ಮೋಟಾರ್
ಹೆಲ್ತ್
ಮೋಟಾರ್
ಹೆಲ್ತ್
More Products
ಮೋಟಾರ್
ಹೆಲ್ತ್
ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
Select Number of Travellers
24x7
Missed Call Facility
Affordable
Premium
1-Day Adventure
Activities Covered
Terms and conditions apply*
ಎದ್ದ ತಕ್ಷಣ ಸುಂದರವಾದ ನೀಲಿ ಕಡಲತೀರಗಳನ್ನು ನೋಡಬೇಕು ಮತ್ತು ಒಂದು ಸುಂದರವಾದ ದ್ವೀಪದ ಬಿಳಿ ಮರಳಿನಲ್ಲಿ ನೆನೆಯಬೇಕು ಎಂದು ಯಾವಾಗಲಾದರೂ ಅನಿಸಿದೆಯೇ? ನಿಮ್ಮ ದೈನಂದಿನ ಜೀವನವು ಗೊಂದಲಗಳಿಂದ ಕೂಡಿದ್ದು, ಹೊಳೆಯುವ ಸ್ಪಷ್ಟ ನೀರಿನ ನಡುವೆ ಸ್ವಲ್ಪ ಶಾಂತಿಯನ್ನು ಕಂಡುಕೊಳ್ಳಲು ನೀವು ಬಯಸಿದರೆ, ಮಾಲ್ಡೀವ್ಸ್ ನಿಮಗೆ ಹೇಳಿ ಮಾಡಿಸಿದಂತಿದೆ.
ನೈಸರ್ಗಿಕ ಪರಿಸರ ಮತ್ತು ಶುದ್ಧ ಗಾಳಿಯ ಹೊರತಾಗಿ, ಇದು ಸಾಹಸ ಪ್ರಿಯರಿಗೆ ಆಕರ್ಷಕ ತಾಣವಾಗಿದೆ. ಸ್ನಾರ್ಕ್ಲಿಂಗ್, ಈಜು, ಜೆಟ್ ಸ್ಕೀಯಿಂಗ್, ಸ್ಕೂಬಾ ಡೈವಿಂಗ್ ಮತ್ತು ಫಿಶಿಂಗ್ ಒಬ್ಬರು ಆನಂದಿಸಬಹುದಾದ ಕೆಲವು ಅತ್ಯುತ್ತಮ ಚಟುವಟಿಕೆಗಳಾಗಿವೆ.
ಈ ಸಮ್ಮೋಹನಗೊಳಿಸುವ ದ್ವೀಪವು ಸೌಂದರ್ಯ, ಕ್ರೀಡೆ ಮತ್ತು ಸಾಹಸ ಮತ್ತು ಶಾಪಿಂಗ್ನಂತಹ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ. ಮಾಲ್ಡೀವ್ಸ್ ಎಲ್ಲರನ್ನೂ ಸಮಾನವಾಗಿ ಆಕರ್ಷಿಸುವ ಸುಮಾರು 1192 ಕೋರಲ್ ಐಲ್ಯಾಂಡ್ಸ್ ಅಥವಾ ದ್ವೀಪಗಳನ್ನು ಹೊಂದಿದೆ. ಇದು ಹನಿಮೂನ್ಗೆ ಸಹ ಸೂಕ್ತವಾದ ಸ್ಥಳವಾಗಿದೆ. ಕೇಳಲು ಆಕರ್ಷಕವಾಗಿದೆ, ಅಲ್ಲವೇ?
ಈ ದ್ವೀಪದ ಮನಸೆಳೆಯುವ ಮೋಡಿಯು ಪ್ರತಿಯೊಬ್ಬರನ್ನು ಕಣ್ಣು ಮಿಟುಕಿಸುವುದರೊಂದಿಗೆ ಅಲ್ಲಿಗೆ ತಲುಪಲು ಪ್ರಚೋದನೆಯನ್ನು ನೀಡುತ್ತದೆ. ಆದರೆ ನೀವು ನಿಮ್ಮ ಮುಂದಿನ ರಜೆಯನ್ನು ಮಾಲ್ಡೀವ್ಸ್ನಲ್ಲಿ ಕಳೆಯುವ ಬಗ್ಗೆ ಕನಸು ಕಾಣುವ ಅಥವಾ ಪ್ಲಾನ್ ಮಾಡುವ ಮೊದಲು, ನಿಮ್ಮ ವೀಸಾ ರಿಕ್ವೈರ್ಮೆಂಟ್ಸ್ ಅನ್ನು ಪರಿಶೀಲಿಸಬೇಕು.
