ಎಸ್-ಪ್ರೆಸ್ಸೊ ಕಾರ್ ಇನ್ಶೂರೆನ್ಸ್

Get Instant Policy in Minutes*

Third-party premium has changed from 1st June. Renew now

ಮಾರುತಿ ಎಸ್-ಪ್ರೆಸ್ಸೊ ಕಾರ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಿ/ರಿನೀವ್ ಮಾಡಿ

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಭಾರತೀಯ ಆಟೋಮೊಬೈಲ್ ಕಂಪನಿಯಾಗಿದ್ದು, ವಿವಿಧ ಮಾಡೆಲುಗಳು ಮತ್ತು ಕಾರುಗಳನ್ನು ತಯಾರಿಸುತ್ತದೆ. ಸೆಪ್ಟೆಂಬರ್ 2019 ರಲ್ಲಿ ಪ್ರಾರಂಭವಾದಾಗಿನಿಂದ 75,000 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರು ಮಾಡೆಲ್ ಆಗಿ ಹೊರಹೊಮ್ಮಿದೆ.

ಒಬ್ಬರು ಮಾರುತಿ ಸುಜುಕಿ ಎಸ್-ಪ್ರೆಸ್ಸೋ ಕಾರು ಇನ್ಶೂರೆನ್ಸ್ ಪಾಲಿಸಿಯನ್ನು ಆರಿಸಿಕೊಳ್ಳಬೇಕು ಮತ್ತು ಕಾರ್ ಹಾನಿಗಳಿಂದ ಉಂಟಾಗುವ ಹಣಕಾಸಿನ ನಷ್ಟದ ಅಪಾಯಗಳನ್ನು ನಿವಾರಿಸಬೇಕು.

ಮೋಟಾರ್ ವೆಹಿಕಲ್ಸ್ ಆಕ್ಟ್ , 1988 ರ ಪ್ರಕಾರ, ಪ್ರತಿ ಕಾರು ಮಾಲೀಕರು ಥರ್ಡ್-ಪಾರ್ಟಿ ಡ್ಯಾಮೇಜುಗಳಿಂದ ಉಂಟಾಗುವ ವೆಚ್ಚಗಳನ್ನು ತಪ್ಪಿಸಲು ವ್ಯಾಲಿಡ್ ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು. ಹೆಚ್ಚಿನ ಕಾರು ಮಾಲೀಕರು ಸಾಮಾನ್ಯವಾಗಿ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಕವರ್ ಅನ್ನು ಆಯ್ಕೆ ಮಾಡಲು ಬಯಸುತ್ತಾರೆ. ಅಂತಹ ಪಾಲಿಸಿಯು ಓನ್ ಡ್ಯಾಮೇಜುಗಳು ಮತ್ತು ಥರ್ಡ್-ಪಾರ್ಟಿ ಡ್ಯಾಮೇಜ್ ಎರಡನ್ನೂ ಕವರ್ ಮಾಡುತ್ತದೆ.

ಏನೇ ಇರಲಿ, ಮಾರುತಿ ಸುಜುಕಿ ಎಸ್-ಪ್ರೆಸ್ಸೊಗಾಗಿ ಇನ್ಶೂರೆನ್ಸ್ ಅನ್ನು ರಿನೀವ್ ಮಾಡಲು ಅಥವಾ ಖರೀದಿಸಲು ಡಿಜಿಟ್‌ನಂತಹ ವಿಶ್ವಾಸಾರ್ಹ ಇನ್ಶೂರೆನ್ಸ್ ಪೂರೈಕೆದಾರರನ್ನು ಒಬ್ಬರು ಆರಿಸಿಕೊಳ್ಳಬೇಕು.

ಮಾರುತಿ ಎಸ್-ಪ್ರೆಸ್ಸೊ ಕಾರ್ ಇನ್ಶೂರೆನ್ಸ್ ಬೆಲೆ

ರಿಜಿಸ್ಟ್ರೇಷನ್ ದಿನಾಂಕ ಪ್ರೀಮಿಯಂ (ಓನ್ ಡ್ಯಾಮೇಜ್ ಓನ್ಲಿ ಪಾಲಿಸಿಗಾಗಿ ಮಾತ್ರ)
ಆಗಸ್ಟ್-2021 4,535
ಆಗಸ್ಟ್-2020 3,244
ಆಗಸ್ಟ್-2019 3,099

**ಡಿಸ್ಕ್ಲೈಮರ್ - ಮಾರುತಿ ಸುಜುಕಿ ಎಸ್-ಪ್ರೆಸ್ಸೊ VXi ಎಜಿಎಸ್ BSVI 998.0 ಗಾಗಿ ಪ್ರೀಮಿಯಂ ಕ್ಯಾಲ್ಕ್ಯುಲೇಷನ್ ಅನ್ನು ಮಾಡಲಾಗುತ್ತದೆ. ಜಿಎಸ್‌ಟಿ ಒಳಗೊಂಡಿಲ್ಲ.

