ಮಾರುತಿ ಸುಜುಕಿ ಇಕೋ ಇನ್ಶೂರೆನ್ಸ್

Drive Less, Pay Less. With Digit Car Insurance.

Third-party premium has changed from 1st June. Renew now

ಮಾರುತಿ ಸುಜುಕಿ ಇಕೋ ಕಾರ್ ಇನ್ಶೂರೆನ್ಸ್ ಖರೀದಿಸಿ ಅಥವಾ ರಿನೀವ್ ಮಾಡಿ

ಭಾರತದ ಆಟೋಮೊಬೈಲ್ ಇಂಡಸ್ಟ್ರಿಯ ವಿಷಯಕ್ಕೆ ಬಂದರೆ, ಮಾರುತಿ ಸುಜುಕಿಯ ಬ್ರ್ಯಾಂಡ್ ಹೆಸರು ಚಿರಪರಿಚಿತವಾಗಿದೆ. ಇಕೋ ಮಾಡೆಲ್, ಮಾರುತಿ ಸುಜುಕಿಯ ವಿವಿಧ ಫ್ಯಾಮಿಲಿ ಕಾರುಗಳ ಒಂದು ಭಾಗವಾಗಿತ್ತು. ಈ ಸೆವೆನ್ ಸೀಟರ್‌ಗಳ ಕಾರ್ ಅದರ ಹಲವಾರು ಫೀಚರ್‌ಗಳೊಂದಿಗೆ ಅನುಕೂಲತೆ ಮತ್ತು ಸ್ಟೈಲ್ ಎರಡನ್ನೂ ಸಂಯೋಜಿಸುವ ಗುರಿಯನ್ನು ಹೊಂದಿದೆ. ಇದು 1.2-ಲೀಟರ್ ಪೆಟ್ರೋಲ್ ಇಂಜಿನ್ ಜೊತೆಗೆ 5-ಸ್ಪೀಡ್ MT ಯೊಂದಿಗೆ ಬರುತ್ತದೆ. ಈ ಮಾಡೆಲ್‌ನ ಪೆಟ್ರೋಲ್ ವರ್ಷನ್ 16.11 kmpl ಫ್ಯೂಯೆಲ್ ದಕ್ಷತೆಯ ಅಂಕಿ ಅಂಶದೊಂದಿಗೆ ಬರುತ್ತದೆ ಮತ್ತು CNG ವೇರಿಯೆಂಟ್ 20.88km/kg ಅನ್ನು ನೀಡುತ್ತದೆ.

ಮಾರುತಿ ಸುಜುಕಿ ಇಕೊ ಕಾರಿನ ಕೆಲವು ಜನಪ್ರಿಯ ಫೀಚರ್‌ಗಳಲ್ಲಿ ಹೆಡ್‌ಲ್ಯಾಂಪ್ ಲೆವೆಲಿಂಗ್, ಮ್ಯಾನ್ಯುವಲ್ ಎಸಿ, ಸೈಡ್-ಇಂಪ್ಯಾಕ್ಟ್ ಬೀಮ್‌ಗಳು ಮತ್ತು ಸೀಟ್ ಬೆಲ್ಟ್ ರಿಮೈಂಡರ್‌ಗಳು ಸೇರಿವೆ. ಇವು ವಾಹನದ ಕಡೆಗೆ ಕಸ್ಟಮರ್‌ಗಳ ಜನಪ್ರಿಯತೆ ಮತ್ತು ಗಮನವನ್ನು ಸೆಳೆದಿವೆ. ಇದಲ್ಲದೆ, ಸ್ಲೈಡಿಂಗ್ ಡ್ರೈವರ್ ಸೀಟ್, ಹೀಟರ್, ರಿಕ್ಲೈನಿಂಗ್ ಫ್ರಂಟ್ ಸೀಟ್‌ಗಳು ಮತ್ತು ಇಂಟಿಗ್ರೇಟೆಡ್ ಹೆಡ್‌ರೆಸ್ಟ್‌ಗಳಂತಹ ಇತರ ವಿಶಿಷ್ಟ ಫೀಚರ್‌ಗಳು, ರೈಡರ್‌ಗಳಿಗೆ ಸೌಕರ್ಯ ಮತ್ತು ಅನುಕೂಲತೆಯನ್ನು ಸಹ ನೀಡುತ್ತವೆ.

ಕಾರಿನ ಸುರಕ್ಷತಾ ಕ್ರಮಗಳು ಸಹ ಆಕರ್ಷಕವಾಗಿವೆ. ಡ್ರೈವರ್‌ಗಳು ಸ್ಪೀಡ್ ಅಲರ್ಟ್ ಸಿಸ್ಟಮ್, ಎಬಿಎಸ್ ಮತ್ತು ಇಬಿಡಿ ಹಾಗೂ ಡ್ರೈವರ್ ಸೈಡ್ ಏರ್‌ಬ್ಯಾಗ್‌ನಿಂದ ಪ್ರಯೋಜನಗಳನ್ನು ಪಡೆಯುತ್ತಾರೆ. ಇದಲ್ಲದೆ, ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಡೋರ್‌ಗಳಿಗ್ ಚೈಲ್ಡ್ ಲಾಕ್‌ಗಳು ಮಾರುತಿ ಸುಜುಕಿ ಇಕೋ ಕಾರನ್ನು ಕುಟುಂಬಗಳಿಗೆ ಮತ್ತು ಅವರ ಸುರಕ್ಷತೆಯ ಅವಶ್ಯಕತೆಗಳಿಗೆ ಸರಿಹೊಂದುವಂತೆ ಮಾಡಿದೆ. ಇದು 3,675mm ಉದ್ದವಿದ್ದು ಮತ್ತು 2,350mm ವ್ಹೀಲ್‌ಬೇಸ್ ಅನ್ನು ಹೊಂದಿದೆ.

ಈ ಕಾರಿನ ಸ್ಪೆಸಿಫಿಕೇಶನ್‌ಗಳು ಅದರ ಬೆಲೆಗೆ ವಿರುದ್ಧವಾಗಿ ಪ್ರಚೋದಿಸುವಂತೆ ಕಂಡರೂ ಸಹ, ವಾಹನವನ್ನು ಖರೀದಿಸುವ ಭವಿಷ್ಯದ ಅವಶ್ಯಕತೆಗಳನ್ನು ಜನರು ನೆನಪಿನಲ್ಲಿಟ್ಟುಕೊಳ್ಳಬೇಕು. ಅಪಘಾತದಿಂದಾದ ಹಾನಿಯ ವೆಚ್ಚಗಳನ್ನು ತಪ್ಪಿಸಲು, ಮಾರುತಿ ಸುಜುಕಿ ಇಕೋ ಕಾರ್ ಇನ್ಶೂರೆನ್ಸ್ ಖರೀದಿಸುವ ಮೊದಲು, ನೀವು ಎರಡೆರಡು ಬಾರಿ ಯೋಚಿಸಬಾರದು. ಅಪಘಾತದ ಹಾನಿಯನ್ನು ಭರಿಸುವುದು ಪ್ರಾಯೋಗಿಕ ಮಾತ್ರವಲ್ಲದೇ, 1988 ರ ಮೋಟಾರ್ ವೆಹಿಕಲ್ಸ್ ಆ್ಯಕ್ಟ್ ಅನ್ನು ಅನುಸರಿಸಲು ನಿಮಗೆ ಸಹಾಯ ಮಾಡುವಲ್ಲಿ ಇದು ಸಹಾಯಕವಾಗಿದೆ.

ಮಾರುತಿ ಇಕೋ ಕಾರ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?

ನೀವು ಡಿಜಿಟ್‌ನ ಮಾರುತಿ ಇಕೋ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಮಾರುತಿ ಸುಜುಕಿ ಇಕೋಗಾಗಿ ಕಾರ್‌ ಇನ್ಶೂರೆನ್ಸ್ ಪ್ಲ್ಯಾನ್‌ಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದಾಗಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟ

×

ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟಗಳು

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟ

×

ಥರ್ಡ್ ಪಾರ್ಟಿ ವಾಹನಕ್ಕೆ ಆಗುವ ಹಾನಿ

×

ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಆಗುವ ಹಾನಿ

×

ಪರ್ಸನಲ್ ಆಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು

×

ನಿಮ್ಮ ಕಾರಿನ ಕಳ್ಳತನ

×

ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ ಮಾಡಿದ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ.

ಕ್ಲೈಮ್ ಅನ್ನು ಹೇಗೆ ಫೈಲ್ ಮಾಡುವುದು?

ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ, ನೀವು ಚಿಂತಾ-ಮುಕ್ತರಾಗಿ ಬದುಕುತ್ತೀರಿ! ಏಕೆಂದರೆ, ನಾವು ಕೇವಲ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.

ಹಂತ 1

1800-258-5956 ಸಂಖ್ಯೆಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವಯಂ ತಪಾಸಣೆಗಾಗಿ (self inspection) ಲಿಂಕ್ ಪಡೆಯಿರಿ. ಹಂತ ಹಂತವಾಗಿ ನೀಡುವ ಮಾರ್ಗದರ್ಶನದಂತೆ, ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನದ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ನೀವು ರಿಇಂಬರ್ಸಮೆಂಟ್ ಅಥವಾ ಕ್ಯಾಶ್‌ಲೆಸ್ ಆಯ್ಕೆಗಾಗಿ, ರಿಪೇರಿ ವಿಧಾನವನ್ನು ಆರಿಸಿ.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು ನೀವೀಗ ಅದನ್ನೇ ಮಾಡುತ್ತಿರುವಿರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ಮಾರುತಿ ಇಕೋ ಕಾರ್ ಇನ್ಶೂರೆನ್ಸ್‌ಗಾಗಿ ಡಿಜಿಟ್ ಏಕೆ ಉತ್ತಮ ಆಯ್ಕೆಯಾಗಿದೆ?

ಹೆಚ್ಚುತ್ತಿರುವ ಕಾರು ಅಪಘಾತ ಪ್ರಕರಣಗಳ ಬಗ್ಗೆ ಭಾರತ ಸರ್ಕಾರ ಕಳವಳ ವ್ಯಕ್ತಪಡಿಸಿದೆ. 1988 ರ ಮೋಟಾರ್ಸ್ ವೆಹಿಕಲ್ಸ್ ಆ್ಯಕ್ಟ್ ಅಂತಹ ಅಪಘಾತಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಗುರಿಯನ್ನು ಹೊಂದಿದೆ. ಎಲ್ಲಾ ಭಾರತೀಯ ಕಾರು ಓನರ್‌ಗಳು ತಮ್ಮ ಕಾರುಗಳನ್ನು ಥರ್ಡ್ ಪಾರ್ಟಿ ಹಾನಿಯ ಕವರೇಜ್‌ನೊಂದಿಗೆ ಇನ್ಶೂರೆನ್ಸ್ ಪಡೆಯುವ ಅಗತ್ಯವಿದೆ. ಕಾರ್ ಓನರ್‌ಗಳು ಅಂತಹ ಇನ್ಶೂರೆನ್ಸ್ ಇಲ್ಲದೆ ಯಾವುದೇ ಸಮಯದಲ್ಲಿ ಕಾರ್ ಡ್ರೈವ್ ಮಾಡುವಾಗ ಸಿಕ್ಕಿಬಿದ್ದರೆ ₹ 2,000 ರಿಂದ ₹ 4,000 ವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ. ಇದಲ್ಲದೆ, ಇದು ಲೈಸೆನ್ಸ್ ಕ್ಯಾನ್ಸಲ್ ಆಗಲು ಅಥವಾ ಓನರ್‌ಗಳ ಜೈಲುವಾಸಕ್ಕೆ ಕಾರಣವಾಗಬಹುದು.

