ಮಾರುತಿ ಸುಜುಕಿ ಸಿಯಾಜ್ ಇನ್ಶೂರೆನ್ಸ್

Drive Less, Pay Less. With Digit Car Insurance.

Third-party premium has changed from 1st June. Renew now

ಮಾರುತಿ ಸುಜುಕಿ ಸಿಯಾಜ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸಿ ಅಥವಾ ರಿನೀವ್ ಮಾಡಿ

ಸುಜುಕಿಯಿಂದ ತಯಾರಿಸಲ್ಪಟ್ಟ, ಸಿಯಾಜ್ ಒಂದು ಸಬ್‌ಕಾಂಪ್ಯಾಕ್ಟ್ ಸೆಡಾನ್ ಆಗಿದ್ದು, ಇದು 2014 ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಮಾರಾಟವಾಯಿತು. ಪ್ರಸ್ತುತ, ಇದು ಈ ಜಪಾನಿನ ಆಟೋಮೊಬೈಲ್ ತಯಾರಕರು ಉತ್ಪಾದಿಸುವ ಅತಿದೊಡ್ಡ ಸೆಡಾನ್ ಆಗಿದೆ.

ಅದರ ಪ್ರಾರಂಭದಿಂದ ಹಿಡಿದು ಸೆಪ್ಟೆಂಬರ್ 2019 ರವರೆಗೆ, ಭಾರತದಲ್ಲಿ 2.7 ಲಕ್ಷಕ್ಕೂ ಹೆಚ್ಚು ಸಿಯಾಜ್ ಯುನಿಟ್‌ಗಳು ಮಾರಾಟವಾಗಿವೆ. ಹೀಗಾಗಿ, ಈ ಕಾರಿನ ಪ್ರವೇಶದ ನಂತರ ಬಿ-ಸೆಗ್ಮೆಂಟ್ ಸೆಡಾನ್ ಮಾರ್ಕೆಟ್‌ನ ಬೇಡಿಕೆ ಹೆಚ್ಚಾಯಿತು ಎಂಬುದು ಸ್ಪಷ್ಟವಾಗಿದೆ.

ಆರಂಭದಲ್ಲಿ ಈ ಮಾಡೆಲ್, ಆಟೋಮ್ಯಾಟಿಕ್ ಮತ್ತು ಮ್ಯಾನುಯಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಎರಡು ಇಂಜಿನ್‌ಗಳನ್ನು ಹೊಂದಿತ್ತು. ಇದು ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS), ಚೈಲ್ಡ್ ಸೇಫ್ಟಿ ಲಾಕ್‌ಗಳು, ಏರ್‌ಬ್ಯಾಗ್‌ಗಳಂತಹ ಕೆಲವು ಸುರಕ್ಷತಾ ಫೀಚರ್‌ಗಳೊಂದಿಗೆ ಬರುತ್ತದೆ. ಇದಲ್ಲದೆ, ಈ 5-ಸೀಟರ್ ಸೆಡಾನ್ 8 ವೇರಿಯಂಟ್‌ಗಳಲ್ಲಿ ಲಭ್ಯವಿದೆ.

ನೀವು ಈ ಕಾರನ್ನು ಡ್ರೈವ್ ಮಾಡುತ್ತಿದ್ದರೆ ಅಥವಾ ಅದರ ವೇರಿಯಂಟ್‌ಗಳಲ್ಲಿ ಒಂದನ್ನು ಖರೀದಿಸಲು ಪ್ಲ್ಯಾನ್ ಮಾಡುತ್ತಿದ್ದರೆ, ಆಯಾ ಕಾರ್ ಇನ್ಶೂರೆನ್ಸ್ ಪ್ಲ್ಯಾನ್‌ನ ಪ್ರಯೋಜನಗಳ ಬಗ್ಗೆ ನೀವು ತಿಳಿದಿರಬೇಕು. ಒಂದು ಉತ್ತಮವಾದ ಮಾರುತಿ ಸುಜುಕಿ ಸಿಯಾಜ್ ಕಾರ್ ಇನ್ಶೂರೆನ್ಸ್ ಪಾಲಿಸಿಯು ಆರ್ಥಿಕ ಮತ್ತು ಕಾನೂನು ಬಾಧ್ಯತೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಹಾಯ ಮಾಡುತ್ತದೆ.

ಈ ನಿಟ್ಟಿನಲ್ಲಿ, ನೀವು ಡಿಜಿಟ್‌ನಂತಹ ಹೆಸರಾಂತ ಇನ್ಶೂರೆನ್ಸ್ ಕಂಪನಿಯಿಂದ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಬಹುದು.

ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರಾಗಿ ಡಿಜಿಟ್ ಕಂಪನಿಯನ್ನು ಆಯ್ಕೆ ಮಾಡುವ ಕಾರಣಗಳ ಕುರಿತು ಇನ್ನಷ್ಟು ತಿಳಿಯಲು ಮುಂದೆ ಓದಿ.

ಮಾರುತಿ ಸಿಯಾಜ್ ಕಾರ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?

ನೀವು ಡಿಜಿಟ್‌ನ ಮಾರುತಿ ಸಿಯಾಜ್ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಮಾರುತಿ ಸುಜುಕಿ ಸಿಯಾಜ್‌ಗಾಗಿ ಕಾರ್‌ ಇನ್ಶೂರೆನ್ಸ್ ಪ್ಲ್ಯಾನ್‌ಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದಾಗಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟ

×

ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟಗಳು

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟ

×

ಥರ್ಡ್ ಪಾರ್ಟಿ ವಾಹನಕ್ಕೆ ಆಗುವ ಹಾನಿ

×

ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಆಗುವ ಹಾನಿ

×

ಪರ್ಸನಲ್ ಆಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು

×

ನಿಮ್ಮ ಕಾರಿನ ಕಳ್ಳತನ

×

ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ ಮಾಡಿದ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ.

ಕ್ಲೈಮ್ ಅನ್ನು ಹೇಗೆ ಫೈಲ್ ಮಾಡುವುದು?

ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ, ನೀವು ಚಿಂತಾ-ಮುಕ್ತರಾಗಿ ಬದುಕುತ್ತೀರಿ! ಏಕೆಂದರೆ, ನಾವು ಕೇವಲ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.

ಹಂತ 1

1800-258-5956 ಸಂಖ್ಯೆಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವಯಂ ತಪಾಸಣೆಗಾಗಿ (self inspection) ಲಿಂಕ್ ಪಡೆಯಿರಿ. ಹಂತ ಹಂತವಾಗಿ ನೀಡುವ ಮಾರ್ಗದರ್ಶನದಂತೆ, ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನದ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ನೀವು ರಿಇಂಬರ್ಸಮೆಂಟ್ ಅಥವಾ ಕ್ಯಾಶ್‌ಲೆಸ್ ಆಯ್ಕೆಗಾಗಿ, ರಿಪೇರಿ ವಿಧಾನವನ್ನು ಆರಿಸಿ.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು ನೀವೀಗ ಅದನ್ನೇ ಮಾಡುತ್ತಿರುವಿರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ಮಾರುತಿ ಸುಜುಕಿ ಸಿಯಾಜ್ ಕಾರ್ ಇನ್ಶೂರೆನ್ಸ್‌ಗಾಗಿ ಡಿಜಿಟ್ ಅನ್ನು ಏಕೆ ಆಯ್ಕೆ ಮಾಡಬೇಕು?

ನಿಮ್ಮ ಮಾರುತಿ ಕಾರಿಗೆ ಅತ್ಯುತ್ತಮ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಲು, ನೀವು ಆನ್‌ಲೈನ್‌ನಲ್ಲಿ ವಿವಿಧ ಇನ್ಶೂರರ್‌ಗಳ ಪ್ಲ್ಯಾನ್‌ಗಳನ್ನು ಹೋಲಿಕೆ ಮಾಡಬೇಕಾಗುತ್ತದೆ. ಈ ರೀತಿಯಾಗಿ, ನೀವು ಗರಿಷ್ಠ ಸರ್ವೀಸ್ ಪ್ರಯೋಜನಗಳನ್ನು ಕೊಡುವ ಮತ್ತು ಸ್ಪರ್ಧಾತ್ಮಕ ಪ್ರೀಮಿಯಂಗಳಲ್ಲಿ ಇನ್ಶೂರೆನ್ಸ್ ಅನ್ನು ನೀಡುವ ಪೂರೈಕೆದಾರರನ್ನು ಆಯ್ಕೆ ಮಾಡಬಹುದು.

ಆ ನಿಟ್ಟಿನಲ್ಲಿ, ನೀವು ಡಿಜಿಟ್‌ನ ಆಫರ್‌ಗಳನ್ನು ರೆಫರ್ ಮಾಡುವುದನ್ನು ಪರಿಗಣಿಸಬಹುದು ಮತ್ತು ನಿಮ್ಮ ಆಯ್ಕೆಗಳನ್ನು ಇನ್ನಷ್ಟು ಸುಗಮಗೊಳಿಸಬಹುದು:

1. ವಿವಿಧ ಇನ್ಶೂರೆನ್ಸ್ ಪಾಲಿಸಿಗಳು

ಡಿಜಿಟ್ ಇನ್ಶೂರೆನ್ಸ್ ಅನ್ನು ಆಯ್ಕೆಮಾಡಿಕೊಳ್ಳುವ ಜನರು ತಮ್ಮ ಅವಶ್ಯಕತೆಗಳ ಆಧಾರದ ಮೇಲೆ ಈ ಕೆಳಗಿನವುಗಳಿಂದ ಆಯ್ಕೆ ಮಾಡಬಹುದು:

  • ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿ: ಮಾರುತಿ ಸುಜುಕಿ ಸಿಯಾಜ್‌ಗೆ ಥರ್ಡ್-ಪಾರ್ಟಿ ಇನ್ಶೂರೆನ್ಸ್‌ನ ಅಡಿಯಲ್ಲಿ, ಥರ್ಡ್ ಪಾರ್ಟಿ ವ್ಯಕ್ತಿಗಳಿಗೆ, ಪ್ರಾಪರ್ಟಿಗಳಿಗೆ ಅಥವಾ ವಾಹನಗಳಿಗೆ ಉಂಟಾಗುವ ಹಾನಿಗಳ ವಿರುದ್ಧ ಕವರೇಜ್ ಪ್ರಯೋಜನಗಳನ್ನು ನಿರೀಕ್ಷಿಸಬಹುದು. ಇದು ನಿಮ್ಮ ಮಾರುತಿ ಸುಜುಕಿ ಸಿಯಾಜ್ ಕಾರ್ ಮತ್ತು ಥರ್ಡ್ ಪಾರ್ಟಿ ಪ್ರಾಪರ್ಟಿ / ವ್ಯಕ್ತಿಯ ನಡುವೆ ಅಪಘಾತಗಳಿಂದ ಉಂಟಾಗುವ ಲಿಟಿಗೇಶನ್ ಸಮಸ್ಯೆಗಳನ್ನು ಸಹ ಕವರ್ ಮಾಡುತ್ತದೆ. ಹೆಚ್ಚುವರಿಯಾಗಿ, ಮೋಟಾರ್ ವೆಹಿಕಲ್ಸ್ ಆ್ಯಕ್ಟ್, 1988 ರ ಪ್ರಕಾರ, ಈ ಬೇಸಿಕ್ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಹೊಂದುವುದು ಕಡ್ಡಾಯವಾಗಿದೆ. ಈ ಇನ್ಶೂರೆನ್ಸ್ ಪಡೆಯದೆ ಡ್ರೈವ್ ಮಾಡುವುದರಿಂದ ನೀವು ಭಾರೀ ದಂಡವನ್ನು ತೆರಬೇಕಾಗಬಹುದು. ಹೀಗಾಗಿ, ನೀವು ಈ ಪ್ಲ್ಯಾನ್ ಅನ್ನು ಡಿಜಿಟ್‌ನಿಂದ ಖರೀದಿಸಬಹುದು ಮತ್ತು ನಿಮ್ಮ ಲಯಬಿಲಿಟಿಗಳನ್ನು ಕಡಿಮೆ ಮಾಡಬಹುದು.

  • ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿ : ಅಪಘಾತಗಳಾದಲ್ಲಿ ನಿಮ್ಮ ಮಾರುತಿ ಕಾರಿಗೆ ಉಂಟಾದ ಹಾನಿಯನ್ನು ಸರಿಪಡಿಸುವ ವೆಚ್ಚವನ್ನು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಕವರ್ ಮಾಡುವುದಿಲ್ಲ. ಆದಾಗ್ಯೂ, ಡಿಜಿಟ್‌ನ ಕಾಂಪ್ರೆಹೆನ್ಸಿವ್ ಸುಜುಕಿ ಸಿಯಾಜ್ ಇನ್ಶೂರೆನ್ಸ್ ಪ್ಲ್ಯಾನ್ ನಿಮ್ಮ ಥರ್ಡ್ ಪಾರ್ಟಿ ಲಯಬಿಲಿಟಿಗಳೊಂದಿಗೆ ಸ್ವಂತ ಹಾನಿಗಳನ್ನು ಪರಿಣಾಮಕಾರಿಯಾಗಿ ಕವರ್ ಮಾಡಬಹುದು. ಅಪಘಾತಗಳು, ಕಳ್ಳತನ, ಬೆಂಕಿ ಮತ್ತು ನೈಸರ್ಗಿಕ ಅಥವಾ ಕೃತಕ ವಿಪತ್ತುಗಳಿಂದ ಉಂಟಾಗುವ ಹಾನಿಗಳ ವಿರುದ್ಧ ತನ್ನ ಕಾಂಪ್ರೆಹೆನ್ಸಿವ್ ಕವರೇಜಿನ ಕಾರಣಕ್ಕಾಗಿ ಈ ಪ್ಲ್ಯಾನ್, ಥರ್ಡ್ ಪಾರ್ಟಿ ಪ್ಲ್ಯಾನ್‌ಗಳಿಗಿಂತ ಹೆಚ್ಚಿನ ಬೆಲೆಯಲ್ಲಿ ಲಭ್ಯವಿದೆ.

2. ಹಲವಾರು ನೆಟ್‌ವರ್ಕ್ ಗ್ಯಾರೇಜ್‌ಗಳು

ಮಾರುತಿ ಸುಜುಕಿ ಸಿಯಾಜ್‌ಗಾಗಿ ಕಾರ್ ಇನ್ಶೂರೆನ್ಸ್ ಅನ್ನು ಪಡೆಯುವ ಮೂಲಕ, ಭಾರತದಾದ್ಯಂತ ಇರುವ ಹಲವಾರು ಡಿಜಿಟ್ ನೆಟ್‌ವರ್ಕ್ ಕಾರ್ ಗ್ಯಾರೇಜ್‌ಗಳಿಂದ ಪ್ರೊಫೆಷನಲ್ ರಿಪೇರಿ ಸರ್ವೀಸ್‌ಗಳನ್ನು ಪಡೆಯಬಹುದು. ಈ ನೆಟ್‌ವರ್ಕ್ ಗ್ಯಾರೇಜ್‌ಗಳು ಒಬ್ಬ ವ್ಯಕ್ತಿಗೆ ಕ್ಯಾಶ್‌ಲೆಸ್ ರಿಪೇರಿ ವಿಧಾನವನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತವೆ.