ನಗರ - ಬೆಂಗಳೂರು, ವಾಹನ ರಿಜಿಸ್ಟ್ರೇಷನ್ ತಿಂಗಳು - ಆಗಸ್ಟ್, ಎನ್.ಸಿಬಿ. - 50%, ಯಾವುದೇ ಆ್ಯಡ್-ಆನ್‌ಗಳಿಲ್ಲ, ಪಾಲಿಸಿ ಅವಧಿ ಮುಗಿದಿಲ್ಲ, ಮತ್ತು ಐಡಿವಿ- ಕಡಿಮೆ ಲಭ್ಯವಿದೆ. ಪ್ರೀಮಿಯಂ ಕ್ಯಾಲ್ಕ್ಯುಲೇಷನ್ ಅನ್ನು ಸೆಪ್ಟೆಂಬರ್-2021 ರಲ್ಲಿ ಮಾಡಲಾಗುತ್ತದೆ. ಮೇಲೆ ನಿಮ್ಮ ವಾಹನದ ವಿವರಗಳನ್ನು ನಮೂದಿಸುವ ಮೂಲಕ ದಯವಿಟ್ಟು ಅಂತಿಮ ಪ್ರೀಮಿಯಂ ಅನ್ನು ಪರಿಶೀಲಿಸಿ.

ಮಾರುತಿ ಎಸ್-ಪ್ರೆಸ್ಸೊ ಕಾರ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ

ನೀವು ಡಿಜಿಟ್‌ನ ಮಾರುತಿ ಬಲೆನೊ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು

ಥರ್ಡ್-ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಥರ್ಡ್-ಪಾರ್ಟಿ ವೆಹಿಕಲ್‌ಗೆ ಉಂಟಾದ ಡ್ಯಾಮೇಜ್‌ಗಳು

×

ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್‌ಗಳು

×

ಪರ್ಸನಲ್ ಆ್ಯಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ

×

ನಿಮ್ಮ ಕಾರಿನ ಕಳ್ಳತನ

×

ಡೋರ್‌ಸ್ಟೆಪ್‌ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ

ಕ್ಲೈಮ್ ಅನ್ನು ಹೇಗೆ ಫೈಲ್ ಮಾಡುವುದು?

ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ, ನೀವು ಚಿಂತಾ-ಮುಕ್ತರಾಗಿ ಬದುಕುತ್ತೀರಿ! ಏಕೆಂದರೆ, ನಾವು ಕೇವಲ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.

ಹಂತ 1

1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್‌ಗಳನ್ನೂ ತುಂಬಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೇ ನಿಮ್ಮ ವಾಹನದ ಡ್ಯಾಮೇಜ್‌ಗಳನ್ನು ತಿಳಿಸಿರಿ.

ಹಂತ 3

ನಮ್ಮ ನೆಟ್‌ವರ್ಕ್‌ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ಅಥವಾ ರಿಇಂಬರ್ಸ್‌ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಓದಿ

ಡಿಜಿಟ್‌ನ ಮಾರುತಿ ಎಸ್-ಪ್ರೆಸ್ಸೊ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಲು ಕಾರಣಗಳು?