ಡಿಜಿಟ್ ವರ್ಷಗಳಿಂದಲೂ ಪ್ರಸಿದ್ಧವಾದ ಇನ್ಶೂರರ್ ಬ್ರ್ಯಾಂಡ್ ಆಗಿದೆ ಮತ್ತು ನಿಮ್ಮ ಮಾರುತಿ ಸುಜುಕಿ ಇಕೋ ಕಾರ್ ಇನ್ಶೂರೆನ್ಸ್‌ಗೆ ಉತ್ತಮ ಆಯ್ಕೆಯಾಗಿದೆ. ಅದನ್ನು ಖರೀದಿಸುವ ಮೊದಲು ಇನ್ಶೂರರ್ ಬಗ್ಗೆ ಮತ್ತು ಪಾಲಿಸಿಯ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ. ಈ ಸಂದರ್ಭದಲ್ಲಿ, ಡಿಜಿಟ್ ಪಾಲಿಸಿಗಳು ವಿವಿಧ ಫೀಚರ್‌ಗಳೊಂದಿಗೆ ಬರುತ್ತವೆ ಮತ್ತು ಜನರಿಗೆ ಮಾರುತಿ ಸುಜುಕಿ ಇಕೋ ಕಾರ್ ಇನ್ಶೂರೆನ್ಸ್ ಬೆಲೆ ಸೇರಿದಂತೆ ಅವುಗಳ ಅಗತ್ಯವಿದೆ. ಕೆಳಗಿನ ಸೆಕ್ಷನ್, ಡಿಜಿಟ್ ಕಾರ್ ಇನ್ಶೂರೆನ್ಸ್ ಪಾಲಿಸಿಯ ಕೆಲವು ಸ್ಟ್ಯಾಂಡರ್ಡ್ ಫೀಚರ್‌ಗಳನ್ನು ಚರ್ಚಿಸುತ್ತದೆ.

1. ಪಾಲಿಸಿ ಆಯ್ಕೆಗಳ ವ್ಯಾಪ್ತಿ

ಬೆಲೆ ಮತ್ತು ಅವಶ್ಯಕತೆಗಳ ವಿಷಯದಲ್ಲಿ ಮಾರುತಿ ಸುಜುಕಿ ಇಕೋ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆಮಾಡುವಾಗ ಪಾಲಿಸಿಹೋಲ್ಡರ್‌ಗಳ ಸಂದಿಗ್ಧತೆಯನ್ನು ಡಿಜಿಟ್ ಅರಿತುಕೊಳ್ಳುತ್ತದೆ. ಆದ್ದರಿಂದ, ಇದು ಎರಡು ವಿಧದ ಪಾಲಿಸಿಗಳಲ್ಲಿ ಆಯ್ಕೆ ಮಾಡಲು ಪಾಲಿಸಿಹೋಲ್ಡರ್‌ಗಳಿಗೆ ಅನುವು ಮಾಡಿಕೊಡುತ್ತದೆ.

  • ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್: ಈ ಪಾಲಿಸಿಯೊಂದಿಗೆ, ಕಾರ್ ಅಪಘಾತದಿಂದ ಉಂಟಾದ ಥರ್ಡ್ ಪಾರ್ಟಿ ಹಾನಿಗಳ ವಿರುದ್ಧ ಡಿಜಿಟ್ ಕಂಪನಿಯು ಪರಿಹಾರವನ್ನು ನೀಡುತ್ತದೆ. ಅಪಘಾತದ ಸಮಯದಲ್ಲಿ ಹಾನಿಗೊಳಗಾದ ಯಾವುದೇ ಕಾರ್ ಅಥವಾ ರಸ್ತೆ ಪ್ರಾಪರ್ಟಿಗಳ ರಿಪೇರಿಗಾಗಿ ಪಾವತಿಸಲು ಪಾಲಿಸಿಹೋಲ್ಡರ್‌ಗಳಿಗೆ ಸಾಧ್ಯವಾಗುತ್ತದೆ. ಇದಲ್ಲದೆ, ಈ ಅಪಘಾತದಲ್ಲಿ ಯಾವುದೇ ವ್ಯಕ್ತಿ ಗಾಯಗೊಂಡರೆ, ಅವರ ಚಿಕಿತ್ಸಾ ಶುಲ್ಕವನ್ನು ಪಾಲಿಸಿಯು ಕವರ್ ಮಾಡುತ್ತದೆ.
  • ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್: ಈ ಪಾಲಿಸಿಯೊಂದಿಗೆ, ಡಿಜಿಟ್ ಕಂಪನಿ ಥರ್ಡ್ ಪಾರ್ಟಿ ಮತ್ತು ವೈಯಕ್ತಿಕ ಹಾನಿ ವೆಚ್ಚಗಳನ್ನು ಕವರ್ ಮಾಡುವ ಗುರಿಯನ್ನು ಹೊಂದಿದೆ. ಹೀಗಾಗಿ, ನೀವು ಈ ಪಾಲಿಸಿಯನ್ನು ಹೊಂದಿದ್ದರೆ, ಅಪಘಾತದ ನಂತರ ಅಥವಾ ಬೆಂಕಿ, ಕಳ್ಳತನ ಅಥವಾ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ, ನಿಮ್ಮ ಮಾರುತಿ ಸುಜುಕಿ ಇಕೋ ಕಾರಿಗೆ ಹಾನಿಯಾಗುವ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ.

2. ಅನೇಕ ಆ್ಯಡ್-ಆನ್‌ಗಳು

ಮಾರುತಿ ಸುಜುಕಿ ಇಕೋ ಕಾರಿಗೆ ಇನ್ಶೂರೆನ್ಸ್ ಖರೀದಿಸುವಾಗ, ನಿಮ್ಮ ಪ್ರಯೋಜನಗಳನ್ನು ಗರಿಷ್ಠಗೊಳಿಸಲು ಡಿಜಿಟ್ ನಿಮಗೆ ಸಹಾಯ ಮಾಡುತ್ತದೆ. ಹೆಚ್ಚುವರಿ ಶುಲ್ಕಗಳ ವಿರುದ್ಧ ಈ ಕೆಳಗಿನ ಆ್ಯಡ್-ಆನ್‌ಗಳೊಂದಿಗೆ ನಿಮ್ಮ ಕಾಂಪ್ರೆಹೆನ್ಸಿವ್ ಪಾಲಿಸಿಯನ್ನು ನೀವು ಕಸ್ಟಮೈಸ್ ಮಾಡಬಹುದು.

