ಹ್ಯುಂಡೈ ಕ್ರೆಟಾ ಇನ್ಶೂರೆನ್ಸ್

Get Instant Policy in Minutes*

Third-party premium has changed from 1st June. Renew now

ಹ್ಯುಂಡೈ ಕ್ರೆಟಾ ಇನ್ಶೂರೆನ್ಸ್ ಅನ್ನು ಖರೀದಿಸಿ ಅಥವಾ ನವೀಕರಿಸಿ

ಹ್ಯುಂಡೈ 21ನೇ ಜುಲೈ 2015 ರಂದು ಕ್ರೆಟಾವನ್ನು ಬಿಡುಗಡೆ ಮಾಡಿತು. ಕ್ರೆಟಾ ಫೈವ್-ಡೋರ್ ಸಬ್‌ಕಾಂಪ್ಯಾಕ್ಟ್ ಕ್ರಾಸ್‌ಒವರ್ ಎಸ್.ಯು.ವಿ ಆಗಿದೆ. ಹ್ಯುಂಡೈ ಕ್ರೆಟಾ ಮೂರು ವಿಧದ ಎಂಜಿನ್‌ಗಳನ್ನು ಒದಗಿಸುತ್ತದೆ. ಅವುಗಳೆಂದರೆ- 1.6 ಲೀಟರ್ ಪೆಟ್ರೋಲ್, 1.4 ಲೀಟರ್ ಡೀಸೆಲ್ ಮತ್ತು 1.6 ಲೀಟರ್ ಡೀಸೆಲ್.

ಹ್ಯುಂಡೈ ಕ್ರೆಟಾ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಸಬ್‌ಕಾಂಪ್ಯಾಕ್ಟ್ ಎಸ್.ಯು.ವಿ ಗಳಲ್ಲಿ ಒಂದಾಗಿದೆ. ಇದು ಚಾಲಕ ಸೇರಿದಂತೆ ಗರಿಷ್ಠ ಐದು ಜನರ ಸೀಟಿಂಗ್ ಕೆಪ್ಯಾಸಿಟಿ ಮತ್ತು 433 ಲೀಟರ್‌ಗಳ ಬೂಟ್ ಸ್ಪೇಸ್ ಹೊಂದಿದೆ.

ಹ್ಯುಂಡೈ ಕ್ರೆಟಾದ ಸರಾಸರಿ ಸರ್ವೀಸ್‌ನ ವೆಚ್ಚ ₹ 3,225 (ಐದು ವರ್ಷಗಳ ಸರಾಸರಿ). ಕ್ರೆಟಾದ ಫ್ಯೂಯೆಲ್ ಟ್ಯಾಂಕ್ 50 ಲೀಟರ್ ಫ್ಯೂಯೆಲ್ ಅನ್ನು ಹಿಡಿದಿಟ್ಟುಕೊಳ್ಳುತ್ತದೆ. ಫ್ಯೂಯೆಲ್ ಪ್ರಕಾರ ಮತ್ತು ವೇರಿಯೆಂಟ್‌ಗಳನ್ನು ಅವಲಂಬಿಸಿ, ಇದು ಸರಾಸರಿ 16.8 - 21.4 kmpl ಮೈಲೇಜ್ ನೀಡುತ್ತದೆ.

ಈ ಕಾರಿನ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್, ಆರು ಏರ್‌ಬ್ಯಾಗ್‌ಗಳು, ಕ್ರ್ಯಾಶ್ ಸೆನ್ಸಾರ್ ಮತ್ತು ಇನ್ನೂ ಹೆಚ್ಚಿನವು ಸೇರಿವೆ. ಇದಲ್ಲದೆ, ಕ್ರೆಟಾ ಕಾರ್, ಕರ್ಟೈನ್ ಏರ್‌ಬ್ಯಾಗ್‌ಗಳು, ಪ್ಯಾಸೆಂಜರ್ ಸೀಟ್‌ಬೆಲ್ಟ್ ರಿಮೈಂಡರ್‌ಗಳು, ಎಲೆಕ್ಟ್ರೋಕ್ರೊಮಿಕ್ ಮಿರರ್ ಮತ್ತು ಬರ್ಗ್‌ಲರ್ ಅಲಾರ್ಮ್‌ನಂತಹ ಸುಧಾರಿತ ಸುರಕ್ಷತಾ ನಿರ್ದಿಷ್ಟತೆಗಳನ್ನು ಹೊಂದಿದೆ.

ಹ್ಯುಂಡೈ ಕ್ರೆಟಾ ಆಟೋಮ್ಯಾಟಿಕ್ ಟ್ರಾನ್ಸಮಿಶನ್‌ನೊಂದಿಗೆ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಎಂಜಿನ್ 242nm@1500-3200rpm ನ ಗರಿಷ್ಠ ಟಾರ್ಕ್ ಮತ್ತು 138.08bhp@6000rpm ನ ಹೆಚ್ಚಿನ ಪವರ್ ಅನ್ನು ನೀಡುತ್ತದೆ.

ಆದ್ದರಿಂದ, ನೀವು ಹ್ಯುಂಡೈ ಕ್ರೆಟಾವನ್ನು ಈಗಾಗಲೇ ಹೊಂದಿದ್ದರೆ ಅಥವಾ ನೀವು ಈ ಕಾರನ್ನು ಖರೀದಿಸಲು ಯೋಜಿಸುತ್ತಿದ್ದರೆ, ಆನ್-ರೋಡ್ ಅಪಾಯಗಳಿಂದ ರಕ್ಷಿಸಿಕೊಳ್ಳಲು, ನೀವು ಹ್ಯುಂಡೈ ಕ್ರೆಟಾ ಇನ್ಶೂರೆನ್ಸ್ ಹೊಂದಿರಲೇಬೇಕು. ಇದಲ್ಲದೆ, ಹಾನಿಗಳಿಂದಾಗುವ ದುರಸ್ತಿ ವೆಚ್ಚವನ್ನು, ಗಮನಾರ್ಹವಾಗಿ ಕಡಿಮೆ ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ.

ಆದಾಗ್ಯೂ, ನಿಮ್ಮ ಇನ್ಶೂರೆನ್ಸ್ ಪಾಲಿಸಿಯಿಂದ ಗರಿಷ್ಠ ಪ್ರಯೋಜನಗಳನ್ನು ಪಡೆಯಲು ನೀವು ಸರಿಯಾದ ಹ್ಯುಂಡೈ ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆ ಮಾಡಬೇಕು.

ಹ್ಯುಂಡೈ ಕ್ರೆಟಾ ಇನ್ಶೂರೆನ್ಸ್ ನವೀಕರಣದ ಬೆಲೆ

ರಿಜಿಸ್ಟ್ರೇಷನ್ ದಿನಾಂಕ ಪ್ರೀಮಿಯಂ (ಓನ್ ಡ್ಯಾಮೇಜ್ ಓನ್ಲಿ ಪಾಲಿಸಿಗಾಗಿ)
ಆಗಸ್ಟ್-2018 4,349
ಆಗಸ್ಟ್-2017 4,015
ಆಗಸ್ಟ್-2016 3,586

** ಡಿಸ್‌ಕ್ಲೈಮರ್ - ಹ್ಯುಂಡೈ ಕ್ರೆಟಾ 1.6 ಡ್ಯುಯೆಲ್ Vtvt 6sp Sx (o) ಎಕ್ಸ್ ಪೆಟ್ರೋಲ್ 1591 ಗಾಗಿ ಪ್ರೀಮಿಯಂ ಅನ್ನು ಕ್ಯಾಲ್ಕುಲೇಟ್ ಮಾಡಲಾಗಿದೆ. ಜಿಎಸ್‌ಟಿಯನ್ನು ಹೊರತುಪಡಿಸಲಾಗಿದೆ.

ನಗರ - ಮುಂಬೈ, ವೆಹಿಕಲ್ ರಿಜಿಸ್ಟ್ರೇಷನ್ ತಿಂಗಳು - ಆಗಸ್ಟ್, ಎನ್.ಸಿ.ಬಿ - 50%, ಯಾವುದೇ ಆ್ಯಡ್-ಆನ್‌ಗಳಿಲ್ಲ, ಪಾಲಿಸಿ ಅವಧಿ ಮುಗಿದಿಲ್ಲ, ಮತ್ತು ಐಡಿವಿ- ಕಡಿಮೆ ಐಡಿವಿ ಲಭ್ಯವಿದೆ. ಪ್ರೀಮಿಯಂ ಲೆಕ್ಕಾಚಾರವನ್ನು ಆಗಸ್ಟ್-2020 ರಲ್ಲಿ ಮಾಡಲಾಗಿದೆ. ಮೇಲೆ ನಿಮ್ಮ ವೆಹಿಕಲ್‌ನ ವಿವರಗಳನ್ನು ನಮೂದಿಸುವ ಮೂಲಕ, ದಯವಿಟ್ಟು ಫೈನಲ್ ಪ್ರೀಮಿಯಂ ಅನ್ನು ಪರಿಶೀಲಿಸಿ. 

ಹ್ಯುಂಡೈ ಕ್ರೆಟಾ ಕಾರ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?

ನೀವು ಡಿಜಿಟ್‌ನ ಹ್ಯುಂಡೈ ಕ್ರೆಟಾ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಹ್ಯುಂಡೈ ಕ್ರೆಟಾ ಕಾರ್ ಇನ್ಶೂರೆನ್ಸ್ ಯೋಜನೆಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದ ಕಾರಣದಿಂದಾಗಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು

×

ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು

×

ಥರ್ಡ್ ಪಾರ್ಟಿ ವೆಹಿಕಲ್‌ಗೆ ಉಂಟಾಗುವ ಹಾನಿ

×

ಥರ್ಡ್ ಪಾರ್ಟಿ ಆಸ್ತಿಗೆ ಉಂಟಾಗುವಹಾನಿ

×

ವೈಯಕ್ತಿಕ ಅಪಘಾತ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯ/ಸಾವು

×

ನಿಮ್ಮ ಕಾರ್‌ನ ಕಳ್ಳತನ

×

ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್‌ನ ವ್ಯತ್ಯಾಸದ ಬಗ್ಗೆ ಮತ್ತಷ್ಟು ತಿಳಿಯಿರಿ

ಕ್ಲೈಮ್ ಸಲ್ಲಿಸುವುದು ಹೇಗೆ?

ನಮ್ಮ ಕಾರ್ ಇನ್ಶೂರೆನ್ಸ್ ಯೋಜನೆಯನ್ನು ನೀವು ಖರೀದಿಸಿದ ನಂತರ ಅಥವಾ ನವೀಕರಿಸಿದ ನಂತರ,ನೀವು ಚಿಂತಾ ಮುಕ್ತರಾಗಿ ಬದುಕಬಹುದು. ಏಕೆಂದರೆ ನಾವು ಸರಳವಾದ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!

ಹಂತ 1

1800-258-5956 ಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ನಲ್ಲಿ ಸ್ವಯಂ ತಪಾಸಣೆಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾದ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವೆಹಿಕಲ್‌ನ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ಮರುಪಾವತಿ ಅಥವಾ ಕ್ಯಾಶ್‌ಲೆಸ್ ಆಯ್ಕೆಗಳೆರಡರಲ್ಲಿ ನೀವು ಬಯಸುವ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ಹುಂಡೈ ಕ್ರೆಟಾ ಇನ್ಶೂರೆನ್ಸ್‌ಗಾಗಿ ಡಿಜಿಟ್ ಅನ್ನು ಏಕೆ ಆಯ್ಕೆ ಮಾಡಬೇಕು?

ಡಿಜಿಟ್ ಕಾರ್ ಇನ್ಶೂರೆನ್ಸ್‌ಗಾಗಿ ವ್ಯಾಪಕ ಶ್ರೇಣಿಯ ಪಾಲಿಸಿ ಆಯ್ಕೆಗಳನ್ನು ಹೊಂದಿದೆ. ಜೊತೆಗೆ, ನಿಮ್ಮ ಅಗತ್ಯತೆಗಳು ಮತ್ತು ಅನುಕೂಲಕ್ಕೆ ಅನುಗುಣವಾಗಿ ನೀವು ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು.

ಡಿಜಿಟ್ ಏನು ನೀಡುತ್ತದೆ ಎಂಬುದನ್ನು ತಿಳಿಯಲು ಓದುವುದನ್ನು ಮುಂದುವರೆಸಿ!

1. ವಿವಿಧ ಪ್ರಾಡಕ್ಟ್‌ಗಳು

ಡಿಜಿಟ್ ವಿವಿಧ ಇನ್ಶೂರೆನ್ಸ್ ಪಾಲಿಸಿ ಆಯ್ಕೆಗಳನ್ನು ನೀಡುತ್ತದೆ. ಅವುಗಳೆಂದರೆ -

  • ಥರ್ಡ್-ಪಾರ್ಟಿ ಪಾಲಿಸಿ - ಕ್ರೆಟಾಗಾಗಿ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ನಿಮ್ಮ ವೆಹಿಕಲ್‌ನಿಂದ ಯಾವುದೇ ಥರ್ಡ್ ಪಾರ್ಟಿ, ಆಸ್ತಿ ಅಥವಾ ಕಾರಿಗೆ ಉಂಟಾಗುವ ಹಾನಿ ಮತ್ತು ನಷ್ಟವನ್ನು ಕವರ್ ಮಾಡುತ್ತದೆ. ಜೊತೆಗೆ, ಇದು ಯಾವುದೇ ಸಂಬಂಧಿತ ದಾವೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ಮೋಟಾರ್ ವೆಹಿಕಲ್ಸ್ ತಿದ್ದುಪಡಿ ಆ್ಯಕ್ಟ್ 2019 ರ ಅಡಿಯಲ್ಲಿ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಇದನ್ನು ಪಾಲಿಸಲು ವಿಫಲವಾದಲ್ಲಿ, ನಿಮಗೆ ₹ 2,000 - ₹ 4,000 ದಂಡವನ್ನು ಮತ್ತು ಚಾಲಕನಿಗೆ ಜೈಲು ಶಿಕ್ಷೆಯನ್ನು ವಿಧಿಸಬಹುದು.

  • ಕಾಂಪ್ರೆಹೆನ್ಸಿವ್ ಪಾಲಿಸಿ - ಕಾಂಪ್ರೆಹೆನ್ಸಿವ್ ಪಾಲಿಸಿಯು ಎಲ್ಲಾ ಥರ್ಡ್ ಪಾರ್ಟಿಯ ಹಾನಿಗಳನ್ನು ಕವರ್ ಮಾಡುತ್ತದೆ. ಮತ್ತು ಸ್ವಂತ ಹಾನಿಗಳಿಂದಲೂ ನಿಮ್ಮನ್ನು ರಕ್ಷಿಸುತ್ತದೆ. ಇದರರ್ಥ ನಿಮ್ಮ ವೆಹಿಕಲ್ ಬೆಂಕಿ, ವಿಪತ್ತುಗಳು, ಕಳ್ಳತನ ಮುಂತಾದವುಗಳಿಂದ ಯಾವುದೇ ಹಾನಿಯನ್ನು ಅನುಭವಿಸಿದರೆ, ಡಿಜಿಟ್ ಇವುಗಳನ್ನು ಸಹ ಕವರ್ ಮಾಡುತ್ತದೆ.

