ಆನ್‌ಲೈನ್‌ನಲ್ಲಿ ಇಂಟರ್ನ್ಯಾಷನಲ್ ಟ್ರಾವೆಲ್  ಇನ್ಶೂರೆನ್ಸ್ ಖರೀದಿಸಿ
Instant Policy, No Medical Check-ups

L-2 ವೀಸಾ: ಅರ್ಥ, ಎಲಿಜಿಬಿಲಿಟಿ ಕ್ರೈಟೀರಿಯಾ, ಅಪ್ಲಿಕೇಶನ್ ಪ್ರಕ್ರಿಯೆ, ಡಾಕ್ಯುಮೆಂಟುಗಳು ಮತ್ತು ಅಗತ್ಯವಿರುವ ಶುಲ್ಕಗಳು

ಪ್ರತಿಯೊಬ್ಬ ವಲಸಿಗನು ತನ್ನ ಮೂಲ ದೇಶದ ಹೊರಗೆ ಕೆಲಸ ಮಾಡುತ್ತಿದ್ದರೂ ತನ್ನ ಕುಟುಂಬ ಸದಸ್ಯರೊಂದಿಗೆ ಒಂದಾಗಲು ಬಯಸುತ್ತಾನೆ. L-2 ವೀಸಾವು L-1 ವೀಸಾ ಹೊಂದಿರುವವರಿಗೆ ಈ ಸಮಸ್ಯೆಯನ್ನು ಪರಿಹರಿಸಲು ಅವರ ಅವಲಂಬಿತರನ್ನು ಕರೆತರಲು ಅನುಮತಿಸುತ್ತದೆ. ಈ ಲೇಖನವು ಈ ವೀಸಾದ ಕುರಿತು ಅಗತ್ಯವಾದ ವಿವರಗಳನ್ನು ಹೈಲೈಟ್ ಮಾಡುತ್ತದೆ ಇದರಿಂದ ಅಪ್ಲಿಕೆಂಟುಗಳು ಅಪ್ಲೈ ಮಾಡುವ ಮೊದಲು ಸ್ಪಷ್ಟವಾದ ಕಲ್ಪನೆಯನ್ನು ಪಡೆಯಬಹುದು.

L-2 ವೀಸಾ ಎಂದರೇನು?

ಯುಎಸ್ ನ L-2 ವೀಸಾವು ವಲಸಿಗರಲ್ಲದ ಪರ್ಮಿಟ್ ಆಗಿದ್ದು, ಅದು L-1 ವೀಸಾ ಹೋಲ್ಡರಿನ ಅರ್ಹ ಅವಲಂಬಿತರಿಗೆ ಯುನೈಟೆಡ್ ಸ್ಟೇಟ್ಸ್‌ಗೆ ಭೇಟಿ ನೀಡಲು ಅವಕಾಶ ನೀಡುತ್ತದೆ.

L-2 ವೀಸಾಗೆ ಎಲಿಜಿಬಿಲಿಟಿ ಪಡೆಯಲು ಅರ್ಹತೆಯ ನಿಯತಾಂಕಗಳು ಯಾವುವು?

L-2 ವೀಸಾವನ್ನು ಪಡೆಯಲು ವ್ಯಕ್ತಿಗಳು ಪೂರೈಸಬೇಕಾದ ಎಲಿಜಿಬಿಲಿಟಿ ಮಾನದಂಡಗಳನ್ನು ಕೆಳಗೆ ಹೇಳಲಾಗಿದೆ:

  • ವ್ಯಕ್ತಿಯ ಪರವಾಗಿ L-2 ವೀಸಾಕ್ಕೆ ಅಪ್ಲೈ ಮಾಡುವ ವ್ಯಕ್ತಿಯ ಸಂಗಾತಿಯು L-1 ವೀಸಾದ ಎಲಿಜಿಬಲ್ ಹೋಲ್ಡರ್ ಆಗಿರಬೇಕು.
  • L-1 ವೀಸಾ ಹೊಂದಿರುವವರ ಮಕ್ಕಳು 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಮತ್ತು ಅವಿವಾಹಿತರಾಗಿರಬೇಕು.