  • ರಿಟರ್ನ್ ಟು ಇನ್‌ವಾಯ್ಸ್ ಕವರ್‌
  • ಝೀರೋ ಡೆಪ್ರಿಸಿಯೇಶನ್ ಕವರ್
  • ಕನ್ಸ್ಯೂಮೆಬಲ್ ಕವರ್
  • ರೋಡ್‌ಸೈಡ್ ಅಸಿಸ್ಟೆನ್ಸ್ 
  • ಇಂಜಿನ್ ಮತ್ತು ಗೇರ್ ಬಾಕ್ಸ್ ಪ್ರೊಟೆಕ್ಷನ್ ಹಾಗೂ ಇನ್ನಷ್ಟು

3. ನೋ ಕ್ಲೈಮ್ ಬೋನಸ್

ಡಿಜಿಟ್ ತನ್ನ ಪಾಲಿಸಿದಾರರನ್ನು ರಿವಾರ್ಡುಗಳೊಂದಿಗೆ ಪ್ರೇರೇಪಿಸಲು ಪ್ರಯತ್ನಿಸುತ್ತದೆ. ನೀವು ಮಾರುತಿ ಸುಜುಕಿ ಇಕೋ ಕಾರ್ ಇನ್ಶೂರೆನ್ಸ್ ಪಾಲಿಸಿಹೋಲ್ಡರ್ ಆಗಿದ್ದರೆ, ನೀವು ನೋ ಕ್ಲೈಮ್ ಬೋನಸ್ ಅನ್ನು ಪಡೆಯಲು ಜವಾಬ್ದಾರರಾಗುತ್ತೀರಿ. ನೀವು ಸುಮಾರು ಒಂದು ವರ್ಷದವರೆಗೆ ನಿಮ್ಮ ಇನ್ಶೂರೆನ್ಸ್ ಅನ್ನು ಕ್ಲೈಮ್ ಮಾಡದಿದ್ದರೆ, ನಿಮ್ಮ ಪ್ರೀಮಿಯಂ ಮೊತ್ತದ ಮೇಲೆ ಡಿಜಿಟ್ ನಿಮಗೆ ಡಿಸ್ಕೌಂಟ್‌ಗಳನ್ನು ನೀಡುತ್ತದೆ. ಡಿಸ್ಕೌಂಟ್‌ನ ದರವು ಮುಖ್ಯವಾಗಿ ನಿಮ್ಮ ಪಾಲಿಸಿ ಪ್ರೀಮಿಯಂನ 20% -50% ರ ನಡುವೆ ಬದಲಾಗುತ್ತದೆ.

4. ಐಡಿವಿ (IDV) ಕಸ್ಟಮೈಸೇಶನ್

ಐಡಿವಿ ಎನ್ನುವುದು ಮಾರ್ಕೆಟ್‌ನಲ್ಲಿ ನಿಮ್ಮ ವಾಹನದ ಪ್ರಸ್ತುತ ಮೌಲ್ಯವನ್ನು ನಿರ್ಧರಿಸುತ್ತದೆ. ಡಿಜಿಟ್‌ನೊಂದಿಗೆ, ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡುವ ಮೂಲಕ ನೀವು ಗರಿಷ್ಠ ಪ್ರಯೋಜನಗಳನ್ನು ಪಡೆಯಬಹುದು. ಉದಾಹರಣೆಗೆ, ಹೆಚ್ಚಿನ ಐಡಿವಿ ಅನ್ನು ಸೆಟ್ ಮಾಡುವ ಮೂಲಕ ನಿಮ್ಮ ವಾಹನದ ಕಳ್ಳತನವಾದಲ್ಲಿ ಅಥವಾ ಕಾರಿಗೆ ಸರಿಪಡಿಸಲಾಗದ ಹಾನಿಯಾದಲ್ಲು ನೀವು ಉತ್ತಮವಾದ ಪರಿಹಾರವನ್ನು ಪಡೆಯಬಹುದು. ಮತ್ತೊಂದೆಡೆ, ಐಡಿವಿ ಅನ್ನು ಕಡಿಮೆ ಇರಿಸುವುದು ನಿಮ್ಮ ಪ್ರೀಮಿಯಂ ಮೊತ್ತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

5. ಸರಳವಾದ ಆನ್‌ಲೈನ್ ಪ್ರಕ್ರಿಯೆ

ಮಾರುತಿ ಸುಜುಕಿ ಇಕೋಗಾಗಿ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವಾಗ, ಜನರು ಎದುರಿಸುವ ಒಂದು ಸಾಮಾನ್ಯ ಸಮಸ್ಯೆ ಎಂದರೆ ಅದರ ಪ್ರಕ್ರಿಯೆಯಲ್ಲಿನ ತೊಡಕುಗಳು. ಪಾಲಿಸಿಯನ್ನು ಖರೀದಿಸಲು ಸರಳವಾದ ಆನ್‌ಲೈನ್ ಪ್ರಕ್ರಿಯೆಯನ್ನು ನಿಭಾಯಿಸುವುದರಿಂದ ಡಿಜಿಟ್ ನಿಮಗೆ ಸೂಕ್ತವಾದ ಆಯ್ಕೆಯಾಗಿದೆ. ಡಿಜಿಟ್‌ನ ಆಫೀಷಿಯಲ್ ವೆಬ್‌ಸೈಟ್ ತೆರೆಯುವ ಮೂಲಕ ಮತ್ತು ಅದರಲ್ಲಿ ನೀಡಲಾಗಿರುವ ಹಂತ-ಹಂತದ ಮಾರ್ಗದರ್ಶಿಯನ್ನು ಪೂರ್ಣಗೊಳಿಸುವ ಮೂಲಕ ನೀವಿದನ್ನು ಮಾಡಬಹುದು. ಇದಲ್ಲದೆ, ಮಾರುತಿ ಸುಜುಕಿ ಇಕೋ ಕಾರ್ ಇನ್ಶೂರೆನ್ಸ್ ರಿನೀವಲ್ ಪ್ರಕ್ರಿಯೆಯು ಹೀಗೆಯೇ ಇರುತ್ತದೆ.

6. ಸುಲಭ ಕ್ಲೈಮ್ ಫೈಲಿಂಗ್

ಅಪಘಾತವಾದ ನಂತರ ಹೆಚ್ಚಿನ ಪಾಲಿಸಿಹೋಲ್ಡರ್‌ಗಳು ಅಸ್ಪಷ್ಟ ಪರಿಸ್ಥಿತಿಯಲ್ಲಿರುತ್ತಾರೆ. ಈ ಸ್ಥಿತಿಯಲ್ಲಿ, ಇನ್ಶೂರೆನ್ಸ್ ಕ್ಲೈಮ್ ಮಾಡುವುದು ಅವರಿಗೆ ಕಷ್ಟಕರವಾಗಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ಡಿಜಿಟ್ ಮಾರುತಿ ಸುಜುಕಿ ಇಕೋ ಕಾರ್ ಇನ್ಶೂರೆನ್ಸ್ ಅನ್ನು ಹೊಂದಿರುವ ಜನರಿಗೆ ಸುಲಭವಾದ ಕ್ಲೈಮ್ ಫೈಲಿಂಗ್ ಅನ್ನು ಅಭಿವೃದ್ಧಿಪಡಿಸಿದೆ. ನೀವು 1800-258-5956 ನಂಬರ್‌ನಲ್ಲಿ ಕಸ್ಟಮರ್ ಕೇರ್‌ಗೆ ಕಾಲ್ ಮಾಡುವ ಮೂಲಕ ಪ್ರಾರಂಭಿಸಬಹುದು, ನಂತರ ನೀವು ನಿಮ್ಮ ರಿಜಿಸ್ಟರ್ಡ್ ಮೊಬೈಲ್‌ನಲ್ಲಿ ಸೆಲ್ಫ್ ಇನ್‌ಸ್ಪೆಕ್ಷನ್ ಲಿಂಕ್ ಅನ್ನು ಪಡೆಯುತ್ತೀರಿ. ನಿಮ್ಮ ಅಪಘಾತದ ಚಿತ್ರಗಳನ್ನು ನೀವು ಅಪ್‌ಲೋಡ್ ಮಾಡಬೇಕಾಗುತ್ತದೆ. ಆ ನಂತರ ನೀವು ರಿಇಂಬರ್ಸ್‌ಮೆಂಟ್ ಅಥವಾ ಕ್ಯಾಶ್‌ಲೆಸ್ ರಿಪೇರಿ ಸೇರಿದಂತೆ ರಿಪೇರಿ ವಿಧಾನಗಳನ್ನು ಆಯ್ಕೆ ಮಾಡಬಹುದು.

7. ವಿಶಾಲವಾದ ನೆಟ್‌ವರ್ಕ್‌ ಗ್ಯಾರೇಜ್‌ಗಳು

ಮಾರುತಿ ಸುಜುಕಿ ಇಕೋ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವ ಜನರು ತಾವು ಪ್ರಯಾಣ ಮಾಡುವಾಗ ಈ ಪಾಲಿಸಿಯ ಪ್ರಯೋಜನಗಳನ್ನು ಬಳಸಬಹುದೇ ಎಂದು ಆಗಾಗ ಅಚ್ಚರಿ ಪಡುತ್ತಾರೆ. ಭಾರತದಾದ್ಯಂತ ಲಭ್ಯವಿರುವ ಗ್ಯಾರೇಜ್‌ಗಳ ವಿಶಾಲ ನೆಟ್‌ವರ್ಕ್‌ನೊಂದಿಗೆ ಡಿಜಿಟ್ ಅದನ್ನು ಅನುಕೂಲಕರವಾಗಿಸುತ್ತದೆ. ಹೀಗಾಗಿ, ಪಾಲಿಸಿಹೋಲ್ಡರ್‌ಗಳು ಪ್ರಯಾಣ ಮಾಡುತ್ತಿರುವಾಗಲೂ ಈ ಯಾವುದೇ ನೆಟ್‌ವರ್ಕ್ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ರಿಪೇರಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

8. ಅತ್ಯುತ್ತಮ ಕಸ್ಟಮರ್ ಸರ್ವೀಸ್

ಬಲವಾದ ಕಸ್ಟಮರ್ ಸಪೋರ್ಟ್ ಅನ್ನು ಹೊಂದಿರುವುದು ಡಿಜಿಟ್‌ಗೆ ಹೆಮ್ಮೆಯ ವಿಷಯವಾಗಿದೆ. ಮಾರುತಿ ಸುಜುಕಿ ಇಕೋಗಾಗಿ ಕಾರ್ ಇನ್ಶೂರೆನ್ಸ್ ಅನ್ನು ಹೊಂದಿರುವವರು ಅತ್ಯುತ್ತಮ ಕಸ್ಟಮರ್ ಸಪೋರ್ಟ್‌ನ ಪ್ರಯೋಜನಗಳನ್ನು ಬಳಸಿಕೊಳ್ಳಬಹುದು. ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್‌ಗಳು ಕಸ್ಟಮರ್‌ಗಳಿಗಾಗಿ ದಿನವಿಡೀ ಸಹಾಯ ಮಾಡಲು ಲಭ್ಯವಿರುತ್ತಾರೆ ಮತ್ತು ಅವರು ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ ಕೆಲಸ ಮಾಡುತ್ತಾರೆ. ಹೀಗಾಗಿ, ಇನ್ಶೂರೆನ್ಸ್ ಪಾಲಿಸಿಗೆ ಸಂಬಂಧಿಸಿದ ನಿಮ್ಮ ಕುಂದುಕೊರತೆಗಳು ಮತ್ತು ಪ್ರಶ್ನೆಗಳು ಅಪರೂಪಕ್ಕೆ ಡಿಜಿಟ್‌ನ ಗಮನಕ್ಕೆ ಬರದಿರಬಹುದು.

ಸಧ್ಯ, ನೀವು ಈ ಕಾರನ್ನು ಖರೀದಿಸಿದಲ್ಲಿ, ಮಾರುತಿ ಸುಜುಕಿ ಇಕೋ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವ ಪ್ರಾಮುಖ್ಯತೆಯನ್ನು ನೀವೀಗ ಅರ್ಥಮಾಡಿಕೊಂಡಿದ್ದೀರಿ. ನಿಮ್ಮ ವಾಹನಕ್ಕೆ ಅನುಕೂಲಕರವಾದ ಪಾಲಿಸಿಯೊಂದನ್ನು ನೀವು ಬಯಸಿದರೆ, ಡಿಜಿಟ್ ನಿಮಗೆ ಅತ್ಯುತ್ತಮ ಇನ್ಶೂರರ್ ಆಗಬಹುದು. ಸರಳವಾದ ಕ್ಲೈಮ್ ಫೈಲಿಂಗ್ ಮತ್ತು ರಿನೀವಲ್ ಪ್ರಕ್ರಿಯೆಗಳೊಂದಿಗೆ, ಈ ಪಾಲಿಸಿಗಳು ಥರ್ಡ್ ಪಾರ್ಟಿ ಹಾನಿಯ ವೆಚ್ಚಗಳನ್ನು ತಪ್ಪಿಸಲು ಮತ್ತು ಮೋಟಾರ್ ವೆಹಿಕಲ್ಸ್ ಆ್ಯಕ್ಟ್ ಅನ್ನು ಅನುಸರಿಸಲು ನಿಮಗೆ ಸಹಾಯ ಮಾಡುತ್ತದೆ.

ನಿಮ್ಮ ಮಾರುತಿ ಸುಜುಕಿ ಇಕೋಗಾಗಿ ಇನ್ಶೂರೆನ್ಸ್ ಖರೀದಿಸುವುದು ಏಕೆ ಮುಖ್ಯವಾಗಿದೆ?

ನೀವು ಸ್ಪೇಸ್, ಪರ್ಫಾರ್ಮೆನ್ಸ್ ಮತ್ತು ಸ್ಟೈಲ್ ಅನ್ನು ಹುಡುಕುವವರಾಗಿದ್ದರೆ, ಅದಕ್ಕಾಗಿ ನೀವು ಏನೇನೆಲ್ಲ ಕೇಳಬಹುದೋ ಅದಕ್ಕೆಲ್ಲ ಉತ್ತರ ಈ ನಂಬರ್ 1 ಫ್ಯಾಮಿಲಿ ಕಾರ್. ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವ ಪ್ರಯೋಜನಗಳು ಇಲ್ಲಿವೆ:

  • ಫೈನಾನ್ಸಿಯಲ್ ಲಯಬಿಲಿಟಿಗಳು : ಅನಿರೀಕ್ಷಿತ ನೈಸರ್ಗಿಕ ವಿಕೋಪ, ಅಪಘಾತ ಅಥವಾ ಕಳ್ಳತನದ ಮುಂದೆ ನಿಮ್ಮ ಇಕೋ ಕಾರ್ ದುರ್ಬಲವೆನಿಸಬಹುದು.  ಅದೇ ಕಾರಣದಿಂದ ಉಂಟಾಗಬಹುದಾದ ಎಲ್ಲಾ ಅನಿರೀಕ್ಷಿತ ನಷ್ಟಗಳಿಂದ ನಿಮ್ಮನ್ನು ಉಳಿಸುವಲ್ಲಿ ಕಾರ್ ಇನ್ಶೂರೆನ್ಸ್ ನಿಜಕ್ಕೂ ನಿಮ್ಮ ಸ್ನೇಹಿತನಾಗುತ್ತದೆ.
  • ಕಾನೂನುಬದ್ಧವಾದ ಕಂಪ್ಲೈಂಟ್ಇನ್ಶೂರೆನ್ಸ್ ಇಲ್ಲದೆ ನಿಮ್ಮ ಕಾರನ್ನು ಡ್ರೈವ್ ಮಾಡುವುದು ಕಾನೂನುಬಾಹಿರ ವಾಗಿದೆ. ಕಾರ್ ಇನ್ಶೂರೆನ್ಸ್ ತೋರಿಸಲು ವಿಫಲವಾದರೆ, ಅದು ನಿಮ್ಮನ್ನು ಗಂಭೀರ ತೊಂದರೆಗೆ ಸಿಲುಕಿಸಬಹುದು. ಇನ್ಶೂರೆನ್ಸ್ ಇಲ್ಲದೇ ವಾಹನ ಚಲಾಯಿಸಿದರೆ ವಿಧಿಸುವ ಪ್ರಸ್ತುತ ದಂಡ ₹ 2000 ಗಳವರೆಗೆ ಮತ್ತು 3 ತಿಂಗಳ ಜೈಲು ಶಿಕ್ಷೆಯೂ ಸಹ ಆಗಬಹುದು.
  • ಥರ್ಡ್-ಪಾರ್ಟಿ ಲಯಬಿಲಿಟಿ : ಅಪಘಾತದ ದುರದೃಷ್ಟಕರ ಸಂದರ್ಭದಲ್ಲಿ, ಹಣಕಾಸಿನ ನಷ್ಟವನ್ನು ಕಾರ್ ಇನ್ಶೂರೆನ್ಸ್ ಪಾಲಿಸಿಯು ಕವರ್ ಮಾಡುತ್ತದೆ. ಕೆಲವೊಂದು ಸಂದರ್ಭಗಳಲ್ಲಿ, ಹಾನಿಗಳು ದೊಡ್ಡದಾಗಿರುತ್ತವೆ ಮತ್ತು ಸರಿಪಡಿಸಲು ಅಸಾಧ್ಯವಾಗಿರುತ್ತವೆ. ಬಹುಶಃ ಇದು ವ್ಯಕ್ತಿಯೊಬ್ಬನ ಪ್ರಸ್ತುತ ಹಣಕಾಸಿನ ಸಾಮರ್ಥ್ಯವನ್ನು ಮೀರಿರಬಹುದು. ಇಂತಹ ಸಂದರ್ಭದಲ್ಲಿಯೇ, ಕಾರ್ ಇನ್ಶೂರೆನ್ಸ್ ತನ್ನ ಮುಖ್ಯ ಪಾತ್ರವನ್ನು ನಿಭಾಯಿಸುತ್ತದೆ. ಇದು ಹೆಚ್ಚಿನ ಹಣಕಾಸಿನ ನಷ್ಟವನ್ನು ನೋಡಿಕೊಳ್ಳುತ್ತದೆ ಮತ್ತು ಸ್ವೀಕರಿಸುತ್ತಿರುವ ವ್ಯಕ್ತಿಯ ಪರವಾಗಿ ರಕ್ಷಕನಾಗಿ ಕೆಲಸ ಮಾಡುತ್ತದೆ.
  • ಕಾಂಪ್ರೆಹೆನ್ಸಿವ್ ಕವರ್‌ : ಈ ರೀತಿಯ ಕವರ್ ಯಾವಾಗಲೂ ಉತ್ತಮವಾಗಿರುತ್ತದೆ ಏಕೆಂದರೆ ಇದು ಇತರ ಪಾರ್ಟಿಗೆ ಮಾತ್ರವಲ್ಲದೆ ನಿಮಗೂ ಮತ್ತು ನಿಮ್ಮ ಇಕೋ ಕಾರಿಗೂ ಕೊಡೆಯಂತೆ ಕೆಲಸ ಮಾಡುತ್ತದೆ. ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಅನ್ನು ಪಡೆಯುವುದರಿಂದ ಅದು ನಿಮಗೆ ಸಂಪೂರ್ಣ ಮನಃಶಾಂತಿಯನ್ನು ಖಾತರಿಪಡಿಸುತ್ತದೆ. ಏಕೆಂದರೆ ಅದು ಉಂಟಾಗಿರುವ ನಷ್ಟಗಳನ್ನು ನೋಡಿಕೊಳ್ಳುತ್ತದೆ ಮತ್ತು ನಿಮಗೆ ಉತ್ತಮ ಕವರೇಜನ್ನು ನೀಡುತ್ತದೆ. ನೀವು ಮಾರ್ಕೆಟ್‌ನಲ್ಲಿ ಲಭ್ಯವಿರುವ ಹಲವಾರು ಕಾರ್ ಇನ್ಶೂರೆನ್ಸ್ ಆ್ಯಡ್-ಆನ್‌ಗಳಲ್ಲಿ ಆಯ್ಕೆ ಮಾಡಬಹುದು. ಇವುಗಳಲ್ಲಿ ಕೆಲವು ಬ್ರೇಕ್‌ಡೌನ್ ಅಸಿಸ್ಟೆನ್ಸ್, ಇಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್, ಟೈರ್ ಪ್ರೋಟೆಕ್ಟಿವ್ ಕವರ್ ಮತ್ತು ಝೀರೋ-ಡೆಪ್ರಿಸಿಯೇಶನ್ ಕವರ್ ಇತ್ಯಾದಿಗಳನ್ನು ಒಳಗೊಂಡಿರಬಹುದು.

ಮಾರುತಿ ಸುಜುಕಿ ಇಕೋಗಾಗಿ ಕಾರ್ ಇನ್ಶೂರೆನ್ಸ್

ಫ್ಯಾಮಿಲಿ ಕಾರಿನಂತೆ ಸಂಪೂರ್ಣವಾಗಿ ಸೂಕ್ತವಾಗಿದೆ. ಬಹುಶಃ ಅದಕ್ಕೆ ಕಾರಣ, ನಿಮ್ಮ ಪ್ರೀತಿಪಾತ್ರರ ಜೊತೆ ನೀವು ಪಡುವಷ್ಟು ಸಂತೋಷವನ್ನು ಯಾವುದೇ ಪ್ರಯಾಣವು ನೀಡುವುದಿಲ್ಲ. ಬಿಡುಗಡೆಯಾದಾಗಿನಿಂದ, ಮಾರುತಿ ಸುಜುಕಿ ಇಕೋ ಕಾರ್ ಲಕ್ಷಾಂತರ ಹೃದಯಗಳನ್ನು ಗೆದ್ದಿದೆ ಏಕೆಂದರೆ ಇದನ್ನು ವಿವಿಧ ಫಂಕ್ಷನಲ್ ಅಗತ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ನೀವು ನಿಮ್ಮ ಸ್ನೇಹಿತರೊಂದಿಗೆ, ಕುಟುಂಬದೊಂದಿಗೆ ಅಥವಾ ಬಿಸಿನೆಸ್ ಉದ್ದೇಶಗಳಿಗಾಗಿ ಹೊರಗೆ ಹೋಗುತ್ತಿರಲಿ, ಇಕೋ ತನ್ನ ಡಿಸೈನ್ ಮತ್ತು ಪರ್ಫಾರ್ಮೆನ್ಸ್‌ನಿಂದ ನಿಮ್ಮನ್ನು ಇಂಪ್ರೆಸ್ ಮಾಡಲು ಎಂದಿಗೂ ವಿಫಲವಾಗುವುದಿಲ್ಲ.

ನೀವು ಮಾರುತಿ ಸುಜುಕಿ ಇಕೋ ಅನ್ನು ಏಕೆ ಖರೀದಿಸಬೇಕು?

ಇಕೋ ನಿಮ್ಮ ಡ್ರೈವಿಂಗ್ ಅನುಭವಕ್ಕೆ ಅನುಕೂಲತೆ ಮತ್ತು ಸ್ಟೈಲ್ ಎರಡನ್ನೂ ತರುತ್ತದೆ. ಇಕೋ ಒಂದು ಫ್ಯಾಮಿಲಿ ಕಾರ್ ಆಗಿದೆ ಹಾಗೂ ಯುವಕರು ಮತ್ತು ಹಿರಿಯ ಆಡಿಯೆನ್ಸ್‌ಗಳೆನ್ನುವ ಭೇದ ಭಾವವಿಲ್ಲದೆ, ಎಲ್ಲರಿಗೂ ಸರಿಯಾದ ಸಮಾನ ಆಸ್ತಿಯಾಗಿದೆ.

ಹೆಡ್‌ಲ್ಯಾಂಪ್ ಲೆವೆಲಿಂಗ್, ಸೈಡ್ ಇಂಪ್ಯಾಕ್ಟ್ ಬೀಮ್‌ಗಳು, ಸೀಟ್ ಬೆಲ್ಟ್ ರಿಮೈಂಡರ್ (Dr + Co-Dr) ಮತ್ತು ಸ್ಪೀಡ್ ಅಲರ್ಟ್ ಸಿಸ್ಟಮ್‌ನಂತಹ ಫೀಚರ್‌ಗಳೊಂದಿಗೆ; ನೀವು ಖಂಡಿತವಾಗಿಯೂ ಸುರಕ್ಷಿತವಾಗಿರುತ್ತೀರಿ ಮತ್ತು ನಿಮ್ಮ ಆರಾಮಕ್ಕಾಗಿ ಹೀಟರ್, ಸ್ಲೈಡಿಂಗ್ ಡ್ರೈವರ್ ಸೀಟ್, ರಿಕ್ಲೈನಿಂಗ್ ಫ್ರಂಟ್ ಸೀಟ್‌ಗಳು ಮತ್ತು ಇಂಟಿಗ್ರೇಟೆಡ್ ಹೆಡ್ ರೆಸ್ಟ್‌ಗಳು- ಫ್ರಂಟ್ ರೋಗಳೊಂದಿಗೆ ಇಕೋ ಕಾರ್ ಬರುತ್ತದೆ.

ಈ ಕಾರ್ ಪವರ್‌ಫುಲ್ ಎಕ್ಸ್‌ಟೀರಿಯರ್ ಮತ್ತು ಸ್ಟೈಲಿಶ್ ಇಂಟೀರಿಯರ್ ಅನ್ನು ಹೊಂದಿದ್ದು, ಮೋಲ್ಡೆಡ್ ರೂಫ್ ಲೈನಿಂಗ್, ರಿಯರ್ ಕ್ಯಾಬಿನ್ ಲ್ಯಾಂಪ್, ಹೊಸ ಬಣ್ಣದ ಸೀಟ್ ಮ್ಯಾಚಿಂಗ್ ಇಂಟೀರಿಯರ್ ಬಣ್ಣ ಇಕೋ ಕಾರ್‌ಗೆ ಸ್ಟೈಲಿಶ್ ಲುಕ್ ನೀಡುತ್ತದೆ. ಮತ್ತು ಇದರ ಮನಸೆಳೆಯುವ ಅಂಶವೆಂದರೆ ಅದರ ಇಂಜಿನ್ ಮ್ಯಾನೇಜ್‌ಮೆಂಟ್ ಸಿಸ್ಟಮ್. ಅದು ಬೆರಗುಗೊಳಿಸುವ ಮೈಲೇಜ್ ಅನ್ನು ನೀಡುತ್ತದೆ.

ಇಕೋ ಕಾರಿನ ಎಲ್ಲಾ ವೇರಿಯಂಟ್‌ಗಳು 1.2-ಲೀಟರ್ ಪೆಟ್ರೋಲ್ ಇಂಜಿನ್‌ನಿಂದ ಚಾಲಿತವಾಗಿದ್ದು, ಇದು 6,000rpm ನಲ್ಲಿ 73bhp ಮತ್ತು 101Nm ಟಾರ್ಕ್ ಅನ್ನು ನೀಡುತ್ತದೆ. ಇಕೋ ಕಾರ್ ಫೈವ್-ಸೀಟರ್ ಮತ್ತು ಸೆವೆನ್-ಸೀಟರ್ ಆಯ್ಕೆಗಳಲ್ಲಿ ಲಭ್ಯವಿದೆ. ಸೆವೆನ್-ಸೀಟರ್ ಕೇವಲ ಒಂದು ಬೇಸಿಕ್ ವೇರಿಯಂಟ್‌ನಲ್ಲಿ ಲಭ್ಯವಿದೆ, ಆದರೆ ಫೈವ್-ಸೀಟರ್ ನಾಲ್ಕು ವೇರಿಯಂಟ್‌ಗಳಲ್ಲಿ ಲಭ್ಯವಿದೆ - ಬೇಸಿಕ್ ಫೈವ್-ಸೀಟರ್, ಫೈವ್-ಸೀಟರ್ ಎ.ಸಿ ಪ್ಲಸ್ ಹೀಟರ್, ಹೀಟರ್ ಮತ್ತು ಸಿ.ಎನ್.ಜಿ ಜೊತೆ ಫೈವ್-ಸೀಟರ್, ಎ.ಸಿ ಪ್ಲಸ್ ಹೀಟರ್ ಮತ್ತು ಸಿ.ಎನ್.ಜಿ ಜೊತೆ ಫೈವ್-ಸೀಟರ್.

ಚೆಕ್ ಮಾಡಿ: ಮಾರುತಿ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ

ವೇರಿಯಂಟ್‌ಗಳ ಬೆಲೆ ಪಟ್ಟಿ

ವೇರಿಯಂಟ್‌ಗಳ ಅಂದಾಜು ಬೆಲೆ ವೇರಿಯಂಟ್‌ಗಳ ಬೆಲೆ ಪಟ್ಟಿ
ಇಕೋ 5 ಸೀಟರ್ STD ₹ 4.30 ಲಕ್ಷ
ಇಕೋ 7 ಸೀಟರ್ STD ₹ 4.59 ಲಕ್ಷ
ಇಕೋ 5 ಸೀಟರ್ AC ₹ 5.60 ಲಕ್ಷ
ಇಕೋ CNG 5 ಸೀಟರ್ AC ₹ 5.68 ಲಕ್ಷ

[1]

ಪದೇ ಪದೇ ಕೇಳಲಾದ ಪ್ರಶ್ನೆಗಳು

ಕಾರ್ ಅಪಘಾತದಲ್ಲಿ ಕಾರ್ ಓನರ್‌ಗಳು ಮರಣ ಹೊಂದಿದರೆ, ಡಿಜಿಟ್ ಅವರ ಕುಟುಂಬಕ್ಕೆ ಪರಿಹಾರ ನೀಡುತ್ತದೆಯೇ?

ಹೌದು, ಡಿಜಿಟ್ ಐಆರ್‌ಡಿಎಐ ನ ಆದೇಶವನ್ನು ಅನುಸರಿಸುತ್ತದೆ ಮತ್ತು ಅಪಘಾತದಲ್ಲಿ ಓನರ್‌ಗಳು ಮರಣ ಹೊಂದಿದರೆ ಕಾರ್ ಓನರ್‌ಗಳ ಕುಟುಂಬಕ್ಕೆ ಡಿಜಿಟ್ ಪರಿಹಾರವನ್ನು ನೀಡುತ್ತದೆ.

ಮಾರುತಿ ಸುಜುಕಿ ಇಕೋ ಕಾರ್ ಇನ್ಶೂರೆನ್ಸ್‌ನಲ್ಲಿ ಹೆಚ್ಚುವರಿ ಆ್ಯಡ್-ಆನ್‌ಗಳೊಂದಿಗೆ ನನ್ನ ಡಿಜಿಟ್ ಥರ್ಡ್ ಪಾರ್ಟಿ ಪಾಲಿಸಿಯನ್ನು ನಾನು ಕಸ್ಟಮೈಸ್ ಮಾಡಬಹುದೇ?

ಪಾಲಿಸಿಹೋಲ್ಡರ್‌ಗಳು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ ಮಾತ್ರ ಹೆಚ್ಚುವರಿ ಆ್ಯಡ್-ಆನ್‌ಗಳೊಂದಿಗೆ ತಮ್ಮ ಪಾಲಿಸಿಗಳನ್ನು ಕಸ್ಟಮೈಸ್ ಮಾಡಲು ಡಿಜಿಟ್ ಅನುಮತಿಸುತ್ತದೆ.