ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಖರೀದಿಸಿ
Instant Policy, No Medical Check-ups

ಭಾರತೀಯರಿಗೆ ವಿಯೆಟ್ನಾಂ ವೀಸಾ

ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ವಿಯೆಟ್ನಾಂ ವೀಸಾ ಕುರಿತು ಒಂದು ವಿವರವಾದ ಗೈಡ್

ವಿಯೆಟ್ನಾಂ ಪ್ರತಿ ವರ್ಷ ಜಗತ್ತಿನಾದ್ಯಂತ ಲಕ್ಷಾಂತರ ಟ್ರಾವೆಲರ್ ಗಳನ್ನು ಆಕರ್ಷಿಸುತ್ತದೆ. 2018 ರಲ್ಲಿ, ಈ ದೇಶವು 15.5 ಮಿಲಿಯನ್‌ಗಿಂತಲೂ ಹೆಚ್ಚು ಅಂತರಾಷ್ಟ್ರೀಯ ಟೂರಿಸ್ಟ್ ಗಳನ್ನು ಸ್ವೀಕರಿಸಿದೆ. (1)

ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಇತಿಹಾಸ ಮತ್ತು ನೈಸರ್ಗಿಕ ಸೌಂದರ್ಯದೊಂದಿಗೆ, ವಿಯೆಟ್ನಾಂನ ವೈವಿಧ್ಯಮಯ ಭೂದೃಶ್ಯಗಳು ಟೂರಿಸ್ಟ್ ಗಳಿಗೆ ಉತ್ಸಾಹಭರಿತ ವೆಕೇಶನ್ ಅನ್ನು ಖಚಿತಪಡಿಸುತ್ತವೆ. ನೀವು ವಿಯೆಟ್ನಾಂಗೆ ಪ್ರಯಾಣಿಸಲು ಪ್ಲಾನ್ ಮಾಡುತ್ತಿರುವ ಒಬ್ಬ ಭಾರತೀಯ ಪ್ರಜೆಯಾಗಿದ್ದರೆ, ಮುಂದಕ್ಕೆ ಓದುವುದನ್ನು ಖಚಿತಪಡಿಸಿಕೊಳ್ಳಿ.

ವಿಯೆಟ್ನಾಂಗೆ ಭಾರತೀಯರಿಗೆ ವೀಸಾ ಬೇಕೇ?

ಹೌದು, ಭಾರತೀಯ ಪ್ರಯಾಣಿಕರಿಗೆ ಈ ದೇಶವನ್ನು ಪ್ರವೇಶಿಸಲು ವಿಯೆಟ್ನಾಂ ವೀಸಾ ಅಗತ್ಯವಿದೆ. ಆದಾಗ್ಯೂ, ದೇಶವು ಭಾರತೀಯ ಪ್ರಜೆಗಳಿಗೆ ವೀಸಾ ಆನ್ ಅರೈವಲ್ ಅವಕಾಶವನ್ನು ನೀಡುತ್ತದೆ.

ವಿಯೆಟ್ನಾಂಗೆ ಭೇಟಿ ನೀಡುವ ಭಾರತೀಯರಿಗೆ ವೀಸಾ ಆನ್ ಅರೈವಲ್/ಇ-ವೀಸಾ ಇದೆಯೇ?

ಹೌದು, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ವಿಯೆಟ್ನಾಂಗೆ ಭೇಟಿ ನೀಡಲು ಪ್ಲಾನ್ ಮಾಡುತ್ತಿದ್ದರೆ ಅವರಿಗೆ ವೀಸಾ ಆನ್ ಅರೈವಲ್ ಆಯ್ಕೆ ಲಭ್ಯವಿದೆ. ಈ ವಿಯೆಟ್ನಾಂ ವೀಸಾ ಆಗಮನದ ದಿನಾಂಕದಿಂದ 30 ದಿನಗಳವರೆಗೆ ವ್ಯಾಲಿಡ್ ಆಗಿರುತ್ತದೆ.

ಈ ವೀಸಾಕ್ಕಾಗಿ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಮೊದಲು ಆನ್‌ಲೈನ್‌ನಲ್ಲಿ ಇ-ವೀಸಾಗೆ ಅಪ್ಲಿಕೇಶನ್ ಸಲ್ಲಿಸಬೇಕು, ಅಪ್ರುವಲ್ ಪತ್ರವನ್ನು ಪಡೆದುಕೊಳ್ಳಬೇಕು ಮತ್ತು ವಿಯೆಟ್ನಾಂನ ವೀಸಾ ಆನ್ ಅರೈವಲ್ ಅನ್ನು ಸಂಗ್ರಹಿಸಬೇಕು.

