ಟ್ರಾವೆಲ್ ಇನ್ಶೂರೆನ್ಸ್ ವೆಚ್ಚವನ್ನು ನಾನು ಹೇಗೆ ಕಡಿಮೆ ಮಾಡಬಹುದು?
ನಿಮ್ಮ ಇಂಟರ್ನ್ಯಾಷನಲ್ ಟ್ರಿಪ್ ಗಳಿಗೆ ಟ್ರಾವೆಲ್ ಇನ್ಶೂರೆನ್ಸ್ ಒಂದು ಸಮಂಜಸವಾದ ವೆಚ್ಚದಲ್ಲಿ ಗರಿಷ್ಠ ಪ್ರಯೋಜನಗಳನ್ನು ಒದಗಿಸುತ್ತದೆ. ಅನಿರೀಕ್ಷಿತ ಅಪಾಯದ ಸಮಯದಲ್ಲಿ ನಿಮ್ಮ ವಾಲೆಟ್ ಅನ್ನು ರಕ್ಷಿಸಲು ನಿಮ್ಮ ಪ್ಲ್ಯಾನ್ ನಲ್ಲಿರುವ ಕವರೇಜ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಆದರೂ, ಕೆಲವು ಪ್ಲ್ಯಾನ್ ಗಳು ಒಬ್ಬರಿಗೆ ಬಹಳ ದುಬಾರಿ ಎನಿಸಬಹುದು. ಬಜೆಟ್ ನಿರ್ಬಂಧಗಳ ಕಾರಣದಿಂದಾಗಿ ಕೆಲವು ಪ್ರಯಾಣಿಕರು ಟ್ರಾವೆಲ್ ಇನ್ಶೂರೆನ್ಸ್ ಅನ್ನು ಸಂಪೂರ್ಣವಾಗಿ ಹೊರಗಿರಿಸಿದ್ದಾರೆ. ಆದಾಗ್ಯೂ, ಇನ್ಶೂರೆನ್ಸ್ ಇಲ್ಲದೆ ಪ್ರಯಾಣಿಸುವುದು ಹೆಚ್ಚು ದುಬಾರಿಯಾಗಿ ಸಾಬೀತಾಗಬಹುದು.
ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂ ದರಗಳ ಮೇಲೆ ಯಾವ ಅಂಶಗಳು ಪರಿಣಾಮ ಬೀರುತ್ತವೆ ಮತ್ತು ಸರಿಯಾದ ಬೆಲೆಯಲ್ಲಿ ನೀವು ಒಂದು ಪರಿಪೂರ್ಣ ಪ್ಲ್ಯಾನ್ ಅನ್ನು ಹೇಗೆ ಪಡೆಯಬಹುದು ಎಂಬುದನ್ನು ಇಲ್ಲಿ ನೀವು ಅರ್ಥಮಾಡಿಕೊಳ್ಳುವಿರಿ.
ಟ್ರಾವೆಲ್ ಇನ್ಶೂರೆನ್ಸ್ ದರಗಳ ಮೇಲೆ ಯಾವ ಅಂಶಗಳು ಪರಿಣಾಮ ಬೀರುತ್ತವೆ?
- ಪ್ರಯಾಣಿಕರ ವಯಸ್ಸು ಮತ್ತು ಆರೋಗ್ಯ ಸ್ಥಿತಿಗಳು: ಕಿರಿಯ ಪ್ರಯಾಣಿಕರಿಗಿಂತ ಹಿರಿಯ ಪ್ರಯಾಣಿಕರಿಗೆ ಸಾಮಾನ್ಯವಾಗಿ ಹೆಚ್ಚಿನ ದರಗಳನ್ನು ವಿಧಿಸಲಾಗುತ್ತದೆ. ಏಕೆಂದರೆ 50 ವರ್ಷಕ್ಕಿಂತ ಮೇಲ್ಪಟ್ಟವರು, 18+ ವರ್ಷ ವಯಸ್ಸಿನವರಿಗೆ ಹೋಲಿಸಿದರೆ, ಹೆಚ್ಚು ಅಪಾಯಗಳನ್ನು ಎದುರಿಸಬಹುದು, ವಿಶೇಷವಾಗಿ ಆರೋಗ್ಯದ ವಿಷಯದಲ್ಲಿ. ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳು ಯಾವುದಾದರೂ ಇದ್ದರೆ, ಖರೀದಿಸುವ ಸಮಯದಲ್ಲಿ ಬಹಿರಂಗಪಡಿಸಬೇಕು.
