4. ಹೋಮ್ ಲೋನ್‌ಗಳಿಗೆ ಪಾವತಿಸಿದ ಇಂಟರೆಸ್ಟ್ ಅಂಶ
ಸೆಕ್ಷನ್ - 24(b)
ಲಿಮಿಟ್ – ₹2 ಲಕ್ಷ
ಹೋಮ್ ಲೋನ್ ಮೇಲಿನ ಇಂಟರೆಸ್ಟ್ ಪೇಮೆಂಟ್‌ಗಳನ್ನು ಈ ಸೆಕ್ಷನ್ ಅಡಿಯಲ್ಲಿ ಇನ್‌ಕಮ್ ಟ್ಯಾಕ್ಸ್ ಕ್ಯಾಲ್ಕುಲೇಷನ್‌ಗಳಿಂದ ತೆಗೆದುಹಾಕಬಹುದು. ಮನೆ ಸ್ವಯಂ ನೆಲೆಸಿದ್ದಾಗಿದ್ದರೆ, ಲೋನ್ ಅವಧಿಯ ಐದು ವರ್ಷಗಳಲ್ಲಿ ನಿರ್ಮಾಣ ಪೂರ್ಣಗೊಂಡರೆ, ಇಂಟರೆಸ್ಟ್ ದರದ ಮೇಲೆ ಗರಿಷ್ಠ ₹2 ಲಕ್ಷಗಳನ್ನು ಟ್ಯಾಕ್ಸ್ ರಿಬೇಟ್ ಆಗಿ ಕ್ಲೈಮ್ ಮಾಡಬಹುದು.
ನೀವು ಖರೀದಿಸಿದ ಪ್ರಾಪರ್ಟಿಯನ್ನು ಬಾಡಿಗೆಗೆ ನೀಡಲು ಆಯ್ಕೆ ಮಾಡಿದರೆ, ಆಗ. ಇಂಟರೆಸ್ಟ್ ಡಿಡಕ್ಷನ್‌ಗೆ ಯಾವುದೇ ಲಿಮಿಟ್ ಇಲ್ಲ.
[ಮೂಲ]
5. ಮೊದಲ ಬಾರಿಗೆ ಮನೆ ಖರೀದಿಸುವವರ ಹೋಮ್ ಲೋನ್‌ಗಳಿಗೆ ಪಾವತಿಸಿದ ಇಂಟರೆಸ್ಟ್ ಅಂಶ
ಸೆಕ್ಷನ್ - 80EEA
ಲಿಮಿಟ್ – ಸೆಕ್ಷನ್ 24 (b) ನಿಂದ ₹50,000 ಕ್ಕಿಂತ ಹೆಚ್ಚಿನ ಪ್ರಯೋಜನಗಳು
ಮೊದಲ ಬಾರಿಗೆ ಮನೆ ಖರೀದಿಸುವವರು ಹೋಮ್ ಲೋನ್ ಇಎಂಐಗಳ ಮೇಲೆ ಸೆಕ್ಷನ್ 24 (b)ನಲ್ಲಿ ₹50,000ಗಳ ಹೆಚ್ಚುವರಿ ಇಂಟರೆಸ್ಟ್ ಪ್ರಯೋಜನಗಳನ್ನು ಪಡೆಯಬಹುದು, ಆ ಪ್ರಾಪರ್ಟಿ ಮೌಲ್ಯವು ₹45 ಲಕ್ಷಗಿಂತ ಕಡಿಮೆಯಿದ್ದರೆ ಮಾತ್ರ.
