ಹ್ಯುಂಡೈ ಸ್ಯಾಂಟ್ರೋ ಕಾರ್ ಇನ್ಶೂರೆನ್ಸ್

Get Instant Policy in Minutes*

Third-party premium has changed from 1st June. Renew now

ಹ್ಯುಂಡೈ ಸ್ಯಾಂಟ್ರೋ ಕಾರ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಿ/ರಿನ್ಯೂ ಮಾಡಿ

ಭಾರತೀಯ ಆಟೋಮೊಬೈಲ್ ಉದ್ಯಮದಲ್ಲಿ ಹ್ಯುಂಡೈನ ನಿರಂತರ ಯಶಸ್ಸಿಗೆ ಭಾರೀ ಕಾರಣ ಅದರ ಪ್ರೀಮಿಯರ್ ಹ್ಯಾಚ್‌ಬ್ಯಾಕ್ - ಸ್ಯಾಂಟ್ರೋದ ಜನಪ್ರಿಯತೆಯಾಗಿದೆ.

ಮೊದಲ ಸ್ಯಾಂಟ್ರೋ ಮಾಡೆಲ್ ಅನ್ನು 1998 ರಲ್ಲಿ ಹೊರತರಲಾಯಿತು ಮತ್ತು ಅಂದಿನಿಂದ ಭಾರತೀಯರಲ್ಲಿ, ವಿಶೇಷವಾಗಿ ಕಾಂಪ್ಯಾಕ್ಟ್ 5-ಸೀಟರ್ ಫ್ಯಾಮಿಲಿ ಕಾರು ವಿಭಾಗದಲ್ಲಿ, ಹೆಚ್ಚಿನ ಪ್ರಚಾರವನ್ನು ಗಳಿಸಿತು. ಈ ವಾಹನದ ಮೂರನೇ ಜನರೇಶನ್ ಅನ್ನು 2018 ರಲ್ಲಿ ಬಿಡುಗಡೆ ಮಾಡಲಾಯಿತು ಮತ್ತು 2019 ರಲ್ಲಿ ಟಾಪ್ 3 ಅರ್ಬನ್ ವರ್ಲ್ಡ್ ಕಾರ್‌ಗಳಲ್ಲಿ ಒಂದಾಗುವ ಪ್ರಶಂಸೆಯನ್ನು ಇದು ಗಳಿಸಿತು (1).

ಆದ್ದರಿಂದ, ದೈನಂದಿನ ಪ್ರಯಾಣಕ್ಕಾಗಿ ಹ್ಯಾಚ್‌ಬ್ಯಾಕ್ ಖರೀದಿಸಲು ಬಯಸುವ ಯಾರಿಗಾದರೂ, ಹ್ಯುಂಡೈ ಸ್ಯಾಂಟ್ರೋ ನಿಸ್ಸಂದೇಹವಾಗಿ ಪರಿಗಣಿಸಲು ಯೋಗ್ಯವಾದ ಆಯ್ಕೆಯಾಗಿದೆ.

ಈಗ ಸ್ಯಾಂಟ್ರೋವನ್ನು ಖರೀದಿಸುವುದು ಒಬ್ಬರ ಯೋಚನೆಯಾಗಿದ್ದರೆ, ರಸ್ತೆಯಲ್ಲಿ ಸಂಭವಿಸಬಹುದಾದ ಅನಿರೀಕ್ಷಿತ ಘಟನೆಗಳಿಂದ ಉಂಟಾಗುವ ಹಾನಿಗಳಿಂದ ವಾಹನವನ್ನು ಆರ್ಥಿಕವಾಗಿ ರಕ್ಷಿಸುವ ಕಾರ್ಯಸಾಧ್ಯವಾದ ಕಾರ್ ಇನ್ಶೂರೆನ್ಸ್ ಆಯ್ಕೆಗಳನ್ನು ಸಹ ಅವರು ಪರಿಗಣಿಸಬೇಕು.

ಈ ನಿಟ್ಟಿನಲ್ಲಿ, ಎರಡು ವಿಧದ ಸ್ಯಾಂಟ್ರೋ ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಆಯ್ಕೆ ಮಾಡಬಹುದು - ಥರ್ಡ್-ಪಾರ್ಟಿ ಲಯಬಿಲಿಟಿ ಮತ್ತು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿ.

ಅದರ ಹೆಸರೇ ಸೂಚಿಸುವಂತೆ, ಥರ್ಡ್-ಪಾರ್ಟಿ ಲಯಬಿಲಿಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಸ್ಯಾಂಟ್ರೋದಿಂದ ಥರ್ಡ್-ಪಾರ್ಟಿ ವಾಹನ, ವ್ಯಕ್ತಿ ಅಥವಾ ಆಸ್ತಿಗೆ ಉಂಟಾದ ಹಾನಿಯನ್ನು ಕವರ್ ಮಾಡುತ್ತದೆ. ಇದುಮೋಟಾರ್ ವೆಹಿಕಲ್ ಆಕ್ಟ್, 1988 ರ ಅಡಿಯಲ್ಲಿ ಕಡ್ಡಾಯಗೊಳಿಸಲಾದ ಪಾಲಿಸಿಯಾಗಿದೆ - ಇದು ಇಲ್ಲದೆ ಡ್ರೈವ್ ಮಾಡುವುದು ಮಾಡುವುದು ರೂ. 2000 (ಪುನರಾವರ್ತಿತ ಅಪರಾಧಕ್ಕಾಗಿ ರೂ. 4000) ಟ್ರಾಫಿಕ್ ಪೆನಲ್ಟಿಗಳನ್ನು ಆಕರ್ಷಿಸಬಹುದು. ಮತ್ತೊಂದೆಡೆ, ಅಪಘಾತದಲ್ಲಿ ನಿಮ್ಮ ಸ್ಯಾಂಟ್ರೋದಿಂದ ಉಂಟಾದ ಹಾನಿಗಳಿಗೆ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯು ಸಂಪೂರ್ಣ ಕವರೇಜ್ ನೀಡುತ್ತದೆ.

ಹೀಗಾಗಿ, ರಸ್ತೆಯಲ್ಲಿನ ಅಪಾಯಗಳಿಂದ ನಿಮ್ಮ ಕಾರನ್ನು ರಕ್ಷಿಸಲು ಕಾಂಪ್ರೆಹೆನ್ಸಿವ್ ಸ್ಯಾಂಟ್ರೋ ಇನ್ಶೂರೆನ್ಸ್ ಪಾಲಿಸಿಯು ಉತ್ತಮ ಆಯ್ಕೆಯಾಗಿದೆ.

ಈ ನಿಟ್ಟಿನಲ್ಲಿ, ಸ್ಯಾಂಟ್ರೋ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ನೀಡಲಾಗುವ ಪ್ರಯೋಜನಗಳು ಒಬ್ಬ ಇನ್ಶೂರೆನ್ಸ್ ಪೂರೈಕೆದಾರರಿಂದ ಇನ್ನೊಂದಕ್ಕೆ ಬದಲಾಗಬಹುದು ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಅದಕ್ಕಾಗಿಯೇ ನೀವು ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರನ್ನು ಜಾಣ್ಮೆಯಿಂದ ಆರಿಸಿಕೊಳ್ಳುವುದು ಅತಿಮುಖ್ಯವಾಗಿದೆ.

ಹ್ಯುಂಡೈ ಸ್ಯಾಂಟ್ರೋ ಕಾರ್ ಇನ್ಶೂರೆನ್ಸ್ ರಿನೀವಲ್ ಬೆಲೆ

ರಿಜಿಸ್ಟ್ರೇಷನ್ ದಿನಾಂಕ ಪ್ರೀಮಿಯಂ (ಕಾಂಪ್ರೆಹೆನ್ಸಿವ್ ಪಾಲಿಸಿಗಾಗಿ)
ಜುಲೈ-2018 4,456
ಜುಲೈ-2017 4,336
ಜುಲೈ-2016 4,175

** ಡಿಸ್ಕ್ಲೈಮರ್ - ಹ್ಯುಂಡೈ ಸ್ಯಾಂಟ್ರೋ ನ್ಯೂ 1.1 ಎರಾ ಎಕ್ಸಿಕ್ಯೂಟಿವ್ (ಎಂಟಿ) ಪೆಟ್ರೋಲ್ 1086 ಗಾಗಿ ಪ್ರೀಮಿಯಂ ಲೆಕ್ಕಾಚಾರವನ್ನು ಮಾಡಲಾಗಿದೆ. ಜಿಎಸ್‌ಟಿ ಹೊರತುಪಡಿಸಿ.

ನಗರ - ಬೆಂಗಳೂರು, ಪಾಲಿಸಿ ಮುಕ್ತಾಯ ದಿನಾಂಕ - ಆಗಸ್ಟ್-2020, ಎನ್ ಸಿ ಬಿ - 50%, ಯಾವುದೇ ಆ್ಯಡ್-ಆನ್‌ಗಳಿಲ್ಲ. ಪ್ರೀಮಿಯಂ ಲೆಕ್ಕಾಚಾರವನ್ನು ಜುಲೈ-2020 ರಲ್ಲಿ ಮಾಡಲಾಗುತ್ತದೆ. ದಯವಿಟ್ಟು ನಿಮ್ಮ ವಾಹನದ ವಿವರಗಳನ್ನು ಮೇಲೆ ನಮೂದಿಸುವ ಮೂಲಕ ಫೈನಲ್ ಪ್ರೀಮಿಯಂ ಅನ್ನು ಪರಿಶೀಲಿಸಿ.

ಹ್ಯುಂಡೈ ಸ್ಯಾಂಟ್ರೋ ಕಾರ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿರುತ್ತದೆ

ನೀವು ಡಿಜಿಟ್‌ನ ಹ್ಯುಂಡೈ ಸ್ಯಾಂಟ್ರೋ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಹ್ಯುಂಡೈ ಸ್ಯಾಂಟ್ರೋ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಗಳು

ಥರ್ಡ್-ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದಾಗಿ ಸ್ವಂತ ಕಾರಿಗೆ ಹಾನಿ/ನಷ್ಟ

×

ಬೆಂಕಿಯಿಂದಾಗಿ ಸ್ವಂತ ಕಾರಿಗೆ ಹಾನಿ/ನಷ್ಟ

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಹಾನಿ/ನಷ್ಟಗಳು

×

ಥರ್ಡ್-ಪಾರ್ಟಿ ವಾಹನಕ್ಕೆ ಹಾನಿ

×

ಥರ್ಡ್-ಪಾರ್ಟಿ ಆಸ್ತಿಗೆ ಹಾನಿ

×

ವೈಯಕ್ತಿಕ ಅಪಘಾತ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು

×

ನಿಮ್ಮ ಕಾರಿನ ಕಳ್ಳತನ

×

ಡೋರ್ ಸ್ಟೆಪ್ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ ಮಾಡಲಾದ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್-ಪಾರ್ಟಿ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ

ಕ್ಲೈಮ್ ಅನ್ನು ಫೈಲ್ ಮಾಡುವುದು ಹೇಗೆ?

ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನ್ಯೂ ಮಾಡಿದ ನಂತರ, ನಾವು 3-ಹಂತದ, ಸಂಪೂರ್ಣ ಡಿಜಿಟಲ್ ಆದ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿರುವುದರಿಂದ ನೀವು ಚಿಂತೆಯಿಲ್ಲದೆ ಹಾಯಾಗಿ ಬದುಕುತ್ತೀರಿ!

ಹಂತ 1

1800-258-5956 ಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ನಲ್ಲಿ ಸ್ವ ತಪಾಸಣೆಗಾಗಿ ಲಿಂಕ್ ಅನ್ನು ಪಡೆಯಿರಿ. ಮಾರ್ಗದರ್ಶನವಿರುವ ಹಂತ ಹಂತವಾದ ಪ್ರಕ್ರಿಯೆಯಿಂದ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನಕ್ಕಾದ ಡ್ಯಾಮೇಜ್ ಗಳನ್ನು ಶೂಟ್ ಮಾಡಿ.

ಹಂತ 3

ನೀವು ಆಯ್ಕೆ ಮಾಡಲು ಬಯಸುವ ರಿಪೇರಿ ವಿಧಾನವನ್ನು ಆರಿಸಿ, ಅಂದರೆ, ರಿಇಂಬರ್ಸ್‌ಮೆಂಟ್ ಅಥವಾ ನಮ್ಮ ಗ್ಯಾರೇಜ್ ಗಳ ನೆಟ್‌ವರ್ಕ್ ಮೂಲಕ ಕ್ಯಾಶ್‌ಲೆಸ್ ರಿಪೇರಿ.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳ ಇತ್ಯರ್ಥ ಎಷ್ಟು ಬೇಗ ಆಗುತ್ತದೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವು ಅದನ್ನೇ ಮಾಡುತ್ತಿದ್ದೀರಿ! ಡಿಜಿಟ್‌ನ ಕ್ಲೈಮ್ ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ಡಿಜಿಟ್‌ನ ಹ್ಯುಂಡೈ ಸ್ಯಾಂಟ್ರೋ ಕಾರ್ ಇನ್ಶೂರೆನ್ಸ್ ಒಂದು ಕಾರ್ಯಸಾಧ್ಯ ಆಯ್ಕೆ ಏಕೆ ಆಗಿದೆ?

ಹ್ಯುಂಡೈ ಸ್ಯಾಂಟ್ರೋಗೆ ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ನೀಡುವ ಹಲವಾರು ಇನ್ಶೂರೆನ್ಸ್ ಪೂರೈಕೆದಾರರು ಇದ್ದರೂ, ಡಿಜಿಟ್‌ನ ಪಾಲಿಸಿಗಳು ಹಲವಾರು ಆಕರ್ಷಕ ಪ್ರಯೋಜನಗಳನ್ನು ನೀಡುತ್ತವೆ ಹಾಗೂ ಇದು ಪಾಲಿಸಿಹೋಲ್ಡರ್ ಗಳಿಗೆ ಅವರ ಪ್ರಯೋಜನಗಳನ್ನು ಗರಿಷ್ಠಗೊಳಿಸಲು ಅನುವು ಮಾಡಿಕೊಡುತ್ತದೆ. ಅಂತಹ ಕೆಲವು ಪ್ರಯೋಜನಗಳು ಈ ಕೆಳಗಿನಂತಿವೆ:

  • ಸಂಪೂರ್ಣ ಡಿಜಿಟೈಸ್ಡ್ ಕ್ಲೈಮ್ ಸೆಟಲ್‌ಮೆಂಟ್ ಪ್ರಕ್ರಿಯೆ - ಡಿಜಿಟ್‌ನ ಸ್ಯಾಂಟ್ರೋ ಕಾರ್ ಇನ್ಶೂರೆನ್ಸ್ ಪಾಲಿಸಿಯ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಸಂಪೂರ್ಣ ಕ್ಲೈಮ್ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಕೈಗೊಳ್ಳಬಹುದು. ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರ ಕಛೇರಿಗೆ ಭೇಟಿ ನೀಡುವ ತೊಂದರೆಯನ್ನು ನೀವು ದೂರ ಮಾಡಬಹುದು ಮತ್ತು ನಿಮ್ಮ ಮನೆಯ ಸೌಕರ್ಯದಿಂದಲೇ ಕ್ಲೈಮ್ ಮಾಡಬಹುದು. ಇದಲ್ಲದೆ, ಡಿಜಿಟ್‌ನ ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸ್ವಪರಿಶೀಲನಾ ಪ್ರಕ್ರಿಯೆಯು ಮತ್ತೊಂದು ಗಮನಾರ್ಹ ಪ್ರಯೋಜನವಾಗಿದ್ದು, ಇದು ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯ ವಿರುದ್ಧ ಕ್ಲೈಮ್ ಮಾಡುವ ಸುದೀರ್ಘ ಟಾಸ್ಕ್ ಅನ್ನು ಸುಗಮಗೊಳಿಸುತ್ತದೆ.
  • ಹೆಚ್ಚಿನ ಕ್ಲೈಮ್ ಇತ್ಯರ್ಥ ರೇಶಿಯೋ - ಒಂದು ಅಪಘಾತವು ನಿಮ್ಮನ್ನು ಗೊಂದಲಕ್ಕೀಡುಮಾಡಬಹುದು, ವಿಶೇಷವಾಗಿ ನಿಮ್ಮ ಕಾರು ದೊಡ್ಡ ಹಾನಿಯನ್ನು ಅನುಭವಿಸಿದರೆ. ಇದಕ್ಕಾಗಿಯೇ ನಿಮ್ಮ ಕ್ಲೈಮ್‌ಗಳು ಶೀಘ್ರವಾಗಿ ಇತ್ಯರ್ಥವಾಗುವುದನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ಇಂತಹ ಪರಿಸ್ಥಿತಿಯ ಸಮಯದಲ್ಲಿ ನಿಮ್ಮ ತೊಂದರೆಗಳನ್ನು ನಿವಾರಿಸಲು ನಾವು ಪ್ರಯತ್ನಿಸುತ್ತೇವೆ. ನಾವು, ಡಿಜಿಟ್‌ನಲ್ಲಿ, ಹೆಚ್ಚಿನ ಕ್ಲೈಮ್ ಇತ್ಯರ್ಥ ರೇಶಿಯೋದ ಹೆಗ್ಗಳಿಕೆಯನ್ನು ಹೊಂದಿದ್ದೇವೆ, ಹಾಗೂ ಇದು ನಿಮ್ಮ ಕ್ಲೈಮ್‌ಗಳನ್ನು ಯಾವುದೇ ಆಧಾರರಹಿತ ಕಾರಣಕ್ಕಾಗಿ ನಿರಾಕರಿಸದೆಯೇ ಇತ್ಯರ್ಥಗೊಳಿಸಲಾಗಿದೆ ಎಂಬ ಭರವಸೆಯನ್ನು ನೀಡುತ್ತದೆ.
  • ಕಸ್ಟಮೈಸ್ ಮಾಡಬಹುದಾದ ಐಡಿವಿ - ಕಾಲ ಕಳೆದಂತೆ ಕಾರಿನ ಮೌಲ್ಯದಲ್ಲಿ ಡೆಪ್ರಿಸಿಯೇಷನ್ ಆದರೂ, ಅದರ ಕಳ್ಳತನ ಅಥವಾ ಸರಿಪಡಿಸಲಾಗದ ಹಾನಿಯು ನಿಮ್ಮ ಜೇಬಿನ ಮೇಲೆ ಗಣನೀಯ ಹೊರೆಯನ್ನು ಹಾಕುತ್ತದೆ. ಆದ್ದರಿಂದ ಅಂತಹ ಸಂದರ್ಭಗಳಲ್ಲಿ ಗರಿಷ್ಠ ಕಾಂಪನ್ಸೇಶನ್ ಪಡೆಯಲು, ಸ್ಯಾಂಟ್ರೋ ಇನ್ಶೂರೆನ್ಸ್ ಬೆಲೆಯನ್ನು ಅಲ್ಪ ಮೊತ್ತದೊಂದಿಗೆ ಸರಿಹೊಂದಿಸುವ ಮೂಲಕ ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ನಿಮ್ಮ ಐಡಿವಿ ಅನ್ನು ನೀವು ಕಸ್ಟಮೈಸ್ ಮಾಡಬಹುದು.
  • ಆಯ್ಕೆ ಮಾಡಲು ವಿವಿಧ ಆ್ಯಡ್-ಆನ್‌ಗಳು - ಕಾಂಪ್ರೆಹೆನ್ಸಿವ್ ಸ್ಯಾಂಟ್ರೋ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಆ್ಯಡ್-ಆನ್‌ಗಳು ಪರಿಪೂರ್ಣವಾದ ಕವರೇಜ್ ಅನ್ನು ನೀಡುತ್ತವೆ, ಇದು ನಿಮ್ಮ ಕಾರನ್ನು ಹಲವಾರು ವಿಧದ ಹಾನಿಗಳ ವಿರುದ್ಧ ಸುರಕ್ಷಿತವಾಗಿರಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಉದಾಹರಣೆಗೆ, ಟೈರ್ ಪ್ರೊಟೆಕ್ಟ್ ಆ್ಯಡ್-ಆನ್‌ನೊಂದಿಗೆ, ಅಪಘಾತಗಳನ್ನು ಹೊರತುಪಡಿಸಿ ಇತರ ಸಂದರ್ಭಗಳಲ್ಲಿ ನಿಮ್ಮ ಸ್ಯಾಂಟ್ರೋ ಟೈರ್ ಪಂಕ್ಚರ್‌ಗಳು, ಕಡಿತಗಳು ಅಥವಾ ಉಬ್ಬುಗಳನ್ನು ಎದುರಿಸಿದರೂ ಸಹ ನೀವು ಕವರೇಜ್ ಅನ್ನು ಪಡೆಯಬಹುದು. ಇದರ ಹೊರತಾಗಿ, ಡಿಜಿಟ್ ಝೀರೋ ಡೆಪ್ರಿಸಿಯೇಷನ್ ಕವರ್, ರಿಟರ್ನ್ ಟು ಇನ್‌ವಾಯ್ಸ್ ಕವರ್, ಬ್ರೇಕ್ ಡೌನ್ ಅಸಿಸ್ಟಂಸ್, ಕನ್ಸ್ಯೂಮೆಬಲ್ ಕವರ್ ಇತ್ಯಾದಿಗಳನ್ನು ಒಳಗೊಂಡಂತೆ 6 ಇತರ ಆ್ಯಡ್-ಆನ್‌ಗಳನ್ನು ಸಹ ನೀಡುತ್ತದೆ. ಇವುಗಳನ್ನು ನಿಮ್ಮ ಹ್ಯುಂಡೈ ಸ್ಯಾಂಟ್ರೋ ಇನ್ಶೂರೆನ್ಸ್ ಬೆಲೆಯಲ್ಲಿಯ ಸ್ವಲ್ಪ ಹೆಚ್ಚಳದೊಂದಿಗೆ ನೀವು ಪಡೆಯಬಹುದು.
  • ಭಾರತದಾದ್ಯಂತ 1400+ ನೆಟ್‌ವರ್ಕ್ ಗ್ಯಾರೇಜ್‌ಗಳು - ಯಾವುದೇ ಸಮಯದಲ್ಲಿ ಅಪಘಾತಗಳು ಸಂಭವಿಸಬಹುದು ಮತ್ತು ನಿಮ್ಮ ಕಾರಿನ ರಿಪೇರಿಯನ್ನು ಪ್ರಾರಂಭಿಸಲು ಸುಲಭವಾಗಿ ಕ್ಯಾಶ್ ಲಭ್ಯವಿಲ್ಲದಿರುವುದು ಸಹಜವೇ. ಡಿಜಿಟ್‌ನ ಕಾರ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ನೀವು ದೇಶಾದ್ಯಂತ 1400 ಕ್ಕೂ ಹೆಚ್ಚು ನೆಟ್‌ವರ್ಕ್ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ರಿಪೇರಿಗಳನ್ನು ಆನಂದಿಸಬಹುದು, ಈ ಸಮಯದಲ್ಲಿ ನಿಮ್ಮ ಬಳಿ ಸಾಕಷ್ಟು ಕ್ಯಾಶ್ ಇಲ್ಲದಿದ್ದರೂ ಸಹ ನಿಮ್ಮ ಸ್ಯಾಂಟ್ರೋಗಾಗಿ ರಿಪೇರಿಯನ್ನು ನೀವು ಪಡೆದುಕೊಳ್ಳಬಹುದು ಎಂದು ಖಚಿತಪಡಿಸಿಕೊಳ್ಳಬಹುದು.
  • ಡೋರ್‌ ಸ್ಟೆಪ್ ಪಿಕ್ ಅಪ್ ಮತ್ತು ಡ್ರಾಪ್ ಸೌಲಭ್ಯಗಳು - ಕೆಲವೊಮ್ಮೆ, ರಿಪೇರಿ ಸೇವೆಗಳನ್ನು ಪಡೆಯಲು ನಿಮ್ಮ ಹಾನಿಗೊಳಗಾದ ಕಾರನ್ನು ಹತ್ತಿರದ ಗ್ಯಾರೇಜ್‌ಗೆ ಡ್ರೈವ್ ಮಾಡುವುದು ನಿಮಗೆ ಗಣನೀಯ ವೆಚ್ಚವನ್ನು ಉಂಟುಮಾಡಬಹುದು. ಡಿಜಿಟ್‌ನ ಸ್ಯಾಂಟ್ರೋ ಇನ್ಶೂರೆನ್ಸ್ ನೊಂದಿಗೆ ನೀವು ಇದರ ಯಾವುದೇ ನೆಟ್‌ವರ್ಕ್ ಗ್ಯಾರೇಜ್‌ಗಳಿಂದ ರಿಪೇರಿ ಸೇವೆಗಳನ್ನು ಪಡೆದರೆ ಈ ಶುಲ್ಕಗಳನ್ನು ತಪ್ಪಿಸಬಹುದು. ಏಕೆಂದರೆ ಅಪಘಾತದ ಸಂದರ್ಭದಲ್ಲಿ 6 ತಿಂಗಳ ರಿಪೇರಿ ವಾರಂಟಿ ಜೊತೆಗೆ ನಿಮ್ಮ ಕಾರಿಗಾಗಿ ಡಿಜಿಟ್ ಮನೆ ಬಾಗಿಲಿಗೆ ಪಿಕ್ ಅಪ್ ಮತ್ತು ಡ್ರಾಪ್ ಸೌಲಭ್ಯಗಳನ್ನು ನೀಡುತ್ತದೆ.
  • 24x7 ಕಸ್ಟಮರ್ ಸರ್ವೀಸ್ - ನಮ್ಮ ಸೇವೆಗಳನ್ನು ನೀವು ಸುಲಭವಾಗಿ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ನಮ್ಮ ಗ್ರಾಹಕ ಬೆಂಬಲ ತಂಡವು ಭಾನುವಾರ ಮತ್ತು ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ 24x7 ಲಭ್ಯವಿದೆ. ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ಕುರಿತು ನೀವು ಯಾವುದೇ ಪ್ರಶ್ನೆಯನ್ನು ಹೊಂದಿದ್ದರೆ, ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಸಹಾಯವನ್ನು ಪಡೆಯಲು ನಿಮ್ಮ ಫೋನ್ ಅನ್ನು ತೆಗೆದುಕೊಂಡು ನಮ್ಮ ನಂಬರ್ ಡಯಲ್ ಮಾಡಿ.

ಇವುಗಳು ನಿಮ್ಮ ಹಣಕಾಸಿನ ಹಿತಾಸಕ್ತಿಗಳನ್ನು ಪರಿಣಾಮಕಾರಿಯಾಗಿ ರಕ್ಷಿಸಲು ನಿಮಗೆ ಅನುಮತಿಸುವ ಡಿಜಿಟ್‌ನ ಸ್ಯಾಂಟ್ರೋ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ನೀಡಲಾಗುವ ಕೆಲವು ಪ್ರಯೋಜನಗಳಾಗಿವೆ.

ಅದೇನೇ ಇದ್ದರೂ, ಪಾಲಿಸಿಯನ್ನು ಖರೀದಿಸುವ ಅಥವಾ ರಿನ್ಯೂ ಮಾಡುವ ಮೊದಲು, ಅತ್ಯುತ್ತಮ ಪ್ರಯೋಜನಗಳನ್ನು ಆನಂದಿಸಲು ಅದರ ಸಂಪೂರ್ಣ ಕವರೇಜ್ ನ ಬಗ್ಗೆ ನಿಮಗೆ ತಿಳಿದಿರುವುದನ್ನು ಖಚಿತಪಡಿಸಿಕೊಳ್ಳಿ!

ಸುರಕ್ಷಿತವಾಗಿ ಡ್ರೈವ್ ಮಾಡಿ!

ಹ್ಯುಂಡೈ ಸ್ಯಾಂಟ್ರೋ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯ?

ಕಾಂಪ್ಯಾಕ್ಟ್ ಆಗಿದ್ದರೂ, ಹ್ಯುಂಡೈ ಸ್ಯಾಂಟ್ರೋ ನಿಮ್ಮ ದೈನಂದಿನ ಸಿಟಿ ರೈಡ್ ಗಳಲ್ಲಿ ನಿಮಗೆ ಸಹಾಯ ಮಾಡುವ ಒಂದು ಸಣ್ಣ ಫ್ಯಾಮಿಲಿ ಕಾರ್ ಆಗಿದೆ. ಆದರೆ ನೀವು ರಸ್ತೆಗೆ ಬರುವ ಮೊದಲು, ವಾಹನದ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಮುಖ್ಯವಾಗುತ್ತದೆ. ಇನ್ಶೂರೆನ್ಸ್ ಅನ್ನು ಹೊಂದುವುದು ಏಕೆ ಅತ್ಯಗತ್ಯ ಎಂಬುದನ್ನು ನಾವು ವಿವರವಾಗಿ ಅರ್ಥಮಾಡಿಕೊಳ್ಳೋಣ:

ಹಣಕಾಸಿನ ಭದ್ರತೆಗಾಗಿ: ಅಪಘಾತ ಅಥವಾ ಕಳ್ಳತನದಿಂದಾಗಿ ನಿಮ್ಮ ಕಾರಿನಲ್ಲಿ ನೀವು ನಷ್ಟ ಅಥವಾ ಹಾನಿಯನ್ನು ಅನುಭವಿಸಬಹುದು. ಅಪಘಾತದ ಸಂದರ್ಭದಲ್ಲಿ, ರಿಪೇರಿ ವೆಚ್ಚವು ಎಷ್ಟು ದೊಡ್ಡದಾಗಿರಬಹುದೆಂದರೆ ಅದು ನಿಮ್ಮ ಕೈಗೆಟಕುವ ಸಾಮರ್ಥ್ಯವನ್ನು ಮೀರಬಹುದು.

ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರುವುದರಿಂದ ನಿಮ್ಮ ಹಾನಿಯನ್ನು ಪಾವತಿಸಲು ಅಥವಾ ರಿಇಂಬರ್ಸ್‌ಮೆಂಟ್ ಪಡೆಯಲು ಇನ್ಶೂರರ್ ಅನ್ನು ನೀವು ವಿನಂತಿಸಬಹುದು. ಮತ್ತು ಕಳ್ಳತನದ ನಂತರ ನಿಮ್ಮ ವಾಹನವನ್ನು ನೀವು ಕಳೆದುಕೊಂಡರೆ, ನೀವು ಕಾರಿನ ಒಟ್ಟು ಮೌಲ್ಯದ ನಷ್ಟವನ್ನು ಅನುಭವಿಸುತ್ತೀರಿ. ಇನ್ಶೂರೆನ್ಸ್ ಕಂಪನಿಯು, ಈ ಸಂದರ್ಭದಲ್ಲಿ, ನಿಮಗೆ ಇನ್‌ವಾಯ್ಸ್ ಮೌಲ್ಯವನ್ನು ರಿಇಂಬರ್ಸ್‌ ಮಾಡಬಹುದು.

ಓನ್ ಡ್ಯಾಮೇಜ್ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ.

ಥರ್ಡ್-ಪಾರ್ಟಿ ಲಯಬಿಲಿಟಿಗಾಗಿ: ಭಾರತದಲ್ಲಿ, ಥರ್ಡ್-ಪಾರ್ಟಿ ಲಯಬಿಲಿಟಿ ಪಾಲಿಸಿಯನ್ನು ಖರೀದಿಸುವುದು ಕಡ್ಡಾಯವಾಗಿದೆ. ನೀವು ಸ್ಟ್ಯಾಂಡ್ಅಲೋನ್ ಥರ್ಡ್-ಪಾರ್ಟಿ ಕವರ್ ಅಥವಾ ಕಾಂಪ್ರೆಹೆನ್ಸಿವ್ ಪ್ಯಾಕೇಜ್ ಪಾಲಿಸಿಯನ್ನು ಖರೀದಿಸಬಹುದು. ಎರಡೂ ಸಂದರ್ಭಗಳಲ್ಲಿ, ದೈಹಿಕ ಗಾಯ ಅಥವಾ ಆಸ್ತಿ ಹಾನಿಗಾಗಿ ಥರ್ಡ್-ಪಾರ್ಟಿಗೆ ನಿಮ್ಮಿಂದ ಉಂಟಾದ ಯಾವುದೇ ನಷ್ಟವನ್ನು ಇನ್ಶೂರರ್ ಪಾವತಿಸುತ್ತಾರೆ. ಈ ಲಯಬಿಲಿಟಿಗಳು, ವಿಶೇಷವಾಗಿ ಸಾವಿನ ಪ್ರಕರಣಗಳಲ್ಲಿ, ಕೆಲವೊಮ್ಮೆ ಎಲ್ಲರಿಂದಲೂ ಭರಿಸಲಾಗದ ಒಂದು ದೊಡ್ಡ ಮೊತ್ತವಾಗಿರಬಹುದು. ಆದ್ದರಿಂದ, ಕಾರ್ ಪಾಲಿಸಿಯು ಅತ್ಯಂತ ಸಹಾಯಕರವಾಗುತ್ತದೆ.

ಭಾರತೀಯ ರಸ್ತೆಗಳಲ್ಲಿ ಕಾನೂನುಬದ್ಧವಾಗಿ ಡ್ರೈವ್ ಮಾಡಲು: ಇನ್ಶೂರೆನ್ಸ್ ಕಾಯಿದೆಯ ಪ್ರಕಾರ, ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಅತ್ಯಗತ್ಯ ಏಕೆಂದರೆ ಅದು ನಿಮಗೆ ರಸ್ತೆಯಲ್ಲಿ ಡ್ರೈವ್ ಮಾಡಲು ಕಾನೂನು ಪರ್ಮಿಟ್ ಅನ್ನು ನೀಡುತ್ತದೆ. ನೀವು ಇದನ್ನು ಹೊಂದಿಲ್ಲದಿದ್ದರೆ, ನಿಮ್ಮ ಕಾನೂನು ಲೈಸೆನ್ಸ್ ಅನ್ನು ರದ್ದುಗೊಳಿಸಲಾಗಬಹುದು ಮತ್ತು ಇದು ಭಾರೀ ದಂಡವನ್ನು ಆಕರ್ಷಿಸಬಹುದು.

ಆ್ಯಡ್-ಆನ್‌ಗಳೊಂದಿಗೆ ಕವರೇಜ್ ಅನ್ನು ವಿಸ್ತರಿಸಿ: ನೀವು ಕಾಂಪ್ರೆಹೆನ್ಸಿವ್ ಪ್ಯಾಕೇಜ್ ಪಾಲಿಸಿಯನ್ನು ಹೊಂದಿದ್ದರೆ ಆ್ಯಡ್-ಆನ್ ಕವರ್‌ಗಳೊಂದಿಗೆ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ವಿಸ್ತರಿಸಬಹುದು. ಕಾರ್ ಇನ್ಶೂರೆನ್ಸ್ ಆ್ಯಡ್-ಆನ್‌ಗಳನ್ನು ಖರೀದಿಸುವ ಮೂಲಕ ನೀವು ಕವರ್ ಅನ್ನು ಮತ್ತಷ್ಟು ಉತ್ತಮಗೊಳಿಸಬಹುದು.

ಇವುಗಳಲ್ಲಿ ಕೆಲವು ಈ ರೀತಿ ಇವೆ:

ಹ್ಯುಂಡೈ ಸ್ಯಾಂಟ್ರೋ ಬಗ್ಗೆ ಇನ್ನಷ್ಟು ತಿಳಿಯಿರಿ

ಹ್ಯುಂಡೈ ಸ್ಯಾಂಟ್ರೋದ ಹೊಚ್ಚ- ಹೊಸ ಅವತಾರವು ಜನರ ಮನಸ್ಸಿನಲ್ಲಿ ಬಲವಾದ ಆಕರ್ಷಣೆಯನ್ನು ಮೂಡಿಸಿದೆ. ಸ್ಯಾಂಟ್ರೋ ತಯಾರಕರು ಬಿಡಿಭಾಗಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ.

ಅದರ ಮೂಲ ಪ್ರವೃತ್ತಿಯನ್ನು ಬದಲಾಯಿಸದೆ, ಹ್ಯುಂಡೈ ನಮಗಾಗಿ ಸ್ಯಾಂಟ್ರೋವನ್ನು ಮರುಶೋಧಿಸಿದರು ಮತ್ತು ನೀಡಿದರು. ಕಾರಿನ ಒಟ್ಟಾರೆ ಫೀಲ್ ಚೆನ್ನಾಗಿದೆ. ಇದು ಪೆಟ್ರೋಲ್ ಮತ್ತು ಸಿಎನ್‌ಜಿ ಫ್ಯೂಯೆಲ್ ಎರಡಕ್ಕೂ ಲಭ್ಯವಿದೆ.

ಹಿಂದಿನಂತೆ ಗ್ರಾಹಕರನ್ನು ಮೆಚ್ಚಿಸಲು, ಹ್ಯುಂಡೈ ಸ್ಯಾಂಟ್ರೋವನ್ನು ಎರಾ, ಮ್ಯಾಗ್ನಾ, ಆಸ್ಟಾ ಮತ್ತು ಸ್ಪೋರ್ಟ್ಸ್ ಎಂಬ ಮೂರು ವೇರಿಯಂಟ್ ಗಳಲ್ಲಿ ಪರಿಚಯಿಸಲಾಗಿದೆ. ಪ್ರತಿಯೊಂದೂ ಅದರ ಫ್ಯೂಯೆಲ್ ಪ್ರಕಾರವನ್ನು ಆಧರಿಸಿ ಮತ್ತಷ್ಟು ಭಿನ್ನವಾಗಿದೆ.

ಈ ಎಲ್ಲಾ ವೇರಿಯಂಟ್ ಗಳಲ್ಲಿ ನೀವು ಆಟೋಮ್ಯಾಟಿಕ್ ಅಥವಾ ಮ್ಯಾನುವಲ್ ಟ್ರಾನ್ಸ್ಮಿಷನ್ ಅನ್ನು ಪಡೆಯಬಹುದು. ಕಾರಿನ ಬೆಲೆಯು ರೂ.4.15 ಲಕ್ಷದಿಂದ ರೂ.5.73 ಲಕ್ಷದವರೆಗೆ ಇರುತ್ತದೆ. ಹ್ಯುಂಡೈ ಸ್ಯಾಂಟ್ರೋದ ಮೈಲೇಜ್ ಪ್ರತಿ ಲೀಟರ್‌ಗೆ 20.3 ಕಿಮೀ ನಿಂದ 30.48 ಕಿಮೀ ವರೆಗೆ ಬದಲಾಗುತ್ತದೆ.

ನೀವು ಹ್ಯುಂಡೈ ಸ್ಯಾಂಟ್ರೋವನ್ನು ಏಕೆ ಖರೀದಿಸಬೇಕು?

ಹಿಂದಿನ ಸಮಯದಂತೆಯೇ, ಹ್ಯುಂಡೈ ಸ್ಯಾಂಟ್ರೋ ತನ್ನ ಹೊಸ ಆವೃತ್ತಿಯೊಂದಿಗೆ ನಿಮ್ಮನ್ನು ಅಚ್ಚರಿಗೊಳಿಸಲು ಸಿದ್ಧವಾಗಿದೆ.

ಹೊರಭಾಗದಲ್ಲಿ, ನಿಮಗಾಗಿ ಒಂದು ಸ್ಟೇಟ್ಮೆಂಟ್ ಅನ್ನು ಸೆಟ್ ಮಾಡುವ ಕಾರಿನ ಹೊಸ ಆಕರ್ಷಕ ನೇಮ್ ಬ್ಯಾಡ್ಜ್ ಅನ್ನು ನೀವು ಪಡೆಯುತ್ತೀರಿ. ಹಿಂದಿನದಕ್ಕೆ ಹೋಲಿಸಿದರೆ ಹೊಸ ಸ್ಯಾಂಟ್ರೋ ಇನ್ನಷ್ಟು ಉದ್ದ ಮತ್ತು ಅಗಲವಾಗಿದೆ.

ಇದು ಸ್ವೆಪ್ಟ್-ಬ್ಯಾಕ್ ಹೆಡ್‌ಲ್ಯಾಂಪ್‌ಗಳು ಮತ್ತು ಸ್ಮಾಲ್ ಹ್ಯಾಚ್‌ಬ್ಯಾಕ್ ಸೆಗ್ಮೆಂಟ್ ನಲ್ಲಿ ಎದ್ದು ಕಾಣುವ ಕ್ಯಾಸ್ಕೇಡ್ ಗ್ರಿಲ್‌ನೊಂದಿಗೆ ಬರುತ್ತದೆ. ಸೂಕ್ಷ್ಮ ವಿನ್ಯಾಸದ ಕ್ರೀಸ್‌ಗಳು ಮತ್ತು ನೆರಳು ರೇಖೆಗಳು ಆಕರ್ಷಕ ಸೈಡ್ ಪ್ರೊಫೈಲ್ ಅನ್ನು ನೀಡುತ್ತವೆ.

ನೀವು ಒಳಗೆ ನೋಡಿದಾಗ, ಸ್ಮೂತ್ ಪ್ಲಾಸ್ಟಿಕ್ ಮತ್ತು ರಬ್ಬರ್ ಗುಂಡಿಗಳು ಅಥವಾ ಗುಬ್ಬಿಗಳನ್ನು ಪಡೆಯುತ್ತೀರಿ. ಇವೆಲ್ಲವೂ ಸ್ಪರ್ಶಕ್ಕೆ ಮೃದುವಾಗಿದ್ದು ಒಳಾಂಗಣಕ್ಕೆ ಗರಿಗರಿಯಾದ ನೋಟವನ್ನು ನೀಡುತ್ತದೆ. ಇತರ ಮಾಡೆಲ್ ಗಳಂತೆ, ಹ್ಯುಂಡೈ ಸ್ಯಾಂಟ್ರೋ ಕೂಡ 7-ಇಂಚಿನ ಇನ್ಫೋಟೈನ್‌ಮೆಂಟ್ ಪರದೆಯನ್ನು ಹೊಂದಿದೆ, ಇದು ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಮಿರರ್-ಲಿಂಕ್ ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ ಬರುತ್ತದೆ. ಡಿಸ್‌ಪ್ಲೇಯಲ್ಲಿರುವ ಐಟಂಗಳು ದೊಡ್ಡದಾಗಿರುವುದರಿಂದ ನ್ಯಾವಿಗೇಶನ್ ಅನ್ನು ಸುಲಭಗೊಳಿಸುತ್ತದೆ.

ಇದು ಸಾಕಷ್ಟು ವಿಶಾಲವಾದ ಕಾರು ಆಗಿದ್ದು, ಐದು ಜನರಿಗೆ ಆರಾಮವಾಗಿ ಕುಳಿತುಕೊಳ್ಳಲು ಅವಕಾಶ ನೀಡುತ್ತದೆ. ಹ್ಯುಂಡೈ ಸ್ಯಾಂಟ್ರೋ ಅಚ್ಚುಕಟ್ಟಾದ ಹಿಂಬದಿಯ ಏರ್ ಕಂಡೀಶನಿಂಗ್ ದ್ವಾರಗಳು, ಸುಗಮ ಸ್ಟೀರಿಂಗ್, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಅಡ್ಜಸ್ಟ್ ಮಾಡಬಹುದಾದ ಒ ಆರ್ ವಿ ಎಂ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಅನ್ನು ಹೊಂದಿದೆ. ಒಟ್ಟಾರೆಯಾಗಿ ಈ ಕಾರು ನಿಮಗೆ ಸ್ಮೂತ್ ಮತ್ತು ಸಲೀಸಾದ ಡ್ರೈವ್ ಅನ್ನು ನೀಡುತ್ತದೆ.

ಈ ಸ್ಮಾರ್ಟ್ ಲಿಟಲ್ ಹ್ಯಾಚ್ ಮಿಡಲ್-ಕ್ಲಾಸ್ ಕುಟುಂಬಗಳು ಮತ್ತು ಯುವಕರಿಗೆ ಅತ್ಯಂತ ಸೂಕ್ತವಾದ ಆಯ್ಕೆಯಾಗಿದೆ.

 

ಪರಿಶೀಲಿಸಿ: ಹ್ಯುಂಡೈ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ

ಹ್ಯುಂಡೈ ಸ್ಯಾಂಟ್ರೋ - ವೇರಿಯಂಟ್ ಗಳು ಮತ್ತು ಎಕ್ಸ್ ಶೋರೂಂ ಬೆಲೆ

ವೇರಿಯಂಟ್ ಗಳು ಎಕ್ಸ್ ಶೋರೂಂ ಬೆಲೆ (ನಗರಕ್ಕೆ ಅನುಗುಣವಾಗಿ ಬದಲಾಗಬಹುದು)
ಎರಾ ಎಕ್ಸಿಕ್ಯೂಟಿವ್ 1086 ಸಿಸಿ, ಮ್ಯಾನುಯಲ್, ಪೆಟ್ರೋಲ್ ₹ 4.14 ಲಕ್ಷಗಳು
ಮ್ಯಾಗ್ನಾ 1086 ಸಿಸಿ, ಮ್ಯಾನುಯಲ್, ಪೆಟ್ರೋಲ್ ₹ 4.71 ಲಕ್ಷಗಳು
ಸ್ಪೋರ್ಟ್ಸ್ 1086 ಸಿಸಿ, ಮ್ಯಾನುಯಲ್, ಪೆಟ್ರೋಲ್ ₹ 5.01 ಲಕ್ಷಗಳು
ಮ್ಯಾಗ್ನಾ AMT 1086 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್ ₹ 5.2 ಲಕ್ಷಗಳು
ಮ್ಯಾಗ್ನಾ ಸಿಎನ್‌ಜಿ 1086 ಸಿಸಿ, ಮ್ಯಾನುಯಲ್, ಸಿಎನ್‌ಜಿ ₹ 5.37 ಲಕ್ಷಗಳು
ಆಸ್ಟಾ 1086 ಸಿಸಿ, ಮ್ಯಾನುಯಲ್, ಪೆಟ್ರೋಲ್ ₹ 5.49 ಲಕ್ಷಗಳು
ಸ್ಪೋರ್ಟ್ಸ್ AMT 1086 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್ ₹ 5.59 ಲಕ್ಷಗಳು
ಸ್ಪೋರ್ಟ್ಸ್ ಸಿಎನ್‌ಜಿ 1086 ಸಿಸಿ, ಮ್ಯಾನುಯಲ್, ಸಿಎನ್‌ಜಿ ₹ 5.67 ಲಕ್ಷಗಳು

ಭಾರತದಲ್ಲಿ ಹ್ಯುಂಡೈ ಸ್ಯಾಂಟ್ರೋ ಕಾರ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ನೆಟ್‌ವರ್ಕ್ ಗ್ಯಾರೇಜ್‌ನಿಂದ ನನ್ನ ಸ್ಯಾಂಟ್ರೋಗೆ ಅಪಘಾತದ ಹಾನಿಯ ರಿಪೇರಿಯನ್ನು ಮಾಡಿಸಿದರೆ ನಾನು ಯಾವ ಪ್ರಯೋಜನಗಳನ್ನು ಪಡೆಯಬಹುದು?

ಡಿಜಿಟ್‌ನ ನೆಟ್‌ವರ್ಕ್ ಗ್ಯಾರೇಜ್‌ಗಳಿಂದ ಲಭ್ಯವಿರುವ ರಿಪೇರಿಗಳೊಂದಿಗೆ ನೀವು ಕ್ಯಾಶ್‌ಲೆಸ್ ರಿಪೇರಿಗ ಸೌಲಭ್ಯಗಳನ್ನು ಮಾತ್ರವಲ್ಲದೆ ನಿಮ್ಮ ಕಾರಿಗೆ ಡೋರ್‌ ಸ್ಟೆಪ್ ಪಿಕ್ ಅಪ್ ಮತ್ತು ಡ್ರಾಪ್ ಮತ್ತು 6-ತಿಂಗಳ ರಿಪೇರಿ ವಾರಂಟಿಯನ್ನು ಸಹ ಆನಂದಿಸಬಹುದು.

ಝೀರೋ-ಡೆಪ್ರಿಸಿಯೇಶನ್ ಆ್ಯಡ್-ಆನ್ ಕವರ್ ನಿಮ್ಮ ಸ್ಯಾಂಟ್ರೋ ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನನ್ನು ಒಳಗೊಂಡಿದೆ?

ನಿಮ್ಮ ಕಾರು 5 ವರ್ಷಕ್ಕಿಂತ ಕಡಿಮೆಯಿದ್ದರೆ ಝೀರೋ-ಡೆಪ್ರಿಸಿಯೇಶನ್ ಕವರ್ ಅನ್ನು ಹೊಂದಿರಲೇಬೇಕು. ಈ ಕವರ್‌ನೊಂದಿಗೆ, ಡೆಪ್ರಿಸಿಯೇಶನ್ ಅನ್ನು ಲೆಕ್ಕಿಸದೆಯೇ, ನಿಮ್ಮ ಸ್ಯಾಂಟ್ರೋಗಾದ ಅಪಘಾತದ ಹಾನಿಗಳಿಗೆ ನೀವು ಸಂಪೂರ್ಣ ರಿಪ್ಲೇಸ್‌ಮೆಂಟ್ ವೆಚ್ಚವನ್ನು ಪಡೆಯಬಹುದು.

ಬೆಂಕಿಯಿಂದ ಉಂಟಾದ ಹಾನಿಗಳ ವಿರುದ್ಧ ಕವರೇಜ್ ಪಡೆಯಲು ನಾನು ಆ್ಯಡ್-ಆನ್ ಕವರ್ ಅನ್ನು ಖರೀದಿಸಬೇಕೇ?

ಇಲ್ಲ, ನೀವು ಡಿಜಿಟ್‌ನ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆದರೆ, ಬೆಂಕಿಯಿಂದ ಉಂಟಾಗುವ ಹಾನಿಗಳ ವಿರುದ್ಧ ನೀವು ಸ್ವಯಂಚಾಲಿತವಾಗಿ ಕವರೇಜ್ ಪಡೆಯಲು ಸಾಧ್ಯವಾಗುತ್ತದೆ.

ನನ್ನ ಸ್ಯಾಂಟ್ರೋ ಇನ್ಶೂರೆನ್ಸ್ ಪಾಲಿಸಿಯ ವಿರುದ್ಧ ಕಡಿಮೆ ಐಡಿವಿ(IDV ) ಯನ್ನು ನಾನು ಆರಿಸಿಕೊಳ್ಳಬಹುದೇ?

ಹೌದು, ನಿಮ್ಮ ಸ್ಯಾಂಟ್ರೋ ಇನ್ಶೂರೆನ್ಸ್ ಪಾಲಿಸಿಯ ವಿರುದ್ಧ ನೀವು ಪ್ರೀಮಿಯಂ ಅನ್ನು ಕಡಿಮೆ ಮಾಡಲು ಬಯಸಿದರೆ, ನೀವು ಕಡಿಮೆ ಐಡಿವಿ ಯನ್ನು ಆರಿಸಿಕೊಳ್ಳಬಹುದು. ಆದಾಗ್ಯೂ, ಈ ಸಂದರ್ಭದಲ್ಲಿ, ನಿಮ್ಮ ಕಾರನ್ನು ಕಳ್ಳತನವಾಗಿದ್ದರೆ ಅಥವಾ ಒಟ್ಟು ಹಾನಿಯಾಗಿದ್ದರೆ ನೀವು ಕಡಿಮೆ ಕಾಂಪನ್ಸೇಶನ್ ಅನ್ನು ಪಡೆಯಲು ಸಾಧ್ಯವಾಗುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ.

ಡಿಜಿಟ್‌ನ ಕಾರ್ ಇನ್ಶೂರೆನ್ಸ್ ಪಾಲಿಸಿಗಳ ಆರಂಭಿಕ ಬೆಲೆ ಎಷ್ಟು?

ಡಿಜಿಟ್‌ನ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಗಳು ಜಿಎಸ್‌ಟಿ ಇಲ್ಲದೆ ರೂ.2072 ಪ್ರೀಮಿಯಂನಿಂದ ಪ್ರಾರಂಭವಾಗುತ್ತವೆ.