2. ಅನೇಕ ಆ್ಯಡ್-ಆನ್‌ಗಳು

ಕಾಂಪ್ರೆಹೆನ್ಸಿವ್ ಪಾಲಿಸಿ ಯೋಜನೆಯನ್ನು ಹೊಂದಿರುವ ಪಾಲಿಸಿದಾರರು ಈ ಕೆಳಗಿನ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯುತ್ತಾರೆ -

  • ರೋಡ್ ಸೈಡ್ ಅಸಿಸ್ಟೆನ್ಸ್

  • ಕನ್ಸ್ಯೂಮೆಬಲ್ ಕವರ್

  • ಝೀರೋ ಡೆಪ್ರಿಸಿಯೇಶನ್ ಕವರ್

  • ರಿಟರ್ನ್ ಟು ಇನ್‌ವಾಯ್ಸ್ ಕವರ್‌

  • ಎಂಜಿನ್ ಪ್ರೊಟೆಕ್ಷನ್ ಕವರ್

3. ನೋ ಕ್ಲೈಮ್ ಬೋನಸ್

ಡಿಜಿಟ್‌ನಲ್ಲಿ, ಕ್ಲೈಮ್-ಫ್ರೀ ವರ್ಷಗಳನ್ನು ಹೊಂದಿರುವ ಪಾಲಿಸಿದಾರರು ಅವರು ಸಂಗ್ರಹಿಸಿದ ಕ್ಲೈಮ್‌ಲೆಸ್ ವರ್ಷಗಳ ಸಂಖ್ಯೆಯನ್ನು ಅವಲಂಬಿಸಿ, ತಮ್ಮ ಪಾಲಿಸಿ ಪ್ರೀಮಿಯಂಗಳಲ್ಲಿ ಹೆಚ್ಚುವರಿ 20% ರಿಂದ 50% ರಿಯಾಯಿತಿಯನ್ನು ಆನಂದಿಸುತ್ತಾರೆ.

4. ಗ್ಯಾರೇಜ್‌ಗಳ ನೆಟ್‌ವರ್ಕ್

ನೀವು ಡಿಜಿಟ್‌ನಿಂದ ಹ್ಯುಂಡೈ ಕ್ರೆಟಾ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಂಡರೆ, ನೀವು ಪ್ರಯಾಣಿಸುವಾಗ ಚಿಂತಿಸಬೇಕಾಗಿಲ್ಲ. ಡಿಜಿಟ್ ಕಂಪನಿಯು ಹಲವಾರು ನೆಟ್‌ವರ್ಕ್ ಗ್ಯಾರೇಜ್‌ಗಳೊಂದಿಗೆ ಟೈ-ಅಪ್‌ಗಳನ್ನು ಹೊಂದಿದೆ, ಅಲ್ಲಿ ಹೋಗಿ ನೀವು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಅತ್ಯಂತ ರೋಮಾಂಚಕಾರಿ ವಿಷಯ ಏನು ಗೊತ್ತೆ? ಈ ಸರ್ವೀಸ್‌ಗಾಗಿ ನೀವು ಯಾವುದೇ ಹಣವನ್ನು ಪಾವತಿಸಬೇಕಾಗಿಲ್ಲ!

5. ಆನ್‌ಲೈನ್‌ ಸರ್ವೀಸ್‌ಗಳು

ಡಿಜಿಟ್‌ನ ವೆಬ್‌ಸೈಟ್‌ನಿಂದ ನೀವು ಎಲ್ಲಾ ಸರ್ವೀಸ್‌ಗಳು ಮತ್ತು ಇನ್ಶೂರೆನ್ಸ್ ಪ್ರಾಡಕ್ಟ್‌ಗಳನ್ನು ಪಡೆಯಬಹುದು. ಹೆಚ್ಚುವರಿಯಾಗಿ, ಪ್ರಸ್ತುತ ಡಾಕ್ಯುಮೆಂಟ್‌ಗಳಿಗೆ ಸಹಿ ಮಾಡುವ ಮೂಲಕ ನೀವು ಹ್ಯುಂಡೈ ಕ್ರೆಟಾ ಇನ್ಶೂರೆನ್ಸ್ ನವೀಕರಣವನ್ನು ಆಯ್ಕೆ ಮಾಡಿಕೊಳ್ಳಬಹುದು.

6. ವೈಯಕ್ತಿಕ ಅಪಘಾತದ ಕವರ್

ಭಾರತೀಯ ಇನ್ಶೂರೆನ್ಸ್ ರೆಗ್ಯುಲೇಟರಿ ಮತ್ತು ಡೆವೆಲಪ್ಮೆಂಟ್ ಅಥಾರಿಟಿ (ಐ.ಆರ್.ಡಿ.ಎ.ಐ) ಯು, ಪ್ರತಿಯೊಬ್ಬ ಕಾರ್ ಮಾಲೀಕರು ವೈಯಕ್ತಿಕ ಅಪಘಾತದ ಕವರ್ ಹೊಂದುವುದನ್ನು ಕಡ್ಡಾಯಗೊಳಿಸಿದೆ. ಈ ಪಾಲಿಸಿಯ ಅಡಿಯಲ್ಲಿ, ಕಾರ್ ಅಪಘಾತದಿಂದ ಯಾರಾದರೂ ಮರಣ ಅಥವಾ ಶಾಶ್ವತ ಅಂಗವೈಕಲ್ಯವನ್ನು ಎದುರಿಸಿದರೆ, ಅವರ ಕುಟುಂಬವು ಡಿಜಿಟ್‌ನಿಂದ ಹಣಕಾಸಿನ ನೆರವನ್ನು ಪಡೆಯುತ್ತದೆ.

7. 24x7 ಅಸಿಸ್ಟೆನ್ಸ್

ಡಿಜಿಟ್‌ನ ಕಸ್ಟಮರ್ ಸಪೋರ್ಟ್ ಟೀಮ್, 24x7 ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನಿಮ್ಮ ವೆಹಿಕಲ್ ಅಥವಾ ಇನ್ಶೂರೆನ್ಸ್-ಸಂಬಂಧಿತ ಪ್ರಶ್ನೆಗಳನ್ನು ಬಗೆಹರಿಸಲು ಯಾವಾಗಲೂ ಲಭ್ಯವಿರುತ್ತದೆ.

ಇದಲ್ಲದೆ, ಕ್ರೆಟಾಗಾಗಿ ನಿಮ್ಮ ಇನ್ಶೂರೆನ್ಸ್‌ನೊಂದಿಗೆ ನೀವು ಮನೆ ಬಾಗಿಲವರೆಗು ಪಿಕಪ್ ಮತ್ತು ಡ್ರಾಪ್ ಫೀಚರ್ ಅನ್ನು ಸಹ ಆಯ್ಕೆ ಮಾಡಬಹುದು. ಈ ಸೌಲಭ್ಯದ ಅಡಿಯಲ್ಲಿ, ನಿಮ್ಮ ಕಾರನ್ನು ಹತ್ತಿರದ ಗ್ಯಾರೇಜ್‌ಗೆ ತೆಗೆದುಕೊಂಡು ಹೋಗಲಾಗುತ್ತದೆ.

ಅದೇನೇ ಇದ್ದರೂ, ಹುಂಡೈ ಕ್ರೆಟಾ ಇನ್ಶೂರೆನ್ಸ್‌ಗೆ ಸಂಬಂಧಿಸಿದಂತೆ ನಿಮಗೆ ಯಾವುದಾದರೂ ಪ್ರಶ್ನೆಗಳಿದ್ದಲ್ಲಿ, ನೀವು 1800 258 5956 ಗೆ ಕರೆ ಮಾಡಬಹುದು ಮತ್ತು ತಜ್ಞರ ಸಹಾಯವನ್ನು ಪಡೆಯಬಹುದು.

ಹುಂಡೈ ಕ್ರೆಟಾ ಕಾರು ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯ?

ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮನ್ನು ನಷ್ಟದ ಸಮಯದಲ್ಲಿ ನೀವು ಆರ್ಥಿಕ ಹೊರೆಯಿಂದ ತಡೆಯುತ್ತದೆ.

ಹ್ಯುಂಡೈ ಕ್ರೆಟಾ ಐಷಾರಾಮಿ ವಿಭಾಗದ ಕಾರುಗಳಲ್ಲಿ ಒಂದಾಗಿದ್ದು, ಆದ್ದರಿಂದ ಇದರ ಇನ್ಶೂರೆನ್ಸ್ ಅನ್ನು ಖರೀದಿಸುವುದು ಸಹ ಮುಖ್ಯವಾಗಿದೆ. ನೀವು ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು ಎಂಬುದಕ್ಕೆ ಉತ್ತರ ಇಲ್ಲಿದೆ:

  • ಹಣಕಾಸಿನ ಭದ್ರತೆಯನ್ನು ನೀಡುತ್ತದೆ: ಕಳ್ಳತನ ಅಥವಾ ಅಪಘಾತದ ಕಾರಣದಿಂದಾಗಿ ನಿಮ್ಮ ಕಾರ್, ನಷ್ಟ ಅಥವಾ ಹಾನಿಯನ್ನು ಅನುಭವಿಸಬಹುದು. ಅಪಘಾತದ ಸಂದರ್ಭದಲ್ಲಿ, ರಿಪೇರಿ ವೆಚ್ಚವು ಕೆಲವೊಮ್ಮೆ ಕೈಗೆಟುಕುವಂತೆ ಇರಬಹುದು ಆದರೆ ಯಾವಾಗಲೂ ಹಾಗಿರುವುದಿಲ್ಲ. ಅಂತಹ ಪರಿಹಾರಗಳಿಗಾಗಿ, ನಿಮ್ಮ ಹಾನಿಯ ವೆಚ್ಚವನ್ನು ಪಾವತಿಸಲು ಅಥವಾ ಮರುಪಾವತಿಯನ್ನು ಪಡೆಯಲು, ನೀವು ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರಲ್ಲಿ ವಿನಂತಿಸಿಕೊಳ್ಳಬಹುದು. ಮತ್ತು ಕಳ್ಳತನದ ಸಂದರ್ಭದಲ್ಲಿ, ನೀವು ಕಾರಿನ ಒಟ್ಟು ವೆಚ್ಚದ ನಷ್ಟವನ್ನು ಎದುರಿಸಬಹುದು. ಕಳ್ಳತನದ ಸಂದರ್ಭದಲ್ಲಿ ಇನ್‌ವಾಯ್ಸ್‌ನ ಮೌಲ್ಯವನ್ನು ಇನ್ಶೂರೆನ್ಸ್ ಕಂಪನಿಯು ನಿಮಗೆ ಮರುಪಾವತಿ ಮಾಡಬಹುದು. ಓನ್ ಡ್ಯಾಮೇಜ್ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ.

  • ಕಡ್ಡಾಯ ಥರ್ಡ್-ಪಾರ್ಟಿ ಲೈಬಿಲಿಟಿ ಪಾಲಿಸಿ: ಭಾರತದಲ್ಲಿ ಥರ್ಡ್-ಪಾರ್ಟಿ ಲೈಬಿಲಿಟಿ ಪಾಲಿಸಿಯನ್ನೂ ಖರೀದಿಸುವುದು ಕಡ್ಡಾಯವಾಗಿದೆ. ಒಂದೋ ನೀವು ಸ್ಟ್ಯಾಂಡ್‌ಲೋನ್ ಕವರ್‌ ಅನ್ನು ಆಯ್ಕೆ ಮಾಡಬಹುದು ಅಥವಾ ಕಾಂಪ್ರೆಹೆನ್ಸಿವ್ ಪ್ಯಾಕೇಜ್ ಪಾಲಿಸಿಯನ್ನು ಆಯ್ಕೆ ಮಾಡಬಹುದು. ಎರಡೂ ಸಂದರ್ಭಗಳಲ್ಲಿ, ಥರ್ಡ್ ಪಾರ್ಟಿಗೆ ನಿಮ್ಮಿಂದ ಉಂಟಾದ ದೈಹಿಕ ಗಾಯ ಅಥವಾ ಆಸ್ತಿ ಹಾನಿಗೆ ಸಂಬಂಧಿಸಿದಂತೆ ಯಾವುದೇ ನಷ್ಟವನ್ನು, ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ಪಾವತಿಸುತ್ತಾರೆ. ಈ ಲೈಬಿಲಿಟಿಗಳು, ವಿಶೇಷವಾಗಿ ಸಾವಿನ ಪ್ರಕರಣಗಳಲ್ಲಿ, ಕೆಲವೊಮ್ಮೆ ಎಲ್ಲರೂ ಭರಿಸಲಾಗದ ದೊಡ್ಡ ಮೊತ್ತವಾಗಬಹುದು. ಆದ್ದರಿಂದ, ಕಾರ್ ಇನ್ಶೂರೆನ್ಸ್ ಪಾಲಿಸಿಯು ಉತ್ತಮವಾಗಿ ಸಹಾಯ ಮಾಡುತ್ತದೆ.

  • ಡ್ರೈವಿಂಗ್‌ಗೆ ಕಾನೂನು ಅನುಮತಿ: ಭಾರತದಲ್ಲಿ, ಮೋಟಾರ್ ವೆಹಿಕಲ್ಸ್ ಆ್ಯಕ್ಟ್ ಪ್ರಕಾರ, ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಅತ್ಯಗತ್ಯ. ಏಕೆಂದರೆ ಅದು ರಸ್ತೆಯಲ್ಲಿ ಚಾಲನೆ ಮಾಡಲು ನಿಮಗೆ ಕಾನೂನಾತ್ಮಕ ಅನುಮತಿಯನ್ನು ನೀಡುತ್ತದೆ. ನೀವು ಈ ಪಾಲಿಸಿಯನ್ನು ಹೊಂದಿಲ್ಲದಿದ್ದರೆ, ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ರದ್ದುಗೊಳಿಸಬಹುದು. ಕನಿಷ್ಠ ಲೈಸೆನ್ಸ್ ಇಲ್ಲದೆ ವೆಹಿಕಲ್ ಚಲಾಯಿಸುವ ಮೊದಲ ಅಪರಾಧಕ್ಕೆ ₹2000 ದಂಡವನ್ನು ವಿಧಿಸಲಾಗುತ್ತದೆ. ಮತ್ತು ಸತತ ಅಪರಾಧಕ್ಕೆ ಈ ದಂಡದ ಮೊತ್ತ ₹4000. ನಿಮ್ಮನ್ನು 3 ತಿಂಗಳ ಕಾಲ ಜೈಲು ಕಂಬಿಗಳ ಹಿಂದೆ ಇರಿಸಬಹುದು.

ಹ್ಯುಂಡೈ ಕ್ರೆಟಾ ಕುರಿತು ಇನ್ನಷ್ಟು ತಿಳಿಯಿರಿ

ಎಸ್.ಯು.ವಿ ವಿಭಾಗದಲ್ಲಿ ಓಡಿಸಲು ಬೋಲ್ಡ್ ಹಾಗೂ ಡೈನಾಮಿಕ್ ಕಾರನ್ನು ಹುಡುಕುತ್ತಿರುವಿರಾ? ಹೌದು ಎಂದಾದರೆ, ಹ್ಯುಂಡೈ ಕ್ರೆಟಾ ನಿಮಗೆ ಸರಿಯಾದ ಆಯ್ಕೆಯಾಗಿದೆ. ಈ ಕಾರ್ ಹಲವಾರು ವೈಶಿಷ್ಟ್ಯಗಳೊಂದಿಗೆ ಬರುತ್ತದೆ ಮತ್ತು E, E+, S, SX, SX(O), ಮತ್ತು SX (O) ಎಕ್ಸಿಕ್ಯೂಟಿವ್ ಅನ್ನು ಒಳಗೊಂಡಿರುವ ಆರು ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಸಂಪೂರ್ಣ ರಿಲ್ಯಾಕ್ಸಿಂಗ್ ಫ್ಯಾಮಿಲಿ ಡ್ರೈವ್‌ಗಾಗಿ, ಹ್ಯುಂಡೈ ಕ್ರೆಟಾ ಒಂದು ಉತ್ತಮ ಆಯ್ಕೆಯಾಗಿದೆ.

ಕಂಪನಿಯು ಈ ಸ್ಮಾರ್ಟ್ ಮತ್ತು ಸೊಗಸಾದ ಎಸ್.ಯು.ವಿ ಯ ಪೆಟ್ರೋಲ್ ಮತ್ತು ಡೀಸೆಲ್ ಫ್ಯೂಯೆಲ್ ವಿಧಗಳನ್ನು ಬಿಡುಗಡೆ ಮಾಡಿದೆ. ಹ್ಯುಂಡೈ ಕ್ರೆಟಾದ ಬೆಲೆಯ ಶ್ರೇಣಿಯು ₹10 ಲಕ್ಷದಿಂದ ಪ್ರಾರಂಭವಾಗಿ ₹15.69 ಲಕ್ಷದವರೆಗೆ ಇರುತ್ತದೆ. ಮೈಲೇಜ್ ಬಗ್ಗೆ ಮಾತನಾಡುವುದಾದರೆ, 1500 ಪ್ಲಸ್ ಕ್ಯೂಬಿಕ್ ಕೆಪ್ಯಾಸಿಟಿಯ ಎಂಜಿನ್, ಪ್ರತಿ ಲೀಟರ್‌ಗೆ 22.1k ನೀಡುವ ಮೂಲಕ ಉತ್ತಮ ಮೈಲೇಜ್ ಅನ್ನು ಸಮರ್ಥಿಸುತ್ತದೆ.

ನೀವು ಹ್ಯುಂಡೈ ಕ್ರೆಟಾ ಕಾರನ್ನು ಏಕೆ ಖರೀದಿಸಬೇಕು?

ಮಾರುಕಟ್ಟೆಯಲ್ಲಿನ ಇತರ ವಿಧದ ಎಸ್.ಯು.ವಿ ಗಳಿಗಿಂತ ಭಿನ್ನವಾಗಿ, ಕ್ರೆಟಾ ಕಾರಿನ ಸ್ಮಾರ್ಟ್ ಲುಕ್ಸ್ ಮತ್ತು ಶೈನಿ ಗ್ರಿಲ್ ನೋಡುಗರ ಗಮನ ಸೆಳೆಯುತ್ತದೆ. ಒಟ್ಟಾರೆಯಾಗಿ ಹೊಸ ಆವೃತ್ತಿಯಲ್ಲಿ ಕಾರಿನ ಒಳಗೆ ಮತ್ತು ಹೊರಗೆ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಬಂಪರ್ ಅತ್ಯುತ್ತಮ ಮಸ್ಕ್ಯೂಲರ್ ಫೀಲ್ ಕೊಡುವುದರಿಂದ, ಇದು ಕಾರನ್ನು ದೊಡ್ಡದಾಗಿ ಕಾಣುವಂತೆ ಮಾಡುತ್ತದೆ.

ಕ್ರೆಟಾ, ಕ್ಯಾಬಿನ್ ಒಳಗೆ, ಏರ್‌ಕಂಡೀಷನರ್‌ನ ವೆಂಟ್ಸ್ ಮೇಲೆ ಮೆಟಾಲಿಕ್ ಫಿನಿಶ್ ಅನ್ನು ಹೊಂದಿದೆ. ಕಾರಿನ ಹೆಚ್ಚಿನ ಆವೃತ್ತಿಗಳು ಎಲೆಕ್ಟ್ರಿಕ್ ಸನ್‌ರೂಫ್ ಅನ್ನು ನೀಡುತ್ತವೆ. ಸುರಕ್ಷತೆಗಾಗಿ, ಕಂಪನಿಯು ಸುರಕ್ಷಿತವಾದ ಪಾರ್ಕಿಂಗ್‌ಗಾಗಿ ರಿಯರ್ ಕ್ಯಾಮೆರಾದೊಂದಿಗೆ ಆರು ಏರ್‌ಬ್ಯಾಗ್‌ಗಳನ್ನು ಒದಗಿಸಿದೆ. ಐದು ಜನರು ಕುಳಿತುಕೊಳ್ಳಲು ಆರಾಮದಾಯಕವಾದ, ಈ ಎಸ್.ಯು.ವಿ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಎರಡನ್ನೂ ಹೊಂದಿದೆ. 

ಇಂಟೀರಿಯರ್‌ಗಾಗಿ, ನೀವು ಪವರ್ ಸ್ಟೀರಿಂಗ್, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್, ಏರ್‌ಬ್ಯಾಗ್‌ಗಳು, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪವರ್ ವಿಂಡೋಗಳು, ಏರ್‌-ಕಂಡೀಷನರ್ ಮತ್ತು ಪ್ಯಾಸೆಂಜರ್ ಏರ್‌ಬ್ಯಾಗ್‌ಗಳನ್ನು ಪಡೆಯುತ್ತೀರಿ. ಹ್ಯುಂಡೈ ಕ್ರೆಟಾ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಹೊಂದಿದೆ. 

ಹೊರಭಾಗದಲ್ಲಿ, ನೀವು ಅಡ್ಜಸ್ಟ್ ಮಾಡಬಹುದಾದ ಹೆಡ್‌ಲೈಟ್‌ಗಳು, ಮುಂಭಾಗದಲ್ಲಿ ಫಾಗ್ ಲೈಟ್‌ಗಳನ್ನು, ಎಲೆಕ್ಟ್ರಿಕ್ ಫೋಲ್ಡಿಂಗ್ ರಿಯರ್ ವ್ಯೂ ಮಿರರ್, ರಿಯರ್ ವಿಂಡೋ ಡಿಫಾಗರ್ ಮತ್ತು ಇನ್ನೂ ಹೆಚ್ಚಿನದನ್ನು ಪಡೆಯುತ್ತೀರಿ.

 

ಪರಿಶೀಲಿಸಿ: ಹ್ಯುಂಡೈ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ

ಹ್ಯುಂಡೈ ಕ್ರೆಟಾದ ಎಲ್ಲಾ ವೇರಿಯಂಟ್‌ಗಳ ಬೆಲೆಯ ಪಟ್ಟಿ

ವೇರಿಯಂಟ್‌ನ ಹೆಸರು ವೇರಿಯಂಟ್‌ನ ಬೆಲೆ (ದೆಹಲಿಯಲ್ಲಿ, ನಗರಗಳಾದ್ಯಂತ ಇದು ಬದಲಾಗಬಹುದು)
1.6 VTVT E (ಪೆಟ್ರೋಲ್) ₹ 10,32,310
1.6 VTVT E ಪ್ಲಸ್ (ಪೆಟ್ರೋಲ್) ₹ 11,06,367
1.4 CRDi L (ಡೀಸೆಲ್) ₹ 11,38,639
1.4 CRDi S (ಡೀಸೆಲ್) ₹ 10.85 Lakh
1.6 VTVT SX ಪ್ಲಸ್ (ಪೆಟ್ರೋಲ್) ₹ 13,54,300
1.6 VTVT SX ಪ್ಲಸ್ ಡ್ಯುಯಲ್ ಟೋನ್ (ಪೆಟ್ರೋಲ್) ₹ 13,94,410
1.6 CRDi SX (ಡೀಸೆಲ್) ₹ 14,37,710
1.4 CRDi S ಪ್ಲಸ್ (ಡೀಸೆಲ್) ₹ 14,31,135
1.6 VTVT AT SX ಪ್ಲಸ್ (ಪೆಟ್ರೋಲ್) ₹ 14,65,300
1.6 CRDi SX ಪ್ಲಸ್ (ಡೀಸೆಲ್) ₹ 15,48,649
1.6 CRDi AT S ಪ್ಲಸ್ (ಡೀಸೆಲ್) ₹ 15,74,300
1.6 CRDi SX ಪ್ಲಸ್ ಡ್ಯುಯಲ್ ಟೋನ್ (ಡೀಸೆಲ್) ₹ 15,89,760
1.6 CRDi SX ಆಪ್ಷನ್ (ಡೀಸೆಲ್) ₹ 16,67,780
1.6 CRDi AT SX ಪ್ಲಸ್ (ಡೀಸೆಲ್) ₹ 16,74,980

ಪದೇ ಪದೇ ಕೇಳಲಾದ ಪ್ರಶ್ನೆಗಳು

ನಾನು ಡಿಜಿಟ್‌ನಿಂದ ಝೀರೋ ಡೆಪ್ರಿಸಿಯೇಶನ್ ಕವರೇಜ್ ಪಡೆಯಬಹುದೇ?

ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಯೋಜನೆಯನ್ನು ಹೊಂದಿರುವ ಪಾಲಿಸಿದಾರರು ಝೀರೋ ಡೆಪ್ರಿಸಿಯೇಶನ್ ಕವರೇಜ್‌ನ ಪ್ರಯೋಜನಗಳನ್ನು ಆನಂದಿಸುತ್ತಾರೆ.

ನಾನು ನನ್ನ ಕಾರಿಗೆ ಪ್ರತ್ಯೇಕವಾಗಿ ಓನ್ ಡ್ಯಾಮೇಜ್ ಪ್ರೊಟೆಕ್ಷನ್ ಪಾಲಿಸಿಯನ್ನು ಖರೀದಿಸಬಹುದೇ?

ಓನ್ ಡ್ಯಾಮೇಜ್ ಪ್ರೊಟೆಕ್ಷನ್ ಅನ್ನು ಕಾಂಪ್ರೆಹೆನ್ಸಿವ್ ಕಾರ್ ಪಾಲಿಸಿಯಲ್ಲಿ ಸೇರಿಸಲಾಗಿದೆ. ಹಾಗಾಗಿ ಅದನ್ನು ನೀವು ಪ್ರತ್ಯೇಕವಾಗಿ ಖರೀದಿಸಲಾಗುವುದಿಲ್ಲ.