ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಖರೀದಿಸಿ
Instant Policy, No Medical Check-ups

ಭಾರತೀಯ ನಾಗರಿಕರಿಗಾಗಿ ವೀಸಾ ಫ್ರೀ ದೇಶಗಳು

ಒಂದು ಅಂತರರಾಷ್ಟ್ರೀಯ ಟ್ರಿಪ್ ನ ಯೋಜನೆಯನ್ನು ಹಾಕುವಾಗ, ನಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಯೋಚನೆಯೇ ವೀಸಾಗೆ ಅರ್ಜಿ ಸಲ್ಲಿಸುವ ಬಗ್ಗೆ. ಆನ್ಲೈನ್ ಆಗಿ ಗಂಟೆಗಟ್ಟಲೆ ಕುಳಿತುಕೊಂಡು,  ನಾವು ಹೋಗಬೇಕಾದ ದೇಶದ ಸಂಕೀರ್ಣ ವೀಸಾ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯನ್ನು ನೋಡುತ್ತಿರುತ್ತೇವೆ. 

ಆದರೆ, ಭಾರತೀಯರಿಂದ ವೀಸಾ ಕೇಳದ ಹಲವು ದೇಶಗಳಿವೆ ಹಾಗೂ ಇನ್ನೂ ಕೆಲ ದೇಶಗಳು ಆಗಮನದ ಮೇಲೆ ವೀಸಾವನ್ನು ನೀಡುತ್ತವೆ ಎಂದು ನಿಮಗೆ ತಿಳಿದಿತ್ತೇ?

ಹೌದು, ಇದು ನಿಜ!

ಪಾಸ್ಪೋರ್ಟ್ ಇಂಡೆಕ್ಸ್ ಬೈ ಹೆನ್ಲೀ ಆಂಡ್ ಪಾರ್ಟ್ನರ್ಸ್ ನ ಪ್ರಕಾರ, ಮಾರ್ಚ್ 2023 ರಂತೆ, ಭಾರತೀಯ ಪಾಸ್ಪೋರ್ಟ್ ಹೊಂದಿರುವವರು ಹಲವು ದೇಶಗಳಿಗೆ ವೀಸಾ ಮುಕ್ತವಾಗಿ ಪ್ರಯಾಣಿಸಬಹುದು ಅಥವಾ ಇನ್ನೂ ಕೆಲ ದೇಶಗಳಲ್ಲಿ ಆಗಮನದ ಮೇಲೆ ವೀಸಾವನ್ನು ಪಡೆಯಬಹುದಾಗಿದೆ. ಕೆಳಗಡೆ ನೀಡಿರುವ ಪಟ್ಟಿಯಲ್ಲಿರುವ ದೇಶಗಳಿಗೆ ಭಾರತೀಯರು ಇ-ವೀಸಾ ಅಥವಾ ಪ್ರವೇಶದ ಪರ್ಮಿಟ್ ಜೊತೆ ಕೂಡಾ ಪ್ರಯಾಣಿಸಬಹುದಾಗಿದೆ. ಪ್ರಸ್ತುತ, ಪ್ರಯಾಣ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಭಾರತದ ಪಾಸ್ಪೋರ್ಟ್ 84ನೇ ಶ್ರೇಯಾಂಕವನ್ನು ಪಡೆದಿದೆ. 

ಈಗ ಯಾವ ಯಾವ ದೇಶಗಳಿಗೆ ಭಾರತವು ವೀಸಾ ಮುಕ್ತವಾಗಿ ಭೇಟಿ ನೀಡಬಹುದು? ಕೆಳಗಡೆ ನೀಡಲಾಗಿರುವ ಪಟ್ಟಿಯನ್ನು ನೋಡೋಣ!