- ಟ್ರಿಪ್ ಅವಧಿ ಮತ್ತು ಗಮ್ಯಸ್ಥಾನ: ನಿಮ್ಮ ಟ್ರಿಪ್ ಎಷ್ಟು ಕಾಲ ಉಳಿಯುತ್ತದೆ ಮತ್ತು ನೀವು ಎಲ್ಲಿ ಪ್ರಯಾಣಿಸುತ್ತಿದ್ದೀರಿ ಎಂಬುದು ಮತ್ತೊಂದು ಮಹತ್ವದ ಅಂಶವಾಗಿದೆ. ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ಪಾಲಿಸಿದಾರರ ನಿರ್ಗಮನದ ದಿನಾಂಕದಿಂದ ನಿಗದಿತವಾದ ರಿಟರ್ನ್ ದಿನಾಂಕದವರೆಗೆ ಇರುತ್ತದೆ.
- ಸಮ್ ಇನ್ಶೂರ್ಡ್: ಸಮ್ ಇನ್ಶೂರ್ಡ್ ವಿವಿಧ ಪ್ರಯೋಜನಗಳ ಮೂಲಕ ಪಾವತಿಸಲಾದ ಗರಿಷ್ಠ ಇನ್ಶೂರೆನ್ಸ್ ಮೊತ್ತವಾಗಿದೆ. ಹೆಚ್ಚಿನ ಸಮ್ ಇನ್ಶೂರ್ಡ್ ಹೆಚ್ಚಿನ ಪ್ರೀಮಿಯಂ ದರಕ್ಕೆ ಕಾರಣವಾಗುತ್ತದೆ, ಇದು ಸಂಭಾವ್ಯ ಬೃಹತ್ ಕ್ಲೈಮ್‌ಗೆ ಅರ್ಜಿ ಸಲ್ಲಿಸುವಾಗ ಪಾಲಿಸಿದಾರರು ಸಾಕಷ್ಟು ಕವರೇಜ್ ಅನ್ನು ಪಡೆದುಕೊಳ್ಳಲು ಕಾರಣವಾಗುತ್ತದೆ.
ಕಂಪೆನಿಯು ನೀಡುವ ರಿಯಾಯಿತಿಗಳು ಮತ್ತು ನೀವು ಆಯ್ಕೆ ಮಾಡುವ ಪ್ಲ್ಯಾನ್ ನ ಪ್ರಕಾರದಂತಹ ಇತರ ಅಂಶಗಳು ನೀವು ಪಾವತಿಸುವ ಮೊತ್ತದ ಮೇಲೆ ಪ್ರಭಾವ ಬೀರುತ್ತವೆ. ಇಲ್ಲಿ ದೊಡ್ಡ ಪ್ರಶ್ನೆಯೇನೆಂದರೆ,
ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ನಲ್ಲಿ ನೀವು ಹಣವನ್ನು ಹೇಗೆ ಉಳಿಸಬಹುದು?