ಎಸ್-ಪ್ರೆಸ್ಸೊ ಕಾರ್ ಇನ್ಶೂರೆನ್ಸ್ ಬೆಲೆಯ ಹೊರತಾಗಿ, ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆಮಾಡುವ ಮೊದಲು ಕಾರು ಮಾಲೀಕರು ಹಲವಾರು ಅಂಶಗಳನ್ನು ಪರಿಗಣಿಸಬೇಕು. ಉದಾಹರಣೆಗೆ, ಡಿಜಿಟ್ ಇನ್ಶೂರೆನ್ಸ್ ಹಲವಾರು ಪ್ರಯೋಜನಗಳನ್ನು ಒಳಗೊಂಡಿದೆ, ಇದು ಮಾರುತಿ ಕಾರ್ ಮಾಲೀಕರಲ್ಲಿ ಅಪೇಕ್ಷಣೀಯ ಆಯ್ಕೆಯಾಗಿದೆ:

  • ಆನ್‌ಲೈನ್ ಕ್ಲೈಮ್ ಪ್ರಕ್ರಿಯೆ - ಚಾಲಕರು ತಮ್ಮ ಎಸ್-ಪ್ರೆಸ್ಸೊ ಇನ್ಶೂರೆನ್ಸ್ ಅನ್ನು ಡಿಜಿಟ್‌ನಿಂದ ಕ್ಲೈಮ್ ಮಾಡಬಹುದು ಮತ್ತು ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸ್ವಯಂ-ಪರಿಶೀಲನಾ ಪ್ರಕ್ರಿಯೆಯನ್ನು ಬಳಸಬಹುದು. ಈ ಪ್ರಕ್ರಿಯೆಯೊಂದಿಗೆ, ಕ್ಲೈಮ್‌ಗಳನ್ನು ಸೆಟಲ್ ಮಾಡಲು ಇತರ ಇನ್ಶೂರೆನ್ಸ್ ಪೂರೈಕೆದಾರರು ನಡೆಸುವ ಭೌತಿಕ ತಪಾಸಣೆಗಳನ್ನು ತಪ್ಪಿಸಬಹುದು.
  • ಐಡಿವಿ(IDV)ಕಸ್ಟಮೈಸೇಶನ್ - ಡಿಜಿಟ್ ಅಡಿಯಲ್ಲಿ ಕಾರ್ ಇನ್ಶೂರೆನ್ಸ್ ಪಾಲಿಸಿಯು ಎಸ್-ಪ್ರೆಸ್ಸೊನಂತಹ ಮಾರುತಿ ಕಾರುಗಳ ಐಡಿವಿ ಕಸ್ಟಮೈಸೇಶನ್ ಅನ್ನು ಸಕ್ರಿಯಗೊಳಿಸುತ್ತದೆ, ಇದು ಒಟ್ಟು ಕಾರು ನಾಶ ಅಥವಾ ಕಳ್ಳತನದ ನಂತರ ಹೆಚ್ಚಿನ ಪರಿಹಾರವನ್ನು ಪಡೆಯಲು ಚಾಲಕನಿಗೆ ಸಹಾಯ ಮಾಡುತ್ತದೆ.
  • ಆ್ಯಡ್-ಆನ್ ಪಾಲಿಸಿಗಳು  - ಡಿಜಿಟ್ ನೀಡುವ ಕೆಲವು ಆ್ಯಡ್-ಆನ್‌ಗಳು ಬ್ರೇಕ್ ಡೌನ್ ಅಸಿಸ್ಟೆನ್ಸ್ , ಝೀರೋ ಡೆಪ್ರಿಸಿಯೇಷನ್ ಕವರ್,ರಿಟರ್ನ್-ಟು- ಇನ್‌ವಾಯ್ಸ್ ಕವರ್‌, ಎಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್ ಕವರ್, ಕನ್ಸ್ಯುಮೇಬಲ್ ಕವರ್ ಮತ್ತು ಹೆಚ್ಚಿನದನ್ನು ಕವರ್ ಮಾಡುತ್ತದೆ.
  • ಉನ್ನತ ದರ್ಜೆಯ ಕಸ್ಟಮರ್ ಸರ್ವೀಸ್ ಸೇವೆಗಳು  - ಡಿಜಿಟ್‌ನ ರೌಂಡ್-ದಿ-ಕ್ಲಾಕ್ ಕಸ್ಟಮರ್ ಸರ್ವೀಸ್ ಸೇವೆಗಳು ಚಾಲಕರಿಗೆ ಅವರ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರು ಇನ್ಶೂರೆನ್ಸ್ ಸಂಬಂಧಿಸಿದಂತೆ ಸಹಾಯವನ್ನು ಒದಗಿಸುತ್ತವೆ.
  • ತ್ವರಿತ ಕ್ಲೈಮ್ ಸೆಟಲ್‌ಮೆಂಟ್ - ಡಿಜಿಟ್‌ನ ಸೇವೆಗಳೊಂದಿಗೆ, ಒಬ್ಬರು ತಮ್ಮ ಕ್ಲೈಮ್ ಇತ್ಯರ್ಥಕ್ಕಾಗಿ ಹೆಚ್ಚು ಸಮಯ ಕಾಯಬೇಕಾಗಿಲ್ಲ. ಡಿಜಿಟ್ ತನ್ನ ತ್ವರಿತ ಸೇವೆಗಳಿಗೆ ಹೆಸರುವಾಸಿಯಾಗಿದೆ.
  • ಗ್ಯಾರೇಜ್‌ಗಳ ವ್ಯಾಪಕ ನೆಟ್‌ವರ್ಕ್ - ಡ್ರೈವರ್‌ಗಳು ತಮ್ಮ ಮಾರುತಿ ಕಾರುಗಳಿಗೆ ಭಾರತದಾದ್ಯಂತ ಡಿಜಿಟ್‌ನ 5800+ ನೆಟ್‌ವರ್ಕ್ ಗ್ಯಾರೇಜ್‌ಗಳಿಂದ ಕ್ಯಾಶ್‌ಲೆಸ್ ರಿಪೇರಿಗಳನ್ನು ಪಡೆಯಬಹುದು. ಆದ್ದರಿಂದ, ವ್ಯಾಪಕ ಶ್ರೇಣಿಯ ಗ್ಯಾರೇಜ್‌ಗಳಿಂದಾಗಿ ಗ್ರಾಹಕರು ಎಸ್-ಪ್ರೆಸ್ಸೊ ಇನ್ಶೂರೆನ್ಸ್ ಬೆಲೆಗಳು ಮತ್ತು ಲಭ್ಯವಿರುವ ಸೇವೆಗಳ ಬಗ್ಗೆ ಚಿಂತಿಸಬೇಕಾಗಿಲ್ಲ. 
  • ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯಗಳು - ಚಾಲಕರು ರೋಡ್ ಸೈಡ್ ಆಕ್ಸಿಡೆಂಟುಗಳಿಗೆ ಸಿಲುಕಿದರೆ, ಡಿಜಿಟ್‌ನ ನೆಟ್‌ವರ್ಕ್ ಗ್ಯಾರೇಜ್‌ಗಳು ರಿಪೇರಿಗಾಗಿ ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯಗಳನ್ನು ನೀಡುತ್ತವೆ.

ಮೇಲೆ ತಿಳಿಸಲಾದ ಪ್ರಯೋಜನಗಳಿಂದ ಸ್ಪಷ್ಟವಾಗಿ, ಡಿಜಿಟ್ ಎಸ್-ಪ್ರೆಸ್ಸೋ ಮತ್ತು ಹೆಚ್ಚಿನ ಮಾರುತಿ ಕಾರುಗಳಿಗೆ ಕಾಂಪ್ರೆಹೆನ್ಸಿವ್ ಪ್ರೊಟೆಕ್ಷನ್ ಅನ್ನು ಒದಗಿಸುತ್ತದೆ.

ಹೆಚ್ಚುವರಿಯಾಗಿ, ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಡ್ರೈವರ್‌ಗಳು ಕೆಲವು ಟಿಪ್ಸ್ ಅನ್ನು ಅನುಸರಿಸಬಹುದು, ಹೆಚ್ಚಿನ ಡಿಡಕ್ಟಿಬಲ್ , ಸಣ್ಣ ಕ್ಲೈಮ್‌ಗಳನ್ನು ತಪ್ಪಿಸುವ ಮತ್ತು ಪ್ರೀಮಿಯಂ ಮೊತ್ತವನ್ನು ಹೋಲಿಕೆ ಮಾಡುವ ಮೂಲಕ.

ಆದಾಗ್ಯೂ, ಕಡಿಮೆ ಪ್ರೀಮಿಯಂಗಳಿಗೆ ಸೆಟ್ ಮಾಡುವಾಗ ಪ್ರಯೋಜನಗಳಲ್ಲಿ ರಾಜಿ ಮಾಡಿಕೊಳ್ಳದಿರುವುದು ಸೂಕ್ತ. ಆದ್ದರಿಂದ, ಈ ಅಂಶದ ಬಗ್ಗೆ ಸ್ಪಷ್ಟತೆ ಪಡೆಯಲು ಡಿಜಿಟ್‌ನಂತಹ ಇನ್ಶೂರೆನ್ಸ್ ಪೂರೈಕೆದಾರರೊಂದಿಗೆ ಸಂಪರ್ಕದಲ್ಲಿರಿ.

