ಹ್ಯುಂಡೈ ಸ್ಯಾಂಟ್ರೋ ಕಾರ್ ಇನ್ಶೂರೆನ್ಸ್
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಭಾರತೀಯ ಆಟೋಮೊಬೈಲ್ ಉದ್ಯಮದಲ್ಲಿ ಹ್ಯುಂಡೈನ ನಿರಂತರ ಯಶಸ್ಸಿಗೆ ಭಾರೀ ಕಾರಣ ಅದರ ಪ್ರೀಮಿಯರ್ ಹ್ಯಾಚ್ಬ್ಯಾಕ್ - ಸ್ಯಾಂಟ್ರೋದ ಜನಪ್ರಿಯತೆಯಾಗಿದೆ.
ಮೊದಲ ಸ್ಯಾಂಟ್ರೋ ಮಾಡೆಲ್ ಅನ್ನು 1998 ರಲ್ಲಿ ಹೊರತರಲಾಯಿತು ಮತ್ತು ಅಂದಿನಿಂದ ಭಾರತೀಯರಲ್ಲಿ, ವಿಶೇಷವಾಗಿ ಕಾಂಪ್ಯಾಕ್ಟ್ 5-ಸೀಟರ್ ಫ್ಯಾಮಿಲಿ ಕಾರು ವಿಭಾಗದಲ್ಲಿ, ಹೆಚ್ಚಿನ ಪ್ರಚಾರವನ್ನು ಗಳಿಸಿತು. ಈ ವಾಹನದ ಮೂರನೇ ಜನರೇಶನ್ ಅನ್ನು 2018 ರಲ್ಲಿ ಬಿಡುಗಡೆ ಮಾಡಲಾಯಿತು ಮತ್ತು 2019 ರಲ್ಲಿ ಟಾಪ್ 3 ಅರ್ಬನ್ ವರ್ಲ್ಡ್ ಕಾರ್ಗಳಲ್ಲಿ ಒಂದಾಗುವ ಪ್ರಶಂಸೆಯನ್ನು ಇದು ಗಳಿಸಿತು (1).
ಆದ್ದರಿಂದ, ದೈನಂದಿನ ಪ್ರಯಾಣಕ್ಕಾಗಿ ಹ್ಯಾಚ್ಬ್ಯಾಕ್ ಖರೀದಿಸಲು ಬಯಸುವ ಯಾರಿಗಾದರೂ, ಹ್ಯುಂಡೈ ಸ್ಯಾಂಟ್ರೋ ನಿಸ್ಸಂದೇಹವಾಗಿ ಪರಿಗಣಿಸಲು ಯೋಗ್ಯವಾದ ಆಯ್ಕೆಯಾಗಿದೆ.
ಈಗ ಸ್ಯಾಂಟ್ರೋವನ್ನು ಖರೀದಿಸುವುದು ಒಬ್ಬರ ಯೋಚನೆಯಾಗಿದ್ದರೆ, ರಸ್ತೆಯಲ್ಲಿ ಸಂಭವಿಸಬಹುದಾದ ಅನಿರೀಕ್ಷಿತ ಘಟನೆಗಳಿಂದ ಉಂಟಾಗುವ ಹಾನಿಗಳಿಂದ ವಾಹನವನ್ನು ಆರ್ಥಿಕವಾಗಿ ರಕ್ಷಿಸುವ ಕಾರ್ಯಸಾಧ್ಯವಾದ ಕಾರ್ ಇನ್ಶೂರೆನ್ಸ್ ಆಯ್ಕೆಗಳನ್ನು ಸಹ ಅವರು ಪರಿಗಣಿಸಬೇಕು.
ಈ ನಿಟ್ಟಿನಲ್ಲಿ, ಎರಡು ವಿಧದ ಸ್ಯಾಂಟ್ರೋ ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಆಯ್ಕೆ ಮಾಡಬಹುದು - ಥರ್ಡ್-ಪಾರ್ಟಿ ಲಯಬಿಲಿಟಿ ಮತ್ತು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿ.