ನೀವು ನಮ್ಮ ಹಾಲಿಡೇಗಾಗಿ ಮಾಲ್ಡೀವ್ಸ್ಗೆ ಭೇಟಿ ನೀಡಲು ಪ್ಲಾನ್ ಮಾಡುತ್ತಿದ್ದರೆ ನಿಮಗೆ ಪ್ರೀ- ಅರೈವಲ್ ವೀಸಾ ಅಗತ್ಯವಿಲ್ಲ. ನೀವು ಕೇವಲ ಎಲ್ಲಾ ವ್ಯಾಲಿಡ್ ಟ್ರಾವೆಲ್ ಡಾಕ್ಯುಮೆಂಟ್ಗಳನ್ನು ಹೊಂದಿರಬೇಕು. ಉದಾಹರಣೆಗೆ, ನಿಮ್ಮ ಪಾಸ್ಪೋರ್ಟ್ ಮಾಲ್ಡೀವ್ಸ್ಗೆ ಆಗಮನದ ದಿನಾಂಕಕ್ಕಿಂತ 6 ತಿಂಗಳವರೆಗೆ ವ್ಯಾಲಿಡ್ ಆಗಿರಬೇಕು.
ಮಾಲೆ ವಿಮಾನ ನಿಲ್ದಾಣದಲ್ಲಿ ಭಾರತೀಯರಿಗೆ ಟೂರಿಸ್ಟ್ ವೀಸಾ ಅನ್ನು ನೀಡಲಾಗುತ್ತದೆ ಮತ್ತು ಇದು 30 ದಿನಗಳ ಮಿತಿಯೊಂದಿಗೆ ಬರುತ್ತದೆ. ಈ ಸ್ಥಳದೊಂದಿಗೆ ಪ್ರೀತಿ ಉಂಟಾಗಿ, ಅದು ನಿಮ್ಮನ್ನು ಹೆಚ್ಚು ಕಾಲ ಇಲ್ಲೇ ಉಳಿಯುವಂತೆ ಮಾಡಬಹುದು. ಹಾಗಿದ್ದಲ್ಲಿ, ಆಯಾ ಅಧಿಕಾರಿಗಳಿಂದ ಅಪ್ರುವಲ್ ಪಡೆದ ನಂತರ ಇದನ್ನು 90 ದಿನಗಳವರೆಗೆ ವಿಸ್ತರಿಸಬಹುದು.
ಈ ವಿಸ್ತರಣೆಯ ಅವಕಾಶ ಭಾರತೀಯರಿಗೆ ಇಲ್ಲ ಎಂದು ನಿಮಗೆ ತಿಳಿದಿದೆಯೇ? ನಿಕಟ ಕಾರ್ಯತಾಂತ್ರಿಕ, ಮಿಲಿಟರಿ, ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳು ಇದಕ್ಕೆ ಕಾರಣಗಳಾಗಿವೆ. ಇದನ್ನು ಹೊರತುಪಡಿಸಿ, ಬ್ರೂನೇಯನ್ನರಿಗೆ 15 ದಿನಗಳವರೆಗೆ ಮಾತ್ರ ಅನುಮತಿಸಲಾಗಿದೆ. ಉತ್ತಮ ಭಾಗವೆಂದರೆ ವೀಸಾಕ್ಕೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.
ಪ್ರತಿಯೊಬ್ಬರಿಗೂ ಮತ್ತೊಂದು ದೇಶವನ್ನು ಪ್ರವೇಶಿಸಲು ವೀಸಾ ಅಗತ್ಯವಿದೆ ಆದರೆ ಅದೃಷ್ಟವಶಾತ್ ಮಾಲ್ಡೀವ್ಸ್ನಂತಹ ಕೆಲವು ದೇಶಗಳು ವೀಸಾ ಆನ್ ಅರೈವಲ್ ಅನ್ನು ಒದಗಿಸುತ್ತವೆ. ಹಾಗೂ ಈ ಸೌಲಭ್ಯವು ಸಂಪೂರ್ಣವಾಗಿ ಉಚಿತವಾಗಿದೆ.
ಮಾಲ್ಡೀವ್ಸ್ ಪ್ರತಿ ವರ್ಷ ಟೂರಿಸ್ಟ್ ಗಳನ್ನು ಆಕರ್ಷಿಸುವ ಲಿಬರಲ್ ರಾಷ್ಟ್ರಗಳಲ್ಲಿ ಒಂದಾಗಿದೆ. ಆದರೆ ವಿವರಗಳಿಗಾಗಿ ವೀಸಾ ಕಚೇರಿಯಲ್ಲಿ ಪರಿಶೀಲಿಸುವುದು ಬುದ್ಧಿವಂತಿಕೆಯಾಗಿದೆ. ಕೆಲವೊಮ್ಮೆ, ನಿಯಮಗಳು ಬದಲಾಗಬಹುದು.
ಭಾರತೀಯ ನಾಗರಿಕರು ಸೇರಿದಂತೆ ಎಲ್ಲಾ ಪ್ರಜೆಗಳಿಗೆ, ಮಾಲ್ಡೀವ್ಸ್ ವೀಸಾ ಆನ್ ಅರೈವಲ್ ಒದಗಿಸುತ್ತದೆ ಹಾಗೂ ಅದು 30 ದಿನಗಳವರೆಗೆ ವ್ಯಾಲಿಡ್ ಆಗಿರುತ್ತದೆ. ಇದು ಸಂಪೂರ್ಣವಾಗಿ ಉಚಿತವಾಗಿದೆ ಮತ್ತು ಯಾವುದೇ ಗೌಪ್ಯ ಷರತ್ತುಗಳೊಂದಿಗೆ ಬರುವುದಿಲ್ಲ. ವೀಸಾಗೆ ಅರ್ಜಿ ಸಲ್ಲಿಸುವ ಯಾರೇ ಆಗಿದ್ದರೂ ಪಾಸ್ಪೋರ್ಟ್ನೊಂದಿಗೆ ವ್ಯಾಲಿಡ್ ಡಾಕ್ಯುಮೆಂಟ್ಗಳನ್ನು ಹೊಂದಿರಬೇಕು.
ಮಾಲ್ಡೀವ್ಸ್ ಒಂದು ತಿಂಗಳವರೆಗೆ ವ್ಯಾಲಿಡ್ ಆಗಿರುವ ವೀಸಾ ಆನ್ ಅರೈವಲ್ ಅನ್ನು ನೀಡುತ್ತದೆ ಎಂದು ನಮಗೆ ಈಗಾಗಲೇ ತಿಳಿದಿದೆ. ಒಬ್ಬರು ವೆಬ್ಸೈಟ್ಗೆ ಲಾಗ್ ಇನ್ ಆಗಬೇಕು ಮತ್ತು ನಿಯಮಿತ ಪ್ರಕ್ರಿಯೆ ಅಪ್ಡೇಟ್ ಗಾಗಿ ಪರಿಶೀಲಿಸಬೇಕು. ನೀವು ಮಾಲೆ ತಲುಪಿದ ನಂತರ ಆ ವೀಸಾ ಅನ್ನು ಪಡೆಯಲು, ನೀವು ಈ ಕೆಲವು ಡಾಕ್ಯುಮೆಂಟ್ಗಳನ್ನು ನೀಡಬೇಕು
ನಿಮ್ಮ ಪ್ರವಾಸವು ಕೊನೆಗೊಂಡಾಗ ಮಾಲ್ಡೀವ್ಸ್ನಿಂದ ಹೊರಡಲು ಕನ್ಫರ್ಮ್ ಆಗಿರುವ ಟಿಕೆಟ್ಗಳು.
ಮಾಲ್ಡೀವ್ಸ್ಗೆ ಆಗಮಿಸಿದ ದಿನಾಂಕದಿಂದ 6 ತಿಂಗಳ ನಂತದ ಮುಕ್ತಾಯ ಅವಧಿ ಹೊಂದಿರುವ ಒಂದು ವ್ಯಾಲಿಡ್ ಪಾಸ್ಪೋರ್ಟ್.
ಕನ್ಫರ್ಮ್ ಆಗಿರುವ ಹೋಟೆಲ್ ರಿಸರ್ವೇಶನ್ ಮತ್ತು ಅದನ್ನು ದೃಢೀಕರಿಸುವ ವೋಚರ್ಗಳು. ನೀವು ಎಮಿಗ್ರೇಶನ್ ಕೌಂಟರ್ನಲ್ಲಿ ಇವುಗಳನ್ನು ತೋರಿಸಬೇಕಾಗಬಹುದು.
ಎಮಿಗ್ರೇಶನ್ ಇಲಾಖೆಯು ನಿಮಗೆ 30 ದಿನಗಳಿಗಿಂತ ಕಡಿಮೆ ಕಾಲ ಉಳಿಯಲು ಅನುಮತಿಸುವ ಹಕ್ಕನ್ನು ಯಾವಾಗಲೂ ಕಾಯ್ದಿರಿಸುತ್ತದೆ. ನೀವು ವಾಸ್ತವ್ಯವನ್ನು ವಿಸ್ತರಿಸಲು ಬಯಸಿದರೆ, ನಿಮ್ಮ ವೀಸಾ ಅವಧಿ ಮುಗಿಯುವ 2 ದಿನಗಳ ಮೊದಲು ಲಿಖಿತ ಅಪ್ಲಿಕೇಶನ್ ಸಲ್ಲಿಸಬಹುದು. ಅಗತ್ಯಕ್ಕೆ ತಕ್ಕಂತೆ ಮುಂದಿನ 60 ದಿನಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಗೆ ನೀವು ಹೊಸ ವೀಸಾ ಅಪ್ರುವಲ್ ಅನ್ನು ಪಡೆಯಬಹುದು. ಇಲಾಖೆಯು ಅಪ್ಲಿಕೇಶನ್ ಅನ್ನು ತಿರಸ್ಕರಿಸಬಹುದು ಅಥವಾ ಅಪ್ರುವ್ ಮಾಡಬಹುದು ಅಥವಾ ವೀಸಾಕ್ಕಾಗಿ ವಿನಂತಿಸಬಹುದು.
ನೀವು ವೀಸಾ ಆನ್ ಅರೈವಲ್ ಪಡೆಯುತ್ತೀರಿ, ಆದ್ದರಿಂದ ಯಾವುದೇ ಪ್ರೊಸೆಸಿಂಗ್ ಸಮಯವಿಲ್ಲ. ಎಮಿಗ್ರೇಶನ್ ಇಲಾಖೆಯು ನಿಮ್ಮ ವಾಸ್ತವ್ಯದ ವಿವರಗಳನ್ನು ಪರಿಶೀಲಿಸುತ್ತದೆ ಅಷ್ಟೇ. ಅವರು ಎಲ್ಲವೂ ಸರಿಯಾಗಿರುವುದನ್ನು ಕಂಡರೆ, ಮಾಲ್ಡೀವ್ಸ್ನಲ್ಲಿ ನಿಮ್ಮ ಜೀವನದ ಅತ್ಯದ್ಭುತ ಅನುಭವವನ್ನು ಪಡೆಯಲು ನಿಮಗೆ ಅನುಮತಿಸಲಾಗುತ್ತದೆ :)
ಟ್ರಾವೆಲ್ ಇನ್ಶೂರೆನ್ಸ್ ಅನ್ನು ಕೆಲವು ಹೊಡೆತ ಮತ್ತು ಏರುಪೇರುಗಳ ಸಮಯದಲ್ಲಿ ನಿಮಗೆ ಸಹಾಯಕಾರಿಯಾಗುವಂತೆ ವಿನ್ಯಾಸಗೊಳಿಸಲಾಗಿದೆ. ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುವುದು ನಿಮ್ಮ ದುರದೃಷ್ಟವನ್ನು ತಪ್ಪಿಸುವುದಿಲ್ಲ ಆದರೆ ಖಂಡಿತವಾಗಿಯೂ ನಿಮಗೆ ಇದರಿಂದ ಉತ್ತಮ ಸಹಾಯವಾಗುತ್ತದೆ. ಮಾಲ್ಡೀವ್ಸ್ ಒಂದು ಕೋರಲ್ ಐಲ್ಯಾಂಡ್ ಆಗಿದ್ದು, ಜನರು ಅಲ್ಲಿಗೆ ಸಂಪೂರ್ಣ ವಿಶ್ರಾಂತಿ ಮತ್ತು ವಿನೋದಕ್ಕಾಗಿ ಹೋಗುತ್ತಾರೆ. ಅಂತಹ ಸಮಯದಲ್ಲಿ ನೀವು ನಿಮ್ಮ ವಾಲೆಟ್ ಅನ್ನು ಅಥವಾ ನಿಮ್ಮ ಪಾಸ್ಪೋರ್ಟ್ ಅನ್ನು ಕಳೆದುಕೊಳ್ಳುತ್ತೀರಿ ಎಂದು ಕಲ್ಪಿಸಿಕೊಳ್ಳಿ.
ವಿಶೇಷವಾಗಿ ನೀವು ಆನಂದಿಸುವ ಮೂಡ್ ನಲ್ಲಿರುವಾಗ ಇದು ನಿಮಗೆ ಹೊಡೆತ ನೀಡಬಹುದು. ಆ ಗೊಂದಲ ಮತ್ತು ಚಿಂತೆಯ ಕಲ್ಪನೆ ಮಾತ್ರವೇ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುವ ನಿಮ್ಮ ನಿರ್ಧಾರಕ್ಕೆ ಸಾಕಷ್ಟು ಪುಷ್ಟಿ ನೀಡುವುದು ಎಂದು ನನಗೆ ಖಾತ್ರಿಯಿದೆ. ಟ್ರಾವೆಲ್ ಪಾಲಿಸಿಯನ್ನು ಖರೀದಿಸುವುದು ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಬಯಸುವಿರಾ? ಕೆಲವು ಪ್ರಕರಣಗಳನ್ನು ಪರಿಗಣಿಸಿ ಇಡೀ ಚಿತ್ರವನ್ನು ನೋಡೋಣ.
ಮಾಲ್ಡೀವ್ಸ್ ಜಲ ಕ್ರೀಡೆಗಳಿಗೆ ಹೆಸರುವಾಸಿಯಾಗಿದೆ ಮತ್ತು ಈ ಐಲ್ಯಾಂಡ್ ಗೆ ಭೇಟಿ ನೀಡುವ ಎಲ್ಲರೂ ಅಂಡರ್ ವಾಟರ್ ಜೀವನವನ್ನು ಅನ್ವೇಷಿಸುತ್ತಾರೆ. ಚಟುವಟಿಕೆಯ ಸಮಯದಲ್ಲಿ, ನೀವು ಗಾಯಗೊಳ್ಳುವ ಮತ್ತು ನಿಮಗೆ ವೈದ್ಯಕೀಯ ಸಹಾಯದ ಅಗತ್ಯವಿರುವ ಸಂದರ್ಭಗಳಿಗೆ ಅವಕಾಶವಿರುತ್ತದೆ. ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ನಿಮಗಾಗಿ ಈ ವೆಚ್ಚಗಳನ್ನು ಕವರ್ ಮಾಡುತ್ತದೆ.
ನೀವು ಏರ್ಪೋರ್ಟ್ ನಲ್ಲಿ ಇಳಿದ ತಕ್ಷಣ ಬ್ಯಾಗೇಜ್ ಕೌಂಟರ್ನಿಂದ ಬೇರೊಬ್ಬರು ನಿಮ್ಮ ಬ್ಯಾಗ್ ಅನ್ನು ತಪ್ಪಾಗಿ ತೆಗೆದುಕೊಂಡಿರುವುದು ನಿಮಗೆ ತಿಳಿಯುತ್ತದೆ ಎಂದು ಊಹಿಸಿಕೊಳ್ಳಿ. ನಿಮ್ಮ ಎಲ್ಲಾ ಬಟ್ಟೆಗಳು ಮತ್ತು ಇತರೆ ವಸ್ತುಗಳು ಅದರಲ್ಲಿದ್ದವು. ಅದೃಷ್ಟವಶಾತ್, ನೀವು ಹಣವನ್ನು ಹೊಂದಿದ್ದೀರಿ ಆದರೆ ಕದ್ದ ಅಥವಾ ಕಳೆದುಹೋದ ಬ್ಯಾಗ್ ಗಾಗಿ, ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ನಿಮಗೆ ಪಾವತಿಸುತ್ತದೆ.
ನಿಮ್ಮ ಟ್ರಾವೆಲ್ ಪಾಲಿಸಿಯು ಆಕಸ್ಮಿಕ ವೈದ್ಯಕೀಯ ತುರ್ತುಸ್ಥಿತಿಗಳು ಯಾವುದಾದರೂ ಸಂಭವಿಸಿದಲ್ಲಿ ನಿಮಗೆ ಕವರ್ ನೀಡುತ್ತದೆ. ಆದ್ದರಿಂದ, ಇದರ ಹಿಂದನ ಉದ್ದೆಶವೇನೆಂದರೆ ಅಸಡ್ಡೆ ಮಾಡಬೇಡಿ ಆದರೆ ಯಾವುದೇ ವೈದ್ಯಕೀಯ ಸಹಾಯಕ್ಕಾಗಿ ಪ್ಯಾನಿಕ್ ಸಹ ಮಾಡಬೇಡಿ.
ಸಂಬಂಧಿಯ ಮರಣದಂತಹ ಅಥವಾ ಬೇರೆ ಯಾವುದೇ ಕಾರಣಕ್ಕಾಗಿ, ನಿಮ್ಮ ಪ್ರಯಾಣವನ್ನು ಪ್ರಾರಂಭಿಸಲು ನಿಮ್ಮಿಂದ ಸಾಧ್ಯವಾಗದಿದ್ದರೆ ಮತ್ತು ನಿಮಗೆ ತಕ್ಷಣದ ಟಿಕೆಟ್ ಕ್ಯಾನ್ಸಲೇಶನ್ ಬೇಕಿದ್ದರೆ, ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ನಿಮಗಾಗಿ ಅದನ್ನು ಕವರ್ ಮಾಡುತ್ತದೆ.
ಕೆಲವು ಚಟುವಟಿಕೆಯ ಸಮಯದಲ್ಲಿ ನೀವು ಗಾಯಗೊಂಡಿದ್ದು ಈಗ ನೋವು ಅಥವಾ ಮುರಿತದ ಕಾರಣದಿಂದಾಗಿ ನೀವು ಚಲಿಸಲು ಸಾಧ್ಯವಿಲ್ಲ ಎಂದು ಯೋಚಿಸಿ. ನೀವು ಮಾಲ್ಡೀವ್ಸ್ನಲ್ಲಿ ಚಿಕಿತ್ಸೆಯನ್ನು ಪಡೆಯಲು ಬಯಸದೆ ಭಾರತಕ್ಕೆ ಮರಳಲು ಬಯಸುತ್ತೀರಿ. ಈ ತುರ್ತು ವೈದ್ಯಕೀಯ ಸ್ಥಳಾಂತರಿಸುವಿಕೆಗಾಗಿ ಟ್ರಾವೆಲ್ ಪಾಲಿಸಿಯು ನಿಮ್ಮನ್ನು ಕವರ್ ಮಾಡುತ್ತದೆ.
ನೀವು ಯಾವುದೇ ಥರ್ಡ್-ಪಾರ್ಟಿ ಆಸ್ತಿಯನ್ನು ಹಾನಿಗೊಳಿಸಿದರೆ, ಮಾಲ್ಡೀವ್ಸ್ ಟ್ರಾವೆಲ್ ಇನ್ಶೂರೆನ್ಸ್ ಆ ಲಯಬಿಲಿಟಿಗಾಗಿ ನಿಮ್ಮನ್ನು ಕವರ್ ಮಾಡುತ್ತದೆ.
ಇವುಗಳ ಬಗ್ಗೆ ಇನ್ನಷ್ಟು ತಿಳಿಯಿರಿ:
ಇಲ್ಲ, ಮಾಲ್ಡೀವ್ಸ್ಗೆ ಪ್ರಯಾಣಿಸುವಾಗ ಭಾರತೀಯ ಪಾಸ್ಪೋರ್ಟ್ ಹೊಂದಿರುವವರು ವೀಸಾವನ್ನು ಹೊಂದುವ ಅಗತ್ಯವಿಲ್ಲ. ನೀವು ಆ ದೇಶವನ್ನು ತಲುಪಿದ ನಂತರ ಅದನ್ನು ನೀಡಲಾಗುವುದು.
ಇಲ್ಲ, ಮಾಲ್ಡೀವ್ಸ್ಗೆ ಪ್ರಯಾಣಿಸುವಾಗ ಭಾರತೀಯ ಪಾಸ್ಪೋರ್ಟ್ ಹೊಂದಿರುವವರು ವೀಸಾವನ್ನು ಹೊಂದುವ ಅಗತ್ಯವಿಲ್ಲ. ನೀವು ಆ ದೇಶವನ್ನು ತಲುಪಿದ ನಂತರ ಅದನ್ನು ನೀಡಲಾಗುವುದು.
ಭಾರತೀಯ ನಾಗರಿಕರಿಗೆ ವೀಸಾ ಆನ್ ಅರೈವಲ್ ನೀಡಲು ಮಾಲ್ಡೀವ್ಸ್ ಸರ್ಕಾರವು ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಆದಾಗ್ಯೂ, ನಿಮ್ಮ ವೀಸಾವನ್ನು ವಿಸ್ತರಿಸಲು, ನೀವು ರೂ 3,350 ಪೇಮೆಂಟ್ ಮಾಡಬೇಕಾಗುತ್ತದೆ.
ಭಾರತೀಯ ನಾಗರಿಕರಿಗೆ ವೀಸಾ ಆನ್ ಅರೈವಲ್ ನೀಡಲು ಮಾಲ್ಡೀವ್ಸ್ ಸರ್ಕಾರವು ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಆದಾಗ್ಯೂ, ನಿಮ್ಮ ವೀಸಾವನ್ನು ವಿಸ್ತರಿಸಲು, ನೀವು ರೂ 3,350 ಪೇಮೆಂಟ್ ಮಾಡಬೇಕಾಗುತ್ತದೆ.
ಮುಂದಿನ ಆರು ತಿಂಗಳವರೆಗೆ ವ್ಯಾಲಿಡ್ ಆಗಿರುವ ಪಾಸ್ಪೋರ್ಟ್ ಜೊತೆಗೆ, ಮಾಲ್ಡೀವ್ಸ್ಗೆ ಪ್ರಯಾಣಿಸುವ ಭಾರತೀಯರು ರಿಟರ್ನ್ ಟಿಕೆಟ್, ಹೋಟೆಲ್ ಅಥವಾ ಟೂರಿಸ್ಟ್ ರೆಸಾರ್ಟ್ನಲ್ಲಿ ತಂಗಲು ಬೇಕಾದ ರಿಸರ್ವೇಶನ್ ಕನ್ಫರ್ಮೇಶನ್ ಅನ್ನು ಕಡ್ಡಾಯವಾಗಿ ಹೊಂದಿರಬೇಕು, ಜೊತೆಗೆ ಸಾಕಷ್ಟು ಹಣ, ಅಂದರೆ US$100 ಮತ್ತು ಪ್ರತಿ ದಿನಕ್ಕೆ $50.
ಮುಂದಿನ ಆರು ತಿಂಗಳವರೆಗೆ ವ್ಯಾಲಿಡ್ ಆಗಿರುವ ಪಾಸ್ಪೋರ್ಟ್ ಜೊತೆಗೆ, ಮಾಲ್ಡೀವ್ಸ್ಗೆ ಪ್ರಯಾಣಿಸುವ ಭಾರತೀಯರು ರಿಟರ್ನ್ ಟಿಕೆಟ್, ಹೋಟೆಲ್ ಅಥವಾ ಟೂರಿಸ್ಟ್ ರೆಸಾರ್ಟ್ನಲ್ಲಿ ತಂಗಲು ಬೇಕಾದ ರಿಸರ್ವೇಶನ್ ಕನ್ಫರ್ಮೇಶನ್ ಅನ್ನು ಕಡ್ಡಾಯವಾಗಿ ಹೊಂದಿರಬೇಕು, ಜೊತೆಗೆ ಸಾಕಷ್ಟು ಹಣ, ಅಂದರೆ US$100 ಮತ್ತು ಪ್ರತಿ ದಿನಕ್ಕೆ $50.
ಮಾಲ್ಡೀವ್ಸ್ಗೆ ಪ್ರಯಾಣಿಸುವ ಭಾರತೀಯರಿಗೆ ವೀಸಾ ಆನ್ ಅರೈವಲ್ ನೀಡುವ ಗರಿಷ್ಠ ಅವಧಿಯು 30 ದಿನಗಳು, ಹಾಗೂ 60 ದಿನಗಳವರೆಗೆ ವಿಸ್ತರಣೆಗೆ ಅವಕಾಶವಿದೆ.
ಮಾಲ್ಡೀವ್ಸ್ಗೆ ಪ್ರಯಾಣಿಸುವ ಭಾರತೀಯರಿಗೆ ವೀಸಾ ಆನ್ ಅರೈವಲ್ ನೀಡುವ ಗರಿಷ್ಠ ಅವಧಿಯು 30 ದಿನಗಳು, ಹಾಗೂ 60 ದಿನಗಳವರೆಗೆ ವಿಸ್ತರಣೆಗೆ ಅವಕಾಶವಿದೆ.
ಸಂಬಂಧಪಟ್ಟ ಅಧಿಕಾರಿಗಳಿಂದ ಭಾರತೀಯ ನಾಗರಿಕರ ವೀಸಾ ಅಪ್ರುವಲ್ ಅವನು/ಅವಳು ಮಾಲ್ಡೀವ್ಸ್ ತಲುಪಿದ ನಂತರ ಯಾವುದೇ ನಿರಾಕರಣೆಯ ಅಪಾಯವನ್ನು ಆಹ್ವಾನಿಸುವುದಿಲ್ಲ. ಆದಾಗ್ಯೂ, ಅಲ್ಲಿ ಚಿಂತೆರಹಿತ ಸಮಯವನ್ನು ಆನಂದಿಸಲು ಅಗತ್ಯವಿರುವ ಎಲ್ಲಾ ಡಾಕ್ಯುಮೆಂಟ್ಗಳನ್ನು ನೀವು ಒಯ್ಯಬೇಕು.
ಸಂಬಂಧಪಟ್ಟ ಅಧಿಕಾರಿಗಳಿಂದ ಭಾರತೀಯ ನಾಗರಿಕರ ವೀಸಾ ಅಪ್ರುವಲ್ ಅವನು/ಅವಳು ಮಾಲ್ಡೀವ್ಸ್ ತಲುಪಿದ ನಂತರ ಯಾವುದೇ ನಿರಾಕರಣೆಯ ಅಪಾಯವನ್ನು ಆಹ್ವಾನಿಸುವುದಿಲ್ಲ. ಆದಾಗ್ಯೂ, ಅಲ್ಲಿ ಚಿಂತೆರಹಿತ ಸಮಯವನ್ನು ಆನಂದಿಸಲು ಅಗತ್ಯವಿರುವ ಎಲ್ಲಾ ಡಾಕ್ಯುಮೆಂಟ್ಗಳನ್ನು ನೀವು ಒಯ್ಯಬೇಕು.
Please try one more time!
ಹಕ್ಕು ನಿರಾಕರಣೆ -
ನಿಮ್ಮ ಪಾಲಿಸಿಯು ನಿಮ್ಮ ಪಾಲಿಸಿ ವೇಳಾಪಟ್ಟಿ ಮತ್ತು ನೀತಿ ಪದಗಳಲ್ಲಿ ನಮೂದಿಸಲಾದ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ. ದಯವಿಟ್ಟು ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ.
ದೇಶಗಳು, ವೀಸಾ ಶುಲ್ಕಗಳು ಮತ್ತು ಇತರರ ಬಗ್ಗೆ ಇಲ್ಲಿ ಉಲ್ಲೇಖಿಸಲಾದ ಮಾಹಿತಿಯನ್ನು ವಿವಿಧ ಮೂಲಗಳಿಂದ ತೆಗೆದುಕೊಳ್ಳಲಾಗಿದೆ. ಅಂಕಿ ವಿಮೆ ಇಲ್ಲಿ ಯಾವುದನ್ನೂ ಪ್ರಚಾರ ಮಾಡುತ್ತಿಲ್ಲ ಅಥವಾ ಶಿಫಾರಸು ಮಾಡುತ್ತಿಲ್ಲ. ನಿಮ್ಮ ಟಿಕೆಟ್ಗಳನ್ನು ಕಾಯ್ದಿರಿಸುವ ಮೊದಲು, ವೀಸಾಕ್ಕೆ ಅರ್ಜಿ ಸಲ್ಲಿಸುವ ಮೊದಲು, ಪ್ರಯಾಣ ನೀತಿಯನ್ನು ಖರೀದಿಸುವ ಅಥವಾ ಯಾವುದೇ ಇತರ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ದಯವಿಟ್ಟು ಅದನ್ನು ಪರಿಶೀಲಿಸಿ.
Get 10+ Exclusive Features only on Digit App
closeAuthor: Team Digit
Last updated: 25-10-2024
CIN: U66010PN2016PLC167410, IRDAI Reg. No. 158.
ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ (ಹಿಂದೆ ಒಬೆನ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು) - ರಿಜಿಸ್ಟರ್ಡ್ ಆಫೀಸ್ ವಿಳಾಸ - 1 ರಿಂದ 6ನೇ ಮಹಡಿಗಳು, ಅನಂತ ಒನ್ (ಎಆರ್ ಒನ್), ಪ್ರೈಡ್ ಹೋಟೆಲ್ ಲೇನ್, ನರ್ವೀರ್ ತಾನಾಜಿ ವಾಡಿ, ಸಿಟಿ ಸರ್ವೆ ನಂ.1579, ಶಿವಾಜಿ ನಗರ, ಪುಣೆ -411005, ಮಹಾರಾಷ್ಟ್ರ | ಕಾರ್ಪೊರೇಟ್ ಆಫೀಸ್ ವಿಳಾಸ - ಅಟ್ಲಾಂಟಿಸ್, 95, 4ನೇ B ಕ್ರಾಸ್ ರೋಡ್, ಕೋರಮಂಗಲ ಇಂಡಸ್ಟ್ರಿಯಲ್ ಲೇಔಟ್, 5ನೇ ಬ್ಲಾಕ್, ಬೆಂಗಳೂರು-560095, ಕರ್ನಾಟಕ | ಮೇಲೆ ಡಿಸ್ಪ್ಲೇ ಮಾಡಲಾದ ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಎಂಬ ಟ್ರೇಡ್ ಲೋಗೋ, ಗೋ ಡಿಜಿಟ್ ಇನ್ಫೋವರ್ಕ್ಸ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಗೆ ಸೇರಿದೆ ಮತ್ತು ಇದನ್ನು ಲೈಸೆನ್ಸ್ನ ಅಡಿಯಲ್ಲಿ ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಒದಗಿಸಿದೆ ಮತ್ತು ಬಳಸುತ್ತದೆ.