ಮಾರುತಿ ಎಸ್-ಪ್ರೆಸ್ಸೊ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯ?

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಇನ್ಶೂರೆನ್ಸ್ ವೆಚ್ಚವನ್ನು ಭರಿಸುವುದು ಈ ಕೆಳಗಿನ ಕಾರಣಗಳಿಂದಾಗಿ ಭಾರಿ ದಂಡ ಮತ್ತು ಡ್ಯಾಮೇಜ್ ವೆಚ್ಚಗಳನ್ನು ಪಾವತಿಸುವುದಕ್ಕಿಂತ ಹೆಚ್ಚು ಅನುಕೂಲಕರವಾಗಿದೆ:

  • ಥರ್ಡ್-ಪಾರ್ಟಿ ಡ್ಯಾಮೇಜಸ್ ಪ್ರೊಟೆಕ್ಷನ್ - ಎಸ್-ಪ್ರೆಸ್ಸೋ ಗಾಗಿ ಥರ್ಡ್-ಪಾರ್ಟಿ ಲಯಬಿಲಿಟಿಯ ಇನ್ಶೂರೆನ್ಸ್ ಥರ್ಡ್-ಪಾರ್ಟಿ ವಾಹನ, ವ್ಯಕ್ತಿ ಅಥವಾ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜಿನ ಸಮಯದಲ್ಲಿ ಉಂಟಾಗಬಹುದಾದ ಹಣಕಾಸಿನ ವೆಚ್ಚಗಳನ್ನು ಕವರ್ ಮಾಡುತ್ತದೆ. ಹೆಚ್ಚುವರಿಯಾಗಿ, ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಇನ್ಶೂರೆನ್ಸ್ ರಿನೀವಲ್ ಮುಖ್ಯವಾದುದು ಏಕೆಂದರೆ ಇದು ಉದ್ಭವಿಸಬಹುದಾದ ಮೊಕದ್ದಮೆ ಸಮಸ್ಯೆಗಳನ್ನು ಕವರ್ ಮಾಡುತ್ತದೆ.
  • ಸ್ವಂತ ಕಾರಿಗೆ ಡ್ಯಾಮೇಜ್ ಆಗುವುದರ ವಿರುದ್ಧ ಪ್ರೊಟೆಕ್ಷನ್ - ನಿಮ್ಮ ಕಾರು ಅಪಘಾತಕ್ಕೀಡಾಗಿ ಭಾರೀ ಡ್ಯಾಮೇಜಿಗೆ ಕಾರಣವಾದಾಗ ದುರದೃಷ್ಟಕರ ನಿದರ್ಶನಗಳು ಇರಬಹುದು. ಅಂತಹ ಸನ್ನಿವೇಶದಲ್ಲಿ, ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯು ಹಣಕಾಸಿನ ಲಯಬಿಲಿಟಿಗಳನ್ನು ಕವರ್ ಮಾಡುತ್ತದೆ. ಆದ್ದರಿಂದ, ಹೊಸ ಕಾರನ್ನು ಖರೀದಿಸುವಾಗ ಕಾಂಪ್ರೆಹೆನ್ಸಿವ್ ಎಸ್-ಪ್ರೆಸ್ಸೊ ಇನ್ಶೂರೆನ್ಸ್ ಅನ್ನು ಪಡೆಯುವುದು ಅಥವಾ ಸಮಯಕ್ಕೆ ಇನ್ಶೂರೆನ್ಸ್ ರಿನೀವಲ್ ಪಡೆಯುವುದು ಮತ್ತು ಡ್ಯಾಮೇಜುಗಳ ಸಂಪೂರ್ಣ ಕವರೇಜನ್ನು ಖಚಿತಪಡಿಸಿ ಮುಂದುವರಿಸುವುದು ಸೂಕ್ತವಾಗಿದೆ (ಓನ್ ಡ್ಯಾಮೇಜುಗಳು ಮತ್ತು ಥರ್ಡ್-ಪಾರ್ಟಿ ಲಯಬಿಲಿಟಿಗಳು).
  • ಪರ್ಸನಲ್ ಆಕ್ಸಿಡೆಂಟ್ ಕವರ್ - ಐಆರ್ ಡಿಎಐ (ಇನ್ಶೂರೆನ್ಸ್ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ) 2019 ರಿಂದ ಪ್ರತಿ ಕಾರು ಮಾಲೀಕರಿಗೆ ಈ ಕವರ್ ಅನ್ನು ಕಡ್ಡಾಯಗೊಳಿಸಿದೆ. ಅಂತಹ ಕವರ್ ಅಪಘಾತದ ನಂತರ ಕಾರು ಮಾಲೀಕರ ಸಾವು ಅಥವಾ ಅಂಗವೈಕಲ್ಯದಿಂದಾಗಿ ಉದ್ಭವಿಸಬಹುದಾದ ಹಣಕಾಸಿನ ಲಯಬಿಲಿಟಿಗಳನ್ನು ಕಡಿಮೆ ಮಾಡುತ್ತದೆ.
  • ಕಾರು ಕಳ್ಳತನ ಅಥವಾ ಸಂಪೂರ್ಣ ವಿನಾಶದ ಪರಿಹಾರ - ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಇನ್ಶೂರೆನ್ಸ್ ಕಾರು ಕಳ್ಳತನದ ಸಂದರ್ಭದಲ್ಲಿ ಅಥವಾ ಬೆಂಕಿ, ಪ್ರವಾಹ, ಭೂಕಂಪ ಇತ್ಯಾದಿಗಳಿಂದ ಉಂಟಾಗುವ ನಷ್ಟಕ್ಕೆ ಪರಿಹಾರ ಒದಗಿಸುತ್ತದೆ.
  • ನೋ ಕ್ಲೈಮ್ ಬೋನಸ್ ಪ್ರಯೋಜನಗಳು - ಕಾರು ಮಾಲೀಕರು ತಮ್ಮ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರ್ ಇನ್ಶೂರೆನ್ಸ್ ಅನ್ನು ರಿನೀವ್ ಮಾಡಿದ ನಂತರ ನೋ-ಕ್ಲೈಮ್ ಬೋನಸ್ ಪ್ರಯೋಜನಗಳನ್ನು ಆನಂದಿಸಬಹುದು. ಇಲ್ಲಿ, ಒಬ್ಬ ವ್ಯಕ್ತಿಯು ಪ್ರತಿ ಕ್ಲೈಮ್-ಮಾಡದ ವರ್ಷಕ್ಕೆ ಪಾಲಿಸಿಯ ಓನ್ ಡ್ಯಾಮೇಜ್ ಘಟಕಕ್ಕೆ ಪಾವತಿಸಿದ ಪ್ರೀಮಿಯಂ ಮೊತ್ತದ ಮೇಲೆ ಡಿಸ್ಕೌಂಟುಗಳನ್ನು ಗಳಿಸಬಹುದು.

ಆದ್ದರಿಂದ, ಅಂತಹ ಪ್ರಯೋಜನಗಳನ್ನು ಪಡೆಯಲು, ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಇನ್ಶೂರೆನ್ಸ್ ಬೆಲೆಯನ್ನು ಈಗ ಪಾವತಿಸುವುದು ಮತ್ತು ಭವಿಷ್ಯದ ವೆಚ್ಚಗಳನ್ನು ತಪ್ಪಿಸುವುದು ಅತ್ಯಗತ್ಯ.

ಈ ನಿಟ್ಟಿನಲ್ಲಿ, ಕಾರ್ ಇನ್ಶೂರೆನ್ಸ್ ಅನ್ನು ರಿನೀವ್ ಮಾಡಲು ಅಥವಾ ಖರೀದಿಸಲು ಡಿಜಿಟ್ ಒಂದು ವಿಶ್ವಾಸಾರ್ಹ ಆಯ್ಕೆಯಾಗಿದೆ. ಅದಕ್ಕೆ ಕಾರಣಗಳು ಇಲ್ಲಿವೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಬಗ್ಗೆ ಇನ್ನಷ್ಟು

ಮಾರುತಿ ಎಸ್-ಪ್ರೆಸ್ಸೊ 4 ವೇರಿಯಂಟುಗಳಲ್ಲಿ ಬರುತ್ತದೆ- Std, LXi, VXi VXi+. ಈ ಕಾರು ಮಾಡೆಲ್ ಅದರ ಜನಪ್ರಿಯತೆಯನ್ನು ಹೆಚ್ಚಿಸುವ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಅವುಗಳಲ್ಲಿ ಕೆಲವು:

  1. ಇದು 1 ಲೀಟರ್ K10 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು ಅದು 68 HP ವರೆಗೆ ಶಕ್ತಿಯನ್ನು ನೀಡುತ್ತದೆ ಮತ್ತು 90 Nm ಟಾರ್ಕ್ ಅನ್ನು ನೀಡುತ್ತದೆ.

  2. ಖರೀದಿದಾರರು ಅದರ ಸಿಏನ್ ಜಿ ವೇರಿಯಂಟು ಆರಿಸುವ ಮೂಲಕ ಈ ಮಾಡೆಲಿನ ಇಂಧನ-ಸಮರ್ಥ ವರ್ಷನ್ ಅನ್ನು ಆಯ್ಕೆ ಮಾಡಬಹುದು.

  3. ಇದು ಟ್ವಿನ್-ಚೇಂಬರ್ ಹೆಡ್‌ಲ್ಯಾಂಪ್‌ಗಳು ಮತ್ತು ಸಿ-ಆಕಾರದ ಟೈಲ್ ಲ್ಯಾಂಪ್‌ಗಳನ್ನು ಒಳಗೊಂಡಿದೆ.

  4. 5 ನೇ ಜನರೇಷನ್ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ, ಈ ಕಾರು ಎಲ್ಲಾ ಸುರಕ್ಷತಾ ಸ್ಟ್ಯಾಂಡರ್ಡ್ ಜೊತೆ ಬರುತ್ತದೆ.

  5. ಇದು ಡ್ಯುಯಲ್ ಏರ್‌ಬ್ಯಾಗ್‌ಗಳು, ಪ್ರಿ-ಟೆನ್ಷನರ್‌ಗಳೊಂದಿಗೆ ಸೀಟ್ ಬೆಲ್ಟ್‌ಗಳು ಮತ್ತು ಫೋರ್ಸ್ ಲಿಮಿಟರ್‌ಗಳಂತಹ ಇತರ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

ಮಾರುತಿ ಕಾರುಗಳು ತಮ್ಮ ಬಾಳಿಕೆಗೆ ಹೆಸರುವಾಸಿಯಾಗಿದ್ದರೂ,ಡ್ಯಾಮೇಜಿಗೆ ಕಾರಣವಾಗುವ ಅನಿರೀಕ್ಷಿತ ಸಂದರ್ಭಗಳಲ್ಲಿ ಅಂಶಕ್ಕೆ ಇದು ಅತಿಮುಖ್ಯವಾಗಿದೆ. ಅಂತಹ ಸನ್ನಿವೇಶದಲ್ಲಿ, ಇನ್ಶೂರೆನ್ಸ್ ಪಾಲಿಸಿಯು ಈ ಡ್ಯಾಮೇಜುಗಳ ವೆಚ್ಚವನ್ನು ಭರಿಸುತ್ತದೆ ಮತ್ತು ಹಣಕಾಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ.

ಆದ್ದರಿಂದ, ವಿಶ್ವಾಸಾರ್ಹ ಇನ್ಶೂರೆನ್ಸ್ ಪೂರೈಕೆದಾರರಿಂದ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರು ಇನ್ಶೂರೆನ್ಸ್ ಅನ್ನು ಪಡೆಯುವುದು ಅಥವಾ ರಿನೀವ್ ಮಾಡುವುದು ಮುಖ್ಯವಾಗಿದೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ -ವೇರಿಯಂಟುಗಳು ಮತ್ತು ಎಕ್ಸ್ ಶೋರೂಂ ಬೆಲೆ

ವೇರಿಯಂಟುಗಳು ಎಕ್ಸ್ ಶೋರೂಂ ಬೆಲೆ (ನಗರಕ್ಕೆ ಅನುಗುಣವಾಗಿ ಬದಲಾಗಬಹುದು)
ಎಸ್-ಪ್ರೆಸ್ಸೊ STD ₹3.78 ಲಕ್ಷ
ಎಸ್-ಪ್ರೆಸ್ಸೊ STD ಆಪ್ಟ್ ₹3.84 ಲಕ್ಷ
ಎಸ್-ಪ್ರೆಸ್ಸೊ LXI ₹4.21 ಲಕ್ಷ
ಎಸ್-ಪ್ರೆಸ್ಸೊ LXI ಆಪ್ಟ್ ₹4.27 ಲಕ್ಷ
ಎಸ್-ಪ್ರೆಸ್ಸೊ VXI ₹4.47 ಲಕ್ಷ
ಎಸ್-ಪ್ರೆಸ್ಸೊ VXI ಆಪ್ಟ್ ₹4.53 ಲಕ್ಷ
ಎಸ್-ಪ್ರೆಸ್ಸೊ VXI ಪ್ಲಸ್ ₹4.63 ಲಕ್ಷ
ಎಸ್-ಪ್ರೆಸ್ಸೊ VXI ಪ್ಲಸ್ AT ₹4.63 ಲಕ್ಷ
ಎಸ್-ಪ್ರೆಸ್ಸೊ VXI AT ₹4.97 ಲಕ್ಷ
ಎಸ್-ಪ್ರೆಸ್ಸೊ VXI ಆಪ್ಟ್ AT ₹5.03 ಲಕ್ಷ
ಎಸ್-ಪ್ರೆಸ್ಸೊ LXI ಸಿಎನ್​ಜಿ ₹5.11 ಲಕ್ಷ
ಎಸ್-ಪ್ರೆಸ್ಸೊ LXI ಆಪ್ಟ್ ಸಿಎನ್​ಜಿ ₹5.17 ಲಕ್ಷ
ಎಸ್-ಪ್ರೆಸ್ಸೊ VXI ಸಿಎನ್​ಜಿ ₹5.37 ಲಕ್ಷ
ಎಸ್-ಪ್ರೆಸ್ಸೊ VXI ಆಪ್ಟ್ ಸಿಎನ್​ಜಿ ₹5.43 ಲಕ್ಷ

ಭಾರತದಲ್ಲಿ ಮಾರುತಿ ಎಸ್-ಪ್ರೆಸ್ಸೊ ಕಾರ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ಡಿಜಿಟ್ ನ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಇನ್ಶೂರೆನ್ಸ್ ಪಾಲಿಸಿಗಾಗಿ ಎನ್‌ಸಿಬಿ(NCB ) ಎಂದರೇನು?

ಡಿಜಿಟ್‌ನೊಂದಿಗೆ, ನಿಮ್ಮ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಇನ್ಶೂರೆನ್ಸ್ ನಲ್ಲಿ ನೀವು 50% ವರೆಗೆ ಡಿಸ್ಕೌಂಟ್ ಪಡೆಯಬಹುದು, ನೀವು 5 ವರ್ಷಗಳವರೆಗೆ ಯಾವುದೇ ಕ್ಲೈಮ್ ಅನ್ನು ಮಾಡದಿದ್ದರೆ. ಪ್ರತಿ ಕ್ಲೈಮ್-ಮುಕ್ತ ವರ್ಷಕ್ಕೆ, ನೀವು ಡಿಸ್ಕೌಂಟ್ ಅನ್ನು ಪಡೆಯುತ್ತೀರಿ ಅದು ಪ್ರತಿ ಸತತ ವರ್ಷ ಕ್ಲೈಮ್ ಇಲ್ಲದೆ ಹೆಚ್ಚಾಗುತ್ತದೆ.

ನನ್ನ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಇನ್ಶೂರೆನ್ಸ್ ಅನ್ನು ರಿನೀವ್ ಮಾಡಲು ಅಗತ್ಯವಿರುವ ಡಾಕ್ಯುಮೆಂಟುಗಳು ಯಾವುವು?

ಇನ್ಶೂರೆನ್ಸ್ ರಿನೀವ್ ಮಾಡಲು ನಿಮಗೆ ಅಗತ್ಯವಿರುವ ಕೆಲವು ಪ್ರಮುಖ ಡಾಕ್ಯುಮೆಂಟುಗಳು:

  • ನಿಮ್ಮ ವಾಹನದ ರಿಜಿಸ್ಟ್ರೇಷನ್ ಸಂಖ್ಯೆ
  • ಹಿಂದಿನ ವರ್ಷದ ಪಾಲಿಸಿ ಸಂಖ್ಯೆ
  • ಹಿಂದಿನ ವರ್ಷದ ಪಾಲಿಸಿ ಮುಕ್ತಾಯ ದಿನಾಂಕ, ಇತ್ಯಾದಿ.