ಆಯಾ ಸೋಫಿಯಾ ಎಲ್ಲಿದೆ ಎಂದು ನಿಮಗೆ ಗೊತ್ತಾ?
ಮೆಡಿಟರೇನಿಯನ್ ಪ್ರದೇಶದಲ್ಲಿ ಸಂಪೂರ್ಣವಾಗಿರುವ, ಇನ್ನೂ ಸ್ಥಿರವಾಗಿರುವ ರೋಮನ್ ನಗರಗಳು ಎಲ್ಲಿವೆ ಎಂದು ನಿಮಗೆ ತಿಳಿದಿದೆಯೇ?
ಅತಿವಾಸ್ತವಿಕವಾದ, ಬಂಡೆಗಳನ್ನು ಹೊಂದಿರುವ ಕಪಾಡೋಸಿಯಾದ ಕಣಿವೆಗಳು ಎಲ್ಲಿವೆ ಎಂದು ನಿಮಗೆ ತಿಳಿದಿದೆಯೇ?
ಪಾಮುಕ್ಕಲೆ ಎಲ್ಲಿದೆ ಗೊತ್ತಿದೆಯೇ?
ಖಂಡಿತಾ, ನಿಮಗೆ ತಿಳಿದಿರುತ್ತದೆ! ಯಾಕೆಂದರೆ ನೀವು ಟರ್ಕಿಗೆ ನಿಮ್ಮ ಪ್ರವಾಸವನ್ನು ಪ್ಲಾನ್ ಮಾಡುತ್ತಿದ್ದೀರಿ, ಅಲ್ಲಿ ಈ ಎಲ್ಲಾ ಮತ್ತು ಹೆಚ್ಚು ಸುಂದರವಾದ ಆಕರ್ಷಣೆಗಳು ನಿಮಗಾಗಿ ಕಾಯುತ್ತಿವೆ. ಈಗ, ದೀರ್ಘವಾಗಿ ಉಸಿರು ಎಳೆದುಕೊಳ್ಳಿ, ನಿಮ್ಮ ಉತ್ಸಾಹವನ್ನು ತಡೆದುಕೊಳ್ಳಿ ಮತ್ತು ಟರ್ಕಿಗೆ ನಿಮ್ಮ ಪ್ರವಾಸವನ್ನು ಪರ್ಫೆಕ್ಟ್ ಆಗಿ ಪ್ಲಾನ್ ಮಾಡಿ. ಟರ್ಕಿಯನ್ನು ಅನ್ವೇಷಣೆ ಮಾಡುವುದರ ಒಂದು ಪ್ರಮುಖ ಭಾಗವೆಂದರೆ ಮೊದಲು ನಿಮ್ಮ ವೀಸಾ ಮತ್ತು ಟ್ರಾವೆಲ್ ಇನ್ಶೂರೆನ್ಸ್ ಪಡೆಯುವುದು, ಮತ್ತು ಅದರೊಂದಿಗೆ ನಿಮಗೆ ಮಾರ್ಗದರ್ಶನ ಮಾಡಲು ನಾವು ಇಲ್ಲಿದ್ದೇವೆ!
ಹೌದು, ಟರ್ಕಿಗೆ ಪ್ರವೇಶಿಸಲು ಭಾರತೀಯರಿಗೆ ವೀಸಾ ಅಗತ್ಯವಿದೆ.
ಹೌದು, ಷೆಂಗೆನ್, ಯುಎಸ್, ಯುಕೆ ಮತ್ತು ಐರ್ಲೆಂಡ್ನಿಂದ ವ್ಯಾಲಿಡ್ ವೀಸಾ ಅಥವಾ ರೆಸಿಡೆನ್ಸ್ ಪರ್ಮಿಟ್ ಹೊಂದಿರುವ ಭಾರತೀಯ ಪಾಸ್ಪೋರ್ಟ್ ಹೋಲ್ಡರ್ಗಳು ಟರ್ಕಿಶ್ ಇ-ವೀಸಾಗೆ ಅರ್ಹರಾಗಿರುತ್ತಾರೆ, ಇದನ್ನು ಕೆಲವೇ ನಿಮಿಷಗಳಲ್ಲಿ ಆನ್ಲೈನ್ ಮೂಲಕ ಪಡೆಯಬಹುದು. ಇದಕ್ಕೆ ವಿಧಿಸಲಾಗುವ ಶುಲ್ಕ 43 ಯುಎಸ್ಡಿ(ಇಯುಆರ್ 39.82).