ಅದರ ಹೆಸರೇ ಸೂಚಿಸುವಂತೆ, ಥರ್ಡ್-ಪಾರ್ಟಿ ಲಯಬಿಲಿಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಸ್ಯಾಂಟ್ರೋದಿಂದ ಥರ್ಡ್-ಪಾರ್ಟಿ ವಾಹನ, ವ್ಯಕ್ತಿ ಅಥವಾ ಆಸ್ತಿಗೆ ಉಂಟಾದ ಹಾನಿಯನ್ನು ಕವರ್ ಮಾಡುತ್ತದೆ. ಇದುಮೋಟಾರ್ ವೆಹಿಕಲ್ ಆಕ್ಟ್, 1988 ರ ಅಡಿಯಲ್ಲಿ ಕಡ್ಡಾಯಗೊಳಿಸಲಾದ ಪಾಲಿಸಿಯಾಗಿದೆ - ಇದು ಇಲ್ಲದೆ ಡ್ರೈವ್ ಮಾಡುವುದು ಮಾಡುವುದು ರೂ. 2000 (ಪುನರಾವರ್ತಿತ ಅಪರಾಧಕ್ಕಾಗಿ ರೂ. 4000) ಟ್ರಾಫಿಕ್ ಪೆನಲ್ಟಿಗಳನ್ನು ಆಕರ್ಷಿಸಬಹುದು. ಮತ್ತೊಂದೆಡೆ, ಅಪಘಾತದಲ್ಲಿ ನಿಮ್ಮ ಸ್ಯಾಂಟ್ರೋದಿಂದ ಉಂಟಾದ ಹಾನಿಗಳಿಗೆ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯು ಸಂಪೂರ್ಣ ಕವರೇಜ್ ನೀಡುತ್ತದೆ.
ಹೀಗಾಗಿ, ರಸ್ತೆಯಲ್ಲಿನ ಅಪಾಯಗಳಿಂದ ನಿಮ್ಮ ಕಾರನ್ನು ರಕ್ಷಿಸಲು ಕಾಂಪ್ರೆಹೆನ್ಸಿವ್ ಸ್ಯಾಂಟ್ರೋ ಇನ್ಶೂರೆನ್ಸ್ ಪಾಲಿಸಿಯು ಉತ್ತಮ ಆಯ್ಕೆಯಾಗಿದೆ.
ಈ ನಿಟ್ಟಿನಲ್ಲಿ, ಸ್ಯಾಂಟ್ರೋ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ನೀಡಲಾಗುವ ಪ್ರಯೋಜನಗಳು ಒಬ್ಬ ಇನ್ಶೂರೆನ್ಸ್ ಪೂರೈಕೆದಾರರಿಂದ ಇನ್ನೊಂದಕ್ಕೆ ಬದಲಾಗಬಹುದು ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಅದಕ್ಕಾಗಿಯೇ ನೀವು ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರನ್ನು ಜಾಣ್ಮೆಯಿಂದ ಆರಿಸಿಕೊಳ್ಳುವುದು ಅತಿಮುಖ್ಯವಾಗಿದೆ.
ರಿಜಿಸ್ಟ್ರೇಷನ್ ದಿನಾಂಕ |
ಪ್ರೀಮಿಯಂ (ಕಾಂಪ್ರೆಹೆನ್ಸಿವ್ ಪಾಲಿಸಿಗಾಗಿ) |
ಜುಲೈ-2018 |
4,456 |
ಜುಲೈ-2017 |
4,336 |
ಜುಲೈ-2016 |
4,175 |
** ಡಿಸ್ಕ್ಲೈಮರ್ - ಹ್ಯುಂಡೈ ಸ್ಯಾಂಟ್ರೋ ನ್ಯೂ 1.1 ಎರಾ ಎಕ್ಸಿಕ್ಯೂಟಿವ್ (ಎಂಟಿ) ಪೆಟ್ರೋಲ್ 1086 ಗಾಗಿ ಪ್ರೀಮಿಯಂ ಲೆಕ್ಕಾಚಾರವನ್ನು ಮಾಡಲಾಗಿದೆ. ಜಿಎಸ್ಟಿ ಹೊರತುಪಡಿಸಿ.