ಆದಾಗ್ಯೂ, ಸೆಕ್ಷನ್ 80 ಇಇಎ ಅಡಿಯಲ್ಲಿ ಇಎಂಐ ಪೇಮೆಂಟ್‌ಗಳಿಗಾಗಿ ಖರ್ಚು ಮಾಡಿದ ಒಟ್ಟು ಇನ್‌ಕಮ್ ಮೇಲೆ ಟ್ಯಾಕ್ಸ್ ರಿಬೇಟ್‌ಗೆ ಅರ್ಹರಾಗಲು ಹೋಮ್ ಲೋನ್ ಅನ್ನು ಪಡೆಯುವಾಗ ಅಪ್ಲಿಕೆಂಟ್‌ಗಳ ಹೆಸರಿನಲ್ಲಿ ಯಾವುದೇ ಪೂರ್ವ ಪ್ರಾಪರ್ಟಿ ರಿಜಿಸ್ಟರ್ ಆಗಿರಬಾರದು.
[ಮೂಲ]
6. ಲೈಫ್ ಇನ್ಶೂರೆನ್ಸ್ ಪ್ಲಾನ್‌ಗಳ ಮೆಚ್ಯುರಿಟಿ ಮೇಲೆ ಸಮ್ ಇನ್ಶೂರ್ಡ್
ಸೆಕ್ಷನ್ - 10(10D)
ಲಿಮಿಟ್ – ಸಂಪೂರ್ಣ ಮೆಚ್ಯುರಿಟಿ ಅಮೌಂಟ್
ಲೈಫ್ ಇನ್ಶೂರೆನ್ಸ್‌ನ ಮೆಚ್ಯುರಿಟಿ ಅಥವಾ ಇನ್ಶೂರ್ಡ್ ವ್ಯಕ್ತಿಯ ಅಕಾಲಿಕ ಮರಣದ ನಂತರ ವಿತರಿಸಲಾಗುವ ಸಂಪೂರ್ಣ ಸಮ್ ಇನ್ಶೂರ್ಡ್ ಅನ್ನು ಸೆಕ್ಷನ್ 10(10D) ಅಡಿಯಲ್ಲಿ ಟ್ಯಾಕ್ಸ್ ರಿಬೇಟ್‌ಗಾಗಿ ಕ್ಲೈಮ್ ಮಾಡಬಹುದು.
ಆದಾಗ್ಯೂ, ಅಂತಹ ಡೆತ್ ಬೆನಿಫಿಟ್ ಅನ್ನು ಏಪ್ರಿಲ್ 1, 2012ರ ನಂತರ ಪಡೆದರೆ ಟ್ಯಾಕ್ಸ್ ಕ್ಯಾಲ್ಕುಲೇಷನ್‌ಗಳಿಂದ ವಿನಾಯಿತಿ ನೀಡಲಾಗುತ್ತದೆ ಮತ್ತು ಪ್ರೀಮಿಯಂ ಶುಲ್ಕಗಳ ಒಟ್ಟು ಮೌಲ್ಯದ ಪೂರ್ತಿ ಸಮ್ ಇನ್ಶೂರ್ಡ್‌ಗಿಂತ ಕಡಿಮೆ ಇರುತ್ತದೆ.
ಏಪ್ರಿಲ್ 1, 2012ರ ಮೊದಲು ಪಾಲಿಸಿಯನ್ನು ಪಡೆದರೆ, ಸೆಕ್ಷನ್ 10(10D) ಅಡಿಯಲ್ಲಿ ಮನ್ನಾಗೆ ಅರ್ಹವಾಗಲು ಪ್ರೀಮಿಯಂ ವೆಚ್ಚಗಳು ಒಟ್ಟು ಸಮ್ ಇನ್ಶೂರ್ಡ್‌ಗಿಂತ 20% ಕಡಿಮೆ ಇರಬೇಕು.
