Third-party premium has changed from 1st June. Renew now
ರೆನಾಲ್ಟ್ ಕಿಗರ್ ಕಾರ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಿ/ರಿನೀವ್ ಮಾಡಿ
ಫ್ರೆಂಚ್ ಬಹುರಾಷ್ಟ್ರೀಯ ವಾಹನ ತಯಾರಕ ಕಂಪನಿ ರೆನಾಲ್ಟ್ ಫೆಬ್ರವರಿ 2021ರಲ್ಲಿ ಕಿಗರ್ ಹೆಸರಿನ ಬೆರಗುಗೊಳಿಸುವ ವಿನ್ಯಾಸದ ಎಸ್‌ಯುವಿ ಅನ್ನು ಬಿಡುಗಡೆ ಮಾಡಿದೆ. ಕಿಗರ್ ಕಾರ್ ಶಕ್ತಿ ಮತ್ತು ಅನುಕೂಲತೆಯ ಪರಿಪೂರ್ಣ ಸಮತೋಲನವನ್ನು ಹೊಂದಿದೆ. ಈ ಫ್ರೆಂಚ್ ಆಟೋಮೊಬೈಲ್ ತಯಾರಕರು ಕಿಗರ್ ಪ್ರಾರಂಭವಾದಾಗಿನಿಂದ ಸುಮಾರು 3226 ಕಿಗರ್ ಮಾಡೆಲ್ ಗಳನ್ನು ಮಾರಾಟ ಮಾಡಿದ್ದಾರೆ. ಅಂತಹ ಮಾರಾಟದ ಅಂಕಿಅಂಶಗಳ ಆಧಾರದಲ್ಲಿ, ಕಿಗರ್ ತನ್ನ ಸೆಗ್ಮೆಂಟ್ ನಲ್ಲಿ 5ನೇ ಅತಿಹೆಚ್ಚು ಮಾರಾಟವಾದ ಕಾರ್ ಎನಿಸಿಕೊಂಡಿದೆ.
ವಿಶ್ವ ದರ್ಜೆಯ ವೈಶಿಷ್ಟ್ಯಗಳನ್ನು ಹೊಂದಿದ್ದರೂ, ಕಿಗರ್ ಯಾವುದೇ ಇತರ ಕಾರಿನಂತೆ ಅಪಘಾತಗಳಿಗೆ ಗುರಿಯಾಗುತ್ತದೆ. ಆದ್ದರಿಂದ, ಈ ಮಾಡೆಲ್ ಅನ್ನು ಖರೀದಿಸಲು ಪ್ಲಾನ್ ಮಾಡುವ ವ್ಯಕ್ತಿಗಳು ಹಣಕಾಸಿನ ಒತ್ತಡವನ್ನು ತಪ್ಪಿಸಲು ರೆನಾಲ್ಟ್ ಕಿಗರ್ ಕಾರ್ ಇನ್ಶೂರೆನ್ಸ್ ಅನ್ನು ಪಡೆಯುವುದನ್ನು ಪರಿಗಣಿಸಬೇಕು.
ಅಲ್ಲದೆ, ಮೋಟಾರ್ ವೆಹಿಕಲ್ಸ್ ಆಕ್ಟ್ 1988, ಪ್ರತಿ ಭಾರತೀಯ ವಾಹನ ಮಾಲೀಕರಿಗೆ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಅನ್ನು ಕಡ್ಡಾಯಗೊಳಿಸಿದೆ. ಈ ಪಾಲಿಸಿಯ ಅಡಿಯಲ್ಲಿ, ಯಾವುದೇ ಥರ್ಡ್ ಪಾರ್ಟಿ ಡ್ಯಾಮೇಜ್ ಅಥವಾ ಗಾಯದ ವಿರುದ್ಧ ಆರ್ಥಿಕ ರಕ್ಷಣೆಯನ್ನು ಪಡೆಯಬಹುದು.
ಉತ್ತಮ ಆರ್ಥಿಕ ಕವರೇಜ್ ಗಾಗಿ ಕಾರ್ ಮಾಲೀಕರು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಸಹ ಪರಿಗಣಿಸಬಹುದು. ಕಾಂಪ್ರೆಹೆನ್ಸಿವ್ ಪಾಲಿಸಿಯು ಥರ್ಡ್ ಪಾರ್ಟಿ ಮತ್ತು ಓನ್ ಡ್ಯಾಮೇಜ್ ವೆಚ್ಚಗಳೆರಡನ್ನು ಕವರ್ ಮಾಡುತ್ತದೆ.
ಭಾರತದಲ್ಲಿ ಹಲವಾರು ಇನ್ಶೂರೆನ್ಸ್ ಕಂಪನಿಗಳು ರೆನಾಲ್ಟ್ ಕಿಗರ್‌ಗೆ ಕೈಗೆಟುಕುವ ಪ್ರೀಮಿಯಂನಲ್ಲಿ ತೊಂದರೆ-ಮುಕ್ತ ಕಾರ್ ಇನ್ಶೂರೆನ್ಸ್ ಅನ್ನು ನೀಡುತ್ತವೆ. ಡಿಜಿಟ್ ಅಂತಹ ಇನ್ಶೂರೆನ್ಸ್ ಪೂರೈಕೆದಾರರಲ್ಲಿ ಒಂದಾಗಿದೆ.
ಕೆಳಗಿನ ವಿಭಾಗದಲ್ಲಿ, ಕಿಗರ್‌ನ ಕೆಲವು ವೈಶಿಷ್ಟ್ಯಗಳು, ವಿವಿಧ ವೇರಿಯಂಟ್ ಗಳ ಬೆಲೆಗಳು, ಭಾರತದಲ್ಲಿ ಕಾರ್ ಇನ್ಶೂರೆನ್ಸ್ ನ ಪ್ರಾಮುಖ್ಯತೆ ಮತ್ತು ಡಿಜಿಟ್ ಒದಗಿಸುವ ಅನುಕೂಲಗಳ ಕುರಿತು ನೀವು ಸಂಕ್ಷಿಪ್ತ ವಿವರಗಳನ್ನು ಪಡೆಯಬಹುದು.