ಸರಿಯಾದ ಪ್ಲ್ಯಾನ್ ಅನ್ನು ಆರಿಸುವ ಮೂಲಕ ಪ್ರಾರಂಭಿಸಿ
ಟ್ರಾವೆಲ್ ಇನ್ಶೂರೆನ್ಸ್ ಗಾಗಿ ಹುಡುಕುತ್ತಿರುವಾಗ, ನೀವು ಸುಲಭವಾಗಿ ಸುತ್ತಲೂ ನೋಟ ಹರಿಸಿ ಪ್ಲ್ಯಾನ್ ಗಳು ಮತ್ತು ಅವುಗಳ ಕೊಟೇಶನ್ ಗಳನ್ನು ಆನ್‌ಲೈನ್‌ನಲ್ಲಿ ಹೋಲಿಸಬಹುದು. ಇದು ಮಾರ್ಕೆಟ್ ಅಲ್ಲಿ ಲಭ್ಯವಿರುವ ಆಯ್ಕೆಗಳ ಶ್ರೇಣಿಯ ಬಗ್ಗೆ ನಿಮಗೆ ಸ್ಪಷ್ಟತೆಯನ್ನು ನೀಡುತ್ತದೆ. ಸರಿಯಾದ ಪ್ಲ್ಯಾನ್ ಅನ್ನು ಆರಿಸುವುದು ಎಂದರೆ ಪ್ರತಿ ಪ್ಲ್ಯಾನ್ ನ ಕವರ್‌ಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ನಿಮ್ಮ ಅಗತ್ಯಗಳಿಗೆ ಸೂಕ್ತವಾದವುಗಳನ್ನು ಗುರುತಿಸುವುದು. ನಿಮ್ಮೊಂದಿಗೆ ಹೊಂದಿಕೆಯಾಗುವ ಗರಿಷ್ಠ ಪ್ರಯೋಜನಗಳನ್ನು ಹೊಂದಿರುವ ಅಧಿಕ ವೆಚ್ಚ-ಪರಿಣಾಮಕಾರಿ ಪ್ಲ್ಯಾನ್ ಅನ್ನು ನೀವು ಆಯ್ಕೆ ಮಾಡಬಹುದು.
ನಿಮ್ಮ ಪಾಲಿಸಿಯನ್ನು ಆದಷ್ಟು ಬೇಗ ಖರೀದಿಸಿ
ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಮುಂಚಿತವಾಗಿ ಖರೀದಿಸುವುದರಿಂದ ಬೆಲೆ ಕಡಿತದ ಪ್ರಯೋಜನಗಳು ದೊರೆಯುತ್ತವೆ. ಇನ್ಶೂರೆನ್ಸ್ ಕಂಪನಿಗಳು ತಮ್ಮ ನಿರ್ಗಮನ ದಿನಾಂಕದ ಮೊದಲು ತಮ್ಮ ಪ್ಲ್ಯಾನ್ ಗಳನ್ನು ಖರೀದಿಸುವ ಗ್ರಾಹಕರಿಗೆ ಆದ್ಯತೆ ನೀಡುತ್ತದೆ. ನೀವು ಟ್ರಿಪ್ ಅನ್ನು ಕ್ಯಾನ್ಸಲ್ ಮಾಡಬೇಕಾಗಿ ಬಂದರೆ ನಿಮ್ಮ ಅಸ್ತಿತ್ವದಲ್ಲಿರುವ ಟ್ರಾವೆಲ್ ಪ್ಲ್ಯಾನ್ ಗಳನ್ನು ಬದಲಾಯಿಸುವ ಆಯ್ಕೆಯನ್ನು ಸಹ ನೀವು ಹೊಂದಿರುವಿರಿ. ನೀವು ಕೊನೆಯ ಘಳಿಗೆಯಲ್ಲಿ ಟ್ರಿಪ್ ಅನ್ನು ಬುಕ್ ಮಾಡಿದ್ದರೆ ಮತ್ತು ತುರ್ತಾಗಿ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸಬೇಕಾದರೆ, ನೀವು ಅನಗತ್ಯವಾಗಿ ಹೆಚ್ಚು ಪಾವತಿಸಬೇಕಾಗಬಹುದು.
ಗ್ರೂಪ್ ಇನ್ಶೂರೆನ್ಸ್ > ವೈಯಕ್ತಿಕ ಇನ್ಶೂರೆನ್ಸ್
ಎಲ್ಲಾ ಪ್ರಯಾಣಿಕರಿಗೆ ಪ್ರತ್ಯೇಕ ವೈಯಕ್ತಿಕ ಪಾಲಿಸಿಗಳನ್ನು ಖರೀದಿಸುವ ಬದಲು, ಗುಂಪಿನ ಆಯ್ಕೆಯು ಅಧಿಕ ವೆಚ್ಚ-ಪರಿಣಾಮಕಾರಿಯಾಗಿದೆ. ಉದಾಹರಣೆಗೆ: ನೀವು ಫ್ಯಾಮಿಲಿ ವೆಕೇಶನ್ ಅನ್ನು ಪ್ಲ್ಯಾನ್ ಮಾಡುತ್ತಿದ್ದಾರೆ, ಎಲ್ಲಾ ಕುಟುಂಬ ಸದಸ್ಯರಿಗೆ ವೈಯಕ್ತಿಕ ಪಾಲಿಸಿಗಳನ್ನು ಖರೀದಿಸುವುದಕ್ಕಿಂತ ಕಾಂಪ್ರೆಹೆನ್ಸಿವ್ ಗ್ರೂಪ್ ಪಾಲಿಸಿಯನ್ನು ಖರೀದಿಸುವುದು ಅಗ್ಗವಾಗುತ್ತದೆ.
ಲೋಕೇಶನ್, ಲೋಕೇಶನ್, ಲೋಕೇಶನ್
ನಿಮ್ಮ ಪ್ರೀಮಿಯಂ ದರವು ನೀವು ಎಲ್ಲಿಗೆ ಹೋಗುತ್ತಿರುವಿರಿ ಮತ್ತು ಎಷ್ಟು ಸಮಯದವರೆಗೆ ಎಂಬುದನ್ನು ಅವಲಂಬಿಸಿರುತ್ತದೆ. ಹೈ ಕಾಸ್ಟ್ ಪ್ರದೇಶದಲ್ಲಿ ಕಡಿಮೆ ವೆಚ್ಚದಾಯಕ, ನಿಮ್ಮ ಟ್ರಿಪ್ ನ ದೀರ್ಘಾವಧಿ ಮತ್ತು ಪೀಕ್ ಸೀಸನ್ ನಲ್ಲಿ ಒಂದು ನಿರ್ದಿಷ್ಟ ದೇಶಕ್ಕೆ ಪ್ರಯಾಣಿಸುವುದು, ಇವೆಲ್ಲವೂ ನಿಮ್ಮ ಪ್ರೀಮಿಯಂಗೆ ನೇರವಾಗಿ ಅನುಗುಣವಾಗಿರುತ್ತದೆ.
ಕವರ್‌ಗಳು ಮತ್ತು ಅವುಗಳ ವೆಚ್ಚಗಳು
ನಿಮ್ಮ ಟ್ರಾವೆಲ್ ಪಾಲಿಸಿಯನ್ನು ಖರೀದಿಸುವುದು ಸುರಕ್ಷತೆಯ ವಿಷಯವಾಗಿದೆ. ನಿಮಗೆ ಅತ್ಯಂತ ಮೌಲ್ಯಯುತವೆಂದು ತಿಳಿದಿರುವ ಕವರ್‌ಗಳನ್ನು ಪಡೆಯಲು ಕೆಲ ನಿರ್ದಿಷ್ಟ ಇನ್ಶೂರರ್ ಗಳೊಂದಿಗೆ ನಿಮ್ಮ ಪ್ಲ್ಯಾನ್ ಅನ್ನು ನೀವು ಕಸ್ಟಮೈಸ್ ಮಾಡಬಹುದು. ಇದು, ಪ್ರಯೋಜನಕಾರಿಯಾದ ಆದರೆ ನಿಮಗೆ ಅಗತ್ಯವಿಲ್ಲದ, ಹೆಚ್ಚುವರಿ ಕವರ್‌ಗಳಿಗಾಗಿ ಪಾವತಿಸುವುದನ್ನು ತಪ್ಪಿಸುತ್ತದೆ. ಹೊಂದಿಕೊಳ್ಳುವ ಪ್ಲ್ಯಾನ್ ಅನ್ನು ಆರಿಸಿ. ಉದಾಹರಣೆಗೆ: ನೀವು ಸಾಹಸ ಚಟುವಟಿಕೆಗಳಲ್ಲಿ ತೊಡಗಿರುವವರಲ್ಲದಿದ್ದರೆ, ನಿಮ್ಮ ಪಾಲಿಸಿಯಿಂದ ಆ ಕವರ್ (ಮತ್ತು ಅದರ ಜೊತೆಗಿನ ವೆಚ್ಚಗಳನ್ನು) ಅನ್ನು ನೀವು ತೆಗೆದುಹಾಕಬಹುದು. ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ನಲ್ಲಿ ನೀವು ಹೊಂದಿರಬೇಕಾದ ಕೆಲವು ಪ್ರಮಾಣಿತ ಕವರ್‌ಗಳೆಂದರೆ ಬ್ಯಾಗೇಜ್, ಫ್ಲೈಟ್-ಸಂಬಂಧಿತ ಮತ್ತು ವೈದ್ಯಕೀಯ ಕವರೇಜ್.
ದೀರ್ಘಾವಧಿಯ ಪ್ಲಾನಿಂಗ್
ನೀವು ಆಗಾಗ್ಗೆ ಪ್ರಯಾಣಿಸುವವರಾಗಿದ್ದರೆ, ಸಿಂಗಲ್-ಟ್ರಿಪ್ ಪ್ಲ್ಯಾನ್ ಗಳನ್ನೂ ಖರೀದಿಸುವ ಬದಲು ನೀವು ಮಲ್ಟಿ-ಟ್ರಿಪ್ ಅಥವಾ ವಾರ್ಷಿಕ ಯೋಜನೆಯನ್ನು ಆಯ್ಕೆ ಮಾಡಬಹುದು. ಇದು ನಿಮ್ಮ ಸಮಯ ಮತ್ತು ಹಣವನ್ನು ಉಳಿಸುತ್ತದೆ. ಈ ಪ್ಲ್ಯಾನ್ ಗಳ ಯಾವುದೇ ಹೊರಗಿಡುವಿಕೆ ಅಥವಾ ನಿರ್ಬಂಧಗಳಿಗಾಗಿ ನಿಮ್ಮ ಪಾಲಿಸಿ ಡಾಕ್ಯುಮೆಂಟ್ ಅನ್ನು ಎಚ್ಚರಿಕೆಯಿಂದ ಓದುವುದು ಅತ್ಯಗತ್ಯ. ಪಾಲಿಸಿದಾರರು ಕ್ಲೈಮ್ ಅನ್ನು ಫೈಲ್ ಮಾಡಬೇಕಾದ ಸಂದರ್ಭದಲ್ಲಿ ಸಹ ಒಂದು ಸುಗಮವಾದ ಟ್ರಿಪ್ ಅನ್ನು ಆನಂದಿಸಲು ಪಾಲಿಸಿಯೊಂದಿಗೆ ಹೊಂದಾಣಿಕೆಯಿಂದ ಇರಬೇಕು.
ಈ ಸಲಹೆಗಳೊಂದಿಗೆ, ನೀವು ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಬಹುದು ಮತ್ತು ವೆಚ್ಚವನ್ನು ಉಳಿಸಬಹುದು. ಕೇವಲ ₹225/- ರಿಂದ ಪ್ರಾರಂಭವಾಗುವ ಪ್ರೀಮಿಯಂಗಳೊಂದಿಗೆ ಡಿಜಿಟ್‌ನ ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಿ
ಡಿಜಿಟ್ ಜೊತೆ ಸಂಬಂಧ ಬೆಳೆಸಿ ಮತ್ತು ಇಂತಹ ಅನನ್ಯ ಪ್ರಯೋಜನಗಳನ್ನು ಆನಂದಿಸಿ
ಝೀರೋ ಡಿಡಕ್ಟಿಬಲ್ಸ್ - ನೀವು ಕ್ಲೈಮ್ ಮಾಡಿದಾಗ ನೀವು ಏನನ್ನೂ ಪಾವತಿಸುವುದಿಲ್ಲ - ಅದನ್ನು ನಾವು ನೋಡಿಕೊಳ್ಳುತ್ತೇವೆ.