[ಮೂಲ]
7. ಸ್ಯಾಲರಿ ಬ್ರೇಕ್-ಅಪ್ ಅಡಿಯಲ್ಲಿ ಒದಗಿಸಲಾದ ಹೌಸ್ ರೆಂಟ್ ಅಲೋಯನ್ಸ್
ಸೆಕ್ಷನ್ - 10(13A)
ಲಿಮಿಟ್ – ನಿರ್ದಿಷ್ಟಪಡಿಸಿದ ಷರತ್ತುಗಳು
ನಿಮ್ಮ ಸ್ಯಾಲರಿ ಬ್ರೇಕ್-ಅಪ್ ಹೆಚ್‌ಆರ್‌ಎ ಅಂಶವನ್ನು ಒಳಗೊಂಡಿದ್ದರೆ, ಇನ್‌ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಈ ಪ್ರಾವಿಶನ್ ಹೌಸ್ ರೆಂಟ್ ಅಲೋಯನ್ಸ್ (ಎಚ್ಆರ್‌ಎ) ಅಡಿಯಲ್ಲಿ ಟ್ಯಾಕ್ಸ್ ಪ್ರಯೋಜನಗಳನ್ನು ಪೂರೈಸುತ್ತದೆ. ಈ ಸ್ಕೀಮ್ ಅಡಿಯಲ್ಲಿ ನೀಡಲಾದ ಒಟ್ಟು ವಿನಾಯಿತಿಯು ಈ ಕೆಳಗಿನವುಗಳ ಕನಿಷ್ಠ ಮೌಲ್ಯವಾಗಿದೆ:
- ವಿತರಿಸಲಾದ ನಿಜವಾದ ವಾರ್ಷಿಕ ಎಚ್ಆರ್‌ಎ.
- ಮೆಟ್ರೋ ನಗರಗಳಲ್ಲಿ ವಾಸಿಸುವವರಿಗೆ ವಾರ್ಷಿಕ ಸ್ಯಾಲರಿಯ 50%
- ಮೆಟ್ರೋ ಅಲ್ಲದ ನಗರಗಳಲ್ಲಿ ವಾಸಿಸುವವರಿಗೆ ವಾರ್ಷಿಕ ಸ್ಯಾಲರಿಯ 40%
- ಪಾವತಿಸಿದ ವಾರ್ಷಿಕ ಬಾಡಿಗೆ ಮೈನಸ್ ಮೂಲ ಇನ್‌ಕಮ್‌ನ 10% + ಡಿಎ
[ಮೂಲ]
8. ಹೌಸ್ ರೆಂಟ್ ಅಲೋಯನ್ಸ್ ಅಂಶವು ಸ್ಯಾಲರಿ ಬ್ರೇಕ್-ಅಪ್ ಅಡಿಯಲ್ಲಿ ಒಳಗೊಂಡಿಲ್ಲ
ಸೆಕ್ಷನ್ - 80GG
ಲಿಮಿಟ್ – ನಿರ್ದಿಷ್ಟಪಡಿಸಿದ ಷರತ್ತುಗಳು
ನಿಮ್ಮ ಕಂಪನಿಯು ನಿಮ್ಮ ಸ್ಯಾಲರಿ ಬ್ರೇಕ್-ಅಪ್‌ನಲ್ಲಿ ಎಚ್ಆರ್‌ಎ ಅಂಶ ಒಳಗೊಂಡಿರದಿದ್ದರೆ, ಸೆಕ್ಷನ್ 80GG ಮೂಲಕ ನಿಮ್ಮ ಒಟ್ಟು ಟ್ಯಾಕ್ಸೇಬಲ್ ಇನ್‌ಕಮ್ ಮೇಲೆ ನೀವು ವಿನಾಯಿತಿಗಳನ್ನು ಕ್ಲೈಮ್ ಮಾಡಬಹುದು. 80C ಹೊರತುಪಡಿಸಿ ಅಂತಹ ಟ್ಯಾಕ್ಸ್ ಉಳಿತಾಯ ಇನ್‌ವೆಸ್ಟ್‌ಮೆಂಟ್‌ಗಳು ಪಟ್ಟಿ ಮಾಡಲಾದ ಪ್ಯಾರಾಮೀಟರ್‌ಗಳ ಕನಿಷ್ಠ ಮೌಲ್ಯದವರೆಗೆ ಮನ್ನಾ ಅವಕಾಶ ಒದಗಿಸುತ್ತವೆ:
- ತಿಂಗಳಿಗೆ ₹5,000.