ರೆನಾಲ್ಟ್ ಕಿಗರ್ ಕಾರ್ ಇನ್ಶೂರೆನ್ಸ್ ಬೆಲೆ
ರಿಜಿಸ್ಟ್ರೇಷನ್ ದಿನಾಂಕ | ಪ್ರೀಮಿಯಂ (ಓನ್ ಡ್ಯಾಮೇಜ್ ಓನ್ಲಿ ಪಾಲಿಸಿಗೆ) |
---|---|
ಆಗಸ್ಟ್-2021 | 14,042 |
**ಡಿಸ್‌ಕ್ಲೈಮರ್ - ರೆನಾಲ್ಟ್ ಕಿಗರ್ 1.0 ಆರ್‌ಎಕ್ಸ್‌ಟಿ ಟರ್ಬೋ ಸಿವಿಟಿಗೆ ಮಾಡಲಾದ ಪ್ರೀಮಿಯಂ ಕ್ಯಾಲ್ಕುಲೇಷನ್ 999.0 ಜಿಎಸ್‌ಟಿ ಎಕ್ಸ್‌ಕ್ಲೂಡೆಡ್.
ನಗರ - ಬೆಂಗಳೂರು, ವೆಹಿಕಲ್ ರಿಜಿಸ್ಟ್ರೇಷನ್ ತಿಂಗಳು - ಅಕ್ಟೋಬರ್, ಎನ್‌ಸಿಬಿ- 0%, ಯಾವುದೇ ಆ್ಯಡ್-ಆನ್‌ಗಳಿಲ್ಲ, ಪಾಲಿಸಿ ಎಕ್ಸ್ಪೈರ್ಡ್ ಆಗಿಲ್ಲ & ಕಡಿಮೆ ಐಡಿವಿ ಲಭ್ಯವಿದೆ. ಪ್ರೀಮಿಯಂ ಕ್ಯಾಲ್ಕುಲೇಷನ್ ಅನ್ನು ಅಕ್ಟೋಬರ್-2021ರಲ್ಲಿ ಮಾಡಲಾಗಿದೆ. ದಯವಿಟ್ಟು ನಿಮ್ಮ ವಾಹನದ ವಿವರಗಳನ್ನು ಮೇಲೆ ನಮೂದಿಸುವ ಮೂಲಕ ಅಂತಿಮ ಪ್ರೀಮಿಯಂ ಅನ್ನು ಚೆಕ್ ಮಾಡಿ.
ರೆನಾಲ್ಟ್ ಕಿಗರ್ ಕಾರ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗುತ್ತದೆ
ಡಿಜಿಟ್‌ನ ರೆನಾಲ್ಟ್ ಕಿಗರ್ ಇನ್ಶೂರೆನ್ಸ್ ಅನ್ನು ನೀವು ಯಾಕೆ ಖರೀದಿಸಬೇಕು?
ರೆನಾಲ್ಟ್ ಕಿಗರ್ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು
ಥರ್ಡ್ ಪಾರ್ಟಿ | ಕಾಂಪ್ರೆಹೆನ್ಸಿವ್ |
ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು |
|
ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು |
|
ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು |
|
ಥರ್ಡ್-ಪಾರ್ಟಿ ವೆಹಿಕಲ್‌ಗೆ ಉಂಟಾದ ಡ್ಯಾಮೇಜ್‌ಗಳು |
|
ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್‌ಗಳು |
|
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ |
|
ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ |
|
ನಿಮ್ಮ ಕಾರಿನ ಕಳ್ಳತನ |
|
ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
|
ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ |
|
ಕಸ್ಟಮೈಸ್ಡ್ ಆ್ಯಡ್-ಆನ್‌ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್ |
|
Get Quote | Get Quote |
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ
ಕ್ಲೈಮ್ ಫೈಲ್ ಮಾಡುವುದು ಹೇಗೆ?
ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!
ಹಂತ 1
1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್‌ಗಳನ್ನೂ ತುಂಬಬೇಕಾಗಿಲ್ಲ
ಹಂತ 2
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೇ ನಿಮ್ಮ ವಾಹನದ ಡ್ಯಾಮೇಜ್‌ಗಳನ್ನು ತಿಳಿಸಿರಿ.
ಹಂತ 3
ನಮ್ಮ ನೆಟ್‌ವರ್ಕ್ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ಅಥವಾ ರಿಇಂಬರ್ಸ್‌ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.
ಡಿಜಿಟ್‌ನ ರೆನಾಲ್ಟ್ ಕಿಗರ್ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಲು ಕಾರಣಗಳು?
ಮೋಟಾರ್ ವೆಹಿಕಲ್ಸ್ 2019 ಕಾನೂನಿನ ಹೊರತಾಗಿಯೂ, ಕಾರ್ ಇನ್ಶೂರೆನ್ಸ್ ಪಾಲಿಸಿಗಳು ಅವಿಭಾಜ್ಯ ಉತ್ಪನ್ನಗಳಾಗಿದ್ದು, ಪ್ರತಿಯೊಬ್ಬ ವಾಹನ ಮಾಲೀಕರು ತಪ್ಪದೆ ಹೊಂದಿರಬೇಕು. ಯಾವುದೇ ಕಾರ್ ಇನ್ಶೂರೆನ್ಸ್ ಕವರ್ ನಲ್ಲಿ ಡಿಜಿಟ್ ಕೊಡುಗೆಗಳು, ಕೆಲವು ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳ ವಿವರಣೆಯನ್ನು ಈ ಕೆಳಗೆ ನೀಡಲಾಗಿದೆ.
- ಆನ್‌ಲೈನ್ ಕ್ಲೈಮ್ ಪ್ರೊಸೆಸ್ - ಸಾಂಪ್ರದಾಯಿಕ ಇನ್ಶೂರೆನ್ಸ್ ಪ್ರೊಸೀಜರ್ ನಲ್ಲಿ ನಿಮ್ಮ ಕ್ಲೈಮ್ ಗಳನ್ನು ಇತ್ಯರ್ಥಗೊಳಿಸುವ ಮೊದಲು ಪ್ರತಿನಿಧಿಯಿಂದ ಭೌತಿಕ ತಪಾಸಣೆ ಒಳಗೊಂಡಿರುತ್ತದೆ. ಡಿಜಿಟ್ ಅಂತಹ ಸಮಯ ವ್ಯರ್ಥವಾಗುವ ಪ್ರೊಸೀಜರ್ ಗಳನ್ನು ತೆಗೆದುಹಾಕುತ್ತದೆ ಮತ್ತು ಅದರ ಎಲ್ಲಾ ಗ್ರಾಹಕರಿಗೆ ಉತ್ತಮ ವೇಗದ ಅನುಭವವನ್ನು ನೀಡುತ್ತದೆ. ಹೀಗಾಗಿ, ಇದು ತೊಂದರೆಗಳನ್ನು ದೂರ ಮಾಡಲು ಸ್ಮಾರ್ಟ್‌ಫೋನ್-ಎನೇಬಲ್ಡ್ ಸ್ವಯಂ ತಪಾಸಣೆ ಪ್ರೊಸೆಸ್ ಅನ್ನು ಒದಗಿಸುತ್ತದೆ.
- ನಿಮ್ಮ ಕಾರಿನ ಐಡಿವಿ(IDV) ಅಮೌಂಟ್ ನ ಕಸ್ಟಮೈಸೇಷನ್ - ವಾಹನದ ಎಕ್ಸ್-ಶೋರೂಂ ಬೆಲೆಯಿಂದ ಡೆಪ್ರಿಸಿಯೇಷನ್ ವ್ಯಾಲ್ಯೂ ಅನ್ನು ಡಿಡಕ್ಟ್ ಮಾಡಿದ ನಂತರ ಪ್ರತಿ ಕಾರ್ ಇನ್ಶೂರೆನ್ಸ್ ಪೂರೈಕೆದಾರರು ಐಡಿವಿ ಅಥವಾ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಅನ್ನು ಸೆಟ್ ಮಾಡುತ್ತಾರೆ. ತಮ್ಮ ರೆನಾಲ್ಟ್ ಕಿಗರ್ ಇನ್ಶೂರೆನ್ಸ್ ವೆಚ್ಚ ಅಥವಾ ಪ್ರೀಮಿಯಂ ಅನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸುವ ಮೂಲಕ ತಮ್ಮ ಐಡಿವಿ ಅಮೌಂಟ್ ಅನ್ನು ಕಸ್ಟಮೈಸ್ ಮಾಡಲು ಡಿಜಿಟ್ ತನ್ನ ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ. ಇದು ಕಳ್ಳತನ ಅಥವಾ ದುರಸ್ತಿಗೆ ಮೀರಿದ ಡ್ಯಾಮೇಜ್ ಸಂದರ್ಭದಲ್ಲಿ ಹೆಚ್ಚಿನ ಪರಿಹಾರಕ್ಕೆ ದಾರಿ ಮಾಡಿಕೊಡುತ್ತದೆ.
- ಆಕರ್ಷಕ ಕ್ಲೈಮ್ ಸೆಟಲ್‌ಮೆಂಟ್ ಅನುಪಾತ - ತ್ವರಿತ ಕ್ಲೈಮ್ ಸೆಟಲ್‌ಮೆಂಟ್ ಜೊತೆಗೆ, ಡಿಜಿಟ್ ತನ್ನ ಗ್ರಾಹಕರಿಗೆ ಅತ್ಯಂತ ಹೆಚ್ಚಿನ ಕ್ಲೈಮ್ ಸೆಟಲ್‌ಮೆಂಟ್ ಅನುಪಾತದ ಭರವಸೆ ನೀಡುತ್ತದೆ. ಅಲ್ಲದೆ, 100% ಗ್ರಾಹಕರ ತೃಪ್ತಿಯನ್ನು ಪೂರೈಸಲು ಗರಿಷ್ಠ ಸಂಖ್ಯೆಯ ಕ್ಲೈಮ್‌ಗಳನ್ನು ಒದಗಿಸುವುದನ್ನು ಡಿಜಿಟ್ ಖಚಿತಪಡಿಸುತ್ತದೆ.
- ಆಡ್-ಆನ್‌ಗಳ ವ್ಯಾಪಕ ಶ್ರೇಣಿ - ಕಾಂಪ್ರೆಹೆನ್ಸಿವ್ ರೆನಾಲ್ಟ್ ಕಿಗರ್ ಕಾರ್ ಇನ್ಶೂರೆನ್ಸ್ ಪಾಲಿಸಿಹೋಲ್ಡರ್ ಗಳು ಸಂಪೂರ್ಣ ಕವರೇಜ್ ಅನ್ನು ಆನಂದಿಸಬಹುದು. ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಕಸ್ಟಮೈಸ್ ಮಾಡಲು ಡಿಜಿಟ್ ಏಳು ಹೆಚ್ಚುವರಿ ಕವರ್‌ಗಳನ್ನು ನೀಡುತ್ತದೆ. ನೀವು ಅವುಗಳನ್ನು ನಿಮ್ಮ ಕಿಗರ್ ಇನ್ಶೂರೆನ್ಸ್ ಗೆ ಸೇರಿಸಲು ಬಯಸಿದರೆ, ನಿಮ್ಮ ಪ್ರೀಮಿಯಂ ಮೊತ್ತವನ್ನು ನಾಮಮಾತ್ರವಾಗಿ ಹೆಚ್ಚಿಸುವ ಮೂಲಕ ನೀವು ಹಾಗೆ ಮಾಡಬಹುದು. ಈ ಆಡ್-ಆನ್‌ಗಳಲ್ಲಿ ಕೆಲವು ಇಲ್ಲವೆ-
- ನೆಟ್‌ವರ್ಕ್ ಗ್ಯಾರೇಜ್‌ಗಳ ಸುಲಭ ಲಭ್ಯತೆ - ಡಿಜಿಟ್ ನೆಟ್‌ವರ್ಕ್ ಗ್ಯಾರೇಜ್‌ಗಳು ದೇಶದ ಪ್ರತಿಯೊಂದು ಮೂಲೆಯಲ್ಲೂ ಇವೆ. ಇನ್ಶೂರರ್ 6000ಕ್ಕೂ ಹೆಚ್ಚು ನೆಟ್‌ವರ್ಕ್ ಗ್ಯಾರೇಜ್‌ಗಳೊಂದಿಗೆ ಸಹಯೋಗವನ್ನು ಹೊಂದಿದ್ದಾರೆ, ಅಲ್ಲಿ ನೀವು ನಿಮ್ಮ ಕಿಗರ್‌ಗಾಗಿ ಕ್ಯಾಶ್ ಲೆಸ್ ರಿಪೇರಿಗಳನ್ನು ಆಯ್ಕೆ ಮಾಡಬಹುದು.
- ಅನುಕೂಲಕರವಾದ ಪಿಕಪ್, ರಿಪೇರಿ ಮತ್ತು ಡ್ರಾಪ್ ಸೌಲಭ್ಯ - ನಿಮ್ಮ ಕಿಗರ್ ಅನ್ನು ಹತ್ತಿರದ ಡಿಜಿಟ್ ನೆಟ್‌ವರ್ಕ್ ಕಾರ್ ಗ್ಯಾರೇಜ್‌ಗಳೊಂದಕ್ಕೆ ಓಡಿಸಲು ಸಾಧ್ಯವಾಗದ ಸಂದರ್ಭಗಳನ್ನು ನೀವು ಎದುರಿಸಬಹುದು. ಅಂತಹ ಸಂದರ್ಭಗಳಲ್ಲಿ, ನಿಮ್ಮ ಕಾರು ವಿಮಾ ಪಾಲಿಸಿಯ ವಿರುದ್ಧ ನೀವು ಮನೆ ಬಾಗಿಲಿಗೆ ಪಿಕಪ್ ಮತ್ತು ಡ್ರಾಪ್ ಸೌಲಭ್ಯವನ್ನು ಪಡೆದುಕೊಳ್ಳಬೇಕು.
- ನಿರರ್ಗಳ ಕಸ್ಟಮರ್ ಕೇರ್ ಅಸಿಸ್ಟೆನ್ಸ್ - ರೆನಾಲ್ಟ್ ಕಿಗರ್ ಇನ್ಶೂರೆನ್ಸ್ ರಿನೀವಲ್ ಪ್ರೊಸೆಸ್ ಗೆ ಸಂಬಂಧಿಸಿದಂತೆ ನೀವು ಕೆಲವು ಅನುಮಾನಗಳನ್ನು ಪರಿಹರಿಸಿಕೊಳ್ಳಬೇಕಾಗಿದೆ ಎಂದು ಭಾವಿಸೋಣ. ರಾಷ್ಟ್ರೀಯ ರಜಾದಿನ ಅಥವಾ ದಿನದ ಯಾವುದೇ ಸಮಯದಲ್ಲಿ ಡಿಜಿಟ್ ಕಸ್ಟಮರ್ ಕೇರ್ ಅಧಿಕಾರಿಗಳು ನಿಮ್ಮ ಸೇವೆಯಲ್ಲಿ 24X7 ಲಭ್ಯವಿರುತ್ತಾರೆ.
ಆದ್ದರಿಂದ, ಈ ಎಲ್ಲಾ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳೊಂದಿಗೆ, ನಿಮ್ಮ ಕಿಗರ್‌ಗೆ ಡಿಜಿಟ್ ಸಂಪೂರ್ಣ ಕವರೇಜ್ ಅನ್ನು ಒದಗಿಸುತ್ತದೆ.
ಅದೇನೇ ಇದ್ದರೂ, ಹೆಚ್ಚಿನ ಡಿಡಕ್ಟಿಬಲ್ ಗಳನ್ನು ಆಯ್ಕೆ ಮಾಡುವ ಮೂಲಕ ಮತ್ತು ಸಣ್ಣ ಕ್ಲೈಮ್‌ಗಳನ್ನು ತಪ್ಪಿಸುವ ಮೂಲಕ ತಮ್ಮ ರೆನಾಲ್ಟ್ ಕಿಗರ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಕಡಿಮೆ ಮಾಡಲು ವಾಹನ ಮಾಲೀಕರು ಕೆಲವು ಇತರ ಸಲಹೆಗಳನ್ನು ಪರಿಗಣಿಸಬೇಕು. ಅಲ್ಲದೆ, ತಿಳುವಳಿಕೆಯುಳ್ಳ ಆಯ್ಕೆಯನ್ನು ಮಾಡಲು ಇತರ ಇನ್ಶೂರೆನ್ಸ್ ಪೂರೈಕೆದಾರರು ನೀಡುವ ಪ್ರೀಮಿಯಂ ಮೊತ್ತವನ್ನು ಯಾವಾಗಲೂ ಹೋಲಿಸಬೇಕು. ಇದಲ್ಲದೆ, ಕಡಿಮೆ ಪ್ರೀಮಿಯಂಗಳನ್ನು ಹೊಂದಿಸಲು ಪರಿಹಾರ ಪ್ರಯೋಜನಗಳಲ್ಲಿ ರಾಜಿ ಮಾಡಿಕೊಳ್ಳುವುದು ಒಂದು ಉತ್ತಮ ಕ್ರಮವಲ್ಲ. ಆದ್ದರಿಂದ, ಈ ಅಂಶದಲ್ಲಿ ಸ್ಪಷ್ಟತೆ ಪಡೆಯಲು ಡಿಜಿಟ್‌ನಂತಹ ಹೆಸರಾಂತ ಇನ್ಶೂರರ್ ರನ್ನು ಸಂಪರ್ಕಿಸಿ.
ರೆನಾಲ್ಟ್ ಕಿಗರ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯ?
ಪ್ರತಿ ಕಾರು ಮಾಲೀಕರು ಯಾವಾಗಲೂ ತಮ್ಮ ವಾಹನಗಳಿಗೆ ಡ್ಯಾಮೇಜ್ ಉಂಟಾಗಬಹುದಾದ ದುರದೃಷ್ಟಕರ ಸಾಧ್ಯತೆಗಳಿಗೆ ಸಿದ್ಧರಾಗಿರಬೇಕು. ಅಂತಹ ಸಂದರ್ಭಗಳಿಗೆ ಸಿದ್ಧವಾಗಿರಲು, ಡ್ಯಾಮೇಜ್ ವೆಚ್ಚವನ್ನು ಆರ್ಥಿಕವಾಗಿ ನಿರ್ವಹಿಸಲು ವ್ಯಾಲಿಡ್ ಆದ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿರ್ಣಾಯಕವಾಗಿದೆ.
ಅಲ್ಲದೆ, ರೆನಾಲ್ಟ್ ಕಿಗರ್ ಇನ್ಶೂರೆನ್ಸ್ ಬೆಲೆಯನ್ನು ಪಾವತಿಸುವುದು ಪೆನಲ್ಟಿಗಳಿಂದ ನಷ್ಟ ಉಂಟಾಗುವುದು ಮತ್ತು ಡ್ಯಾಮೇಜ್ ಗಳನ್ನು ಸರಿಪಡಿಸುವುದಕ್ಕಿಂತ ಉತ್ತಮ ಆಯ್ಕೆಯಾಗಿದೆ.
ಕಾರ್ ಇನ್ಶೂರೆನ್ಸ್ ಪಾಲಿಸಿಯು ನೀಡುವ ಕೆಲವು ಪ್ರಯೋಜನಗಳು ಇಲ್ಲಿವೆ -
- ಓನ್ ಕಾರಿಗೆ ಡ್ಯಾಮೇಜ್ ಗಳಿಂದ ರಕ್ಷಣೆ - ಸುಸಜ್ಜಿತ ಕಾರ್ ಇನ್ಶೂರೆನ್ಸ್ ಪಾಲಿಸಿಯು ಆಕಸ್ಮಿಕ ಡ್ಯಾಮೇಜ್ ಉಂಟಾದ ಸಂದರ್ಭದಲ್ಲಿ ಉಚಿತ ದುರಸ್ತಿ ಅಥವಾ ರಿ-ಇಂಬರ್ಸ್ ಮೆಂಟ್ ಅನ್ನು ನೀಡುತ್ತದೆ. ಆದಾಗ್ಯೂ, ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಕವರ್‌ಗಳು ಮಾತ್ರ ಈ ಸೌಲಭ್ಯವನ್ನು ಒದಗಿಸುತ್ತವೆ. ದುಬಾರಿ ರಿಪೇರಿ ಮತ್ತು ಬಿಡಿಭಾಗಗಳ ವೆಚ್ಚವನ್ನು ತಪ್ಪಿಸಲು ಇಂತಹ ಪಾಲಿಸಿಯನ್ನು ಆರಿಸಿಕೊಳ್ಳುವುದು ಉತ್ತಮ ನಿರ್ಧಾರವಾಗಿದೆ.
- ಥರ್ಡ್ ಪಾರ್ಟಿ ಲಯಬಿಲಿಟಿಗಳ ವಿರುದ್ಧ ಆರ್ಥಿಕ ಭದ್ರತೆ - ನೀವು ರೆನಾಲ್ಟ್ ಕಿಗರ್ ಅನ್ನು ಹೊಂದಿದ್ದೀರಿ ಎಂದು ಭಾವಿಸೋಣ. ಆದ್ದರಿಂದ, ಕಾನೂನಿನ ಪ್ರಕಾರ, ನಿಮ್ಮ ಕಾರ್ ಮಾಡೆಲ್‌ನಿಂದ ಉಂಟಾಗುವ ಥರ್ಡ್ ಪಾರ್ಟಿ ಡ್ಯಾಮೇಜ್ ಗಳಿಗೆ ನೀವು ಲಯಬಲ್ ಆಗಿರುತ್ತೀರಿ. ಅಂತಹ ಸಂದರ್ಭಗಳಲ್ಲಿ, ಥರ್ಡ್-ಪಾರ್ಟಿ ರೆನಾಲ್ಟ್ ಕಿಗರ್ ಕಾರ್ ಇನ್ಶೂರೆನ್ಸ್ ಯಾವುದೇ ಥರ್ಡ್ ಪಾರ್ಟಿ ಕ್ಲೈಮ್‌ಗಳ ವಿರುದ್ಧ ಅದು ವ್ಯಕ್ತಿಗೆ ಆಗಿರಲಿ ಅಥವಾ ಪ್ರಾಪರ್ಟಿಗೆ ಆಗಿರಲಿ ಹಣಕಾಸಿನ ಕವರೇಜ್ ಅನ್ನು ನೀಡುತ್ತದೆ,. ಜೊತೆಗೆ, ವಿಶ್ವಾಸಾರ್ಹ ಇನ್ಶೂರೆನ್ಸ್ ಪೂರೈಕೆದಾರರು ಅಪಘಾತದಲ್ಲಿ ಒಳಗೊಂಡಿರುವ ಲಿಟಿಗೇಷನ್ ಸಮಸ್ಯೆಗಳನ್ನು ನಿರ್ವಹಿಸಲು ಪಾಲಿಸಿಗಳ ಸೌಲಭ್ಯವನ್ನು ವಿಸ್ತರಿಸುತ್ತಾರೆ.
- ಹೆಚ್ಚುವರಿ ಕವರೇಜ್ - ಈ ಬೇಸಿಕ್ ರಕ್ಷಣೆಗಳನ್ನು ಹೊರತುಪಡಿಸಿ, ಬೆಂಕಿ, ಕಳ್ಳತನ, ನೈಸರ್ಗಿಕ ವಿಪತ್ತುಗಳು, ವಿಧ್ವಂಸಕತೆ ಮತ್ತು ಇತರ ಅಪಾಯಗಳಂತಹ ಅನಿವಾರ್ಯ ಸಂದರ್ಭಗಳಲ್ಲಿ ಡ್ಯಾಮೇಜ್ ಗಳ ವಿರುದ್ಧ ಕಾರ್ ಇನ್ಶೂರೆನ್ಸ್ ಪಾಲಿಸಿಯು ವಿಶಾಲವಾಗಿ ಹೆಚ್ಚುವರಿ ಕವರ್ ಆಗಿ ಕಾರ್ಯನಿರ್ವಹಿಸುತ್ತದೆ.
- ಕಾನೂನು ದೂರುಗಳ ವಿರುದ್ಧ ರಕ್ಷಣೆ - ವ್ಯಾಲಿಡ್ ಆದ ಇನ್ಶೂರೆನ್ಸ್ ರಕ್ಷಣೆಯಿಲ್ಲದೆ ನೀವು ನಿಮ್ಮ ಕಿಗರ್ ಅನ್ನು ಓಡಿಸಿದರೆ, ಗಂಭೀರ ಪರಿಣಾಮಗಳು ಉಂಟಾಗಬಹುದು. ಮೋಟಾರ್ ವೆಹಿಕಲ್ಸ್ 2019ರ ಪ್ರಕಾರ, ಪ್ರತಿಯೊಬ್ಬ ಭಾರತೀಯ ಕಾರು ಮಾಲೀಕರು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅನ್ನು ಹೊಂದಿರಬೇಕು. ಯಾವುದೇ ಉಲ್ಲಂಘನೆಯು ಮೊದಲ ಬಾರಿಯ ಅಪರಾಧಕ್ಕಾಗಿ ₹2000 ವರೆಗೆ ಭಾರೀ ದಂಡವನ್ನು ವಿಧಿಸುತ್ತದೆ. ಮತ್ತು ಅದೇ ಅಪರಾಧವನ್ನು ಪುನರಾವರ್ತಿಸಿದರೆ, ನೀವು ₹4000 ದಂಡವನ್ನು ಪಾವತಿಸಬೇಕಾಗುತ್ತದೆ. ಒಬ್ಬನು 3 ತಿಂಗಳವರೆಗಿನ ಶಿಕ್ಷೆಯನ್ನು ಅನುಭವಿಸಬೇಕಾಗಬಹುದು ಅಥವಾ ಅವನ ಡ್ರೈವಿಂಗ್ ಲೈಸೆನ್ಸ್ ಅನ್ನು ಅಮಾನತುಗೊಳಿಸಬಹುದು.
- ನೋ ಕ್ಲೈಮ್ ಬೋನಸ್ - ಪಾಲಿಸಿ ವರ್ಷದಲ್ಲಿ ನೀವು ಯಾವುದೇ ಕ್ಲೈಮ್ ಮಾಡದಿದ್ದರೆ, ನಿಮ್ಮ ರೆನಾಲ್ಟ್ ಕಿಗರ್ ಇನ್ಶೂರೆನ್ಸ್ ರಿನೀವಲ್ ಬೆಲೆಯಲ್ಲಿ ರಿಯಾಯಿತಿಗಳನ್ನು ಪಡೆಯಲು ನೀವು ಅರ್ಹರಾಗುತ್ತೀರಿ.
ಡಿಜಿಟ್ ನಂತಹ ಹೆಸರಾಂತ ಇನ್ಶೂರೆನ್ಸ್ ಪೂರೈಕೆದಾರರು ನಿಮ್ಮ ರೆನಾಲ್ಟ್ ಕಿಗರ್ ಕಾರ್ ಇನ್ಶೂರೆನ್ಸ್ ಅನ್ನು ರಿನೀವ್ ಮಾಡಲು ಅಥವಾ ಖರೀದಿಸಲು ವಿಶ್ವಾಸಾರ್ಹ ಆಯ್ಕೆಯಾಗಿದೆ. ಕಾನೂನು ಪರಿಣಾಮಗಳು ಮತ್ತು ಡ್ಯಾಮೇಜ್ ವೆಚ್ಚಗಳನ್ನು ತಪ್ಪಿಸಲು ನಿಮಗೆ ಸಹಾಯ ಮಾಡಲು ಇದು ಸಂಪೂರ್ಣ ಆರ್ಥಿಕ ರಕ್ಷಣೆಯನ್ನು ನೀಡುತ್ತದೆ.
ರೆನಾಲ್ಟ್ ಕಿಗರ್ ಕುರಿತು ಇನ್ನಷ್ಟು ತಿಳಿಯಿರಿ
ರೆನಾಲ್ಟ್ ನ ಸಬ್-ಫೋರ್ ಮೀಟರ್ ಎಸ್‌ಯುವಿ 5 ಟ್ರಿಮ್‌ಗಳಲ್ಲಿ 6 ವಿಭಿನ್ನ ಛಾಯೆಗಳಲ್ಲಿ ಬರುತ್ತದೆ, ಅವುಗಳೆಂದರೆ - ಆರ್‌ಎಕ್ಸ್‌ಇ, ಆರ್‌ಎಕ್ಸ್‌ಎಲ್, ಆರ್‌ಎಕ್ಸ್‌ಟಿ, ಆರ್‌ಎಕ್ಸ್‌ಟಿ ಆಪ್ಷನ್ ಮತ್ತು ಆರ್‌ಎಕ್ಸ್‌ಝಡ್. ಪ್ರತಿ ಡ್ರೈವ್ ಆರಾಮದಾಯಕವಾಗಿರಲು ಕಿಗರ್ ಹಲವಾರು ವೈಶಿಷ್ಟ್ಯಗಳೊಂದಿಗೆ ದೊರೆಯುತ್ತದೆ.
ಅದರ ಕೆಲವು ಉತ್ತಮ ದರ್ಜೆಯ ವೈಶಿಷ್ಟ್ಯಗಳೆಂದರೆ -
- 5-ಸೀಟರ್ ಕಿಗರ್ 1.0-ಲೀಟರ್ ಪೆಟ್ರೋಲ್ ಮತ್ತು 1.0-ಲೀಟರ್ ಟರ್ಬೊ-ಪೆಟ್ರೋಲ್ ಆಯ್ಕೆಗಳ ಎರಡು ಎಂಜಿನ್‌ಗಳನ್ನು ಹೊಂದಿದೆ. ಮೊದಲನೆಯದು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ ಆಟೋಮ್ಯಾಟಿಕ್/ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಬರುತ್ತದೆ. ಎರಡನೆಯದು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಮತ್ತು ಹೆಚ್ಚುವರಿ 5-ಸ್ಪೀಡ್ ಸಿವಿಟಿ ಅನ್ನು ಒಳಗೊಂಡಿದೆ.
- ಕಿಗರ್ ಅನ್ನು ಸಮಕಾಲೀನ ಜೀವನಶೈಲಿಗೆ ಪೂರಕವಾದ ವಿನ್ಯಾಸಗಳೊಂದಿಗೆ ರೂಪಿಸಲಾಗಿದೆ. ಉದಾಹರಣೆಗೆ, ಇದರ ವೈಶಿಷ್ಟ್ಯಗಳು ಹೀಗಿವೆ -
- ಕ್ರೋಮ್ ಫ್ರಂಟ್ ಗ್ರಿಲ್
- ಟ್ರೈ-ಆಕ್ಟಾ ಪ್ಯೂರ್ ವಿಷನ್ ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಡೇ ಆಂಡ್ ನೈಟ್ ಎಲ್ಇಡಿ ಡಿಆರ್‌ಎಲ್ ಗಳು
- ಶಾರ್ಕ್ ಫಿನ್ ಆಂಟೆನಾ ಮತ್ತು ರೇರ್ ಸ್ಪಾಯ್ಲರ್
- ಡೈಮಂಡ್ ಕಟ್ ಅಲಾಯ್ ವೀಲ್ಸ್ ಮತ್ತು ಇತ್ಯಾದಿ
- 100% ರಸ್ತೆ ಸುರಕ್ಷತೆಯನ್ನು ಒದಗಿಸಲು ನವೀನ ಸುರಕ್ಷತಾ ತಂತ್ರಜ್ಞಾನವನ್ನು ನೀಡಲು ರೆನಾಲ್ಟ್‌ಗಳು ಎಂದಿಗೂ ವಿಫಲವಾಗುವುದಿಲ್ಲ. ಹೀಗಾಗಿ, ಕಿಗರ್ 4 ಏರ್‌ಬ್ಯಾಗ್‌ಗಳು, ಎಬಿಎಸ್ ಮತ್ತು ಇಬಿಡಿ ಸಿಸ್ಟಮ್‌ಗಳು, ಮುಂಭಾಗದ ಪಾರ್ಕಿಂಗ್ ಸೆನ್ಸರ್, ರೇರ್ ಪಾರ್ಕಿಂಗ್ ಕ್ಯಾಮೆರಾ, ಐಸೋಫಿಕ್ಸ್ ಆಂಕರ್ ಪಾಯಿಂಟ್‌ಗಳು, ಏರ್ ಪ್ಯೂರಿಫೈಯರ್, ಸ್ಮಾರ್ಟ್ ಆಕ್ಸೆಸ್ ಕಾರ್ಡ್ ಮತ್ತು ಹಲವಾರು ಇತರ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
- ಕಿಗರ್ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದ್ದು, ಅದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಅಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜಿಂಗ್, ಕ್ರೂಸ್ ಕಂಟ್ರೋಲ್, ಡಿಜಿಟಲ್ ಡ್ರೈವರ್ ಡಿಸ್ ಪ್ಲೇ ಮತ್ತು ಇತರ ವೈಶಿಷ್ಟ್ಯಗಳಿಗೆ ಸಪೋರ್ಟ್ ಮಾಡುತ್ತದೆ.
ರೆನಾಲ್ಟ್ ಕಾರುಗಳು ಅವುಗಳ ಬಾಳಿಕೆಯಿಂದಾಗಿ ಜನಪ್ರಿಯವಾಗಿದ್ದರೂ, ಅವು ಡ್ಯಾಮೇಜ್ ಗೆ ಒಳಗಾಗುತ್ತವೆ. ಹೀಗಾಗಿ, ವಿಶ್ವಾಸಾರ್ಹ ಇನ್ಶೂರೆನ್ಸ್ ಪೂರೈಕೆದಾರರಿಂದ ಪಡೆಯುವ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಹಣಕಾಸಿನ ತೊಂದರೆಯನ್ನು ತಡೆಯಲು ಪರಿಗಣಿಸಬೇಕಾದ ನಿರ್ಣಾಯಕ ಅಂಶವಾಗಿದೆ.
ರೆನಾಲ್ಟ್ ಕಿಗರ್- ವೇರಿಯಂಟ್‌ಗಳು ಮತ್ತು ಎಕ್ಸ್ ಶೋರೂಂ ಬೆಲೆ
ವೇರಿಯಂಟ್‌ಗಳು | ಎಕ್ಸ್ ಶೋರೂಂ ಬೆಲೆ (ನಗರಗಳಿಗೆ ಅನುಗುಣವಾಗಿ ಬದಲಾಗಬಹುದು) | ||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಇ | ₹5.64 ಲಕ್ಷಗಳು | ||||||||||||||||||||||||||||||
ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಎಲ್ | ₹6.54 ಲಕ್ಷಗಳು | ||||||||||||||||||||||||||||||
ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಎಲ್ ಡಿಟಿ | ₹6.74 ಲಕ್ಷಗಳು | ||||||||||||||||||||||||||||||
ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಎಲ್ ಎಎಂಟಿ | ₹7.04 ಲಕ್ಷಗಳು | ||||||||||||||||||||||||||||||
ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಟಿ | ₹7.02 ಲಕ್ಷಗಳು | ||||||||||||||||||||||||||||||
ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಟಿ ಡಿಟಿ | ₹7.22 ಲಕ್ಷಗಳು | ||||||||||||||||||||||||||||||
ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಟಿ ಓಪಿಟಿ | ₹7.37 ಲಕ್ಷಗಳು | ||||||||||||||||||||||||||||||
ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಟಿ ಓಪಿಟಿ ಡಿಟಿ | ₹7.57 ಲಕ್ಷಗಳು | ||||||||||||||||||||||||||||||
ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಟಿ ಎಎಂಟಿ | ₹7.52 ಲಕ್ಷಗಳು | ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಟಿ ಎಎಂಟಿ ಡಿಟಿ | ₹7.72 ಲಕ್ಷಗಳು | ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಟಿ ಎಎಂಟಿ ಓಪಿಟಿ | ₹7.87 ಲಕ್ಷಗಳು | ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಟಿ | ₹7.91 ಲಕ್ಷಗಳು | ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಟಿ ಎಎಂಟಿ ಓಪಿಟಿ ಡಿಟಿ | ₹8.07 ಲಕ್ಷಗಳು | ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಟಿ ಡಿಟಿ | ₹8.11 ಲಕ್ಷಗಳು | ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಟಿ ಟರ್ಬೋ | ₹8.12 ಲಕ್ಷಗಳು | ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಟಿ ಟರ್ಬೋ ಡಿಟಿ | ₹8.32 ಲಕ್ಷಗಳು | ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಝಡ್ ಎಎಂಟಿ | ₹8.41 ಲಕ್ಷಗಳು | ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಝಡ್ ಎಎಂಟಿ ಡಿಟಿ | ₹8.61 ಲಕ್ಷಗಳು | ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಟಿ ಟರ್ಬೋ ಸಿವಿಟಿ | ₹9.00 ಲಕ್ಷಗಳು | ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಝಡ್ ಟರ್ಬೋ | ₹9.01 ಲಕ್ಷಗಳು | ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಟಿ ಟರ್ಬೋ ಸಿವಿಟಿ ಡಿಟಿ | ₹9.20 ಲಕ್ಷಗಳು | ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಝಡ್ ಟರ್ಬೋ ಡಿಟಿ | ₹9.21 ಲಕ್ಷಗಳು | ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಝಡ್ ಟರ್ಬೋ ಸಿವಿಟಿ | ₹9.89 ಲಕ್ಷಗಳು | ರೆನಾಲ್ಟ್ ಕಿಗರ್ ಆರ್‌ಎಕ್ಸ್‌ಝಡ್ ಟರ್ಬೋ ಸಿವಿಟಿ ಡಿಟಿ | ₹10.09 ಲಕ್ಷಗಳು |
ಭಾರತದಲ್ಲಿ ರೆನಾಲ್ಟ್ ಕಿಗರ್ ಕಾರ್ ಇನ್ಶೂರೆನ್ಸ್ ಕುರಿತು ಪದೇಪದೇ ಕೇಳಲಾದ ಪ್ರಶ್ನೆಗಳು
ರೆನಾಲ್ಟ್ ಕಿಗರ್ ಕಾರ್ ಇನ್ಶೂರೆನ್ಸ್ ಪಾಲಿಸಿಯ ಅವಧಿ ಎಷ್ಟು?
ಸಾಮಾನ್ಯವಾಗಿ, ಕಾರ್ ಇನ್ಶೂರೆನ್ಸ್ ಪಾಲಿಸಿಯು ಒಂದು ವರ್ಷದ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ನಿಗದಿತ ದಿನಾಂಕದ ಮೊದಲು ಪಾಲಿಸಿಯನ್ನು ರಿನೀವ್ ಮಾಡುವ ಅಗತ್ಯವಿದೆ.
ರೆನಾಲ್ಟ್ ಕಿಗರ್‌ಗಾಗಿ ನನ್ನ ಇನ್ಶೂರೆನ್ಸ್ ಪೂರೈಕೆದಾರರನ್ನು ನಾನು ಬದಲಾಯಿಸಿದರೆ ನನ್ನ ನೋ ಕ್ಲೈಮ್ ಬೋನಸ್ ಅನ್ನು ನಾನು ವರ್ಗಾಯಿಸಬಹುದೇ?
ಹೌದು, ರಿನೀವಲ್ ಮೇಲೆ ನಿಮ್ಮ ಕಾರ್ ಇನ್ಶೂರೆನ್ಸ್ ಪೂರೈಕೆದಾರರನ್ನು ನೀವು ಬದಲಾಯಿಸಿದರೆ, ನಿಮ್ಮ ಎನ್‌ಸಿಬಿ ಅನ್ನು ವರ್ಗಾಯಿಸಲು ನೀವು ಅರ್ಹರಾಗಿದ್ದೀರಿ. ಆದಾಗ್ಯೂ, ನಿಮ್ಮ ಪ್ರಸ್ತುತ ಇನ್ಶೂರರ್ ರಿಂದ ರಿನೀವಲ್ ಸೂಚನೆಯ ಮೂಲಕ ನೀವು ಎನ್‌ಸಿಬಿಗೆ ಬೆಂಬಲವಾಗಿ ದಾಖಲೆಗಳನ್ನು ಒದಗಿಸಬೇಕು. ಪರ್ಯಾಯವಾಗಿ, ಒರಿಜಿನಲ್ ಎಕ್ಸ್ಪೈರಿಂಗ್ ಪಾಲಿಸಿ ಮತ್ತು ಎಕ್ಸ್ಪೈರಿಂಗ್ ಪಾಲಿಸಿಯ ವಿರುದ್ಧ ಯಾವುದೇ ಕ್ಲೈಮ್ ಅನ್ನು ಮಾಡಿಲ್ಲ ಎಂದು ಹೇಳುವ ಪ್ರಮಾಣಪತ್ರವನ್ನು ಸಹ ಸಬ್ಮಿಟ್ ಮಾಡಬಹುದು.
ರೆನಾಲ್ಟ್ ಕಿಗರ್ ಕಾರ್ ಇನ್ಶೂರೆನ್ಸ್ ಕವರ್‌ಗಳ ಮೇಲೆ ಸರ್ವೀಸ್ ಟ್ಯಾಕ್ಸ್ ಅಪ್ಲಿಕೇಬಲ್ ಆಗುತ್ತದೆಯೇ?
ಹೌದು, ಯಾವುದೇ ಕಾರ್ ಇನ್ಶೂರೆನ್ಸ್ ಪಾಲಿಸಿಯ ಮೇಲೆ ಸರ್ವೀಸ್ ಟ್ಯಾಕ್ಸ್ ಅಪ್ಲಿಕೇಬಲ್ ಆಗುತ್ತದೆ.