L-2 ವೀಸಾಗೆ ಅಪ್ಲೈ ಮಾಡುವುದು ಹೇಗೆ?

L-2 ವೀಸಾಕ್ಕೆ ಅಪ್ಲೈ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

ಹಂತ 1: ಅಪ್ಲಿಕೆಂಟುಗಳು ವೈಯಕ್ತಿಕ ಮತ್ತು ಇತರ ಅಗತ್ಯ ವಿವರಗಳೊಂದಿಗೆ ಫಾರ್ಮ್ ಡಿಎಸ್-160 ಅನ್ನು ಭರ್ತಿ ಮಾಡಬೇಕು ಮತ್ತು ಇತ್ತೀಚಿನ ಫೋಟೋಗ್ರಾಫ್ ಅಪ್‌ಲೋಡ್ ಮಾಡಬೇಕು. ಡಿಇಎಸಿ ಬಾರ್‌ಕೋಡ್ ಲಭ್ಯವಿರುವ ಈ ಅಪ್ಲಿಕೇಶನ್ ಫಾರ್ಮಿನ ಕನ್ಫರ್ಮೇಶನ್ ಪೇಜಿನ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಹಂತ 2 : ಸೂಕ್ತವಾದ ವೀಸಾ ಅಪ್ಲಿಕೇಶನ್ ಶುಲ್ಕವನ್ನು ಪಾವತಿಸಿ ಮತ್ತು ಭವಿಷ್ಯದ ರೆಫೆರನ್ಸಿಗಾಗಿ ರಸೀದಿಯನ್ನು ಇರಿಸಿ.

ಹಂತ 3: ಇಂಟರ್ವ್ಯೂಗಾಗಿ ಸ್ಲಾಟ್ ಅನ್ನು ನಿಗದಿಪಡಿಸಿ. ಇದು 13 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಆದರೆ 79 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ಲಿಕೆಂಟುಗಳಿಗೆ ವ್ಯಾಲಿಡ್ ಆಗಿದೆ. ಅನುಕೂಲಕರ ಸ್ಲಾಟ್ ಅನ್ನು ಬುಕಿಂಗ್ ಮಾಡಿದ ನಂತರ, ಅಪ್ಲಿಕೆಂಟುಗಳು ಅಪ್ಲಿಕೇಶನ್ ಪ್ರಕ್ರಿಯೆಯ ಸಮಯದಲ್ಲಿ ಅಗತ್ಯವಿರುವ ಅಪಾಯಿಂಟ್ಮೆಂಟ್ ಲೆಟರ್ ಅನ್ನು ಸ್ವೀಕರಿಸುತ್ತಾರೆ.

L-2 ವೀಸಾಗೆ ಅಗತ್ಯವಿರುವ ಡಾಕ್ಯುಮೆಂಟುಗಳು ಯಾವುವು?

L-2 ವೀಸಾಕ್ಕೆ ಅಪ್ಲೈ ಮಾಡುವಾಗ ಈ ಕೆಳಗಿನ ಡಾಕ್ಯುಮೆಂಟುಗಳನ್ನು ಸಿದ್ಧವಾಗಿಡಿ:

  • ವೀಸಾದ ಮುಕ್ತಾಯ ದಿನಾಂಕದಿಂದ 6 ತಿಂಗಳಿಗಿಂತ ಹೆಚ್ಚು ಅವಧಿಯ ಪಾಸ್‌ಪೋರ್ಟ್
  • ಅವಶ್ಯಕತೆಗೆ ಅನುಗುಣವಾಗಿ ಫೋಟೋಗ್ರಾಫ್
  • ಪಾವತಿ ರಸೀದಿ
  • ಅಪಾಯಿಂಟ್ಮೆಂಟ್ ಲೆಟರ್
  • ಡಿಎಸ್-160 ರ ಕನ್ಫರ್ಮೇಷನ್ 
  • ಫಾರ್ಮ್ I-129, ಫಾರ್ಮ್ I-797 ಮತ್ತು ಫಾರ್ಮ್ I-129S ನ ಫೋಟೋಕಾಪಿಗಳು (L ಬ್ಲಾಂಕೆಟ್ ಅರ್ಜಿಗಳಿಗೆ ಅನ್ವಯಿಸುತ್ತದೆ)
  • L-1 ವೀಸಾ ಹೋಲ್ಡರ್ ಪಾಸ್‌ಪೋರ್ಟ್ ಮತ್ತು ವೀಸಾದ ಫೋಟೋಕಾಪಿಗಳು 
  • L-1 ವೀಸಾ ಹೋಲ್ಡರಿನ ಪ್ರಸ್ತುತ ಮತ್ತು ಹಿಂದಿನ ಎಂಪ್ಲಾಯರಿನ ಎಂಪ್ಲಾಯ್ಮೆಂಟ್ ಲೆಟರ್ 
  • ಮಕ್ಕಳೊಂದಿಗೆ L-1 ವೀಸಾ ಹೋಲ್ಡರಿನ ಸಂಬಂಧವನ್ನು ಸಾಬೀತುಪಡಿಸಲು ಜನನ ಪ್ರಮಾಣಪತ್ರ ಮತ್ತು ಸಂಗಾತಿಯೊಂದಿಗಿನ ಸಂಬಂಧವನ್ನು ಸಾಬೀತುಪಡಿಸಲು ಮ್ಯಾರೇಜ್ ಸರ್ಟಿಫಿಕೇಟ್, ಮದುವೆಯ ರಸೀದಿಗಳು, ಆಲ್ಬಮ್, ಮದುವೆಯ ರಿಜಿಸ್ಟ್ರೇಷನ್ ಫೋಟೋಗ್ರಾಫ್ ಇತ್ಯಾದಿ.
  • L-1 ವೀಸಾ ಹೋಲ್ಡರ್ ಯುನೈಟೆಡ್ ಸ್ಟೇಟ್ಸ್‌ನಲ್ಲಿದ್ದರೆ, ಅವರು ತಮ್ಮ ಪೇಸ್ಲಿಪ್‌ಗಳನ್ನು ಸಬ್ಮಿಟ್ ಮಾಡಬೇಕು.

L-2 ವೀಸಾದ ಅಪ್ಲಿಕೇಶನ್ ಶುಲ್ಕ ಎಷ್ಟು?

ಅಪ್ಲಿಕೆಂಟುಗಳ ಸುಮಾರು $154.99 ಅಪ್ಲಿಕೇಶನ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅದಲ್ಲದೆ, 15 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿ ವಲಸಿಗರಲ್ಲದವರು $154.99 ಮತ್ತು 15 ವರ್ಷದೊಳಗಿನವರಿಗೆ $15.49 ಪಾವತಿಸಬೇಕು.

L-2 ವೀಸಾ ಅಪ್ಲಿಕೇಶನ್ ಗಾಗಿ ತೆಗೆದುಕೊಳ್ಳಲಾದ ಪ್ರಕ್ರಿಯೆಯ ಸಮಯ ಎಷ್ಟು?

L-2 ವೀಸಾಕ್ಕಾಗಿ ಅಪ್ಲಿಕೇಶನ್ ವಿನಂತಿಯನ್ನು ಪ್ರಕ್ರಿಯೆಗೊಳಿಸಲು ಇದು ಸರಿಸುಮಾರು 15 ದಿನಗಳಿಂದ 1 ತಿಂಗಳವರೆಗೆ ತೆಗೆದುಕೊಳ್ಳುತ್ತದೆ. ಆದಾಗ್ಯೂ, ಎಂಬೆಸಿ ಕಚೇರಿಯ ಕೆಲಸದ ಹೊರೆಯ ಆಧಾರದ ಮೇಲೆ ಸಮಯ ಬದಲಾಗಬಹುದು.

L-2 ವೀಸಾದ ಅಪ್ಲಿಕೇಶನ್ ಸ್ಟೇಟಸ್ ಪರಿಶೀಲಿಸುವುದು ಹೇಗೆ?

L-2 ವೀಸಾದ ಅಪ್ಲಿಕೇಶನ್ ಸ್ಟೇಟಸ್ ಅನ್ನು ಪರಿಶೀಲಿಸಲು, ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸಿ:

ಹಂತ1: ಯುಎಸ್ ಸಿಐಎಸ್ ನ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ ಮತ್ತು 'ನಿಮ್ಮ ಕೇಸ್ ಸ್ಟೇಟಸ್ ಚೆಕ್ ' ಆಯ್ಕೆಗೆ ನ್ಯಾವಿಗೇಟ್ ಮಾಡಿ.

ಹಂತ 2: ಅಪ್ಲಿಕೇಶನ್ ಸ್ಟೇಟಸ್ ವೀಕ್ಷಿಸಲು 13-ಅಂಕಿಯ ರಶೀದಿ ಸಂಖ್ಯೆಯನ್ನು ನಮೂದಿಸಿ ಮತ್ತು 'ಚೆಕ್ ಸ್ಟೇಟಸ್ ' ಮೇಲೆ ಕ್ಲಿಕ್ ಮಾಡಿ.

L-2 ವೀಸಾದ ವ್ಯಾಲಿಡಿಟಿ ಮತ್ತು ರಿನೀವಲ್ ಪ್ರಕ್ರಿಯೆ ಏನು?

L-2 ವೀಸಾದ ವ್ಯಾಲಿಡಿಟಿ L-1 ವೀಸಾದ ವ್ಯಾಲಿಡಿಟಿ ಯನ್ನು ಹೋಲುತ್ತದೆ. ಇದರರ್ಥ L-2 ವೀಸಾ ಹೋಲ್ಡರ್ L-1 ವೀಸಾ ಹೋಲ್ಡರ್ ಈ ದೇಶದಲ್ಲಿ ಉಳಿಯಲು ಅರ್ಹತೆ ಪಡೆಯುವವರೆಗೆ ಯುಎಸ್ ನಲ್ಲಿ ಉಳಿಯಬಹುದು.

L-2 ವೀಸಾದ ರಿನೀವಲ್ L-1 ವೀಸಾದ ರಿನೀವಲ್ ಅಥವಾ ವಿಸ್ತರಣೆಯ ಮೇಲೆ ಅವಲಂಬಿತವಾಗಿರುತ್ತದೆ. L-2 ವೀಸಾ ಹೋಲ್ಡರ್ ಯುಎಸ್ ರಾಯಭಾರ ಕಚೇರಿ(ಎಂಬಸಿ( ಅಥವಾ ದೂತಾವಾಸಕ್ಕೆ ಭೇಟಿ ನೀಡಬಹುದು ಅಥವಾ ಅವರು ಯುಎಸ್ ನಲ್ಲಿ ತಂಗಿದ್ದಾಗ ವಿಸ್ತರಣೆ ಅಥವಾ ರಿನೀವಲ್ ಗಾಗಿ ಅಪ್ಲೈ ಮಾಡಬಹುದು. ಆದಾಗ್ಯೂ, L-2 ವೀಸಾ ಹೋಲ್ಡರ್ ಮೊದಲ ಆಯ್ಕೆಯನ್ನು ಆರಿಸಿದರೆ, ಅವರು ಕೆಲವು ವಾರಗಳವರೆಗೆ ದೇಶದ ಹೊರಗೆ ಇರಬೇಕಾಗುತ್ತದೆ.

L-2 ವೀಸಾ ಆಫರ್ ಮಾಡುವ ಪ್ರಯೋಜನಗಳೇನು?

L-2 ವೀಸಾ ಹೋಲ್ಡರ್ ಈ ಕೆಳಗಿನ ಪ್ರಯೋಜನಗಳನ್ನು ಪಡೆಯುತ್ತಾರೆ:

  • L-2 ವೀಸಾ ಹೋಲ್ಡರ್ ಇಎಡಿ ಅಥವಾ ಉದ್ಯೋಗದ ಅಧಿಕೃತ ಡಾಕ್ಯುಮೆಂಟ್ ಅನ್ನು ಪಡೆದ ನಂತರ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಫುಲ್ ಟೈಮ್ ಜಾಬ್ಸ್ ಮಾಡಬಹುದು.
  • L-1 ವೀಸಾ ಹೋಲ್ಡರ್ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅವರ ಅಥವಾ ಅವಳ ತಂಗುವ ಅವಧಿಯ ಆಧಾರದ ಮೇಲೆ ಇರುವವರೆಗೆ ಅಪ್ಲಿಕೆಂಟುಗಳು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸಬಹುದು.
  • ಅಪ್ಲಿಕೆಂಟುಗಳು ಫುಲ್ ಟೈಮ್ ಶೈಕ್ಷಣಿಕ ಕೋರ್ಸ್‌ಗಳಿಗೆ ತಮ್ಮನ್ನು ದಾಖಲಿಸಿಕೊಳ್ಳಲು ಸಹ ಆಯ್ಕೆ ಮಾಡಬಹುದು.
  • L-2 ವೀಸಾ ಹೋಲ್ಡರ್ ಟ್ರಾವೆಲ್ ಉದ್ದೇಶಗಳಿಗಾಗಿ ಯುಎಸ್ ಗೆ ಹಿಂತಿರುಗಬಹುದು ಅಥವಾ ಯುಎಸ್ ಅನ್ನು ಬಿಡಬಹುದು.

ಆದ್ದರಿಂದ, ಮಹತ್ವಾಕಾಂಕ್ಷಿ ಅಪ್ಲಿಕೆಂಟುಗಳು ಯಾವುದೇ ಅನಾನುಕೂಲತೆ ಇಲ್ಲದೆ ಅಪ್ಲೈ ಮಾಡಲು L-2 ವೀಸಾದ ಕುರಿತು ಮೇಲೆ ತಿಳಿಸಲಾದ ವಿವರಗಳನ್ನು ತಿಳಿದಿರಬೇಕು.

ಪದೇ ಪದೇ ಕೇಳಲಾದ ಪ್ರಶ್ನೆಗಳು

L-2 ವೀಸಾ ಸ್ಟಾಂಪಿಂಗ್‌ಗೆ ಅಗತ್ಯವಿರುವ ಡಾಕ್ಯುಮೆಂಟುಗಳು ಯಾವುವು?

ಫಾರ್ಮ್ I-129 ನ ಕಾಪಿ, ಮ್ಯಾರೇಜ್ ಸರ್ಟಿಫಿಕೇಟ್ ಅಥವಾ ಮದುವೆಯ ಇತರ ಪುರಾವೆಗಳು, L-1 ವೀಸಾ ಮತ್ತು ಪಾಸ್‌ಪೋರ್ಟ್‌ನ ಕಾಪಿ, ಐಟಿ ರಿಟರ್ನ್‌ಗಳು, L-1 ವೀಸಾ ಹೋಲ್ಡರಿನ ಕೊನೆಯ 6 ತಿಂಗಳುಗಳ ಪೇಸ್ಲಿಪ್‌ಗಳು ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಕೆಲವು ಡಾಕ್ಯುಮೆಂಟುಗಳಾಗಿವೆ. ಒಬ್ಬ ಅಪ್ಲಿಕೆಂಟ್ L-2 ವೀಸಾ ಸ್ಟಾಂಪಿಂಗ್‌ಗಾಗಿ ಅಪ್ಲೈ ಮಾಡಬೇಕು.

L-2 ವೀಸಾ ಹೋಲ್ಡರ್ ತಮ್ಮ ವೀಸಾ ಸ್ಟೇಟಸ್ ಅನ್ನು ಇತರ ಪರ್ಮಿಟುಗಳಿಗೆ ಬದಲಾಯಿಸಬಹುದೇ?

ಹೌದು, L-1 ವೀಸಾ ಹೋಲ್ಡರ್ ತಮ್ಮ ವೀಸಾ ಸ್ಟೇಟಸ್ ಅನ್ನು B-1, H-1, B-2, H-4 (ಪ್ರೈಮರಿ ವೀಸಾ ಹೋಲ್ಡರ್ H-1 ಸ್ಟೇಟಸ್ ಹೊಂದಿರುವಾಗ ಅನ್ವಯಿಸುತ್ತದೆ) ಮತ್ತು L-1 ನಂತಹ ಇತರ ಪರ್ಮಿಟುಗಳಿಗೆ ಬದಲಾಯಿಸಬಹುದು.