- ಒಟ್ಟು ವಾರ್ಷಿಕ ಇನ್‌ಕಮ್‌ನ 25%.
- ವಾರ್ಷಿಕ ಬಾಡಿಗೆ ಮೈನಸ್ ಮೂಲ ವಾರ್ಷಿಕ ಇನ್‌ಕಮ್‌ನ 10%.
[ಮೂಲ]
9. ಚಾರಿಟೇಬಲ್ ಸಂಸ್ಥೆಗಳಿಗೆ ದೇಣಿಗೆ
ಸೆಕ್ಷನ್- 80G
ಲಿಮಿಟ್ – ಒಟ್ಟು ಇನ್‌ಕಮ್‌ನ 10%ಗೆ ಲಿಮಿಟ್ ಮಾಡಲಾಗಿದೆ
ಚಾರಿಟೇಬಲ್ ಸಂಸ್ಥೆಗಳಿಗೆ ದೇಣಿಗೆ ನೀಡುವ ಯಾವುದೇ ಇನ್‌ಕಮ್ ಅನ್ನು ಸೆಕ್ಷನ್ 80G ಅಡಿಯಲ್ಲಿ ಟ್ಯಾಕ್ಸ್ ಕ್ಯಾಲ್ಕುಲೇಷನ್‌ಗಳಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲಾಗುತ್ತದೆ. ಬ್ಯಾಂಕುಗಳ ಮೂಲಕ ಟ್ರಾನ್ಸ್‌ಫರ್ ಮಾಡಿದ್ದರೆ ಅಂತಹ ಟ್ಯಾಕ್ಸ್ ಮನ್ನಾಗಳಿಗೆ ಯಾವುದೇ ಲಿಮಿಟ್ ಅನ್ನು ವಿಧಿಸಲಾಗಿಲ್ಲ.
ಯಾವುದೇ ಕ್ಯಾಶ್ ದೇಣಿಗೆಗಳು ₹2,000ವರೆಗಿನ ಟ್ಯಾಕ್ಸ್ ಕ್ಯಾಲ್ಕುಲೇಷನ್‌ನಿಂದ ವಿನಾಯಿತಿ ಪಡೆಯುತ್ತವೆ. ಆದಾಗ್ಯೂ, ಅಂತಹ ಕಾಂಟ್ರಿಬ್ಯೂಷನ್‌ಗಳನ್ನು ರಿಜಿಸ್ಟರ್‌ಡ್ ಚಾರಿಟೇಬಲ್ ಸಂಸ್ಥೆಗಳಲ್ಲಿ ನೀಡಬೇಕಾಗುತ್ತದೆ.
[ಮೂಲ]
10. ವೈಜ್ಞಾನಿಕ ಸಂಶೋಧನೆ ಮತ್ತು ಗ್ರಾಮೀಣಾಭಿವೃದ್ಧಿಗೆ ನೀಡಿದ ದೇಣಿಗೆಗಳು
ಸೆಕ್ಷನ್ (Section)- 80GGA
ಲಿಮಿಟ್ (Limit)– ಲಿಮಿಟ್ ಇಲ್ಲ
ವೈಜ್ಞಾನಿಕ ಸಂಶೋಧನೆ ಮತ್ತು ಗ್ರಾಮೀಣಾಭಿವೃದ್ಧಿಗಾಗಿ ದೇಣಿಗೆ ನೀಡಿದರೆ, ಅದರ ಮೇಲಿನ ಟ್ಯಾಕ್ಸ್ ಮನ್ನಾವನ್ನು ಸೆಕ್ಷನ್ 8080GGA ಅಡಿಯಲ್ಲಿ ಕ್ಲೈಮ್ ಮಾಡಬಹುದು.
