ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಇನ್ಶೂರೆನ್ಸ್

Get Instant Policy in Minutes*

Third-party premium has changed from 1st June. Renew now

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿ ಅಥವಾ ರಿನೀವ್ ಮಾಡಿ

2019ರಲ್ಲಿ ಬಿಡುಗಡೆಯಾದ ಹ್ಯುಂಡೈನ ಕೋನಾ ಎಲೆಕ್ಟ್ರಿಕ್ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿನ ಮೊದಲ ಆಲ್-ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಇದು 2 ವೇರಿಯಂಟ್ ಗಳಲ್ಲಿ ಲಭ್ಯವಿದೆ ಮತ್ತು ನವೀನ ತಂತ್ರಜ್ಞಾನಗಳನ್ನು ಹೊಂದಿದೆ. ಉನ್ನತ ವೇಗವರ್ಧನೆಯೊಂದಿಗೆ ರೋಮಾಂಚಕ ಡ್ರೈವಿಂಗ್ ಅನುಭವವನ್ನು ಒದಗಿಸುತ್ತದೆ.

2020ರಲ್ಲಿ, ಕೋನಾ ಎಲೆಕ್ಟ್ರಿಕ್ ಮಿಡ್-ಫೇಸ್‌ಲಿಫ್ಟ್ ಅನ್ನು ಪಡೆಯಿತು ಮತ್ತು 2022ರಲ್ಲಿ ಭಾರತಕ್ಕೆ ಬಂದಿತು.

ಹ್ಯುಂಡೈ ಕೋನಾ ಎಲೆಕ್ಟ್ರಿಕ್ 39.2ಕೆಡಬ್ಲ್ಯೂಎಚ್ ಬ್ಯಾಟರಿ ಮತ್ತು 136 ಎಚ್‌ಪಿ ಎಂಜಿನ್ ನೊಂದಿಗೆ 304 ಕಿಮೀ ರೇಂಜ್ ಮತ್ತು 64 ಕೆಡಬ್ಲ್ಯೂಎಚ್ ಬ್ಯಾಟರಿ ಮತ್ತು 204 ಎಚ್‌ಪಿ ಮೋಟಾರ್ ಜಾಗತಿಕವಾಗಿ 483 ಕಿಮೀ ರೇಂಜ್ ಅನ್ನು ಒದಗಿಸುತ್ತದೆ. ಇದಕ್ಕೆ ವಿರುದ್ಧವಾಗಿ, ಭಾರತೀಯ ಆವೃತ್ತಿಯು ಕಡಿಮೆ-ಸ್ಪೆಕ್ ನ 39.2 ಕೆಡಬ್ಲ್ಯೂಎಚ್ ಬ್ಯಾಟರಿ ಮತ್ತು 136 ಎಚ್‌ಪಿ ಎಲೆಕ್ಟ್ರಿಕ್ ಎಂಜಿನ್‌ನೊಂದಿಗೆ ಬಂದಿತು.

ಹ್ಯುಂಡೈ ಕೋನಾ ಎಲೆಕ್ಟ್ರಿಕ್, ಧ್ವನಿ ನಿಯಂತ್ರಣ, ರಿಮೋಟ್ ಚಾರ್ಜಿಂಗ್, ಪ್ಲಗ್ ಇನ್ ಮಾಡಿದಾಗ ಕಾರನ್ನು ಪೂರ್ವಭಾವಿಯಾಗಿ ಬಿಸಿಯಾಗಿಸಲು ಸಹಾಯ ಮಾಡುವ ರಿಮೋಟ್ ಕ್ಲೈಮೇಟ್ ಕಂಟ್ರೋಲ್ ಗಾಗಿ ಬ್ಲೂಲಿಂಕ್ ಸಂಪರ್ಕಿತ ಕಾರ್ ತಂತ್ರಜ್ಞಾನದಿಂದ ಬೆಂಬಲಿತವಾಗಿರುವ 10.25-ಇಂಚಿನ ಡಿಜಿಟಲ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ನೀವು ಬ್ಲೈಂಡ್‌ಸ್ಪಾಟ್ ಅಸಿಸ್ಟೆನ್ಸ್, ರೇರ್ ಕ್ರಾಸ್ ಟ್ರಾಫಿಕ್ ಅಸಿಸ್ಟೆನ್ಸ್, ಸೇಫ್ ಎಕ್ಸಿಟ್ ವಾರ್ನಿಂಗ್ ಮತ್ತು ಅಪಘಾತಗಳ ಸಂದರ್ಭದಲ್ಲಿ ಸ್ವಯಂಚಾಲಿತವಾಗಿ ಎಮರ್ಜೆನ್ಸಿ ಸೇವೆಗಳನ್ನು ಅಲರ್ಟ್ ಮಾಡುವ ಇಕಾಲ್ ಸೌಲಭ್ಯವನ್ನು ಸಹ ಕಾಣಬಹುದು.

ಆದಾಗ್ಯೂ, ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಪರಿಕಲ್ಪನೆಯು ಇನ್ನೂ ಹೊಸದಾಗಿದೆ, ಆದರೆ ಅದನ್ನು ನಿರ್ವಹಿಸುವುದು ದುಬಾರಿ ವ್ಯವಹಾರವಾಗಿದೆ. ಆದ್ದರಿಂದ, ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವುದು ಸಂಭವನೀಯ ದುರಸ್ತಿ/ಬದಲಿ ವೆಚ್ಚಗಳಿಂದ ದೂರವಿರಲು ಒಂದು ಬುದ್ಧಿವಂತ ಕ್ರಮವಾಗಿದೆ.

ಜೊತೆಗೆ, ಮೋಟಾರ್ ವೆಹಿಕಲ್ಸ್ ಆಕ್ಟ್ 1988ರ ಪ್ರಕಾರ ಭಾರತದಲ್ಲಿ ಕಾರ್ ಇನ್ಶೂರೆನ್ಸ್ ಪಾಲಿಸಿ ಕಡ್ಡಾಯವಾಗಿದೆ.

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರ್ ಇನ್ಶೂರೆನ್ಸ್‌ ನಲ್ಲಿ ಏನೆಲ್ಲಾ ಕವರ್‌ ಆಗುತ್ತದೆ

ಡಿಜಿಟ್‌ನ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರ್ ಇನ್ಶೂರೆನ್ಸ್ ಅನ್ನು ನೀವು ಯಾಕೆ ಖರೀದಿಸಬೇಕು?

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಗೆ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಥರ್ಡ್-ಪಾರ್ಟಿ ವೆಹಿಕಲ್‌ಗೆ ಉಂಟಾದ ಡ್ಯಾಮೇಜ್‌ಗಳು

×

ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್‌ಗಳು

×

ಪರ್ಸನಲ್ ಆ್ಯಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ

×

ನಿಮ್ಮ ಕಾರಿನ ಕಳ್ಳತನ

×

ಡೋರ್‌ಸ್ಟೆಪ್‌ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!

ಹಂತ 1

1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್‌ಗಳನ್ನೂ ತುಂಬಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೇ ನಿಮ್ಮ ವಾಹನದ ಡ್ಯಾಮೇಜ್‌ಗಳನ್ನು ತಿಳಿಸಿರಿ.

ಹಂತ 3

ನಮ್ಮ ನೆಟ್‌ವರ್ಕ್‌ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ಅಥವಾ ರಿಇಂಬರ್ಸ್‌ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.

ಎಷ್ಟು ವೇಗವಾಗಿ ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಸೆಟಲ್ ಆಗುತ್ತವೆ? ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಓದಿ

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರ್ ಇನ್ಶೂರೆನ್ಸ್ ಪಾಲಿಸಿಗೆ ಡಿಜಿಟ್ ಸೂಕ್ತ ಯಾಕೆ?

ವಿಶ್ವಾಸಾರ್ಹ ಕಾರ್ ಇನ್ಶೂರೆನ್ಸ್ ಕಂಪನಿಯನ್ನು ಆಯ್ಕೆ ಮಾಡುವುದು ಸವಾಲಿನ ಕೆಲಸವಾಗಿದೆ. ಆದ್ದರಿಂದ, ಆಯ್ಕೆಗಳಿಗೆ ಹೋಗುವಾಗ, ನೀವು ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರ್ ಇನ್ಶೂರೆನ್ಸ್ ಬೆಲೆ ಮತ್ತು ಇನ್ಶೂರರ್ ಒದಗಿಸುವ ಪ್ರಯೋಜನಗಳನ್ನು ಹೋಲಿಕೆ ಮಾಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಈ ಸಂದರ್ಭದಲ್ಲಿ, ಅನುಕೂಲಕರವಾದ ಪಾಲಿಸಿ ಆಯ್ಕೆಗಳೊಂದಿಗೆ ಹೆಚ್ಚುವರಿ ಲಾಭದಾಯಕ ಕೊಡುಗೆಗಳನ್ನು ನೀಡುವುದರಿಂದ ನೀವು ಡಿಜಿಟಲ್ ಇನ್ಶೂರೆನ್ಸ್ ನ್ನು ಪರಿಗಣಿಸಬಹುದು.

ಅವುಗಳ ಬಗ್ಗೆ ತಿಳಿಯಲು ಪೂರ್ತಿ ಓದಿ.

1. ಇನ್ಶೂರೆನ್ಸ್ ಪಾಲಿಸಿಗಳ ವ್ಯಾಪ್ತಿ

ಡಿಜಿಟ್ ತನ್ನ ಗ್ರಾಹಕರ ವೈವಿಧ್ಯಮಯ ಅವಶ್ಯಕತೆಗಳನ್ನು ಪೂರೈಸಲು ಸೂಕ್ತವಾದ ಇನ್ಶೂರೆನ್ಸ್ ಪ್ಲಾನ್ ಗಳನ್ನು ಸಿದ್ಧಪಡಿಸುತ್ತದೆ. ನಿಮ್ಮ ಅನುಕೂಲಕ್ಕಾಗಿ ಕೆಳಗಿನ ಆಯ್ಕೆಗಳಿಂದ ನೀವು ಆಯ್ಕೆ ಮಾಡಬಹುದು.

  • ಥರ್ಡ್-ಪಾರ್ಟಿ ಪಾಲಿಸಿ

ಇದು ಕಡ್ಡಾಯ ಪಾಲಿಸಿಯಾಗಿದೆ ಮತ್ತು ಭಾರತದಲ್ಲಿ ನಿಮ್ಮ ಕೋನಾ ಎಲೆಕ್ಟ್ರಿಕ್ ವಾಹನವನ್ನು ಕಾನೂನುಬದ್ಧವಾಗಿ ಡ್ರೈವ್ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಇದು ನಿಮ್ಮ ಕಾರಿನಿಂದ ಥರ್ಡ್ ಪಾರ್ಟಿ ವಾಹನ, ಪ್ರಾಪರ್ಟಿ ಅಥವಾ ವ್ಯಕ್ತಿಗೆ ಉಂಟಾದ ನಷ್ಟವನ್ನು ಕವರ್ ಮಾಡುತ್ತದೆ. ಇದಲ್ಲದೆ, ಡಿಜಿಟ್ ಲಿಟಿಗೇಷನ್ ಸಮಸ್ಯೆಗಳು ಯಾವುದಾದರೂ ಇದ್ದರೆ ಅವುಗಳನ್ನು ನೋಡಿಕೊಳ್ಳುತ್ತದೆ.

  • ಕಾಂಪ್ರೆಹೆನ್ಸಿವ್ ಪಾಲಿಸಿ

ಇದು ಥರ್ಡ್ ಪಾರ್ಟಿ ಲಯಬಿಲಿಟಿಗಳು ಮತ್ತು ಓನ್ ಡ್ಯಾಮೇಜ್ ವೆಚ್ಚಗಳನ್ನು ಕವರ್ ಮಾಡುವ ಅತ್ಯಂತ ವಿಸ್ತಾರವಾದ ಪ್ಲಾನ್ ಆಗಿದೆ. ಆದ್ದರಿಂದ, ಅಪಘಾತ ಅಥವಾ ನೈಸರ್ಗಿಕ ವಿಪತ್ತುಗಳು, ಬೆಂಕಿ, ಕಳ್ಳತನ ಅಥವಾ ಯಾವುದೇ ಇತರ ಅಪಾಯಗಳಿಂದ ಡ್ಯಾಮೇಜ್ ಉಂಟಾಗಿದ್ದರೂ, ಡಿಜಿಟ್ ನಷ್ಟವನ್ನು ರೀಇಂಬರ್ಸ್ ಮಾಡುತ್ತದೆ ಅಥವಾ ಕ್ಯಾಶ್ ಲೆಸ್ ದುರಸ್ತಿ ಆಯ್ಕೆಯನ್ನು ಒದಗಿಸುತ್ತದೆ.

ಸೂಚನೆ: ಥರ್ಡ್-ಪಾರ್ಟಿ ಪಾಲಿಸಿಹೋಲ್ಡರ್ ಗಳು ತಮ್ಮ ಪಾಲಿಸಿ ಕವರೇಜ್ ಅನ್ನು ಅಪ್‌ಗ್ರೇಡ್ ಮಾಡಲು ಬಯಸಿದರೆ ಪ್ರತ್ಯೇಕವಾಗಿ ಓನ್ ಡ್ಯಾಮೇಜ್ ರಕ್ಷಣೆಯನ್ನು ಆರಿಸಿಕೊಳ್ಳಬಹುದು.

2. ಆನ್ಲೈನ್ ​​ಸೇವೆಗಳು

ನೀವು ಇದೀಗ ಡಿಜಿಟ್ ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರ್ ಇನ್ಶೂರೆನ್ಸ್ ಅನ್ನು ಆರಿಸಿಕೊಳ್ಳಬಹುದು. ಇದಲ್ಲದೆ, ಪ್ರೊಸೆಸ್ ಅನ್ನು ಸುಗಮಗೊಳಿಸಲು ಡಿಜಿಟ್, ಆನ್‌ಲೈನ್‌ನಲ್ಲಿ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರ್ ಇನ್ಶೂರೆನ್ಸ್ ರಿನೀವಲ್ ಅನ್ನು ಸಹ ನೀಡುತ್ತದೆ. ನಿಮ್ಮ ಖಾತೆಗಳಿಗೆ ಲಾಗ್ ಇನ್ ಮಾಡಿ ಮತ್ತು ಪಾಲಿಸಿ ನಿಯಮಗಳು ಮುಗಿಯುವ ಮೊದಲು ತಕ್ಷಣವೇ ನಿಮ್ಮ ಇನ್ಶೂರೆನ್ಸ್ ಪ್ಲಾನ್ ಅನ್ನು ರಿನೀವ್ ಮಾಡಿ.

3. ಪೇಪರ್‌ಲೆಸ್‌ ಪ್ರೊಸೆಸ್ ಗಳು

ನೀವು ಕೇವಲ 3-ಸರಳ ಹಂತಗಳಲ್ಲಿ ಕ್ಲೈಮ್ ಮಾಡಬಹುದು ಎಂದಾದಾಗ ಸಾಂಪ್ರದಾಯಿಕ ಕ್ಲೈಮ್ ಫೈಲಿಂಗ್ ಪ್ರೊಸೆಸ್ ನಲ್ಲಿ ಸಮಯವನ್ನು ಏಕೆ ವ್ಯರ್ಥ ಮಾಡುತ್ತೀರಿ?

ನಿಮ್ಮ ಅನುಕೂಲಕ್ಕಾಗಿ ಡಿಜಿಟ್ ಸರಳೀಕೃತ ಕ್ಲೈಮ್ ರೈಸ್ ಮಾಡುವ ಪ್ರೊಸೆಸ್ ಅನ್ನು ನೀಡುತ್ತದೆ.

  • ಹಂತ 1: ಸ್ವಯಂ ತಪಾಸಣೆ ಲಿಂಕ್ ಅನ್ನು ಸ್ವೀಕರಿಸಲು ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಯಿಂದ 1800 258 5956 ಗೆ ಕಾಲ್ ಮಾಡಿ.
  • ಹಂತ 2: ಲಿಂಕ್‌ನಲ್ಲಿ ನಿಮ್ಮ ದೋಷಯುಕ್ತ ವಾಹನದ ಅಗತ್ಯ ಛಾಯಾಚಿತ್ರಗಳನ್ನು ಪುರಾವೆಯಾಗಿ ಅಪ್ ಲೋಡ್ ಮಾಡಿ.
  • ಹಂತ 3: 'ರೀ-ಇಂಬರ್ಸ್‌ಮೆಂಟ್‌' ಅಥವಾ 'ಕ್ಯಾಶ್ ಲೆಸ್' ಆಯ್ಕೆಯಿಂದ ನಿಮ್ಮ ಅವಶ್ಯಕತೆಗೆ ತಕ್ಕಂತೆ ರಿಪೇರಿ ಮೋಡ್ ಅನ್ನು ಆರಿಸಿ.

4. ಆಡ್-ಆನ್ ಕವರ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

ಕೆಳಗಿನ ಪಟ್ಟಿಯಲ್ಲಿರುವ ಆಡ್-ಆನ್ ಕವರ್‌ಗಳನ್ನು ಸೇರಿಸುವ ಮೂಲಕ ಅಗತ್ಯವಿದ್ದಾಗ ನಿಮ್ಮ ಕೋನಾ ಎಲೆಕ್ಟ್ರಿಕ್ ಇನ್ಶೂರೆನ್ಸ್ ಪಾಲಿಸಿ ಕವರೇಜ್ ಅನ್ನು ನೀವು ವಿಸ್ತರಿಸಬಹುದು.

  • ಝೀರೋ ಡೆಪ್ರಿಸಿಯೇಷನ್
  • ರಿಟರ್ನ್ ಟು ಇನ್‌ವಾಯ್ಸ್
  • ಪ್ಯಾಸೆಂಜರ್ ಕವರ್
  • ಕನ್ಸ್ಯೂಮೇಬಲ್ಸ್
  • ಟೈರ್ ಪ್ರೊಟೆಕ್ಷನ್
  • ಎಂಜಿನ್ ಆಂಡ್ ಗೇರ್ ಬಾಕ್ಸ್ ಪ್ರೊಟೆಕ್ಷನ್
  • ಬ್ರೇಕ್ ಡೌನ್ ಅಸಿಸ್ಟೆನ್ಸ್

ಸೂಚನೆ: ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರ್ ಇನ್ಶೂರೆನ್ಸ್ ರಿನೀವಲ್ ಬೆಲೆಯನ್ನು ಹೆಚ್ಚಿಸುವ ಮೂಲಕ ಪಾಲಿಸಿ ಅವಧಿ ಮುಗಿದ ನಂತರವೂ ನೀವು ರಕ್ಷಣೆಯನ್ನು ಮುಂದುವರಿಸಬಹುದು.

5. ಐಡಿವಿ(IDV) ಬದಲಾವಣೆಯ ಆಯ್ಕೆ

ಡಿಜಿಟ್ ತನ್ನ ಗ್ರಾಹಕರಿಗೆ ಅವರ ಅವಶ್ಯಕತೆಗಳ ಆಧಾರದ ಮೇಲೆ ತಮ್ಮ ವಾಹನಗಳ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಅನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಅನುಮತಿಸುತ್ತದೆ. ಸರಿಪಡಿಸಲಾಗದ ಡ್ಯಾಮೇಜ್ ಗಳು ಅಥವಾ ಕಳ್ಳತನದ ಸಂದರ್ಭದಲ್ಲಿ ಉತ್ತಮ ಪರಿಹಾರವನ್ನು ನೀಡುವ ಹೆಚ್ಚಿನ ಐಡಿವಿ ಆಯ್ಕೆ ಹೆಚ್ಚಿನ ಪ್ರೀಮಿಯಂಗಳನ್ನು ವಿಧಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಕಡಿಮೆ ಐಡಿವಿ ಕೈಗೆಟುಕುವ ಬೆಲೆಯಾಗಿದೆ, ಆದರೆ ಪರಿಣಾಮಕಾರಿ ಪರಿಹಾರವನ್ನು ನೀಡುವುದಿಲ್ಲ.

6. ಡೋರ್‌ಸ್ಟೆಪ್ ಕಾರ್ ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯ

ನಿಮ್ಮ ಕಾರ್ ತೀವ್ರವಾಗಿ ಡ್ಯಾಮೇಜ್ ಗೊಳಗಾದಾಗ ಮತ್ತು ಡ್ರೈವ್ ಮಾಡುವ ಸ್ಥಿತಿಯಲ್ಲಿಲ್ಲದಿದ್ದಾಗ ನೀವು ಈ ಸೌಲಭ್ಯವನ್ನು ಆರಿಸಿಕೊಳ್ಳಬಹುದು. ಡ್ಯಾಮೇಜ್ ಗೊಳಗಾದ ವಾಹನವನ್ನು ಪಡೆದುಕೊಳ್ಳಲು ಪ್ರತಿನಿಧಿಗಳು ನಿಮ್ಮ ಸ್ಥಳವನ್ನು ತಲುಪುತ್ತಾರೆ ಮತ್ತು ದುರಸ್ತಿ ಮಾಡಿದ ನಂತರ ಅದನ್ನು ನಿಮ್ಮ ವಿಳಾಸಕ್ಕೆ ಡ್ರಾಪ್ ಮಾಡುತ್ತಾರೆ.

7. ಪ್ರೀಮಿಯಂ ಮೇಲಿನ ರಿಯಾಯಿತಿಗಳು

ನೀವು ಇಡೀ ವರ್ಷಕ್ಕೆ ಯಾವುದೇ ಕ್ಲೈಮ್ ಅನ್ನು ಫೈಲ್ ಮಾಡದಿದ್ದರೆ, ಮುಂದಿನ ಪ್ರೀಮಿಯಂನಲ್ಲಿ ನೀವು 20% ನೋ ಕ್ಲೈಮ್ ಬೋನಸ್ ರಿಯಾಯಿತಿಯನ್ನು ಗಳಿಸುವಿರಿ.

8. ರಾಷ್ಟ್ರವ್ಯಾಪಿ ಡಿಜಿಟ್ ನೆಟ್‌ವರ್ಕ್ ಕಾರ್ ಗ್ಯಾರೇಜ್‌ಗಳು

ಈಗ ನೀವು ನಿಮ್ಮ ಹತ್ತಿರದ ನೆಟ್‌ವರ್ಕ್ ಗ್ಯಾರೇಜ್‌ ನಲ್ಲಿ ತೊಂದರೆ-ಮುಕ್ತವಾಗಿ ವಾಹನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಇದಲ್ಲದೆ, ಮುಂಗಡ ಪಾವತಿಗಳನ್ನು ತಪ್ಪಿಸಲು ನೀವು ಕ್ಯಾಶ್ ಲೆಸ್ ದುರಸ್ತಿಯನ್ನು ಆರಿಸಿಕೊಳ್ಳಬಹುದು.

ಇದಲ್ಲದೆ, ಡಿಜಿಟ್‌ನಲ್ಲಿ, ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರ್ ಇನ್ಶೂರೆನ್ಸ್ ಪಾಲಿಸಿ ಪ್ರೀಮಿಯಂ ಅನ್ನು ಕಡಿಮೆ ಮಾಡಲು ನಿಮಗೆ ಇನ್ನೊಂದು ಅವಕಾಶ ಸಿಗುತ್ತದೆ. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಏನೆಂದರೆ ವಾಲಂಟರಿ ಡಿಡಕ್ಟಿಬಲ್ಸ್ ಆಯ್ಕೆ ಮಾಡುವುದು. ಆದಾಗ್ಯೂ, ಈ ಆಯ್ಕೆಯನ್ನು ಆರಿಸುವ ಮೊದಲು, ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳಲು ಡಿಜಿಟ್ ನ 24X7 ಗ್ರಾಹಕ ನೆರವು ಪ್ರತಿನಿಧಿಗಳ ಸಹಾಯವನ್ನು ಪಡೆಯಿರಿ.

ಹ್ಯುಂಡೈ ಕೋನಾ ಕುರಿತು ಮತ್ತಷ್ಟು ತಿಳಿಯಿರಿ

ಏರುತ್ತಿರುವ ಇಂಧನ ಬೆಲೆಯನ್ನು ನೋಡಿದಾಗ ಇವಿ(ಎಲೆಕ್ಟ್ರಿಕ್ ವೆಹಿಕಲ್)ಗಳೇ ಭಾರತದ ಭವಿಷ್ಯವಾಗಿದೆ. ಭೂಮಿಯನ್ನು ಉಳಿಸುವುದು ಈಗ ಒಬ್ಬರು ಇಬ್ಬರಲ್ಲ ಎಲ್ಲರ ನೈತಿಕ ಜವಾಬ್ದಾರಿಯಾಗಿದೆ. ಹ್ಯುಂಡೈ ಈ ವಿಷಯದಲ್ಲಿ ಇತರರಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಾ ಧೈರ್ಯಶಾಲಿ ಮತ್ತು ಎಚ್ಚರಿಕೆಯ ಉಪಕ್ರಮವನ್ನು ತೆಗೆದುಕೊಂಡಿದೆ. ಅವರು ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಡೈನಾಮಿಕ್ ವಾಹನವಾದ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಅನ್ನು ತಂದಿದ್ದಾರೆ.

ಇದು ಝೀರೋ-ಎಮಿಷನ್ ಎಸ್‌ಯುವಿ ಆಗಿದ್ದು. ಅದು ಎಲ್ಲಾ ಅರ್ಥದಲ್ಲಿ ಎಲೆಕ್ಟ್ರಿಕ್ ಆಗಿದೆ. ಸಂಪೂರ್ಣ ಪ್ರೀಮಿಯಂ ಸೆಗ್ಮೆಂಟಿನ ಕಾರು ಆಗಿರುವ, ಹ್ಯುಂಡೈ ಕೋನಾ ಎಲೆಕ್ಟ್ರಿಕ್‌ನ ಬೆಲೆ ಶ್ರೇಣಿಯು ರೂ.23.95 ಲಕ್ಷಗಳಿಂದ ಪ್ರಾರಂಭವಾಗುತ್ತದೆ. ಡ್ರೈವ್ ಮಾಡಲು ಆರಾಮದಾಯಕವಾಗಿರುವ ಕಾರ್ ಸ್ವಯಂಚಾಲಿತವಾಗಿದ್ದು, ಅದು ನಿಮಗೆ ಐಷಾರಾಮಿ ಭಾವನೆಯನ್ನು ನೀಡುತ್ತದೆ. ಇದು ಆಕರ್ಷಕವಾದ 452 ಕಿಮೀ/ಫುಲ್ ಚಾರ್ಜ್ ಮೈಲೇಜ್ ನೀಡುತ್ತದೆ.

ನೀವು ಹ್ಯುಂಡೈ ಕೋನಾವನ್ನು ಏಕೆ ಖರೀದಿಸಬೇಕು?

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ನಿಮಗೆ ಉತ್ತಮ ಆಯ್ಕೆಯಾಗಿದೆ. ಸಂಪೂರ್ಣವಾಗಿ ಎಲೆಕ್ಟ್ರಿಕ್ ಮತ್ತು ಸ್ವಯಂಚಾಲಿತವಾಗಿದ್ದು, ಕಾರ್ 5 ಜನರಿಗೆ ಉತ್ತಮ ಸೀಟಿಂಗ್ ಸಾಮರ್ಥ್ಯವನ್ನು ನೀಡುತ್ತದೆ. ಸಾಕಷ್ಟು ಸ್ಪೋರ್ಟಿ ಲುಕ್ ಅನ್ನು ನೀಡುವ ಮೂಲಕ ಕಾರ್ ಜನಸಂದಣಿಯಲ್ಲಿ ಎದ್ದು ಕಾಣುತ್ತದೆ. ಹೊರಭಾಗದಲ್ಲಿರುವ ಹೆಡ್‌ಲ್ಯಾಂಪ್‌ಗಳು ಎಲ್‌ಇಡಿ ಆಧಾರಿತವಾಗಿದ್ದು, ಅದು ಇತರರನ್ನು ಆಕರ್ಷಿಸುತ್ತದೆ. ಇದರಲ್ಲಿರುವ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಆಂಡ್ರಾಯ್ಡ್ ಮತ್ತು ಐಓಎಸ್ ಗೆ ಹೊಂದಿಕೊಳ್ಳುತ್ತದೆ.

ಐಷಾರಾಮಿತನವನ್ನು ಮರು ವ್ಯಾಖ್ಯಾನಿಸುವ ಕಾರ್, ನಿಮಗೆ ಎಲೆಕ್ಟ್ರಿಕ್ ಸನ್‌ರೂಫ್, ಫ್ರಂಟ್ ಹೀಟೆಡ್ ಮತ್ತು ವೆಂಟಿಲೇಟೆಡ್ ಸೀಟ್ಸ್, ಫೋನ್‌ಗೆ ವೈರ್‌ಲೆಸ್ ಚಾರ್ಜಿಂಗ್ ಮತ್ತು ಪುಶ್ ಸ್ಟಾರ್ಟ್-ಸ್ಟಾಪ್ ಬಟನ್ ಅನ್ನು ನೀಡುತ್ತದೆ. ಇಕೋ+, ಇಕೋ, ಕಂಫರ್ಟ್ ಮತ್ತು ಸ್ಪೋರ್ಟ್ ಎಂಬ ನಾಲ್ಕು ಡ್ರೈವಿಂಗ್ ಮೋಡ್‌ಗಳನ್ನು ನೀವು ಪಡೆಯುತ್ತೀರಿ.

ತಯಾರಕರು ನಿಮಗೆ ಡೀಲರ್‌ಶಿಪ್‌ನಲ್ಲಿ ಎರಡು ಚಾರ್ಜರ್‌ಗಳು ಮತ್ತು ಚಾರ್ಜಿಂಗ್ ಔಟ್‌ಲೆಟ್‌ಗಳನ್ನು ಒದಗಿಸುತ್ತಾರೆ. ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಹೊರಭಾಗದ ಲುಕ್ ಅನ್ನು ಹೆಚ್ಚಿಸುವ 5 ರೋಮಾಂಚಕ ಬಣ್ಣಗಳಲ್ಲಿ ಲಭ್ಯವಿದೆ.

ಚೇಕ್ ಮಾಡಿ: ಹ್ಯುಂಡೈ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ

ಹ್ಯುಂಡೈ ಕೋನಾದ ವೇರಿಯಂಟ್‌ಗಳು

ವೇರಿಯಂಟ್‌ ಹೆಸರು ವೇರಿಯಂಟ್‌ ನ ಬೆಲೆ (ನವದೆಹಲಿ, ಇತರ ನಗರಗಳಲ್ಲಿ ಬದಲಾಗಬಹುದು)
ಪ್ರೀಮಿಯಂ ₹ 23.79 ಲಕ್ಷ
ಪ್ರೀಮಿಯಂ ಡ್ಯುಯಲ್ ಟೋನ್ ₹ 23.97 ಲಕ್ಷ

[1]

ಪದೇಪದೇ ಕೇಳಲಾದ ಪ್ರಶ್ನೆಗಳು

ನನ್ನ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿಗೆ ಟೈರ್ ಪ್ರೊಟೆಕ್ಷ್ ಆಡ್-ಆನ್ ಕವರ್ ಅನ್ನು ನಾನು ಆರಿಸಿಕೊಳ್ಳಬಹುದೇ?

ನೀವು ಕಾಂಪ್ರೆಹೆನ್ಸಿವ್ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ ನೀವು ಟೈರ್ ಪ್ರೊಟೆಕ್ಷ್ ಆಡ್-ಆನ್ ಕವರ್ ಅನ್ನು ಆರಿಸಿಕೊಳ್ಳಬಹುದು.

ಟೈರ್ ಪ್ರೊಟೆಕ್ಷ್ ಆಡ್-ಆನ್ ಕವರ್ ಎಷ್ಟು ವರ್ಷಗಳವರೆಗೆ ವ್ಯಾಲಿಡ್ ಆಗಿರುತ್ತದೆ?

ಟೈರ್ ಪ್ರೊಟೆಕ್ಷನ್ ಆಡ್-ಆನ್ ಕವರ್ 4 ವರ್ಷಗಳವರೆಗೆ ವ್ಯಾಲಿಡ್ ಆಗಿರುತ್ತದೆ.

ಟೈರ್ ಪ್ರೊಟೆಕ್ಷನ್ ಆಡ್-ಆನ್ ಅಡಿಯಲ್ಲಿ ಏನೆಲ್ಲಾ ಕವರ್ ಆಗುತ್ತದೆ?

ಟೈರ್ ಪ್ರೊಟೆಕ್ಷನ್ ಆಡ್-ಆನ್ ಇವುಗಳನ್ನು ಕವರ್‌ ಮಾಡುತ್ತದೆ-

  • ರಿಪ್ಲೇಸ್‌ಮೆಂಟ್‌ ವೆಚ್ಚಗಳು
  • ಕಾರ್ಮಿಕ ವೆಚ್ಚವನ್ನು ಇಳಿಸುವುದು, ಸ್ಥಾಪಿಸುವುದು ಮತ್ತು ಮರುಸಮತೋಲನಗೊಳಿಸುವುದು
  • ಆಕಸ್ಮಿಕ ನಷ್ಟ
  • ಉಬ್ಬುಗಳು, ಸಿಡಿಯುವಿಕೆ ಮತ್ತು ಸವೆತಗಳು ಸೇರಿದಂತೆ ಟ್ಯೂಬ್ ಮತ್ತು ಟೈರ್ ಡ್ಯಾಮೇಜ್ ವೆಚ್ಚಗಳು