನ್ಸ್‌ಮೆಂಟ್‌ಗಳನ್ನು ಮಾಡಿತು. ಅದು ಹೊಸ ವೇರಿಯಂಟ್‌ಗಳಿಗೆ ದಾರಿ ಮಾಡಿಕೊಟ್ಟಿತು ಮತ್ತು ಇದು 'ಟಾಟಾ ಸಫಾರಿ ಡಿಕೋರ್' ಮತ್ತು 'ಟಾಟಾ ಸಫಾರಿ ಸ್ಟಾರ್ಮ್' ಗೆ ಜನ್ಮ ನೀಡಿತು. ಈ ಮಿಡ್-ಸೈಜ್ ಎಸ್‌ಯುವಿ ಯಶಸ್ವಿಯಾಯಿತು ಮತ್ತು ಲಕ್ಷಾಂತರ ಹೃದಯಗಳನ್ನು ಗೆದ್ದಿತು. ಆದ್ದರಿಂದ ಇದು ಪ್ರಶಸ್ತಿಗಳನ್ನು ಗೆಲ್ಲುವುದರಲ್ಲಿ ಆಶ್ಚರ್ಯವೇನಿಲ್ಲ, ಸಫಾರಿ ಡಿಕೋರ್ ಕಾರ್, O&M ಗಾಗಿ 'ಓವರ್‌ಡ್ರೈವ್ ಕ್ಯಾಂಪೇನ್ ಆಫ್ ದಿ ಇಯರ್' ಪ್ರಶಸ್ತಿಯನ್ನು ಗೆದ್ದಿದೆ.
ಟಾಟಾ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ.
ನೀವು ಟಾಟಾ ಸಫಾರಿಯನ್ನು ಏಕೆ ಖರೀದಿಸಬೇಕು?
ಅಂದಹಾಗೆ, ಇದಕ್ಕೆ ಕಾರಣಗಳು ಹಲವಾರಿವೆ. ಇಲ್ಲಿ ಕೆಲವನ್ನು ಚರ್ಚಿಸೋಣ! ಟಾಟಾ ಮೋಟಾರ್ಸ್ ಪ್ರಕಾರ, ಸಫಾರಿ ಸ್ಟ್ರೋಮ್ (ಸಫಾರಿ ಕುಟುಂಬದ ಇತ್ತೀಚಿನ ವರ್ಷನ್) 'ಪ್ರಾಬಲ್ಯ ಹೊಂದಲು ಡಿಸೈನ್ ಮಾಡಲಾಗಿದೆ, ಪರ್ಫಾರ್ಮೆನ್ಸ್‌ಗಾಗಿ ಪರ್ಫೆಕ್ಟ್ ಆಗಿದೆ ಮತ್ತು ಟಾಟಾ ಮೋಟರ್‌ನ ಪ್ರಿನ್ಸಿಪಾಲ್‌ಗೆ ಅನುಗುಣವಾಗಿದೆ, ಈ ಕಾರು ತಾನು ನೀಡಿದ್ದ ಭರವಸೆಯನ್ನು ಉಳಿಸಿಕೊಂಡಿದೆ ಮತ್ತು ಇತಿಹಾಸವನ್ನು ನಿರ್ಮಿಸಿದೆ.