ನಗರ - ಬೆಂಗಳೂರು, ಪಾಲಿಸಿ ಮುಕ್ತಾಯ ದಿನಾಂಕ - ಆಗಸ್ಟ್-2020, ಎನ್ ಸಿ ಬಿ - 50%, ಯಾವುದೇ ಆ್ಯಡ್-ಆನ್ಗಳಿಲ್ಲ. ಪ್ರೀಮಿಯಂ ಲೆಕ್ಕಾಚಾರವನ್ನು ಜುಲೈ-2020 ರಲ್ಲಿ ಮಾಡಲಾಗುತ್ತದೆ. ದಯವಿಟ್ಟು ನಿಮ್ಮ ವಾಹನದ ವಿವರಗಳನ್ನು ಮೇಲೆ ನಮೂದಿಸುವ ಮೂಲಕ ಫೈನಲ್ ಪ್ರೀಮಿಯಂ ಅನ್ನು ಪರಿಶೀಲಿಸಿ.
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ನೋಡಿಕೊಳ್ಳುತ್ತೇವೆ, ಹೇಗೆ ಎಂದು ತಿಳಿಯಿರಿ...
ಅಪಘಾತದಿಂದಾಗಿ ಸ್ವಂತ ಕಾರಿಗೆ ಹಾನಿ/ನಷ್ಟ |
×
|
✔
|
ಬೆಂಕಿಯಿಂದಾಗಿ ಸ್ವಂತ ಕಾರಿಗೆ ಹಾನಿ/ನಷ್ಟ |
×
|
✔
|
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಹಾನಿ/ನಷ್ಟಗಳು |
×
|
✔
|
ಥರ್ಡ್-ಪಾರ್ಟಿ ವಾಹನಕ್ಕೆ ಹಾನಿ |
✔
|
✔
|
ಥರ್ಡ್-ಪಾರ್ಟಿ ಆಸ್ತಿಗೆ ಹಾನಿ |
✔
|
✔
|
ವೈಯಕ್ತಿಕ ಅಪಘಾತ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು |
✔
|
✔
|
ನಿಮ್ಮ ಕಾರಿನ ಕಳ್ಳತನ |
×
|
✔
|
ಡೋರ್ ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
×
|
✔
|
ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ ಮಾಡಲಾದ ಆ್ಯಡ್-ಆನ್ಗಳೊಂದಿಗೆ ಹೆಚ್ಚುವರಿ ರಕ್ಷಣೆ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್-ಪಾರ್ಟಿ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ
ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನ್ಯೂ ಮಾಡಿದ ನಂತರ, ನಾವು 3-ಹಂತದ, ಸಂಪೂರ್ಣ ಡಿಜಿಟಲ್ ಆದ ಕ್ಲೈಮ್ಗಳ ಪ್ರಕ್ರಿಯೆಯನ್ನು ಹೊಂದಿರುವುದರಿಂದ ನೀವು ಚಿಂತೆಯಿಲ್ಲದೆ ಹಾಯಾಗಿ ಬದುಕುತ್ತೀರಿ!
1800-258-5956 ಗೆ ಕರೆ ಮಾಡಿ. ಯಾವುದೇ ಫಾರ್ಮ್ಗಳನ್ನು ಭರ್ತಿ ಮಾಡಬೇಕಾಗಿಲ್ಲ
ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ನಲ್ಲಿ ಸ್ವ ತಪಾಸಣೆಗಾಗಿ ಲಿಂಕ್ ಅನ್ನು ಪಡೆಯಿರಿ. ಮಾರ್ಗದರ್ಶನವಿರುವ ಹಂತ ಹಂತವಾದ ಪ್ರಕ್ರಿಯೆಯಿಂದ ನಿಮ್ಮ ಸ್ಮಾರ್ಟ್ಫೋನ್ನಿಂದ ನಿಮ್ಮ ವಾಹನಕ್ಕಾದ ಡ್ಯಾಮೇಜ್ ಗಳನ್ನು ಶೂಟ್ ಮಾಡಿ.
ನೀವು ಆಯ್ಕೆ ಮಾಡಲು ಬಯಸುವ ರಿಪೇರಿ ವಿಧಾನವನ್ನು ಆರಿಸಿ, ಅಂದರೆ, ರಿಇಂಬರ್ಸ್ಮೆಂಟ್ ಅಥವಾ ನಮ್ಮ ಗ್ಯಾರೇಜ್ ಗಳ ನೆಟ್ವರ್ಕ್ ಮೂಲಕ ಕ್ಯಾಶ್ಲೆಸ್ ರಿಪೇರಿ.
ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವು ಅದನ್ನೇ ಮಾಡುತ್ತಿದ್ದೀರಿ!
ಡಿಜಿಟ್ನ ಕ್ಲೈಮ್ ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ
ಹ್ಯುಂಡೈ ಸ್ಯಾಂಟ್ರೋಗೆ ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ನೀಡುವ ಹಲವಾರು ಇನ್ಶೂರೆನ್ಸ್ ಪೂರೈಕೆದಾರರು ಇದ್ದರೂ, ಡಿಜಿಟ್ನ ಪಾಲಿಸಿಗಳು ಹಲವಾರು ಆಕರ್ಷಕ ಪ್ರಯೋಜನಗಳನ್ನು ನೀಡುತ್ತವೆ ಹಾಗೂ ಇದು ಪಾಲಿಸಿಹೋಲ್ಡರ್ ಗಳಿಗೆ ಅವರ ಪ್ರಯೋಜನಗಳನ್ನು ಗರಿಷ್ಠಗೊಳಿಸಲು ಅನುವು ಮಾಡಿಕೊಡುತ್ತದೆ. ಅಂತಹ ಕೆಲವು ಪ್ರಯೋಜನಗಳು ಈ ಕೆಳಗಿನಂತಿವೆ:
ಇವುಗಳು ನಿಮ್ಮ ಹಣಕಾಸಿನ ಹಿತಾಸಕ್ತಿಗಳನ್ನು ಪರಿಣಾಮಕಾರಿಯಾಗಿ ರಕ್ಷಿಸಲು ನಿಮಗೆ ಅನುಮತಿಸುವ ಡಿಜಿಟ್ನ ಸ್ಯಾಂಟ್ರೋ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ನೀಡಲಾಗುವ ಕೆಲವು ಪ್ರಯೋಜನಗಳಾಗಿವೆ.
ಅದೇನೇ ಇದ್ದರೂ, ಪಾಲಿಸಿಯನ್ನು ಖರೀದಿಸುವ ಅಥವಾ ರಿನ್ಯೂ ಮಾಡುವ ಮೊದಲು, ಅತ್ಯುತ್ತಮ ಪ್ರಯೋಜನಗಳನ್ನು ಆನಂದಿಸಲು ಅದರ ಸಂಪೂರ್ಣ ಕವರೇಜ್ ನ ಬಗ್ಗೆ ನಿಮಗೆ ತಿಳಿದಿರುವುದನ್ನು ಖಚಿತಪಡಿಸಿಕೊಳ್ಳಿ!
ಸುರಕ್ಷಿತವಾಗಿ ಡ್ರೈವ್ ಮಾಡಿ!
ಕಾಂಪ್ಯಾಕ್ಟ್ ಆಗಿದ್ದರೂ, ಹ್ಯುಂಡೈ ಸ್ಯಾಂಟ್ರೋ ನಿಮ್ಮ ದೈನಂದಿನ ಸಿಟಿ ರೈಡ್ ಗಳಲ್ಲಿ ನಿಮಗೆ ಸಹಾಯ ಮಾಡುವ ಒಂದು ಸಣ್ಣ ಫ್ಯಾಮಿಲಿ ಕಾರ್ ಆಗಿದೆ. ಆದರೆ ನೀವು ರಸ್ತೆಗೆ ಬರುವ ಮೊದಲು, ವಾಹನದ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಮುಖ್ಯವಾಗುತ್ತದೆ. ಇನ್ಶೂರೆನ್ಸ್ ಅನ್ನು ಹೊಂದುವುದು ಏಕೆ ಅತ್ಯಗತ್ಯ ಎಂಬುದನ್ನು ನಾವು ವಿವರವಾಗಿ ಅರ್ಥಮಾಡಿಕೊಳ್ಳೋಣ:
ಹಣಕಾಸಿನ ಭದ್ರತೆಗಾಗಿ: ಅಪಘಾತ ಅಥವಾ ಕಳ್ಳತನದಿಂದಾಗಿ ನಿಮ್ಮ ಕಾರಿನಲ್ಲಿ ನೀವು ನಷ್ಟ ಅಥವಾ ಹಾನಿಯನ್ನು ಅನುಭವಿಸಬಹುದು. ಅಪಘಾತದ ಸಂದರ್ಭದಲ್ಲಿ, ರಿಪೇರಿ ವೆಚ್ಚವು ಎಷ್ಟು ದೊಡ್ಡದಾಗಿರಬಹುದೆಂದರೆ ಅದು ನಿಮ್ಮ ಕೈಗೆಟಕುವ ಸಾಮರ್ಥ್ಯವನ್ನು ಮೀರಬಹುದು.
ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರುವುದರಿಂದ ನಿಮ್ಮ ಹಾನಿಯನ್ನು ಪಾವತಿಸಲು ಅಥವಾ ರಿಇಂಬರ್ಸ್ಮೆಂಟ್ ಪಡೆಯಲು ಇನ್ಶೂರರ್ ಅನ್ನು ನೀವು ವಿನಂತಿಸಬಹುದು. ಮತ್ತು ಕಳ್ಳತನದ ನಂತರ ನಿಮ್ಮ ವಾಹನವನ್ನು ನೀವು ಕಳೆದುಕೊಂಡರೆ, ನೀವು ಕಾರಿನ ಒಟ್ಟು ಮೌಲ್ಯದ ನಷ್ಟವನ್ನು ಅನುಭವಿಸುತ್ತೀರಿ. ಇನ್ಶೂರೆನ್ಸ್ ಕಂಪನಿಯು, ಈ ಸಂದರ್ಭದಲ್ಲಿ, ನಿಮಗೆ ಇನ್ವಾಯ್ಸ್ ಮೌಲ್ಯವನ್ನು ರಿಇಂಬರ್ಸ್ ಮಾಡಬಹುದು.
ಓನ್ ಡ್ಯಾಮೇಜ್ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ.
ಥರ್ಡ್-ಪಾರ್ಟಿ ಲಯಬಿಲಿಟಿಗಾಗಿ: ಭಾರತದಲ್ಲಿ, ಥರ್ಡ್-ಪಾರ್ಟಿ ಲಯಬಿಲಿಟಿ ಪಾಲಿಸಿಯನ್ನು ಖರೀದಿಸುವುದು ಕಡ್ಡಾಯವಾಗಿದೆ. ನೀವು ಸ್ಟ್ಯಾಂಡ್ಅಲೋನ್ ಥರ್ಡ್-ಪಾರ್ಟಿ ಕವರ್ ಅಥವಾ ಕಾಂಪ್ರೆಹೆನ್ಸಿವ್ ಪ್ಯಾಕೇಜ್ ಪಾಲಿಸಿಯನ್ನು ಖರೀದಿಸಬಹುದು. ಎರಡೂ ಸಂದರ್ಭಗಳಲ್ಲಿ, ದೈಹಿಕ ಗಾಯ ಅಥವಾ ಆಸ್ತಿ ಹಾನಿಗಾಗಿ ಥರ್ಡ್-ಪಾರ್ಟಿಗೆ ನಿಮ್ಮಿಂದ ಉಂಟಾದ ಯಾವುದೇ ನಷ್ಟವನ್ನು ಇನ್ಶೂರರ್ ಪಾವತಿಸುತ್ತಾರೆ. ಈ ಲಯಬಿಲಿಟಿಗಳು, ವಿಶೇಷವಾಗಿ ಸಾವಿನ ಪ್ರಕರಣಗಳಲ್ಲಿ, ಕೆಲವೊಮ್ಮೆ ಎಲ್ಲರಿಂದಲೂ ಭರಿಸಲಾಗದ ಒಂದು ದೊಡ್ಡ ಮೊತ್ತವಾಗಿರಬಹುದು. ಆದ್ದರಿಂದ, ಕಾರ್ ಪಾಲಿಸಿಯು ಅತ್ಯಂತ ಸಹಾಯಕರವಾಗುತ್ತದೆ.
ಭಾರತೀಯ ರಸ್ತೆಗಳಲ್ಲಿ ಕಾನೂನುಬದ್ಧವಾಗಿ ಡ್ರೈವ್ ಮಾಡಲು: ಇನ್ಶೂರೆನ್ಸ್ ಕಾಯಿದೆಯ ಪ್ರಕಾರ, ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಅತ್ಯಗತ್ಯ ಏಕೆಂದರೆ ಅದು ನಿಮಗೆ ರಸ್ತೆಯಲ್ಲಿ ಡ್ರೈವ್ ಮಾಡಲು ಕಾನೂನು ಪರ್ಮಿಟ್ ಅನ್ನು ನೀಡುತ್ತದೆ. ನೀವು ಇದನ್ನು ಹೊಂದಿಲ್ಲದಿದ್ದರೆ, ನಿಮ್ಮ ಕಾನೂನು ಲೈಸೆನ್ಸ್ ಅನ್ನು ರದ್ದುಗೊಳಿಸಲಾಗಬಹುದು ಮತ್ತು ಇದು ಭಾರೀ ದಂಡವನ್ನು ಆಕರ್ಷಿಸಬಹುದು.
ಆ್ಯಡ್-ಆನ್ಗಳೊಂದಿಗೆ ಕವರೇಜ್ ಅನ್ನು ವಿಸ್ತರಿಸಿ: ನೀವು ಕಾಂಪ್ರೆಹೆನ್ಸಿವ್ ಪ್ಯಾಕೇಜ್ ಪಾಲಿಸಿಯನ್ನು ಹೊಂದಿದ್ದರೆ ಆ್ಯಡ್-ಆನ್ ಕವರ್ಗಳೊಂದಿಗೆ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ವಿಸ್ತರಿಸಬಹುದು. ಕಾರ್ ಇನ್ಶೂರೆನ್ಸ್ ಆ್ಯಡ್-ಆನ್ಗಳನ್ನು ಖರೀದಿಸುವ ಮೂಲಕ ನೀವು ಕವರ್ ಅನ್ನು ಮತ್ತಷ್ಟು ಉತ್ತಮಗೊಳಿಸಬಹುದು.
ಇವುಗಳಲ್ಲಿ ಕೆಲವು ಈ ರೀತಿ ಇವೆ:
ಹ್ಯುಂಡೈ ಸ್ಯಾಂಟ್ರೋದ ಹೊಚ್ಚ- ಹೊಸ ಅವತಾರವು ಜನರ ಮನಸ್ಸಿನಲ್ಲಿ ಬಲವಾದ ಆಕರ್ಷಣೆಯನ್ನು ಮೂಡಿಸಿದೆ. ಸ್ಯಾಂಟ್ರೋ ತಯಾರಕರು ಬಿಡಿಭಾಗಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ.
ಅದರ ಮೂಲ ಪ್ರವೃತ್ತಿಯನ್ನು ಬದಲಾಯಿಸದೆ, ಹ್ಯುಂಡೈ ನಮಗಾಗಿ ಸ್ಯಾಂಟ್ರೋವನ್ನು ಮರುಶೋಧಿಸಿದರು ಮತ್ತು ನೀಡಿದರು. ಕಾರಿನ ಒಟ್ಟಾರೆ ಫೀಲ್ ಚೆನ್ನಾಗಿದೆ. ಇದು ಪೆಟ್ರೋಲ್ ಮತ್ತು ಸಿಎನ್ಜಿ ಫ್ಯೂಯೆಲ್ ಎರಡಕ್ಕೂ ಲಭ್ಯವಿದೆ.
ಹಿಂದಿನಂತೆ ಗ್ರಾಹಕರನ್ನು ಮೆಚ್ಚಿಸಲು, ಹ್ಯುಂಡೈ ಸ್ಯಾಂಟ್ರೋವನ್ನು ಎರಾ, ಮ್ಯಾಗ್ನಾ, ಆಸ್ಟಾ ಮತ್ತು ಸ್ಪೋರ್ಟ್ಸ್ ಎಂಬ ಮೂರು ವೇರಿಯಂಟ್ ಗಳಲ್ಲಿ ಪರಿಚಯಿಸಲಾಗಿದೆ. ಪ್ರತಿಯೊಂದೂ ಅದರ ಫ್ಯೂಯೆಲ್ ಪ್ರಕಾರವನ್ನು ಆಧರಿಸಿ ಮತ್ತಷ್ಟು ಭಿನ್ನವಾಗಿದೆ.
