ಕೆನಡಾದಲ್ಲಿ, ಎತ್ತರದ ಪರ್ವತ ಶ್ರೇಣಿಗಳು, ಮರುಭೂಮಿಗಳು, ಅರಣ್ಯ ಕಣಿವೆಗಳು, ಬೆರಗುಗೊಳಿಸುವ ಸರೋವರಗಳು ಇವೆ. ನೀವು ಬಂಡೆಗಳ ಮೂಲಕ ಹೈಕಿಂಗ್ ಮಾಡಲು, ಅಥವಾ ಕಡಲ ಇತಿಹಾಸದ ಬಗ್ಗೆ ಕಲಿಯಲು ಅಥವಾ ಟೊರೊಂಟೊ, ಮಾಂಟ್ರಿಯಲ್ ಮತ್ತು ವ್ಯಾಂಕೋವರ್ ನಗರಗಳನ್ನು ಅನ್ವೇಷಿಸಲು ನಿಮ್ಮ ಸಮಯವನ್ನು ಕಳೆಯಲು ಬಯಸುವರಾಗಿದ್ದರೂ, ಕೆನಡಾ ಪ್ರತಿಯೊಬ್ಬ ಪ್ರಯಾಣಿಕರು ತಮ್ಮ ಇಚ್ಛೆಯಂತೆ ಏನನ್ನಾದರೂ ಕಂಡುಕೊಳ್ಳುವ ದೇಶವಾಗಿದೆ. ಆದರೆ ಇದೆಲ್ಲವನ್ನೂ ಅನುಭವಿಸಲು, ನಿಮಗೆ ಟೂರಿಸ್ಟ್ ವೀಸಾ ಬೇಕಾಗುತ್ತದೆ! ಇದರ ಬಗ್ಗೆ ಎಲ್ಲಾ ಓದಿ ಹಾಗೂ ಪ್ಲಾನಿಂಗ್ ಆರಂಭಿಸಿ
ಹೌದು, ಭಾರತೀಯರು ಕೆನಡಾಗೆ ಭೇಟಿ ನೀಡಲು ವೀಸಾ ಹೊಂದಿರುವುದು ಕಡ್ಡಾಯವಾಗಿದೆ.
ಇಲ್ಲ, ಪ್ರಸ್ತುತ ನಿಯಮಗಳ ಪ್ರಕಾರ ಭಾರತೀಯರು ಕೆನಡಾಗೆ ವೀಸಾ ಆನ್ ಅರೈವಲ್ ಸೌಲಭ್ಯವನ್ನು ಹೊಂದಿಲ್ಲ. ಆದ್ದರಿಂದ, ಕೆನಡಾಗೆ ಆಗಮಿಸುವ ಮೊದಲು ಭಾರತೀಯರು ಒಂದು ವ್ಯಾಲಿಡ್ ವೀಸಾವನ್ನು ಹೊಂದಿರುವುದು ಕಡ್ಡಾಯವಾಗಿದೆ.
ಕೆನಡಾ ಟೂರಿಸ್ಟ್ ವೀಸಾಗೆ ಅಗತ್ಯವಿರುವ ಡಾಕ್ಯುಮೆಂಟ್ ಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ:
ಕೆನಡಾಗೆ ಆಗಮಿಸಿದ ದಿನಾಂಕದಿಂದ 6 ತಿಂಗಳ ವ್ಯಾಲಿಡಿಟಿ ಹೊಂದಿರುವ ಒರಿಜಿನಲ್ ಪಾಸ್ಪೋರ್ಟ್ಗಳು + ಯಾವುದಾದರೂ ಇದ್ದರೆ ಹಳೆಯ ಪಾಸ್ಪೋರ್ಟ್ಗಳು.
ವೀಸಾ ಅಪ್ಲಿಕೇಶನ್ ಫಾರ್ಮ್
3 ಬಣ್ಣದ ಛಾಯಾಚಿತ್ರ: 35ಮಿಮೀx 45ಮಿಮೀ, ಬಿಳಿ ಹಿನ್ನೆಲೆ, ಮ್ಯಾಟ್ ಫಿನಿಶ್, 80% ಮುಖದ ಗಾತ್ರ.
ಅಪ್ಲಿಕೆಂಟ್ ನ, ಟ್ರಾವೆಲ್ ವಿವರಗಳು ಮತ್ತು ನಿಮ್ಮೊಂದಿಗೆ ಪ್ರಯಾಣಿಸುವ ಇತರ ಸದಸ್ಯರ ವಿವರಗಳನ್ನು ನಮೂದಿಸುವ ಕವರಿಂಗ್ ಲೆಟರ್.
ಹೋಟೆಲ್ ಬುಕಿಂಗ್ ಗಳು.
ದಿನದಿಂದ ದಿನದ ಟೂರ್ ವಿವರ.
ವಿಮಾನ ಟಿಕೆಟ್ಗಳು
ಉದ್ಯೋಗದಾತ/ಶಾಲೆ/ಕಾಲೇಜಿನಿಂದ ಒರಿಜಿನಲ್ ರಜೆ ಪತ್ರ.
ಉದ್ಯೋಗದಲ್ಲಿದ್ದರೆ ಕಳೆದ 6 ತಿಂಗಳ ಸ್ಯಾಲರಿ ಸ್ಲಿಪ್ ಗಳು.
ಸ್ವಯಂ ಉದ್ಯೋಗಿಯಾಗಿದ್ದರೆ - ಶಾಪ್ ಕಾಯ್ದೆ / ಎಮ್ಒಎ / ಡೀಡ್.
ಕಳೆದ 6 ತಿಂಗಳುಗಳವರೆಗೆ ಆರೋಗ್ಯಕರ ಮತ್ತು ಸಾಕಷ್ಟು ಬ್ಯಾಲೆನ್ಸ್ನೊಂದಿಗೆ ಅಪ್ಡೇಟ್ ಮಾಡಲಾದ ಒರಿಜಿನಲ್ ಪರ್ಸನಲ್ ಬ್ಯಾಂಕ್ ಸ್ಟೇಟ್ಮೆಂಟ್ಗಳು.
ಇನ್ಕಮ್ ಟ್ಯಾಕ್ಸ್ ರಿಟರ್ನ್ ಗಳು/ಕಳೆದ 3 ವರ್ಷಗಳ ಫಾರ್ಮ್ 16
ವಿದ್ಯಾರ್ಥಿಯಾಗಿದ್ದರೆ - ಶಾಲಾ/ಕಾಲೇಜು ಐಡಿ ಕಾರ್ಡ್ ನ ಪ್ರತಿ.
ರಿಟೈರ್ ಆಗಿದ್ದರೆ - ರಿಟೈರ್ಮೆಂಟ್ ಪುರಾವೆ/ಪೆನ್ಷನ್ ಪಾಸ್ಬುಕ್ ಅಥವಾ ಸ್ಲಿಪ್ಗಳು.
ಎಫ್.ಡಿ, ಎನ್.ಎಸ್.ಸಿ, ಪಿ.ಪಿ.ಎಫ್, ಷೇರುಗಳು, ಆಸ್ತಿ ಪತ್ರಗಳು ಮುಂತಾದ ಇತರ ಹಣಕಾಸಿನ ಡಾಕ್ಯುಮೆಂಟ್ಗಳು.
ವೀಸಾ ಟೈಪ್ |
ಫಿ |
ಸಂದರ್ಶಕ ವೀಸಾ (ಸೂಪರ್ ವೀಸಾ ಸೇರಿದಂತೆ) - ಪ್ರತಿ ವ್ಯಕ್ತಿಗೆ |
78.18 ಯು ಯಸ್ ಡಿ |
ವಿಸಿಟರ್ ವೀಸಾ - ಕುಟುಂಬ (5 ಅಥವಾ ಹೆಚ್ಚು) |
366.48 ಯು ಯಸ್ ಡಿ |
ವಿಸಿಟರ್ ಆಗಿ ನಿಮ್ಮ ವಾಸ್ತವ್ಯವನ್ನು ವಿಸ್ತರಿಸಲು - ಪ್ರತಿ ವ್ಯಕ್ತಿಗೆ |
78.18 ಯು ಯಸ್ ಡಿ |
ವಿಸಿಟರ್ ಆಗಿ ನಿಮ್ಮ ಸ್ಥಿತಿಯನ್ನು ಮರುಸ್ಥಾಪಿಸಲು |
146.59 ಯು ಯಸ್ ಡಿ |
ಹಂತ 1 - ಕೆನಡಾಗೆ ಆನ್ಲೈನ್ನಲ್ಲಿ ಟೂರಿಸ್ಟ್ ವೀಸಾಗೆ ಅಪ್ಲಿಕೇಶನ್ ಸಲ್ಲಿಸುವುದು ಸುಲಭ ಮತ್ತು ಉತ್ತಮವಾಗಿದೆ, ನೀವು ಈ ಎಲ್ಲಾ ಪ್ರಯೋಜನಗಳನ್ನು ಪಡೆಯುತ್ತೀರಿ:
ಕೊರಿಯರ್ ಶುಲ್ಕಗಳು ಅಥವಾ ಮೇಲ್ ಡೆಲಿವರಿ ಸಮಯವಿಲ್ಲ- ನಿಮ್ಮ ಅಪ್ಲಿಕೇಶನ್ ಅನ್ನು ನೀವು ತಕ್ಷಣ ಸಲ್ಲಿಸಬಹುದು.
ಆನ್ಲೈನ್ ಅಪ್ಲಿಕೇಶನ್ಗಳನ್ನು ಹೆಚ್ಚು ವೇಗವಾಗಿ ಪ್ರಕ್ರಿಯೆಗೊಳಿಸಲಾಗುತ್ತದೆ.
ಪ್ರೊಸೆಸಿಂಗ್ ಡಿಲೇಗಳನ್ನು ತಪ್ಪಿಸಿ
ಅಪೂರ್ಣ ಅಪ್ಲಿಕೇಶನ್ಗಳನ್ನು ನಿಮಗೆ ಹಿಂತಿರುಗಿಸಲಾಗುತ್ತದೆ.
ಆನ್ಲೈನ್ನಲ್ಲಿ ಅಪ್ಲಿಕೇಶನ್ ಸಲ್ಲಿಸುವುದರಿಂದ ನೀವು ಅದನ್ನು ಸಲ್ಲಿಸುವ ಮೊದಲು ನಿಮ್ಮ ಅಪ್ಲಿಕೇಶನ್ ಪೂರ್ಣಗೊಂಡಿದೆ ಎಂದು ಖಚಿತಪಡಿಸಿಕೊಳ್ಳಲು ಸಹಾಯವಾಗುತ್ತದೆ.
ಹೆಚ್ಚಿನ ಡಾಕ್ಯುಮೆಂಟ್ ಗಳ ಅಗತ್ಯವಿದ್ದರೆ, ನೀವು ಅವುಗಳನ್ನು ಆನ್ಲೈನ್ನಲ್ಲಿ ತ್ವರಿತವಾಗಿ ಸಲ್ಲಿಸಬಹುದು.
ನಿಮ್ಮ ಪಾಸ್ಪೋರ್ಟ್ ಅನ್ನು ನಿಮ್ಮಿಂದ ಕೇಳಲಾಗುವವರೆಗೆ ನೀವು ಅದನ್ನು ಸಲ್ಲಿಸುವ ಅಗತ್ಯವಿಲ್ಲ.
ನಿಮ್ಮ ಆನ್ಲೈನ್ ಅಕೌಂಟ್ ನಲ್ಲಿ ನೇರವಾಗಿ ನಿಮ್ಮ ಅಪ್ಲಿಕೇಶನ್ನ ಸ್ಥಿತಿಯ ಕುರಿತು ನೀವು ಅಪ್ಡೇಟ್ ಗಳನ್ನು ಪಡೆಯಬಹುದು.
ಹಂತ 2 - ನೀವು ಆನ್ಲೈನ್ನಲ್ಲಿ ವೀಸಾಕ್ಕಾಗಿ ಅಪ್ಲಿಕೇಶನ್ ಸಲ್ಲಿಸಿದ ನಂತರ, ಮುಂದಿನ ಹಂತವು ನಿಮ್ಮ ಫಿಂಗರ್ಪ್ರಿಂಟ್ಗಳು ಮತ್ತು ಫೋಟೋವನ್ನು ನೀಡುವುದಾಗಿದೆ.
