ಆಲ್ಟೊ K10 ಕಾರ್ ಇನ್ಶೂರೆನ್ಸ್

2 ನಿಮಿಷಗಳಲ್ಲಿ Alto K10 ವಿಮೆಯನ್ನು ಆನ್‌ಲೈನ್‌ನಲ್ಲಿ ಪಡೆದುಕೊಳ್ಳಿ

Third-party premium has changed from 1st June. Renew now

ಮಾರುತಿ ಆಲ್ಟೊ K10 ಕಾರ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಿ/ರಿನ್ಯೂ ಮಾಡಿ

ಮಾರುತಿ ಸುಜುಕಿ ತನ್ನ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಪ್ರಯಾಣಿಕ ವಾಹನಗಳ ಶ್ರೇಣಿಯನ್ನು ನೀಡುತ್ತದೆ. ಆದಾಗ್ಯೂ, ಅವುಗಳಲ್ಲಿ ಯಾವುದೂ ಚಾಲಕರಲ್ಲಿ ಮಾರುತಿ ಸುಜುಕಿ ಆಲ್ಟೊ K10 ನಷ್ಟು ಜನಪ್ರಿಯವಾಗಿಲ್ಲ ಅಥವಾ ಹೆಚ್ಚು ಇಷ್ಟಪಡಲಾಗಲಿಲ್ಲ.

ಪ್ರಸ್ತುತ ಭಾರತದಲ್ಲಿ ಅತ್ಯಂತ ಮಿತವ್ಯಯದ ಕಾರುಗಳಲ್ಲಿ ಒಂದಾದ ಮಾರುತಿ ಡಿಸೆಂಬರ್ 2019 ರಲ್ಲಿ ಸುಮಾರು 15500 ಆಲ್ಟೊ K10 ಯುನಿಟ್‌ಗಳನ್ನು ಮಾರಾಟ ಮಾಡಿದೆ (1). ಈ ವಾಹನದ ಕೈಗೆಟಕುವ ಗುಣದ ಹೊರತಾಗಿ, ಪ್ರಭಾವಶಾಲಿ ನಿರ್ಮಾಣ ಗುಣಮಟ್ಟ ಮತ್ತು ಡ್ರೈವ್ ಸೌಕರ್ಯವು ಆಲ್ಟೊ K10 ಅನ್ನು ಆಯ್ಕೆ ಮಾಡಲು ಹೆಚ್ಚುವರಿ ಕಾರಣಗಳಾಗಿವೆ.

ನೀವು ಈ ಮಾಡೆಲ್ ಅನ್ನು ಖರೀದಿಸಲು ಯೋಜಿಸುತ್ತಿದ್ದರೆ, ನೀವು ಸೂಕ್ತವಾದ ಆಲ್ಟೊ K10 ಇನ್ಶೂರೆನ್ಸ್ ಪಾಲಿಸಿಯನ್ನು ತೆಗೆದುಕೊಳ್ಳುವ ಬಗ್ಗೆಯೂ ಯೋಚಿಸಲು ಪ್ರಾರಂಭಿಸಬೇಕು. ನಿಮ್ಮ ಕಾರನ್ನು ಒಳಗೊಂಡ ಅಪಘಾತಗಳಿಂದ ಉಂಟಾಗುವ ಅನಿರೀಕ್ಷಿತ ವೆಚ್ಚಗಳನ್ನು ತಡೆಗಟ್ಟಲು ಇಂತಹ ಪಾಲಿಸಿಯು ಅಪಾರವಾಗಿ ಸಹಾಯಕವಾಗಿರುತ್ತದೆ. ಈ ನಿಟ್ಟಿನಲ್ಲಿ, ನೀವು ಥರ್ಡ್-ಪಾರ್ಟಿ ಲಯಬಿಲಿಟಿ ಅಥವಾ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಬಹುದು.

1988 ರ ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ ಭಾರತೀಯ ರಸ್ತೆಗಳಲ್ಲಿ ಸಂಚರಿಸುವ ಎಲ್ಲಾ ಮೋಟಾರು ವಾಹನಗಳಿಗೆ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಪಾಲಿಸಿ ಕಡ್ಡಾಯವಾಗಿದೆ. ಈ ನಿಯಮವನ್ನು ಅನುಸರಿಸಲು ವಿಫಲವಾದರೆ ರೂ.2000 (ಪುನರಾವರ್ತಿತ ಅಪರಾಧಗಳಿಗೆ ರೂ. 4000) ರಷ್ಟು ಭಾರಿ ದಂಡ ಅಥವಾ ಪೆನಲ್ಟಿಯನ್ನು ವಿಧಿಸಲಾಗಬಹುದು.

ಥರ್ಡ್-ಪಾರ್ಟಿ ಲಯಬಿಲಿಟಿಯ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಕಾರನ್ನು ಒಳಗೊಂಡ ಅಪಘಾತಗಳ ಕಾರಣದಿಂದಾಗಿ ಥರ್ಡ್-ಪಾರ್ಟಿ ವಾಹನ, ಆಸ್ತಿ ಅಥವಾ ವ್ಯಕ್ತಿಗೆ ಉಂಟಾಗುವ ಹಾನಿಗಳಿಂದ ಉಂಟಾಗುವ ಹಣಕಾಸಿನ ಲಯಬಿಲಿಟಿಗಳನ್ನು ಕವರ್ ಮಾಡುತ್ತದೆ. ಆದಾಗ್ಯೂ, ಅಪಘಾತದಲ್ಲಿ ನಿಮ್ಮ ಸ್ವಂತ ವಾಹನಕ್ಕೆ ಉಂಟಾದ ಹಾನಿಗಳನ್ನು ಸರಿಪಡಿಸಲು ಈ ಪಾಲಿಸಿಗಳು ಯಾವುದೇ ಹಣಕಾಸಿನ ಪರಿಹಾರವನ್ನು ನೀಡುವುದಿಲ್ಲ.

ಇದಕ್ಕಾಗಿಯೇ ಒಂದು ಕಾಂಪ್ರೆಹೆನ್ಸಿವ್ ಆಲ್ಟೊ K10 ಇನ್ಶೂರೆನ್ಸ್ ಪಾಲಿಸಿಯು ಯಾವಾಗಲೂ ಒಂದು ಉತ್ತಮ ಪರ್ಯಾಯವಾಗಿರುತ್ತದೆ. ಇಲ್ಲಿ, ನೀವು ಥರ್ಡ್-ಪಾರ್ಟಿ ಲಯಬಿಲಿಟಿಯೊಂದಿಗೆ ಸ್ವಂತ ಹಾನಿಯನ್ನು ಕ್ಲೈಮ್ ಮಾಡಬಹುದು ಮತ್ತು ನಿಮ್ಮ ವಾಹನಗಳಿಗೆ ಉತ್ತಮ ಸಂಪೂರ್ಣ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬಹುದು.