2023ಯಲ್ಲಿ ಭಾರತೀಯ ನಾಗರಿಕರಿಗಾಗಿ ವೀಸಾ ಫ್ರೀ ದೇಶಗಳ ಪಟ್ಟಿ

ಭಾರತೀಯರು ವೀಸಾ ಇಲ್ಲದೆ ಪ್ರಯಾಣಿಸಬಹುದಾದ ದೇಶಗಳ ಪಟ್ಟಿ ಇಲ್ಲಿದೆ:

1. ಆಲ್ಬೇನಿಯಾ 15. ಮೈಕ್ರೊನೇಷಿಯಾ
2. ಬಾರ್ಬೇಡೋಸ್ 16. ಮಾಟ್ಸೆರ್ರಾಟ್
3. ಭೂತಾನ್ 17. ನೇಪಾಳ
4. ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್ 18. ನಿಯು
5. ಕುಕ್ ಐಲ್ಯಾಂಡ್ಸ್ 19. ಒಮಾನ್
6. ಡಾಮಿನಿಕಾ 20. ಕತಾರ್
7. ಎಲ್ ಸಾಲ್ವಾಡೋರ್ 21. ಸೆನೆಗಲ್
8. ಫಿಜಿ 22. ಸಂಟ್ ಕಿಟ್ಸ್ ಆಂಡ್ ನೆವಿಸ್
9. ಗ್ರೆನಾಡಾ 23. ಸೈಂಟ್ ವಿನ್ಸೆಂಟ್ ಆಂಡ್ ಗ್ರೆನಡೈನ್ಸ್
10. ಹೈಟಿ 24. ಶ್ರಿಲಂಕಾ
11. ಜಮೈಕಾ 25. ಟ್ರಿನಿಡಾಡ್ ಆಂಡ್ ಟೊಬೇಗೊ
12. ಕಝಕಿಸ್ತಾನ್ 26. ಟ್ಯುನಿಷಿಯಾ
13. ಮಕಾವ್ (ಎಸ್.ಎ.ಆರ್ ಚೈನಾ) 27. ಥೈಲ್ಯಾಂಡ್
14. ಮಾರಿಷಿಯಸ್ 28. ವನುವಾಟು

2023ಯಲ್ಲಿ ಭಾರತೀಯ ನಾಗರಿಕರಿಗಾಗಿ ಆಗಮನದ ಮೇಲಿನ ವೀಸಾ/ಇ-ವೀಸಾ ನೀಡುವ ದೇಶಗಳ ಪಟ್ಟಿ

ಸಾಮಾನ್ಯವಾಗಿ, ಆಗಮನದ ಮೇಲೆ ವೀಸಾ ದೊರೆಯಲು, ವಲಸೆ ಅಧಿಕಾರಿಯು ಪ್ರಯಾಣಿಕರ ಪಾಸ್ಪೋರ್ಟ್, ಅವರ ಬಯೋಮೆಟ್ರಿಕ್ ಮಾಹಿತಿಯನ್ನು ಪರಿಶೀಲಿಸಿ, ಸೂಕ್ತ ಪಾವತಿಯನ್ನು ಸಂಗ್ರಹಿಸಿದ ನಂತರ ವೀಸಾ ಪರ್ಮಿಟ್ ಅನ್ನು ನೀಡುತ್ತಾರೆ. ಆಗಮನ ಮೇಲಿನ ವೀಸಾವನ್ನು ದೇಶದ ಪ್ರಮುಖ ಪ್ರವೇಶ ಸ್ಥಳಗಳಲ್ಲಿ ನೀಡಲಾಗುತ್ತದೆ, ಆದ್ದರಿಂದ ನೀವು ಅಲ್ಲಿ ತಲುಪುವಾಗ ವೀಸಾ ಎಲ್ಲಿ ನೀಡಲಾಗುತ್ತದೆ ಎಂದು ನೆನಪಿನಲ್ಲಿಡಿ. 

ಭಾರತೀಯರಿಗಾಗಿ ಎಲೆಕ್ಟ್ರಾನಿಕ್ ಟ್ರಾವೆಲ್ ಆಥೊರೈಸೇಶನ್(ಇ.ಟಿ.ಎ) ಸೌಲಭ್ಯವು 2014 ರಲ್ಲಿ ಕಾರ್ಯರೂಪಕ್ಕೆ ಬಂತು, ಹಾಗೂ 2015 ರಲ್ಲಿ ತನ್ನ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿತು. ಕೆಳಗೆ ನೀಡಲಾದ ಈ ಪಟ್ಟಿಯಲ್ಲಿ, 2023ಯಲ್ಲಿ ಭಾರತೀಯ ನಾಗರಿಕರಿಗಾಗಿ ಆಗಮನದ ಮೇಲಿನ ವೀಸಾ/ಇ-ವೀಸಾ ನೀಡುವ ದೇಶಗಳ ಹೆಸರನ್ನು ಉಲ್ಲೇಖಿಸಲಾಗಿದೆ:

29. ಬೊಲಿವಿಯಾ 45. ಮೌರಿಟಾನಿಯಾ
30. ಬೋಟ್ಸ್ವಾನಾ 46. ಮೊಜಾಂಬಿಕ್
31. ಬುರುಂಡಿ 47. ಮಯನ್ಮಾರ್
32. ಕಾಂಬೋಡಿಯಾ 48. ಪಲಾವ್ ಐಲ್ಯಾಂಡ್ಸ್
33. ಕೇಪ್ ವರ್ಡೆ ಐಲ್ಯಾಂಡ್ಸ್ 49. ರವಾಂಡ
34. ಕೊಮೋರೋ ಐಲ್ಯಾಂಡ್ಸ್ 50. ಸಮೋವಾ
35. ಎಥಿಯೋಪಿಯಾ 51. ಸೀಶೆಲ್ಸ್
36. ಗಾಬೊನ್ 52. ಸಿಯೆರ್ರಾ ಲಿಯೊನಿ
37. ಗಿನಿ-ಬಸ್ಸಾವ್ 53. ಸೊಮಾಲಿಯಾ
38. ಇಂಡೊನೇಷಿಯಾ 54. ಸೈಂಟ್ ಲೂಸಿಯಾ
39. ಇರಾನ್ 55. ತಂಜಾನಿಯಾ
40. ಜಾರ್ಡನ್ 56. ಟಿಮೊರ್-ಲೆಸ್ಟೆ
41. ಲಾವೋಸ್ 57. ಟೊಗೊ
42. ಮಡಗಾಸ್ಕರ್ 58. ಟುವಾಲು
43. ಮಾಲ್ಡಿವ್ಸ್ 59. ಯುಗಾಂಡಾ
44. ಮಾರ್ಷಲ್ ಐಲ್ಯಾಂಡ್ಸ್ 60. ಜಿಂಬಾಬ್ವೆ

ಭಾರತೀಯ ಪಾಸ್ಪೋರ್ಟ್ ಹೊಂದಿರುವವರಿಗಾಗಿ ಇ-ವೀಸಾ ಒದಗಿಸುವ ದೇಶಗಳ ಪಟ್ಟಿ

61. ಅಂಗೋಲಾ 

74. ಮಲೇಷಿಯಾ

62. ಅಂಟಿಗ್ವಾ ಆಂಡ್ ಬರ್ಬೊಡಾ

75. ಮೋಲ್ಡೋವಾ

63. ಆಸ್ಟ್ರೇಲಿಯಾ

76. ಮೊರೊಕ್ಕೋ

64. ಅಜರ್ಬೈಜಾನ್

77. ರಷ್ಯಾ

65. ಬಾಹ್ರೈನ್

78. ಸೆಒ ಟೊಮೆ ಆಂಡ್ ಪ್ರಿನ್ಸಿಪ್

66. ಬೆನಿನ್

79. ಸಿಂಗಾಪುರ್

67. ಕೊಲಂಬಿಯಾ

80. ಸುರಿನೇಮ್ 

68. ಜಿಬೌಟಿ

81. ತೈವಾನ್

69. ಜಾರ್ಜಿಯಾ

82. ತಜಕಿಸ್ಥಾನ್

70. ಕೆನ್ಯಾ

83. ಟುರ್ಕಿಯೆ

71. ಕುವೈಟ್

84. ಉಜ್ಬೆಕಿಸ್ಥಾನ್

72. ಕಿರ್ಗಿಸ್ಥಾನ್

85. ವಿಯೆಟ್ನಾಮ್

73. ಲೆಸೋತೋ

86. ಜಾಂಬಿಯಾ

ನೀವು ಪಡೆಯಬಹುದಾದ ವಿಭಿನ್ನ ರೀತಿಯ ವೀಸಾಗಳು ಯಾವುವು?

 

ಸರಿ. ಈಗ ಮುಖ್ಯವಾಗಿ ವೀಸಾಗಳು ಎಂದರೇನು?

ಒಂದು ದೇಶಕ್ಕೆ ಭೇಟಿ ನೀಡಲು ಬಯಸುವ ವಿದೇಶಿಗರಿಗೆ ಅಲ್ಲಿನ ಸರಕಾರ ನೀಡುವ ಅನುಮತಿ ದಾಖಲೆಯನ್ನು ವೀಸಾ ಎನ್ನುತ್ತಾರೆ. ನಿಮ್ಮ ಮೂಲ ದೇಶದ ಪುರಾವೆಯಾಗಿರುವ ಪಾಸ್ಪೋರ್ಟ್ ಗಿಂತ ವೀಸಾ ಭಿನ್ನವಾಗಿದ್ದು, ವೀಸಾಗಳು ನೀವು ಒಂದು ಪರದೇಶದಲ್ಲಿ ಉಳಿಯಲು ನಿಮಗೆ ಇಷ್ಟು ದಿನಗಳ ವರೆಗೆ ಅನುಮತಿಸಲಾಗಿದೆ ಎಂಬ ಗುರುತನ್ನು ಹೊಂದಿರುತ್ತವೆ. 

ಈಗ, ಹಲವು ದೇಶಗಳು ಅವರ ವೀಸಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಬೇರೆ ಬೇರೆ ರೀತಿಯ ನಿಬಂಧನೆಗಳನ್ನು ಹೇರಿದ್ದಾರೆ. ಅವುಗಳನ್ನು ಸೂಚಿಸುವ ಪಟ್ಟಿ ಇಲ್ಲಿದೆ: 

ವೀಸಾದ ವಿಧ ಇದು ಏನನ್ನು ಸೂಚಿಸುತ್ತದೆ?
ವೀಸಾ-ಮುಕ್ತ ವೀಸಾ ಮುಕ್ತ ಪ್ರಯಾಣದಲ್ಲಿ ನೀವು ವೀಸಾ ಹೊಂದದೆಯೇ ಒಂದು ದೇಶಕ್ಕೆ ಭೇಟಿ ನೀಡಬಹುದಾಗಿದೆ. ಭಾಗಿಯಾಗಿರುವ ಎರಡು ದೇಶಗಳೂ ಇದರ ಬಗ್ಗೆ ಒಪ್ಪಂದವನ್ನು ಹೊಂದಿದ್ದರೆ, ಅಥವಾ ಒಬ್ಬ ವ್ಯಕ್ತಿಯು ಭೇಟಿ ನೀಡುತ್ತಿರುವ ದೇಶವು ಏಕಪಕ್ಷೀಯವಾಗಿ ವಿದೇಶಿಗರಿಗಾಗಿ ತನ್ನ ಗಡಿಗಳನ್ನು ತೆರೆದಿದ್ದರೆ ಇದು ಅನ್ವಯಿಸುತ್ತದೆ.
ಆಗಮನದ ಮೇಲಿನ ವೀಸಾ ಆನ್-ಅರೈವಲ್ ವೀಸಾ ಎಂದೂ ಕರೆಯಲ್ಪಡುವ ಇದನ್ನು ದೇಶದ ಪ್ರವೇಶ ಸ್ಥಳದಲ್ಲಿ ಪ್ರಯಾಣಿಕರಿಗೆ ನೀಡಲಾಗುತ್ತದೆ. ವೀಸಾ ನೀಡುವಿಕೆಯ ಸಂಪೂರ್ಣ ಪ್ರಕ್ರಿಯೆಯನ್ನು ಪ್ರವೇಶ ಸ್ಥಳದಲ್ಲೇ ಸರಕಾರಿ ಅಧಿಕಾರಿಗಳಿಂದ ಮಾಡಲಾಗುತ್ತದೆ.
ಇ-ವೀಸಾ ಇ-ವೀಸಾಗಳೆಂದರೆ, ಒಂದು ದೇಶದ ವಲಸೆ ಅಧಿಕಾರಿ ಆ ದೇಶದೊಳಗೆ ಪ್ರವೇಶಕ್ಕಾಗಿ ಆನ್ಲೈನ್ ಆಗಿ ಅನುಮತಿ ನೀಡಲು ಒದಗಿಸುವ ಅಧಿಕೃತ ದಾಖಲೆಗಳಾಗಿವೆ. ಇದು ದೇಶದ ರಾಯಭಾರಿ ನೀಡುವ ಕಾಗದದ ವೀಸಾಗಳಿಗೆ ಪರ್ಯಾಯವಾಗಿರುತ್ತವೆ.
ಪ್ರವೇಶ ಪರ್ಮಿಟ್ ದೇಶಗಳು ಪ್ರಯಾಣಿಕರಿಗೆ ವೀಸಾದ ಬದಲು ಪ್ರವೇಶ ಪರ್ಮಿಟ್ ನೀಡುತ್ತವೆ. ಈ ಪ್ರವೇಶ ಪರ್ಮಿಟ್ ಗಳು ದಾಖಲೆಗಳಾಗಿದ್ದು ವಿದೇಶಿಗರಿಗೆ ಒಂದು ದೇಶದಲ್ಲಿ ಕೆಲ ಕಾಲ ಕಾನೂನಾತ್ಮಕವಾಗಿ ಉಳಿದುಕೊಳ್ಳಲು ಅನುಮತಿ ನೀಡುತ್ತವೆ.