ಹೆಚ್ಚಿನ ಸಂದರ್ಭಗಳಲ್ಲಿ, ನೀವು ಬಯೋಮೆಟ್ರಿಕ್ಸ್ ನೀಡಬೇಕಾಗುತ್ತದೆ. ನೀವು ಬಯೋಮೆಟ್ರಿಕ್ಸ್ ಶುಲ್ಕವನ್ನು ಪಾವತಿಸಿದ ನಂತರ ಮತ್ತು ನಿಮ್ಮ ಅಪ್ಲಿಕೇಶನ್ ಅನ್ನು ಸಲ್ಲಿಸಿದ ನಂತರ, ನಿಮ್ಮ ಬಯೋಮೆಟ್ರಿಕ್ಸ್ ಅನ್ನು ನೀವು ನೀಡಬೇಕೆಂದು ಹೇಳುವ ಒಂದು ಪತ್ರವನ್ನು ನೀವು ಸ್ವೀಕರಿಸುತ್ತೀರಿ. ನಿಮ್ಮ ಬಯೋಮೆಟ್ರಿಕ್ಸ್ ಅನ್ನು ಹೇಗೆ ಮತ್ತು ಎಲ್ಲಿ ನೀಡಬೇಕೆಂದು ಈ ಪತ್ರವು ನಿಮಗೆ ತಿಳಿಸುತ್ತದೆ. ನಿಮ್ಮ ಬಯೋಮೆಟ್ರಿಕ್ಸ್ ಅನ್ನು (ವೈಯಕ್ತಿಕವಾಗಿ) ನೀಡಲು ನೀವು ಸುಮಾರು 30 ದಿನಗಳನ್ನು ಹೊಂದಿರುತ್ತೀರಿ. ಬಯೋಮೆಟ್ರಿಕ್ಸ್ ಶುಲ್ಕ ಪಾವತಿಸಿದರೆ ಮಾತ್ರ ಸೂಚನಾ ಪತ್ರ ಪಡೆಯಬಹುದಾಗಿದೆ.
ಹಂತ 3 - ಒಮ್ಮೆ ಬಯೋಮೆಟ್ರಿಕ್ಸ್ ಆದ ನಂತರ, ನಿಮ್ಮ ವೀಸಾ ಅಪ್ಲಿಕೇಶನ್ ಅನ್ನು ಪ್ರಕ್ರಿಯೆಗೊಳಿಸಲಾಗುತ್ತದೆ. ನಿಮ್ಮ ಅಪ್ಲಿಕೇಶನ್ ಅನ್ನು ಪರಿಶೀಲಿಸಲಾಗುತ್ತದೆ ಮತ್ತು ನಿಮ್ಮ ಡಾಕ್ಯುಮೆಂಟ್ಗಳು ಅಪೂರ್ಣವಾಗಿದ್ದರೆ, ಅದನ್ನು ಪ್ರಕ್ರಿಯೆಗೊಳಿಸದೆ ಹಿಂತಿರುಗಿಸಲಾಗುತ್ತದೆ.
ಹೆಚ್ಚಿನ ಮಾಹಿತಿಯನ್ನು ಕಳುಹಿಸಲು, ವೈದ್ಯಕೀಯ ಪರೀಕ್ಷೆಯನ್ನು ಮಾಡಲು, ನಿಮ್ಮ ದೇಶದ ಅಧಿಕಾರಿಗಳೊಂದಿಗೆ ಸಂದರ್ಶನಕ್ಕೆ ಹೋಗಲು ನಿಮ್ಮನ್ನು ಕೇಳಬಹುದು.
ನಿಮ್ಮ ಅಪ್ಲಿಕೇಶನ್ ಅನ್ನು ಪ್ರಕ್ರಿಯೆಗೊಳಿಸಿದ ನಂತರ ನಿಮ್ಮ ಪಾಸ್ಪೋರ್ಟ್ ಮತ್ತು ಇತರ ಒರಿಜಿನಲ್ ಡಾಕ್ಯುಮೆಂಟ್ಗಳನ್ನು ನಿಮಗೆ ಹಿಂತಿರುಗಿಸಲಾಗುತ್ತದೆ. ನಿಮ್ಮ ಅಪ್ಲಿಕೇಶನ್ ಅನ್ನು ಅನುಮೋದಿಸಲಾದರೆ, ವೀಸಾವನ್ನು ನಿಮ್ಮ ಪಾಸ್ಪೋರ್ಟ್ನಲ್ಲಿ ಸ್ಟ್ಯಾಂಪ್ ಮಾಡಲಾಗುತ್ತದೆ. ನಿಮ್ಮ ಅಪ್ಲಿಕೇಶನ್ ಅನ್ನು ತಿರಸ್ಕರಿಸಲಾದರೆ, ನಿಮಗೆ ಒಂದು ಅಪ್ಲಿಕೇಶನ್ ಅನ್ನು ಕಳುಹಿಸಲಾಗುತ್ತದೆ.
ಹಂತ 4 - ಒಂದು ವ್ಯಾಲಿಡ್ ಸಂದರ್ಶಕರ ವೀಸಾ ಮತ್ತು ಟ್ರಾವೆಲ್ ಡಾಕ್ಯುಮೆಂಟ್ ನೀವು ಕೆನಡಾವನ್ನು ಪ್ರವೇಶಿಸಬಹುದು ಎಂಬುದನ್ನು ಖಾತರಿಪಡಿಸುವುದಿಲ್ಲ. ನೀವು ಆಗಮಿಸಿದಾಗ, ಕೆನಡಾಗೆ ಪ್ರಯಾಣಿಸಲು ಅನುಮೋದಿಸಲಾದ ಆ ವ್ಯಕ್ತಿಯು ನೀವೇ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ಐಡೆಂಟಿಟಿ ಅನ್ನು ಪ್ರಾಥಮಿಕ ತಪಾಸಣೆ ಕಿಯೋಸ್ಕ್ನಲ್ಲಿ ಫಿಂಗರ್ಪ್ರಿಂಟ್ಗಳ ಮೂಲಕ ಪರಿಶೀಲಿಸಲಾಗುತ್ತದೆ.
ಹಂತ 5 - ನೀವು ಐಡೆಂಟಿಟಿ ಚೆಕ್ ನಲ್ಲಿ ಉತ್ತೀರ್ಣರಾದರೆ ಮತ್ತು ಪ್ರವೇಶದ ಅವಶ್ಯಕತೆಗಳನ್ನು ಪೂರೈಸಿದರೆ, ಗಡಿ ಸೇವೆಗಳ ಅಧಿಕಾರಿಯು ನಿಮ್ಮ ಪಾಸ್ಪೋರ್ಟ್ ಅನ್ನು ಸ್ಟ್ಯಾಂಪ್ ಮಾಡಬಹುದು ಅಥವಾ ನೀವು ಕೆನಡಾದಲ್ಲಿ ಎಷ್ಟು ಕಾಲ ಉಳಿಯಬಹುದು ಎಂದು ನಿಮಗೆ ತಿಳಿಸಬಹುದು. ನಿಮಗೆ ಸಾಮಾನ್ಯವಾಗಿ 6 ತಿಂಗಳವರೆಗೆ ಕೆನಡಾದಲ್ಲಿ ಉಳಿಯಲು ಅನುಮತಿಸಲಾಗಿದೆ.
ಕೆನಡಾಗೆ ಟೂರಿಸ್ಟ್ ವೀಸಾ ಪ್ರಕ್ರಿಯೆಯ ಸಮಯವು ಗರಿಷ್ಠ 8 ವಾರಗಳಾಗಿರುತ್ತವೆ. ಪ್ರಕ್ರಿಯೆಯ ಸಮಯವು ಅಪ್ಲಿಕೇಶನ್ ಕೇಂದ್ರದ ಸ್ಥಳ, ವೈಯಕ್ತಿಕ ಕೇಸ್ ಗಳು ಮತ್ತು ಸಲ್ಲಿಸಿದ ಡಾಕ್ಯುಮೆಂಟ್ ಗಳ ಪ್ರಕಾರ ಬದಲಾಗಬಹುದು.
ವೀಸಾ ಮತ್ತು ಟ್ರಾವೆಲ್ ಇನ್ಶೂರೆನ್ಸ್ ಅಂತರಾಷ್ಟ್ರೀಯವಾಗಿ ಪ್ರಯಾಣಿಸುವಾಗ ನೀವು ಹೊಂದಿರಬೇಕಾದ ಎರಡು ಪ್ರಮುಖ ವಸ್ತುಗಳಾಗಿವೆ. ದೇಶವನ್ನು ಪ್ರವೇಶಿಸಲು ವೀಸಾ ಮತ್ತು ಸುರಕ್ಷಿತವಾಗಿ ಮತ್ತು ಒತ್ತಡ ಮುಕ್ತವಾಗಿ ಅಲ್ಲಿ ಉಳಿಯಲು ಟ್ರಾವೆಲ್ ಇನ್ಶೂರೆನ್ಸ್. ಪ್ಲಾನಿಂಗ್ ಪ್ರಾರಂಭಿಸಿ ಮತ್ತು ಕೆನಡಾದಲ್ಲಿ ನಿಮ್ಮ ಸಮಯವನ್ನು ಆನಂದಿಸಿ.
ಎಷ್ಟು ಚೆನ್ನಾಗಿ ಪ್ಲಾನಿಂಗ್ ಮಾಡಿದ್ದರೂ ನೀವು ಬೇರೆ ದೇಶದಲ್ಲಿರುವಾಗ ಸಾಕಷ್ಟು ವಿಷಯಗಳು ತಪ್ಪಾಗಿ ಆಗಬಹುದು. ಕೆನಡಾ ಟ್ರಾವೆಲ್ ಇನ್ಶೂರೆನ್ಸ್ ಯಾವುದೇ ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳು ಮತ್ತು ಇತರ ಪ್ರಯಾಣ-ಸಂಬಂಧಿತ ತುರ್ತುಸ್ಥಿತಿಗಳ ಅಪಾಯದಿಂದ ನಿಮ್ಮನ್ನು ರಕ್ಷಿಸುತ್ತದೆ, ನೀವು ಮನೆಯಿಂದ ದೂರದಲ್ಲಿರುವ ಅಪರಿಚಿತ ಭೂಮಿಯಲ್ಲಿರುವ ಕಾರಣದಿಂದಾಗಿ ನೀವು ವಿಶೇಷವಾಗಿ ದುರ್ಬಲತೆಯ ಭಾವನೆಯನ್ನು ಹೊಂದಿರುವ ಸಮಯದಲ್ಲಿ.
ನೀವು ಸಾಗರೋತ್ತರ ಟ್ರಾವೆಲ್ ಮಾಡುವಾಗ ಅನಿರೀಕ್ಷಿತ ಕಾಯಿಲೆಗಳು ಅಥವಾ ಅಪಘಾತಗಳು ಸಂಭವಿಸಿದಾಗ ಅಥವಾ ನೀವು ಇತರ ತೀವ್ರ ತುರ್ತು ಪರಿಸ್ಥಿತಿಗಳನ್ನು ಎದುರಿಸುತ್ತಿರುವಾಗ, ಟ್ರಾವೆಲ್ ಇನ್ಶೂರೆನ್ಸ್ ನಿಮಗೆ ಆರ್ಥಿಕ ಸೌಕರ್ಯವನ್ನು ನೀಡುತ್ತದೆ ಹಾಗೂ ಆ ಸಂಪೂರ್ಣ ಅನುಭವವನ್ನು ಕಡಿಮೆ ಆಘಾತಕಾರಿಯನ್ನಾಗಿ ಮಾಡುತ್ತದೆ.
ಅಂತಹ ಎಲ್ಲಾ ಸಂದರ್ಭಗಳಲ್ಲಿ ಟ್ರಾವೆಲ್ ಇನ್ಶೂರೆನ್ಸ್ ನಿಮಗೆ ಸುರಕ್ಷತೆಯನ್ನು ನೀಡುತ್ತದೆ:
ಇದು ನಿಮ್ಮ ಲಗೇಜ್ ಅನ್ನು ಕಳ್ಳತನವಾಗದಂತೆ ಮತ್ತು ಕಳೆದುಹೋಗದಂತೆ ರಕ್ಷಿಸುತ್ತದೆ.
ನಿಮಗೆ ಯಾವುದೇ ವೈದ್ಯಕೀಯ ನೆರವು ಬೇಕಾದರೆ ಅದು ನಿಮ್ಮ ಜೇಬಿಗೆ ಕತ್ತರಿ ಹಾಕುವುದಿಲ್ಲ.
ನೀವು ಕೇವಲ ಅದನ್ನು ಕ್ಲೈಮ್ ಮಾಡಿ ಸಹಾಯಕ್ಕಾಗಿ ಹೋಗಬೇಕಾಗುತ್ತದೆ.
ವೈಯಕ್ತಿಕ ಅಪಘಾತ ಸಂಭವಿಸಿದಲ್ಲಿ, ಅದನ್ನು ಸಹ ನೋಡಿಕೊಳ್ಳುತ್ತದೆ.
ಯಾವುದೇ ಕಾರಣದಿಂದ ಡಿಲೇಯಾದ ಅಥವಾ ಕ್ಯಾನ್ಸಲ್ ಆದ ಫ್ಲೈಟ್ ಗಳ ಸಂದರ್ಭವನ್ನು ಅದು ನಿಭಾಯಿಸುತ್ತದೆ.
ಟ್ರಾವೆಲ್ ಇನ್ಶೂರೆನ್ಸ್ ನೊಂದಿಗೆ ನಾವು ನಿಮಗೆ ನೀಡುವ ಕೆಳಗೆ ತಿಳಿಸಲಾದ ಪ್ರಯೋಜನಗಳನ್ನು ಪರಿಶೀಲಿಸಿ:
ಝೀರೋ ಡಿಡಕ್ಟಿಬಲ್ - ನಿಮ್ಮ ಜೇಬಿನಿಂದ ಏನನ್ನೂ ನೀವು ಪಾವತಿಸುವುದಿಲ್ಲ, ನಾವು ಎಲ್ಲವನ್ನೂ ನೋಡಿಕೊಳ್ಳುತ್ತೇವೆ
ನೀವು ಹೇಗೆ ಪ್ರಯಾಣಿಸುತ್ತೀರಿ ಎಂಬುದನ್ನು ತಿಳಿದಿರುವ ಕವರ್ - ನಮ್ಮ ಕವರೇಜ್ ಸ್ಕೂಬಾ ಡೈವಿಂಗ್, ಬಂಜೀ ಜಂಪಿಂಗ್ ಮತ್ತು ಸ್ಕೈ ಡೈವಿಂಗ್ನಂತಹ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ (ಅವಧಿಯು ಒಂದು ದಿನವಾಗಿದ್ದರೆ ಮಾತ್ರ)
ಸ್ಮಾರ್ಟ್ಫೋನ್-ಸಕ್ರಿಯಗೊಳಿಸಿದ ಕ್ಲೈಮ್ ಪ್ರಕ್ರಿಯೆ - ಸ್ಮಾರ್ಟ್ಫೋನ್-ಸಕ್ರಿಯಗೊಳಿಸಿದ ಕ್ಲೈಮ್ ಪ್ರಕ್ರಿಯೆಯೊಂದಿಗೆ ಇದು ಬಹಳ ಸ್ಮಾರ್ಟ್ ಆಗಿದೆ. ಪೇಪರ್ ವರ್ಕ್ ಇಲ್ಲ, ಓಡಾಟವಿಲ್ಲ. ನೀವು ಕ್ಲೈಮ್ ಮಾಡಿದಾಗ ನಿಮ್ಮ ಡಾಕ್ಯುಮೆಂಟ್ಗಳನ್ನು ಅಪ್ಲೋಡ್ ಮಾಡಿ.
ಮಿಸ್ಡ್ ಕಾಲ್ ಸೌಲಭ್ಯ - ನಮಗೆ +91-7303470000 ನಲ್ಲಿ ಮಿಸ್ಡ್ ಕಾಲ್ ನೀಡಿ ಮತ್ತು ನಾವು 10 ನಿಮಿಷಗಳಲ್ಲಿ ನಿಮಗೆ ಮರಳಿ ಕಾಲ್ ಮಾಡುತ್ತೇವೆ. ಇನ್ನು ಅಂತಾರಾಷ್ಟ್ರೀಯ ಕರೆ ಶುಲ್ಕಗಳಿಲ್ಲ!
ಇವುಗಳ ಬಗ್ಗೆ ಇನ್ನಷ್ಟು ತಿಳಿಯಿರಿ: