ಪ್ರತಿಯೊಬ್ಬ ವಲಸಿಗನು ತನ್ನ ಮೂಲ ದೇಶದ ಹೊರಗೆ ಕೆಲಸ ಮಾಡುತ್ತಿದ್ದರೂ ತನ್ನ ಕುಟುಂಬ ಸದಸ್ಯರೊಂದಿಗೆ ಒಂದಾಗಲು ಬಯಸುತ್ತಾನೆ. L-2 ವೀಸಾವು L-1 ವೀಸಾ ಹೊಂದಿರುವವರಿಗೆ ಈ ಸಮಸ್ಯೆಯನ್ನು ಪರಿಹರಿಸಲು ಅವರ ಅವಲಂಬಿತರನ್ನು ಕರೆತರಲು ಅನುಮತಿಸುತ್ತದೆ. ಈ ಲೇಖನವು ಈ ವೀಸಾದ ಕುರಿತು ಅಗತ್ಯವಾದ ವಿವರಗಳನ್ನು ಹೈಲೈಟ್ ಮಾಡುತ್ತದೆ ಇದರಿಂದ ಅಪ್ಲಿಕೆಂಟುಗಳು ಅಪ್ಲೈ ಮಾಡುವ ಮೊದಲು ಸ್ಪಷ್ಟವಾದ ಕಲ್ಪನೆಯನ್ನು ಪಡೆಯಬಹುದು.
ಯುಎಸ್ ನ L-2 ವೀಸಾವು ವಲಸಿಗರಲ್ಲದ ಪರ್ಮಿಟ್ ಆಗಿದ್ದು, ಅದು L-1 ವೀಸಾ ಹೋಲ್ಡರಿನ ಅರ್ಹ ಅವಲಂಬಿತರಿಗೆ ಯುನೈಟೆಡ್ ಸ್ಟೇಟ್ಸ್ಗೆ ಭೇಟಿ ನೀಡಲು ಅವಕಾಶ ನೀಡುತ್ತದೆ.
L-2 ವೀಸಾವನ್ನು ಪಡೆಯಲು ವ್ಯಕ್ತಿಗಳು ಪೂರೈಸಬೇಕಾದ ಎಲಿಜಿಬಿಲಿಟಿ ಮಾನದಂಡಗಳನ್ನು ಕೆಳಗೆ ಹೇಳಲಾಗಿದೆ:
L-2 ವೀಸಾಕ್ಕೆ ಅಪ್ಲೈ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:
ಹಂತ 1: ಅಪ್ಲಿಕೆಂಟುಗಳು ವೈಯಕ್ತಿಕ ಮತ್ತು ಇತರ ಅಗತ್ಯ ವಿವರಗಳೊಂದಿಗೆ ಫಾರ್ಮ್ ಡಿಎಸ್-160 ಅನ್ನು ಭರ್ತಿ ಮಾಡಬೇಕು ಮತ್ತು ಇತ್ತೀಚಿನ ಫೋಟೋಗ್ರಾಫ್ ಅಪ್ಲೋಡ್ ಮಾಡಬೇಕು. ಡಿಇಎಸಿ ಬಾರ್ಕೋಡ್ ಲಭ್ಯವಿರುವ ಈ ಅಪ್ಲಿಕೇಶನ್ ಫಾರ್ಮಿನ ಕನ್ಫರ್ಮೇಶನ್ ಪೇಜಿನ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಹಂತ 2 : ಸೂಕ್ತವಾದ ವೀಸಾ ಅಪ್ಲಿಕೇಶನ್ ಶುಲ್ಕವನ್ನು ಪಾವತಿಸಿ ಮತ್ತು ಭವಿಷ್ಯದ ರೆಫೆರನ್ಸಿಗಾಗಿ ರಸೀದಿಯನ್ನು ಇರಿಸಿ.
ಹಂತ 3: ಇಂಟರ್ವ್ಯೂಗಾಗಿ ಸ್ಲಾಟ್ ಅನ್ನು ನಿಗದಿಪಡಿಸಿ. ಇದು 13 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಆದರೆ 79 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ಲಿಕೆಂಟುಗಳಿಗೆ ವ್ಯಾಲಿಡ್ ಆಗಿದೆ. ಅನುಕೂಲಕರ ಸ್ಲಾಟ್ ಅನ್ನು ಬುಕಿಂಗ್ ಮಾಡಿದ ನಂತರ, ಅಪ್ಲಿಕೆಂಟುಗಳು ಅಪ್ಲಿಕೇಶನ್ ಪ್ರಕ್ರಿಯೆಯ ಸಮಯದಲ್ಲಿ ಅಗತ್ಯವಿರುವ ಅಪಾಯಿಂಟ್ಮೆಂಟ್ ಲೆಟರ್ ಅನ್ನು ಸ್ವೀಕರಿಸುತ್ತಾರೆ.
L-2 ವೀಸಾಕ್ಕೆ ಅಪ್ಲೈ ಮಾಡುವಾಗ ಈ ಕೆಳಗಿನ ಡಾಕ್ಯುಮೆಂಟುಗಳನ್ನು ಸಿದ್ಧವಾಗಿಡಿ:
ಅಪ್ಲಿಕೆಂಟುಗಳ ಸುಮಾರು $154.99 ಅಪ್ಲಿಕೇಶನ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅದಲ್ಲದೆ, 15 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿ ವಲಸಿಗರಲ್ಲದವರು $154.99 ಮತ್ತು 15 ವರ್ಷದೊಳಗಿನವರಿಗೆ $15.49 ಪಾವತಿಸಬೇಕು.
L-2 ವೀಸಾಕ್ಕಾಗಿ ಅಪ್ಲಿಕೇಶನ್ ವಿನಂತಿಯನ್ನು ಪ್ರಕ್ರಿಯೆಗೊಳಿಸಲು ಇದು ಸರಿಸುಮಾರು 15 ದಿನಗಳಿಂದ 1 ತಿಂಗಳವರೆಗೆ ತೆಗೆದುಕೊಳ್ಳುತ್ತದೆ. ಆದಾಗ್ಯೂ, ಎಂಬೆಸಿ ಕಚೇರಿಯ ಕೆಲಸದ ಹೊರೆಯ ಆಧಾರದ ಮೇಲೆ ಸಮಯ ಬದಲಾಗಬಹುದು.
L-2 ವೀಸಾದ ಅಪ್ಲಿಕೇಶನ್ ಸ್ಟೇಟಸ್ ಅನ್ನು ಪರಿಶೀಲಿಸಲು, ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸಿ:
ಹಂತ1: ಯುಎಸ್ ಸಿಐಎಸ್ ನ ಅಧಿಕೃತ ಪೋರ್ಟಲ್ಗೆ ಭೇಟಿ ನೀಡಿ ಮತ್ತು 'ನಿಮ್ಮ ಕೇಸ್ ಸ್ಟೇಟಸ್ ಚೆಕ್ ' ಆಯ್ಕೆಗೆ ನ್ಯಾವಿಗೇಟ್ ಮಾಡಿ.
ಹಂತ 2: ಅಪ್ಲಿಕೇಶನ್ ಸ್ಟೇಟಸ್ ವೀಕ್ಷಿಸಲು 13-ಅಂಕಿಯ ರಶೀದಿ ಸಂಖ್ಯೆಯನ್ನು ನಮೂದಿಸಿ ಮತ್ತು 'ಚೆಕ್ ಸ್ಟೇಟಸ್ ' ಮೇಲೆ ಕ್ಲಿಕ್ ಮಾಡಿ.
L-2 ವೀಸಾದ ವ್ಯಾಲಿಡಿಟಿ L-1 ವೀಸಾದ ವ್ಯಾಲಿಡಿಟಿ ಯನ್ನು ಹೋಲುತ್ತದೆ. ಇದರರ್ಥ L-2 ವೀಸಾ ಹೋಲ್ಡರ್ L-1 ವೀಸಾ ಹೋಲ್ಡರ್ ಈ ದೇಶದಲ್ಲಿ ಉಳಿಯಲು ಅರ್ಹತೆ ಪಡೆಯುವವರೆಗೆ ಯುಎಸ್ ನಲ್ಲಿ ಉಳಿಯಬಹುದು.
L-2 ವೀಸಾದ ರಿನೀವಲ್ L-1 ವೀಸಾದ ರಿನೀವಲ್ ಅಥವಾ ವಿಸ್ತರಣೆಯ ಮೇಲೆ ಅವಲಂಬಿತವಾಗಿರುತ್ತದೆ. L-2 ವೀಸಾ ಹೋಲ್ಡರ್ ಯುಎಸ್ ರಾಯಭಾರ ಕಚೇರಿ(ಎಂಬಸಿ( ಅಥವಾ ದೂತಾವಾಸಕ್ಕೆ ಭೇಟಿ ನೀಡಬಹುದು ಅಥವಾ ಅವರು ಯುಎಸ್ ನಲ್ಲಿ ತಂಗಿದ್ದಾಗ ವಿಸ್ತರಣೆ ಅಥವಾ ರಿನೀವಲ್ ಗಾಗಿ ಅಪ್ಲೈ ಮಾಡಬಹುದು. ಆದಾಗ್ಯೂ, L-2 ವೀಸಾ ಹೋಲ್ಡರ್ ಮೊದಲ ಆಯ್ಕೆಯನ್ನು ಆರಿಸಿದರೆ, ಅವರು ಕೆಲವು ವಾರಗಳವರೆಗೆ ದೇಶದ ಹೊರಗೆ ಇರಬೇಕಾಗುತ್ತದೆ.
L-2 ವೀಸಾ ಹೋಲ್ಡರ್ ಈ ಕೆಳಗಿನ ಪ್ರಯೋಜನಗಳನ್ನು ಪಡೆಯುತ್ತಾರೆ:
ಆದ್ದರಿಂದ, ಮಹತ್ವಾಕಾಂಕ್ಷಿ ಅಪ್ಲಿಕೆಂಟುಗಳು ಯಾವುದೇ ಅನಾನುಕೂಲತೆ ಇಲ್ಲದೆ ಅಪ್ಲೈ ಮಾಡಲು L-2 ವೀಸಾದ ಕುರಿತು ಮೇಲೆ ತಿಳಿಸಲಾದ ವಿವರಗಳನ್ನು ತಿಳಿದಿರಬೇಕು.