ಭಾರತೀಯ ನಾಗರಿಕರಿಗೆ ವಿಯೆಟ್ನಾಂ ವೀಸಾ ಶುಲ್ಕಗಳು

ವಿಯೆಟ್ನಾಂಗೆ ಪ್ರಯಾಣಿಸುವ ಇ-ವೀಸಾ ಮತ್ತು ವೀಸಾ ಆನ್ ಅರೈವಲ್ ಅಪ್ಲಿಕೇಶನ್ದಾರರಿಗೆ ಶುಲ್ಕ ಅನ್ವಯಿಸುತ್ತದೆ. ಆದಾಗ್ಯೂ, ನೀವು ಅಪ್ಲಿಕೇಶನ್‌ಗಾಗಿ ಆಯ್ಕೆಮಾಡುವ ಪ್ರಕ್ರಿಯೆಯನ್ನು ಅವಲಂಬಿಸಿ ಶುಲ್ಕವು ಬದಲಾಗುತ್ತದೆ. ಕೆಳಗಿನ ಟೇಬಲ್ ಅನ್ನು ನೋಡೋಣ:

ಅಪ್ಲಿಕೇಶನ್ ಮೋಡ್ ಶುಲ್ಕ
ಇ-ವೀಸಾಕ್ಕೆ ಅಪ್ಲಿಕೇಶನ್ ಸಲ್ಲಿಸಿ ಮತ್ತು ಏರ್‌ಪೋರ್ಟ್ ನಲ್ಲಿ ವೀಸಾ ಆನ್ ಅರೈವಲ್ ಅನ್ನು ಸಂಗ್ರಹಿಸಿ (30 ದಿನಗಳವರೆಗೆ ವ್ಯಾಲಿಡ್ ಆಗಿರುವ) - ಆನ್‌ಲೈನ್ ಪ್ರಕ್ರಿಯೆ ಇ-ವೀಸಾ ಪ್ರೊಸೆಸಿಂಗ್ ಶುಲ್ಕಕ್ಕಾಗಿ ₹2066 ($25) ಪಾವತಿಸಿ
ರಾಯಭಾರ ಕಚೇರಿಯಲ್ಲಿ ವೀಸಾಕ್ಕಾಗಿ ಅಪ್ಲಿಕೇಶನ್ ಸಲ್ಲಿಸಿ (30 ದಿನಗಳವರೆಗೆ ವ್ಯಾಲಿಡ್ ಆಗಿರುವ) (ವಿಎಫ್ಎಸ್ ಗ್ಲೋಬಲ್ ಮೂಲಕ) - ಆಫ್‌ಲೈನ್ ಪ್ರಕ್ರಿಯೆ ಸಿಂಗಲ್ ಎಂಟ್ರಿ ಟೂರಿಸ್ಟ್ ವೀಸಾಗೆ ₹4500

ಡಿಸ್ಕ್ಲೈಮರ್: ಇಲ್ಲಿ ಉಲ್ಲೇಖಿಸಲಾದ ಅಂಕಿಅಂಶಗಳನ್ನು ಯು.ಎಸ್.ಡಿ ಇಂದ ಐ.ಎನ್.ಆರ್ ಗೆ ಪರಿವರ್ತಿಸಲಾಗಿದೆ ಮತ್ತು ಇದು ವಿದೇಶಿ ವಿನಿಮಯ ದರದ ಪ್ರಕಾರ ಬದಲಾವಣೆಗೆ ಒಳಪಟ್ಟಿರುತ್ತದೆ. ಅಲ್ಲದೆ, ಅನೇಕ ಸರ್ಕಾರಿ ಅಪ್ರುವಲ್ ಪಡೆದ ಏಜೆಂಟ್‌ಗಳು ಇರುವುದರಿಂದ ವೀಸಾ ಪತ್ರವನ್ನು ಪಡೆಯಲು ಇ-ವೀಸಾ ಶುಲ್ಕವು ಆಯ್ಕೆಮಾಡಿದ ಏಜೆಂಟ್‌ಗೆ ಅನುಗುಣವಾಗಿ ಬದಲಾಗುತ್ತದೆ.

ಭಾರತೀಯ ನಾಗರಿಕರು ಇತರ ವೀಸಾ ವೇರಿಯಂಟ್ ಗಳಿಗೆ (ದೀರ್ಘಕಾಲದ ವಾಸ್ತವ್ಯ ಅವಧಿಗೆ) ಅಪ್ಲಿಕೇಶನ್ ಸಲ್ಲಿಸಬಹುದು ಎಂಬುದನ್ನು ನೋಟ್ ಮಾಡಿಕೊಳ್ಳಿ. ಅಪ್ಲಿಕೇಶನ್ ಸಲ್ಲಿಸುವ ಮೊದಲು ದಯವಿಟ್ಟು ಇದರ ರಿಕ್ವೈರ್‌ಮೆಂಟ್ಸ್ ಮತ್ತು ಅದಕ್ಕೆ ಜೋಡಿಸಲಾದ ಶುಲ್ಕಗಳನ್ನು ಪರಿಶೀಲಿಸಿ.

ಭಾರತೀಯರಿಗೆ ವಿಯೆಟ್ನಾಂ ಟೂರಿಸ್ಟ್ ವೀಸಾ ಅಪ್ಲಿಕೇಶನ್ ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು

ವಿಯೆಟ್ನಾಂ ವೀಸಾಗೆ ಅಪ್ಲಿಕೇಶನ್ ಸಲ್ಲಿಸಲು, ನೀವು ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಒದಗಿಸಬೇಕು. 

  • ಭಾರತೀಯ ಪಾಸ್‌ಪೋರ್ಟ್, ವಿಯೆಟ್ನಾಂಗೆ ಪ್ರಯಾಣಿಸಿದ ದಿನಾಂಕದಿಂದ ಕನಿಷ್ಠ ಆರು ತಿಂಗಳವರೆಗಿನ ವ್ಯಾಲಿಡಿಟಿಯೊಂದಿಗೆ. ವೀಸಾ ಸ್ಟ್ಯಾಂಪ್‌ಗಾಗಿ ನಿಮ್ಮ ಪಾಸ್‌ಪೋರ್ಟ್‌ನಲ್ಲಿ ಕನಿಷ್ಠ ಎರಡು ಖಾಲಿ ಪುಟಗಳ ಅಗತ್ಯವಿದೆ.

  • ಎರಡು ಪಾಸ್‌ಪೋರ್ಟ್ ಗಾತ್ರದ ಫೋಟೋಗಳು.

ನೀವು ವೀಸಾ ಆನ್ ಅರೈವಲ್ ಅನ್ನು ಪಡೆಯಲು ಬಯಸಿದರೆ, ನೀವು ಈ ಕೆಳಗಿನ ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಸಹ ಒದಗಿಸಬೇಕಾಗುತ್ತದೆ.

  • ವೀಸಾ ಆನ್ ಅರೈವಲ್ ಗಾಗಿ ಸರಿಯಾಗಿ ಭರ್ತಿ ಮಾಡಲಾದ ಅಪ್ಲಿಕೇಶನ್ ಫಾರ್ಮ್. ಇದನ್ನು M3 ಫಾರ್ಮ್ ಎಂದೂ ಕರೆಯುತ್ತಾರೆ.

  • ವಿಯೆಟ್ನಾಂನ ಏರ್‌ಪೋರ್ಟ್ ನಲ್ಲಿ ವೀಸಾ ಆನ್ ಅರೈವಲ್ ಅನ್ನು ಪಡೆಯಲು ನಿಮಗೆ ಅನುಮತಿಸುವ ಸರಿಯಾದ ಅಪ್ರುವಲ್ ಪತ್ರ.

  • ವೀಸಾ ಆನ್ ಅರೈವಲ್ ಗಾಗಿ, ನೀವು ಕ್ಯಾಶ್ ರೂಪದಲ್ಲಿ ಅನ್ವಯವಾಗುವ ಸ್ಟಾಂಪಿಂಗ್ ಶುಲ್ಕವನ್ನು ಸಹ ಪಾವತಿಸಬೇಕು. ಈ ಪಾವತಿಯನ್ನು ಅಧಿಕೃತ ವಿಯೆಟ್ನಾಮೀಸ್ ಕರೆನ್ಸಿಯಾದ ವಿಯೆಟ್ನಾಮೀಸ್ ಡಾಂಗ್‌ನಲ್ಲಿ ಮಾಡಬೇಕಾಗಿದೆ ಎಂಬುದನ್ನು ನೆನಪಿನಲ್ಲಿಡಿ.

ಭಾರತೀಯ ನಾಗರಿಕರಿಗೆ ವಿಯೆಟ್ನಾಂ ವೀಸಾ ರಿಕ್ವೈರ್‌ಮೆಂಟ್ಸ್ ಈಗ ನಿಮಗೆ ತಿಳಿದಿರುವುದರಿಂದ ಅಪ್ಲಿಕೇಶನ್ ಸಲ್ಲಿಸಲು ಬೇಕಾದ ವಿವರವಾದ ಕಾರ್ಯವಿಧಾನವನ್ನು ನೋಡೋಣ.

ಭಾರತದಿಂದ ವಿಯೆಟ್ನಾಂ ವೀಸಾಗೆ ಅಪ್ಲಿಕೇಶನ್ ಸಲ್ಲಿಸುವುದು ಹೇಗೆ?

ವಿಯೆಟ್ನಾಂ ಇ-ವೀಸಾಕ್ಕೆ ಅಪ್ಲಿಕೇಶನ್ ಸಲ್ಲಿಸಲು ಹಂತಗಳು

ಆನ್‌ಲೈನ್‌ನಲ್ಲಿ ಇ-ವೀಸಾ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹಂತ-ಹಂತವಾದ ಕಾರ್ಯವಿಧಾನ ಇಲ್ಲಿದೆ.

  • ಹಂತ 1: ವಿಯೆಟ್ನಾಂಗಾಗಿ ಅಧಿಕೃತ ಇ-ವೀಸಾ ಅಪ್ಲಿಕೇಶನ್ ವೆಬ್‌ಸೈಟ್ ತೆರೆಯಿರಿ ಮತ್ತು ಅಪ್ಲಿಕೇಶನ್ ಸಲ್ಲಿಸಿ ಅನ್ನು ಆಯ್ಕೆಮಾಡಿ.