ಟ್ರಾವೆಲ್ ಇನ್ಶೂರೆನ್ಸ್ ಪಡೆಯುವುದು ಕಡ್ಡಾಯವೇ?

ಹೌದು! ವಿಶ್ವಾದ್ಯಂತ ಪ್ರಯಾಣಿಕರಿಗೆ ಟ್ರಾವೆಲ್  ಇನ್ಶೂರೆನ್ಸ್ ಪಡೆಯುವುದು ಈ 34 ದೇಶಗಳಲ್ಲಿ ಕಡ್ಡಾಯವಾಗಿದೆ. ಇದಕ್ಕೊಂದು ಪ್ರಾಥಮಿಕ ಕಾರಣವೆಂದರೆ ವಿದೇಶಗಳಲ್ಲಿ ಆರೋಗ್ಯ ಆರೈಕೆಯ ಅಧಿಕ ವೆಚ್ಚವಾಗಿದೆ. ಇದನ್ನು ಹೊರತುಪಡಿಸಿ, ಪ್ರಯಾಣದ ಸಮಯದಲ್ಲಿ ಉಂಟಾಗಬಲ್ಲ ಅನಿರೀಕ್ಷಿತ ಸನ್ನಿವೇಶಗಳಿಂದ ನಿಮ್ಮನ್ನು ನೀವು ಆರ್ಥಿಕವಾಗಿ ಸಂರಕ್ಷಿಸ ಬಯಸುವಿರಿ, ಅಲ್ಲವೇ?

 

ನೀವು ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಗಳಿಂದ ಹಲವು ಲಾಭಗಳನ್ನು ಪಡೆಯಬಹುದಾಗಿದೆ. ಕೆಲವು ಹೀಗಿವೆ: 

 

  • ವೈದ್ಯಕೀಯ ಎಮರ್ಜನ್ಸಿಗಳ ಕವರೇಜ್ - ಪ್ರಯಾಣದ ಸಮಯದಲ್ಲಿ, ತುರ್ತು ವೈದ್ಯಕೀಯ ಸಹಾಯ ಬೇಕಾಗುವ ಸಂದರ್ಭ ಒದಗಿಬರಬಹುದು- ಅದು ಅಪಘಾತ ಅಥವಾ ಅನಾರೋಗ್ಯ ಸಂಬಂಧೀ ಆಗಿರಬಹುದು. ಇಂತಹ ಸಂದರ್ಭಗಳಲ್ಲಿ ಪ್ರಯಾಣ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಆಸ್ಪತ್ರೆಯ ಬಿಲ್ ಹಾಗೂ ಚಿಕಿತ್ಸೆಯ ವೆಚ್ಚಗಳನ್ನು ಕವರ್ ಮಾಡುವುದು.

  • ಟ್ರಿಪ್ ರದ್ದತಿ ಅಥವಾ ಫ್ಲೈಟ್ ವಿಳಂಬ - ಒಂದು ಫ್ಲೈಟಿನ ವಿಳಂಬ, ತಪ್ಪಿದ ಸಂಪರ್ಕ ಅಥವಾ ಒಟ್ಟಾರೆ ಟ್ರಿಪ್ಪಿನ ರದ್ದತಿ ಟ್ರಾವೆಲ್ ಇನ್ಶೂರ್ರೆನ್ಸ್ ಪಾಲಿಸಿ ಕವರೇಜ್ ಅಡಿಯಲ್ಲಿ ಬರುವ ಕೆಲ ದೃಷ್ಟಾಂತಗಳಾಗಿವೆ. 

  • ವಿಳಂಬ/ ಬ್ಯಾಗೇಜ್ ಕಳೆದುಕೊಳ್ಳುವಿಕೆ - ನಿಮ್ಮ ರಜೆ ಆನಂದಿಸಲು ಇನ್ನು ನಿಮ್ಮಿಂದ ತಡೆಯಲು ಸಾಧ್ಯವಿಲ್ಲ, ಆದರೆ ಬ್ಯಾಗೇಜ್ ಬರುವುದು ವಿಳಂಬವಾಗಿದೆ! ಇಂತಹ ಸಮಯದಲ್ಲಿ, ಪ್ರಯಾಣ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಬ್ಯಾಗೇಜ್ ಕಳೆದುಕೊಳ್ಳುವಿಕೆ ಅಥವಾ ವಿಳಂಬಕ್ಕೆ ಆರ್ಥಿಕ ಪರಿಹಾರ ನೀಡುತ್ತದೆ.

  • ಹಣದ ಪರ್ಸ್ ಕಳೆದುಕೊಳ್ಳುವಿಕೆ ವಿರುದ್ಧ ಸಂರಕ್ಷಣೆ - ನೀವು ವಿದೇಶ ಪ್ರಯಾಣ ಮಾಡುವಾಗ ನಿಮ್ಮ ಹಣದ ಪರ್ಸಿನ ಕಳೆದುಕೊಳ್ಳುವಿಕೆ ಅಥವಾ ಕಳುವು ಒಂದು ಗಂಭೀರ ಸಮಸ್ಯೆಯಾಗಬಹುದು. ಇಂತಹ ಸಂದರ್ಭಗಳಲ್ಲಿ ಸಿಕ್ಕಿಹಾಕಿಕೊಳ್ಳದಂತೆ ನಿಮ್ಮ ಪ್ರಯಾಣ ಇನ್ಶೂರೆನ್ಸ್ ಪಾಲಿಸಿಯು ಆರ್ಥಿಕ ತುರ್ತು ಕ್ಯಾಷ್ ಅನ್ನು ನೀಡುತ್ತದೆ. 

  • ವಿಸ್ತರಿಸಲಾದ ಅಥವಾ ಕೈಬಿಡಲಾದ ಟ್ರಿಪ್ಪಿಗಾಗಿ ಕವರ್ - ಪ್ರತಿಭಟನೆ, ಕೋಮು ಗಲಭೆ, ಪ್ರಕೃತಿ ವಿಕೋಪ ಇತ್ಯಾದಿಯಂತಹ ಹಾನಿಕಾರಕ ಘಟನೆಗಳಾದ ಸಂದರ್ಭದಲ್ಲಿ, ನಿಮ್ಮ ಟ್ರಿಪ್ಪಿನ ಅವಧಿಯಲ್ಲಿ ಏರುಪೇರಾಗಬಹುದು. ಇಂತಹ ಸನ್ನಿವೇಶಗಳು ಮಿಂಚಿನಂತೆ ಬಂದು ನಿಮ್ಮ ಟ್ರಿಪ್ಪನ್ನು ಕೈಬಿಡುವಂತೆ ಅಥವಾ ವಿಸ್ತರಿಸುವಂತೆ ಮಾಡಬಹುದು. ಖರ್ಚಿನ ಬಗ್ಗೆ ತಲೆಕೆಡಿಸಿಕೊಳ್ಳದಿರಿ ಏಕೆಂದರೆ ನಿಮ್ಮ ಟ್ರಾವೆಲ್  ಇನ್ಶೂರೆನ್ಸ್ ನಿಮ್ಮ ವಿಸ್ತರಿಸಲಾದ ಅಥವಾ ಕೈಬಿಡಲಾದ ಟ್ರಿಪ್ಪಿಗಾಗಿ ಕವರ್ ನೀಡುತ್ತದೆ. 

  • ಬೌನ್ಸ್ಡ್ ಬುಕಿಂಗ್ - ನೀವು ಎಲ್ಲಾ ನಿವಾಸದ ಬುಕಿಂಗ್, ಇವೆಂಟ್ ಗಳ ಬುಕಿಂಗ್ ಮಾಡಿ ಅಲ್ಲಿ ತಲುಪಿದ ಮೇಲೆ ಹೋಟೆಲ್ ಅತಿಯಾಗಿ ಬುಕ್ ಆಗಿ ನಿಮ್ಮ ಬುಕಿಂಗ್ ಬೌನ್ಸ್ ಆಗಿದೆ ಎಂದು ಗೊತ್ತಾದರೆ ಏನು ಮಾಡುತ್ತೀರಿ? ಇಂತಹ ಹತಾಶೆಯ ಪರಿಸ್ಥಿತಿಯಲ್ಲಿ, ಬೌನ್ಸ್ಡ್ ಬುಕಿಂಗ್ ಕವರ್ ಇರುವ ಟ್ರಾವೆಲ್  ಇನ್ಶೂರೆನ್ಸ್ ಪಾಲಿಸಿ ನಿಮ್ಮನ್ನು ರಕ್ಷಿಸುತ್ತದೆ!

ಹಾಗಾದರೆ, ನೀವು ನಿಮ್ಮ ಟ್ರಿಪ್ ಅನ್ನು ಸುರಕ್ಷಿತವಾಗಿಸಿ ಆರ್ಥಿಕ ಸಂರಕ್ಷಣೆ ಪಡೆಯಬೇಕೆದಿದ್ದರೆ, ಆರಂಭದಲ್ಲಿಯೇ ಟ್ರಾವೆಲ್ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸಿ! ಮಾರುಕಟ್ಟೆಯಲ್ಲಿ ಇಂತವುಗಳು ಹಲವು ಇರುವುದರಿಂದ, ಪಾವತಿ ಮಾಡುವುದಕ್ಕಿಂತ ಮೊದಲು, ಕೈಗೆಟಕುವ ದರದಲ್ಲಿ ಉತ್ತಮ ಲಾಭಗಳನ್ನು ಪಡೆಯಲು ಟ್ರಾವೆಲ್  ಇನ್ಶೂರೆನ್ಸ್ ಯೋಜನೆಗಳ ಹೋಲಿಕೆ ಮಾಡಿ

ಭಾರತೀಯರಿಗೆ ವೀಸಾ ಮುಕ್ತ ದೇಶಗಳ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಎಲ್ಲಾ ಭಾರತೀಯ ಪಾಸ್ಪೋರ್ಟ್ ಹೊಂದಿರುವವರಿಗೆ ವೀಸಾ ಫ್ರೀ ಪ್ರವೇಶ ಒಂದೇ ರೀತಿ ಇರುತ್ತದೆಯೇ?

ಇಲ್ಲ, ಭಾರತೀಯ ನಾಗರಿಕರೊಬ್ಬರ ಪಾಸ್ಪೋರ್ಟ್ ವಿಧದ ಮೇಲೆ ವೀಸಾ ಫ್ರೀ ಪ್ರವೇಶ ಬದಲಾವಣೆಯಾಗಬಹುದು. ಉದಾಹರಣೆಗೆ, ರಾಜತಾಂತ್ರಿಕ ಅಥವಾ ಅಧಿಕಾರಿ ಪಾಸ್ಪೋರ್ಟ್ ಹೊಂದಿರುವವರಿಗೆ ಪ್ರವೇಶ ಅಗತ್ಯಗಳು ಬೇರೆಯಾಗಿರಬಹುದು.

ವೀಸಾ ಫ್ರೀ ದೇಶಗಳಿಗೆ ಹೋಗಲು ಯಾವ ದಾಖಲೆಗಳ ಅಗತ್ಯವಿದೆ?

ವೀಸಾ ಫ್ರೀ ದೇಶಕ್ಕೆ ಹೋಗುವಾಗಲೂ, ನೀವು ಮಾನ್ಯ ಪಾಸ್ಪೋರ್ಟ್- ಸಾಮಾನ್ಯವಾಗಿ ನಿಮ್ಮ ತೆರಳುವ ಸಮಯದಿಂದ ಆರು ತಿಂಗಳ ನಂತರದ ದಿನಾಂಕವಿರುವ - ಹಾಗೂ ನೀವು ಭೇಟಿ ಮಾಡುತ್ತಿರುವ ದೇಶ ಕಡ್ಡಾಯಗೊಳಿಸಿರುವ ಪ್ರಯಾಣದ ಇನ್ಶೂರೆನ್ಸ್. ನೀವು ಹೋಗಬೇಕಾದ ಪ್ರಯಾಣದ ಪುರಾವೆ(ಫ್ರೀ ವೇಳಾಪಟ್ಟಿ, ಫ಼್ಲೈಟ್ ಟಿಕೆಟ್ ಗಳು ಇತ್ಯಾದಿ), ಲಸಿಕೆ ಪ್ರಮಾಣಪತ್ರ ಇತ್ಯಾದಿ. ನೀವು ಒಂದು ದೇಶದ ಪ್ರವೇಶಕ್ಕೆ ಬೇಕಾದ ಕನಿಷ್ಠ ಅರ್ಹತೆಗಳನ್ನು ಪೂರ್ಣಗೊಳಿಸುತ್ತಿದ್ದೀರಿ ಎಂದು ಖಚಿತಪಡಿಸಿ.

ವೀಸಾ ಫ್ರೀ ಪ್ರವೇಶವು ಭಾರತೀಯರಿಗೆ ಖಚಿತವಾಗಿರುತ್ತದೆಯೇ?

ಭಾರತೀಯ ನಾಗರಿಕರು ಒಂದು ಪರದೇಶವನ್ನು ವೀಸಾ ಇಲ್ಲದೆ ಭೇಟಿಯಾಗಬಹುದಾದರೂ, ಆ ದೇಶಕ್ಕೆ ಪ್ರವೇಶ ನಿಶ್ಚಿತ ಎಂದು ಹೇಳಲು ಸಾಧ್ಯವಿಲ್ಲ. ನೀವು ನೀವು ಒಂದು ದೇಶದ ಪ್ರವೇಶಕ್ಕೆ ಬೇಕಾದ ಕನಿಷ್ಠ ಅರ್ಹತೆಗಳನ್ನು ಪೂರ್ಣಗೊಳಿಸದೇ ಇದ್ದರೆ ಅಥವಾ ಯಾವುದೇ ಕಾರಣಕ್ಕೆ ವಲಸೆ ಅಧಿಕಾರಿಯು ನಿಮ್ಮ ಪ್ರವೇಶವನ್ನು ತಡೆದರ, ನಿಮ್ಮ ಪ್ರವೇಶವನ್ನು ರದ್ದುಗೊಳಿಸುವ ಸಾಧ್ಯತೆ ಇರುವುದು.

ಭಾರತೀಯರು ಒಂದು ವೀಸಾ ಫ್ರೀ ದೇಶದಲ್ಲಿ ವೀಸಾ ಇಲ್ಲದೆ ಅನಿಯಮಿತ ಸಮಯದವರೆಗೆ ನೆಲೆಸಬಹುದೇ?

ಇಲ್ಲ, ವೀಸಾ ಮುಕ್ತ ದೇಶಗಳಲ್ಲಿ ವೀಸಾ ಇಲ್ಲದೆ ನೆಲೆಸಲು ಕೆಲವೇ ದಿನಗಳ ಅವಕಾಶವಿರುತ್ತದೆ. ಈ ಅವಧಿಯು ಪ್ರತೀ ದೇಶದಲ್ಲೂ ಬೇರೆ ಬೇರೆಯಾಗಿರುವುದರಿಂದ, ನೀವು ಪ್ರಯಾಣಿಸುವ ಮೊದಲು ಆ ದೇಶದ ಪ್ರವೇಶ ಆವಶ್ಯಕತೆಗಳನ್ನು ಪರಿಶೀಲಿಸತಕ್ಕದ್ದು

ವೀಸಾ ಫ್ರೀ ದೇಶಗಳಲ್ಲಿ ವೀಸಾ ಇಲ್ಲದೆ ಭಾರತೀಯರು ನೌಕರಿ ಅಥವಾ ಅಧ್ಯಯನ ಮಾಡಬಹುದೇ?

ಇಲ್ಲ, ವೀಸಾ ಫ್ರೀ ಪ್ರವೇಶವು ಸಾಮಾನ್ಯವಾಗಿ ಪ್ರವಾಸ ಅಥವಾ ಅಲ್ಪಾವಧಿ ಭೇಟಿಗಾಗಿ ಇರುತ್ತದೆ. ಭಾರತೀಯರಿಗೆ ಈ ದೇಶಗಳಲ್ಲಿ ನೌಕರಿ ಅಥವಾ ಅಧ್ಯಯನ ಮಾಡಬೇಕೆಂದಿದ್ದರೆ, ಅವರು ಸೂಕ್ತವಾದ ವೀಸಾಗೆ ಅರ್ಜಿಸಲ್ಲಿಸತಕ್ಕದ್ದು.