ಟಾಟಾ ಸಫಾರಿಯ ಲಾಂಗ್ ಡ್ರೈವ್‌ಗಳು ಅದರ ಸೂಪರ್ ಸ್ಪೇಶಿಯಸ್ ಇಂಟೀರಿಯರ್‌ಗಳು, ಆಂಪಲ್ ಹೆಡ್‌ರೂಮ್, ಬೃಹತ್ ಲೆಗ್‌ರೂಮ್‌ಗಳಿಂದಾಗಿ ಆರಾಮದಾಯಕವೆನಿಸುತ್ತವೆ. ಸ್ಟೈಲಿಶ್ ಇಂಟೀರಿಯರ್‌ಗಳು, ದಪ್ಪ ಮತ್ತು ಕಠಿಣವಾದ ಎಕ್ಸ್‌ಟೀರಿಯರ್‌ಗಳು. ಟಾಟಾ ಸಫಾರಿಯ ಇತ್ತೀಚಿನ ವೇರಿಯಂಟ್‌ನ (ಸ್ಟಾರ್ಮ್) ಕೆಲವು ಫೀಚರ್‌ಗಳೆಂದರೆ: ಅತ್ಯುತ್ತಮ ದರ್ಜೆಯ ಅಡ್ವಾನ್ಸ್ಡ್ 2.2L VARICOR 400 ಇಂಜಿನ್, ಸಿಕ್ಸ್-ಸ್ಪೀಡ್ ಗೇರ್‌ಬಾಕ್ಸ್, 63 ಲೀಟರ್ ಕೆಪ್ಯಾಸಿಟಿಯ ಬೃಹತ್ ಫ್ಯೂಯೆಲ್ ಟ್ಯಾಂಕ್. ಮೈಲೇಜ್ ಪ್ರತಿ ಲೀಟರ್‌ಗೆ 14.1km, ESOF, 200mm ಗ್ರೌಂಡ್ ಕ್ಲಿಯರೆನ್ಸ್, ಹೊಸ ಮತ್ತು ಸುಧಾರಿತ ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಸೈಡ್-ಇಂಪ್ಯಾಕ್ಟ್ ಬಾರ್‌ಗಳು, ಆಟೋಮ್ಯಾಟಿಕ್ ORVM ಗಳು, ಥ್ರೀ-ಪೊಸಿಷನ್ ಲುಂಬರ್ ಸಪೋರ್ಟ್‌ನೊಂದಿಗೆ ಆಯಾಸ-ಮುಕ್ತ ಡ್ರೈವ್, ಅತ್ಯುತ್ತಮ ಟರ್ನಿಂಗ್ ರೇಡಿಯಸ್, ರೂಫ್-ಮೌಂಟೆಡ್ ರಿಯರ್ ಎಸಿ ಮತ್ತು ಇನ್ನೂ ಅನೇಕ ಇವೆ.
11.09- 16.44 ಲಕ್ಷ ಬೆಲೆಯ (ಎಕ್ಸ್ ಶೋ ರೂಂ ಬೆಲೆ, ದೆಹಲಿ), ಇದು ಸ್ಟೈಲ್‌ನಲ್ಲಿ ಪ್ರತಿಯೊಂದು ಕ್ಷೇತ್ರವನ್ನು ವಶಪಡಿಸಿಕೊಳ್ಳುತ್ತದೆ ಎಂದು ಸಫಾರಿ ಹೇಳಿಕೊಂಡಿದೆ ಆದರೆ ವಿಶೇಷವಾಗಿ ಕಠಿಣವಾದ ಭೂಪ್ರದೇಶಗಳಲ್ಲಿ ರೈಡ್ ಮಾಡಲು ವಿನ್ಯಾಸಗೊಳಿಸಲಾಗಿದೆ, ಈ ಬೀಸ್ಟ್, 'ಸ್ಟಾರ್ಮ್' ಚೇಸರ್‌ಗಳು ಮತ್ತು ಥ್ರಿಲ್-ಸೀಕರ್‌ಗಳಿಗೆ ವರವಾಗಿದೆ ಎಂದು ಹೇಳುವುದರಲ್ಲಿ ತಪ್ಪೇನಿಲ್ಲ.
ಉನ್ನತ-ಮಧ್ಯಮ-ವರ್ಗದ ವಿಭಾಗಕ್ಕೆ ಸೇರಿದ ಕುಟುಂಬಗಳನ್ನು ಗುರಿಯಾಗಿರಿಸಿಕೊಂಡು, ಸಫಾರಿಯು ಯುವಕರು ಅಥವಾ ಹಿರಿಯರ ನಡುವೆ ಜನಪ್ರಿಯ ವಾಹನವಾಗಿದೆ.
ಟಾಟಾ ಸಫಾರಿ ವೇರಿಯಂಟ್‌ಗಳ ಬೆಲೆ ಪಟ್ಟಿ
ಟಾಟಾ ಸಫಾರಿ ವೇರಿಯಂಟ್‌ಗಳು | ಬೆಲೆ (ನವದೆಹಲಿಯಲ್ಲಿ, ಇತರ ನಗರಗಳಾದ್ಯಂತ ಬದಲಾಗಬಹುದು) |
---|---|
XE | ₹17.82 ಲಕ್ಷ |
XM | ₹19.61 ಲಕ್ಷ |
XMA AT | ₹21.12 ಲಕ್ಷ |
XT | ₹21.38 ಲಕ್ಷ |
XT ಪ್ಲಸ್ | ₹22.31 ಲಕ್ಷ |
XZ | ₹23.42 ಲಕ್ಷ |
XTA ಪ್ಲಸ್ | ₹23.82 ಲಕ್ಷ |
XZ ಪ್ಲಸ್ 6 Str | ₹24.22 ಲಕ್ಷ |
XZ Plus | ₹24.39 ಲಕ್ಷ |
XZ Plus 6 Str ಅಡ್ವೆಂಚರ್ ಎಡಿಷನ್ | ₹24.46 ಲಕ್ಷ |
XZ ಪ್ಲಸ್ ಅಡ್ವೆಂಚರ್ ಎಡಿಷನ್ | ₹24.64 ಲಕ್ಷ |
XZA AT | ₹24.93 ಲಕ್ಷ |
XZA ಪ್ಲಸ್ 6 Str | ₹25.73 ಲಕ್ಷ |
XZ ಪ್ಲಸ್ ಗೋಲ್ಡ್ | ₹25.85 ಲಕ್ಷ |
XZ Plus ಗೋಲ್ಡ್ 6 Str | ₹25.85 ಲಕ್ಷ |
XZA ಪ್ಲಸ್ AT | ₹25.91 ಲಕ್ಷ |
XZA ಪ್ಲಸ್ 6Str ಅಡ್ವೆಂಚರ್ ಎಡಿಷನ್ AT | ₹25.98 ಲಕ್ಷ |
XZA ಪ್ಲಸ್ ಅಡ್ವೆಂಚರ್ ಎಡಿಷನ್ AT | ₹26.15 ಲಕ್ಷ |
ZA Plus ಗೋಲ್ಡ್ 6 Str AT | ₹27.36 ಲಕ್ಷ |
XZA ಪ್ಲಸ್ ಗೋಲ್ಡ್ AT | ₹27.36 ಲಕ್ಷ |
[1]
ಪದೇ ಪದೇ ಕೇಳಲಾದ ಪ್ರಶ್ನೆಗಳು
ಥರ್ಡ್ ಪಾರ್ಟಿ ಟಾಟಾ ಸಫಾರಿ ಇನ್ಶೂರೆನ್ಸ್ ಪ್ಲ್ಯಾನ್‌ನಲ್ಲಿ ನಾನು ಆ್ಯಡ್-ಆನ್ ಪ್ರಯೋಜನಗಳನ್ನು ಪಡೆಯಬಹುದೇ?
ಇಲ್ಲ, ಹೆಚ್ಚುವರಿ ವೆಚ್ಚಗಳ ವಿರುದ್ಧ ಕಾಂಪ್ರೆಹೆನ್ಸಿವ್ ಪ್ಲ್ಯಾನ್‌ನ ಪಾಲಿಸಿಹೋಲ್ಡರ್‌ಗಳಿಗೆ ಆ್ಯಡ್-ಆನ್ ಪಾಲಿಸಿಗಳು ಲಭ್ಯವಿವೆ.
ನಾನು ಸೆಕೆಂಡ್ ಹ್ಯಾಂಡ್ ಟಾಟಾ ಸಫಾರಿ ಕಾರಿಗೆ ಇನ್ಶೂರೆನ್ಸ್ ಅನ್ನು ಪಡೆಯಬೇಕೇ?
ಸೆಕೆಂಡ್ ಹ್ಯಾಂಡ್ ಟಾಟಾ ಕಾರ್ ಈಗಾಗಲೇ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ, ಕಾರನ್ನು ಖರೀದಿಸಿದ ನಂತರ ನೀವದನ್ನು ನಿಮ್ಮ ಹೆಸರಿಗೆ ಬದಲಾಯಿಸಬಹುದು. ಇಲ್ಲದಿದ್ದರೆ, ಫೈನಾನ್ಸಿಯಲ್ ಮತ್ತು ಲೀಗಲ್ ಲಯಬಿಲಿಟಿಗಳನ್ನು ತಪ್ಪಿಸಲು ನಿಮ್ಮ ಕಾರಿಗೆ ವ್ಯಾಲಿಡ್ ಆಗಿರುವ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಖರೀದಿಸಬೇಕಾಗುತ್ತದೆ.