ಈ ಎಲ್ಲಾ ವೇರಿಯಂಟ್ ಗಳಲ್ಲಿ ನೀವು ಆಟೋಮ್ಯಾಟಿಕ್ ಅಥವಾ ಮ್ಯಾನುವಲ್ ಟ್ರಾನ್ಸ್ಮಿಷನ್ ಅನ್ನು ಪಡೆಯಬಹುದು. ಕಾರಿನ ಬೆಲೆಯು ರೂ.4.15 ಲಕ್ಷದಿಂದ ರೂ.5.73 ಲಕ್ಷದವರೆಗೆ ಇರುತ್ತದೆ. ಹ್ಯುಂಡೈ ಸ್ಯಾಂಟ್ರೋದ ಮೈಲೇಜ್ ಪ್ರತಿ ಲೀಟರ್ಗೆ 20.3 ಕಿಮೀ ನಿಂದ 30.48 ಕಿಮೀ ವರೆಗೆ ಬದಲಾಗುತ್ತದೆ.
ಹಿಂದಿನ ಸಮಯದಂತೆಯೇ, ಹ್ಯುಂಡೈ ಸ್ಯಾಂಟ್ರೋ ತನ್ನ ಹೊಸ ಆವೃತ್ತಿಯೊಂದಿಗೆ ನಿಮ್ಮನ್ನು ಅಚ್ಚರಿಗೊಳಿಸಲು ಸಿದ್ಧವಾಗಿದೆ.
ಹೊರಭಾಗದಲ್ಲಿ, ನಿಮಗಾಗಿ ಒಂದು ಸ್ಟೇಟ್ಮೆಂಟ್ ಅನ್ನು ಸೆಟ್ ಮಾಡುವ ಕಾರಿನ ಹೊಸ ಆಕರ್ಷಕ ನೇಮ್ ಬ್ಯಾಡ್ಜ್ ಅನ್ನು ನೀವು ಪಡೆಯುತ್ತೀರಿ. ಹಿಂದಿನದಕ್ಕೆ ಹೋಲಿಸಿದರೆ ಹೊಸ ಸ್ಯಾಂಟ್ರೋ ಇನ್ನಷ್ಟು ಉದ್ದ ಮತ್ತು ಅಗಲವಾಗಿದೆ.
ಇದು ಸ್ವೆಪ್ಟ್-ಬ್ಯಾಕ್ ಹೆಡ್ಲ್ಯಾಂಪ್ಗಳು ಮತ್ತು ಸ್ಮಾಲ್ ಹ್ಯಾಚ್ಬ್ಯಾಕ್ ಸೆಗ್ಮೆಂಟ್ ನಲ್ಲಿ ಎದ್ದು ಕಾಣುವ ಕ್ಯಾಸ್ಕೇಡ್ ಗ್ರಿಲ್ನೊಂದಿಗೆ ಬರುತ್ತದೆ. ಸೂಕ್ಷ್ಮ ವಿನ್ಯಾಸದ ಕ್ರೀಸ್ಗಳು ಮತ್ತು ನೆರಳು ರೇಖೆಗಳು ಆಕರ್ಷಕ ಸೈಡ್ ಪ್ರೊಫೈಲ್ ಅನ್ನು ನೀಡುತ್ತವೆ.
ನೀವು ಒಳಗೆ ನೋಡಿದಾಗ, ಸ್ಮೂತ್ ಪ್ಲಾಸ್ಟಿಕ್ ಮತ್ತು ರಬ್ಬರ್ ಗುಂಡಿಗಳು ಅಥವಾ ಗುಬ್ಬಿಗಳನ್ನು ಪಡೆಯುತ್ತೀರಿ. ಇವೆಲ್ಲವೂ ಸ್ಪರ್ಶಕ್ಕೆ ಮೃದುವಾಗಿದ್ದು ಒಳಾಂಗಣಕ್ಕೆ ಗರಿಗರಿಯಾದ ನೋಟವನ್ನು ನೀಡುತ್ತದೆ. ಇತರ ಮಾಡೆಲ್ ಗಳಂತೆ, ಹ್ಯುಂಡೈ ಸ್ಯಾಂಟ್ರೋ ಕೂಡ 7-ಇಂಚಿನ ಇನ್ಫೋಟೈನ್ಮೆಂಟ್ ಪರದೆಯನ್ನು ಹೊಂದಿದೆ, ಇದು ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಮಿರರ್-ಲಿಂಕ್ ಸ್ಮಾರ್ಟ್ಫೋನ್ ಸಂಪರ್ಕದೊಂದಿಗೆ ಬರುತ್ತದೆ. ಡಿಸ್ಪ್ಲೇಯಲ್ಲಿರುವ ಐಟಂಗಳು ದೊಡ್ಡದಾಗಿರುವುದರಿಂದ ನ್ಯಾವಿಗೇಶನ್ ಅನ್ನು ಸುಲಭಗೊಳಿಸುತ್ತದೆ.
ಇದು ಸಾಕಷ್ಟು ವಿಶಾಲವಾದ ಕಾರು ಆಗಿದ್ದು, ಐದು ಜನರಿಗೆ ಆರಾಮವಾಗಿ ಕುಳಿತುಕೊಳ್ಳಲು ಅವಕಾಶ ನೀಡುತ್ತದೆ. ಹ್ಯುಂಡೈ ಸ್ಯಾಂಟ್ರೋ ಅಚ್ಚುಕಟ್ಟಾದ ಹಿಂಬದಿಯ ಏರ್ ಕಂಡೀಶನಿಂಗ್ ದ್ವಾರಗಳು, ಸುಗಮ ಸ್ಟೀರಿಂಗ್, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಅಡ್ಜಸ್ಟ್ ಮಾಡಬಹುದಾದ ಒ ಆರ್ ವಿ ಎಂ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಅನ್ನು ಹೊಂದಿದೆ. ಒಟ್ಟಾರೆಯಾಗಿ ಈ ಕಾರು ನಿಮಗೆ ಸ್ಮೂತ್ ಮತ್ತು ಸಲೀಸಾದ ಡ್ರೈವ್ ಅನ್ನು ನೀಡುತ್ತದೆ.
ಈ ಸ್ಮಾರ್ಟ್ ಲಿಟಲ್ ಹ್ಯಾಚ್ ಮಿಡಲ್-ಕ್ಲಾಸ್ ಕುಟುಂಬಗಳು ಮತ್ತು ಯುವಕರಿಗೆ ಅತ್ಯಂತ ಸೂಕ್ತವಾದ ಆಯ್ಕೆಯಾಗಿದೆ.
ಪರಿಶೀಲಿಸಿ: ಹ್ಯುಂಡೈ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ವೇರಿಯಂಟ್ ಗಳು |
ಎಕ್ಸ್ ಶೋರೂಂ ಬೆಲೆ (ನಗರಕ್ಕೆ ಅನುಗುಣವಾಗಿ ಬದಲಾಗಬಹುದು) |
ಎರಾ ಎಕ್ಸಿಕ್ಯೂಟಿವ್ 1086 ಸಿಸಿ, ಮ್ಯಾನುಯಲ್, ಪೆಟ್ರೋಲ್ |
₹ 4.14 ಲಕ್ಷಗಳು |
ಮ್ಯಾಗ್ನಾ 1086 ಸಿಸಿ, ಮ್ಯಾನುಯಲ್, ಪೆಟ್ರೋಲ್ |
₹ 4.71 ಲಕ್ಷಗಳು |
ಸ್ಪೋರ್ಟ್ಸ್ 1086 ಸಿಸಿ, ಮ್ಯಾನುಯಲ್, ಪೆಟ್ರೋಲ್ |
₹ 5.01 ಲಕ್ಷಗಳು |
ಮ್ಯಾಗ್ನಾ AMT 1086 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್ |
₹ 5.2 ಲಕ್ಷಗಳು |
ಮ್ಯಾಗ್ನಾ ಸಿಎನ್ಜಿ 1086 ಸಿಸಿ, ಮ್ಯಾನುಯಲ್, ಸಿಎನ್ಜಿ |
₹ 5.37 ಲಕ್ಷಗಳು |
ಆಸ್ಟಾ 1086 ಸಿಸಿ, ಮ್ಯಾನುಯಲ್, ಪೆಟ್ರೋಲ್ |
₹ 5.49 ಲಕ್ಷಗಳು |
ಸ್ಪೋರ್ಟ್ಸ್ AMT 1086 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್ |
₹ 5.59 ಲಕ್ಷಗಳು |
ಸ್ಪೋರ್ಟ್ಸ್ ಸಿಎನ್ಜಿ 1086 ಸಿಸಿ, ಮ್ಯಾನುಯಲ್, ಸಿಎನ್ಜಿ |
₹ 5.67 ಲಕ್ಷಗಳು |