3. ಕ್ಯಾಶ್‌ಲೆಸ್ ಕ್ಲೈಮ್‌ಗಳು

ಡಿಜಿಟ್ ತನ್ನ ಕಸ್ಟಮರ್‌ಗಳಿಗೆ ತಮ್ಮ ಮಾರುತಿ ಕಾರನ್ನು ಆಫೀಷಿಯಲ್ ನೆಟ್‌ವರ್ಕ್ ಗ್ಯಾರೇಜ್‌ನಿಂದ ರಿಪೇರಿ ಮಾಡುವಾಗ ಕ್ಯಾಶ್‌ಲೆಸ್ ಸೌಲಭ್ಯವನ್ನು ಪಡೆಯಲು ಅನುಮತಿಸುತ್ತದೆ. ಈ ಸೌಲಭ್ಯದ ಅಡಿಯಲ್ಲಿ, ಇನ್ಶೂರೆನ್ಸ್ ಕಂಪನಿಯು ತಮ್ಮ ಪರವಾಗಿ ಪಾವತಿಯನ್ನು ಇತ್ಯರ್ಥಪಡಿಸುವುದರಿಂದ, ಕಸ್ಟಮರ್‌ಗಳು ಯಾವುದೇ ಹಣವನ್ನು ಪಾವತಿಸದೆ ರಿಪೇರಿ ಸರ್ವೀಸ್‌ಗಳನ್ನು ಪಡೆಯಬಹುದು. ಈ ರಿಪೇರಿ ವಿಧಾನವು ಅಪಘಾತಗಳು ಹಾಗೂ ನಿಮ್ಮ ಮಾರುತಿ ಸಿಯಾಜ್‌ಗೆ ಸಂಬಂಧಿಸಿದ ಇತರ ತುರ್ತು ಸಂದರ್ಭಗಳಲ್ಲಿ ತುರ್ತು ಹಣದ ಅಗತ್ಯವನ್ನು ನಿವಾರಿಸುತ್ತದೆ.

4. ಸರಳ ಆನ್‌ಲೈನ್‌ ಪ್ರಕ್ರಿಯೆ

ನೀವು ಕೆಲವು ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ, ನಿಮ್ಮ ಸ್ಮಾರ್ಟ್‌ಫೋನ್ ಮೂಲಕ ಡಿಜಿಟ್‌ನಿಂದ ಆನ್‌ಲೈನ್‌ನಲ್ಲಿ ಮಾರುತಿ ಸುಜುಕಿ ಸಿಯಾಜ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸಬಹುದು. ಟ್ರೆಡಿಷನಲ್ ಆಫ್‌ಲೈನ್ ವಿಧಾನಕ್ಕೆ ಹೋಲಿಸಿದರೆ, ಈ ಪ್ರಕ್ರಿಯೆಯು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ ಮತ್ತು ಹೆಚ್ಚು ಅನುಕೂಲತೆಯನ್ನು ನೀಡುತ್ತದೆ.

5. ಹಲವಾರು ಆ್ಯಡ್-ಆನ್ ಪಾಲಿಸಿಗಳು

ಡಿಜಿಟ್‌ನ ಕಾಂಪ್ರೆಹೆನ್ಸಿವ್ ಮಾರುತಿ ಸುಜುಕಿ ಸಿಯಾಜ್ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸುವ ಮೂಲಕ, ಹೆಚ್ಚುವರಿ ರಕ್ಷಣೆಗಾಗಿ ಕಸ್ಟಮರ್‌ಗಳು ತಮ್ಮ ಬೇಸಿಕ್ ಇನ್ಶೂರೆನ್ಸ್ ಪ್ಲ್ಯಾನ್‌ಗಿಂತ ಹೆಚ್ಚಿನ ಆ್ಯಡ್-ಆನ್ ಪಾಲಿಸಿಗಳನ್ನು ಸೇರಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಆದಾಗ್ಯೂ, ಆ್ಯಡ್-ಆನ್ ಪ್ರಯೋಜನಗಳನ್ನು ಸೇರಿಸಲು, ಜನರು ತಮ್ಮ ಮಾರುತಿ ಸುಜುಕಿ ಸಿಯಾಜ್ ಇನ್ಶೂರೆನ್ಸ್ ಬೆಲೆಯನ್ನು ಸಹ ಹೆಚ್ಚಿಸಬೇಕಾಗುತ್ತದೆ.

6. ಐಡಿವಿ (IDV) ಕಸ್ಟಮೈಸೇಶನ್

ಮಾರುತಿ ಸುಜುಕಿ ಸಿಯಾಜ್ ಇನ್ಶೂರೆನ್ಸ್ ವೆಚ್ಚವನ್ನು ನಿರ್ಧರಿಸಲು ಇನ್ಶೂರೆನ್ಸ್ ಕಂಪನಿಯು ನಿಮ್ಮ ಮಾರುತಿ ಕಾರಿನ 'ಇನ್ಶೂರೆನ್ಸ್‌ನ ಘೋಷಿತ ಮೌಲ್ಯ'ವನ್ನು ಮೌಲ್ಯಮಾಪನ ಮಾಡುತ್ತಾರೆ. ಅದಕ್ಕಾಗಿ, ಅವರು ಕಾರ್ ತಯಾರಕರ ಮಾರಾಟದ ಬೆಲೆಯಿಂದ ಕಾರಿನ ಡೆಪ್ರಿಸಿಯೇಶನ್ ಅನ್ನು ಕಳೆಯುತ್ತಾರೆ. ಆದಾಗ್ಯೂ, ಡಿಜಿಟ್ ಇನ್ಶೂರೆನ್ಸ್ ಅನ್ನು ಪಡೆಯುವ ಮೂಲಕ, ಈ ಮೌಲ್ಯವನ್ನು ಸ್ವತಃ ನೀವೇ ಕಸ್ಟಮೈಸ್ ಮಾಡಬಹುದು ಮತ್ತು ಕಾರು ಕಳ್ಳತನವಾದಲ್ಲಿ ಅಥವಾ ಕಾರಿಗೆ ಸರಿಪಡಿಸಲಾಗದ ಹಾನಿಯಾದಲ್ಲಿ ನಿಮ್ಮ ಆದಾಯವನ್ನು ಗರಿಷ್ಠಗೊಳಿಸಬಹುದು.

7. ಬೋನಸ್‌ಗಳು ಮತ್ತು ಡಿಸ್ಕೌಂಟ್‌ಗಳು

ನಿಮ್ಮ ಪಾಲಿಸಿ ಅವಧಿಯ ಒಂದು ವರ್ಷದವರೆಗೆ ನಿಮ್ಮ ಇನ್ಶೂರೆನ್ಸ್ ಪ್ಲ್ಯಾನ್‌ನ ವಿರುದ್ಧ ನೀವು ಯಾವುದೇ ಕ್ಲೈಮ್ ಮಾಡದಿದ್ದರೆ, ಡಿಜಿಟ್‌ನಂತಹ ಇನ್ಶೂರೆನ್ಸ್ ಪೂರೈಕೆದಾರರು ಮಾರುತಿ ಸುಜುಕಿ ಸಿಯಾಜ್ ಕಾರ್ ಇನ್ಶೂರೆನ್ಸ್‌ನ ರಿನೀವಲ್ ಬೆಲೆಯಲ್ಲಿ ನಿಮಗೆ 50% ವರೆಗೆ ಡಿಸ್ಕೌಂಟ್‌ಗಳನ್ನು ನೀಡುತ್ತಾರೆ. ಈ ಡಿಸ್ಕೌಂಟ್‌ಗಳನ್ನು 'ನೋ ಕ್ಲೈಮ್ ಬೋನಸ್' (NCB) ಎಂದೂ ಕರೆಯಲಾಗುತ್ತದೆ.

8. ಕ್ರಿಯಾಶೀಲ ಕಸ್ಟಮರ್ ಸಪೋರ್ಟ್

ಮಾರುತಿ ಸುಜುಕಿ ಸಿಯಾಜ್ ಕಾರ್ ಇನ್ಶೂರೆನ್ಸ್‌ನ ರಿನೀವಲ್ ಸಮಯದಲ್ಲಿ ನೀವು ಯಾವುದಾದರೂ ಪ್ರಶ್ನೆ ಮತ್ತು ಸಂದೇಹಗಳನ್ನು ಎದುರಿಸಬಹುದು. ಅಂತಹ ಸಂದರ್ಭಗಳಲ್ಲಿ, ಡಿಜಿಟ್‌ನ 24x7 ಕಸ್ಟಮರ್ ಸರ್ವೀಸ್ ನಿಮಗೆ ತ್ವರಿತ ಪರಿಹಾರಗಳನ್ನು ನೀಡಬಹುದು.

ಇದರ ಹೊರತಾಗಿ, ಕಡಿಮೆ ಪ್ರೀಮಿಯಂನಲ್ಲಿ ಮಾರುತಿ ಸುಜುಕಿ ಸಿಯಾಜ್ ಕಾರ್ ಇನ್ಶೂರೆನ್ಸ್ ಪಡೆಯಲು ನೀವು ಹೆಚ್ಚಿನ ಡಿಡಕ್ಟಿಬಲ್ ಪ್ಲ್ಯಾನ್ ಅನ್ನು ಆಯ್ಕೆಮಾಡಿ. ಆದಾಗ್ಯೂ, ನೀವು ಕಡಿಮೆ ಕ್ಲೈಮ್‌ಗಳನ್ನು ಮಾಡಲು ಬಯಸಿದರೆ ಮಾತ್ರ ನೀವು ಅಂತಹ ಪ್ಲ್ಯಾನ್‌ಗಳನ್ನು ಖರೀದಿಸಬೇಕು.

ನಿಮ್ಮ ಮಾರುತಿ ಸುಜುಕಿ ಸಿಯಾಜ್‌ಗಾಗಿ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯವಾಗಿದೆ?

ಮಾರುತಿ ಸುಜುಕಿ ಸಿಯಾಜ್ ಒಂದು ಲಕ್ಷುರಿಯನ್ನು ನೀಡುವ ದುಬಾರಿ ಕಾರ್ ಆಗಿದೆ. ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ನಿಮ್ಮ ಇಷ್ಟದ ಕಾರನ್ನು ಒಂದು ಅಥವಾ ಹೆಚ್ಚಿನ ಅನಿರೀಕ್ಷಿತ ಸಂದರ್ಭಗಳಿಂದ ಉಂಟಾಗಬಹುದಾದ ಯಾವುದೇ ಹಾನಿ ಮತ್ತು ನಷ್ಟಗಳಿಂದ ರಕ್ಷಿಸುತ್ತದೆ:

  • ಫೈನಾನ್ಸಿಯಲ್ ಲಯಬಿಲಿಟಿಗಳು : ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್‌ನ ಅಡಿಯಲ್ಲಿ ಓನ್ ಡ್ಯಾಮೇಜ್ ಕವರ್, ನಿಮ್ಮ ಸ್ವಂತ ಕಾರಿನ ಹಾನಿಯಿಂದಾಗಿ ಉಂಟಾದ ಫೈನಾನ್ಸಿಯಲ್ ಲಯಬಿಲಿಟಿಗಳನ್ನು ಸರಿದೂಗಿಸುತ್ತದೆ. ಕಳ್ಳತನ, ಗಲಭೆಗಳು ಮತ್ತು ಮುಷ್ಕರ, ಬೆಂಕಿ, ನೈಸರ್ಗಿಕ ವಿಕೋಪಗಳು ಅಥವಾ ಯಾವುದೇ ಥರ್ಡ್ ಪಾರ್ಟಿ ವಾಹನದಿಂದಲೂ ನಿಮ್ಮ ಕಾರಿಗೆ ಹಾನಿ ಸಂಭವಿಸಬಹುದು.
  • ಕಾನೂನುಬದ್ಧವಾದ ಕಂಪ್ಲೈಂಟ್ : ಕಾರ್ ಇನ್ಶೂರೆನ್ಸ್ ಪಾಲಿಸಿಯು ರಸ್ತೆಯಲ್ಲಿ ವಾಹನವನ್ನು ಡ್ರೈವ್ ಮಾಡಲು ಒಂದು ರೀತಿಯ ಕಾನೂನಿನ ಅನುಮತಿಯಾಗಿದೆ. ಭಾರತದಲ್ಲಿ, ಇನ್ಶೂರೆನ್ಸ್ ಪಾಲಿಸಿ ಇಲ್ಲದೆ ಕಾರ್ ಡ್ರೈವ್ ಮಾಡುವುದು ಕಾನೂನುಬಾಹಿರವಾಗಿದೆ.
  • ಥರ್ಡ್-ಪಾರ್ಟಿ ಲಯಬಿಲಿಟಿ : ಥರ್ಡ್-ಪಾರ್ಟಿ ಲಯಬಿಲಿಟಿ ಇನ್ಶೂರೆನ್ಸ್ ಅನ್ನು ಸ್ಟ್ಯಾಂಡ್‌ಲೋನ್ ಪಾಲಿಸಿಯಾಗಿ ಖರೀದಿಸಬಹುದು ಅಥವಾ ಕಾಂಪ್ರೆಹೆನ್ಸಿವ್ ಕವರ್‌ನಲ್ಲಿ ಸೇರಿಸುವಂತೆ ಖರೀದಿಸಬಹುದು. ನಿಮ್ಮ ಕಾರ್ ಯಾವುದೇ ಥರ್ಡ್ ಪಾರ್ಟಿಗೆ ಹಾನಿಯನ್ನುಂಟು ಮಾಡುವ ಸಂದರ್ಭಗಳಲ್ಲಿ ಇದು ನಿಮಗೆ ಪರಿಹಾರವನ್ನು ನೀಡುತ್ತದೆ.
  • ಕಾಂಪ್ರೆಹೆನ್ಸಿವ್ ಕವರ್‌ನ ಅಡಿಯಲ್ಲಿ ಆ್ಯಡ್-ಆನ್ ಪ್ರಾವಿಷನ್  : ಹೆಚ್ಚಿನ ರಕ್ಷಣೆಯನ್ನು ನೀಡುವ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಅನ್ನು ನಿಮ್ಮ ಕಾರಿಗಾಗಿ ಖರೀದಿಸುವುದು ಬುದ್ಧಿವಂತ ಆಯ್ಕೆಯಾಗಿದೆ. ಇದು ನಿಮ್ಮನ್ನು ಮತ್ತು ನಿಮ್ಮ ಕಾರನ್ನು ಸ್ವಂತ ಹಾನಿಗಳಿಂದ ರಕ್ಷಿಸುತ್ತದೆ ಮತ್ತು ಉತ್ತಮ ರಕ್ಷಣೆಗಾಗಿ ನಿಮ್ಮ ಪಾಲಿಸಿಯನ್ನು ಮತ್ತಷ್ಟು ಕಸ್ಟಮೈಸ್ ಮಾಡಲು ನಿಮ್ಮನ್ನು ಅನುಮತಿಸುತ್ತದೆ. ಬ್ರೇಕ್‌ಡೌನ್ ಅಸಿಸ್ಟೆನ್ಸ್, ಇಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್, ಟೈರ್ ಪ್ರೋಟೆಕ್ಟಿವ್ ಕವರ್, ರಿಟರ್ನ್ ಟು ಇನ್‌ವಾಯ್ಸ್ ಕವರ್‌ ಮತ್ತು ಝೀರೋ-ಡೆಪ್ರಿಸಿಯೇಶನ್ ಕವರ್‌ನಂತಹ ಕಾರ್ ಇನ್ಶೂರೆನ್ಸ್ ಆ್ಯಡ್-ಆನ್ ಕವರ್‌ಗಳನ್ನು ಆಯ್ಕೆ ಮಾಡುವ ಮೂಲಕ ನೀವು ಹಾಗೆ ಮಾಡಬಹುದು.

ಮಾರುತಿ ಸುಜುಕಿ ಸಿಯಾಜ್ ಕುರಿತು ಇನ್ನಷ್ಟು ತಿಳಿಯಿರಿ

ಪ್ರತಿಯೊಂದು ವಿಭಾಗದಲ್ಲೂ ತನ್ನ ಬೇಡಿಕೆಯನ್ನು ಪೂರೈಸುವ ಮೂಲಕ, ಮಾರುತಿ ಸುಜುಕಿ ಇತ್ತೀಚೆಗೆ ಸಿಯಾಜ್ ಹೆಸರಿನಲ್ಲಿ ಸೊಗಸಾದ ಸೆಡಾನ್ ಅನ್ನು ಬಿಡುಗಡೆ ಮಾಡಿತು. ಅದರ ಲುಕ್ ಮತ್ತು ಫೀಲ್‌ನಲ್ಲಿ ಕ್ಲಾಸಿಯಾಗಿರುವ ಈ ಕಾರ್, ನಿಮ್ಮ ಲಕ್ಷುರಿಯನ್ನು ಹೆಚ್ಚು ಕಾಂಪ್ಯಾಕ್ಟ್ ಆದ ರೀತಿಯಲ್ಲಿ ವ್ಯಾಖ್ಯಾನಿಸುತ್ತದೆ. ಮಾರುತಿ ಸಿಯಾಜ್‌ನ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ವೇರಿಯಂಟ್‌ಗಳು ಲಭ್ಯವಿದೆ. ಎರಡು ರೀತಿಯ ಇಂಜಿನ್‌ಗಳಿಗೆ ಫ್ಯೂಯೆಲ್ ಕೆಪ್ಯಾಸಿಟಿಯು ಸುಮಾರು 1.5 ಲೀಟರ್ ಆಗಿದೆ.

ಬಿಡುಗಡೆಯಾದ ತಕ್ಷಣವೇ, ಮಾರುತಿ ಸುಜುಕಿ ಸಿಯಾಜ್ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ C ಸೆಗ್ಮೆಂಟ್‌ನ ಸೆಡಾನ್ ಆಯಿತು. 1498 ಸಿಸಿ ಇಂಜಿನ್ ಮತ್ತು ಪ್ರತಿ ಲೀಟರ್‌ಗೆ 28.09 ಕಿಮೀ ಮೈಲೇಜ್ ಹೊಂದಿರುವ ಫ್ಯೂಯೆಲ್ ಎಫಿಷಿಯೆಂಟ್‌ನ ಕಾರ್ ಇದಾಗಿದೆ. ಇದು 4 ವೇರಿಯಂಟ್‌ಗಳೊಂದಿಗೆ ಬರುತ್ತದೆ, ಅದರಲ್ಲಿ ಡೆಲ್ಟಾ ಅತೀ ಹೆಚ್ಚು ಮಾರಾಟವಾಗುವ ಮಾಡೆಲ್ ಆಗಿದೆ.

ನೀವು ಮಾರುತಿ ಸುಜುಕಿ ಸಿಯಾಜ್ ಅನ್ನು ಏಕೆ ಖರೀದಿಸಬೇಕು?

ಲಕ್ಷುರಿ ಡ್ರೈವ್ ಬಯಸುವ ಜನರಿಗೆ ಮಾರುತಿ ಸುಜುಕಿ ಸಿಯಾಜ್ ಅತ್ಯುತ್ತಮ ಕಾರ್ ಆಗಿದೆ. ದೂರದ ಪ್ರಯಾಣಕ್ಕೆ ಅನುಕೂಲಕರವಾಗಿರುವ ಈ ಕಾರ್, ಸುಮಾರು 5 ಜನರಿಗೆ ಸುಲಭವಾಗಿ ಅವಕಾಶ ಕಲ್ಪಿಸುತ್ತದೆ. ನಿಮ್ಮ ಆಯ್ಕೆಗಾಗಿ ಇದು ಸಿಗ್ಮಾ (ಬೇಸ್), ಡೆಲ್ಟಾ, ಝೀಟಾ ಮತ್ತು ಆಲ್ಫಾ (ಟಾಪ್) ಸೇರಿದಂತೆ ನಾಲ್ಕು ವೇರಿಯಂಟ್‌ಗಳನ್ನು ಹೊಂದಿದೆ.

ರಿಫೈನ್ಡ್ ಇಂಜಿನ್‌ನಂತಹ ಇತ್ತೀಚಿನ ಫೀಚರ್‌ಗಳೊಂದಿಗೆ ನೀವು ಅನುಕೂಲತೆಯನ್ನು ಹುಡುಕುತ್ತಿದ್ದರೆ, ಮಾರುತಿ ಸುಜುಕಿ ಸಿಯಾಜ್ ಸರಾಸರಿಗಿಂತ ಹೆಚ್ಚಿನ ಪರ್ಫಾಮೆನ್ಸ್ ಅನ್ನು ಹೊಂದಿದೆ. ಕಾರ್ ಒಳಗಿನಿಂದ ಮತ್ತು ಹೊರಗಿನಿಂದ ಸರಿಯಾದ ಸೂಕ್ಷ್ಮತೆಯನ್ನು ಹೊಂದಿದೆ ಮತ್ತು ₹8.19 ಲಕ್ಷಗಳಿಂದ ₹11.37 ಲಕ್ಷಗಳ ಬೆಲೆಯಲ್ಲಿ ಲಭ್ಯವಿದೆ.

ಸುರಕ್ಷತೆಯು ನಿಮ್ಮ ಮೊದಲ ಕಾಳಜಿಯಾಗಿದ್ದರೆ, ಮುಂಭಾಗದಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಸ್ಪೀಡ್ ಅಲರ್ಟ್ ಸಿಸ್ಟಮ್, ಸೀಟ್ ಬೆಲ್ಟ್ ರಿಮೈಂಡರ್ ಮತ್ತು ಚೈಲ್ಡ್ ಸೀಟ್ ಆಂಕರ್‌ಗಳನ್ನು ಒಳಗೊಂಡಿರುವುದರಿಂದ ಈ ಕಾರ್ ನಿಮಗೆ ಅಂತಹ ಭರವಸೆಯನ್ನು ನೀಡುತ್ತದೆ. 7-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಆ್ಯಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪ್ಯಾಸಿವ್ ಕೀಲೆಸ್ ಎಂಟ್ರಿ ಮತ್ತು ಸೊಗಸಾಗಿ ಕಾಣುವ ಲೆದರ್ ಅಪ್‌ಹೋಲ್‌ಸ್ಟರಿಯಂತಹ ಇನ್-ಬಿಲ್ಟ್ ಫೀಚರ್‌ಗಳೊಂದಿಗೆ ಸ್ಟೇಟಸ್ ಸ್ಟೇಟ್‌ಮೆಂಟ್ ಅನ್ನು ಮರು ವ್ಯಾಖ್ಯಾನಿಸಲು ಮಾರುತಿ ಸುಜುಕಿ ಸಿಯಾಜ್ ಅನ್ನು ಖರೀದಿಸಿ.

ಚೆಕ್ ಮಾಡಿ: ಮಾರುತಿ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ

ವೇರಿಯಂಟ್‌ಗಳ ಹೆಸರು

ವೇರಿಯಂಟ್‌ಗಳ ಹೆಸರು ವೇರಿಯಂಟ್‌ಗಳ ಅಂದಾಜು ಬೆಲೆ (ನವದೆಹಲಿಯಲ್ಲಿ, ಇತರ ನಗರಗಳಲ್ಲಿ ಬೆಲೆಯು ಬದಲಾಗಬಹುದು)
ಸಿಗ್ಮಾ ₹ 9.75 ಲಕ್ಷ
ಡೆಲ್ಟಾ ₹ 10.45 ಲಕ್ಷ
ಝೀಟಾ ₹ 11.10 ಲಕ್ಷ
ಆಲ್ಫಾ ₹ 12.13 ಲಕ್ಷ
ಡೆಲ್ಟಾ AT ₹ 12.19 ಲಕ್ಷ
S ₹ 12.26 ಲಕ್ಷ
ಝೀಟಾ AT ₹ 12.86 ಲಕ್ಷ
ಆಲ್ಫಾ AT ₹ 13.49 ಲಕ್ಷ

[1]

ಪದೇ ಪದೇ ಕೇಳಲಾದ ಪ್ರಶ್ನೆಗಳು

ನನ್ನ ಸೆಕೆಂಡ್ ಹ್ಯಾಂಡ್ ಮಾರುತಿ ಸುಜುಕಿ ಸಿಯಾಜ್‌ಗಾಗಿ ನಾನು ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಬಹುದೇ?

ಹೌದು, ನಿಮ್ಮ ಸೆಕೆಂಡ್ ಹ್ಯಾಂಡ್ ಕಾರಿಗೆ ನೀವು ಮಾರುತಿ ಸುಜುಕಿ ಸಿಯಾಜ್ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಬಹುದು ಮತ್ತು ಹಿಂದಿನ ಓನರ್‌ಗಳು ಪಾಲಿಸಿಯನ್ನು ಹೊಂದಿದ್ದರೆ, ಅದನ್ನು ನಿಮ್ಮ ಹೆಸರಿಗೆ ವರ್ಗಾಯಿಸಬಹುದು.

ನಾನು ಇನ್ಶೂರರ್‌ನ ನೆಟ್‌ವರ್ಕ್ ಗ್ಯಾರೇಜ್‌ಗೆ ಭೇಟಿ ನೀಡಲು ಸಾಧ್ಯವಾಗದಿದ್ದರೆ, ನನ್ನ ಮಾರುತಿ ಸುಜುಕಿ ಸಿಯಾಜ್ ಕಾರಿನ ಭಾಗಗಳನ್ನು ನಾನು ರಿಪೇರಿ ಮಾಡಿಸಬಹುದೇ?

ಹೌದು, ಕೆಲವು ಇನ್ಶೂರರ್‌ಗಳು ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್ ಸೌಲಭ್ಯಗಳನ್ನು ಒದಗಿಸುತ್ತಾರೆ. ಅದು ನಿಮ್ಮ ಹಾನಿಗೊಳಗಾದ ಕಾರಿನ ಭಾಗಗಳನ್ನು ನಿಮ್ಮ ಮನೆಯಿಂದಲೇ ರಿಪೇರಿ ಮಾಡಿಸಲು ನಿಮಗೆ ಅನುವು ಮಾಡಿಕೊಡುತ್ತದೆ.