  • ಹಂತ 2: ನಿಮ್ಮ ಪಾಸ್‌ಪೋರ್ಟ್ ಫೋಟೋ ಮತ್ತು ಮಾಹಿತಿ ಪುಟವನ್ನು ಸ್ಕ್ಯಾನ್ ಮಾಡಿ. ಇವುಗಳನ್ನು ವೆಬ್‌ಸೈಟ್‌ನಲ್ಲಿ ಜೆಪಿಜಿ ಫಾರ್ಮ್ಯಾಟ್ ನಲ್ಲಿ ಅಪ್‌ಲೋಡ್ ಮಾಡಿ.

  • ಹಂತ 3: ಅಪ್ಲಿಕೇಶನ್ ಫಾರ್ಮ್ ನಲ್ಲಿ ನಿಮ್ಮ ಟ್ರಿಪ್ ಗೆ ಸಂಬಂಧಿಸಿದ ಅಗತ್ಯ ಪರ್ಸನಲ್ ಡೇಟಾ ಮತ್ತು ಮಾಹಿತಿಯನ್ನು ಭರ್ತಿ ಮಾಡಿ.

  • ಹಂತ 4: ಯಾವುದೇ ಬೆಂಬಲಿತ ಡಿಜಿಟಲ್ ಪಾವತಿ ವಿಧಾನಗಳ ಮೂಲಕ ಇ-ವೀಸಾ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ.

  • ಹಂತ 5: ಫಾರ್ಮ್ ಅನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ, ನೀವು ಒಂದು ಯೂನಿಕ್ ರಿಜಿಸ್ಟ್ರೇಷನ್ ಕೋಡ್ ಅನ್ನು ಸ್ವೀಕರಿಸುತ್ತೀರಿ. 

ಆನ್‌ಲೈನ್ ವಿಯೆಟ್ನಾಂ ವೀಸಾ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಮೂರು ಕೆಲಸದ ದಿನಗಳವರೆಗೆ ನಿರೀಕ್ಷಿಸಿ ಮತ್ತು ನಿಮ್ಮ ವೀಸಾಗೆ ಅಪ್ರುವಲ್ ಪತ್ರವನ್ನು ನಿಮಗೆ ನೀಡಲಾಗುತ್ತದೆ. ಮುಂದೆ, 

  • ಹಂತ 6: ನಿಮ್ಮ ಅಪ್ರುವಲ್ ಪತ್ರವನ್ನು ಪರಿಶೀಲಿಸಲು ವಿಯೆಟ್ನಾಂನ ಇ-ವೀಸಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಅದನ್ನು ಆ್ಯಕ್ಸೆಸ್ ಮಾಡಲು ನಿಮ್ಮ ನೋಂದಣಿ ಕೋಡ್, ಹುಟ್ಟಿದ ದಿನಾಂಕ ಮತ್ತು ಇಮೇಲ್ ಐಡಿಯನ್ನು ನಮೂದಿಸಿ. 

ಪತ್ರವನ್ನು ಪಿಡಿಎಫ್ ಫೈಲ್ ಆಗಿ ಸೇವ್ ಮಾಡಿ ಮತ್ತು ನಿಮ್ಮ ಪ್ರಯಾಣದ ಸಮಯದಲ್ಲಿ ಅದರ ಪ್ರಿಂಟ್ಔಟ್ ಗಳನ್ನು ತೆಗೆದುಕೊಳ್ಳಿ. ನೀವು ವಿಯೆಟ್ನಾಂಗೆ ಆಗಮಿಸಿದಾಗ, ನೀವು ಈ ಅಪ್ರುವಲ್ ಪತ್ರವನ್ನು ಪ್ರಸ್ತುತಪಡಿಸಬೇಕು ಮತ್ತು ಅಧಿಕೃತ ಸ್ಥಳದಿಂದ ನಿಮ್ಮ ವೀಸಾವನ್ನು ಸಂಗ್ರಹಿಸಬೇಕು.

ಪ್ರಮುಖ: ನಮ್ಮ ಯೂಸರ್ ಗಳಿಂದ ನಾವು ಸ್ವೀಕರಿಸಿದ ಪ್ರತಿಕ್ರಿಯೆಯ ಆಧಾರದ ಮೇಲೆ, ವೀಸಾ ಶುಲ್ಕದ ಜೊತೆಗೆ ಹೆಚ್ಚುವರಿ ಸರ್ವೀಸ್ ಶುಲ್ಕವನ್ನು ವಿಧಿಸುವ ವೀಸಾ ಪೂರೈಕೆದಾರರು ಇದ್ದಾರೆ. ನೀವು ಇದರೊಂದಿಗೆ ಮುಂದುವರಿಯುವ ಮೊದಲು ದಯವಿಟ್ಟು ವಿವರಗಳನ್ನು ಸರಿಯಾಗಿ ಪರಿಶೀಲಿಸಿ. ಈ ವೆಬ್‌ಸೈಟ್ ತಮ್ಮ ಗ್ರಾಹಕರಿಗೆ ಸರ್ವೀಸ್ ಶುಲ್ಕವನ್ನು ವಿಧಿಸಲು ಪ್ರಾರಂಭಿಸಿದ ಕಾರಣ ನಾವು ಹಂತಗಳಿಂದ ಲಿಂಕ್ ಅನ್ನು ತೆಗೆದುಹಾಕಿದ್ದೇವೆ. (30-10-2022 ರಂದು ಅಪ್ಡೇಟ್ ಮಾಡಲಾಗಿದೆ).

ವಿಯೆಟ್ನಾಂ ರಾಯಭಾರ ಕಚೇರಿಯಲ್ಲಿ ವಿಯೆಟ್ನಾಂ ವೀಸಾಗೆ ಅಪ್ಲಿಕೇಶನ್ ಸಲ್ಲಿಸಲು ಹಂತಗಳು

ವೀಸಾವನ್ನು ಪಡೆದುಕೊಳ್ಳುವ ಆಫ್‌ಲೈನ್ ಮೋಡ್‌ಗೆ ಆದ್ಯತೆ ನೀಡುವ ವ್ಯಕ್ತಿಗಳು ವಿಎಫ್ಎಸ್ ಗ್ಲೋಬಲ್ (ಇತರವುಗಳೊಂದಿಗೆ ಭಾರತ ಸರ್ಕಾರಕ್ಕೆ ನೇರವಾಗಿ ಸೇವೆ ಸಲ್ಲಿಸುವ ಔಟ್ ಸೋರ್ಸಿಂಗ್ ಸೇವೆಗಳ ಕಂಪನಿಗಳಲ್ಲಿ ಒಂದಾಗಿದೆ) ಮೂಲಕ ಹಾಗೆ ಮಾಡಬಹುದು. 

ಭಾರತೀಯ ನಾಗರಿಕರು ವಿಎಫ್ಎಸ್ ಗ್ಲೋಬಲ್ ಮೂಲಕ ತಮ್ಮ ವಿಯೆಟ್ನಾಂ ವೀಸಾಗೆ ಅಪ್ಲಿಕೇಶನ್ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು:

  • ಹಂತ 1: ವೀಸಾ ಅಪ್ಲಿಕೇಶನ್ ಫಾರ್ಮ್ ಮತ್ತು ನಿಮ್ಮ ಪಾಸ್‌ಪೋರ್ಟ್‌ನೊಂದಿಗೆ ಹತ್ತಿರದ ವಿಎಫ್ಎಸ್ ಗ್ಲೋಬಲ್ ವಿಯೆಟ್ನಾಂ ವೀಸಾ ಅಪ್ಲಿಕೇಶನ್ ಕೇಂದ್ರಕ್ಕೆ ಭೇಟಿ ನೀಡಿ. 

  • ಹಂತ 2: ಅಲ್ಲಿರುವ ಸೆಕ್ಯೂರಿಟಿ ಗಾರ್ಡ್ ಅನ್ನು ಸಂಪರ್ಕಿಸಿ ಮತ್ತು ಅವರಿಂದ ನಿಮ್ಮ ಟೋಕನ್ ಅನ್ನು ಸಂಗ್ರಹಿಸಿ ಮತ್ತು ವೀಸಾ ಅಪ್ಲಿಕೇಶನ್ ಕೇಂದ್ರದಲ್ಲಿ ನಿಮ್ಮ ಸರದಿಗಾಗಿ ಕಾಯಿರಿ.

  • ಹಂತ 3: ನಿಮ್ಮ ಟೋಕನ್ ಸಂಖ್ಯೆಯನ್ನು ಪಡೆದ ನಂತರ ಡಾಕ್ಯುಮೆಂಟ್ ಸಲ್ಲಿಕೆಗಾಗಿ ಗೊತ್ತುಪಡಿಸಿದ ಕೌಂಟರ್‌ಗೆ ಮುಂದುವರಿಯಿರಿ. 

  • ಹಂತ 4: ಅಗತ್ಯ ಡಾಕ್ಯುಮೆಂಟ್‌ಗಳೊಂದಿಗೆ ನಿಮ್ಮ ವೀಸಾ ಅಪ್ಲಿಕೇಶನ್ ಅನ್ನು ವಿಎಫ್ಎಸ್ ಅಧಿಕಾರಿಗೆ ನೀಡಿ; ಅದರಲ್ಲಿ ನಿಮ್ಮ ಪಾಸ್‌ಪೋರ್ಟ್ ಗಾತ್ರದ ಫೋಟೋಗಳು, ನಿಮ್ಮ ಭೇಟಿಯ ಕಾರಣವನ್ನು ವಿವರಿಸುವ ಕವರ್ ಲೆಟರ್, ಕನ್ಫರ್ಮ್ ಆಗಿರುವ ರಿಟರ್ನ್ ಟಿಕೆಟ್‌ಗಳು ಮತ್ತು ಹೋಟೆಲ್ ರಿಸರ್ವೇಶನ್ ಗಳ ಪ್ರತಿಗಳನ್ನು ಸೇರಿಸಿ. ಇದರ ಜೊತೆ, ನೀವು ಕಳೆದ ಮೂರು ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಒದಗಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ನೀವು ನೇಮಕಗೊಂಡ ವಿಎಫ್ಎಸ್ ಅಧಿಕಾರಿಗೆ ಅಪ್ಲಿಕೇಶನ್ ಅನ್ನು ಸಲ್ಲಿಸುವ ಮೊದಲು ನಿಮ್ಮ ವೀಸಾ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

  • ಹಂತ 5: ಮುಂದೆ ವೀಸಾ ಶುಲ್ಕ ಮತ್ತು ಸರ್ವೀಸ್ ಶುಲ್ಕವನ್ನು ಪಾವತಿಸಿ. ಸರ್ವೀಸ್ ಶುಲ್ಕವನ್ನು ಕ್ಯಾಶ್ ರೂಪದಲ್ಲಿ ಪಾವತಿಸಬೇಕು ಎಂಬುದನ್ನು ನೆನಪಿಡಿ. 

  • ಹಂತ 6: ಒಮ್ಮೆ ವೀಸಾ ಅಪ್ರುವಲ್ ಆದ ನಂತರ, ನೀವು ಕೊರಿಯರ್ ಮೂಲಕ ₹215 ಪೇಮೆಂಟ್ ನೊಂದಿಗೆ ಅದನ್ನು ಸ್ವೀಕರಿಸುವ ಆಯ್ಕೆ ಮಾಡಬಹುದು. 

ನೀವು ವೀಸಾಗಾಗಿ ಚೆನ್ನೈ, ಹೈದರಾಬಾದ್ ಅಥವಾ ಬೆಂಗಳೂರಿನಲ್ಲಿ ಇರುವ ವಿಎಫ್ಎಸ್ ಗ್ಲೋಬಲ್‌ನ ಯಾವುದೇ ಶಾಖೆಗಳಿಗೆ ಅಪ್ಲಿಕೇಶನ್ ಸಲ್ಲಿಸಬಹುದು. 

ಭಾರತದಲ್ಲಿ ವಿಯೆಟ್ನಾಂ ರಾಯಭಾರ ಕಚೇರಿ

ಭಾರತದಲ್ಲಿ ವಿಯೆಟ್ನಾಂ ರಾಯಭಾರ ಕಚೇರಿಯು ನವದೆಹಲಿಯಲ್ಲಿದೆ. ಅದರ ಸಂಪರ್ಕ ವಿವರಗಳು ಈ ಕೆಳಗಿನಂತಿವೆ - 

  • ವಿಳಾಸ - 20, ಕೌಟಿಲ್ಯ ಮಾರ್ಗ್, ಚಾಣಕ್ಯಪುರಿ, ನವದೆಹಲಿ - 110021

  • ಸಂಪರ್ಕ ಸಂಖ್ಯೆ - 2687.9852 (+ Ext); 2687.9852 (+20) (ದೂತಾವಾಸ)

 

ನಿಮ್ಮ ವೀಸಾ ಸಿಕ್ಕಿತೇ? ಹಾಗಾದರೆ, ನೀವು ಟ್ರಾವೆಲ್ ಮಾಡಲು ಸಿದ್ಧ! ನಿಜವಾಗಿಯೂ?

ನಿಮ್ಮ ವಿಯೆಟ್ನಾಂ ಹಾಲಿಡೇ ಅನ್ನು ಕವರ್ ಮಾಡುವ ಇನ್ಶೂರೆನ್ಸ್ ಪಾಲಿಸಿ?

ವಿಯೆಟ್ನಾಂಗೆ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸಬೇಕೇ?

ವಿಯೆಟ್ನಾಂಗೆ ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಕಡ್ಡಾಯವಲ್ಲ. ಆದಾಗ್ಯೂ, ನಿಮ್ಮ ಡೆಸ್ಟಿನೇಶನ್ ಯಾವುದೇ ಆಗಿದ್ದರೂ ಟ್ರಾವೆಲ್ ಇನ್ಶೂರೆನ್ಸ್ ಪಡೆಯುವುದು ಅತ್ಯಗತ್ಯ. ನಿಮ್ಮ ವಿಯೆಟ್ನಾಂ ಟ್ರಿಪ್ ಅನ್ನು ಇನ್ಶೂರ್ ಮಾಡುವುದು ಏಕೆ ಅತ್ಯಗತ್ಯ ಎಂಬುದು ಇಲ್ಲಿದೆ:

  • ವಿಯೆಟ್ನಾಂನ ಪ್ರಮುಖ ನಗರಗಳಲ್ಲಿ ಜೇಬುಗಳ್ಳತನ ಮತ್ತು ಕಳ್ಳತನದ ನಿದರ್ಶನಗಳು ಸಾಮಾನ್ಯವಾಗಿದೆ. ನಿಮ್ಮ ಪಾಸ್‌ಪೋರ್ಟ್ ಅನ್ನು ನೀವು ಕಳೆದುಕೊಂಡರೆ, ಅದರ ರಿಪ್ಲೇಸ್‌ಮೆಂಟ್ ವೆಚ್ಚವನ್ನು ಡಿಜಿಟ್ ಟ್ರಾವೆಲ್ ಇನ್ಶೂರೆನ್ಸ್ ಕವರ್ ಮಾಡುತ್ತದೆ. 

  • ಡಿಜಿಟ್‌ನ ಟ್ರಾವೆಲ್ ಇನ್ಶೂರೆನ್ಸ್ ನೊಂದಿಗೆ, ನೀವು ಅನುಭವಿಸುವ ತುರ್ತು ಆಕಸ್ಮಿಕ ಆಸ್ಪತ್ರೆಯ ವೆಚ್ಚಗಳನ್ನು ಸಂಪೂರ್ಣವಾಗಿ ಕವರ್ ಮಾಡಲಾಗುತ್ತದೆ. ಇದಲ್ಲದೆ, ವಿಯೆಟ್ನಾಂನಲ್ಲಿರುವಾಗ ಯಾವುದೇ ಸಾಹಸ ಕ್ರೀಡೆಯಲ್ಲಿ (ಒಂದು ದಿನದ ಚಟುವಟಿಕೆಗಳಿಗೆ ಮಾತ್ರ) ಭಾಗವಹಿಸುವ ಸಮಯದಲ್ಲಿ ಯಾವುದೇ ಅಪಘಾತದಿಂದಾಗಿ ನೀವು ಅನುಭವಿಸುವ ಆಸ್ಪತ್ರೆ ದಾಖಲಾತಿ ಶುಲ್ಕಗಳನ್ನೂ ಸಹ ಇದು ಕವರ್ ಮಾಡುತ್ತದೆ. 

  • ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ನೀವು ಫ್ಲೈಟ್ ಡಿಲೇ ಕವರ್, ಬ್ಯಾಗೇಜ್ ಡಿಲೇ ಕವರ್, ಟ್ರಿಪ್ ಕ್ಯಾನ್ಸಲೇಶನ್ ಕವರ್, ಎಮರ್ಜೆನ್ಸಿ ಕ್ಯಾಶ್ ಪ್ರಯೋಜನಗಳು, ವೈಯಕ್ತಿಕ ಅಪಘಾತ ಕವರ್, ಇತ್ಯಾದಿಗಳಂತಹ ಪ್ರಯೋಜನಗಳನ್ನೂ ಪಡೆಯಬಹುದು.

ಆದರೆ, ಡಿಜಿಟ್ ಅನ್ನು ಏಕೆ ಆರಿಸಬೇಕು?

  • ರೂ.225 ರಿಂದ ಪ್ರಾರಂಭವಾಗುವ ಕಾಂಪ್ರೆಹೆನ್ಸಿವ್ ಕವರೇಜ್ ಅನ್ನು ಪಡೆದುಕೊಳ್ಳಿ - ಒಬ್ಬ ವಯಸ್ಕ ವ್ಯಕ್ತಿ ವಿಯೆಟ್ನಾಂನ 7 ದಿನಗಳ ಟ್ರಿಪ್ ಗೆ ತಮ್ಮ ಡಿಜಿಟ್ ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ $50,000 ಸಮ್ ಇನ್ಶೂರ್ಡ್ ಅನ್ನು ರೂ.225 (18% ಹೊರತುಪಡಿಸಿ) ರಲ್ಲಿ ಪಡೆಯಬಹುದು!
  • ಕ್ಲೈಮ್‌ಗಳು ಪೇಪರ್‌ಲೆಸ್ ಮತ್ತು ಸುಲಭವಾಗಿದೆ! - ಡಿಜಿಟ್ ಪೇಪರ್‌ಲೆಸ್ ಕ್ಲೈಮ್ ಸೆಟಲ್‌ಮೆಂಟ್ ಅನ್ನು ನೀಡುತ್ತದೆ ಹಾಗೂ ಇದನ್ನು ನೀವು ಮಿಸ್ಡ್ ಕಾಲ್ ಮಾಡುವ ಮೂಲಕ ಪಡೆಯಬಹುದು. 
  • ಫ್ಲೈಟ್ ಡಿಲೇಗಾಗಿ ಸಮರ್ಥ ಕ್ಲೈಮ್ ಪ್ರಕ್ರಿಯೆ - ವಿಮಾನ ಡಿಲೇ ಆಗಿದೆಯೇ? ಚಿಂತಿಸಬೇಡಿ, ಡಿಜಿಟ್ ನಿಮ್ಮನ್ನು ಕವರ್ ಮಾಡುತ್ತದೆ! ನಿಮ್ಮ ಫ್ಲೈಟ್ 6 ಗಂಟೆಗಳಿಗಿಂತ ಹೆಚ್ಚು ಡಿಲೇ ಆಗಿದ್ದರೆ, ನೀವು ಕಾಂಪನ್ಸೇಶನ್ ಅಮೌಂಟ್ ಪಡೆಯುತ್ತೀರಿ.
  • ಡಿಡಕ್ಟಿಬಲ್-ಮುಕ್ತ ಇನ್ಶೂರೆನ್ಸ್ - ನಾವು, ಡಿಜಿಟ್‌ನಲ್ಲಿ, ನಮ್ಮ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಯಾವುದೇ ಡಿಡಕ್ಟಿಬಲ್ ಗಳನ್ನು ವಿಧಿಸುವುದಿಲ್ಲ. ಆದ್ದರಿಂದ ನಿಮಗೆ ಇನ್ಶೂರೆನ್ಸ್ ಪ್ರಯೋಜನಗಳ ಅಗತ್ಯವಿರುವ ಪರಿಸ್ಥಿತಿಯು ಉದ್ಭವಿಸಿದರೆ, ನಿಮ್ಮ ಜೇಬಿನಿಂದ ಏನನ್ನೂ ಪಾವತಿಸದೆಯೇ ನೀವು ಅವುಗಳನ್ನು ಪಡೆಯಬಹುದು!

ಭಾರತೀಯ ನಾಗರಿಕರಿಗೆ ವಿಯೆಟ್ನಾಂ ಟೂರಿಸ್ಟ್ ವೀಸಾ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು

ನನ್ನ ವಿಯೆಟ್ನಾಂ ಟ್ರಿಪ್ ಗಾಗಿ ಆನ್‌ಲೈನ್‌ನಲ್ಲಿ ಅಥವಾ ವೈಯಕ್ತಿಕವಾಗಿ ವೀಸಾಕ್ಕಾಗಿ ಅಪ್ಲಿಕೇಶನ್ ಸಲ್ಲಿಸಲು ನಾನು ಮರೆತಿದ್ದೇನೆ. ಈಗ ನನ್ನ ಬಳಿ ಇರುವ ಆಯ್ಕೆಗಳು ಯಾವುವು?

ಮುಂಚಿತವಾಗಿ ವೀಸಾವನ್ನು ಪಡೆಯಲು ಸಾಧ್ಯವಾಗದ ಪ್ರಯಾಣಿಕರು ಪ್ರಯಾಣಕ್ಕೆ ಕನಿಷ್ಠ 3-5 ದಿನಗಳ ಮೊದಲು ವೀಸಾ ಆನ್ ಅರೈವಲ್ ಗೆ ಅಪ್ಲಿಕೇಶನ್ ಸಲ್ಲಿಸಬಹುದು. ಅಪ್ಲಿಕೇಶನ್ ಪೂರ್ಣಗೊಳಿಸಿದ ನಂತರ, ಅವರು ವಿಯೆಟ್ನಾಂ ಪೋರ್ಟ್ ಆಫ್ ಎಂಟ್ರಿ ವರೆಗೆ ನಡೆದು ತಮ್ಮ ವೀಸಾ ಡಾಕ್ಯುಮೆಂಟ್‌ಗಳನ್ನು ತೆಗೆದುಕೊಳ್ಳಬಹುದು.

ವಿಯೆಟ್ನಾಂಗೆ ನನ್ನ ಟ್ರಾವೆಲ್ ವೀಸಾ ಎಷ್ಟು ಕಾಲ ಉಳಿಯುತ್ತದೆ?

ವಿಯೆಟ್ನಾಂಗೆ ಟ್ರಾವೆಲ್ ವೀಸಾ 30 ದಿನಗಳವರೆಗೆ ಇರುತ್ತದೆ. ಅದಾಗ್ಯೂ, ನಿಮ್ಮ ವೀಸಾವನ್ನು ರಿನ್ಯೂ ಮಾಡಲು ಮತ್ತು ವಿಯೆಟ್ನಾಂನಲ್ಲಿ ಹೆಚ್ಚು ಕಾಲ ಉಳಿಯಲು ನೀವು ಆಯ್ಕೆ ಮಾಡಬಹುದು.

ನನ್ನ ಪಾಸ್‌ಪೋರ್ಟ್ ಅವಧಿ 3 ತಿಂಗಳಲ್ಲಿ ಮುಕ್ತಾಯವಾಗುತ್ತದೆ. ನಾನು ವಿಯೆಟ್ನಾಂ ವೀಸಾಗೆ ಅರ್ಹನೇ?

ಇಲ್ಲ. ವೀಸಾ ಪಡೆಯಲು ವಿಯೆಟ್ನಾಂಗೆ ನಿಮ್ಮ ಭೇಟಿಯ ದಿನಾಂಕದಿಂದ ಕನಿಷ್ಠ ಮುಂದಿನ ಆರು ತಿಂಗಳವರೆಗೆ ನಿಮ್ಮ ಪಾಸ್‌ಪೋರ್ಟ್ ವ್ಯಾಲಿಡ್ ಆಗಿರಬೇಕು. ವಿಯೆಟ್ನಾಂಗೆ ವೀಸಾಕ್ಕೆ ಅಪ್ಲಿಕೇಶನ್ ಸಲ್ಲಿಸುವ ಮೊದಲು ನೀವು ಮೊದಲು ಪಾಸ್‌ಪೋರ್ಟ್ ಅನ್ನು ರಿನ್ಯೂ ಮಾಡಬೇಕು.