ಈ ದೇಶಗಳ ವ್ಯಾಲಿಡ್ ವೀಸಾ ಅಥವಾ ರೆಸಿಡೆನ್ಸ್ ಪರ್ಮಿಟ್ಗಳನ್ನು ಹೊಂದಿರದ ಭಾರತೀಯ ನಾಗರಿಕರು ಸುಮಾರು ರೂ. 4,280ರ (ವೀಸಾ ಸೇವಾ ಪೂರೈಕೆದಾರರಿಂದ ಹೆಚ್ಚುವರಿ ಸೇವಾ ಶುಲ್ಕ ರೂ 4,201 ಇದೆ) ಸಿಂಗಲ್ ಎಂಟ್ರಿ ವೀಸಾ ಶುಲ್ಕದೊಂದಿಗೆ ಟರ್ಕಿಶ್ ಸ್ಟಿಕ್ಕರ್ ವೀಸಾಗೆ ಅಪ್ಲೈ ಮಾಡಬೇಕಾಗುತ್ತದೆ.
ಟರ್ಕಿಯ ವೀಸಾ ಶುಲ್ಕವು ನೀವು ಅರ್ಜಿ ಸಲ್ಲಿಸುತ್ತಿರುವ ವೀಸಾ ಕೆಟಗರಿಯನ್ನು ಅವಲಂಬಿಸಿರುತ್ತದೆ. ಭಾರತೀಯ ನಾಗರಿಕರಿಗೆ ಸಿಂಗಲ್-ಎಂಟ್ರಿ ಟರ್ಕಿ ವೀಸಾ ಶುಲ್ಕ ಯುಎಸ್ಡಿ51.70 (ಇಯುಆರ್ 47.90) ಮತ್ತು ಭಾರತೀಯ ನಾಗರಿಕರಿಗೆ ಮಲ್ಟಿಪಲ್-ಎಂಟ್ರಿ ಪ್ರವಾಸಿ ವೀಸಾಗಳ ವೆಚ್ಚ ಸುಮಾರು ಯುಎಸ್ಡಿ174.77 (ಇಯುಆರ್ 161.92)
ವೀಸಾ ಸೇವಾ ಪೂರೈಕೆದಾರರು ಯುಎಸ್ಡಿ52.48 (ಇಯುಆರ್ 48.62) ಹೆಚ್ಚುವರಿ ಸೇವಾ ಶುಲ್ಕ ವಿಧಿಸುತ್ತಾರೆ.
ಟರ್ಕಿಗೆ ಟೂರಿಸ್ಟ್ ವೀಸಾಗೆ ಅರ್ಜಿ ಸಲ್ಲಿಸಲು ನಿಮಗೆ ಈ ಕೆಳಗಿನ ಡಾಕ್ಯುಮೆಂಟ್ಗಳ ಅವಶ್ಯಕತೆ ಇದೆ:
ವ್ಯಾಲಿಡ್ ಪಾಸ್ಪೋರ್ಟ್. ಟರ್ಕಿಗೆ ನೀವು ಪ್ರವೇಶಿಸಿದ ದಿನಾಂಕದಿಂದ ಕನಿಷ್ಠ 6 ತಿಂಗಳವರೆಗೆ ನಿಮ್ಮ ಪಾಸ್ಪೋರ್ಟ್ ವ್ಯಾಲಿಡ್ ಆಗಿರಬೇಕು
ಟರ್ಕಿಯಲ್ಲಿ ನಿಮ್ಮ ವಾಸ್ತವ್ಯದ ಸಂಪೂರ್ಣ ಅವಧಿಗೆ ದೃಢಪಡಿಸಿದ ಹೋಟೆಲ್ ರಿಸರ್ವೇಷನ್, ವಿಮಾನ ಬುಕಿಂಗ್ಗಳು ಮತ್ತು ಟ್ರಾವೆಲ್ ಟ್ರಾವೆಲ್ ಪುರಾವೆ
ನಿಮ್ಮ ಪೂರ್ಣಗೊಂಡ ವೀಸಾ ಅಪ್ಲಿಕೇಶನ್ ಫಾರ್ಮ್ನ ಕಾಪಿ
ಟರ್ಕಿಗೆ ಮತ್ತು ಅಲ್ಲಿಂದ ನಿಮ್ಮ ದೃಢೀಕೃತ ವಿಮಾನ ಟಿಕೆಟ್ಗಳ ಕಾಪಿ
ನೀವು ಟರ್ಕಿಯಲ್ಲಿ ತಂಗುವ ಸಮಯದಲ್ಲಿ ಮತ್ತು ನಿಮ್ಮ ವಾಪಸಾತಿಗೆ ನಿಮ್ಮನ್ನು ಆರ್ಥಿಕವಾಗಿ ಬೆಂಬಲಿಸುವ ನಿಮ್ಮ ಆರ್ಥಿಕ ಸ್ಥಿತಿಯ ಪುರಾವೆ. ಟರ್ಕಿ ದೇಶದಲ್ಲಿ ವಿಸಿಟರ್ಗಳು ದೇಶದಲ್ಲಿ ಉಳಿಯಲು ದಿನಕ್ಕೆ ಕನಿಷ್ಠ ಯುಎಸ್ಡಿ50 (ಇಯುಆರ್ 46.31) ಹೊಂದಿರಬೇಕು.
ನಿಮ್ಮ ಬ್ಯಾಂಕ್ನಿಂದ ಕಳೆದ 6 ತಿಂಗಳುಗಳ ನಿಮ್ಮ ಹಣಕಾಸಿನ ಸ್ಥಿತಿಯ ಸ್ಟೇಟ್ಮೆಂಟ್
ನೀವು ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಅಥವಾ ಪಿಪಿಸಿ ಹೊಂದಿರುವ ಪುರಾವೆಯನ್ನು ತೋರಿಸಬೇಕು. ನೀವು ಯುನೈಟೆಡ್ ಕಿಂಗ್ಡಮ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಅಥವಾ ಯಾವುದೇ ಇತರ ಷೆಂಗೆನ್ ದೇಶಕ್ಕೆ ಪ್ರಯಾಣಿಸಿದ್ದರೆ, ನಂತರ ಪಿಪಿಸಿ ಅಗತ್ಯ ಇರುವುದಿಲ್ಲ.
ನಿಮ್ಮ ಅವಶ್ಯಕತೆಗಳನ್ನು ಆಧರಿಸಿ, ನೀವು ಟರ್ಕಿ ಇವೀಸಾವನ್ನು ಆಯ್ಕೆ ಮಾಡಬಹುದು ಅಥವಾ ಟರ್ಕಿಶ್ ಕಾನ್ಸುಲೇಟ್ನಿಂದ ಅಧಿಕೃತ ಕಂಪನಿಯ ಮೂಲಕ ನೇರ ವೀಸಾಗೆ ಅಪ್ಲೈ ಮಾಡಬಹುದು.
ನೀವು ಅಧಿಕೃತ ವೆಬ್ಸೈಟ್ ಮೂಲಕ ಟರ್ಕಿಶ್ ಇ-ವೀಸಾಗೆ ಅಪ್ಲೈ ಮಾಡಬಹುದು, ಇದು ನೇರವಾದ ಪ್ರೊಸೀಜರ್ ಆಗಿದೆ. ನೀವು ಈ ವೀಸಾವನ್ನು ಕೇವಲ 3 ನಿಮಿಷಗಳಲ್ಲಿ ಪಡೆಯಬಹುದು!
ವೀಸಾಗಾಗಿ ಅಪ್ಲೈ ಮಾಡಿ, ವೀಸಾ ಶುಲ್ಕವನ್ನು ಪಾವತಿಸಿ ಮತ್ತು ನಿಮ್ಮ ಟರ್ಕಿ ಇವೀಸಾ ಡೌನ್ಲೋಡ್ ಮಾಡಿ. ಹೌದು, ನಿಮ್ಮ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ನಿಮ್ಮ ಇವೀಸಾದ ಪ್ರಿಂಟ್ಔಟ್ ತೆಗೆದುಕೊಳ್ಳಲು ಮರೆಯಬೇಡಿ.
ಗೇಟ್ವೇ ಗ್ಲೋಬ್ ಮೂಲಕ ನೀವು ನೇರವಾಗಿ ವೀಸಾಗೆ ಅಪ್ಲೈ ಮಾಡಬಹುದು, ಸ್ಟಿಕ್ಕರ್ ವೀಸಾ ಅಪ್ಲಿಕೇಶನ್ಗಳನ್ನು ಸ್ವೀಕರಿಸಲು ಟರ್ಕಿಶ್ ಎಂಬೆಸಿಯಿಂದ ಅವರಿಗೆ ಅಧಿಕಾರ ನೀಡಲಾಗಿದೆ. ಕೆಳಗಿನ ಪ್ರೊಸೆಸ್ಗಳನ್ನು ಚೆಕ್ ಮಾಡಿ:
ಅಪ್ಲಿಕೇಶನ್ ಫಾರ್ಮ್ ಅನ್ನು ಭರ್ತಿ ಮಾಡಿ
ಫೋಟೋ ಜೊತೆಗೆ ಅಗತ್ಯ ಡಾಕ್ಯುಮೆಂಟ್ಗಳನ್ನು ಸಂಗ್ರಹಿಸಿ
ಅಪಾಯಿಂಟ್ಮೆಂಟ್ ಶೆಡ್ಯೂಲ್ ಮಾಡಿ
ವೀಸಾ ಶುಲ್ಕ ಪಾವತಿಸಿ
ಅಪ್ಲಿಕೇಶನ್ ಫಾರ್ಮ್ ಸಲ್ಲಿಸಿ
ನಿಮ್ಮ ವೀಸಾ ಕಲೆಕ್ಟ್ ಮಾಡಿ
ಟರ್ಕಿ ಇವೀಸಾಗೆ ಕೇವಲ 3 ನಿಮಿಷಗಳು ಮತ್ತು ಸ್ಟಿಕ್ಕರ್ ವೀಸಾಗಾಗಿ ಡಾಕ್ಯುಮೆಂಟ್ಗಳನ್ನು ಸಲ್ಲಿಸಿದ ದಿನಾಂಕದಿಂದ ಕನಿಷ್ಠ 15 ಕೆಲಸದ ದಿನಗಳು.
ಈಗ ನೀವು ಟರ್ಕಿಶ್ ವೀಸಾ ಪಡೆಯುವ ಬಗ್ಗೆ ಮತ್ತು ಟರ್ಕಿ ಟ್ರಾವೆಲ್ ಇನ್ಶೂರೆನ್ಸ್ ಪ್ರಾಮುಖ್ಯತೆಯ ಬಗ್ಗೆ ಎಲ್ಲವನ್ನೂ ತಿಳಿದಿದ್ದೀರಿ, ಈಗ ಟರ್ಕಿಗೆ ಹೋಗಿ ಸುಂದರವಾದ ಪ್ರವಾಸವನ್ನು ಮಾಡಿ!
ಹೌದು, ಟರ್ಕಿಶ್ ವೀಸಾ ಅವಶ್ಯಕತೆಯ ಪ್ರಕಾರ, ಟರ್ಕಿಗೆ ಪ್ರಯಾಣಿಸುವ ಯಾರೇ ಆದರೂ ಕನಿಷ್ಠ € 30,000, ಅಂದರೆ ಸರಿಸುಮಾರು $33,000 ಕವರೇಜ್ ಒದಗಿಸುವ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಹೊಂದಿರುವುದು ಕಡ್ಡಾಯವಾಗಿದೆ. ಕಡ್ಡಾಯದ ಹೊರತಾಗಿ, ಟ್ರಾವೆಲ್ ಇನ್ಶೂರೆನ್ಸ್ನಿಂದ ನಿಮ್ಮ ಪ್ರವಾಸವನ್ನು ಭದ್ರಪಡಿಸಿಕೊಳ್ಳುವುದರಿಂದ ನಿಮ್ಮ ಪ್ರವಾಸದ ಸಮಯದಲ್ಲಿ ಸಂಭವಿಸಬಹುದಾದ ಸಣ್ಣ ಸಣ್ಣ ಅಪಘಾತಗಳಿಂದ ನಿಮಗೆ ರಕ್ಷಣೆ ಒದಗುತ್ತದೆ.
ಸುಮ್ಮನೆ ಊಹಿಸಿಕೊಳ್ಳಿ, ಯಾವುದೇ ಸಂದರ್ಭದಲ್ಲೂ ಕ್ರಮ ತಪ್ಪಬಹುದು, ಅನಿರೀಕ್ಷಿತ ಅನಾರೋಗ್ಯ, ಲಗೇಜ್ ಮಿಸ್ಪ್ಲೇಸ್ಮೆಂಟ್, ಅಥವಾ ತಪ್ಪಿದ ಸಂಪರ್ಕ ಅಥವಾ ವಿಮಾನ ವಿಳಂಬ ಸರಳವಾಗಿ ಸಂಭವಿಸಬಹುದು. ನೀವು ಸಾಗರೋತ್ತರ ಪ್ರಯಾಣದಲ್ಲಿರುವಾಗ ಮೆಡಿಕಲ್ ತುರ್ತುಸ್ಥಿತಿಗಳು ಸಂಭವಿಸಿದಾಗ ಅಥವಾ ನೀವು ಇತರ ತೀವ್ರ ತುರ್ತು ಪರಿಸ್ಥಿತಿಗಳನ್ನು ಎದುರಿಸುವಾಗ, ಟ್ರಾವೆಲ್ ಇನ್ಶೂರೆನ್ಸ್ ಹೊಂದುವುದು ನಿಮಗೆ ಆರ್ಥಿಕ ಸೌಕರ್ಯವನ್ನು ಒದಗಿಸುತ್ತದೆ, ಇಡೀ ಅನುಭವವನ್ನು ಕಡಿಮೆ ಆಘಾತಕಾರಿಯನ್ನಾಗಿ ಮಾಡುತ್ತದೆ.
ವಿಶೇಷವಾಗಿ ನೀವು ಮನೆಯಿಂದ ದೂರದಲ್ಲಿರುವ ಅಜ್ಞಾತ ಜಾಗದಲ್ಲಿರುವ ಕಾರಣದಿಂದಲೇ ದುರ್ಬಲರಾಗಬಹುದು ಎಂದು ನೀವು ಭಾವಿಸುತ್ತಿರುವ ಸಂದರ್ಭದಲ್ಲಿ ಯಾವುದೇ ಅನಿರೀಕ್ಷಿತ ಮೆಡಿಕಲ್ ವೆಚ್ಚಗಳು ಮತ್ತು ಇತರೆ ಪ್ರಯಾಣ-ಸಂಬಂಧಿತ ತುರ್ತುಸ್ಥಿತಿಗಳ ಅಪಾಯದ ವಿರುದ್ಧ ಟ್ರಾವೆಲ್ ಇನ್ಶೂರೆನ್ಸ್ ನಿಮ್ಮನ್ನು ರಕ್ಷಿಸುತ್ತದೆ.
ಟರ್ಕಿ ಟ್ರಾವೆಲ್ ಇನ್ಶೂರೆನ್ಸ್ ಈ ರೀತಿಯ ಸಂದರ್ಭಗಳಲ್ಲಿ ನಿಮ್ಮನ್ನು ಕವರ್ ಮಾಡಬಹುದು:
ವೈದ್ಯಕೀಯ ತುರ್ತುಸ್ಥಿತಿಗಳು (ಅನಾರೋಗ್ಯಗಳು, ಅಪಘಾತಗಳು, ಇತ್ಯಾದಿ)
ಟ್ರಿಪ್ ಕ್ಯಾನ್ಸಲೇಷನ್ಗಳು
ವಿಮಾನ ವಿಳಂಬಗಳು, ತಪ್ಪಿದ ಸಂಪರ್ಕಗಳು ಮತ್ತು ಕ್ಯಾನ್ಸಲ್ ಆದ ವಿಮಾನಗಳು
ಪಾಸ್ಪೋರ್ಟ್ ಅಥವಾ ಲಗೇಜ್ ನಷ್ಟ
ಚೆಕ್-ಇನ್ ಲಗೇಜ್ ವಿಳಂಬ
ಹಣ ಕಳ್ಳತನ/ನಷ್ಟ
ಇನ್ನಷ್ಟು ತಿಳಿಯಿರಿ: