ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಇನ್ಶೂರೆನ್ಸ್
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಹ್ಯುಂಡೈನ ಗ್ರ್ಯಾಂಡ್ ಐ10 ನಿಯೋಸ್ ವಿಶ್ವ ದರ್ಜೆಯ ವೈಶಿಷ್ಟ್ಯಗಳನ್ನು ಮತ್ತು ಆಕರ್ಷಕವಾದ ಸೌಂದರ್ಯವನ್ನು ಒಳಗೊಂಡಿರುವ ಸುಲಭ ಚಾಲನೆಯ ಅರ್ಬನ್ ಹ್ಯಾಚ್ಬ್ಯಾಕ್ ಆಗಿದೆ. ಇದು ಹಿಂದಿನ ಗ್ರ್ಯಾಂಡ್ ಐ10 ಮಾಡೆಲ್ ಗಳ ಸಾಮರ್ಥ್ಯದ ಆಧಾರದ ಮೇಲೆ ಹೆಚ್ಚು ಅತ್ಯಾಧುನಿಕ ಪ್ಯಾಕೇಜ್ನಲ್ಲಿ ನಿರ್ಮಿಸಲಾಗಿದೆ. ಇದಲ್ಲದೆ, ಹ್ಯುಂಡೈ ವ್ಯಾಪಕ ಶ್ರೇಣಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ವೇರಿಯಂಟ್ ಗಳನ್ನು ನೀಡುತ್ತದೆ, ಪ್ರತಿಯೊಂದೂ 5-ಸ್ಪೀಡ್ ಮ್ಯಾನ್ಯುವಲ್ ಅಥವಾ ಎಎಂಟಿ ಆಟೋ ಗೇರ್ಬಾಕ್ಸ್ ಗಳೊಂದಿಗೆ ಸಂಯೋಜಿಸಲ್ಪಟ್ಟಿದೆ.
ಹ್ಯುಂಡೈ, ಬೂಮರಾಂಗ್-ಆಕಾರದ ಡಿಆರ್ಎಲ್ಗಳೊಂದಿಗೆ ದೊಡ್ಡದಾದ ಸಿಗ್ನೇಚರ್ ಗ್ರಿಲ್, ಎಲ್ಇಡಿ ಪ್ರೊಜೆಕ್ಟರ್ ಹೆಡ್ಲ್ಯಾಂಪ್ಗಳು ಮತ್ತು ಫಾಗ್ ಲ್ಯಾಂಪ್ಗಳು, 15-ಇಂಚಿನ ಅಲಾಯ್ ವೀಲ್ ಗಳು ಹೊಂದಿದೆ ಮತ್ತು ಸ್ಪೋರ್ಟಿ ಲುಕ್ ನೀಡಲು ರೂಫ್ ರೈಲ್ಗಳನ್ನು ಸಜ್ಜುಗೊಳಿಸಿದೆ. ಈಗ, ಮಾಡೆಲ್ ಆಧಾರದ ಮೇಲೆ, ನೀವು ಡ್ಯುಯಲ್-ಟೋನ್ ಗ್ರೇ ಅಥವಾ ಕಪ್ಪು ಬಣ್ಣದ ಇಂಟೀರಿಯರ್ ಗಳನ್ನು ಪಡೆಯಬಹುದು.
ಕ್ಯಾಬಿನ್ ಒಳಗೆ, ನೀವು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋವನ್ನು ಬೆಂಬಲಿಸುವ 8-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ನೊಂದಿಗೆ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಕಾಣಬಹುದು.
ಇವುಗಳಲ್ಲದೆ, ವೈರ್ಲೆಸ್ ಚಾರ್ಜರ್, ಯುಎಸ್ಬಿ ಪೋರ್ಟ್, ವಾಯ್ಸ್ ರೆಕಗ್ನಿಷ್, ಬ್ಲೂಟೂತ್ ಕನೆಕ್ಟಿವಿಟಿ, ರೇರ್ ಏರ್ ಕಂಡಿಷನರ್ ವೆಂಟ್ಗಳು, 2 ಪವರ್ ಔಟ್ಲೆಟ್ಗಳು, ರೇರ್ ಪಾರ್ಕಿಂಗ್ ಸೆನ್ಸರ್ಗಳು, ಕ್ಯಾಮೆರಾ, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್ ಮತ್ತು ಇತ್ಯಾದಿ ಹಲವಾರು ವೈಶಿಷ್ಟ್ಯಗಳಿವೆ.
