ನಿಮ್ಮ ಇಂಟರ್ನ್ಯಾಷನಲ್ ಟ್ರಿಪ್ ಗಳಿಗೆ ಟ್ರಾವೆಲ್ ಇನ್ಶೂರೆನ್ಸ್ ಒಂದು ಸಮಂಜಸವಾದ ವೆಚ್ಚದಲ್ಲಿ ಗರಿಷ್ಠ ಪ್ರಯೋಜನಗಳನ್ನು ಒದಗಿಸುತ್ತದೆ. ಅನಿರೀಕ್ಷಿತ ಅಪಾಯದ ಸಮಯದಲ್ಲಿ ನಿಮ್ಮ ವಾಲೆಟ್ ಅನ್ನು ರಕ್ಷಿಸಲು ನಿಮ್ಮ ಪ್ಲ್ಯಾನ್ ನಲ್ಲಿರುವ ಕವರೇಜ್ಗಳನ್ನು ವಿನ್ಯಾಸಗೊಳಿಸಲಾಗಿದೆ. ಆದರೂ, ಕೆಲವು ಪ್ಲ್ಯಾನ್ ಗಳು ಒಬ್ಬರಿಗೆ ಬಹಳ ದುಬಾರಿ ಎನಿಸಬಹುದು. ಬಜೆಟ್ ನಿರ್ಬಂಧಗಳ ಕಾರಣದಿಂದಾಗಿ ಕೆಲವು ಪ್ರಯಾಣಿಕರು ಟ್ರಾವೆಲ್ ಇನ್ಶೂರೆನ್ಸ್ ಅನ್ನು ಸಂಪೂರ್ಣವಾಗಿ ಹೊರಗಿರಿಸಿದ್ದಾರೆ. ಆದಾಗ್ಯೂ, ಇನ್ಶೂರೆನ್ಸ್ ಇಲ್ಲದೆ ಪ್ರಯಾಣಿಸುವುದು ಹೆಚ್ಚು ದುಬಾರಿಯಾಗಿ ಸಾಬೀತಾಗಬಹುದು.
ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂ ದರಗಳ ಮೇಲೆ ಯಾವ ಅಂಶಗಳು ಪರಿಣಾಮ ಬೀರುತ್ತವೆ ಮತ್ತು ಸರಿಯಾದ ಬೆಲೆಯಲ್ಲಿ ನೀವು ಒಂದು ಪರಿಪೂರ್ಣ ಪ್ಲ್ಯಾನ್ ಅನ್ನು ಹೇಗೆ ಪಡೆಯಬಹುದು ಎಂಬುದನ್ನು ಇಲ್ಲಿ ನೀವು ಅರ್ಥಮಾಡಿಕೊಳ್ಳುವಿರಿ.
ಕಂಪೆನಿಯು ನೀಡುವ ರಿಯಾಯಿತಿಗಳು ಮತ್ತು ನೀವು ಆಯ್ಕೆ ಮಾಡುವ ಪ್ಲ್ಯಾನ್ ನ ಪ್ರಕಾರದಂತಹ ಇತರ ಅಂಶಗಳು ನೀವು ಪಾವತಿಸುವ ಮೊತ್ತದ ಮೇಲೆ ಪ್ರಭಾವ ಬೀರುತ್ತವೆ. ಇಲ್ಲಿ ದೊಡ್ಡ ಪ್ರಶ್ನೆಯೇನೆಂದರೆ,
ಟ್ರಾವೆಲ್ ಇನ್ಶೂರೆನ್ಸ್ ಗಾಗಿ ಹುಡುಕುತ್ತಿರುವಾಗ, ನೀವು ಸುಲಭವಾಗಿ ಸುತ್ತಲೂ ನೋಟ ಹರಿಸಿ ಪ್ಲ್ಯಾನ್ ಗಳು ಮತ್ತು ಅವುಗಳ ಕೊಟೇಶನ್ ಗಳನ್ನು ಆನ್ಲೈನ್ನಲ್ಲಿ ಹೋಲಿಸಬಹುದು. ಇದು ಮಾರ್ಕೆಟ್ ಅಲ್ಲಿ ಲಭ್ಯವಿರುವ ಆಯ್ಕೆಗಳ ಶ್ರೇಣಿಯ ಬಗ್ಗೆ ನಿಮಗೆ ಸ್ಪಷ್ಟತೆಯನ್ನು ನೀಡುತ್ತದೆ. ಸರಿಯಾದ ಪ್ಲ್ಯಾನ್ ಅನ್ನು ಆರಿಸುವುದು ಎಂದರೆ ಪ್ರತಿ ಪ್ಲ್ಯಾನ್ ನ ಕವರ್ಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ನಿಮ್ಮ ಅಗತ್ಯಗಳಿಗೆ ಸೂಕ್ತವಾದವುಗಳನ್ನು ಗುರುತಿಸುವುದು. ನಿಮ್ಮೊಂದಿಗೆ ಹೊಂದಿಕೆಯಾಗುವ ಗರಿಷ್ಠ ಪ್ರಯೋಜನಗಳನ್ನು ಹೊಂದಿರುವ ಅಧಿಕ ವೆಚ್ಚ-ಪರಿಣಾಮಕಾರಿ ಪ್ಲ್ಯಾನ್ ಅನ್ನು ನೀವು ಆಯ್ಕೆ ಮಾಡಬಹುದು.
ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಮುಂಚಿತವಾಗಿ ಖರೀದಿಸುವುದರಿಂದ ಬೆಲೆ ಕಡಿತದ ಪ್ರಯೋಜನಗಳು ದೊರೆಯುತ್ತವೆ. ಇನ್ಶೂರೆನ್ಸ್ ಕಂಪನಿಗಳು ತಮ್ಮ ನಿರ್ಗಮನ ದಿನಾಂಕದ ಮೊದಲು ತಮ್ಮ ಪ್ಲ್ಯಾನ್ ಗಳನ್ನು ಖರೀದಿಸುವ ಗ್ರಾಹಕರಿಗೆ ಆದ್ಯತೆ ನೀಡುತ್ತದೆ. ನೀವು ಟ್ರಿಪ್ ಅನ್ನು ಕ್ಯಾನ್ಸಲ್ ಮಾಡಬೇಕಾಗಿ ಬಂದರೆ ನಿಮ್ಮ ಅಸ್ತಿತ್ವದಲ್ಲಿರುವ ಟ್ರಾವೆಲ್ ಪ್ಲ್ಯಾನ್ ಗಳನ್ನು ಬದಲಾಯಿಸುವ ಆಯ್ಕೆಯನ್ನು ಸಹ ನೀವು ಹೊಂದಿರುವಿರಿ. ನೀವು ಕೊನೆಯ ಘಳಿಗೆಯಲ್ಲಿ ಟ್ರಿಪ್ ಅನ್ನು ಬುಕ್ ಮಾಡಿದ್ದರೆ ಮತ್ತು ತುರ್ತಾಗಿ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸಬೇಕಾದರೆ, ನೀವು ಅನಗತ್ಯವಾಗಿ ಹೆಚ್ಚು ಪಾವತಿಸಬೇಕಾಗಬಹುದು.
ಎಲ್ಲಾ ಪ್ರಯಾಣಿಕರಿಗೆ ಪ್ರತ್ಯೇಕ ವೈಯಕ್ತಿಕ ಪಾಲಿಸಿಗಳನ್ನು ಖರೀದಿಸುವ ಬದಲು, ಗುಂಪಿನ ಆಯ್ಕೆಯು ಅಧಿಕ ವೆಚ್ಚ-ಪರಿಣಾಮಕಾರಿಯಾಗಿದೆ. ಉದಾಹರಣೆಗೆ: ನೀವು ಫ್ಯಾಮಿಲಿ ವೆಕೇಶನ್ ಅನ್ನು ಪ್ಲ್ಯಾನ್ ಮಾಡುತ್ತಿದ್ದಾರೆ, ಎಲ್ಲಾ ಕುಟುಂಬ ಸದಸ್ಯರಿಗೆ ವೈಯಕ್ತಿಕ ಪಾಲಿಸಿಗಳನ್ನು ಖರೀದಿಸುವುದಕ್ಕಿಂತ ಕಾಂಪ್ರೆಹೆನ್ಸಿವ್ ಗ್ರೂಪ್ ಪಾಲಿಸಿಯನ್ನು ಖರೀದಿಸುವುದು ಅಗ್ಗವಾಗುತ್ತದೆ.
ನಿಮ್ಮ ಪ್ರೀಮಿಯಂ ದರವು ನೀವು ಎಲ್ಲಿಗೆ ಹೋಗುತ್ತಿರುವಿರಿ ಮತ್ತು ಎಷ್ಟು ಸಮಯದವರೆಗೆ ಎಂಬುದನ್ನು ಅವಲಂಬಿಸಿರುತ್ತದೆ. ಹೈ ಕಾಸ್ಟ್ ಪ್ರದೇಶದಲ್ಲಿ ಕಡಿಮೆ ವೆಚ್ಚದಾಯಕ, ನಿಮ್ಮ ಟ್ರಿಪ್ ನ ದೀರ್ಘಾವಧಿ ಮತ್ತು ಪೀಕ್ ಸೀಸನ್ ನಲ್ಲಿ ಒಂದು ನಿರ್ದಿಷ್ಟ ದೇಶಕ್ಕೆ ಪ್ರಯಾಣಿಸುವುದು, ಇವೆಲ್ಲವೂ ನಿಮ್ಮ ಪ್ರೀಮಿಯಂಗೆ ನೇರವಾಗಿ ಅನುಗುಣವಾಗಿರುತ್ತದೆ.
ನಿಮ್ಮ ಟ್ರಾವೆಲ್ ಪಾಲಿಸಿಯನ್ನು ಖರೀದಿಸುವುದು ಸುರಕ್ಷತೆಯ ವಿಷಯವಾಗಿದೆ. ನಿಮಗೆ ಅತ್ಯಂತ ಮೌಲ್ಯಯುತವೆಂದು ತಿಳಿದಿರುವ ಕವರ್ಗಳನ್ನು ಪಡೆಯಲು ಕೆಲ ನಿರ್ದಿಷ್ಟ ಇನ್ಶೂರರ್ ಗಳೊಂದಿಗೆ ನಿಮ್ಮ ಪ್ಲ್ಯಾನ್ ಅನ್ನು ನೀವು ಕಸ್ಟಮೈಸ್ ಮಾಡಬಹುದು. ಇದು, ಪ್ರಯೋಜನಕಾರಿಯಾದ ಆದರೆ ನಿಮಗೆ ಅಗತ್ಯವಿಲ್ಲದ, ಹೆಚ್ಚುವರಿ ಕವರ್ಗಳಿಗಾಗಿ ಪಾವತಿಸುವುದನ್ನು ತಪ್ಪಿಸುತ್ತದೆ. ಹೊಂದಿಕೊಳ್ಳುವ ಪ್ಲ್ಯಾನ್ ಅನ್ನು ಆರಿಸಿ. ಉದಾಹರಣೆಗೆ: ನೀವು ಸಾಹಸ ಚಟುವಟಿಕೆಗಳಲ್ಲಿ ತೊಡಗಿರುವವರಲ್ಲದಿದ್ದರೆ, ನಿಮ್ಮ ಪಾಲಿಸಿಯಿಂದ ಆ ಕವರ್ (ಮತ್ತು ಅದರ ಜೊತೆಗಿನ ವೆಚ್ಚಗಳನ್ನು) ಅನ್ನು ನೀವು ತೆಗೆದುಹಾಕಬಹುದು. ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ನಲ್ಲಿ ನೀವು ಹೊಂದಿರಬೇಕಾದ ಕೆಲವು ಪ್ರಮಾಣಿತ ಕವರ್ಗಳೆಂದರೆ ಬ್ಯಾಗೇಜ್, ಫ್ಲೈಟ್-ಸಂಬಂಧಿತ ಮತ್ತು ವೈದ್ಯಕೀಯ ಕವರೇಜ್.
ನೀವು ಆಗಾಗ್ಗೆ ಪ್ರಯಾಣಿಸುವವರಾಗಿದ್ದರೆ, ಸಿಂಗಲ್-ಟ್ರಿಪ್ ಪ್ಲ್ಯಾನ್ ಗಳನ್ನೂ ಖರೀದಿಸುವ ಬದಲು ನೀವು ಮಲ್ಟಿ-ಟ್ರಿಪ್ ಅಥವಾ ವಾರ್ಷಿಕ ಯೋಜನೆಯನ್ನು ಆಯ್ಕೆ ಮಾಡಬಹುದು. ಇದು ನಿಮ್ಮ ಸಮಯ ಮತ್ತು ಹಣವನ್ನು ಉಳಿಸುತ್ತದೆ. ಈ ಪ್ಲ್ಯಾನ್ ಗಳ ಯಾವುದೇ ಹೊರಗಿಡುವಿಕೆ ಅಥವಾ ನಿರ್ಬಂಧಗಳಿಗಾಗಿ ನಿಮ್ಮ ಪಾಲಿಸಿ ಡಾಕ್ಯುಮೆಂಟ್ ಅನ್ನು ಎಚ್ಚರಿಕೆಯಿಂದ ಓದುವುದು ಅತ್ಯಗತ್ಯ. ಪಾಲಿಸಿದಾರರು ಕ್ಲೈಮ್ ಅನ್ನು ಫೈಲ್ ಮಾಡಬೇಕಾದ ಸಂದರ್ಭದಲ್ಲಿ ಸಹ ಒಂದು ಸುಗಮವಾದ ಟ್ರಿಪ್ ಅನ್ನು ಆನಂದಿಸಲು ಪಾಲಿಸಿಯೊಂದಿಗೆ ಹೊಂದಾಣಿಕೆಯಿಂದ ಇರಬೇಕು.
ಈ ಸಲಹೆಗಳೊಂದಿಗೆ, ನೀವು ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಬಹುದು ಮತ್ತು ವೆಚ್ಚವನ್ನು ಉಳಿಸಬಹುದು. ಕೇವಲ ₹225/- ರಿಂದ ಪ್ರಾರಂಭವಾಗುವ ಪ್ರೀಮಿಯಂಗಳೊಂದಿಗೆ ಡಿಜಿಟ್ನ ಇಂಟರ್ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಆನ್ಲೈನ್ನಲ್ಲಿ ಖರೀದಿಸಿ