6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಮೇ 2019 ರಲ್ಲಿ ಬಿಡುಗಡೆಯಾದ ಹ್ಯುಂಡೈ ವೆನ್ಯೂ ಡೀಸೆಲ್ ಮತ್ತು ಪೆಟ್ರೋಲ್ ಎರಡೂ ಎಂಜಿನ್ಗಳನ್ನು ಹೊಂದಿದೆ. ಇದು ಸಬ್-4 ಎಸ್ಯುವಿ ಆಗಿದ್ದು, ಚಾಲಕ ಸೇರಿದಂತೆ ಐದು ಜನರು ಕುಳಿತುಕೊಳ್ಳುವ ಸ್ಥಳಾವಕಾಶವಿದೆ. ಈ ಕಾರ್, ಮಹೀಂದ್ರ XUV300, ಫೋರ್ಡ್ ಇಕೋಸ್ಪೋರ್ಟ್, ನಿಸ್ಸಾನ್ ಮ್ಯಾಗ್ನೈಟ್, ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಟಾಟಾ ನೆಕ್ಸಾನ್ ಮತ್ತು ಇನ್ನೂ ಅನೇಕ ಕಾಂಪ್ಯಾಕ್ಟ್ ಎಸ್ಯುವಿಗಳೊಂದಿಗೆ ಸ್ಪರ್ಧಿಸುತ್ತದೆ.
ವೆನ್ಯೂ ಥ್ರೀ-ಸಿಲಿಂಡರ್ ಎಂಜಿನ್ ಹೊಂದಿದೆ ಮತ್ತು 118.35bhp@6000rpm ಮತ್ತು ಗರಿಷ್ಠ ಟಾರ್ಕ್ 171.6Nm@1500-4000rpm ಅನ್ನು ನೀಡುತ್ತದೆ.
ಹ್ಯುಂಡೈ ವೆನ್ಯೂ ಆಟೋಮ್ಯಾಟಿಕ್ ಮತ್ತು ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ ಲಭ್ಯವಿದೆ. ಫ್ಯೂಯೆಲ್ ಪ್ರಕಾರ ಮತ್ತು ವೇರಿಯಂಟ್ ಅನ್ನು ಅವಲಂಬಿಸಿ, ಇದು ಸರಾಸರಿ 17.52 kmpl-23.7 kmpl ಮೈಲೇಜ್ ನೀಡುತ್ತದೆ.
ಈ ಕಾರಿನ ಹೊರಭಾಗದಲ್ಲಿ ಟಾಪ್ ಡೇಟೈಮ್ ರನ್ನಿಂಗ್ ಲೈಟ್ಗಳು, ಪ್ರೊಜೆಕ್ಟರ್ ಮತ್ತು ಕಾರ್ನರಿಂಗ್ ಹೆಡ್ಲೈಟ್ಗಳು, ಪ್ರೊಜೆಕ್ಟರ್ ಫಾಗ್ ಲೈಟ್ಗಳು, ಎಲ್ಇಡಿ ಟೈಲ್ ಲೈಟ್ಗಳು ಇತ್ಯಾದಿಗಳನ್ನು ಅಳವಡಿಸಲಾಗಿದೆ. ಹ್ಯುಂಡೈ ವೆನ್ಯೂನ ಒಳಭಾಗವು ಡೋರ್ ಹ್ಯಾಂಡಲ್ಗಳ ಒಳಗೆ ಮೆಟಲ್ ಫಿನಿಶ್, ಲೆದರ್ ಪ್ಯಾಕ್ ಫ್ರಂಟ್ ಸೆಂಟರ್ ಆರ್ಮ್ರೆಸ್ಟ್, ಸ್ಪೋರ್ಟಿ ಮೆಟಲ್ ಪೆಡಲ್ಗಳು ಇತ್ಯಾದಿಗಳನ್ನು ಒಳಗೊಂಡಿದೆ.
ಇವುಗಳ ಹೊರತಾಗಿ ವೆನ್ಯೂ ಕಾರ್, ಡೈನಾಮಿಕ್ ಮಾರ್ಗಸೂಚಿಗಳೊಂದಿಗೆ ರಿಯರ್ ಕ್ಯಾಮರಾ, ಹೆಡ್ಲ್ಯಾಂಪ್ ಎಸ್ಕಾರ್ಟ್ ಫಂಕ್ಷನ್ ಮತ್ತು ಬರ್ಗಲರ್ ಅಲಾರಂನಂತಹ ಹೆಚ್ಚುವರಿ ಸೇಫ್ಟಿ ಫೀಚರ್ಗಳನ್ನು ಹೊಂದಿದೆ.
ಇಂತಹ ಸುಧಾರಿತ ಸೇಫ್ಟಿ ಫೀಚರ್ಗಳ ಹೊರತಾಗಿಯೂ, ಹುಂಡೈ ವೆನ್ಯೂ ವಿವಿಧ ಸಂಭವನೀಯ ಆನ್-ರೋಡ್ ಅನಾಹುತಗಳಿಗೆ ಬಲಿಯಾಗಬಹುದು. ಆದ್ದರಿಂದ, ವೃತ್ತಿಪರ ಮತ್ತು ವಿಶ್ವಾಸಾರ್ಹ ಕಾರ್ ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆ ಮಾಡುವುದು ತುಂಬಾ ಅವಶ್ಯಕ. ಈ ನಿಟ್ಟಿನಲ್ಲಿ ಹ್ಯುಂಡೈ ವೆನ್ಯೂಗೆ ಡಿಜಿಟ್ನ ಕಾರ್ ಇನ್ಶೂರೆನ್ಸ್ ಸರಿಯಾದ ಆಯ್ಕೆಯಾಗಿದೆ.
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ಪರಿಗಣಿಸುತ್ತೇವೆ. ಹೇಗೆಂದು ತಿಳಿಯಿರಿ
ಅಪಘಾತದ ಕಾರಣದಿಂದಾಗಿ ಸ್ವಂತ ಕಾರ್ಗೆ ಉಂಟಾಗುವ ಡ್ಯಾಮೇಜ್/ನಷ್ಟಗಳು |
×
|
✔
|
ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರ್ಗೆ ಉಂಟಾಗುವ ಡ್ಯಾಮೇಜ್/ನಷ್ಟಗಳು |
×
|
✔
|
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರ್ಗೆ ಉಂಟಾಗುವ ಡ್ಯಾಮೇಜ್/ನಷ್ಟಗಳು |
×
|
✔
|
ಥರ್ಡ್ ಪಾರ್ಟಿ ವೆಹಿಕಲ್ಗೆ ಉಂಟಾಗುವ ಹಾನಿ |
✔
|
✔
|
ಥರ್ಡ್ ಪಾರ್ಟಿ ಆಸ್ತಿಗೆ ಉಂಟಾಗುವಹಾನಿ |
✔
|
✔
|
ಪರ್ಸನಲ್ ಆಕ್ಸಿಡೆಂಟ್ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯ/ಸಾವು |
✔
|
✔
|
ನಿಮ್ಮ ಕಾರ್ನ ಕಳ್ಳತನ |
×
|
✔
|
ಡೋರ್ಸ್ಟೆಪ್ ಪಿಕಪ್ ಮತ್ತು ರಿಪೇರಿ |
×
|
✔
|
ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ಡ್ ಆ್ಯಡ್-ಆನ್ಗಳೊಂದಿಗೆ ಹೆಚ್ಚುವರಿ ರಕ್ಷಣೆ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ನ ವ್ಯತ್ಯಾಸ ದ ಬಗ್ಗೆ ಮತ್ತಷ್ಟು ತಿಳಿಯಿರಿ
ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿದ ನಂತರ, ನೀವು ಚಿಂತಾ ಮುಕ್ತರಾಗಿ ಬದುಕಬಹುದು. ಏಕೆಂದರೆ ನಾವು ಸರಳವಾದ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!
1800-258-5956 ಗೆ ಕರೆ ಮಾಡಿ. ಯಾವುದೇ ಫಾರ್ಮ್ಗಳನ್ನು ಭರ್ತಿ ಮಾಡಬೇಕಾಗಿಲ್ಲ
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ನಲ್ಲಿ ಸ್ವಯಂ ತಪಾಸಣೆಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾದ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್ಫೋನ್ನಿಂದ ನಿಮ್ಮ ವೆಹಿಕಲ್ನ ಹಾನಿಯನ್ನು ಶೂಟ್ ಮಾಡಿ.
