Third-party premium has changed from 1st June. Renew now
ಹ್ಯುಂಡೈ ಐ20 ಕಾರ್ ಇನ್ಶೂರೆನ್ಸ್ ಬೆಲೆ ಮತ್ತು ಆನ್‌ಲೈನ್ ಪಾಲಿಸಿ ರಿನೀವಲ್
ಹ್ಯುಂಡೈ ಐ20 ಅನ್ನು ಖಂಡಿತವಾಗಿಯೂ ಪರಿಚಯಿಸುವ ಅಗತ್ಯವಿಲ್ಲ. 2008ರಲ್ಲಿ ಬಿಡುಗಡೆಯಾದ ಬಳಿಕ ಇದು ಇಂಡಿಯಾದ ಕಾರ್ ಮಾಲೀಕರ ಶಾಶ್ವತ ಫೇವರಿಟ್ ಕಾರ್ ಆಗಿದೆ, ಮತ್ತು ಅದು ಸಮರ್ಥನಿಯವೂ ಆಗಿದೆ.
ಸಮೃದ್ಧ ವೈಶಿಷ್ಟ್ಯಗಳು, ಸಮತೋಲಿತ ವಿನ್ಯಾಸ ಮತ್ತು ವಿಶಾಲವಾದ ಪ್ಯಾಸೆಂಜರ್ ಕ್ಯಾಬಿನ್‌ನೊಂದಿಗೆ ಹ್ಯುಂಡೈನ ಐ20 ಉತ್ಕೃಷ್ಟ ಆಲ್-ರೌಂಡರ್ ಆಗಿ ರೂಪುಗೊಂಡಿದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಭಾರತೀಯರಿಗೆ ಪರ್ಫೆಕ್ಟ್ ಹ್ಯಾಚ್‌ಬ್ಯಾಕ್ ಆಗಿದೆ.
ಒಟ್ಟಾರೆಯಾಗಿ, ಹ್ಯುಂಡೈ ಐ20 ಸಮರ್ಥವಾದ ಮತ್ತು ಸಮಂಜಸವಾದ ಬೆಲೆ ಹೊಂದಿರುವ ವೆಹಿಕಲ್ ಆಗಿದೆ. ಸಹಜವಾಗಿ, ಇದರ ಮಾರಾಟ ಸಂಖ್ಯೆ ಯಾವಾಗಲೂ ಪರಿಣಾಮಕಾರಿಯಾಗಿದೆ ಮತ್ತು ಅದರಂತೆ ಹ್ಯುಂಡೈ ಐ20 ಇನ್ಶೂರೆನ್ಸ್ ಪಾಲಿಸಿಯು ಜನಪ್ರಿಯ ಉತ್ಪನ್ನವಾಗಿದೆ.
ಒಂದು ವಿಚಾರವೆಂದರೆ, ಮೋಟಾರ್ ವೆಹಿಕಲ್‌ಗಳ ಆ್ಯಕ್ಟ್, 1988 ಇಂಡಿಯಾದಲ್ಲಿರುವ ಪ್ರತೀ ವೆಹಿಕಲ್‌ಗೂ ಥರ್ಡ್-ಪಾರ್ಟಿ ಲಯಬಿಲಿಟಿ ಕಾರ್ ಇನ್ಶೂರೆನ್ಸ್ ಪಾಲಿಸಿ ಹೊಂದುವುದು ಕಡ್ಡಾಯ ಮಾಡಿದೆ. ಹೊಂದಿಲ್ಲದಿದ್ದರೆ, ಮೊದಲ ಬಾರಿಗೆ ಅಪರಾಧಕ್ಕೆ ರೂ.2000 ದಂಡ ತೆರಬೇಕಾಗುತ್ತದೆ, ಮತ್ತು ಪುನರಾವರ್ತಿತ ಅಪರಾಧಕ್ಕೆ ರೂ.4000.
ಆದಾಗ್ಯೂ, ಲೀಗಲ್ ಕಂಪ್ಲಯನ್ಸ್ ಭಾಗ ಇಲ್ಲದಿದ್ದರೂ ನಿಮ್ಮ ಐ20 ಇನ್ಶೂರೆನ್ಸ್ ಪಾಲಿಸಿ ಅತಿಮುಖ್ಯವಾಗಿದೆ. ನಿಮ್ಮ ಕಾರಿನಿಂದ ಥರ್ಡ್ ಪಾರ್ಟಿಗೆ ಡ್ಯಾಮೇಜ್ ಉಂಟಾದಾಗ ಆರ್ಥಿಕ ಲಯಬಿಲಿಟಿಯಿಂದ ಅದು ನಿಮ್ಮನ್ನು ಕಾಪಾಡುತ್ತದೆ. ಆದರೆ ಡ್ಯಾಮೇಜ್‌ಗಳು ಥರ್ಡ್ ಪಾರ್ಟಿಗೆ ಮಾತ್ರ ಸೀಮಿತವಾಗಿಲ್ಲ.
ಕೆಲವು ಸಮಯದಲ್ಲಿ ನಿಮ್ಮ ಐ20ಗೆ ಡಿಫೈಲ್‌ಮೆಂಟ್ ಉಂಟಾಗಬಹುದು. ಆದುದರಿಂದ ಥರ್ಡ್-ಪಾರ್ಟಿ ಲಯಬಿಲಿಟಿ-ಓನ್ಲಿ ಪಾಲಿಸಿಯ ಬದಲಿಗೆ ಕಾಂಪ್ರೆಹೆನ್ಸಿವ್ ಹ್ಯುಂಡೈ ಐ20 ಇನ್ಶೂರೆನ್ಸ್ ಪಾಲಿಸಿ ಆರಿಸಿಕೊಳ್ಳುವುದು ಉತ್ತಮ.
ಏನೇ ಇರಲಿ, ನೀವು ಪಾಲಿಸಿಯಿಂದ ಅನುಕೂಲಗಳನ್ನು ಪಡೆದುಕೊಳ್ಳಲು ವಿವೇಚನೆಯನ್ನು ಬಳಸಿ ಕಾರ್ ಇನ್ಶೂರೆನ್ಸ್ ಪಾಲಿಸಿ ಮತ್ತು ಇನ್ಶೂರರ್ ಅನ್ನು ಆರಿಸಿಕೊಳ್ಳಬೇಕು.
ಹ್ಯುಂಡೈ ಐ20 ಕಾರ್ ಇನ್ಶೂರೆನ್ಸ್ ರಿನೀವಲ್ ಬೆಲೆ
ರಿಜಿಸ್ಟ್ರೇಷನ್ ದಿನಾಂಕ | ಪ್ರೀಮಿಯಂ (ಕಾಂಪ್ರೆಹೆನ್ಸಿವ್ ಪಾಲಿಸಿಗೆ ಮಾತ್ರ) |
---|---|
ಆಗಸ್ಟ್-2018 | 6,742 |
ಆಗಸ್ಟ್-2017 | 6,245 |
ಆಗಸ್ಟ್-2016 | 5,739 |
**ಡಿಸ್‌ಕ್ಲೈಮರ್ - ಹ್ಯುಂಡೈ ಐ20 1.2 ಆಸ್ತಾ ಪೆಟ್ರೋಲ್‌ಗೆ ಮಾಡಿದ ಪ್ರೀಮಿಯಂ ಕ್ಯಾಲ್ಕುಲೇಷನ್ 1197. ಜಿಎಸ್‌ಟಿ ಹೊರತುಪಡಿಸಲಾಗಿದೆ.
ನಗರ - ಮುಂಬೈ, ವೆಹಿಕಲ್ ರಿಜಿಸ್ಟ್ರೇಷನ್ ತಿಂಗಳು - ಆಗಸ್ಟ್, ಎನ್‌ಸಿಬಿ- 50%, ಆ್ಯಡ್-ಆನ್‌ಗಳು ಇಲ್ಲ ಮತ್ತು ಕಡಿಮೆ ಐಡಿವಿ ಲಭ್ಯವಿದೆ. ಆಗಸ್ಟ್-2020ರಲ್ಲಿ ನಡೆಸಿದ ಪ್ರೀಮಿಯಂ ಕ್ಯಾಲ್ಕುಲೇಷನ್. ದಯವಿಟ್ಟು ಮೇಲೆ ನಿಮ್ಮ ವೆಹಿಕಲ್‌ನ ಮಾಹಿತಿಗಳನ್ನು ತುಂಬುವುದರ ಮೂಲಕ ಅಂತಿಮ ಪ್ರೀಮಿಯಂ ಚೆಕ್ ಮಾಡಿ.
ಹ್ಯುಂಡೈ ಐ20 ಕಾರ್ ಇನ್ಶೂರೆನ್ಸ್‌ನಲ್ಲಿ ಏನೆಲ್ಲಾ ಕವರ್ ಆಗುತ್ತದೆ
ಡಿಜಿಟ್‌ನ ಹ್ಯುಂಡೈ ಐ20 ಕಾರ್ ಇನ್ಶೂರೆನ್ಸ್ ಅನ್ನು ನೀವು ಯಾಕೆ ಖರೀದಿಸಬೇಕು?
ಹ್ಯುಂಡೈ ಐ20 ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು
ಥರ್ಡ್-ಪಾರ್ಟಿ | ಕಾಂಪ್ರೆಹೆನ್ಸಿವ್ |
ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು |
|
ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು |
|
ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು |
|
ಥರ್ಡ್-ಪಾರ್ಟಿ ವೆಹಿಕಲ್‌ಗೆ ಉಂಟಾದ ಡ್ಯಾಮೇಜ್‌ಗಳು |
|
ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್‌ಗಳು |
|
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ |
|
ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ |
|
ನಿಮ್ಮ ಕಾರಿನ ಕಳ್ಳತನ |
|
ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
|
ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ |
|
ಕಸ್ಟಮೈಸ್ಡ್ ಆ್ಯಡ್-ಆನ್‌ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್ |
|
Get Quote | Get Quote |
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ
ಕ್ಲೈಮ್ ಫೈಲ್ ಮಾಡುವುದು ಹೇಗೆ?
ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!
ಹಂತ 1
1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್‌ಗಳನ್ನೂ ತುಂಬಬೇಕಾಗಿಲ್ಲ
ಹಂತ 2
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೇ ನಿಮ್ಮ ವೆಹಿಕಲ್‌ನ ಡ್ಯಾಮೇಜ್‌ಗಳನ್ನು ತಿಳಿಸಿರಿ.
ಹಂತ 3
ನಮ್ಮ ನೆಟ್‌ವರ್ಕ್ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ಅಥವಾ ರಿಇಂಬರ್ಸ್‌ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.
ಹ್ಯುಂಡೈ ಐ20 ಇನ್ಶೂರೆನ್ಸ್‌ಗೆ ಡಿಜಿಟ್ ಅನ್ನು ಆರಿಸಿಕೊಳ್ಳಲು ಇರುವ ಕಾರಣಗಳು
ಹ್ಯುಂಡೈ ಐ20 ಇನ್ಶೂರೆನ್ಸ್ ಪಾಲಿಸಿಗಳನ್ನು ಒದಗಿಸುವ ಅನೇಕ ಹೋಸ್ಟ್‌ಗಳು ಮಾರುಕಟ್ಟೆಯಲ್ಲಿ ಇದ್ದಾರೆ, ನೀವು ನಿಮಗೆ ಆದರ್ಶಪ್ರಾಯವಾದ ಇನ್ಶೂರೆನ್ಸ್ ಕಂಪನಿ ಯಾವುದು ಎಂಬುದನ್ನು ತಿಳಿಯಲು ಸ್ವಲ್ಪ ಸಮಯ ಖರ್ಚು ಮಾಡಬೇಕು.
ಯಾಕೆಂದರೆ ಇದು ಅನಿರೀಕ್ಷಿತ ಘಟನೆಗಳ ಸಂದರ್ಭದಲ್ಲಿ ಆರ್ಥಿಕ ರಕ್ಷಣೆ ಒದಗಿಸುವ ವಿಚಾರ ಮಾತ್ರವೇ ಇಲ್ಲ, ನಿಮ್ಮ ಇನ್ಶೂರೆನ್ಸ್ ಕಂಪನಿ ಒದಗಿಸುವಂತಹ ಬದುಕನ್ನು ಸುಲಭಗೊಳಿಸುವ ಅನುಕೂಲಗಳ ಕುರಿತೂ ಆಗಿದೆ.
ಆ ನಿಟ್ಟಿನಲ್ಲಿ, ನೀವು ಹೊಸ ಇನ್ಶೂರೆನ್ಸ್ ಪಾಲಿಸು ಖರೀದಿಗೆ ಅಥವಾ ಐ20 ಇನ್ಶೂರೆನ್ಸ್ ರಿನೀವಲ್‌ಗೆ ಎದುರು ನೋಡುತ್ತಿದ್ದರೆ ಡಿಜಿಟ್ ನಿಸ್ಸಂದೇಹವಾಗಿ ಪ್ರಬಲ ಅಭ್ಯರ್ಥಿ.
ಅದು ಯಾಕೆ ಎಂದು ಈಗ ಗಮನಿಸೋಣ.
- ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಪ್ರಕ್ರಿಯೆ - ಕ್ಲೈಮ್‌ಗಳನ್ನು ರೈಸ್ ಮಾಡುವ ನಮ್ಮ ಸಂಪೂರ್ಣ ಪ್ರೊಸೀಜರ್ ಅನ್ನು ಡಿಜಿಟೈಸ್ ಮಾಡಲಾಗಿದೆ. ನಮ್ಮೊಂದಿಗೆ, ನೀವು ನಿಮ್ಮ ಕ್ಲೈಮ್ ವ್ಯಾಲಿಡೇಟ್ ಮಾಡುವ ಸಂದರ್ಭದಲ್ಲಿ ವ್ಯಕ್ತಿಗತ ತಪಾಸಣೆ ಮತ್ತು ವೆರಿಫಿಕೇಷನ್‌ನಂತಹ ಸಮಯ ತಿನ್ನುವ ಮತ್ತು ತೊಂದರೆಯುಂಟು ಮಾಡುವ ಪ್ರೊಸೆಸ್‌ಗಳನ್ನು ಹಾದು ಹೋಗಬೇಕಾಗಿಲ್ಲ. ನೀವು ನಿಮ್ಮ ಐ20 ವೆಹಿಕಲ್‌ನ ಡ್ಯಾಮೇಜ್‌ಗಾಗಿ ಸರಳವಾಗಿ ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸ್ವ-ತಪಾಸಣೆಯನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಅಲ್ಲಿಂದ ಮುಂದೆ ನಮ್ಮ ತಂಡ ರಿವ್ಯೂ ಮಾಡುತ್ತದೆ. ಸರಳವಾಗಿದೆ, ಅಲ್ಲವೇ?
- ಫಾಸ್ಟ್ ಕ್ಲೈಮ್ ಸೆಟಲ್‌ಮೆಂಟ್ - ರೆಡ್ ಟೇಪ್‌ಗಳಿಲ್ಲದೆ, ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಕ್ಲೈಮ್‌ಗಳನ್ನು ಸೆಟಲ್ ಮಾಡುವುದು ವಿಶ್ವಾಸಾರ್ಹ ಇನ್ಶೂರೆನ್ಸ್ ಕಂಪನಿಯ ಹಾಲ್‌ಮಾರ್ಕ್ ಆಗಿದೆ. ಮತ್ತು ನಾವು ಅದೇ ಥರ ಕೆಲಸ ಮಾಡುತ್ತೇವೆ! ಜೊತೆಗೆ, ಶೀಘ್ರದಲ್ಲಿಯೇ ಕ್ಲೈಮ್‌ಗಳನ್ನು ಸೆಟಲ್ ಮಾಡಲು ಯತ್ನಿಸುವುದಷ್ಟೇ ಅಲ್ಲ, ಅತಿ ಹೆಚ್ಚು ಸೆಟಲ್‌ಮೆಂಟ್ ರೇಶಿಯೋ ಹೊಂದಿರುವ ಹೆಗ್ಗಳಿಕೆ ಹೊಂದಿದ್ದೇವೆ. ಆದ್ದರಿಂದ, ನ್ಯಾಯವಲ್ಲದ ಕಾರಣಗಳಿಂದ ನಿಮ್ಮ ಐ20 ಇನ್ಶೂರೆನ್ಸ್ ಪಾಲಿಸಿಯ ಕ್ಲೈಮ್‌ಗಳನ್ನು ನಾವು ತಿರಸ್ಕರಿಸುವುದಿಲ್ಲ ಎಂದು ನೀವು ನಂಬಬಹುದು. ಹೊಸತಾದ ಖರ್ಚುವೆಚ್ಚಗಳ ಆರ್ಥಿಕ ಮತ್ತು ಮಾನಸಿಕ ಒತ್ತಡವನ್ನು ನಾವು ಅರ್ಥ ಮಾಡಿಕೊಳ್ಳಬಲ್ಲವು ಮತ್ತು ಅಂಥಾ ಸಂದರ್ಭಗಳನ್ನು ಸಾಧ್ಯವಾದಷ್ಟು ಬೇಗ ತಗ್ಗಿಸಲು ಬೇಕಾದ ಯಾವುದೇ ಪ್ರಯತ್ನ ಮಾಡಲು ಹಿಂಜರಿಯುವುದಿಲ್ಲ.
- ನಿಮ್ಮ ವೆಹಿಕಲ್‌ನ ಐಡಿವಿ(IDV) ಕಸ್ಟಮೈಸ್ ಮಾಡಿ - ನಿಮ್ಮ ಐ20 ಇನ್ಶೂರೆನ್ಸ್ ಪಾಲಿಸಿಯಲ್ಲಿ ನಾವು ನಮ್ಮ ಸ್ಟಾಂಡರ್ಡ್ ಕ್ಯಾಲ್ಕುಲೇಷನ್ ಮೂಲಕ ಒದಗಿಸುವುದರ ವಿರುದ್ಧವಾಗಿ ಹೆಚ್ಚಿನ ಐಡಿವಿ ಅಮೌಂಟ್ ಗಳಿಸಲು ನೀವು ಬಯಸಬಹುದು. ಸಾಮಾನ್ಯವಾಗಿ, ನಾವು ಐಡಿವಿ ಕ್ಯಾಲ್ಕ್ಯುಲೇಟ್ ಮಾಡಲು ಎಕ್ಸ್-ಶೋರೂಮ್ ಪಟ್ಟಿ ಮಾಡಲಾದ ಬೆಲೆಯಿಂದ ಅನ್ವಯವಾಗುವ ಡೆಪ್ರಿಸಿಯೇಷನ್ ಅನ್ನು ಹೊರತೆಗೆಯುತ್ತೇವೆ. ಆದರೆ, ಐ20 ಇನ್ಶೂರೆನ್ಸ್ ಬೆಲೆಯಲ್ಲಿ ಕೊಂಚ ಹೆಚ್ಚುಗೊಳಿಸುವುದರ ಮೂಲಕ ನೀವದನ್ನು ಕಸ್ಟಮೈಸ್ ಮಾಡಬಹುದು. ಆ ಮಾರ್ಗದಲ್ಲಿ, ನಿಮ್ಮ ವೆಹಿಕಲ್ ರಿಪೇರಿಯಾಗದಷ್ಟು ಡ್ಯಾಮೇಜ್ ಆದಾಗ ಅಥವಾ ಕಳ್ಳತನವಾದಾಗ ಅತಿ ಹೆಚ್ಚು ಪರಿಹಾರ ಪಡೆಯುವುದಕ್ಕಾಗಿ ನಿಮ್ಮ ಪ್ರಯೋಜನಗಳನ್ನು ಆಪ್ಟಿಮೈಸ್ ಮಾಡಬಹುದು.
- ಆ್ಯಡ್-ಆನ್‌ಗಳ ವೈವಿಧ್ಯ - ಐಡಿವಿಯನ್ನು ನಿಮ್ಮ ಪ್ರಯೋಜನಕ್ಕಾಗಿ ಆಪ್ಟಿಮೈಸ್ ಮಾಡುವುದಷ್ಟೇ ಅಲ್ಲ, ಹ್ಯುಂಡೈ ಐ20ಗೆ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ನೀವು ಪಡೆಯುವ ಕವರೇಜ್ ಕೂಡ. ನಾವು ಆ್ಯಡ್-ಆನ್‌ಗಳ ಆತಿಥ್ಯ ಒದಗಿಸುತ್ತೇವೆ, ಅದು ಓಟ್-ಆ್ಯಂಡ್-ಔಟ್ ಕವರೇಜ್ ಒದಗಿಸಲು ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ರೌಂಡ್ ಅಪ್ ಮಾಡಬಹುದು. ನೀವು ಹ್ಯುಂಡೈ ಐ20 ಇನ್ಶೂರೆನ್ಸ್ ಬೆಲೆಯನ್ನು ಕೊಂಚ ಹೆಚ್ಚಿಸುವ ಮೂಲಕ ಝೀರೋ ಡೆಪ್ರಿಸಿಯೇಷನ್ ಕವರ್, ಬ್ರೇಕ್‌ಡೌನ್ ಅಸಿಸ್ಟೆನ್ಸ್, ರಿಟರ್ನ್ ಟು ಇನ್‌ವಾಯ್ಸ್ ಕವರ್, ಟೈರ್ ಪ್ರೊಟೆಕ್ಷನ್ ಕವರ್ ಇತ್ಯಾದಿ ಆ್ಯಡ್-ಆನ್‌ಗಳನ್ನು ಒಳಗೊಳ್ಳಬಹುದು.
- 24x7 ನೆರವು - ಯಾವುದೇ ಸಮಯದಲ್ಲಿ ತುರ್ತು ಪರಿಸ್ಥಿತಿ ಎದುರಾಗಬಹುದಾದ್ದರಿಂದ ನಮ್ಮ ಕಸ್ಟಮರ್ ಅಸಿಸ್ಟೆನ್ಸ್ ತಂಡ ಹಗಲಿರುಳು ಲಭ್ಯರಿರುತ್ತಾರೆ. ವಾರದ ದಿನಗಳ ಮಧ್ಯರಾತ್ರಿ ಇರಲಿ, ವಾರಾಂತ್ಯದ ಮಧ್ಯಾಹ್ನವೇ ಇರಲಿ ಅಥವಾ ರಾಷ್ಟ್ರೀಯ ರಜಾದಿನವೇ ಇರಲಿ ನಮ್ಮ ಹ್ಯುಂಡೈ ಐ20 ಇನ್ಶೂರೆನ್ಸ್ ಪಾಲಿಸಿ ಸಂಬಂಧಿಸಿದಂತೆ ನಿಮಗೆ ಯಾವುದೇ ಸಮಸ್ಯೆ ಇದ್ದರೆ ಅಥವಾ ಪ್ರಶ್ನೆಗಳಿದ್ದರೆ ನೀವು ನಮ್ಮನ್ನು ಸಂಪರ್ಕಿಸಬಹುದು.
- ವ್ಯಾಪಕ ಸಂಖ್ಯೆಯ ನೆಟ್‌ವರ್ಕ್ ಗ್ಯಾರೇಜ್‌ಗಳು - ಅಪಘಾತದ ಡ್ಯಾಮೇಜ್ ಉಂಟಾದಾಗ ನಿಮ್ಮ ಐ20ಯನ್ನು ಯಾಕೆ ರಿಪೇರಿ ಮಾಡಿಲ್ಲ ಎಂಬುದಕ್ಕೆ ನಿಮ್ಮಲ್ಲಿನ ಕ್ಯಾಶ್‌ನ ಅಲಭ್ಯತೆಯು ಕಾರಣವಾಗಬಾರದು. ಅದೃಷ್ಟವಶಾತ್, ನಮ್ಮ ಇನ್ಶೂರೆನ್ಸ್ ಪಾಲಿಸಿ ಇದ್ದ ಸಂದರ್ಭದಲ್ಲಿ ಕ್ಯಾಶ್‌ನ ಅಲಭ್ಯತೆಯು ತೊಡಕಾಗುವುವುದಿಲ್ಲ. ಐ20 ಕಾರ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ, ಪ್ಯಾನ್-ಇಂಡಿಯಾದಲ್ಲಿ ನಿಮಗೆ ಆ್ಯಕ್ಸೆಸ್ ಲಭ್ಯವಿರುವ 1400ಕ್ಕೂ ಹೆಚ್ಚು ನೆಟ್‌ವರ್ಕ್ ಗ್ಯಾರೇಜ್‌ಗಳಿವೆ, ಅಲ್ಲಿ ನೀವು ಕ್ಯಾಶ್‌ಲೆಸ್ ರಿಪೇರಿಗಳನ್ನು ಮಾಡಬಹುದು.
- ಡೋರ್ ಪಿಕಪ್ ಮತ್ತು ಡ್ರಾಪ್ ಸರ್ವೀಸ್ - ಕೆಲವು ಅಪಘಾತದ ಡ್ಯಾಮೇಜ್‌ಗಳಿಂದ ನಿಮ್ಮ ಐ20ಯನ್ನು ರಿಪೇರಿಗೆ ಕೊಂಡೊಯ್ಯುವುದು ಬಹುದೊಡ್ಡ ಸವಾಲಾಗಬಹುದು. ಅದೇ ಕಾರಣಕ್ಕೆ, ನೀವು ನಮ್ಮ ಹ್ಯುಂಡೈ ಐ20 ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ನಮ್ಮ ನೆಟ್‌ವರ್ಕ್ ಗ್ಯಾರೇಜ್‌ಗಳಲ್ಲಿ ರಿಪೇರಿ ಮಾಡಲು ಬಯಸಿದರೆ ನಿಮ್ಮ ಐ20ಗೆ ನಾವು ಡೋರ್‌ಸ್ಟೆಪ್ ಪಿಕಪ್, ರಿಪೇರಿ ಮತ್ತು ಡ್ರಾಪ್ ಸರ್ವೀಸ್ ಒದಗಿಸುತ್ತೇವೆ. ಅದಕ್ಕಿಂತ ಹೆಚ್ಚಾಗಿ, ನಮ್ಮ ನೆಟ್‌ವರ್ಕ್ ಗ್ಯಾರೇಜ್‌ಗಳಲ್ಲಿ ಒಂದರಲ್ಲಿ ರಿಪೇರಿ ಕೆಲಸ ಮಾಡಿಸಿದರೆ ನಾವು 6 ತಿಂಗಳ ವಾರಂಟಿಯನ್ನೂ ಒದಗಿಸುತ್ತೇವೆ.
ಹ್ಯುಂಡೈ ಐ20ಯ ಕಾರ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಕೈಗೆಟಕುವ ಪ್ರೀಮಿಯಂಗೆ ವಿರುದ್ಧವಾಗಿ ನಾವು ಈ ಪ್ರಯೋಜನಗಳನ್ನು ಮತ್ತು ಅದಕ್ಕಿಂತ ಹೆಚ್ಚಿನದನ್ನು ಒದಗಿಸುತ್ತೇವೆ.
ಆದಾಗ್ಯೂ, ನಮ್ಮ ಇನ್ಶೂರೆನ್ಸ್‌ನ ಪ್ರಯೋಜನಗಳನ್ನು ಗರಿಷ್ಠಗೊಳಿಸಲು, ಮುಂಚಿತವಾಗಿಯೇ ಕವರೇಜ್‌ನ ಸಂಪೂರ್ಣ ವ್ಯಾಪ್ತಿಯನ್ನು ಚೆಕ್ ಮಾಡಲು ಮರೆಯದಿರಿ.
ಹ್ಯುಂಡೈ ಐ20 ಕಾರ್ ಇನ್ಶೂರೆನ್ಸ್ ಖರೀದಿಸುವುದು ಯಾಕೆ ಮುಖ್ಯ?
ಬಿಕ್ಕಟ್ಟಿನ ಸಂದರ್ಭಗಳಲ್ಲಿ ಇನ್ಶೂರೆನ್ಸ್ ನಿಮ್ಮನ್ನು ಆರ್ಥಿಕವಾಗಿ ಸುರಕ್ಷಿತವಾಗಿ ಇರಿಸುತ್ತದೆ. ಇದು ಇನ್ಶೂರರ್ ಎಂಬ ಥರ್ಡ್ ಪಾರ್ಟಿಗೆ ನಿಮ್ಮ ರಿಸ್ಕ್‌ನ ವರ್ಗಾವಣೆಯಿಸಲು ಸೂಚಿಸುತ್ತದೆ. ಕಾರಿಗೆ ಇನ್ಶೂರೆನ್ಸ್ ಪಾಲಿಸಿ ಖರೀದಿಸುವುದು ಮುಖ್ಯ, ಯಾಕೆಂದರೆ ಅದು:
ಕಾನೂನುಬದ್ಧವಾಗಿ ಡ್ರೈವ್ ಮಾಡಲು ಅನುಮತಿಸುತ್ತದೆ : ಕಾರ್ ಇನ್ಶೂರೆನ್ಸ್ ಪಾಲಿಸಿ ಕಾನೂನುಬದ್ಧವಾಗಿ ರಸ್ತೆಯಲ್ಲಿ ಡ್ರೈವ್ ಮಾಡಲು ಪರ್ಮಿಟ್ ಅಥವಾ ಲೀಗಲ್ ಡಾಕ್ಯುಮೆಂಟ್ ಆಗಿರುತ್ತದೆ. ಟ್ರಾಫಿಕ್ ನಿಯಮಗಳ ಪ್ರಕಾರ ಭಾರತದಲ್ಲಿ ಇದು ಕಂಪ್ಲಯನ್ಸ್ ಆಗಿದೆ, ಅದಿಲ್ಲದಿದ್ದರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಕ್ಯಾನ್ಸಲ್ ಆಗಬಹುದು. ಮೋಟಾರ್ ವೆಹಿಕಲ್ ಆ್ಯಕ್ಟ್ ಹೊಸ ತಿದ್ದುಪಡಿ ಪ್ರಕಾರ, ಕನಿಷ್ಠ ಇನ್ಶೂರೆನ್ಸ್ ಪಡೆಯದೆ ಡ್ರೈವಿಂಗ್ ಮಾಡುವ ಅಪರಾಧ ಮಾಡುವವರಿಗೆ ಭಾರಿ ದಂಡ ಹೇರಲಾಗುತ್ತದೆ.
ಥರ್ಡ್-ಪಾರ್ಟಿ ಲಯಬಿಲಿಟಿಯಿಂದ ನಿಮ್ಮ ರಕ್ಷಣೆ : ನೀವು ರಸ್ತೆಯಲ್ಲಿ ಡ್ರೈವ್ ಮಾಡುತ್ತಿರುವಾಗ ಆಕಸ್ಮಿಕವಾಗಿ ಥರ್ಡ್ ಪಾರ್ಟಿಗೆ ಹೊಡೆಯುವುದು ನಿಮಗೆ ತೊಂದರೆಯನ್ನುಂಟು ಮಾಡಬಹುದು. ಅವರ ದೈಹಿಕ ಗಾಯಗಳಿಗೆ ಅಥವಾ ಪ್ರಾಪರ್ಟಿ ಡ್ಯಾಮೇಜ್‌ಗೆ ನಿಮ್ಮನ್ನು ಹೊಣೆಗಾರರನ್ನಾಗಿ ಪರಿಗಣಿಸಲ್ಪಟ್ಟಾಗ ಅಂಥಾ ನಷ್ಟಗಳಿಗೆ ನೀವು ಪಾವತಿ ಮಾಡಬೇಕಾಗುತ್ತದೆ. ನಷ್ಟದ ಅಮೌಂಟ್ ಪಾವತಿ ಮಾಡುವ ನಿಮ್ಮ ಸಾಮರ್ಥ್ಯಕ್ಕಿಂತ ಮೀರಿದ್ದು ಆಗಿರಬಹುದು. ಅಂಥಾ ಸಂದರ್ಭಗಳಲ್ಲಿ ಇನ್ಶೂರರ್ ಭಾರಿ ನೆರವು ಒದಗಿಸಬಹುದು.
ಅನಗತ್ಯ ಆರ್ಥಿಕ ಹೊರೆಯಿಂದ ನಿಮ್ಮನ್ನು ರಕ್ಷಿಸುತ್ತದೆ : ಅಪಘಾತ ಅಥವಾ ಕಳ್ಳತನ ಸಂದರ್ಭಗಳಲ್ಲಿ ನಿಮ್ಮ ಕಾರಿಗೆ ಉಂಟಾಗಬಹುದಾದ ಯಾವುದೇ ನಷ್ಟ. ಅಫಘಾತದ ನಂತರದ ರಿಪೇರಿ ವೆಚ್ಚವು ಭಾರಿ ಆಗಿರಬಹುದು, ಅದನ್ನು ಭರಿಸುವುದು ನಿಮ್ಮಿಂದ ಸಾಧ್ಯವಾಗದಿರಬಹುದು. ಮತ್ತು ಒಂದು ವೇಳೆ ಕಾರು ಹೊಸದಾಗಿದ್ದರೆ, ಹಳೇ ಕಾರುಗಳಿಗೆ ಹೋಲಿಸಿದರೆ ರಿಪೇರಿ ವೆಚ್ಚಗಳು ತುಂಬಾ ಹೆಚ್ಚಿರುತ್ತದೆ.
ಈ ವೆಚ್ಚಗಳನ್ನು ನೋಡಿಕೊಳ್ಳಲು ನೀವು ಇನ್ಶೂರರ್‌ಗೆ ಮನವಿ ಮಾಡಬಹುದು. ಅವರು ಕ್ಯಾಶ್‌ಲೆಸ್ ರಿಪೇರಿ ವ್ಯವಸ್ಥೆ ಮಾಡುತ್ತಾರೆ ಅಥವಾ ನಂತರ ಅಮೌಂಟ್ ಅನ್ನು ನಿಮಗೆ ರಿಇಂಬರ್ಸ್ ಮಾಡುತ್ತಾರೆ. ಮತ್ತೊಂದು ಸಂದರ್ಭದಲ್ಲಿ, ಒಂದು ವೇಳೆ ನಿಮ್ಮ ವೆಹಿಕಲ್ ಕಳ್ಳತನವಾದರೆ ಇನ್‌ವಾಯ್ಸ್‌ನಲ್ಲಿರುವ ಒಟ್ಟು ಬೆಲೆಯನ್ನು ಇನ್ಶೂರೆನ್ಸ್ ಕಂಪನಿ ರಿಇಂಬರ್ಸ್ ಮಾಡುತ್ತದೆ.
ಓನ್ ಡ್ಯಾಮೇಜ್ ಕಾರ್ ಇನ್ಶೂರೆನ್ಸ್ ಕುರಿತು ಇನ್ನಷ್ಟು ತಿಳಿಯಿರಿ.
ಬೇಸಿಕ್ ಕಾರ್ ಕವರ್ ಹಿರಿದಾಗಿಸಲು ಅನುಮತಿಸುತ್ತದೆ : ಭಾರತದಲ್ಲಿ ಕಾರ್ ಇನ್ಶೂರೆನ್ಸ್ ಎರಡು ವಿಧಗಳಲ್ಲಿ ಲಭ್ಯವಿದೆ, ಒಂದು ಕಾಂಪ್ರೆಹೆನ್ಸಿವ್ ಕವರ್ ಮತ್ತು ಎರಡನೆಯದು ಥರ್ಡ್-ಪಾರ್ಟಿ ಲಯಬಿಲಿಟಿ ಪಾಲಿಸಿ. ಒಂದು ವೇಳೆ ನೀವು ಕಾಂಪ್ರೆಹೆನ್ಸಿವ್ ಅನ್ನು ಪಡೆದರೆ, ಬ್ರೇಕ್‌ಡೌನ್ ಅಸಿಸ್ಟೆನ್ಸ್, ಎಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್, ಟೈರ್ ಪ್ರೊಟೆಕ್ಟಿವ್ ಕವರ್, ಮತ್ತು ಝೀರೋ-ಡೆಪ್ ಕವರ್ಮುಂತಾದ ಕಾರ್ ಇನ್ಶೂರೆನ್ಸ್ ಆ್ಯಡ್-ಆನ್‌ಗಳು ಹೊಂದಬಹುದು.
ಹ್ಯುಂಡೈ ಐ20 ಕುರಿತು ಇನ್ನಷ್ಟು ತಿಳಿಯಿರಿ
ಬೋಲ್ಡ್ ಲುಕ್ ಹೊಂದಿರುವ ಸೂಪರ್‌ಮಿನಿ ಕಾರ್ ಅಥವಾ ಕಾಂಪಾಕ್ಟ್ ಎಸ್‌ಯುವಿ, ಹೀಗೆ ಏನು ಬೇಕಾದರೂ ಹೆಸರಿಸಿ, ಹ್ಯುಂಡೈ ಐ20 ಮಾರುಕಟ್ಟೆಗೆ ಆಗಮಿಸಿದಾಗಿನಿಂದಲೂ ಜನರ ಹೃದಯವನ್ನು ಸೆರೆ ಹಿಡಿದಿದೆ. ಕೊಂಚ ವಿಶಾಲವಾದ ಸ್ಪೇಸ್ ಹೊಂದಿರುವ ಈ ಹ್ಯಾಚ್‌ಬ್ಯಾಕ್ ಅದೇ ಸೆಗ್‌ಮೆಂಟಿನ ಬೇರೆ ಕಾರುಗಳಿಗೆ ಕಠಿಣ ಸ್ಪರ್ಧೆಯನ್ನು ಒಡ್ಡಿದೆ. ಭಾರತದಲ್ಲಿ ಮೊದಲು ಬಿಡುಗಡೆಯಾದ ನಂತರ ದಶಕದ ಬಳಿಕವೂ ಜನರ ಆಯ್ಕೆಯ ಪ್ರಕಾರವೇ ಹ್ಯುಂಡೈ ಐ20 ರೂಪುಗೊಂಡಿದೆ. ಮತ್ತು ಕ್ರಮೇಣ ಅದರ ರಿಇನ್‌ವೆನ್ಷನ್‌ನೊಂದಿಗೆ ಹ್ಯುಂಡೈ ಎಲೈಟ್ ಐ20ಯನ್ನು ಬಿಡುಗಡೆ ಮಾಡಿದೆ.
ಈ ಕಾರಿನ ಬೆಲೆ ಸರಣಿ ರೂ.5.35 ಲಕ್ಷ ಮತ್ತು ರೂ.9.15 ಲಕ್ಷ ಮಧ್ಯದಲ್ಲಿ ಇದೆ. ಸ್ಟ್ರಾಂಗ್ ಪರ್‌ಫಾರ್ಮೆನ್ಸ್ ಇರುವ ಹ್ಯುಂಡೈ ಎಲೈಟ್ ಐ20 6-ಸ್ಪೀಡ್ ಮ್ಯಾನ್ಯುವಲ್ ಮತ್ತು ಅಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಗೇರ್‌ಬಾಕ್ಸ್ ಹೊಂದಿದೆ. ಪ್ರತೀ ಲೀಟರಿಗೆ 17 ಕಿಮೀ ನಿಂದ ಪ್ರತೀ ಲೀಟರಿಗೆ 22ಕಿಮೀವರೆಗಿನ ಆ್ಯವರೇಜ್ ಮೈಲೇಜನ್ನು ಕಾರು ಒದಗಿಸುತ್ತದೆ. ಈ ಅಂಶಗಳ ಹೊರತಾಗಿ ನಾವು ಹ್ಯುಂಡೈ ಎಲೈಟ್ ಐ20 ಕುರಿತು ಇನ್ನಷ್ಟು ತಿಳಿಯೋಣ.
ನೀವು ಯಾಕೆ ಹ್ಯುಂಡೈ ಐ20 ಖರೀದಿಸಬೇಕು?
ಹ್ಯುಂಡೈ ಐ20 ಹೊಸ ಮಾಡೆಲ್‌ಗಳು ಎಲೈಟ್ ಹೆಸರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಫ್ಯುಯಲ್ ವಿಧಗಳಲ್ಲಿ ಬರುತ್ತವೆ. ಎರಾ, ಮ್ಯಾಗ್ನಾ, ಎಕ್ಸಿಕ್ಯುಟಿವ್, ಸ್ಪೋರ್ಟ್ಸ್, ಆಸ್ತಾ ಮತ್ತು ಆಸ್ತಾ ಆಪ್ಷನ್ ಒಳಗೊಂಡಂತೆ ಹ್ಯುಂಡೈ ಎಲೈಟ್ ಐ20 ಐದು ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಟಾಪ್-ಸ್ಪೆಸಿಫಿಕೇಷನ್ ಹೊಂದಿರುವ ಈ ಮಾಡೆಲ್‌ಗಳು ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ಒಟ್ಟು ಆರು ಏರ್‌ಬ್ಯಾಗ್‌ಗಳನ್ನು ಒದಗಿಸುತ್ತವೆ.
ನೀವು ಐಎಸ್‌ಓಎಫ್‌ಐಎಕ್ಸ್(ISOFIX) ಚೈಲ್ಡ್ ಸೀಟ್ ಮೌಂಟಿಂಗ್ ಪಾಯಿಂಟ್‌ಗಳು, ಎಬಿಎಸ್, ಕಪ್ ಹೋಲ್ಡರ್‌ಗಳ ಜೊತೆ ಫ್ರಂಟ್ ಮತ್ತು ರೇರ್ ಆರ್ಮ್ ರೆಸ್ಟ್‌ಗಳನ್ನೂ ಪಡೆಯುತ್ತೀರಿ. ಕ್ರಿಸ್ಪ್ ಆದ ಒಳಾಂಗಣ ಅಪೀಯರೆನ್ಸ್, ಹ್ಯುಂಡೈ ಎಲೈಟ್ ಐ20ನಲ್ಲಿ ಆ್ಯಪಲ್ ಕಾರ್‌ಪ್ಲೇ ಮತ್ತು ಆ್ಯಂಡ್ರಾಯ್ಡ್ ಆಟೋಗೆ ಹೊಂದಿಕೊಳ್ಳುವ 7 ಇಂಚಿನ ಇನ್‌ಫೋಟೈನ್‌ಮೆಂಟ್ ಇದೆ.
ಹೊರಗಡೆ ಗ್ರಿಲ್‌ಗಳು, ಎಲ್‌ಇಡಿ ಟೈಲ್ ಲ್ಯಾಂಪ್‌ಗಳು ಮತ್ತು ಫಾಗ್ ಲ್ಯಾಂಪ್‌ಗಳಿಂದ ನೀವು ಸ್ಟ್ರಾಂಗ್ ಲುಕ್ ಪಡೆಯುತ್ತೀರಿ. ಒಟ್ಟಾರೆಯಾಗಿ, ಅದೇ ಸೆಗ್‌ಮೆಂಟ್‌ನಲ್ಲಿ ದೊರಕುವ ಇತರ ಕಾರುಗಳಿಗೆ ಹೋಲಿಸಿದರೆ ಹ್ಯುಂಡೈ ಎಲೈಟ್ ಐ20 ಉತ್ತಮ ಆಯ್ಕೆಯಾಗಿದೆ.
ಈ ಹಾಟ್ ಹ್ಯಾಚ್‌ಬ್ಯಾಕ್ ಯಂಗ್ ಅರ್ಬನ್ ಆಡಿಯನ್ಸ್‌ನ ಗಮನ ಸೆಳೆಯುತ್ತದೆ. ಮತ್ತು ಇದು ಅದ್ಭುತ ಫ್ಯಾಮಿಲಿ ಕಾರ್ ಆಗುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ.
ಚೆಕ್ ಮಾಡಿ : ಹ್ಯುಂಡೈ ಕಾರ್ ಇನ್ಶೂರೆನ್ಸ್ ಕುರಿತು ಇನ್ನಷ್ಟು ತಿಳಿಯಿರಿ
ಹ್ಯುಂಡೈ ಐ20 - ವೇರಿಯಂಟ್‌ಗಳು ಮತ್ತು ಎಕ್ಸ್-ಶೋರೂಮ್ ಬೆಲೆ
ವೇರಿಯಂಟ್‌ಗಳು | ಎಕ್ಸ್-ಶೋರೂಮ್ ಬೆಲೆ (ನಗರಗಳಿಗೆ ತಕ್ಕಂತೆ ಬದಲಾಗಬಹುದು) |
---|---|
ಇಲೈಟ್ i20 ಎರಾ1197 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 18.6 kmpl | ₹ 5.5 ಲಕ್ಷ |
ಇಲೈಟ್ i20 ಮ್ಯಾಗ್ನಾ ಪ್ಲಸ್ 1197 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 18.6 kmpl | ₹ 6.25 ಲಕ್ಷ |
ಇಲೈಟ್ i20 ಎರಾ ಡೀಸೆಲ್ 1396 ಸಿಸಿ, ಮ್ಯಾನ್ಯುವಲ್, ಡೀಸೆಲ್, 22.54 kmpl | ₹ 6.88 ಲಕ್ಷ |
ಇಲೈಟ್ i20 ಸ್ಪೋರ್ಟ್ಸ್ ಪ್ಲಸ್ 1197 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 18.6 kmpl | ₹ 7.12 ಲಕ್ಷ |
ಇಲೈಟ್ i20 ಸ್ಪೋರ್ಟ್ಸ್ ಪ್ಲಸ್ ಡ್ಯುಯಲ್ ಟೋನ್ 1197 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 18.6 kmpl | ₹ 7.42 ಲಕ್ಷ |
ಇಲೈಟ್ i20 ಮ್ಯಾಗ್ನಾ ಪ್ಲಸ್ ಡೀಸೆಲ್ 1396 ಸಿಸಿ, ಮ್ಯಾನ್ಯುವಲ್, ಡೀಸೆಲ್, 22.54 kmpl | ₹ 7.61 ಲಕ್ಷ |
ಇಲೈಟ್ i20 ಆಸ್ತಾ ಆಪ್ಷನ್1197 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 18.6 kmpl | ₹ 8.06 ಲಕ್ಷ |
ಇಲೈಟ್ i20 ಸ್ಪೋರ್ಟ್ಸ್ ಪ್ಲಸ್ CVT1197 ಸಿಸಿ, ಅಟೋಮ್ಯಾಟಿಕ್, ಪೆಟ್ರೋಲ್, 17.4 kmpl | ₹ 8.22 ಲಕ್ಷ |
ಇಲೈಟ್ i20 ಸ್ಪೋರ್ಟ್ಸ್ ಪ್ಲಸ್ ಡೀಸೆಲ್ 1396 ಸಿಸಿ, ಮ್ಯಾನ್ಯುವಲ್, ಡೀಸೆಲ್, 22.54 kmpl | ₹ 8.36 ಲಕ್ಷ |
ಇಲೈಟ್ i20 ಸ್ಪೋರ್ಟ್ಸ್ ಪ್ಲಸ್ ಡ್ಯುಯಲ್ ಟೋನ್ 1396 ಸಿಸಿ, ಮ್ಯಾನ್ಯುವಲ್, ಡೀಸೆಲ್, 22.54 kmpl | ₹ 8.66 ಲಕ್ಷ |
ಇಲೈಟ್ i20 ಆಸ್ತಾ ಆಪ್ಷನ್ CVT1197 ಸಿಸಿ, ಅಟೋಮ್ಯಾಟಿಕ್, ಪೆಟ್ರೋಲ್, 17.4 kmpl | ₹ 9.11 ಲಕ್ಷ |
ಇಲೈಟ್ i20 ಆಸ್ತಾ ಆಪ್ಷನ್ ಡೀಸೆಲ್ 1396 ಸಿಸಿ, ಮ್ಯಾನ್ಯುವಲ್, ಡೀಸೆಲ್, 22.54 kmpl | ₹ 9.31 ಲಕ್ಷ |
ಭಾರತದಲ್ಲಿ ಹ್ಯುಂಡೈ ಐ20 ಕಾರ್ ಇನ್ಶೂರೆನ್ಸ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು
ಡಿಜಿಟ್‌ನಲ್ಲಿ ಹ್ಯುಂಡೈ ಐ20 ಕಾರ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಕ್ಲೈಮ್ ರೈಸ್ ಮಾಡುವುದು ಹೇಗೆ?
ಮೊದಲು, ನೀವು ಸ್ವ-ತಪಾಸಣೆ ಲಿಂಕ್ ಪಡೆಯಲು 1800-258-5956 ನಂಬರಿಗೆ ಅವಶ್ಯವಾಗಿ ಕಾಲ್ ಮಾಡಬೇಕು.
ಅಲ್ಲಿಂದ ಮುಂದೆ, ಸೂಚನೆಗಳನ್ನು ಫಾಲೋ ಮಾಡುತ್ತಾ ನಿಮ್ಮ ಐ20ಯ ಡ್ಯಾಮೇಜ್‌ಗಳ ಫೋಟೋ ಕ್ಲಿಕ್ ಮಾಡಬೇಕು ಮತ್ತು ಅವುಗಳನ್ನು ನಮಗೆ ಕಳುಹಿಸಬೇಕು. ನಮ್ಮ ತಂಡ ಡ್ಯಾಮೇಜ್‌ಗಳನ್ನು ಪರಿಶೀಲಿಸುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ಕ್ಲೈಮ್ ಸೆಟಲ್ ಮಾಡುತ್ತದೆ.
ಐ20 ಇನ್ಶೂರೆನ್ಸ್ ಬೆಲೆಯನ್ನು ನಾನು ಹೇಗೆ ಕಡಿಮೆ ಮಾಡಬಹುದು?
ನಿಮ್ಮ ಐ20 ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂ ಅನ್ನು ಕಡಿಮೆ ಮಾಡುವ ಎಡು ಪರಿಣಾಮಕಾರಿ ಮಾರ್ಗಗಳೆಂದರೆ, ಹೆಚ್ಚಿನ ವಾಲಂಟರಿ ಡಿಡಕ್ಟಿಬಲ್ ಅಮೌಂಟ್ ಮತ್ತು ಎನ್‌ಸಿಬಿಯನ್ನು ಆಯ್ಕೆ ಮಾಡುವುದು.
ಒಂದು ವೇಳೆ ಸತತವಾಗಿ ಐದು ವರ್ಷಗಳ ಕಾಲ ನಿಮ್ಮ ಐ20 ಇನ್ಶೂರೆನ್ಸ್ ಪಾಲಿಸಿ ವಿರುದ್ಧ ನೀವು ಯಾವುದೇ ಕ್ಲೈಮ್ ರೈಸ್ ಮಾಡದೇ ಇದ್ದರೆ, ನಾವು ಓನ್ ಡ್ಯಾಮೇಜ್ ಪ್ರೀಮಿಯಂ ಮೇಲೆ 50% ಎನ್‌ಸಿಬಿ ರಿಯಾಯಿತಿ ಒದಗಿಸುತ್ತೇವೆ. ಹಾಗಾಗಿ, ನೀವು ಕ್ಲೈಮ್ ಫ್ರೀ ವರ್ಷಗಳನ್ನು ಗಳಿಸಲು ಸಣ್ಣ ವೆಚ್ಚಗಳಿಗೆ ಕ್ಲೈಮ್‌ಗಳನ್ನು ರೈಸ್ ಮಾಡುವುದರಿಂದ ದೂರ ಉಳಿದರೆ ಪರಿಣಾಮಕಾರಿಯಾಗಿ ಪ್ರೀಮಿಯಂ ಅನ್ನು ಕಡಿಮೆಗೊಳಿಸಬಹುದು.
ಐ20 ಇನ್ಶೂರೆನ್ಸ್ ಪಾಲಿಸಿಗೆ ಕಂಪಲ್ಸರಿ ಡಿಡಕ್ಟಿಬಲ್ ಅಮೌಂಟ್ ಎಂದರೇನು?
ಐಆರ್‌ಡಿಎಐ ನಿರ್ದೇಶನಗಳ ಪ್ರಕಾರ ಐ20ಯ ಎಂಜಿನ್ ಕ್ಯುಬಿಕ್ ಕೆಪಾಸಿಟಿ 1197ವರೆಗೆ ಇದ್ದರೆ, ಅಂದರೆ 1500ಸಿಸಿಗಿಂತ ಕಡಿಮೆ ಇದ್ದರೆ, ಕಂಪಲ್ಸರಿ ಡಿಡಕ್ಟಿಬಲ್ ಅಮೌಂಟ್ ರೂ.1000 ಆಗಿರುತ್ತದೆ.
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ ಎಂದರೇನು ಮತ್ತು ಅದು ಕಡ್ಡಾಯವೇ?
ಇನ್ಶೂರ್ಡ್ ವೆಹಿಕಲ್ ಒಳಗೊಂಡು ನಡೆದ ಅಪಘಾತದ ಕಾರಣದಿಂದ ಮಾಲೀಕ-ಚಾಲಕ ಗಾಯಕ್ಕೆ ಒಳಗಾದರೆ ಅಥವಾ ಅಂಗವೈಕಲ್ಯ ಉಂಟಾದರೆ ಅಥವಾ ಮರಣ ಸಂಭವಿಸಿದರೆ ಈ ಕವರ್ ಪರಿಹಾರ ಒದಗಿಸುತ್ತದೆ.
2018ರ ಸೆಪ್ಟೆಂಬರ್ ಸಮಯದಲ್ಲಿ, ಐಆರ್‌ಡಿಎಐ ಈ ಕವರ್ ಅಡಿಯಲ್ಲಿ ರೂ.15 ಲಕ್ಷ ಪರಿಹಾರವನ್ನು ನಿಗದಿಗೊಳಿಸಿದೆ. ಜೊತೆಗೆ, ಇಂಡಿಯನ್ ಮೋಟಾರ್ ಟ್ಯಾರಿಫ್ 2002 ಪ್ರಕಾರ, ಕಾಂಪ್ರೆಹೆನ್ಸಿವ್ ಐ20 ಇನ್ಶೂರೆನ್ಸ್ ಪಾಲಿಸಿ ಮತ್ತು ಥರ್ಡ್-ಪಾರ್ಟಿ ಲಯಬಿಲಿಟಿ-ಓನ್ಲಿ ಇನ್ಶೂರೆನ್ಸ್ ಪಾಲಿಸಿ ಈ ಎರಡರಲ್ಲೂ ಪರ್ಸನಲ್ ಆ್ಯಕ್ಸಿಡೆಂಟ್ ಕವರ್ ಕಡ್ಡಾಯವಾಗಿದೆ.
ನನ್ನ ಕಾರಿನ ಮೆಕ್ಯಾನಿಕಲ್ ಬ್ರೇಕ್‌ಡೌನ್ ಆದ ಸಂದರ್ಭದಲ್ಲಿ ಹ್ಯುಂಡೈ ಐ20 ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ನಾನು ಅಸಿಸ್ಟೆನ್ಸ್ ಪಡೆಯಬಹುದೇ?
ಹೌದು, ಒಂದು ವೇಳೆ ಆ ಸಮಯದಲ್ಲಿ ನೀವು ಬ್ರೇಕ್‌ಡೌನ್ ಅಸಿಸ್ಟೆನ್ಸ್ ಆ್ಯಡ್-ಆನ್ ಹೊಂದಿದ್ದರೆ ನಿಮ್ಮ ಐ20ಯ ಇನ್ಶೂರೆನ್ಸ್ ಪಾಲಿಸಿ ವಿರುದ್ಧ ಕಾರ್ ಬ್ರೇಕ್‌ಡೌನ್ ಸಂದರ್ಭದಲ್ಲಿ ನೀವು ಅಸಿಸ್ಟೆನ್ಸ್ ಪಡೆಯಬಹುದು.