ಸಾಹಸ ಕ್ರೀಡೆಗಳನ್ನು ಕವರ್ ಮಾಡುತ್ತದೆ - ನಮ್ಮ ಕವರೇಜ್ ಸ್ಕೂಬಾ ಡೈವಿಂಗ್, ಬಂಜಿ ಜಂಪಿಂಗ್ ಮತ್ತು ಸ್ಕೈ ಡೈವಿಂಗ್‌ನಂತಹ ಚಟುವಟಿಕೆಗಳನ್ನು ಕವರ್ ಮಾಡುತ್ತದೆ(ಅವಧಿಯು ಒಂದು ದಿನದ್ದಾಗಿದ್ದರೆ ಮಾತ್ರ)
ಲೈಟ್ ಡಿಲೇಗಳಿಗೆ ತಕ್ಷಣದ ವಿತ್ತೀಯ ಕಾಂಪನ್ಸೇಶನ್ - ನಿಮ್ಮ ಸಮಯವನ್ನು ಇನ್ನಷ್ಟು ವ್ಯರ್ಥ ಮಾಡಲು ನಾವು ಬಯಸುವುದಿಲ್ಲ. ಅದಕ್ಕಾಗಿಯೇ, ನಿಮ್ಮ ಫ್ಲೈಟ್ 6 ಗಂಟೆಗಳಿಗಿಂತ ಹೆಚ್ಚು ಕಾಲ ಡಿಲೇ ಆದಾಗ, ನಾವು ನಿಮಗೆ ತಕ್ಷಣ ₹500-1000 ಪರಿಹಾರವನ್ನು ನೀಡುತ್ತೇವೆ.
ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಪ್ರಕ್ರಿಯೆಗಳು - ಯಾವುದೇ ಪೇಪರ್ ವರ್ಕ್ ಇಲ್ಲ, ಓಡಾಟವಿಲ್ಲ. ನೀವು ಕ್ಲೈಮ್ ಮಾಡಿದಾಗ ಕೇವಲ ನಿಮ್ಮ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ.
ಮಿಸ್ಡ್-ಕಾಲ್ ಸೌಲಭ್ಯ - +91-7303470000ಗೆ ಮಿಸ್ಡ್ ಕಾಲ್ ನೀಡಿ ಮತ್ತು ನಾವು 10 ನಿಮಿಷಗಳಲ್ಲಿ ನಿಮಗೆ ಮರಳಿ ಕರೆ ಮಾಡುತ್ತೇವೆ. ಯಾವುದೇ ಇಂಟರ್ನ್ಯಾಷನಲ್ ಕರೆ ಶುಲ್ಕಗಳಿಲ್ಲ.
ವಿಶ್ವಾದ್ಯಂತ ಬೆಂಬಲ - ಪ್ರಪಂಚದಾದ್ಯಂತ ನಿಮಗೆ ತಡೆರಹಿತ ಬೆಂಬಲವನ್ನು ಒದಗಿಸಲು ನಾವು ವಿಶ್ವದ ಅತಿದೊಡ್ಡ ಹೆಲ್ತ್ ಮತ್ತು ಟ್ರಾವೆಲ್ ಇನ್ಶೂರೆನ್ಸ್ ನೆಟ್‌ವರ್ಕ್ ಅಲಿಯಾನ್ಸ್‌ನೊಂದಿಗೆ ಪಾಲುದಾರಿಕೆ ಹೊಂದಿದ್ದೇವೆ. ಷರತ್ತು ಮತ್ತು ನಿಯಮಗಳು ಅನ್ವಯ*