ನಮ್ಮ ಗ್ಯಾರೇಜ್ಗಳ ನೆಟ್ವರ್ಕ್ ಮೂಲಕ ಮರುಪಾವತಿ ಅಥವಾ ಕ್ಯಾಶ್ಲೆಸ್ ಆಯ್ಕೆಗಳೆರಡರಲ್ಲಿ ನೀವು ಬಯಸುವ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ
ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ!
ಡಿಜಿಟ್ನ ಕ್ಲೈಮ್ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ
ಡಿಜಿಟ್ನಲ್ಲಿ, ನೀವು ಈ ಕೆಳಗಿನ ಪಾಲಿಸಿ ಆಯ್ಕೆಗಳಿಂದ ನಿಮಗೆ ಸೂಕ್ತವಾಗುವ ಪಾಲಿಸಿಯನ್ನು ಆರಿಸಿಕೊಳ್ಳಬಹುದು
ಥರ್ಡ್-ಪಾರ್ಟಿ ಪಾಲಿಸಿ - ನಿಮ್ಮ ಕಾರ್, ಥರ್ಡ್ ಪಾರ್ಟಿ ವ್ಯಕ್ತಿ, ವೆಹಿಕಲ್ ಅಥವಾ ಆಸ್ತಿಗೆ ಹಾನಿ ಉಂಟುಮಾಡುವ ಸಂದರ್ಭಗಳು ಉಂಟಾಗಬಹುದು. ಡಿಜಿಟ್ನ ಥರ್ಡ್-ಪಾರ್ಟಿ ಹ್ಯುಂಡೈ ವೆನ್ಯೂ ಕಾರ್ ಇನ್ಶೂರೆನ್ಸ್ ಹೊಂದಿರುವ ಜನರಿಗೆ ಅಂತಹ ಎಲ್ಲಾ ಹಾನಿ ಮತ್ತು ನಷ್ಟವನ್ನು ಡಿಜಿಟ್ ಕವರ್ ಮಾಡುತ್ತದೆ. ಇದು ಮೊಕದ್ದಮೆ ಸಮಸ್ಯೆಗಳು ಯಾವುದಾದರೂ ಇದ್ದಲ್ಲಿ, ಅದನ್ನು ಸಹ ನೋಡಿಕೊಳ್ಳುತ್ತದೆ. ಇದಲ್ಲದೆ, 1989 ರ ಮೋಟಾರ್ಸ್ ವೆಹಿಕಲ್ಸ್ ಆ್ಯಕ್ಟ್, ಪ್ರತಿ ವೆಹಿಕಲ್ ಮಾಲೀಕರು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಲೇಬೇಕು ಎಂದು ಹೇಳುತ್ತದೆ.
ಕಾಂಪ್ರೆಹೆನ್ಸಿವ್ ಪಾಲಿಸಿ - ಡಿಜಿಟ್ನ ಕಾಂಪ್ರೆಹೆನ್ಸಿವ್ ವೆನ್ಯೂ ಇನ್ಶೂರೆನ್ಸ್ ಪಾಲಿಸಿದಾರರು ಥರ್ಡ್ ಪಾರ್ಟಿ ಮತ್ತು ಓನ್ ಡ್ಯಾಮೇಜ್ ಪ್ರೊಟೆಕ್ಷನ್ ಕವರೇಜ್ಗಳ ಪ್ರಯೋಜನಗಳನ್ನು ಆನಂದಿಸುತ್ತಾರೆ. ಇದಲ್ಲದೆ, ಅವರು ಹಲವಾರು ಹೆಚ್ಚುವರಿ ಸೌಲಭ್ಯಗಳನ್ನು ಸಹ ಪಡೆಯುತ್ತಾರೆ.
ಡಿಜಿಟ್ನ ಕಾಂಪ್ರೆಹೆನ್ಸಿವ್ ಪಾಲಿಸಿಯೊಂದಿಗೆ, ನೀವು ವಿವಿಧ ಆ್ಯಡ್-ಆನ್ಗಳನ್ನು ಪಡೆಯುತ್ತೀರಿ. ಅವುಗಳೆಂದರೆ-
ಝೀರೋ ಡೆಪ್ರಿಸಿಯೇಶನ್ ಕವರ್
ಕನ್ಸ್ಯೂಮೆಬಲ್ ಕವರ್
ಎಂಜಿನ್ ಮತ್ತು ಗೇರ್ ಬಾಕ್ಸ್ ಪ್ರೊಟೆಕ್ಷನ್
ರೋಡ್ ಸೈಡ್ ಅಸಿಸ್ಟೆನ್ಸ್
ರಿಟರ್ನ್ ಟು ಇನ್ವಾಯ್ಸ್ ಕವರ್
ಹುಂಡೈ ವೆನ್ಯೂ ಕಾರ್ ಇನ್ಶೂರೆನ್ಸ್ ರಿನೀವಲ್ ವೆಚ್ಚಕ್ಕೆ ಸಂಬಂಧಿಸಿದಂತೆ ನಿಮಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ನಮ್ಮ ಕಸ್ಟಮರ್ ಸರ್ವೀಸ್ ಟೀಮ್ ಅನ್ನು ಸಂಪರ್ಕಿಸಿ. ಅವರು ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ 24x7 ಕೆಲಸ ಮಾಡುತ್ತಾರೆ ಮತ್ತು ಎಲ್ಲಾ ಇನ್ಶೂರೆನ್ಸ್-ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂಬುದರ ಬಗ್ಗೆ ಖಚಿತಪಡಿಸಿಕೊಳ್ಳುತ್ತಾರೆ.
ನೀವು ಇನ್ನು ಮುಂದೆ ಸಮಯ ತಿನ್ನುವ ಮತ್ತು ಭಾರಿ ಹ್ಯುಂಡೈ ವೆನ್ಯೂ ಇನ್ಶೂರೆನ್ಸ್ ರಿನೀವಲ್ ಪ್ರಕ್ರಿಯೆಯ ಬಗ್ಗೆ ಚಿಂತಿಸಬೇಕಾಗಿಲ್ಲ. ಪ್ರಸ್ತುತ ಡಾಕ್ಯುಮೆಂಟುಗಳನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಿ ಮತ್ತು ನಿಮ್ಮ ಕಾರ್ ಇನ್ಶೂರೆನ್ಸ್ ಅನ್ನು ಯಾವುದೇ ಸಮಯದಲ್ಲಿ ರಿನೀವಲ್ ಮಾಡಿ.
ಡಿಜಿಟ್ನ ಹ್ಯುಂಡೈ ವೆನ್ಯೂ ಕಾರ್ ಇನ್ಶೂರೆನ್ಸ್ ಪಾಲಿಸಿದಾರರು ಪಾಲಿಸಿ ಪ್ರೀಮಿಯಂಗಳಲ್ಲಿ 20%-50% ರಷ್ಟು ಡಿಸ್ಕೌಂಟ್ಗಳನ್ನು ಪಡೆಯುತ್ತಾರೆ. ಆದಾಗ್ಯೂ, ಡಿಸ್ಕೌಂಟ್ ಮೊತ್ತವು ನೀವು ಕಲೆಕ್ಟ್ ಮಾಡಿದ ಕ್ಲೈಮ್ಲೆಸ್ ವರ್ಷಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ.
ಡಿಜಿಟ್ನೊಂದಿಗೆ, ನಿಮ್ಮ ಹ್ಯುಂಡೈ ವೆನ್ಯೂ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂವನ್ನು ನೀವು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಹೆಚ್ಚಿನ ಐಡಿವಿ ಎಂದರೆ ನಿಮ್ಮ ಕಾರನ್ನು ಕಳುವಾದಾಗ ಅಥವಾ ಹಾನಿಗೊಳಗಾದಾಗ ನೀವು ಹೆಚ್ಚಿನ ಪರಿಹಾರ ಪಡೆಯುತ್ತೀರಿ.
ಭಾರತದಾದ್ಯಂತ ಹಲವಾರು ಗ್ಯಾರೇಜ್ಗಳೊಂದಿಗೆ ಡಿಜಿಟ್ ಟೈ-ಅಪ್ಗಳನ್ನು ಹೊಂದಿದೆ. ಆದ್ದರಿಂದ ನೀವು ಆನ್-ರೋಡ್ನಲ್ಲಿ ಯಾವುದೇ ಕಾರಿಗೆ ಸಂಬಂಧಿಸಿದ ಸಮಸ್ಯೆಯನ್ನು ಎದುರಿಸಿದರೆ, ನೀವು ನೆಟ್ವರ್ಕ್ ಗ್ಯಾರೇಜ್ಗೆ ಭೇಟಿ ನೀಡಿ ಮತ್ತು ಕ್ಯಾಶ್ಲೆಸ್ ಸರ್ವೀಸ್ ಅನ್ನು ಕ್ಲೈಮ್ ಮಾಡಬಹುದು.
ಅನೇಕರಿಗೆ ಫೋರ್-ವೀಲರ್ ಎಂದರೆ ಮಗು ಇದ್ದಂತೆ. ಆದ್ದರಿಂದ, ನಂಬಲರ್ಹವಾದ ಹ್ಯುಂಡೈ ವೆನ್ಯೂ ಕಾರ್ ಇನ್ಶೂರೆನ್ಸ್ ಪಾಲಿಸಿ ಪೂರೈಕೆದಾರರನ್ನು ನೀವು ಆಯ್ಕೆ ಮಾಡುವುದು ತುಂಬಾ ಮುಖ್ಯವಾಗುತ್ತದೆ. ಇದಲ್ಲದೆ, ವೆಹಿಕಲ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಯಾವುದೇ ಆನ್-ರೋಡ್ ದುರ್ಘಟನೆಯ ಸಂದರ್ಭದಲ್ಲಿ ನೀವು ಪಾವತಿಸಬೇಕಾದ ಹಲವಾರು ಸಂಭವನೀಯ ದಂಡಗಳಿಂದ ಇದು ನಿಮ್ಮನ್ನು ರಕ್ಷಿಸುತ್ತದೆ.
ಹಣಕಾಸಿನ ವಿಷಯದಲ್ಲಿ ನಿಮ್ಮ ಸುರಕ್ಷತೆಯ ಉದ್ದೇಶವನ್ನು ಪೂರೈಸಲು ಭಾರತದಲ್ಲಿ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಮುಖ್ಯವಾಗಿದೆ. ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನಾವಿಲ್ಲಿ ತಿಳಿಯೋಣ
ಫೈನಾನ್ಸಿಯಲ್ ಸೆಕ್ಯೂರಿಟಿಯನ್ನು ನೀಡುತ್ತದೆ : ಅನಿರೀಕ್ಷಿತ ಸಂದರ್ಭಗಳಲ್ಲಿ, ನಿಮ್ಮ ಕಾರಿಗೆ ಹಾನಿಯಾದಾಗ ಅಥವಾ ಬೇರೊಬ್ಬರ ಕಾರಿಗೆ ಹಾನಿಯಾದಾಗ ನಿಮ್ಮ ಜೇಬಿನಿಂದ ಖರ್ಚು ಮಾಡದಂತೆ ನಿಮ್ಮ ಕಾರ್ ಇನ್ಶೂರೆನ್ಸ್ ನಿಮ್ಮನ್ನು ರಕ್ಷಿಸುತ್ತದೆ!
ಓನ್ ಡ್ಯಾಮೇಜ್ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ.
ಕಡ್ಡಾಯ ಥರ್ಡ್-ಪಾರ್ಟಿ ಲಯಬಿಲಿಟಿ ಪಾಲಿಸಿ : ಭಾರತದಲ್ಲಿ, ಥರ್ಡ್-ಪಾರ್ಟಿ ಲಯಬಿಲಿಟಿ ಪಾಲಿಸಿಯನ್ನು ಖರೀದಿಸುವುದು ಕಡ್ಡಾಯವಾಗಿದೆ. ಇದನ್ನು ಸ್ಟ್ಯಾಂಡ್ಲೋನ್ ಕವರ್ ಆಗಿ ತೆಗೆದುಕೊಳ್ಳಬಹುದು ಅಥವಾ ಕಾಂಪ್ರೆಹೆನ್ಸಿವ್ ಪ್ಯಾಕೇಜ್ ಪಾಲಿಸಿಯ ಅಡಿಯಲ್ಲಿಯೂ ಆಯ್ಕೆ ಮಾಡಬಹುದು. ಥರ್ಡ್ ಪಾರ್ಟಿಗೆ ನಿಮ್ಮಿಂದ ಉಂಟಾದ ದೈಹಿಕ ಗಾಯ ಅಥವಾ ಆಸ್ತಿ ಹಾನಿ ಈ ಎರಡೂ ಸಂದರ್ಭಗಳಲ್ಲಿ, ಯಾವುದೇ ನಷ್ಟವನ್ನು ಇನ್ಶೂರೆನ್ಸ್ ಪೂರೈಕೆದಾರರು ಪಾವತಿಸುತ್ತಾರೆ. ಈ ಲಯಬಿಲಿಟಿಗಳು, ವಿಶೇಷವಾಗಿ ಮರಣ ಪ್ರಕರಣಗಳಲ್ಲಿ, ಕೆಲವೊಮ್ಮೆ ಎಲ್ಲರೂ ಭರಿಸಲಾಗದ ದೊಡ್ಡ ಮೊತ್ತವಾಗಬಹುದು. ಆದ್ದರಿಂದ, ಕಾರ್ ಪಾಲಿಸಿಯು ಉತ್ತಮವಾಗಿ ಸಹಾಯ ಮಾಡುತ್ತದೆ.
ಡ್ರೈವಿಂಗ್ ಮಾಡಲು ಕಾನೂನು ಅನುಮತಿ : ಮೋಟಾರ್ ವೆಹಿಕಲ್ಸ್ ಆ್ಯಕ್ಟ್ ಪ್ರಕಾರ, ಕಾರ್ ಪಾಲಿಸಿಯನ್ನು ಖರೀದಿಸುವುದು ಅತ್ಯಗತ್ಯ ಏಕೆಂದರೆ ಅದು ನಿಮಗೆ ಕಾರನ್ನು ರಸ್ತೆಯಲ್ಲಿ ಓಡಿಸಲು ಕಾನೂನು ಅನುಮತಿಯನ್ನು ನೀಡುತ್ತದೆ. ನೀವು ಪಾಲಿಸಿಯನ್ನು ಹೊಂದಿಲ್ಲದಿದ್ದರೆ, ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ಕ್ಯಾನ್ಸಲ್ ಮಾಡಬಹುದು.
ಆ್ಯಡ್-ಆನ್ಗಳೊಂದಿಗೆ ಕವರ್ ಅನ್ನು ವಿಸ್ತರಿಸಿ : ನೀವು ಕಾಂಪ್ರೆಹೆನ್ಸಿವ್ ಪ್ಯಾಕೇಜ್ ಪಾಲಿಸಿಯನ್ನು ಹೊಂದಿದ್ದರೆ ಅದರ ಕವರೇಜ್ಗಾಗಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ವಿಸ್ತರಿಸಬಹುದು. ಕಾರ್ ಇನ್ಶೂರೆನ್ಸ್ ಆ್ಯಡ್-ಆನ್ಗಳನ್ನು ಖರೀದಿಸುವ ಮೂಲಕ ನೀವು ಪ್ಯಾಕೇಜ್ ಪಾಲಿಸಿಯನ್ನು ಇನ್ನಷ್ಟು ಉತ್ತಮ ಕವರ್ ಮಾಡಬಹುದು. ಇವುಗಳಲ್ಲಿ ಕೆಲವು ಬ್ರೇಕ್ ಡೌನ್ ಅಸಿಸ್ಟೆನ್ಸ್, ಎಂಜಿನ್ ಮತ್ತು ಗೇರ್ಬಾಕ್ಸ್ ಪ್ರೊಟೆಕ್ಷನ್, ಟೈರ್ ಪ್ರೊಟೆಕ್ಟಿವ್ ಕವರ್ ಮತ್ತು ಝೀರೋ-ಡೆಪ್ರಿಸಿಯೇಶನ್ ಕವರ್ ಮತ್ತು ಇನ್ನೂ ಹೆಚ್ಚಿನದನ್ನು ಒಳಗೊಂಡಿರಬಹುದು.
ಮಾರ್ಕೆಟ್ನಲ್ಲಿ ಕಾಂಪ್ಯಾಕ್ಟ್ ಎಸ್ಯುವಿಯನ್ನು ಪರಿಚಯಿಸುವ ಸ್ಪರ್ಧೆಯನ್ನು ಮ್ಯಾಚ್ ಮಾಡಲು, ಹ್ಯುಂಡೈ ವೆರ್ನಾದೊಂದಿಗೆ ಬಂದಿತು. ಲಾಂಗ್ ಬಾನೆಟ್ನೊಂದಿಗೆ ಬ್ಯಾಲೆನ್ಸ್ಡ್ ಲುಕ್ಗಾಗಿ ಇದು ಮಾರ್ಕೆಟ್ನಲ್ಲಿ ಆಯ್ಕೆಯಾಗಿದೆ. ಇದು ಅದೇ ಸೆಗ್ಮೆಂಟ್ನ ಇತರ ಕಾರುಗಳೊಂದಿಗೆ ಸ್ಪರ್ಧೆಯನ್ನು ಎದುರಿಸುತ್ತಿದೆಯಾದರೂ, ಎಲ್ಲಾ-ಹೊಸ ಹ್ಯುಂಡೈ ವೆನ್ಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಂಬಲಾಗಿದೆ.
ಈ ಕಾರ್, ಐದು ಜನರಿಗೆ ಆರಾಮದಾಯಕವಾದ ಸೀಟಿಂಗ್ ಸ್ಪೇಸ್ ನೀಡುವುದರಿಂದ ಇದನ್ನು ಕುಟುಂಬದ ಕಾರ್ (ಫ್ಯಾಮಿಲಿ ಕಾರ್) ಎಂದು ಪರಿಗಣಿಸಬಹುದು. ಇದು ₹6.5 ಲಕ್ಷಗಳ ಪ್ರೈಸ್ ರೇಂಜಿನಿಂದ ಪ್ರಾರಂಭವಾಗುತ್ತದೆ ಮತ್ತು ₹11.11 ಲಕ್ಷದವರೆಗೆ ಹೋಗುತ್ತದೆ. ಹ್ಯುಂಡೈ ವೆನ್ಯೂ ಉತ್ತಮ ಪರ್ಫಾರ್ಮೆನ್ಸ್ ನೀಡುವ ಕಾರ್ ಆಗಿದ್ದು, ಪ್ರತಿ ಲೀಟರ್ಗೆ 17.52 ರಿಂದ 23.70 ಕಿಮೀ ಮೈಲೇಜ್ ನೀಡುತ್ತದೆ.
ಹ್ಯುಂಡೈ ವೆನ್ಯೂ ಭಾರತೀಯ ರಸ್ತೆಗಳಲ್ಲಿ ಓಡುವ ಮತ್ತೊಂದು ಕಾರ್ ಆಗಿದ್ದು, ಇದು ಡೈನಾಮಿಕ್ ಫೀಚರ್ಗಳನ್ನು ಮತ್ತು ಆರಾಮದಾಯಕ ಇಂಟೀರಿಯರ್ಗಳನ್ನು ಹೊಂದಿದೆ. ಈ ಕಾರ್ ಸಿಕ್ಸ್-ಸ್ಪೀಡ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಫ್ಯೂಯೆಲ್ ಪ್ರಕಾರಗಳಿಗೆ ಲಭ್ಯವಿದೆ. ನೀವು ಟ್ರಾಫಿಕ್ನಲ್ಲಿರುವಾಗಲೂ ಪವರ್ಫುಲ್ ಎಂಜಿನ್ ಮತ್ತು ಟಾರ್ಕ್, ನಿಮಗೆ ಸುಗಮ ರೈಡ್ ಅನ್ನು ನೀಡುತ್ತದೆ. ಇದು ಫ್ಲಾಟ್ ಡ್ಯಾಶ್ಬೋರ್ಡ್ ಮತ್ತು ಮುಂಭಾಗದಲ್ಲಿ ಸ್ಲೀಕ್ ಟಚ್ ಸ್ಕ್ರೀನ್ ಡಿಸ್ಪ್ಲೇಯನ್ನು ಒಳಗೊಂಡಿರುವ ಡಿಸೈನ್ನಲ್ಲಿ ತುಂಬಾ ನೀಟ್ ಆಗಿದೆ. ಸೀಟ್ ಮತ್ತು ಸ್ಟೀರಿಂಗ್ಗೆ ಒಳಗಡೆ ಬಳಸಲಾದ ಅಪ್ಹೊಲ್ಸ್ಟರಿ ಉತ್ತಮ ಗುಣಮಟ್ಟದ ಲೆದರ್ನದ್ದಾಗಿದೆ.
ಫ್ರಂಟ್ ಮತ್ತು ರಿಯರ್, ಎರಡೂ ಸೀಟ್ಗಳು ಉತ್ತಮ ಸಪೋರ್ಟ್ ನೀಡುತ್ತವೆ. ಸ್ಟೋರೇಜ್ ಆಪ್ಷನ್ಗಳೊಂದಿಗೆ ನೀವು ಆರಾಮದಾಯಕವಾದ ಹೆಡ್ ಮತ್ತು ಲೆಗ್ ರೂಮ್ ಅನ್ನು ಸಹ ಪಡೆಯುತ್ತೀರಿ. ಗಮನ ಸೆಳೆಯುವ ಇತರ ಫೀಚರ್ಗಳೆಂದರೆ ಸ್ಮಾರ್ಟ್ಫೋನ್ ಮಿರರಿಂಗ್, ಎಬಿಎಸ್, ರಿಯರ್ ಪಾರ್ಕಿಂಗ್ ಸೆನ್ಸರ್ಗಳು, ಸೇಫ್ಟಿ ಏರ್ಬ್ಯಾಗ್ಗಳು ಮತ್ತು ಜಿಪಿಎಸ್ ಲೊಕೇಶನ್-ಬೇಸ್ಡ್ ಸರ್ವೀಸ್ಗಳೊಂದಿಗೆ 8-ಇಂಚಿನ ಇನ್ಫೋಟೈನ್ಮೆಂಟ್ ಸ್ಕ್ರೀನ್.
ಹ್ಯುಂಡೈ ವೆನ್ಯೂ 10 ವೈಬ್ರೆಂಟ್ ಕಲರ್ಗಳಲ್ಲಿ ಲಭ್ಯವಿದ್ದು, ಅದು ನೀವು ಜನದಟ್ಟಣೆಯಲ್ಲಿ ಚಾಲನೆ ಮಾಡುವಾಗ ಎಲ್ಲರನ್ನು ವಿಸ್ಮಯಗೊಳಿಸುತ್ತದೆ.
ಪರಿಶೀಲಿಸಿ : ಹ್ಯುಂಡೈ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ವೇರಿಯಂಟ್ನ ಹೆಸರು |
ವೇರಿಯಂಟ್ನ ಬೆಲೆ (ನವದೆಹಲಿಯಲ್ಲಿ, ಬೇರೆ ನಗರಗಳಾದ್ಯಂತ ಬೆಲೆಯು ಬದಲಾಗಬಹುದು) |
ವೆನ್ಯೂ E |
₹6.99 ಲಕ್ಷ |
ವೆನ್ಯೂ S |
₹7.77 ಲಕ್ಷ |
ವೆನ್ಯೂ S ಪ್ಲಸ್ |
₹8.64 ಲಕ್ಷ |
ವೆನ್ಯೂ S ಟರ್ಬೊ iMT |
₹9.10 ಲಕ್ಷ |
ವೆನ್ಯೂ S ಡೀಸೆಲ್ |
₹9.52 ಲಕ್ಷ |
ವೆನ್ಯೂ SX ಡೀಸೆಲ್ |
₹9.99 ಲಕ್ಷ |
ವೆನ್ಯೂ ಎಸ್ ಟರ್ಬೊ DCT |
₹10.01 ಲಕ್ಷ |
ವೆನ್ಯೂ SX iMT |
₹10.07 ಲಕ್ಷ |
ವೆನ್ಯೂ SX ಟರ್ಬೊ |
₹10.07 ಲಕ್ಷ |
ವೆನ್ಯೂ SX ಸ್ಪೋರ್ಟ್ iMT |
₹10.37 ಲಕ್ಷ |
ವೆನ್ಯೂ SX ಡೀಸೆಲ್ ಸ್ಪೋರ್ಟ್ |
₹10.40 ಲಕ್ಷ |
ವೆನ್ಯೂ SX ಟರ್ಬೊ ಎಕ್ಸಿಕ್ಯೂಟಿವ್ |
₹11.04 ಲಕ್ಷ |
ವೆನ್ಯೂ SX ಆಪ್ಟ್ iMT |
₹11.35 ಲಕ್ಷ |
ವೆನ್ಯೂ SX ಆಪ್ಟ್ ಸ್ಪೋರ್ಟ್ iMT |
₹11.48 ಲಕ್ಷ |
ವೆನ್ಯೂ SX ಆಪ್ಟ್ ಡೀಸೆಲ್ |
₹11.67 ಲಕ್ಷ |
ವೆನ್ಯೂ SX ಪ್ಲಸ್ ಟರ್ಬೊ DCT |
₹11.68 ಲಕ್ಷ |
ವೆನ್ಯೂ SX ಆಪ್ಟ್ ಸ್ಪೋರ್ಟ್ |
₹11.79 ಲಕ್ಷ |
ವೆನ್ಯೂ SX ಪ್ಲಸ್ ಸ್ಪೋರ್ಟ್ಸ್ DCT |
₹11.85 ಲಕ್ಷ |