ನೀವು ಈ ಕಾರನ್ನು ಖರೀದಿಸಿದ್ದರೆ, ಸಂಭವನೀಯ ದುರಸ್ತಿ/ಬದಲಿ ವೆಚ್ಚಗಳನ್ನು ತಪ್ಪಿಸಲು ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ ಇನ್ಶೂರೆನ್ಸ್ ಅನ್ನು ಪಡೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ.
ಇದಲ್ಲದೆ, ಕಾರ್ ಇನ್ಶೂರೆನ್ಸ್ ಪಾಲಿಸಿಯು ಕಡ್ಡಾಯವಾಗಿದೆ ಮತ್ತು ಕಾನೂನು ಪರಿಣಾಮಗಳು ಮತ್ತು ಇತರ ಅಪಾಯಗಳಿಂದ ರಕ್ಷಿಸುತ್ತದೆ.
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ನೋಡಿಕೊಳ್ಳುತ್ತೇವೆ, ಹೇಗೆ ಎಂದು ತಿಳಿಯಿರಿ...
ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ಥರ್ಡ್-ಪಾರ್ಟಿ ವೆಹಿಕಲ್ಗೆ ಉಂಟಾದ ಡ್ಯಾಮೇಜ್ಗಳು |
✔
|
✔
|
ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್ಗಳು |
✔
|
✔
|
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ |
✔
|
✔
|
ನಿಮ್ಮ ಕಾರಿನ ಕಳ್ಳತನ |
×
|
✔
|
ಡೋರ್ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
×
|
✔
|
ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ಡ್ ಆ್ಯಡ್-ಆನ್ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ
ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!
1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್ಗಳನ್ನೂ ತುಂಬಬೇಕಾಗಿಲ್ಲ
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್ಫೋನ್ನಿಂದಲೇ ನಿಮ್ಮ ವಾಹನದ ಡ್ಯಾಮೇಜ್ಗಳನ್ನು ತಿಳಿಸಿರಿ.
ನಮ್ಮ ನೆಟ್ವರ್ಕ್ ಗ್ಯಾರೇಜ್ಗಳಲ್ಲಿ ಕ್ಯಾಶ್ಲೆಸ್ ಅಥವಾ ರಿಇಂಬರ್ಸ್ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.
ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ!
ಡಿಜಿಟ್ನ ಕ್ಲೈಮ್ಗಳ ರಿಪೋರ್ಟ್ ಕಾರ್ಡ್ ಓದಿ
ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ ಇನ್ಶೂರೆನ್ಸ್ ಬೆಲೆಯನ್ನು ಹೊರತುಪಡಿಸಿ, ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಇತರ ಅಂಶಗಳಿವೆ. ಉದಾಹರಣೆಗೆ, ಆನ್ಲೈನ್ನಲ್ಲಿ ಪಾಲಿಸಿಗಳನ್ನು ಹೋಲಿಸುವಾಗ, ಇನ್ಶೂರರ್ ಯಾವ ಪ್ರಯೋಜನಗಳನ್ನು ನೀಡುತ್ತಾರೆ ಎಂಬುದನ್ನು ಪರಿಶೀಲಿಸಿ.
ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಗೆ ಸುರಕ್ಷಿತ ಕಾರ್ ಇನ್ಶೂರೆನ್ಸ್ ಅನ್ನು ಪಡೆಯಲು ಡಿಜಿಟ್ ಸೂಕ್ತ ತಾಣವಾಗಿದೆ, ಏಕೆಂದರೆ ಇದು ಉದ್ಯಮದಲ್ಲೇ-ಉತ್ತಮ ದರಗಳಲ್ಲಿ ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸುತ್ತದೆ.
ಅವುಗಳ ಬಗ್ಗೆ ತಿಳಿಯಲು ಪೂರ್ತಿ ಓದಿ.
ನಿಮಗೆ ಯಾವ ರೀತಿಯ ಕವರೇಜ್ ಬೇಕು ಎಂಬುದರ ಆಧಾರದ ಮೇಲೆ, ನೀವು ಈ ಕೆಳಗಿನ ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು.
ಮೋಟಾರ್ ವೆಹಿಕಲ್ಸ್ ಆಕ್ಟ್ 1988ರ ಪ್ರಕಾರ ಈ ಪಾಲಿಸಿಯು ಕಡ್ಡಾಯವಾಗಿದೆ ಮತ್ತು ಥರ್ಡ್ ಪಾರ್ಟಿ ಲಯಬಿಲಿಟಿಗಳಿಂದ ಸಂಪೂರ್ಣ ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ. ಸರಳವಾಗಿ ಹೇಳುವುದಾದರೆ, ನಿಮ್ಮ ಕಾರ್ ಥರ್ಡ್ ಪಾರ್ಟಿಗೆ ಡ್ಯಾಮೇಜ್ ಉಂಟುಮಾಡುವ ಸಂದರ್ಭದಲ್ಲಿ (ವ್ಯಕ್ತಿ, ವಾಹನ ಅಥವಾ ಪ್ರಾಪರ್ಟಿಯಾಗಿರಬಹುದು), ಡಿಜಿಟ್ ನಷ್ಟವನ್ನು ಸರಿದೂಗಿಸುತ್ತದೆ. ಇದಲ್ಲದೆ, ಅಂತಹ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಲಿಟಿಗೇಷನ್ ಸಮಸ್ಯೆಗಳನ್ನು ಇನ್ಶೂರರ್ ಇತ್ಯರ್ಥಪಡಿಸುತ್ತಾರೆ.
ಇದು ಡಿಜಿಟ್ ಒದಗಿಸುವ ಅತ್ಯಂತ ವಿಸ್ತಾರವಾದ ಕವರೇಜ್. ಈ ಪಾಲಿಸಿಯ ಅಡಿಯಲ್ಲಿ, ನೀವು ಥರ್ಡ್ ಪಾರ್ಟಿ ಲಯಬಿಲಿಟಿಗಳು ಅಥವಾ ಓನ್ ಕಾರ್ ಡ್ಯಾಮೇಜ್ ವೆಚ್ಚಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಹೆಚ್ಚುವರಿಯಾಗಿ, ಆ್ಯಡ್-ಆನ್ ಕವರ್ಗಳೊಂದಿಗೆ ಬೇಸ್ ಪ್ಲಾನ್ ಅನ್ನು ಅಪ್ಗ್ರೇಡ್ ಮಾಡಲು ಡಿಜಿಟ್ ನಿಮಗೆ ಅನುಮತಿಸುತ್ತದೆ. ಹೆಚ್ಚುವರಿ ಶುಲ್ಕಗಳ ವಿರುದ್ಧ ನೀವು ಈ ಕೆಳಗಿನ ಆಯ್ಕೆಗಳಲ್ಲಿ ಆ್ಯಡ್ ಆನ್ ಕವರ್ ಗಳನ್ನು ಆಯ್ಕೆ ಮಾಡಬಹುದು. ನಿಮ್ಮ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ ಇನ್ಶೂರೆನ್ಸ್ ರಿನೀವಲ್ ಬೆಲೆಯನ್ನು ಹೆಚ್ಚಿಸುವ ಮೂಲಕ ನಿಮ್ಮ ಪಾಲಿಸಿ ಅವಧಿ ಮುಗಿದ ನಂತರವೂ ನೀವು ಪ್ರಯೋಜನಗಳನ್ನು ಮುಂದುವರಿಸಬಹುದು.
ಸೂಚನೆ: ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ಲಾನ್ ಓನ್ ಕಾರ್ ಡ್ಯಾಮೇಜ್ ವೆಚ್ಚಗಳನ್ನು ಕವರ್ ಮಾಡುವುದಿಲ್ಲ. ನಿಮ್ಮ ಬೇಸ್ ಪಾಲಿಸಿಗೆ ಈ ಕವರ್ ಅನ್ನು ಸೇರಿಸಲು, ಸ್ವತಂತ್ರವಾದ ಓನ್ ಡ್ಯಾಮೇಜ್ ಕವರ್ ಅನ್ನು ಆಯ್ಕೆ ಮಾಡಿಕೊಳ್ಳಿ.
ಈಗ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡುವುದು ತೊಂದರೆ ಮುಕ್ತವಾಗಿದೆ. ಸಾಂಪ್ರದಾಯಿಕ ಪ್ರೊಸೆಸ್ ಅನ್ನು ಬಿಟ್ಟು, ಆನ್ಲೈನ್ನಲ್ಲಿ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ ಇನ್ಶೂರೆನ್ಸ್ ಗಾಗಿ ಡಿಜಿಟ್ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ನಿಮ್ಮ ಅಸ್ತಿತ್ವದಲ್ಲಿರುವ ಡಿಜಿಟ್ ಖಾತೆಗೆ ಸೈನ್ ಇನ್ ಮಾಡುವ ಮೂಲಕ ನೀವು ಆನ್ಲೈನ್ನಲ್ಲಿ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ರಿನೀವ್ ಮಾಡಬಹುದು.
ಡಿಜಿಟ್ ತನ್ನ ಗ್ರಾಹಕರಿಗೆ ತಮ್ಮ ಕಾರುಗಳ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಅನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಅನುಮತಿಸುತ್ತದೆ. ಐಡಿವಿಯು ಪಾಲಿಸಿ ಪ್ರೀಮಿಯಂ ಅನ್ನು ನಿರ್ಧರಿಸುತ್ತದೆ, ಹಾಗಾಗಿ ನೀವು ಹೆಚ್ಚಿನ ಐಡಿವಿಯನ್ನು ಆರಿಸಿದರೆ, ಪ್ರೀಮಿಯಂ ಕೂಡ ಹೆಚ್ಚಾಗುತ್ತದೆ. ಅಲ್ಲದೆ, ಹೆಚ್ಚಿನ ಐಡಿವಿ ಕಳ್ಳತನ ಅಥವಾ ಸರಿಪಡಿಸಲಾಗದ ಡ್ಯಾಮೇಜ್ ನ ಸಂದರ್ಭದಲ್ಲಿ ಹೆಚ್ಚಿನ ಪರಿಹಾರವನ್ನು ಒದಗಿಸುತ್ತದೆ.
ಡಿಜಿಟ್ನ ಅಪಾರ ಜನಪ್ರಿಯತೆಯ ಹಿಂದಿನ ಗಮನಾರ್ಹ ಕಾರಣವೆಂದರೆ ಅದರ ಹೆಚ್ಚಿನ ಕ್ಲೈಮ್ ಸೆಟಲ್ಮೆಂಟ್ ದಾಖಲೆ. ಇದಲ್ಲದೆ, ಪ್ರೊಸೆಸ್ ಅನ್ನು ಸುಗಮಗೊಳಿಸಲು ಇನ್ಶೂರರ್ ಸ್ವಯಂ ತಪಾಸಣೆ ಲಿಂಕ್ ಅನ್ನು ಒದಗಿಸುತ್ತಾರೆ.
ಲಿಂಕ್ ಸ್ವೀಕರಿಸಲು ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಯಿಂದ 1800 258 5956ಗೆ ಕರೆ ಮಾಡಿ.
ಭಾರತದಾದ್ಯಂತ 6000ಕ್ಕೂ ಹೆಚ್ಚು ಗ್ಯಾರೇಜ್ಗಳೊಂದಿಗೆ ಡಿಜಿಟ್ ಟೈ-ಅಪ್ಗಳನ್ನು ಹೊಂದಿದೆ. ಆದ್ದರಿಂದ, ಈ ಯಾವುದೇ ಗ್ಯಾರೇಜ್ಗಳಲ್ಲಿ ನಿಮ್ಮ ವಾಹನ ಸಮಸ್ಯೆಗಳನ್ನು ತೊಂದರೆ-ಮುಕ್ತವಾಗಿ ಪರಿಹರಿಸಿಕೊಳ್ಳಬಹುದು ಮತ್ತು ನಿಮ್ಮ ಗ್ರ್ಯಾಂಡ್ ಐ10 ನಿಯೋಸ್ ಇನ್ಶೂರೆನ್ಸ್ ವಿರುದ್ಧ ಕ್ಯಾಶ್ ಲೆಸ್ ದುರಸ್ತಿಯನ್ನು ಆರಿಸಿಕೊಳ್ಳಬಹುದು.
ನೀವು ಸಂಪೂರ್ಣ ವರ್ಷದಲ್ಲಿ ಕ್ಲೈಮ್ಗಳನ್ನು ಫೈಲ್ ಮಾಡುವುದರಿಂದ ದೂರವಿದ್ದರೆ, ಪಾವತಿಸಬೇಕಾದ ಪ್ರೀಮಿಯಂನಲ್ಲಿ 20% ನೋ ಕ್ಲೈಮ್ ಬೋನಸ್ ಡಿಸ್ಕೌಂಟ್ ಅನ್ನು ಡಿಜಿಟ್ ನಿಮಗೆ ಬಹುಮಾನ ನೀಡುತ್ತದೆ.
ಕ್ಲೈಮ್-ಮುಕ್ತ ವರ್ಷಗಳ ಸಂಖ್ಯೆಯನ್ನು ಆಧರಿಸಿ ಪರ್ಸಂಟೇಜ್ ಬದಲಾಗುತ್ತದೆ.
ನಿಮ್ಮ ವಾಹನವು ಡ್ರೈವ್ ಮಾಡಲಾಗದ ಸ್ಥಿತಿ ತಲುಪಿದ್ದರೆ, ಚಿಂತಿಸಬೇಡಿ. ಬದಲಾಗಿ, ಅನನುಕೂಲತೆಯನ್ನು ತಪ್ಪಿಸಲು ಡೋರ್ಸ್ಟೆಪ್ ಕಾರ್ ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯಗಳನ್ನು ಆರಿಸಿಕೊಳ್ಳಿ.
ಸೂಚನೆ: ಈ ಸೌಲಭ್ಯವು ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ನ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ನಲ್ಲಿ ಮಾತ್ರ ಲಭ್ಯವಿದೆ.
ಡಿಜಿಟ್ನ ಗ್ರಾಹಕ ಸೇವೆ ತಂಡವು 24X7 ವೇಗದ ಮತ್ತು ವಿಶ್ವಾಸಾರ್ಹ ಸೇವೆಯನ್ನು ಒದಗಿಸುತ್ತದೆ. ಆದ್ದರಿಂದ, ನಿಮ್ಮ ಎಲ್ಲಾ ಇನ್ಶೂರೆನ್ಸ್ ಪ್ರಶ್ನೆಗಳನ್ನು ಯಾವುದೇ ಸಮಯದಲ್ಲಿ ತಕ್ಷಣವೇ ಪರಿಹರಿಸಿಕೊಳ್ಳಬಹುದು.
ಇವುಗಳ ಹೊರತಾಗಿ, ನೀವು ವಾಲಂಟರಿ ಡಿಡಕ್ಟಿಬಲ್ಸ್ ಆರಿಸಿಕೊಂಡರೆ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರ್ ಇನ್ಶೂರೆನ್ಸ್ ಪಾಲಿಸಿ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಡಿಜಿಟ್ ನಿಮಗೆ ಅನುಮತಿಸುತ್ತದೆ. ಆದಾಗ್ಯೂ, ತಿಳುವಳಿಕೆಯುಳ್ಳ ಆಯ್ಕೆಯನ್ನು ಮಾಡುವ ಮೊದಲು ನೀವು ಈ ಆಯ್ಕೆಯ ಪ್ರಯೋಜನಗಳು ಮತ್ತು ಅನಾನುಕೂಲಗಳನ್ನು ಪರಿಶೀಲಿಸಬೇಕು.
ಬಿಕ್ಕಟ್ಟಿನ ಸಮಯದಲ್ಲಿ ನಿಮ್ಮನ್ನು ಆರ್ಥಿಕವಾಗಿ ಸುರಕ್ಷಿತವಾಗಿರಿಸಿಕೊಳ್ಳುವುದು ಕಾರ್ ಇನ್ಶೂರೆನ್ಸ್. ಇದು ಇನ್ಶೂರರ್ ಗೆ ಅಪಾಯದ ವರ್ಗಾವಣೆಯನ್ನು ಮಾಡುತ್ತದೆ. ಕಾರಿಗೆ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಮುಖ್ಯವಾಗಿದೆ, ಏಕೆಂದರೆ ಅದು:
ನಿಮಗಾಗಿ ಇದನ್ನು ಸರಿಪಡಿಸಲು ನೀವು ಇನ್ಶೂರರ್ ರನ್ನು ವಿನಂತಿಸಬಹುದು. ಅವರು ಕ್ಯಾಶ್ ಲೆಸ್ ದುರಸ್ತಿಗೆ ವ್ಯವಸ್ಥೆ ಮಾಡುತ್ತಾರೆ ಅಥವಾ ನೀವು ಪಾವತಿಸಿದ ಬಿಲ್ಗಳನ್ನು ನಿಮಗೆ ರೀಇಂಬರ್ಸ್ ಮಾಡುತ್ತಾರೆ. ಮತ್ತೊಂದು ಪರಿಸ್ಥಿತಿಯಲ್ಲಿ, ನೀವು ವಾಹನವನ್ನು ಕಳೆದುಕೊಂಡಿದ್ದರೆ, ಇನ್ವಾಯ್ಸ್ ನ ಒಟ್ಟು ವೆಚ್ಚವನ್ನು ಇನ್ಶೂರೆನ್ಸ್ ಕಂಪನಿಯು ರೀಇಂಬರ್ಸ್ ಮಾಡುತ್ತದೆ.
ಓನ್ ಡ್ಯಾಮೇಜ್ ಕಾರ್ ಇನ್ಶೂರೆನ್ಸ್ ಬಗ್ಗೆ ಮತ್ತಷ್ಟು ತಿಳಿಯಿರಿ.
ನಿಮ್ಮ ದೈನಂದಿನ ಬಳಕೆಯ ಕಾರು ಕಾಂಪ್ಯಾಕ್ಟ್ ಆಗಿದ್ದರೆ ಮತ್ತು ಡ್ರೈವ್ ಮಾಡಲು ಅನುಕೂಲಕರವಾಗಿದ್ದರೆ ಅದು ಒಳ್ಳೆಯದು. ಎಲ್ಲಾ ಕಾರ್ ಸೆಗ್ಮೆಂಟ್ ಗಳಲ್ಲಿಯೂ ಕಾರ್ಯ ನಿರ್ವಹಿಸುತ್ತಿರುವ ಹ್ಯುಂಡೈ ಸಣ್ಣದಿಂದ ಹಿಡಿದು ದೊಡ್ಡದರವರೆಗೆ ಪ್ರತಿಯೊಂದು ಪ್ರಕಾರವನ್ನು ಪರಿಚಯಿಸಿದೆ. ಹ್ಯುಂಡೈ ಐ10 ಭಾರತದ ರಸ್ತೆಗಳು ಮತ್ತು ಟ್ರಾಫಿಕ್ಗೆ ಸುರಕ್ಷಿತವಾದ ಕಾರಿನ ಮತ್ತೊಂದು ಟೀಸಿಂಗ್ ಮಾಡೆಲ್ ಆಗಿದೆ.
ಇದು ಈಗ ಹುಂಡೈ ಗ್ರ್ಯಾಂಡ್ ಐ10 ನಿಯೋಸ್ ಹೆಸರಿನಲ್ಲಿ ಲಭ್ಯವಿದೆ. ಕಾರು 1186 ರಿಂದ 1197 ಕ್ಯುಬಿಕ್ ಕೆಪಾಸಿಟಿಯ ಎಂಜಿನ್ ಅನ್ನು ಹೊಂದಿದೆ. ಇದು 5-ಸ್ಪೀಡ್ ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಗೇರ್ಬಾಕ್ಸ್ ಹೊಂದಿದೆ. ಈ ಸಣ್ಣ ಕುಟುಂಬದ ಕಾರು ಪೆಟ್ರೋಲ್ ಮತ್ತು ಡೀಸೆಲ್ ಇಂಧನ ವಿಧಗಳಲ್ಲಿ ಬರುತ್ತದೆ.
ಚಿಕ್ಕದಾಗಿದ್ದರೂ, ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಬೆಲೆಯ ಶ್ರೇಣಿಯು ರೂ.5 ಲಕ್ಷದಿಂದ ಶುರುವಾಗುತ್ತದೆ ಮತ್ತು ರೂ.8 ಲಕ್ಷದವರೆಗೆ ಇರುತ್ತದೆ. ಮೈಲೇಜ್ ಅನ್ನು ಪರಿಗಣಿಸುವುದಾದರೆ, ಒಂದು ಲೀಟರ್ಗೆ ಸುಮಾರು 20.5 ಕಿ.ಮೀ ನಿಂದ 26.2 ಕಿ.ಮೀ ಪ್ರಯಾಣಿಸಲು ಇದು ನಿಮಗೆ ಉತ್ತಮ ಕೊಡುಗೆ ನೀಡುತ್ತದೆ.
ಈ ಸಂಗತಿಗಳನ್ನು ಹೊರತುಪಡಿಸಿ ನಾವು ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.
ಹ್ಯುಂಡೈ ಗ್ರ್ಯಾಂಡ್ಐ10 ನಿಯೋಸ್ ಮೂರನೇ ತಲೆಮಾರಿನ ಮಾಡೆಲ್ ಆಗಿದ್ದು ಅದನ್ನು ತಯಾರಕರು ನವೀಕರಿಸಿದ್ದಾರೆ. ಆದ್ದರಿಂದ, ನೀವು ಚಿಕ್ಕ ಕಾರುಗಳಲ್ಲಿ ಏನಾದರೂ ಅಪ್-ಟು-ಬೀಟ್ ಸೌಲಭ್ಯನ್ನು ನೋಡಿದರೆ, ಇದಕ್ಕಿಂತ ಉತ್ತಮವಾದ ಆಯ್ಕೆಯನ್ನು ಮಾಡುವುದಿಲ್ಲ. ಇದು ನಿಮಗೆ ಸ್ಪೋರ್ಟಿ ಲುಕ್ ಅನ್ನು ನೀಡಿದ್ದರೂ, ಕಾರಿನ ವೈಶಿಷ್ಟ್ಯಗಳು ಸಾಕಷ್ಟು ಆಕರ್ಷಕವಾಗಿವೆ.
ಮಿಲೇನಿಯಲ್ಗಳು ಕಾರನ್ನು ಅದರ ಲುಕ್, ಕ್ಯಾಸ್ಕೇಡಿಂಗ್ ಗ್ರಿಲ್, ಮುಂಭಾಗದ ಎಲ್ಇಡಿ ದೀಪಗಳು ಮತ್ತು ಮುಂಭಾಗದಲ್ಲಿ ಫಾಗ್ ಲ್ಯಾಂಪ್ಗಳಿಗೆ ಆದ್ಯತೆ ನೀಡುತ್ತಾರೆ. ಸೂಪರ್ ಸ್ಪೋರ್ಟಿ ಲುಕ್ ನೀಡಲು ಇದು ಡೈಮಂಡ್-ಕಟ್ ಅಲಾಯ್ ಗಳು ಮತ್ತು ಹ್ಯಾಲೊಜೆನ್ ಟೈಲ್ ಲೈಟ್ಗಳನ್ನು ಹೊಂದಿದೆ. ಡ್ಯುಯಲ್-ಟೋನ್ ಪೇಂಟ್ ಸ್ಕೀಮ್ ಅನ್ನು ಒಳಗೊಂಡಿರುವ ಎಂಟು ಆಕರ್ಷಕ ಲೋಹದ ಬಣ್ಣಗಳಲ್ಲಿ ನೀವು ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಅನ್ನು ಪಡೆಯಬಹುದು.
ಗ್ರೇ ಬಣ್ಣದ ಇಂಟೀರಿಯರ್ ಕಾರಿನ ಸ್ಟೈಲ್ ಅನ್ನು ಹೆಚ್ಚಿಸುತ್ತದೆ. ಆದರೆ 8 ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೇ ಬ್ರೌನಿ ಬಣ್ಣ ಹೊಂದಿದೆ. ಹ್ಯುಂಡೈ, ವೈರ್ಲೆಸ್ ಚಾರ್ಜಿಂಗ್ ಪಾಯಿಂಟ್ಗಳು ಮತ್ತು ವಾಯ್ಸ್ ರೆಕಗ್ನಿಷನ್ ನೊಂದಿಗೆ ಬ್ಲೂಟೂತ್ ಸಂಪರ್ಕವನ್ನು ಸಹ ನೀಡಿದೆ.
ಮುಂಭಾಗದ ಸೀಟ್ ಗಳು ಆರಾಮದಾಯಕವಾಗಿದೆ ಮತ್ತು ಎತ್ತರ ಹೊಂದಾಣಿಕೆಗಳನ್ನು ಅನುಮತಿಸುತ್ತದೆ ಆದರೆ ಹಿಂದಿನ ಸೀಟುಗಳು ಕಾಲುಗಳಿಗೆ ಆರಾಮದಾಯಕತೆ ನೀಡುತ್ತದೆ. ಕಾರಿನ ಎಂಜಿನ್ ಸಾಕಷ್ಟು ಪರಿಷ್ಕರಿಸಲಾಗಿದೆ ಮತ್ತು ಬಿಎಸ್-VI ಕಂಪ್ಲೈಂಟ್ ಆಗಿದೆ. ಇದು ಲುಕ್ ನಲ್ಲಿ ಆಕರ್ಷಿಸುವುದಲ್ಲದೆ, ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಸ್ವಯಂಚಾಲಿತ ಕ್ಲೈಮೇಟ್ ಕಂಟ್ರೋಲ್, ರಿವರ್ಸ್ ಕ್ಯಾಮೆರಾ, ಸ್ಮಾರ್ಟ್ ಸ್ಟಾರ್ಟ್/ಸ್ಟಾಪ್ ಪುಶ್ ಬಟನ್ ಮತ್ತು ಸೇಫ್ಟಿ ಏರ್ಬ್ಯಾಗ್ಗಳಂತಹ ಗಮನಾರ್ಹ ವೈಶಿಷ್ಟ್ಯಗಳನ್ನು ಹೊಂದಿದೆ. ಒಟ್ಟಾರೆಯಾಗಿ, ನೀವು ಕಾರನ್ನು ಖರೀದಿಸಲು ಪರಿಗಣಿಸಬಹುದು.
ಚೆಕ್ ಮಾಡಿ: ಹ್ಯುಂಡೈ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ವೇರಿಯಂಟ್ ಹೆಸರು |
ವೇರಿಯಂಟ್ ನ ಬೆಲೆ(ನವದೆಹಲಿಯಲ್ಲಿ, ಇತರ ನಗರಗಳಲ್ಲಿ ಬದಲಾಗಬಹುದು) |
ಎರಾ |
₹ 5.28 ಲಕ್ಷ |
ಮ್ಯಾಗ್ನಾ |
₹ 5.99 ಲಕ್ಷ |
ಸ್ಪೋರ್ಟ್ಸ್ |
₹ 6.66 ಲಕ್ಷ |
ಎಎಂಟಿ ಮ್ಯಾಗ್ನಾ |
₹ 6.67 ಲಕ್ಷ |
ಸ್ಪೋರ್ಟ್ಸ್ ಡ್ಯುಯಲ್ ಟೋನ್ |
₹ 6.96 ಲಕ್ಷ |
ಮ್ಯಾಗ್ನಾ ಸಿ ಎನ್ ಜಿ |
₹ 6.99 ಲಕ್ಷ |
ಮ್ಯಾಗ್ನಾ ಸಿ ಆರ್ ಡಿ ಐ |
₹ 7.20 ಲಕ್ಷ |
ಎಎಂಟಿ ಸ್ಪೋರ್ಟ್ಸ್ |
₹ 7.27 ಲಕ್ಷ |
ಮ್ಯಾಗ್ನಾ ಸಿ ಆರ್ ಡಿ ಐ ಕಾರ್ಪ್ ಎಡಿಷನ್ |
₹ 7.30 ಲಕ್ಷ |
ಆಸ್ತಾ |
₹ 7.42 ಲಕ್ಷ |
ಸ್ಪೋರ್ಟ್ಸ್ ಸಿ ಎನ್ ಜಿ |
₹ 7.53 ಲಕ್ಷ |
ಸ್ಪೋರ್ಟ್ಸ್ ಸಿ ಆರ್ ಡಿ ಐ |
₹ 7.74 ಲಕ್ಷ |
ಟರ್ಬೋ ಸ್ಪೋರ್ಟ್ಸ್ |
₹ 7.87 ಲಕ್ಷ |
ಎಎಂಟಿ ಆಸ್ತಾ |
₹ 7.91 ಲಕ್ಷ |
ಟರ್ಬೋ ಸ್ಪೋರ್ಟ್ಸ್ ಡ್ಯುಯಲ್ ಟೋನ್ |
₹ 7.92 ಲಕ್ಷ |
ಎಎಂಟಿ ಸ್ಪೋರ್ಟ್ಸ್ ಸಿ ಆರ್ ಡಿ ಐ |
₹ 8.35 ಲಕ್ಷ |
ಆಸ್ತಾ ಸಿ ಆರ್ ಡಿ ಐ |
₹ 8.50 ಲಕ್ಷ |