ಬ್ಯಾಂಕ್ ಖಾತೆಯ ಮೂಲಕ ಟ್ರಾನ್ಸಾಕ್ಷನ್ ನಡೆಸಿದ್ದರೆ ಮತ್ತು ಡಾಕ್ಯುಮೆಂಟ್ ಆಗಿದ್ದರೆ, ಖರ್ಚು ಮಾಡಿದ ಇನ್‌ಕಮ್‌ನ 100% ಅಂತಹ ಡಿಡಕ್ಷನ್‌ಗಳಿಗೆ ಅರ್ಹವಾಗಿರುತ್ತದೆ.
[ಮೂಲ]
11. ರಾಜಕೀಯ ಪಕ್ಷಗಳಿಗೆ ನೀಡಿದ ದೇಣಿಗೆಗಳು
ಸೆಕ್ಷನ್ - 80GGC
ಲಿಮಿಟ್ – ಲಿಮಿಟ್ ಇಲ್ಲ
ಸೆಕ್ಷನ್ 80C ಹೊರತುಪಡಿಸಿ ಇನ್ನುಳಿದಂತೆ ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಗಳು ಟ್ಯಾಕ್ಸ್ ಉಳಿತಾಯ ಆಗಿದೆ. ವೈರ್ಡ್ ಬ್ಯಾಂಕ್ ಟ್ರಾನ್ಸ್‌ಫರ್‌ಗಳ ಮೂಲಕ ಮಾಡಿದ್ದರೆ, ಸಂಪೂರ್ಣ ಕಾಂಟ್ರಿಬ್ಯೂಷನ್ ಅನ್ನು ಟ್ಯಾಕ್ಸ್ ಕ್ಯಾಲ್ಕುಲೇಷನ್‌ಗಳಿಂದ ಮನ್ನಾ ಮಾಡಲಾಗುತ್ತದೆ.
ಅಲ್ಲದೆ, ಅಂತಹ ಕಾಂಟ್ರಿಬ್ಯೂಷನ್‌ಗಳನ್ನು ನೀಡಿದ ರಾಜಕೀಯ ಪಕ್ಷವು 1951ರ ರೆಪ್ರೆಸೆಂಟೇಷನ್ ಆಫ್ ಪೀಪಲ್ ಆ್ಯಕ್ಟ್(ಆರ್‌ಪಿಎ)ನ ಸೆಕ್ಷನ್ 29A ಅಡಿಯಲ್ಲಿ ರಿಜಿಸ್ಟರ್ ಆಗಿರಬೇಕು.
[ಮೂಲ]
12. ವಿಕಲಚೇತನ ವ್ಯಕ್ತಿಯ ಚಿಕಿತ್ಸೆಗೆ ತಗಲುವ ವೆಚ್ಚಗಳು
ಸೆಕ್ಷನ್ - 80DD
ಲಿಮಿಟ್:
- 40% -80% ಅಂಗವೈಕಲ್ಯಕ್ಕೆ ₹75,000
- 80%ಕ್ಕಿಂತ ಹೆಚ್ಚು ಅಂಗವೈಕಲ್ಯಕ್ಕೆ ₹1,25,000
ವಿಕಲಚೇತನ ಕುಟುಂಬ ಸದಸ್ಯರ ಚಿಕಿತ್ಸೆ ಮತ್ತು ಯೋಗಕ್ಷೇಮಕ್ಕಾಗಿ ಪಾವತಿಸುವ ವ್ಯಕ್ತಿಗಳು ಮತ್ತು ಹಿಂದೂ ಅವಿಭಕ್ತ ಕುಟುಂಬಗಳು (ಹೆಚ್‌ಯುಎಫ್) ಸೆಕ್ಷನ್ 80DD ಅಡಿಯಲ್ಲಿ ಅಂತಹ ವೆಚ್ಚಗಳನ್ನು ಭರಿಸಲು ಖರ್ಚು ಮಾಡಿದ ಒಟ್ಟು ಇನ್‌ಕಮ್ ಮೇಲೆ ವಿನಾಯಿತಿ ಕ್ಲೈಮ್ ಮಾಡಬಹುದು.
