ಭಾರತೀಯರಿಗಾಗಿ ಶ್ರೀಲಂಕಾ ಟೂರಿಸ್ಟ್ ವೀಸಾ
ಭಾರತೀಯರಿಗಾಗಿ ಶ್ರೀಲಂಕಾ ವೀಸಾ ಬಗ್ಗೆ ಎಲ್ಲ ಮಾಹಿತಿ
ಶ್ರೀಲಂಕಾ ನೀವು ಸುಲಭವಾಗಿ ಪ್ರೀತಿಯಲ್ಲಿ ಬೀಳಬಹುದಾದ ಒಂದು ಅದ್ಭುತ ದೇಶವಾಗಿದೆ. ಪ್ರಕೃತಿ ಮತ್ತು ಪ್ರಾಣಿ ಪ್ರಿಯರಿಗೆ, ಈ ಸ್ಥಳವು ಭೂಮಿಯ ಮೇಲಿನ ಸ್ವರ್ಗಕ್ಕಿಂತ ಕಡಿಮೆಯೇನಲ್ಲ. ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ, ಶ್ರೀಲಂಕಾ ತನ್ನ ವೈಭವದ ಕಡಲತೀರಗಳನ್ನು ಮೀರಿಸಿದೆ. ವನ್ಯಜೀವಿ ಸಫಾರಿಗಳು, ಎತ್ತರದ ಪರ್ವತಗಳು, ಅನೇಕ ಚಹಾ ತೋಟಗಳು, ಪ್ರಪಂಚದ ಅತ್ಯಂತ ರಮಣೀಯವಾದ ಟ್ರೈನ್ ರೈಡ್ ಮತ್ತು ವಿವಿಧ ಪಾದಯಾತ್ರೆಯ ಕಾರಣಗಳಿಂದ- ಶ್ರೀಲಂಕಾ ದೇಶವು ಸಾಹಸ ಪ್ರಿಯರು, ಹನಿಮೂನ್‌ಗೆ ಬರುವ ಜೋಡಿಗಳು ಅಥವಾ ಸ್ವಲ್ಪ ಗೆಟ್ಅವೇಗಾಗಿ ಬಯಸುವ ಕುಟುಂಬದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನೀವು ಮುಂದುವರಿಯುವ ಮೊದಲು ಮತ್ತು ನಿಮ್ಮ ಟ್ರಿಪ್ ಅನ್ನು ಪ್ಲ್ಯಾನ್ ಮಾಡುವ ಮೊದಲು, ನಿಮ್ಮ ಜರ್ನಿಗೆ ಅಗತ್ಯವಾದ ಕೆಲವು ವಿಷಯಗಳ ಮೂಲಕ ನಿಮಗೆ ಗೈಡ್ ನೀಡಬೇಕಿದೆ- ವ್ಯಾಲಿಡ್ ವೀಸಾ ಮತ್ತು ಟ್ರಾವೆಲ್ ಇನ್ಶೂರೆನ್ಸ್!
ಭಾರತೀಯರಿಗೆ ಶ್ರೀಲಂಕಾದಲ್ಲಿ ವೀಸಾ ಆನ್ ಅರೈವಲ್‌ನ ಅಗತ್ಯವಿದೆಯೇ?
ಹೌದು, ಭಾರತೀಯರಿಗೆ ಶ್ರೀಲಂಕಾದಲ್ಲಿ ವೀಸಾ ಆನ್ ಅರೈವಲ್‌ನ ಅಗತ್ಯವಿದೆ.
ಭಾರತೀಯರಿಗೆ ಶ್ರೀಲಂಕಾದಲ್ಲಿ ವೀಸಾ ಆನ್ ಅರೈವಲ್ ಇದೆಯೇ?
ಹೌದು, ಶ್ರೀಲಂಕಾಗೆ ಟ್ರಾವೆಲ್ ಮಾಡುವ ಭಾರತೀಯರಿಗೆ ವೀಸಾ ಆನ್ ಅರೈವಲ್ ಅನ್ನು ಅನುಮತಿಸಲಾಗಿದೆ.ಆದರೆ ನೀವು ಶ್ರೀಲಂಕಾ ಇಟಿಎ ಅನ್ನು ಮೊದಲೇ ಪಡೆದುಕೊಂಡಿದ್ದೀರಿ ಮತ್ತು ನಿಮ್ಮ ಪಾಸ್‌ಪೋರ್ಟ್ ನಿಮ್ಮ ಡಿಪಾರ್ಚರ್ ದಿನಾಂಕದಿಂದ ಕನಿಷ್ಠ ಮೂರು ತಿಂಗಳವರೆಗೆ ವ್ಯಾಲಿಡ್ ಆಗಿದೆ ಎನುವುದನ್ನು ನೀವು ಖಚಿತಪಡಿಸಿಕೊಳ್ಳಬೇಕು.
ಭಾರತೀಯರಿಗಾಗಿ ಶ್ರೀಲಂಕಾ ವೀಸಾ ಫೀಸ್
ಶ್ರೀಲಂಕಾ ವೀಸಾದ ಸ್ಟ್ಯಾಂಡರ್ಡ್ ವೆಚ್ಚವು ಟೂರಿಸ್ಟ್ ವೀಸಾಗೆ $20 ಆಗಿದ್ದು, ಡಬಲ್ ಎಂಟ್ರಿಗಾಗಿ ದೇಶದಲ್ಲಿ 30-ದಿನಗಳ ವಾಸ್ತವ್ಯವನ್ನು ನೀಡುತ್ತದೆ. ಟೂರಿಸ್ಟ್ ವೀಸಾ ನಿಮಗೆ ಶ್ರೀಲಂಕಾಗಾಗಿ ಗರಿಷ್ಠ ಎರಡು ಎಂಟ್ರಿಗಳನ್ನು ಮಾತ್ರ ಅನುಮತಿಸುತ್ತದೆ. ಮಲ್ಟಿಪಲ್ ಎಂಟ್ರಿಗಾಗಿ ಬೇಕಿರುವ ಬಿಸಿನೆಸ್ ವೀಸಾದ, ಸ್ಟ್ಯಾಂಡರ್ಡ್ ವೆಚ್ಚವು $30 ಆಗಿದೆ.
ಶ್ರೀಲಂಕಾದ ಇಟಿಎ (ETA) ಗೆ ಅಪ್ಲೈ ಮಾಡುವುದು ಹೇಗೆ?
ಟೂರಿಸಂ, ಟ್ರಾನ್ಸಿಟ್, ಬಿಸಿನೆಸ್ ಮುಂತಾದ ಉದ್ದೇಶಗಳಿಗಾಗಿ ಶ್ರೀಲಂಕಾಗೆ ಟ್ರಾವೆಲ್ ಮಾಡುವ ಭಾರತೀಯರು, ಶ್ರೀಲಂಕಾ ದೇಶಕ್ಕೆ ಮತ್ತು ದೇಶದೊಳಗೆ ಟ್ರಾವೆಲ್ ಮಾಡಲು ಇಟಿಎ (ಎಲೆಕ್ಟ್ರಾನಿಕ್ ಟ್ರಾವೆಲ್ ಆಥರೈಸೇಶನ್) ಅನ್ನು ಹೊಂದಿರಬೇಕು.
ಎಲೆಕ್ಟ್ರಾನಿಕ್ ಟ್ರಾವೆಲ್ ಆಥರೈಸೇಶನ್
ಅಪ್ಲಿಕೆಂಟ್‌ಗಳು ಆನ್‌ಲೈನ್‌ನಲ್ಲಿ www.eta.gov.lk ಅಥವಾ ವಿದೇಶದಲ್ಲಿರುವ ಶ್ರೀಲಂಕಾ ಮಿಷನ್‌ಗಳಲ್ಲಿ ಲಭ್ಯವಿರುವ ಇಟಿಎ ಆನ್‌ಲೈನ್ ಅಪ್ಲಿಕೇಶನ್ ಅನ್ನು, ಪೂರ್ಣಗೊಳಿಸುವ ಮೂಲಕ ಶ್ರೀಲಂಕಾಗಾಗಿ ವ್ಯಾಲಿಡ್ ಆಗಿರುವ ಎಲೆಕ್ಟ್ರಾನಿಕ್ ಟ್ರಾವೆಲ್ ಆಥರೈಸೇಶನ್ ಅನ್ನು ಪಡೆಯಬಹುದು. ಆನ್‌ಲೈನ್ ಶ್ರೀಲಂಕಾ ಇಟಿಎ ಅಪ್ಲಿಕೇಶನ್ ಸರಳವಾಗಿದೆ. ಶ್ರೀಲಂಕಾಗಾಗಿ ಅಪ್ರುವ್ಡ್ ಇಟಿಎ ಅನ್ನು ಸ್ವೀಕರಿಸಲು ನೀವು ಆನ್‌ಲೈನ್ ಅಪ್ಲಿಕೇಶನ್ ಫಾರ್ಮ್ ಅನ್ನು ಪೂರ್ಣಗೊಳಿಸುವ ಅಗತ್ಯವಿದೆ.
ಇಟಿಎ (ETA) ಪ್ರಕ್ರಿಯೆ
ಆಫೀಷಿಯಲ್ ವೆಬ್‌ಸೈಟ್ ಮೂಲಕ ಅಪ್ಲಿಕೇಶನ್ ಅನ್ನು ಸಬ್ಮಿಟ್ ಮಾಡಿ ಮತ್ತು ಅಕ್ನಾಲೆಡ್ಜ್‌ಮೆಂಟ್ ಅನ್ನು ಸ್ವೀಕರಿಸಿ.
ಅಪ್ಲಿಕೇಶನ್‌ನಲ್ಲಿ ನೀವು ನೀಡಿದ ಇಮೇಲ್‌ನಲ್ಲಿ ಇಟಿಎ ಅಪ್ರುವಲ್ ಅನ್ನು ಸ್ವೀಕರಿಸಿ.
ಇಮೇಲ್‌ನಲ್ಲಿ ಸ್ವೀಕರಿಸಿದ ಅಪ್ರುವಲ್‌ನ ಪ್ರಿಂಟ್ ಔಟ್ ತೆಗೆದುಕೊಳ್ಳಿ ಮತ್ತು ಅಗತ್ಯವಿದ್ದಾಗ ಏರ್‌ಪೋರ್ಟ್‌ನಲ್ಲಿರುವ ಇಮಿಗ್ರೇಷನ್ ಆಫೀಸರ್‌ಗಳಿಗೆ ಸಬ್ಮಿಟ್ ಮಾಡಿ.
ಇಟಿಎ ಅಪ್ರುವಲ್ ಸರ್ಟಿಫಿಕೇಟ್ ಅನ್ನು ನೀಡಿದ ನಂತರದ 180 ದಿನಗಳಲ್ಲಿ ಬಳಸಬೇಕು.
ಶ್ರೀಲಂಕಾ ಟೂರಿಸ್ಟ್ ವೀಸಾ ಪ್ರೊಸೆಸಿಂಗ್ ಟೈಮ್
ಒಮ್ಮೆ ನೀವು ಫಾರ್ಮ್ ಅನ್ನು ಭರ್ತಿ ಮಾಡಿದರೆ, ಇಟಿಎ ಅನ್ನು 3 ದಿನಗಳಲ್ಲಿ ನಿಮಗೆ ಇಮೇಲ್ ಮಾಡಲಾಗುತ್ತದೆ.
ನಾನು ಶ್ರೀಲಂಕಾಗಾಗಿ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸಬೇಕೇ?
ಶ್ರೀಲಂಕಾದ ಮೆಡಿಕಲ್ ಎಕ್ಸ್‌ಪೆನ್ಸ್‌ಗಳು ಸಹ ಹೆಚ್ಚು ಕಡಿಮೆ ಭಾರತವನ್ನೇ ಹೋಲುತ್ತವೆ. ಆದರೂ ವಿದೇಶಕ್ಕೆ ಟ್ರಾವೆಲ್ ಮಾಡುವಾಗ ಯಾವಾಗಲೂ ರಕ್ಷಣೆ ಪಡೆಯುವುದು ಬುದ್ಧಿವಂತರ ಲಕ್ಷಣ. ಅಲ್ಲವೇ? ಎಲ್ಲದಕ್ಕೂ ಹೆಚ್ಚಾಗಿ, ಟ್ರಾವೆಲ್ ಇನ್ಶೂರೆನ್ಸ್ ಕೇವಲ ಮೆಡಿಕಲ್ ಎಮರ್ಜೆನ್ಸಿಗಳನ್ನು ಮೀರಿದ ಸಂದರ್ಭಗಳನ್ನು ಕವರ್ ಮಾಡುತ್ತದೆ. ಅವುಗಳಲ್ಲಿ ಕೆಲವು ಸಂದರ್ಭಗಳನ್ನು ಹೆಸರಿಸುವುದಾದರೆ ಫ್ಲೈಟ್ ಡಿಲೇಗಳು, ಚೆಕ್-ಇನ್ ಲಗೇಜ್‌ನಲ್ಲಿ ಡಿಲೇ, ಹಣದ ನಷ್ಟ, ಪಾಸ್‌ಪೋರ್ಟ್ ನಷ್ಟ, ಅಡ್ವೆಂಚರ್ ಸ್ಪೋರ್ಟ್ಸ್‌ಗಳು, ಕಳ್ಳತನ, ಪರ್ಸನಲ್ ಲಯಬಿಲಿಟಿ ಬಾಂಡ್‌ಗಳು ಇತ್ಯಾದಿ.
ಶ್ರೀಲಂಕಾಗಾಗಿ ಟ್ರಾವೆಲ್ ಇನ್ಶೂರೆನ್ಸ್ ಈ ಕೆಳಗಿನ ಎಲ್ಲಾ ಸಂದರ್ಭಗಳಲ್ಲಿ ನಿಮಗೆ ರಕ್ಷಣೆ ನೀಡುತ್ತದೆ:
ಭಾರತೀಯರಿಗಾಗಿ ಶ್ರೀಲಂಕಾ ವೀಸಾ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು
ಶ್ರೀಲಂಕಾ ದೇಶವು ಭಾರತೀಯರಿಗಾಗಿ ವೀಸಾ ಆನ್ ಅರೈವಲ್ ಅನ್ನು ನೀಡುತ್ತದೆಯೇ?
ಹೌದು, ವೀಸಾ ಆನ್ ಅರೈವಲ್‌ಗಳು ಲಭ್ಯವಿವೆ. ನೀವು ಟ್ರಿಪ್‌ನ ವಿವರಗಳನ್ನು ಮುಂಚಿತವಾಗಿಯೇ ನೀಡಬೇಕಾಗುತ್ತದೆ. ಅಲ್ಲದೆ, ನಿಮ್ಮ ಡಿಪಾರ್ಚರ್‌ನ ಎಕ್ಸ್‌ಪೆಕ್ಟೆಡ್ ದಿನಾಂಕದ ನಂತರ ಕನಿಷ್ಠ 3 ತಿಂಗಳವರೆಗೆ ನಿಮ್ಮ ಪಾಸ್‌ಪೋರ್ಟ್ ವ್ಯಾಲಿಡ್ ಆಗಿರಬೇಕು.