ಆದಾಗ್ಯೂ, ಪಾಲಿಸಿ ಖರೀದಿಯೊಂದಿಗೆ ಮುಂದುವರಿಯುವ ಮೊದಲು, ನಿಮ್ಮ ಅಗತ್ಯಗಳಿಗೆ ಯಾವ ಪೂರೈಕೆದಾರರು ಸೂಕ್ತವೆಂದು ನೀವು ನಿರ್ಧರಿಸಬೇಕು. ನೀವೇ ನೋಡಿ!

ಆಲ್ಟೊ K10 ಕಾರ್ ಇನ್ಶೂರೆನ್ಸ್ ಬೆಲೆ

ರಿಜಿಸ್ಟ್ರೇಷನ್ ದಿನಾಂಕ ಪ್ರೀಮಿಯಂ (ಕಾಂಪ್ರೆಹೆನ್ಸಿವ್ ಪಾಲಿಸಿಗಾಗಿ)
ಆಗಸ್ಟ್-2018 ₹2,922
ಆಗಸ್ಟ್-2017 ₹2,803
ಆಗಸ್ಟ್-2016 ₹2,681

** ಡಿಸ್ಕ್ಲೈಮರ್ - ಮಾರುತಿ ಸುಜುಕಿ ಆಲ್ಟೊ K10 LX ಪೆಟ್ರೋಲ್ 998 ಗೆ ಪ್ರೀಮಿಯಂ ಲೆಕ್ಕಾಚಾರವನ್ನು ಮಾಡಲಾಗಿದೆ. ಜಿಎಸ್‌ಟಿ ಹೊರತುಪಡಿಸಲಾಗಿದೆ.

ನಗರ - ಮುಂಬೈ, ವೆಹಿಕಲ್ ರಿಜಿಸ್ಟ್ರೇಷನ್ ತಿಂಗಳು - ಆಗಸ್ಟ್, ಎನ್ ಸಿ ಬಿ - 50%, ಯಾವುದೇ ಆ್ಯಡ್-ಆನ್‌ಗಳಿಲ್ಲ, ಪಾಲಿಸಿ ಅವಧಿ ಮುಗಿದಿಲ್ಲ, ಮತ್ತು ಐಡಿವಿ- ಕನಿಷ್ಟ ಲಭ್ಯ. ಪ್ರೀಮಿಯಂ ಲೆಕ್ಕಾಚಾರವನ್ನು ಆಗಸ್ಟ್-2020 ರಲ್ಲಿ ಮಾಡಲಾಗುತ್ತದೆ. ಮೇಲೆ ನಿಮ್ಮ ವಾಹನದ ವಿವರಗಳನ್ನು ನಮೂದಿಸುವ ಮೂಲಕ ದಯವಿಟ್ಟು ಫೈನಲ್ ಪ್ರೀಮಿಯಂ ಅನ್ನು ಪರಿಶೀಲಿಸಿ.

ಮಾರುತಿ ಆಲ್ಟೊ K10 ಕಾರ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿರುತ್ತದೆ

ನೀವು ಡಿಜಿಟ್‌ನ ಮಾರುತಿ ಆಲ್ಟೊ K10 ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಮಾರುತಿ ಸುಜುಕಿ ಆಲ್ಟೊ K10 ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಗಳು

ಥರ್ಡ್-ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದಾಗಿ ಸ್ವಂತ ಕಾರಿಗೆ ಹಾನಿ/ನಷ್ಟ

×

ಬೆಂಕಿಯಿಂದಾಗಿ ಸ್ವಂತ ಕಾರಿಗೆ ಹಾನಿ/ನಷ್ಟ

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಹಾನಿ/ನಷ್ಟಗಳು

×

ಥರ್ಡ್-ಪಾರ್ಟಿ ವಾಹನಕ್ಕೆ ಹಾನಿ

×

ಥರ್ಡ್-ಪಾರ್ಟಿ ಆಸ್ತಿಗೆ ಹಾನಿ

×

ವೈಯಕ್ತಿಕ ಅಪಘಾತ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು

×

ನಿಮ್ಮ ಕಾರಿನ ಕಳ್ಳತನ

×

ಡೋರ್ ಸ್ಟೆಪ್ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ ಮಾಡಲಾದ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್-ಪಾರ್ಟಿ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನ್ಯೂ ಮಾಡಿದ ನಂತರ, ನಾವು 3-ಹಂತದ, ಸಂಪೂರ್ಣ ಡಿಜಿಟಲ್ ಆದ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿರುವುದರಿಂದ ನೀವು ಚಿಂತೆಯಿಲ್ಲದೆ ಹಾಯಾಗಿ ಬದುಕುತ್ತೀರಿ!

ಹಂತ 1

1800-258-5956 ಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ನಲ್ಲಿ ಸ್ವ ತಪಾಸಣೆಗಾಗಿ ಲಿಂಕ್ ಅನ್ನು ಪಡೆಯಿರಿ. ಮಾರ್ಗದರ್ಶನವಿರುವ ಹಂತ ಹಂತವಾದ ಪ್ರಕ್ರಿಯೆಯಿಂದ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನಕ್ಕಾದ ಡ್ಯಾಮೇಜ್ ಗಳನ್ನು ಶೂಟ್ ಮಾಡಿ.

ಹಂತ 3

ನೀವು ಆಯ್ಕೆ ಮಾಡಲು ಬಯಸುವ ರಿಪೇರಿ ವಿಧಾನವನ್ನು ಆರಿಸಿ, ಅಂದರೆ, ರಿಇಂಬರ್ಸ್‌ಮೆಂಟ್ ಅಥವಾ ನಮ್ಮ ಗ್ಯಾರೇಜ್ ಗಳ ನೆಟ್‌ವರ್ಕ್ ಮೂಲಕ ಕ್ಯಾಶ್‌ಲೆಸ್ ರಿಪೇರಿ.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳ ಇತ್ಯರ್ಥ ಎಷ್ಟು ಬೇಗ ಆಗುತ್ತದೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವು ಅದನ್ನೇ ಮಾಡುತ್ತಿದ್ದೀರಿ! ಡಿಜಿಟ್‌ನ ಕ್ಲೈಮ್ ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ಡಿಜಿಟ್‌ನ ಮಾರುತಿ ಆಲ್ಟೊ K10 ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಲು ಕಾರಣಗಳು

ಡಿಜಿಟ್ ಕಾರ್ ಇನ್ಶೂರೆನ್ಸ್ ವಲಯದಲ್ಲಿ ಪ್ರಖ್ಯಾತ ಹೆಸರಾಗಿದ್ದು ಇದರ ಪಾಲಿಸಿಗಳಲ್ಲಿ ಇದು ಡೈವರ್ಸ್ ಕಸ್ಟಮೈಸೇಶನ್ ಅನ್ನು ನೀಡುತ್ತದೆ.

ಡಿಜಿಟ್‌ನಲ್ಲಿ, ನಮ್ಮ ಪಾಲಿಸಿಹೋಲ್ಡರ್ ಗಳಿಗೆ ಅವರ ನಿರ್ದಿಷ್ಟ ಅವಶ್ಯಕತೆಗಳಿಗೆ ಅನುಗುಣವಾಗಿ ಪ್ಲ್ಯಾನ್ ಗಳನ್ನು ಕಸ್ಟಮೈಸ್ ಮಾಡುವ ಮತ್ತು ಮಾರ್ಪಡಿಸುವ ಪ್ರಯೋಜನವನ್ನು ನಾವು ನೀಡುತ್ತೇವೆ. ನಮ್ಮಿಂದ ನೀವು ನಿರೀಕ್ಷಿಸಬಹುದಾದ ಕೆಲವು ಪ್ರಯೋಜನಗಳು ಇಲ್ಲಿವೆ -

  • ಉತ್ತಮ ಕ್ಲೈಮ್ ಇತ್ಯರ್ಥ ರೇಶಿಯೋ - ನಿಮ್ಮ ಕಾರನ್ನು ಕೆಟ್ಟ ಸ್ಥಿತಿಯಲ್ಲಿ ತಲುಪಿಸುವ ವಾಹನ ಅಪಘಾತದ ನಂತರ, ವಾಹನದ ರಿಪೇರಿಯನ್ನು ಪ್ರಾರಂಭಿಸಲು ನೀವು ಹಣಕಾಸಿನ ಲಯಬಿಲಿಟಿಗಳ ಬಗ್ಗೆ ಚಿಂತಿಸುವುದು ಸಹಜ. ಅಂತಹ ಸಮಯದಲ್ಲಿ, ಡಿಜಿಟ್ ನಿಮ್ಮ ಜೊತೆ ಇರುತ್ತದೆ ಮತ್ತು ಯಾವುದೇ ಸಮಯದಲ್ಲಿ ಅಗತ್ಯ ರಿಪೇರಿಗಳನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಕ್ಲೈಮ್ ಗಳಿಗೆ ಅಪ್ರುವಲ್ ದೊರೆಯುವುದೇ ಎಂದು ನೀವು ಚಿಂತಿಸಬೇಕಾಗಿಲ್ಲ. ನಮ್ಮ ಪಾಲಿಸಿಹೋಲ್ಡರ್ ಗಳು ಒಂದು ಅಸಮಂಜಸ ಆಧಾರದ ಮೇಲೆ ನಾವು ಯಾವುದೇ ಕ್ಲೈಮ್ ಫೈಲಿಂಗ್‌ಗಳನ್ನು ನಿರಾಕರಿಸುವುದಿಲ್ಲ ಎಂದು ತಿಳಿದುಕೊಂಡು ನಿರಾಳರಾಗಬಹುದು.
  • ಸರಳವಾದ ಫೈಲಿಂಗ್‌ಗಳಿಗಾಗಿ ಡಿಜಿಟಲ್ ಕ್ಲೈಮ್ ಪ್ರಕ್ರಿಯೆ - ನೀವು ನಮ್ಮ ಆಲ್ಟೊ K10 ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿದಾಗ, ನಿಮ್ಮ ಮನೆ ಅಥವಾ ಕಚೇರಿಯ ಸೌಕರ್ಯದಿಂದ ನೀವು ಸುಲಭವಾಗಿ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಸಲ್ಲಿಸಬಹುದು. ನಮ್ಮ ಕಚೇರಿಗಳ ಹೊರಗೆ ಕ್ಯೂ ನಲ್ಲಿ ನಿಲ್ಲುವ ಅಗತ್ಯವಿಲ್ಲ; ನಮ್ಮ ಸಂಪೂರ್ಣ ಆನ್‌ಲೈನ್ ಕ್ಲೈಮ್ ಫೈಲಿಂಗ್ ಪ್ರಕ್ರಿಯೆಯು ನಿಮ್ಮ ಸಮಯವನ್ನು ಗಣನೀಯ ಪ್ರಮಾಣದಲ್ಲಿ ಉಳಿಸುತ್ತದೆ. ಇದಲ್ಲದೆ, ನೀವು ಕ್ಲೈಮ್ ಮಾಡಿದಾಗ ನಿಮ್ಮ ಸ್ವಂತ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ಕಾರಿಗಾಗಿ ತಪಾಸಣೆ ಪ್ರಕ್ರಿಯೆಯನ್ನು ಸಹ ನೀವು ಪೂರ್ಣಗೊಳಿಸಬಹುದು. ಹಾಗೆ ಮಾಡಲು, ಹಾನಿಯ ಚಿತ್ರಗಳನ್ನು ಕ್ಲಿಕ್ ಮಾಡಿ ಮತ್ತು ನಾವು ಒದಗಿಸುವ ಲಿಂಕ್ ಮೂಲಕ ಅದನ್ನು ನಮಗೆ ಕಳುಹಿಸಿ. ನಮ್ಮ ತಜ್ಞರು ಅದನ್ನು ನೋಡುತ್ತಾರೆ ಮತ್ತು ನಿಮ್ಮ ಕ್ಲೈಮ್ ನೊಂದಿಗೆ ಮುಂದುವರಿಯುತ್ತಾರೆ. ನೀವು ಇನ್ನು ಮುಂದೆ ಹಾನಿಯ ಮೌಲ್ಯಮಾಪನ ಮಾಡಲು ಇನ್ಶೂರೆನ್ಸ್ ಕಂಪನಿಯ ಪ್ರತಿನಿಧಿಗಳು ನಿಮ್ಮ ಮನೆಗೆ ಭೇಟಿ ನೀಡುವವರೆಗೆ ಕಾಯಬೇಕಾಗಿಲ್ಲ!
  • ಕಾರ್ ಇನ್ಶೂರೆನ್ಸ್ ಆ್ಯಡ್-ಆನ್‌ನ ವ್ಯಾಪಕ ಆಯ್ಕೆ - ಕಾರ್ ಇನ್ಶೂರೆನ್ಸ್ ಆ್ಯಡ್-ಆನ್‌ಗಳುನಿಮ್ಮ ಪಾಲಿಸಿಯ ಅಡಿಯಲ್ಲಿರುವ ಕವರೇಜ್ ಅನ್ನು ಗಮನಾರ್ಹವಾಗಿ ಹೆಚ್ಚಿಸಬಹುದು. ಉದಾಹರಣೆಗೆ, ಕನ್ಸ್ಯೂಮೆಬಲ್ ಕವರ್‌ನೊಂದಿಗೆ, ನಿಮ್ಮ ವಾಹನದ ಕೆಲವು ಭಾಗಗಳಿಗಾದ ಹಾನಿಗಾಗಿ ನೀವು ಕ್ಲೈಮ್ ಮಾಡಬಹುದು, ಆದರೆ ಸಾಮಾನ್ಯವಾಗಿ ಇದು ಇನ್ಶೂರೆನ್ಸ್ ಪಾಲಿಸಿ ಕವರೇಜ್ ವ್ಯಾಪ್ತಿಯಿಂದ ಹೊರಗಿರುತ್ತದೆ. ಆದ್ದರಿಂದ, ಈ ಆ್ಯಡ್-ಆನ್‌ನೊಂದಿಗೆ ನಟ್, ಬೋಲ್ಟ್‌ಗಳು, ಆಯಿಲ್ ಗಳು ಮತ್ತು ಇತರವುಗಳ ರಿಪ್ಲೇಸ್‌ಮೆಂಟ್ ವೆಚ್ಚವನ್ನು ನೀವು ಮರುಪಡೆಯಬಹುದು. ಕನ್ಸ್ಯೂಮೆಬಲ್ ಕವರ್ ಅನ್ನು ಹೊರತುಪಡಿಸಿ, ಡಿಜಿಟ್ ಎಂಜಿನ್ ಪ್ರೊಟೆಕ್ಷನ್, ಟೈರ್ ಪ್ರೊಟೆಕ್ಷನ್, ಝೀರೋ ಡೆಪ್ರಿಸಿಯೆಶನ್, ರಿಟರ್ನ್ ಟು ಇನ್‌ವಾಯ್ಸ್ ಕವರ್‌, ಪ್ಯಾಸೆಂಜರ್ ಕವರ್ ಮತ್ತು ರೋಡ್ಸೈಡ್ ಅಸಿಸ್ಟೆನ್ಸ್ ಸೇರಿದಂತೆ 6 ಇತರ ಆ್ಯಡ್-ಆನ್‌ಗಳನ್ನು ನೀಡುತ್ತದೆ. ಚಿಂತಿಸಬೇಡಿ! ಆ್ಯಡ್-ಆನ್ ಅನ್ನು ಆರಿಸುವುದು ನಿಮ್ಮ ಆಲ್ಟೊ K10 ಇನ್ಶೂರೆನ್ಸ್ ಬೆಲೆಯನ್ನು ಅತ್ಯಲ್ಪ ಮೊತ್ತದಿಂದ ಮಾತ್ರ ಹೆಚ್ಚಿಸುತ್ತದೆ.
  • ನಿಮ್ಮ ಐಡಿವಿ(IDV) ಅನ್ನು ಕಸ್ಟಮೈಸ್ ಮಾಡುವ ಸಾಮರ್ಥ್ಯ -ಇನ್ಶೂರ್ಡ್ ಡಿಕ್ಲೇರ್ಡ್ ಮೌಲ್ಯ ಅಥವಾ ಐಡಿವಿ ನಿಮ್ಮ ಕಾರು ಸರಿಪಡಿಸಲಾಗದ ಹಾನಿಗೆ ಒಳಗಾದಾಗ ಅಥವಾ ಕಳ್ಳತನವಾದಾಗ ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರಿಂದ ನೀವು ಕ್ಲೈಮ್ ಮಾಡಬಹುದಾದ ಹಣಕಾಸಿನ ಪ್ಯಾಕೇಜ್ ಆಗಿದೆ. ಅಂತಹ ಘಟನೆಗಳನ್ನು ಎದುರಿಸುವುದು ಗಣನೀಯ ಹಣಕಾಸಿನ ನಷ್ಟಗಳಿಗೆ ಕಾರಣವಾಗುವುದರಿಂದ, ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಒಂದು ಹೆಚ್ಚಿನ ಐಡಿವಿ ಯಾವಾಗಲೂ ಹೆಚ್ಚು ಸಲಹಾಹ್ರವಾಗಿದೆ. ಡಿಜಿಟ್‌ನಲ್ಲಿ, ಈ ಮೌಲ್ಯವನ್ನು ನಿಮ್ಮ ಸ್ವಂತ ಇಚ್ಛೆಯಂತೆ ಬದಲಾಯಿಸಲು ನಾವು ನಿಮಗೆ ಅವಕಾಶ ನೀಡುತ್ತೇವೆ. ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಆಲ್ಟೊ K10 ಇನ್ಶೂರೆನ್ಸ್ ಪಾಲಿಸಿಯಲ್ಲಿ ನೀವು ಐಡಿವಿ ಅನ್ನು ಕಡಿಮೆ ಮಾಡಬಹುದು ಅಥವಾ ಹೆಚ್ಚಿಸಬಹುದು.
  • ಯಾವಾಗಲೂ ಸಿದ್ಧವಾಗಿರುವ ಕಸ್ಟಮರ್ ಕೇರ್ ತಂಡ - ಅಪಘಾತಗಳು ಯೋಜಿತ ಘಟನೆಗಳಲ್ಲ, ಮತ್ತು ಅಂತಹ ಘಟನೆಯು ಯಾವಾಗ ಸಂಭವಿಸುತ್ತದೆ ಎಂಬುದನ್ನು ನೀವು ಊಹಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾವು ಹಗಲಿರಲಿ ರಾತ್ರಿಯಾಗಲಿ ನಿಮಗೆ ಸಹಾಯ ಮಾಡಲು ಯಾವಾಗಲೂ ಸಿದ್ಧರಿರುತ್ತೇವೆ. ನಮ್ಮ ಕಸ್ಟಮರ್ ಕೇರ್ ಸೌಲಭ್ಯಗಳು ಭಾನುವಾರ ಮತ್ತು ರಾಷ್ಟ್ರೀಯ ರಜಾದಿನಗಳಲ್ಲಿ ಸಹ ಲಭ್ಯವಿವೆ. ನೀವು ಮಾಡಬೇಕಾಗಿರುವುದು ಇಷ್ಟೇ; 1800-103-4448 ಅನ್ನು ಡಯಲ್ ಮಾಡಿ ಮತ್ತು ನಿಮ್ಮ ಆಲ್ಟೊ K10 ಇನ್ಶೂರೆನ್ಸ್ ಪಾಲಿಸಿಗೆ ಸಂಬಂಧಿಸಿದಂತೆ ನೀವು ಹೊಂದಿರುವ ಯಾವುದೇ ಸಂದೇಹಗಳನ್ನು ನಾವು ಪರಿಹರಿಸುತ್ತೇವೆ.
  • 1400 ಕ್ಕೂ ಹೆಚ್ಚು ನೆಟ್‌ವರ್ಕ್ ಗ್ಯಾರೇಜ್‌ಗಳು - ಅಗತ್ಯವಿರುವಾಗ ಪಾಲಿಸಿಹೋಲ್ಡರ್ ಗಳಿಗೆ ಅಪಘಾತ- ಸಂಬಂಧಿ ರಿಪೇರಿ ಮತ್ತು ರಿಪ್ಲೇಸ್‌ಮೆಂಟ್ ಸೇವೆಗಳನ್ನು ಒದಗಿಸಲು ನಮ್ಮ ವ್ಯಾಪಕವಾದ ನೆಟ್‌ವರ್ಕ್ ಗ್ಯಾರೇಜ್‌ಗಳು ಭಾರತದಾದ್ಯಂತ ಹರಡಿಕೊಂಡಿವೆ. ಅಂತಹ ಗ್ಯಾರೇಜ್‌ನಲ್ಲಿ ಡಿಜಿಟ್ ಅಪಘಾತ- ಸಂಬಂಧಿ ರಿಪೇರಿಯನ್ನು ಪಡೆಯುವಾಗ, ಅವರು ಅದಕ್ಕೆ ಹಣವನ್ನು ಪಾವತಿಸದೆಯೇ ಅದ್ಭುತ ಸೇವೆಗಳನ್ನು ನಿರೀಕ್ಷಿಸಬಹುದು. ಆದ್ದರಿಂದ, ಈ ಆಯ್ದ ಸೇವಾ ಕೇಂದ್ರಗಳಲ್ಲಿ ರಿಪೇರಿಗಳನ್ನು ಪ್ರಾರಂಭಿಸಲು ನೀವು ಸಿದ್ಧ ಕ್ಯಾಶ್ ಅನ್ನು ಹೊಂದುವ ಅಗತ್ಯವಿಲ್ಲ.
  • ಅಪಘಾತ- ಸಂಬಂಧಿ ರಿಪೇರಿಗಾಗಿ ಡೋರ್‌ಸ್ಟೆಪ್ ಪಿಕ್ ಅಪ್ ಮತ್ತು ಡ್ರಾಪ್ ಆಫ್ ಸೌಲಭ್ಯಗಳು - ನಮ್ಮ ನೆಟ್‌ವರ್ಕ್ ಗ್ಯಾರೇಜ್‌ಗಳಲ್ಲಿ ಒಂದರಿಂದ ರಿಪೇರಿ ಮಾಡಲು ನೀವು ಆರಿಸಿಕೊಂಡರೆ, ನಿಮ್ಮ ಹಾನಿಗೊಳಗಾದ ಕಾರಿಗೆ ಪಿಕ್-ಅಪ್ ಸೇವೆಗಳನ್ನು ಪಡೆಯುವ ಸೌಲಭ್ಯವನ್ನು ಸಹ ನೀವು ಹೊಂದಿದ್ದೀರಿ. ಹಾಗೆ ಮಾಡುವಾಗ, ಗ್ಯಾರೇಜ್‌ನ ಪ್ರತಿನಿಧಿಯು ನಿಮ್ಮ ವಾಹನವನ್ನು ರಿಪೇರಿಗಾಗಿ ತರುತ್ತಿರುವಾಗ ನೀವು ಮನೆಯಲ್ಲಿ ಆರಾಮವಾಗಿ ವಿಶ್ರಾಂತಿ ಪಡೆಯಬಹುದು. ಹೆಚ್ಚುವರಿಯಾಗಿ, ಕೆಲಸ ಪೂರ್ಣಗೊಂಡ ನಂತರ ನಾವು ಬಯಸಿದ ವಿಳಾಸಕ್ಕೆ ಕಾರನ್ನು ಸಹ ತಂದುಬಿಡುತ್ತೇವೆ.

ಡಿಜಿಟ್ ಪಾಲಿಸಿಹೋಲ್ಡರ್ ಗಳು ಇಲ್ಲಿ ಉಲ್ಲೇಖಿಸಿರುವ ಪ್ರಯೋಜನಗಳ ಹೊರತಾಗಿ ಇತರ ಹಲವಾರು ಪ್ರಯೋಜನಗಳನ್ನು ಸಹ ಎದುರುನೋಡಬಹುದು.

ಕೈಗೆಟುಕುವ ಆಲ್ಟೊ K10 ಕಾರ್ ಇನ್ಶೂರೆನ್ಸ್ ಬೆಲೆಯೊಂದಿಗೆ, ಡಿಜಿಟ್‌ನ ಪಾಲಿಸಿಯನ್ನು ಆರಿಸುವಾಗ ನೀವು ಪಾಕೆಟ್-ಸ್ನೇಹಿ ಖರೀದಿಗಳು ಮತ್ತು ರಿನೀವಲ್ ಗಳನ್ನು ಸಹ ನಿರೀಕ್ಷಿಸಬಹುದು.

ಆದ್ದರಿಂದ, ಭಯವಿಲ್ಲದೆ ಡ್ರೈವ್ ಮಾಡಿ!

ಮಾರುತಿ ಸುಜುಕಿ ಆಲ್ಟೊ K10 ಕಾರ್ ಇನ್ಶೂರೆನ್ಸ್ ಖರೀದಿಸುವುದು ಏಕೆ ಮುಖ್ಯ?

ಮಾರುತಿ ಸುಜುಕಿ ಆಲ್ಟೊ K10 ಹೊಸ ಜನರೇಶನ್ ವೈಶಿಷ್ಟ್ಯಗಳೊಂದಿಗೆ ತುಂಬಿದೆ. ಒಂದು ಕಾರನ್ನು ಇನ್ಶೂರ್ ಮಾಡಿಸುವುದು ಬಹಳ ಮುಖ್ಯ ಎರಡು ವಿಧದ ಕಾರ್ ಇನ್ಶೂರೆನ್ಸ್ ಗಳಿವೆ, ಇದರಲ್ಲಿ ಥರ್ಡ್-ಪಾರ್ಟಿ ಲಯಬಿಲಿಟಿ ಕವರೇಜ್ ಕಡ್ಡಾಯವಾಗಿದೆ. ಎರಡನೆಯ ವಿಧದ ಪ್ಲ್ಯಾನ್ ಆದ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್, ಖರೀದಿಸಲು ಐಚ್ಛಿಕವಾಗಿದೆ ಆದರೆ ನಿಮ್ಮ ಕಾರಿಗೆ ಸಂಪೂರ್ಣ ರಕ್ಷಣೆಯನ್ನು ಒಳಗೊಂಡಿರುತ್ತದೆ. ಕೆಳಗಿನವುಗಳು ಇವುಗಳ ಪ್ರಯೋಜನಗಳಾಗಿವೆ:

  • ಹಣಕಾಸಿನ ಲಯಬಿಲಿಟಿಗಳು: ಸಮಗ್ರ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಪ್ರಯೋಜನಕಾರಿಯಾಗಿದೆ ಏಕೆಂದರೆ ಇದು ವಾಹನದ ಹಾನಿಗಳಿಗೆ ಉಂಟಾಗಬಹುದಾದ ಹಣಕಾಸಿನ ಲಯಬಿಲಿಟಿಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಮತ್ತು ನಿಮಗೆ ಕಾಂಪನ್ಸೇಶನ್ ಒದಗಿಸುತ್ತದೆ; ಉದಾಹರಣೆಗೆ, ಅಪಘಾತಗಳು, ನೈಸರ್ಗಿಕ ವಿಪತ್ತುಗಳು, ಕಳ್ಳತನಗಳು ಅಥವಾ ವಿಧ್ವಂಸಕತೆ, ಮುಷ್ಕರಗಳು ಮತ್ತು ಗಲಭೆಗಳ ಸಮಯದಲ್ಲಿ ಉಂಟಾಗುವ ಹಾನಿಗಳಂತಹವು.
  • ಕಾನೂನಾತ್ಮಕವಾಗಿ ಅನುಸರಣೀಯ: ವ್ಯಾಲಿಡ್ ಕಾರ್ ಇನ್ಶೂರೆನ್ಸ್ ಇಲ್ಲದೆ ಡ್ರೈವ್ ಮಾಡುವಾಗ ಸಿಕ್ಕಿಬಿದ್ದ ಯಾರಾದರೂ ರೂ 2,000 ಮತ್ತು ಎರಡನೇ ಅಪರಾಧದಲ್ಲಿ ರೂ 4,000 ದಂಡವನ್ನು ಪಾವತಿಸಬೇಕಾಗುತ್ತದೆ. ಭಾರತದಲ್ಲಿ ಕಾನೂನುಬದ್ಧವಾಗಿ ಡ್ರೈವ್ ಮಾಡಲು, ನಿಮಗೆ ಕಾರ್ ಇನ್ಶೂರೆನ್ಸ್ ನ ಅಗತ್ಯವಿದೆ- ನೀವು ಮಾಡಬಹುದಾದ ಕನಿಷ್ಠವೆಂದರೆ ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಅನ್ನು ಪಡೆಯುವುದು.
  • ಥರ್ಡ್-ಪಾರ್ಟಿ ಲಯಬಿಲಿಟಿ: ಕಾನೂನಿನ ಮೂಲಕ ಕಡ್ಡಾಯವಾಗಿದೆ, ಈ ಕವರೇಜ್ ಥರ್ಡ್-ಪಾರ್ಟಿ ವ್ಯಕ್ತಿ, ವಾಹನ ಅಥವಾ ಆಸ್ತಿಗಾದ ಹಾನಿ ಮತ್ತು ನಷ್ಟವನ್ನು ನೋಡಿಕೊಳ್ಳಲಾಗುತ್ತದೆ ಎಂಬುದನ್ನು ಖಚಿತಪಡಿಸುತ್ತದೆ!
  • ಕಾಂಪ್ರೆಹೆನ್ಸಿವ್ ಕವರ್ ಅಡಿಯಲ್ಲಿ ಆ್ಯಡ್-ಆನ್ ನಿಬಂಧನೆ: ನೀವು ಗರಿಷ್ಠ ರಕ್ಷಣೆಯನ್ನು ಬಯಸಿದರೆ, ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯು ಅದನ್ನು ಪಡೆಯುವ ಸೂಕ್ತ ಮಾರ್ಗವಾಗಿದೆ. ಇದು ನಿಮ್ಮನ್ನು ಥರ್ಡ್-ಪಾರ್ಟಿ ಹಾನಿಗಳಿಂದ ರಕ್ಷಿಸುವುದಲ್ಲದೆ ಸ್ವಂತ ಹಾನಿಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಮತ್ತು ಕಾರ್ ಇನ್ಶೂರೆನ್ಸ್ ಆ್ಯಡ್-ಆನ್‌ಗಳಾದ ಬ್ರೇಕ್‌ಡೌನ್ ಅಸಿಸ್ಟೆನ್ಸ್, ಎಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್, ಟೈರ್ ಪ್ರೊಟೆಕ್ಷನ್ ಮತ್ತು ಝೀರೋ ಡೆಪ್ರಿಸಿಯೇಷನ್ ಕವರ್ನಂತಹ ಕವರ್‌ಗಳೊಂದಿಗೆ ನಿಮ್ಮ ಪ್ಲ್ಯಾನ್ ಅನ್ನು ಮತ್ತಷ್ಟು ಕಸ್ಟಮೈಸ್ ಮಾಡುವ ಪ್ರಯೋಜನವನ್ನು ನಿಮಗೆ ನೀಡುತ್ತದೆ.

ಮಾರುತಿ ಸುಜುಕಿ ಆಲ್ಟೊ K10 ಬಗ್ಗೆ ಇನ್ನಷ್ಟು ಮಾಹಿತಿ

ಅದು ಚಿಕ್ಕದು ಎಂದರೆ ಅದರಲ್ಲಿ ಪ್ಯಾಕ್ ಮಾಡಲಾದ ಟ್ರೆಂಡಿ ಮತ್ತು ಆಧುನಿಕ ಆವಿಷ್ಕಾರಗಳನ್ನು ನೀವು ನಿರೀಕ್ಷಿಸಬಾರದು ಎಂದಲ್ಲ. ಮಾರುತಿ ಸುಜುಕಿ ಆಲ್ಟೊ ತನ್ನ ಸ್ಥಾನವನ್ನು ಆಲ್ಟೊ K10 ನೊಂದಿಗೆ ಮರು ವ್ಯಾಖ್ಯಾನಿಸಿದೆ. ಈ ಸಣ್ಣ ಕಾರು ಆಲ್ಟೊ 800 ನಿಂದ ಅದರ ಅನೇಕ ವೈಶಿಷ್ಟ್ಯಗಳನ್ನು ಖರೀದಿಸಿದರೂ, ಇದು ಸುಮಾರು 150 ಮಿಮೀ ಹೆಚ್ಚು ಉದ್ದವಾಗಿದೆ.

ಮಾರುತಿ ಸುಜುಕಿ ಆಲ್ಟೊ K10 ಅನ್ನು ಮೂರು ವೇರಿಯಂಟ್ ಗಳೊಂದಿಗೆ ಪರಿಚಯಿಸಲಾಯಿತು. ಕಾರು ಮ್ಯಾನುವಲ್ ಟ್ರಾನ್ಸ್‌ಮಿಷನ್ ನೊಂದಿಗೆ ಬರುತ್ತದೆ ಆದರೆ ಮೇಲಿನ ಆವೃತ್ತಿಯು ಆಟೋಮ್ಯಾಟಿಕ್ ಆಯ್ಕೆಯನ್ನು ಹೊಂದಿದೆ. ಇದು ಪೆಟ್ರೋಲ್ ಮತ್ತು ಸಿಎನ್‌ಜಿ ಫ್ಯೂಯೆಲ್ ಪ್ರಕಾರದಲ್ಲಿ ಲಭ್ಯವಿದೆ.

ಇದು ಹೊಸ ಜನರೇಶನ್ ಕಾಂಪ್ಯಾಕ್ಟ್ ಕಾರು ಮತ್ತು ಥರ್ಡ್ ಜನರೇಶನ್ ವ್ಯಾಗನ್ ಆರ್ ನ ಅದೇ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಈ ಮಿನಿ ಹ್ಯಾಚ್‌ಬ್ಯಾಕ್ ಕ್ರೋಮ್ ಹೈಲೈಟ್ ಮಾಡಿದ ಗ್ರಿಲ್, ಫ್ರಂಟ್ ಫಾಗ್ ಲ್ಯಾಂಪ್ ಮತ್ತು ಸ್ಮಾರ್ಟ್ ಬಂಪರ್‌ನೊಂದಿಗೆ ಬೋಲ್ದರ್ ಲುಕ್ ಜೊತೆ ಬರುತ್ತದೆ. ಟೈಲ್‌ಲೈಟ್‌ಗಳು ಕಾರಿಗೆ ಎಲಿಗೆಂಟ್ ಮತ್ತು ಮಾಡರ್ನ್ ಲುಕ್ ನೀಡುತ್ತವೆ.

ನೀವು ಮಾರುತಿ ಸುಜುಕಿ ಆಲ್ಟೊ K10 ಅನ್ನು ಏಕೆ ಖರೀದಿಸಬೇಕು?

ಮಾರುತಿ ಸುಜುಕಿ ಆಲ್ಟೊ K-10 ಹೊಸ ಜನರೇಶನ್ ನ ಉತ್ತಮ ಆದ್ಯತೆಯ ಕಾರು ಆಗಿದ್ದು, ಇದರ ಬೆಲೆ ರೂ.3.65 ಲಕ್ಷದಿಂದ ರೂ.4.44 ಲಕ್ಷದವರೆಗೆ ಇದೆ. ಡ್ರೈವಿಂಗ್ ಅನುಭವವನ್ನು ಹೆಚ್ಚಿಸಲು, ನೀವು ಈಗ ಈ ಕಾರಿನ ಆಟೋಮ್ಯಾಟಿಕ್ ಆವೃತ್ತಿಯನ್ನು ಪಡೆಯುವಿರಿ. ಇದು LX, LXi ಮತ್ತು VXi ಅನ್ನು ಒಳಗೊಂಡಿರುವ ಮೂರು ವೇರಿಯಂಟ್ ಗಳೊಂದಿಗೆರುತ್ತದೆ.

ರೈಡ್‌ಗಳ ಸಂಖ್ಯೆ ದಿನಕ್ಕೆ 4-5 ಕ್ಕಿಂತ ಹೆಚ್ಚಿದ್ದರೆ, ಆಲ್ಟೊ K -10 ಅನ್ನು ಪರಿಗಣಿಸಬಹುದು. ಇದು 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಎರಡರಲ್ಲೂ ಪ್ರತಿ ಲೀಟರ್‌ಗೆ 24.07 ಕಿಮೀ ಮೈಲೇಜ್ ನೀಡುತ್ತದೆ. ಈ ಕಾರು BS-VI ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿರುವುದರಿಂದ ನೀವು ಮಾಲಿನ್ಯ ನಿಯಂತ್ರಣದಿಂದ ಮುಕ್ತರಾಗಬಹುದು. ಬೆಲೆ-ವಾರು ಕಾರು ಸಾಕಷ್ಟು ಕೈಗೆಟುಕುವ ಮತ್ತು ಫ್ಯೂಯೆಲ್-ಸಮರ್ಥವಾಗಿದೆ, ಇದು ನಿಮ್ಮ ದೈನಂದಿನ ಪ್ರಯಾಣಕ್ಕೆ ಪರಿಪೂರ್ಣ ಕಾರಾಗಿ ಸಾಬೀತಾಗುತ್ತದೆ. ಸುರಕ್ಷತಾ ವೈಶಿಷ್ಟ್ಯಗಳಿಗಾಗಿ, ಮಾರುತಿ ಆಲ್ಟೊ K-10 ಸೆಂಟ್ರಲ್ ಲಾಕಿಂಗ್, ಪವರ್ ಡೋರ್ ಲಾಕ್ ಮತ್ತು ಚೈಲ್ಡ್ ಲಾಕ್ ಸುರಕ್ಷತೆ ಅನ್ನು ಸಹ ನೀಡುತ್ತದೆ.

 

ಪರಿಶೀಲಿಸಿ: ಮಾರುತಿ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ

ಮಾರುತಿ ಸುಜುಕಿ ಆಲ್ಟೊ K10 - ವೇರಿಯಂಟ್ ಗಳು ಮತ್ತು ಎಕ್ಸ್ ಶೋರೂಂ ಬೆಲೆ

ವೇರಿಯಂಟ್ ಗಳು ಎಕ್ಸ್ ಶೋರೂಂ ಬೆಲೆ (ನಗರಕ್ಕೆ ಅನುಗುಣವಾಗಿ ಬದಲಾಗಬಹುದು)
LX 998 ಸಿಸಿ, ಮ್ಯಾನುಯಲ್, ಪೆಟ್ರೋಲ್ ರೂ.3.65 ಲಕ್ಷಗಳು
LXI 998 ಸಿಸಿ, ಮ್ಯಾನುಯಲ್, ಪೆಟ್ರೋಲ್ ರೂ.3.82 ಲಕ್ಷಗಳು
VXI 998 ಸಿಸಿ, ಮ್ಯಾನುಯಲ್, ಪೆಟ್ರೋಲ್ ರೂ.3.99 ಲಕ್ಷಗಳು
VXI ಆಪ್ಶನಲ್ 998 ಸಿಸಿ, ಮ್ಯಾನುಯಲ್, ಪೆಟ್ರೋಲ್ ರೂ.4.12 ಲಕ್ಷಗಳು
VXI ಎಜಿಎಸ್ 998 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್ ರೂ.4.43 ಲಕ್ಷಗಳು
LXI CNG 998 ಸಿಸಿ, ಮ್ಯಾನುಯಲ್, ಸಿಎನ್‌ಜಿ ರೂ.4.44 ಲಕ್ಷಗಳು

ಮಾರುತಿ ಆಲ್ಟೊ K10 ಕಾರ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ಆಲ್ಟೊ K10 ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯು ಅದರ ಕಾಂಪ್ರೆಹೆನ್ಸಿವ್ ಪ್ರತಿರೂಪಕ್ಕಿಂತ ಏಕೆ ಅಗ್ಗವಾಗಿದೆ?

ಥರ್ಡ್-ಪಾರ್ಟಿ ಇನ್ಶೂರೆನ್ಸ್ ಪಾಲಿಸಿಗಳು ಸ್ವಂತ ಹಾನಿಯನ್ನು ಕವರ್ ಮಾಡುವುದಿಲ್ಲ, ಅಂದರೆ ನಿಮ್ಮ ಆಲ್ಟೊ K10 ಗೆ ಉಂಟಾದ ಹಾನಿಗಳನ್ನು ಸರಿಪಡಿಸುವ ವೆಚ್ಚವನ್ನು ನೀವು ಕ್ಲೈಮ್ ಮಾಡಲಾಗುವುದಿಲ್ಲ.

ಆದಾಗ್ಯೂ, ಒಂದು ಕಾಂಪ್ರೆಹೆನ್ಸಿವ್ ಪ್ಲ್ಯಾನ್, ಥರ್ಡ್-ಪಾರ್ಟಿ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ಓನ್ ಡ್ಯಾಮೇಜ್ ಕವರ್ ಅನ್ನೂ ಒಳಗೊಂಡಿರುವುದರಿಂದ ಅಪಘಾತಗಳ ಸಂದರ್ಭದಲ್ಲಿ ಉತ್ತಮ ಆರ್ಥಿಕ ಭದ್ರತೆಯನ್ನು ಖಾತ್ರಿಪಡಿಸುತ್ತದೆ. ಸ್ವಾಭಾವಿಕವಾಗಿ, ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯ ವೆಚ್ಚವು ಥರ್ಡ್-ಪಾರ್ಟಿ ಲಯಬಿಲಿಟಿ ಪಾಲಿಸಿಗಿಂತ ಹೆಚ್ಚಾಗಿರುತ್ತದೆ.

ನನ್ನ ಆಲ್ಟೊ K10 ಇನ್ಶೂರೆನ್ಸ್ ಪಾಲಿಸಿಯು ಅಪಘಾತದಿಂದ ಉಂಟಾದ ಕಾರಿನ ಟೈರ್‌ಗಳ ಹಾನಿಯನ್ನು ಕವರ್ ಮಾಡುತ್ತದೆಯೇ?

ಡಿಜಿಟ್‌ನ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿ ಕವರೇಜ್‌ನಲ್ಲಿ, ಅಪಘಾತದಲ್ಲಿ ಉಂಟಾದ ಕಾರ್ ಟೈರ್‌ ಹಾನಿಯನ್ನು ಹೊರತುಪಡಿಸಿ, ಇತರ ಟೈರ್ ಹಾನಿಗಳನ್ನು ಕವರ್ ಮಾಡಲಾಗುವುದಿಲ್ಲ. ಅದೇನೇ ಇದ್ದರೂ, ನೀವು ಈ ಭಾಗಗಳಿಗೆ ಕವರೇಜ್ ಬಯಸಿದರೆ, ನೀವು ನಮ್ಮ ಟೈರ್ ಪ್ರೊಟೆಕ್ಷನ್ ಆ್ಯಡ್-ಆನ್ ಅನ್ನು ಆರಿಸಿಕೊಳ್ಳಬಹುದು. ನಿಮ್ಮ ವಾಹನದ ಟೈರ್‌ಗಳಿಂದ ಉಂಟಾಗುವ ಅಪಘಾತದ ಪಂಕ್ಚರ್‌ಗಳು, ಕಡಿತಗಳು ಮತ್ತು ಇತರ ಹಾನಿಗಳಿಗೆ ಕ್ಲೈಮ್ ಮಾಡಲು ಇದು ನಿಮ್ಮನ್ನು ಅನುಮತಿಸುತ್ತದೆ.

ಎಲ್ಲಾ ಆಲ್ಟೊ K10 ಇನ್ಶೂರೆನ್ಸ್ ಪಾಲಿಸಿಗಳಲ್ಲಿ ವೈಯಕ್ತಿಕ ಅಪಘಾತ ಕವರ್ ಕಡ್ಡಾಯವಾಗಿದೆಯೇ?

ಐ.ಆರ್.ಡಿ.ಎ.ಐ. ನಿಯಮಗಳ ಪ್ರಕಾರ, ಎಲ್ಲಾ ಇನ್ಶೂರೆನ್ಸ್ ಪೂರೈಕೆದಾರರು ಅದರ ವಿವಿಧ ಪಾಲಿಸಿಗಳೊಂದಿಗೆ ವೈಯಕ್ತಿಕ ಅಪಘಾತದ ಕವರ್ ಅನ್ನು ಸೇರಿಸಿರಬೇಕು. ಆದ್ದರಿಂದ, ಇದೊಂದು ಕಡ್ಡಾಯ ಅವಶ್ಯಕತೆಯಾಗಿದೆ.

ಒಬ್ಬ ಪಾಲಿಸಿಹೋಲ್ಡರ್ ಅವನ/ಅವಳ ಡಿಜಿಟ್ ಆಲ್ಟೊ K10 ಇನ್ಶೂರೆನ್ಸ್ ಪಾಲಿಸಿಯಲ್ಲಿ ಸಂಗ್ರಹಿಸಬಹುದಾದ ಗರಿಷ್ಠ ಎನ್ ಸಿಬಿ(NCB ) ಎಷ್ಟು?

ಪಾಲಿಸಿಹೋಲ್ಡರ್ ಗಳು 50% ವರೆಗಿನ ನೋ ಕ್ಲೈಮ್ ಬೋನಸ್ ಅನ್ನು ಸಂಗ್ರಹಿಸಬಹುದು, ಇದು ಇನ್ಶೂರೆನ್ಸ್ ಪಾಲಿಸಿಯ ಓನ್ ಡ್ಯಾಮೇಜ್ ಭಾಗದ ಪ್ರೀಮಿಯಂಗಳ ಮೇಲೆ 50% ರಷ್ಟು ಡಿಸ್ಕೌಂಟ್ ಆಗಿ ಬದಲಾಗುತ್ತದೆ.