ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಖರೀದಿಸಿ
Instant Policy, No Medical Check-ups

ಭಾರತದಿಂದ ಆಸ್ಟ್ರೇಲಿಯಾ ಟೂರಿಸ್ಟ್ ವೀಸಾ

ಭಾರತದಿಂದ ಆಸ್ಟ್ರೇಲಿಯಾ ಟೂರಿಸ್ಟ್ ವೀಸಾದ ಬಗ್ಗೆ ಎಲ್ಲಾ

ಆಸ್ಟ್ರೇಲಿಯಾ ಕರೆಯುತ್ತಿದೆ!

ನೀವು ಆಸ್ಟ್ರೇಲಿಯಾದ ಅದ್ಭುತಗಳನ್ನು ನೋಡಲು ಉತ್ಸುಕರಾಗಿದ್ದೀರಿ ಎಂದು ನಮಗೆ ತಿಳಿದಿದೆ. ಅದರ ಕಡಲತೀರಗಳು, ಮರುಭೂಮಿಗಳು, ಆಕರ್ಷಕ ಬಣ್ಣ ಮತ್ತು ಇನ್ನೂ ಏನೇನೋ. ಇದು ಪ್ರಯಾಣಿಸಲು ಸುಂದರವಾದ ಸ್ಥಳವಾಗಿದೆ ಆದರೆ ನೀವು ಆ ಸುಂದರವಾದ ಕಡಲತೀರಗಳು ಮತ್ತು ಮರುಭೂಮಿಗಳಲ್ಲಿ ಸುತ್ತಾಡುವ ಬಗ್ಗೆ ಕನಸು ಕಾಣುವ ಮೊದಲು, ನಿಮ್ಮ ವೀಸಾ ಔಪಚಾರಿಕತೆಗಳನ್ನು ಮಾಡಲಾಗಿದ್ದು ನೀವೆಲ್ಲರೂ ಹಾರಲು ಸಿದ್ಧರಾಗಿರುವಿರಿ ಎಂದು ಖಚಿತಪಡಿಸಿಕೊಳ್ಳಿ.

ನಾವು ನಿಮಗೆ ಎಲ್ಲವನ್ನೂ ಕ್ಷಣಾರ್ಧದಲ್ಲಿ ಹೇಳುತ್ತೇವೆ!

ಭಾರತೀಯರಿಗೆ ಆಸ್ಟ್ರೇಲಿಯಾಕ್ಕೆ ಟೂರಿಸ್ಟ್ ವೀಸಾದ ಅಗತ್ಯವಿದೆಯೇ?

ಹೌದು, ಭಾರತೀಯ ನಾಗರಿಕರಿಗೆ ಆಸ್ಟ್ರೇಲಿಯಾಗೆ ವೀಸಾದ ಅಗತ್ಯವಿದೆ. ನಿಮ್ಮ ಉದ್ದೇಶಿತ ಟ್ರಾವೆಲ್ ದಿನಾಂಕಕ್ಕಿಂತ ಮುಂಚಿತವಾಗಿ ನಿಮ್ಮ ವೀಸಾ ಅಪ್ಲಿಕೇಶನ್ ಅನ್ನು ಸಲ್ಲಿಸುವುದು ಸಲಹಾರ್ಹವಾಗಿದ್ದು, ನಿಮ್ಮ ವೀಸಾವನ್ನು ಫೈನಲೈಸ್ ಮಾಡಿದ ನಂತರವೇ ಟ್ರಾವೆಲ್ ವ್ಯವಸ್ಥೆಗಳನ್ನು ಫೈನಲೈಸ್ ಮಾಡಲು ಯಾವಾಗಲೂ ಶಿಫಾರಸು ಮಾಡಲಾಗುತ್ತದೆ.

ಭಾರತೀಯ ನಾಗರಿಕರಿಗೆ ಆಸ್ಟ್ರೇಲಿಯಾದಲ್ಲಿ ವೀಸಾ ಆನ್ ಅರೈವಲ್ ಇದೆಯೇ?

ಇಲ್ಲ, ಭಾರತೀಯ ನಾಗರಿಕರಿಗೆ ಆಸ್ಟ್ರೇಲಿಯಾದಲ್ಲಿ ವೀಸಾ ಆನ್ ಅರೈವಲ್ ಇಲ್ಲ.

ಭಾರತೀಯ ನಾಗರಿಕರಿಗೆ ಆಸ್ಟ್ರೇಲಿಯಾ ವೀಸಾ ಶುಲ್ಕ

ವೀಸಾ ಉಪವರ್ಗ/ನೋಟ್ ಬೇಸ್ ಚಾರ್ಜ್(ಮೂಲ ಶುಲ್ಕ)
ವಿಸಿಟರ್ ಸಬ್ ಕ್ಲಾಸ್ 600 - ಆಗಾಗ್ಗೆ ಪ್ರಯಾಣಿಸುವವರನ್ನು ಹೊರತುಪಡಿಸಿ ಎಲ್ಲಾ ಸ್ಟ್ರೀಮ್‌ಗಳಿಗೆ/ 1a ಮತ್ತು 1b 145 ಎಯುಡಿ
ವಿಸಿಟರ್ ಸಬ್ ಕ್ಲಾಸ್ 600 - ಆಗಾಗ್ಗೆ ಪ್ರಯಾಣಿಸುವವರಿಗೆ 1,020 ಎಯುಡಿ
ಇ-ವಿಸಿಟರ್ (ಸಬ್ ಕ್ಲಾಸ್ 651) ಶೂನ್ಯ
ಇಟಿಎ (ಎಲೆಕ್ಟ್ರಾನಿಕ್ ಟ್ರಾವೆಲ್ ಅಥಾರಿಟಿ) / 1c ಶೂನ್ಯ

ಆಸ್ಟ್ರೇಲಿಯನ್ ವೀಸಾ ಶುಲ್ಕ ಮತ್ತು ಇತರ ಶುಲ್ಕಗಳು, ಆಸ್ಟ್ರೇಲಿಯನ್ ಸರ್ಕಾರವು ನಿಗದಿಪಡಿಸಿದ ಮಾನದಂಡಗಳ ಆಧಾರದ ಮೇಲೆ, ನಿಯಮಿತವಾಗಿ ಬದಲಾಗುತ್ತವೆ. 

ನೋಟ್:

  • 1a ಸಬ್ ಕ್ಲಾಸ್ 600 ರ ವಿಸಿಟರ್ ವೀಸಾ 5 ಸ್ಟ್ರೀಮ್‌ಗಳನ್ನು ಒಳಗೊಂಡಿದೆ.

  • 1b ವೀಸಾವು ಯಾವುದೇ ವಿದೇಶಿ ಸರ್ಕಾರವನ್ನು ಪ್ರತಿನಿಧಿಸುವ ಅಪ್ಲಿಕೆಂಟ್ ಗೆ ಆಗಿದೆ. ಆದಾಗ್ಯೂ, ವೀಸಾ ಶುಲ್ಕಗಳು ಶೂನ್ಯವಾಗಿವೆ, ಆದರೆ ಇದಕ್ಕೆ ಪೂರಕ ಸಾಕ್ಷ್ಯದ ಅಗತ್ಯವಿರುತ್ತದೆ.

  • 1c ಇಟಿಎ (ಎಲೆಕ್ಟ್ರಾನಿಕ್ ಟ್ರಾವೆಲ್ ಅಥಾರಿಟಿ) ಅಪ್ಲಿಕೇಶನ್ ಗಳನ್ನು ಆನ್‌ಲೈನ್‌ನಲ್ಲಿ ಪ್ರಕ್ರಿಯೆಗೊಳಿಸಲಾಗುತ್ತದೆ ಮತ್ತು ಆದ್ದರಿಂದ, ಅವು ಸೇವಾ ಶುಲ್ಕಗಳಿಗೆ ಒಳಪಟ್ಟಿರುತ್ತವೆ.

ಭಾರತದಿಂದ ಆಸ್ಟ್ರೇಲಿಯಾ ಟೂರಿಸ್ಟ್ ವೀಸಾಗೆ ಅಪ್ಲಿಕೇಶನ್ ಸಲ್ಲಿಸುವುದು ಹೇಗೆ?

ಆಸ್ಟ್ರೇಲಿಯಾಕ್ಕೆ ಟೂರಿಸ್ಟ್ ವೀಸಾಗೆ ಅಪ್ಲಿಕೇಶನ್ ಸಲ್ಲಿಸುವ ಪ್ರಕ್ರಿಯೆಯು ಸರಳ ಮತ್ತು ಸಂಘಟಿತವಾಗಿದೆ. ಆಸ್ಟ್ರೇಲಿಯನ್ ಟೂರಿಸ್ಟ್ ವೀಸಾ(ಸಬ್ ಕ್ಲಾಸ್ 600) ವಿಸಿಟರ್ ವೀಸಾದ ಕೆಟಗರಿಯಲ್ಲಿ ಬರುತ್ತದೆ. ಇದು ಪ್ರವಾಸೋದ್ಯಮದ ಏಕೈಕ ಉದ್ದೇಶಕ್ಕಾಗಿ ನೀಡಲಾದ ಅಲ್ಪಾವಧಿಯ ಅನುಮತಿಯಾಗಿದೆ. ಸಂಪೂರ್ಣ ಕಾರ್ಯವಿಧಾನವು ಆನ್‌ಲೈನ್‌ನಲ್ಲಿ ಇರುವುದರಿಂದ ನೀವು ಡಾಕ್ಯುಮೆಂಟ್‌ಗಳ ಹಾರ್ಡ್ ಪ್ರತಿಯೊಂದಿಗೆ ರಾಯಭಾರ ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲ. 

ನೀವು ಆಸ್ಟ್ರೇಲಿಯಾದ ಸರ್ಕಾರಿ ವೆಬ್‌ಸೈಟ್‌ನಿಂದ ಆಸ್ಟ್ರೇಲಿಯಾ ಇಟಿಎ ಅಪ್ಲಿಕೇಶನ್ ಆನ್‌ಲೈನ್ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಬಹುದು ಅಥವಾ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ನೀವು www.australiae-visa.com ಗೆ ಭೇಟಿ ನೀಡಬಹುದು. ನೀವು ಸರಿಯಾದ ವಿವರಗಳೊಂದಿಗೆ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ ಮತ್ತು ಅನ್ವಯಿಸುವ ವೀಸಾ ಶುಲ್ಕವನ್ನು ಪಾವತಿಸುವ ಮೂಲಕ ಅದನ್ನು ಸಲ್ಲಿಸಬೇಕಾಗುತ್ತದೆ. ಫಾರ್ಮ್‌ನಲ್ಲಿ ನೀವು ಉಲ್ಲೇಖಿಸಿರುವ ಐಡಿಯಲ್ಲಿ ಇ-ಮೇಲ್ ಮೂಲಕ ನಿಮ್ಮ ವಿವರಗಳ ನಿಖರತೆಯನ್ನು ಅವಲಂಬಿಸಿ ನೀವು 2-3 ದಿನಗಳಲ್ಲಿ ಆಸ್ಟ್ರೇಲಿಯಾ ಇಟಿಎ ವೀಸಾವನ್ನು ಸ್ವೀಕರಿಸುತ್ತೀರಿ.

ಆಸ್ಟ್ರೇಲಿಯನ್ ಟೂರಿಸ್ಟ್ ವೀಸಾ ಭೌತಿಕ ರೂಪದಲ್ಲಿಲ್ಲದ ಕಾರಣ, ನಿಮ್ಮ ವೀಸಾ ವಿವರಗಳೊಂದಿಗೆ ನೀವು ಇಮೇಲ್ ಅನ್ನು ಸ್ವೀಕರಿಸುತ್ತೀರಿ ಎಂಬುದನ್ನು ದಯವಿಟ್ಟು ಗಮನಿಸಿ. ನಿಮ್ಮ ವೀಸಾವನ್ನು ನೇರವಾಗಿ ನಿಮ್ಮ ಪಾಸ್‌ಪೋರ್ಟ್ ಸಂಖ್ಯೆಗೆ ಲಿಂಕ್ ಮಾಡಲಾಗುತ್ತದೆ.

ಅಪ್ಲಿಕೇಶನ್ ಪ್ರಕ್ರಿಯೆಯಲ್ಲಿ ನೀವು ಯಾವುದೇ ತಪ್ಪುಗಳನ್ನು ಮಾಡುವುದಿಲ್ಲ ಅಥವಾ ನಕಲಿ ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ಅವಶ್ಯಕವಾಗುತ್ತದೆ. ಇದು ವೀಸಾ ನಿರಾಕರಣೆಗೆ ಕಾರಣವಾಗಬಹುದು. ನಿಮ್ಮ ವೀಸಾವನ್ನು ಯಶಸ್ವಿಯಾಗಿ ಪಡೆಯಲಾಗಿದೆ ಎಂದು ಖಚಿತಪಡಿಸಿಕೊಳ್ಳಲು, ವೀಸಾ ಸರ್ವೀಸಸ್ ಅನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಆಸ್ಟ್ರೇಲಿಯಾ ಟೂರಿಸ್ಟ್ ವೀಸಾಗೆ ಅಗತ್ಯವಿರುವ ಡಾಕ್ಯುಮೆಂಟ್ ಗಳು

  • ಟ್ರಾವೆಲ್ ದಿನಾಂಕದಿಂದ 6 ತಿಂಗಳ ವ್ಯಾಲಿಡಿಟಿ ಹೊಂದಿರುವ ಒರಿಜಿನಲ್ ಪಾಸ್‌ಪೋರ್ಟ್

  • ವೀಸಾ ಅಪ್ಲಿಕೇಶನ್ ಫಾರ್ಮ್

  • 2 ಫೋಟೋಗಳು: 35 X 45ಮಿಮೀ, ಬಿಳಿ ಹಿನ್ನೆಲೆ, ಮ್ಯಾಟ್ ಫಿನಿಶ್ 80% ಮುಖದ ಗಾತ್ರ

  • ಅಪ್ಲಿಕೆಂಟ್ ನ ವಿವರಗಳು, ಪಾಸ್‌ಪೋರ್ಟ್ ವಿವರಗಳು, ಟ್ರಾವೆಲ್ ವಿವರಗಳು ಮತ್ತು ವೆಚ್ಚದ ವಿವರಗಳನ್ನು ಯಾರು ಭರಿಸುತ್ತಾರೆ ಎಂಬ ವಿವರಗಳನ್ನು ಹೊಂದಿರುವ ಕವರ್ ಲೆಟರ್

  • ಪ್ಯಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಪ್ರತಿ

  • ಫೈನಾನ್ಶಿಯಲ್ ಸ್ಟೇಟ್ಮೆಂಟ್ ಗಳು

  • ಉದ್ಯೋಗದ ಪುರಾವೆ ಮತ್ತು ಪೇ ಸ್ಲಿಪ್ ಗಳು

  • ಇನ್ಕಮ್ ಟ್ಯಾಕ್ಸ್ ರಿಟರ್ನ್ ಗಳು

  • ಉದ್ದೇಶಿತ ವಾಸ್ತವ್ಯದ ಸಂಪೂರ್ಣ ಅವಧಿಯನ್ನು ಒಳಗೊಂಡಿರುವ ಹೋಟೆಲ್ ಬುಕಿಂಗ್ ಅಥವಾ ವಸತಿಗೃಹ

  • ರಿಟರ್ನ್ ಅಥವಾ ರೌಂಡ್ ಟಿಕೆಟ್‌ನ ಫ್ಲೈಟ್ ರಿಸರ್ವೇಶನ್

  • ಮದುವೆಯಾಗಿದ್ದರೆ ಮ್ಯಾರೇಜ್ ಸರ್ಟಿಫಿಕೇಟ್

ಆಸ್ಟ್ರೇಲಿಯಾ ಟೂರಿಸ್ಟ್ ವೀಸಾ ಪ್ರಕ್ರಿಯೆಗೊಳಿಸಲು ಬೇಕಾಗುವ ಸಮಯ

ಸಬ್ ಕ್ಲಾಸ್ 600 ವಿಸಿಟರ್ ವೀಸಾ ಟೂರಿಸ್ಟ್ ಸ್ಟ್ರೀಮ್‌ಗಾಗಿ ಆಸ್ಟ್ರೇಲಿಯಾ ಟೂರಿಸ್ಟ್ ವೀಸಾ ಪ್ರಕ್ರಿಯೆಯ ಸಮಯ, 48 ಗಂಟೆಗಳಿಂದ 20 ದಿನಗಳಿಗಿಂತ ಹೆಚ್ಚಿರುತ್ತದೆ. ಆದಾಗ್ಯೂ, ಇದು ಗರಿಷ್ಠ ಪ್ರಕ್ರಿಯೆಯ ಅವಧಿ ಮತ್ತು ಅಗತ್ಯವಿರುವ ಎಲ್ಲಾ ಪೋಷಕ ಡಾಕ್ಯುಮೆಂಟ್‌ಗಳೊಂದಿಗೆ ಪೂರ್ಣಗೊಂಡ ಅಪ್ಲಿಕೇಶನ್ ಫಾರ್ಮ್ ನಂತಹ ಅಂಶಗಳನ್ನು ಅವಲಂಬಿಸಿರುತ್ತದೆ.

ನಾನು ಆಸ್ಟ್ರೇಲಿಯಾಕ್ಕೆ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ನೀವು ಆಸ್ಟ್ರೇಲಿಯಾಕ್ಕೆ ಭೇಟಿ ನೀಡುತ್ತಿದ್ದರೆ ಮಾತ್ರವಲ್ಲದೆ ನೀವು ಭೇಟಿ ನೀಡುವ ಯಾವುದೇ ಸ್ಥಳಕ್ಕೂ ಟ್ರಾವೆಲ್ ಇನ್ಶೂರೆನ್ಸ್ ಮುಖ್ಯವಾಗಿದೆ. ಆಸ್ಟ್ರೇಲಿಯಾ ಪ್ರಯಾಣಿಸಲು ಒಂದು ಸುಂದರವಾದ ಸ್ಥಳವಾಗಿದೆ, ಆದರೆ ನೀವು ಎಲ್ಲಿಯಾದರೂ, ಯಾವುದೇ ಸಮಯದಲ್ಲಿ ತಪ್ಪಿಸಿಕೊಳ್ಳಲಾಗದ ಸಂದರ್ಭಗಳನ್ನು ಎದುರಿಸಬಹುದು.

ಲಗೇಜ್ ಕಳ್ಳತನ, ಕ್ಯಾಶ್ ಕಳ್ಳತನ, ಪಾಸ್‌ಪೋರ್ಟ್ ನಷ್ಟ, ವೈದ್ಯಕೀಯ ತುರ್ತು ಪರಿಸ್ಥಿತಿಗಳು ಸಾಮಾನ್ಯವಾಗಿ ಪ್ರವಾಸಿಗರು ಎಲ್ಲಿ ಬೇಕಾದರೂ ಎದುರಿಸಬಹುದಾದ ಕೆಲವು ಸಮಸ್ಯೆಗಳಾಗಿವೆ. ಆದ್ದರಿಂದ, ಇವುಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು, ಟ್ರಾವೆಲ್ ಇನ್ಶೂರೆನ್ಸ್ ಅನ್ನು ಹೊಂದಲು ಸಲಹೆ ನೀಡಲಾಗುತ್ತದೆ.

ನೀವು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುವಾಗ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಹೊಂದಲು ಸಲಹೆ ನೀಡುವುದರ ಹಿಂದಿರುವ ಪ್ರಮುಖ ಕಾರಣವೆಂದರೆ ವೈದ್ಯಕೀಯ ವೆಚ್ಚಗಳು. ನೀವು ಟ್ರಾವೆಲ್ ಇನ್ಶೂರೆನ್ಸ್ ಅನ್ನು ಹೊಂದಿಲ್ಲದಿದ್ದರೆ ಆಸ್ಟ್ರೇಲಿಯಾದಲ್ಲಿ ವೈದ್ಯಕೀಯ ವೆಚ್ಚದ ವೆಚ್ಚವು ತುಂಬಾ ದುಬಾರಿಯಾಗಿದೆ. ಆದ್ದರಿಂದ, ಟ್ರಾವೆಲ್ ಇನ್ಶೂರೆನ್ಸ್ ಅಂತಹ ಎಲ್ಲಾ ಸಂದರ್ಭಗಳಲ್ಲಿ ನಿಮಗೆ ಸುರಕ್ಷತೆಯನ್ನು ನೀಡುತ್ತದೆ:

ಆಸ್ಟ್ರೇಲಿಯಾದ ಟ್ರಾವೆಲ್ ಇನ್ಶೂರೆನ್ಸ್ ನೊಂದಿಗೆ ನಾವು ನಿಮಗೆ ನೀಡುವ ಕೆಳಗೆ ತಿಳಿಸಲಾದ ಪ್ರಯೋಜನಗಳನ್ನು ಪರಿಶೀಲಿಸಿ:

ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಆಸ್ಟ್ರೇಲಿಯಾ ಟೂರಿಸ್ಟ್ ವೀಸಾ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು

ಪೀಕ್ ಸೀಸನ್‌ಗಳಲ್ಲಿ ಆಸ್ಟ್ರೇಲಿಯನ್ ವೀಸಾದ ಪ್ರಕ್ರಿಯೆ ತೆಗೆದುಕೊಳ್ಳುವ ಸಮಯ ಎಷ್ಟು?

ಪ್ರಕ್ರಿಯೆಯ ಸಮಯವು ಕೇವಲ 48 ಗಂಟೆಗಳಿಂದ 20 ಕ್ಕಿಂತಲೂ ಹೆಚ್ಚಿನ ದಿನಗಳವರೆಗೆ ಬದಲಾಗುತ್ತಿರುತ್ತದೆ. ಪೀಕ್ ಸೀಸನ್‌ಗಳಲ್ಲಿ, ಟೂರಿಸ್ಟ್ ಗಳು ಹೇರಳವಾಗಿರುವಾಗ, ತೆಗೆದುಕೊಳ್ಳಲಾಗುವ ಸಮಯವು ಹೆಚ್ಚಿರುತ್ತದೆ.

ಆಗಾಗ್ಗೆ ಭೇಟಿ ನೀಡುವವರು ವೇಗವಾದ ಪ್ರಕ್ರಿಯೆ ಅವಧಿಯ ಯಾವುದೇ ಅವಕಾಶವನ್ನು ಹೊಂದಿದ್ದಾರೆಯೇ?

ಆಗಾಗ್ಗೆ ಪ್ರಯಾಣಿಸುವವರು ವಿಸಿಟರ್ ಸಬ್ ಕ್ಲಾಸ್ 600 ವೀಸಾಕ್ಕೆ ಅಪ್ಲಿಕೇಶನ್ ಸಲ್ಲಿಸಬಹುದು. ಇದು ಸ್ಟ್ಯಾಂಡರ್ಡ್ ವೀಸಾಗಳಿಗಿಂತ ಹೆಚ್ಚು ದುಬಾರಿಯಾಗಿದೆ. ಆದಾಗ್ಯೂ, ಇದು ಪ್ರಕ್ರಿಯೆಗೊಳಿಸಲು ಬಹಳ ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತದೆ.

ಆಸ್ಟ್ರೇಲಿಯಾ ಭಾರತೀಯರಿಗೆ ಆನ್ ಅರೈವಲ್ ವೀಸಾಗಳನ್ನು ನೀಡುತ್ತದೆಯೇ?

ಇಲ್ಲ, ಆನ್ ಅರೈವಲ್ ವೀಸಾಗಳಿಗೆ ಯಾವುದೇ ಅವಕಾಶವಿಲ್ಲ. ದೇಶಕ್ಕೆ ಭೇಟಿ ನೀಡಲು ನಿಮಗಿರುವ ಕಾರಣ ಏನೇ ಇರಲಿ ನೀವು ಸ್ಟ್ಯಾಂಡರ್ಡ್ ಆಸ್ಟ್ರೇಲಿಯನ್ ವೀಸಾಗಳಿಗೆ ಮುಂಚಿತವಾಗಿಯೇ ಅಪ್ಲಿಕೇಶನ್ ಸಲ್ಲಿಸಬೇಕಾಗುತ್ತದೆ.

ವೀಸಾ ಅಪ್ಲಿಕೇಶನ್ ಪ್ರಕ್ರಿಯೆಯಲ್ಲಿ ನನ್ನ ಪಾಸ್‌ಪೋರ್ಟ್ ಎಷ್ಟು ಕಾಲ ವ್ಯಾಲಿಡ್ ಆಗಿರಬೇಕು?

ನೀವು ವೀಸಾಕ್ಕೆ ಅಪ್ಲಿಕೇಶನ್ ಸಲ್ಲಿಸುವಾಗ, ಟ್ರಾವೆಲ್ ಅವಧಿಯನ್ನು ಒಳಗೊಂಡಂತೆ ನಿಮ್ಮ ಪಾಸ್‌ಪೋರ್ಟ್ ಕನಿಷ್ಠ 6 ತಿಂಗಳ ವ್ಯಾಲಿಡಿಟಿ ಹೊಂದಿರುವುದರನ್ನು ಖಚಿತಪಡಿಸಿಕೊಳ್ಳಿ.

ವೀಸಾ ಪಾಸ್‌ಪೋರ್ಟ್ ನಂಬರ್ ಗೆ ಲಿಂಕ್ ಆಗಿರುತ್ತದೆಯೇ?

ಎಲ್ಲಾ ಆಸ್ಟ್ರೇಲಿಯನ್ ವೀಸಾಗಳನ್ನು ನಿಮ್ಮ ಪಾಸ್‌ಪೋರ್ಟ್ ನಂಬರ್ ಗೆ ವಿದ್ಯುನ್ಮಾನವಾಗಿ ಲಿಂಕ್ ಮಾಡಲಾಗಿದೆ.