ಅಂಗವೈಕಲ್ಯದ ಶೇಕಡಾವಾರು ಆಧಾರದ ಮೇಲೆ ಕವರೇಜ್ ಲಿಮಿಟ್ ಅನ್ನು ನಿರ್ಧರಿಸಲಾಗುತ್ತದೆ, ಇದರಲ್ಲಿ 40-80% ಅಂಗವೈಕಲ್ಯ ಹೊಂದಿರುವ ಜನರು ₹75,000ಗಳವರೆಗಿನ ಡಿಡಕ್ಷನ್‌ಗೆ ಅರ್ಹರಾಗಿರುತ್ತಾರೆ.
80%ಗಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವ ವ್ಯಕ್ತಿಯನ್ನು ಹೊಂದಿರುವ ಕುಟುಂಬಗಳು ಎಲ್ಲಾ ಸಂಬಂಧಿತ ವೆಚ್ಚಗಳನ್ನು ಒಳಗೊಂಡಂತೆ ₹1.25 ಲಕ್ಷದವರೆಗೆ ಕ್ಲೈಮ್ ಮಾಡಬಹುದು. ಅಂತಹ ಕ್ಲೈಮ್‌ಗಳನ್ನು ಅಂತಹ ಅವಲಂಬಿತ ವ್ಯಕ್ತಿಗಳ ಕುಟುಂಬಕ್ಕೆ ಮಾತ್ರ ನೀಡಲಾಗುತ್ತದೆ.
[ಮೂಲ]
13. ವಿಕಲಚೇತನ ವ್ಯಕ್ತಿಗಳಿಗೆ ಇನ್‌ಕಮ್ ಟ್ಯಾಕ್ಸ್ ಪ್ರಯೋಜನಗಳ ವಿಸ್ತರಣೆ
ಸೆಕ್ಷನ್ - 80U
ಲಿಮಿಟ್:
- 40% -80% ಅಂಗವೈಕಲ್ಯಕ್ಕೆ ₹75,000
- 80%ಕ್ಕಿಂತ ಹೆಚ್ಚು ಅಂಗವೈಕಲ್ಯಕ್ಕೆ ₹1,25,000
ವಿಕಲಚೇತನ ವ್ಯಕ್ತಿಗಳು ಸೆಕ್ಷನ್ 80U ಅಡಿಯಲ್ಲಿ ಟ್ಯಾಕ್ಸ್ ಮನ್ನಾ ರೂಪದಲ್ಲಿ ಪರಿಹಾರವನ್ನು ಕ್ಲೈಮ್ ಮಾಡಬಹುದು. ಅಂತಹ ಅಂಗವೈಕಲ್ಯವು ಕನಿಷ್ಠ 40% ದುರ್ಬಲತೆಯೊಂದಿಗೆ ರಿಜಿಸ್ಟರ್‌ಡ್ ಮೆಡಿಕಲ್ ಪ್ರಾಧಿಕಾರದಿಂದ ಸರ್ಟಿಫೈಡ್ ಆಗಿರಬೇಕು.
ಟ್ಯಾಕ್ಸ್ ಪ್ರಯೋಜನಗಳ ಮೂಲಕ 40-80% ಅಂಗವೈಕಲ್ಯದಿಂದ ಬಳಲುತ್ತಿರುವ ಅಸಮರ್ಥತೆ ಹೊಂದಿರುವ ವ್ಯಕ್ತಿಗಳು ₹75,000, 80%ಕ್ಕಿಂತ ಹೆಚ್ಚು ಅಂಗವೈಕಲ್ಯದಿಂದ ಬಳಲುತ್ತಿರುವ ಜನರು ಗರಿಷ್ಠ ₹1.25 ಲಕ್ಷ ಕ್ಲೈಮ್ ಮಾಡಲು ಅರ್ಹರಾಗಿರುತ್ತಾರೆ.
[ಮೂಲ]
14. ನಿರ್ದಿಷ್ಟ ಡಿಸೀಸ್ ಅಥವಾ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಚಿಕಿತ್ಸೆಗಾಗಿ ಮಾಡಿದ ವೆಚ್ಚಗಳು
ಸೆಕ್ಷನ್ - 80DDB
ಲಿಮಿಟ್ - ₹40,000 (ಸೀನಿಯರ್ ಸಿಟಿಜನ್‌ಗಳಿಗೆ ₹1,00,000)
ಕೆಲವು ನಿರ್ದಿಷ್ಟ ಡಿಸೀಸ್‌ಗಳಿಂದ ಬಳಲುತ್ತಿರುವ ಅವಲಂಬಿತ ಕುಟುಂಬ ಸದಸ್ಯರ ಚಿಕಿತ್ಸೆಗೆ ಹಣಕಾಸು ಒದಗಿಸುವ ಜನರು ನಂತರ ಇನ್‌ಕಮ್ ಮೇಲೆ ಟ್ಯಾಕ್ಸ್ ಮನ್ನಾ ಅನ್ನು ಕ್ಲೈಮ್ ಮಾಡಬಹುದು.
60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಿಗೆ ಅಂತಹ ಸಂದರ್ಭಗಳಲ್ಲಿ ಗರಿಷ್ಠ ₹40,000ಗಳನ್ನು ವಿತರಿಸಲಾಗುತ್ತದೆ. ಸೀನಿಯರ್ ಸಿಟಿಜನ್‌ಗಳಿಗೆ (60-80 ವರ್ಷ) ಮತ್ತು ಸೂಪರ್ ಸೀನಿಯರ್ ಸಿಟಿಜನ್‌ಗಳಿಗೆ (80 ವರ್ಷಕ್ಕಿಂತ ಮೇಲ್ಪಟ್ಟವರು) ಅಂತಹ ಮನ್ನಾ ₹1 ಲಕ್ಷಕ್ಕೆ ಏರುತ್ತದೆ.
[ಮೂಲ]
ನ್ಯೂರೋಲಾಜಿಕಲ್ ಡಿಸೀಸ್‌ಗಳು (40% ಅಥವಾ ಅದಕ್ಕಿಂತ ಹೆಚ್ಚಿನ ಅಂಗವೈಕಲ್ಯಕ್ಕೆ ಕಾರಣವಾಗುವ), ಮಾರಣಾಂತಿಕ ಕ್ಯಾನ್ಸರ್, ಏಡ್ಸ್, ದೀರ್ಘಕಾಲದ ಮೂತ್ರಪಿಂಡದ ಕಾಯಿಲೆ ಮತ್ತು ಹೆಮಟಾಲಾಜಿಕಲ್ ಕಾಯಿಲೆಗಳಂತಹ ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ ಅಂತಹ ಮನ್ನಾಗಳನ್ನು ಪಡೆಯಬಹುದು.
ಹೀಗಾಗಿ, ಸೆಕ್ಷನ್ 80C ಹೊರತುಪಡಿಸಿ ಟ್ಯಾಕ್ಸ್ ಉಳಿತಾಯಕ್ಕೆ ಹಲವಾರು ಮಾರ್ಗಗಳಿವೆ, ಇದು ದೀರ್ಘಾವಧಿಯಲ್ಲಿ ನಿಮ್ಮ ಒಟ್ಟು ಸಂಪತ್ತನ್ನು ಪರಿಣಾಮಕಾರಿಯಾಗಿ ಹೆಚ್ಚಿಸುತ್ತದೆ. ಅಂತಹ ಹೆಚ್ಚಿನ ಸಾಧನಗಳು ಕಾಂಪ್ರೆಹೆನ್ಸಿವ್ ಇನ್‌ವೆಸ್ಟ್‌ಮೆಂಟ್ ಸಾಧನವಾಗಿಯೂ ಕಾರ್ಯನಿರ್ವಹಿಸುತ್ತವೆ; ಹೆಚ್ಚಿನ ಇನ್‌ಕಮ್ ಅನ್ನು ಗಳಿಸಲು ಅಥವಾ ಕಡ್ಡಾಯ ವೆಚ್ಚಗಳನ್ನು ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ.