ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ನಾನ್‌-ಸ್ಯಾಲರೀಡ್ ವ್ಯಕ್ತಿಗೆ ಐಟಿಆರ್(ITR) ಫೈಲ್ ಮಾಡುವುದು ಹೇಗೆ

ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಫಾರ್ಮ್‌ಗಳ ಸಂಖ್ಯೆ ಮತ್ತು ಅವುಗಳಿಗೆ ಸಂಬಂಧಿಸಿದ ವಿವಿಧ ಷರತ್ತುಗಳು ಯಾವುದೇ ಟ್ಯಾಕ್ಸ್‌ಪೇಯರ್‌ ಅನ್ನು, ವಿಶೇಷವಾಗಿ ನಿಗದಿತ ಮಾಸಿಕ ಇನ್‌ಕಮ್‌ ಅನ್ನು ಹೊಂದಿರದವರನ್ನು ಗೊಂದಲಗೊಳಿಸಬಹುದು. ಸ್ಯಾಲರಿ ಇಲ್ಲದಿರುವಾಗ, ಐಟಿಆರ್ ಅನ್ನು ಫೈಲ್ ಮಾಡಲು ಸರಿಯಾದ ಫಾರ್ಮ್ ಅನ್ನು ಆಯ್ಕೆ ಮಾಡಲು ನಿಮಗೆ ಕಷ್ಟವಾಗಬಹುದು, ಆ ಪ್ರೊಸೆಸ್ ಮುಂದುವರಿಸುವುದು ಬಿಡಿ.

ನೀವು ಐಟಿಆರ್ ಫೈಲಿಂಗ್ ಪರಿಕಲ್ಪನೆಗೆ ಹೊಸಬರಾಗಿದ್ದರೆ, ಚಿಂತಿಸಬೇಡಿ! ನಾನ್‌-ಸ್ಯಾಲರೀಡ್ ವ್ಯಕ್ತಿಗೆ ಐಟಿಆರ್ ಫೈಲ್ ಮಾಡುವುದು ಹೇಗೆ ಮತ್ತು ಅದರ ಪ್ರಾಮುಖ್ಯತೆಯನ್ನು ಕವರ್ ಮಾಡಿರುವ ವಿವರವಾದ ಗೈಡ್ ಅನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ.

ಓದು ಮುಂದುವರೆಸಿ!

ಐಟಿಆರ್(ITR) ಎಂದರೇನು?

ಐಟಿಆರ್ ಅಥವಾ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಎನ್ನುವುದು ಟ್ಯಾಕ್ಸ್‌ಪೇಯರ್‌ಗಳು ತಮ್ಮ ಇನ್‌ಕಮ್‌ ವಿವರಗಳನ್ನು ಮತ್ತು ಮೌಲ್ಯಮಾಪನ ವರ್ಷದಲ್ಲಿ ಡಿಡಕ್ಟ್ ಮಾಡಲಾದ ಟ್ಯಾಕ್ಸ್ ಅನ್ನು ನಮೂದಿಸುವ ಒಂದು ಫಾರ್ಮ್ ಆಗಿದೆ. ಈ ಇನ್‌ಕಮ್‌ ವಿವರಗಳನ್ನು ಆಧರಿಸಿ, ಐಟಿ ಇಲಾಖೆಯು ನಿಮ್ಮ ಟ್ಯಾಕ್ಸ್ ಲಯಬಿಲಿಟಿಯನ್ನು ಕ್ಯಾಲ್ಕುಲೇಟ್ ಮಾಡುತ್ತದೆ. ಡಿಡಕ್ಟ್ ಮಾಡಲಾದ ಟ್ಯಾಕ್ಸ್ ನಿಮ್ಮ ನಿಜವಾದ ಟ್ಯಾಕ್ಸ್ ಲಯಬಿಲಿಟಿಗಿಂತ ಹೆಚ್ಚಿದ್ದರೆ, ನೀವು ಇನ್‌ಕಮ್‌ ಟ್ಯಾಕ್ಸ್‌ ರಿಫಂಡ್‌ಗೆ ಅರ್ಹರಾಗುತ್ತೀರಿ.

ಐಟಿಆರ್-1ರಿಂದ ಐಟಿಆರ್-7ವರೆಗಿನ ವಿವಿಧ ಫಾರ್ಮ್‌ಗಳು ವಿವಿಧ ಟ್ಯಾಕ್ಸ್‌ಪೇಯರ್‌ಗಳಿಗೆ ಮೀಸಲಾಗಿವೆ. ಅಲ್ಲದೆ, ಟ್ಯಾಕ್ಸ್‌ಪೇಯರ್‌ಗಳು ಕೆಲವು ಷರತ್ತುಗಳನ್ನು ಪೂರೈಸಿದಾಗ ಐಟಿಆರ್ ಫೈಲ್ ಮಾಡುವ ಈ ಸಂಪೂರ್ಣ ಪ್ರೊಸೆಸ್ ಸಂಪೂರ್ಣವಾಗಿ ಅವಶ್ಯವಾಗುತ್ತದೆ. 

[ಮೂಲ]

ನೀವು ಐಟಿಆರ್(ITR) ಅನ್ನು ಏಕೆ ಫೈಲ್ ಮಾಡಬೇಕು?

ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್ ಫೈಲ್ ಮಾಡುವುದು ಹಲವಾರು ಪ್ರಯೋಜನಗಳೊಂದಿಗೆ ಬರುತ್ತದೆ, ಈ ತುಣುಕಿನಲ್ಲಿ ಅದನ್ನು ನಾವು ಮುಂದೆ ಚರ್ಚಿಸಲಿದ್ದೇವೆ. ಆದಾಗ್ಯೂ, ನೀವು ಐಟಿಆರ್ ಅನ್ನು ಏಕೆ ಫೈಲ್ ಮಾಡಬೇಕು ಎಂಬುದಕ್ಕೆ ಪ್ರಮುಖ ಕಾರಣವೆಂದರೆ ಟ್ಯಾಕ್ಸೇಬಲ್ ಲಿಮಿಟ್ ಅನ್ನು ಮೀರಿದ ಇನ್‌ಕಮ್‌ ಹೊಂದಿರುವ ವ್ಯಕ್ತಿಗಳಿಗೆ ಇದು ಕಡ್ಡಾಯವಾಗಿದೆ. 

ವಿವಿಧ ವಯಸ್ಸಿನ ವ್ಯಕ್ತಿಗಳಿಗೆ ವಿವಿಧ ವಿನಾಯಿತಿ ಲಿಮಿಟ್‌ಗಳ ಬಗ್ಗೆ ತಿಳಿಯಲು ನೀವು ಕೆಳಗಿನ ಕೋಷ್ಟಕವನ್ನು ನೋಡಬಹುದು.

ವಯಸ್ಸು ವಿನಾಯಿತಿ ಲಿಮಿಟ್‌
60 ವರ್ಷಗಳವರೆಗೆ ₹2.5 ಲಕ್ಷಗಳು
60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 80 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ₹3 ಲಕ್ಷಗಳು
80 ವರ್ಷ ಮೇಲ್ಪಟ್ಟವರು ₹5 ಲಕ್ಷಗಳು

ನಾವು ಇಲ್ಲಿ ನಾನ್‌-ಸ್ಯಾಲರೀಡ್ ಅಪ್ಲಿಕೆಂಟ್‌ಗಳ ಬಗ್ಗೆ ಮಾತನಾಡುತ್ತಿರುವುದರಿಂದ, ಸಂಸ್ಥೆಯಂತಹ ಇನ್‌ಕಮ್‌ ಮೂಲಗಳಿಗೆ ಟ್ಯಾಕ್ಸ್ ಫೈಲಿಂಗ್ ಕಡ್ಡಾಯಗಳ ಬಗ್ಗೆ ಗಮನ ಹರಿಸೋಣ. ಲಾಭರಹಿತ ಸಂಸ್ಥೆ ಅಥವಾ ಫರ್ಮ್/ಕಂಪನಿಗೆ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್‌ ಫೈಲ್ ಮಾಡುವುದು ಹೇಗೆ ಎಂದು ನೀವು ಯೋಚಿಸುತ್ತಿದ್ದರೆ, ಅಂತಹ ಸಂದರ್ಭಗಳಲ್ಲಿ ಲಾಭ ಅಥವಾ ನಷ್ಟವನ್ನು ಪರಿಗಣಿಸದೆಯೇ ಐಟಿಆರ್ ಫೈಲ್ ಮಾಡುವುದು ಕಡ್ಡಾಯ ಎಂದು ತಿಳಿಯಿರಿ.

ಅಂತೆಯೇ, ಅನಿವಾಸಿ ಟ್ಯಾಕ್ಸ್ ರಿಟರ್ನ್ ಅನ್ನು ಫೈಲ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳುವುದು ಅತ್ಯಗತ್ಯ.

[ಮೂಲ]

ನಾನ್‌-ಸ್ಯಾಲರೀಡ್ ವ್ಯಕ್ತಿಗೆ ಯಾವ ಐಟಿಆರ್(ITR) ಫೈಲ್ ಮಾಡಬೇಕು?

ನಾನ್‌-ಸ್ಯಾಲರೀಡ್ ವ್ಯಕ್ತಿಗಳ ವಿವಿಧ ವರ್ಗಗಳಿಗೆ ಅಪ್ಲಿಕೇಬಲ್ ಆಗುವ ಐಟಿಆರ್ ಫಾರ್ಮ್‌ಗಳನ್ನು ಒಳಗೊಂಡಿರುವ ಕೋಷ್ಟಕ ಇಲ್ಲಿದೆ. ನಿಮ್ಮ ಪ್ರೊಫೈಲ್‌ಗೆ ಸೂಕ್ತವಾದುದನ್ನು ಆರಿಸಿ.

ಫಾರ್ಮ್ ವಿಧ ಅಪ್ಲಿಕೇಬಲ್ ಆಗುವುದು
ಐಟಿಆರ್-3 ಬಿಸಿನೆಸ್ ಅಥವಾ ವೃತ್ತಿಯಿಂದ ಇನ್‌ಕಮ್‌ ಹೊಂದಿರುವ ವ್ಯಕ್ತಿಗಳು ಮತ್ತು ಹೆಚ್‌ಯುಎಫ್‌ಗಳು
ಐಟಿಆರ್-4 ಬಿಸಿನೆಸ್ ಅಥವಾ ವೃತ್ತಿಯಿಂದ ಇನ್‌ಕಮ್‌ ಹೊಂದಿರುವ ವ್ಯಕ್ತಿಗಳು, ಹೆಚ್‌ಯುಎಫ್‌ಗಳು ಮತ್ತು ಸಂಸ್ಥೆಗಳು
ಐಟಿಆರ್-5 ಕಂಪನಿಗಳು, ವ್ಯಕ್ತಿಗಳು, ಹೆಚ್‌ಯುಎಫ್‌ಗಳು ಮತ್ತು ಐಟಿಆರ್ -7 ಫೈಲ್ ಮಾಡಲು ಲಯಬಲ್ ಆಗಿರುವವರನ್ನು ಹೊರತುಪಡಿಸಿ ಅಸೆಸ್ಸೀಗಳು
ಐಟಿಆರ್-6 ಸೆಕ್ಷನ್ 11ರ ಅಡಿಯಲ್ಲಿ ರಿಟರ್ನ್ಸ್ ಫೈಲ್ ಮಾಡುವವರನ್ನು ಹೊರತುಪಡಿಸಿ ಕಂಪನಿಗಳು
ಐಟಿಆರ್-7 ಸೆಕ್ಷನ್ 139(4A) /139(4B) /139(4C) /139(4D) /139(4E) /139(4F) ಅಡಿಯಲ್ಲಿ ವಿನಾಯಿತಿ ಕ್ಲೈಮ್ ಮಾಡುವ ವ್ಯಕ್ತಿಗಳು ಮತ್ತು ಕಂಪನಿಗಳು

ನಿಮ್ಮ ರಿಟರ್ನ್ಸ್ ಫೈಲ್ ಮಾಡಲು ಅಗತ್ಯವಿರುವ ಫಾರ್ಮ್ ಅನ್ನು ನೀವು ಆರಿಸಿದ ನಂತರ, ನಾನ್‌-ಸ್ಯಾಲರೀಡ್ ವ್ಯಕ್ತಿಗೆ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಅನ್ನು ಫೈಲ್ ಹೇಗೆ ಮಾಡುವುದು ಎಂಬುದರ ವಿವರವಾದ ಪ್ರೊಸೆಸ್ ಅನ್ನು ತಿಳಿದುಕೊಳ್ಳುವುದು ಮುಖ್ಯ.

[ಮೂಲ]

ನಾನ್‌-ಸ್ಯಾಲರೀಡ್ ವ್ಯಕ್ತಿಗೆ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಫೈಲ್ ಮಾಡುವುದು ಹೇಗೆ?

ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ಪ್ರೊಸೆಸ್‌ಗಳಲ್ಲಿ ನಿಮ್ಮ ಐಟಿಆರ್ ಅನ್ನು ನೀವು ಫೈಲ್ ಮಾಡಬಹುದು.

ಆನ್‌ಲೈನ್ ವಿಧಾನ

ನಾನ್‌-ಸ್ಯಾಲರೀಡ್ ಉದ್ಯೋಗಿಗಳಿಗೆ ಆನ್‌ಲೈನ್‌ನಲ್ಲಿ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್ ಫೈಲ್ ಮಾಡುವುದು ಹೇಗೆ ಎಂಬುದರ ಕುರಿತು ಹಂತ ಹಂತವಾದ ಗೈಡ್ ಇಲ್ಲಿದೆ.

ಹಂತ 1: ಇನ್‌ಕಮ್‌ ಟ್ಯಾಕ್ಸ್‌ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ.

ಹಂತ 2: ಬಲ ಸೈಡ್‌ಬಾರ್‌ನಲ್ಲಿರುವ "ಐಟಿ ರಿಟರ್ನ್ ಪ್ರಿಪರೇಷನ್ ಸಾಫ್ಟ್‌ವೇರ್" ಮೇಲೆ ಕ್ಲಿಕ್ ಮಾಡಿ.

ಹಂತ 3 (Step 3): ಮುಂದಿನ ಸ್ಕ್ರೀನ್ ನಲ್ಲಿ, ಡ್ರಾಪ್-ಡೌನ್ ಮೆನುನಲ್ಲಿ ಸರಿಯಾದ ಮೌಲ್ಯಮಾಪನ ವರ್ಷವನ್ನು ಆಯ್ಕೆ ಮಾಡಿ.

ಐಟಿಆರ್ ಡ್ರಾಪ್ ಡೌನ್

ಹಂತ 4 (Step 4): ಕೆಳಗೆ ಸ್ಕ್ರೋಲ್ ಮಾಡುತ್ತಾ, ನೀವು ಡೌನ್‌ಲೋಡ್ ಮಾಡಬಹುದಾದ ಸ್ವರೂಪಗಳಲ್ಲಿ ಪಟ್ಟಿ ಮಾಡಲಾದ ಎಲ್ಲಾ ಐಟಿಆರ್ ಫಾರ್ಮ್‌ಗಳನ್ನು ಕಾಣಬಹುದು.

ಐಟಿಆರ್ ಫಾರ್ಮ್‌ಗಳು

ನಾನ್‌-ಸ್ಯಾಲರೀಡ್ ವ್ಯಕ್ತಿಯಾಗಿ ಐಟಿಆರ್ ಫೈಲ್ ಮಾಡಲು, ನಿಮ್ಮ ಸೂಕ್ತತೆಗೆ ಅನುಗುಣವಾಗಿ ಐಟಿಆರ್ -5, ಐಟಿಆರ್ -6 ಮತ್ತು ಐಟಿಆರ್ -7 ಫಾರ್ಮ್‌ಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ. ಎಂಎಸ್ ಎಕ್ಸೆಲ್ ಅಥವಾ ಜಾವಾ ಆವೃತ್ತಿ ಇವೆರಡರಲ್ಲಿ ನಿಮ್ಮ ಡಿವೈಸ್‌ ಯಾವುದನ್ನು ಸಪೋರ್ಟ್ ಮಾಡುತ್ತದೆ ಎಂಬುದರ ಆಧಾರದಲ್ಲಿ ಒಂದನ್ನು ಡೌನ್‌ಲೋಡ್ ಮಾಡಿ.

ಹಂತ 5 (Step 5): ಫೈಲ್ ಅನ್ನು ಜಿಪ್ ಸ್ವರೂಪದಲ್ಲಿ ಡೌನ್‌ಲೋಡ್ ಮಾಡಲಾಗುತ್ತದೆ. ಅದನ್ನು ಎಕ್ಸ್‌ಟ್ರಾಕ್ಟ್‌ ಮಾಡಿ ಮತ್ತು ಫಾರ್ಮ್ ಅನ್ನು ತೆರೆಯಿರಿ.

ಹಂತ 6 (Step 6): ಫೈಲ್ ಅನ್ನು ತೆರೆಯುವಾಗ, ನೀವು ಹಲವಾರು ಟ್ಯಾಬ್‌ಗಳು/ಸೆಕ್ಷನ್‌ಗಳನ್ನು ಕಾಣಬಹುದು, ಅದರ ಅಡಿಯಲ್ಲಿ ನೀವು ವಿವಿಧ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ.

ಹಂತ 7 (Step 7): ಮೊದಲ ಟ್ಯಾಬ್ “ಪಾರ್ಟ್ ಎ – ಜನರಲ್ (1)”, ಅಡಿಯಲ್ಲಿ ನೀವು ಹೆಸರು, ಜನನ ದಿನಾಂಕ, ವಿಳಾಸ ಮುಂತಾದ ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಬೇಕಾಗುತ್ತದೆ. ಈ ವಿವರಗಳನ್ನು ತ್ವರಿತವಾಗಿ ತುಂಬಲು ನೀವು ಬಯಸಿದರೆ, ಮೇಲೆ ಇರುವ "ಪ್ರೀ-ಫಿಲ್" ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 8 (Step 8): ಮುಂದೆ, "ಪ್ರಿ-ಫಿಲ್ ಐಟಿಆರ್" ಶೀರ್ಷಿಕೆಯ ಡೈಲಾಗ್ ಬಾಕ್ಸ್ ಪಾಪ್ ಅಪ್ ಆಗುತ್ತದೆ, ಅಲ್ಲಿ ನಿಮ್ಮ ಇ-ಫೈಲಿಂಗ್ ಯೂಸರ್ ಐಡಿ, ಪಾಸ್‌ವರ್ಡ್ ಮತ್ತು ಇನ್‌ಕಾರ್ಪೋರೇಷನ್‌/ಎರಡರ ದಿನಾಂಕವನ್ನು ನಮೂದಿಸಬೇಕು. "ಪ್ರೀ-ಫಿಲ್ ಅಡ್ರೆಸ್" ಜೊತೆಗೆ, "ಫ್ರಮ್ ಪ್ಯಾನ್ ಡೀಟೇಲ್ಸ್" ಮತ್ತು "ಫ್ರಮ್ ಐಟಿಆರ್‌ ಫಾರ್ಮ್‌ ಫೈಲ್‌ಡ್‌" ಇವುಗಳಲ್ಲಿ ಒಂದನ್ನು ಆಯ್ಕೆಮಾಡಿ. ನಂತರ, "ಪ್ರಿ-ಫಿಲ್" ಒತ್ತಿ ಮತ್ತು ಆಮೇಲೆ "ಓಕೆ" ಕ್ಲಿಕ್ ಮಾಡಿ. ಅಗತ್ಯವಿರುವ ಮಾಹಿತಿ ಬೇಕಾದಲ್ಲಿ ಇದು ಹೆಚ್ಚಿನ ಫೀಲ್ಡ್ ಗಳನ್ನು ತುಂಬುತ್ತದೆ.

ಹಂತ 9 (Step 9): ಈಗ, ನೀವು ಇನ್ನೂ ಖಾಲಿ ಇರುವ ಇತರ ಕಡ್ಡಾಯ ಫೀಲ್ಡ್ ಗಳನ್ನು ಮ್ಯಾನ್ಯುವಲೀ ಭರ್ತಿ ಮಾಡಬೇಕಾಗುತ್ತದೆ. ಅಲ್ಲದೆ, ಕಂಪನಿಯ ವಿಧವನ್ನು ಆಯ್ಕೆಮಾಡಿ ಮತ್ತು ಅದು ಖಾಸಗಿ ಅಥವಾ ಸಾರ್ವಜನಿಕ ಕಂಪನಿಯಾಗಿದ್ದರೆ ನಮೂದಿಸಿ.

ಹಂತ 10 (Step 10): ಮುಂದೆ, "ಫೈಲಿಂಗ್ ಸ್ಟೇಟಸ್" ಅಡಿಯಲ್ಲಿ, ಫೈಲಿಂಗ್ ಮಾಡುವ ಸಮಯವನ್ನು ಅವಲಂಬಿಸಿ ಸೆಕ್ಷನ್ ಅನ್ನು ಆಯ್ಕೆಮಾಡಿ, ಅಂದರೆ, ಅಂತಿಮ ದಿನಾಂಕದ ಮೊದಲು ಅಥವಾ ನಂತರ, ಮತ್ತು ರಿಟರ್ನ್ ಪ್ರಕಾರ, ಅದೆಂದರೆ, ಪರಿಷ್ಕೃತ ಮಾಡಿರುವುದು ಅಥವಾ ಮಾರ್ಪಡಿಸಲಾಗಿರುವುದು. ನೀವು ಆಯ್ಕೆ ಮಾಡಬೇಕಾದ ಉಳಿದ ಫೀಲ್ಡ್ ಗಳನ್ನು "ಯೆಸ್" ಮತ್ತು "ನೋ" ಎಂಬುದರ ನಡುವೆ ಭರ್ತಿ ಮಾಡಿ.

ಹಂತ 11 (Step 11): ನೀವು ಮೊದಲ ಸೆಕ್ಷನ್ ಭರ್ತಿ ಮಾಡಿದ ನಂತರ, ಮುಂದಿನದಕ್ಕೆ ಹೋಗಿ ಮತ್ತು ಅದೇ ರೀತಿ ಅಗತ್ಯವಿರುವ ಎಲ್ಲಾ ಫೀಲ್ಡ್ ಗಳನ್ನು ಭರ್ತಿ ಮಾಡಿ. ಸಂಪೂರ್ಣ ಫಾರ್ಮ್ ತುಂಬುವವರೆಗೆ ಪ್ರೊಸೆಸ್ ಅನ್ನು ಮುಂದುವರಿಸಿ.

ಹಂತ 12 (Step 12): ನೀವು ಅಂತಿಮ ದಿನಾಂಕದ ನಂತರ ರಿಟರ್ನ್‌ ಫೈಲ್ ಮಾಡುತ್ತಿದ್ದರೆ ಮತ್ತು ಪೆನಲ್ಟಿ ಪಾವತಿಸುವಂತಿದ್ದರೆ, "ಪಾರ್ಟ್ ಬಿ - ಟಿಟಿಐ" ಅಡಿಯಲ್ಲಿರುವ "ಇ-ಪೇ ಟ್ಯಾಕ್ಸ್" ಮೇಲೆ ಕ್ಲಿಕ್ ಮಾಡಿ. ಅದರ ನಂತರ, ನೀವು ಪೇಮೆಂಟ್ ಅನ್ನು ಪೂರ್ಣಗೊಳಿಸಿದ ಬಳಿಕ ಚಲನ್ ಅನ್ನು ರಚಿಸಲಾಗುತ್ತದೆ.

ಹಂತ 13 (Step 13): "ವೆರಿಫಿಕೇಷನ್" ಶೀರ್ಷಿಕೆಯ ಕೊನೆಯ ಟ್ಯಾಬ್ ಅಡಿಯಲ್ಲಿ ನಿಮ್ಮ ಹೆಸರು, ನಿಮ್ಮ ತಂದೆಯ ಹೆಸರು, ಸಂಬಂಧಪಟ್ಟ ಸಂಸ್ಥೆಯಲ್ಲಿನ ನಿಮ್ಮ ಹುದ್ದೆ, ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ದಿನಾಂಕವನ್ನು ನಿಮ್ಮ ಡಿಕ್ಲರೇಷನ್ ಪೂರ್ಣಗೊಳಿಸಲು ನಮೂದಿಸಿ.

ಹಂತ 14 (Step 14): ಯಾವುದೇ ತಪ್ಪಿದೆಯೇ ಎಂದು ಎಲ್ಲಾ ಭರ್ತಿ ಮಾಡಿದ ವಿವರಗಳನ್ನು ಚೆಕ್ ಮಾಡಿ. ಯಾವುದೇ ಎರರ್‌ಗಳಿಲ್ಲದಿದ್ದರೆ, "ಸಬ್‌ಮಿಟ್‌" ಬಟನ್ ಕ್ಲಿಕ್ ಮಾಡಿ.

ಹಂತ 15 (Step 15): ಸಬ್‌ಮಿಷನ್‌ ಅನ್ನು ದೃಢೀಕರಿಸಲು ನೀವು ಹೊಸ ವಿಂಡೋದಲ್ಲಿ ನಿಮ್ಮ ಯೂಸರ್‌ ಐಡಿ, ಪಾಸ್‌ವರ್ಡ್ ಮತ್ತು ಜನನ ದಿನಾಂಕವನ್ನು ನಮೂದಿಸಬೇಕಾಗುತ್ತದೆ. ಅಂತಿಮವಾಗಿ "ಓಕೆ" ಕ್ಲಿಕ್ ಮಾಡುವ ಮೊದಲು ಮುಂದಿನ ಡಯಲಾಗ್‌ ಬಾಕ್ಸ್‌ನಲ್ಲಿ ನಿಮ್ಮ ಯೂಸರ್ ಪಿನ್ ಅನ್ನು ಸಹ ನೀವು ನಮೂದಿಸಬೇಕಾಗುತ್ತದೆ.

ಮುಂದಿನ ಸ್ಕ್ರೀನ್ "ಐಟಿಆರ್‌ ಸಬ್‌ಮಿಟ್ಟೆಡ್‌ ಸಕ್ಸಸ್‌ಫುಲಿ" ಎಂಬ ಸಂದೇಶವನ್ನು ಪ್ರದರ್ಶಿಸುತ್ತದೆ. ಹಾಗಾಗಿ ನಾನ್‌-ಸ್ಯಾಲರೀಡ್‌ ವ್ಯಕ್ತಿಗೆ ಆನ್‌ಲೈನ್‌ನಲ್ಲಿ ಐಟಿಆರ್ ಅನ್ನು ಫೈಲ್‌ ಮಾಡುವುದು ಹೇಗೆ ಎಂಬುದರ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿದುಕೊಂಡಿದ್ದೀರಿ.

[ಮೂಲ]

[ಮೂಲ]

ಆಫ್‌ಲೈನ್‌ ವಿಧಾನ

ನಾನ್‌-ಸ್ಯಾಲರೀಡ್‌ ವ್ಯಕ್ತಿಗೆ ಆಫ್‌ಲೈನ್‌ನಲ್ಲಿ ಐಟಿಆರ್ ಅನ್ನು ಫೈಲ್‌ ಮಾಡುವುದು ಹೇಗೆ ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಈ ಪ್ರಕ್ರಿಯೆಯ ಕುರಿತು ವಿವರವಾದ ಮಾಹಿತಿಯೂ ಇಲ್ಲಿದೆ.

ಹಂತ 1: ಇನ್‌ಕಮ್‌ ಟ್ಯಾಕ್ಸ್‌ ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಿ.

ಹಂತ 2: ಆನ್‌ಲೈನ್ ಫೈಲಿಂಗ್ ಪ್ರೊಸೆಸ್‌ನ 1 ರಿಂದ 3 ಹಂತಗಳನ್ನು ಅನುಸರಿಸಿ.

ಹಂತ 3: ಈಗ, ಎಂಎಸ್ ಎಕ್ಸೆಲ್ ಫಾರ್ಮ್ಯಾಟ್‌ನಲ್ಲಿ ಫೈಲ್ ಅನ್ನು ಡೌನ್‌ಲೋಡ್ ಮಾಡಿ. ಇದು ನಿಮ್ಮ ಡಿವೈಸ್‌ನಲ್ಲಿ ಜಿಪ್ ಫೈಲ್ ಆಗಿ ಸೇವ್ ಆಗುತ್ತದೆ. ನಂತರ, ಫೈಲ್ ಅನ್ನು ಎಕ್ಟ್‌ಟ್ರಾಕ್ಟ್‌ ಮಾಡಿ ಮತ್ತು ಅದನ್ನು ತೆರೆಯಿರಿ. ನೀವು ನಿಮ್ಮ ಖಾತೆಗೆ ಲಾಗ್ ಇನ್ ಆಗಬಹುದು ಮತ್ತು "ಡೌನ್‌ಲೋಡ್‌ ಪ್ರೀ-ಫಿಲ್ಲ್‌ಡ್‌ ಎಕ್ಸ್‌ಎಂಎಲ್‌" ಅನ್ನು ಆಯ್ಕೆ ಮಾಡಿ ಮತ್ತು ಲಭ್ಯವಿರುವ ವಿವರಗಳನ್ನು ಪ್ರಿ-ಫಿಲ್ ಆಗುವುದನ್ನು ಬಳಸಲು ಇಂಪೋರ್ಟ್ ಮಾಡಿಕೊಳ್ಳಬಹುದು.

ಹಂತ 4: ಮುಂದೆ, ಆನ್‌ಲೈನ್ ವಿಧಾನದಲ್ಲಿ ವಿವರಿಸಿದ ಪ್ರೊಸೆಸ್‌ನಂತೆಯೇ ಅಗತ್ಯವಿರುವ ಮಾಹಿತಿಯೊಂದಿಗೆ ಎಲ್ಲಾ ಫೀಲ್ಡ್ ಗಳನ್ನು ಭರ್ತಿ ಮಾಡಿ.

ಹಂತ 5: ಎಕ್ಸ್‌ಎಂಎಲ್‌ ಅನ್ನು ರಚಿಸಿ ಮತ್ತು ಅದನ್ನು ಸೇವ್‌ ಮಾಡಿ.

ಹಂತ 6: ಮತ್ತೊಮ್ಮೆ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ ಮತ್ತು ನಿಮ್ಮ ಯೂಸರ್ ಐಡಿ, ಪಾಸ್‌ವರ್ಡ್ ಮತ್ತು ಸೆಕ್ಯುರಿಟಿ ಕೋಡ್‌ನೊಂದಿಗೆ ಸೈನ್ ಇನ್ ಆಗಿ.

ಹಂತ 7: "ಇ-ಫೈಲ್" ಮೆನುವಿನಿಂದ "ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್" ಆಯ್ಕೆಮಾಡಿ.

ಹಂತ 8: ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಪೇಜಿಗೆ ನಿಮ್ಮನ್ನು ಮರುನಿರ್ದೇಶಿಸಲಾಗುತ್ತದೆ, ಅಲ್ಲಿ ನೀವು ಅಗತ್ಯವಿರುವ ಮೌಲ್ಯಮಾಪನ ವರ್ಷ, ಫೈಲಿಂಗ್ ವಿಧ ಮತ್ತು ಐಟಿಆರ್ ಫಾರ್ಮ್ ವಿಧವನ್ನು ಆಯ್ಕೆ ಮಾಡಬೇಕಾಗುತ್ತದೆ. ಸಬ್‌ಮಿಷನ್‌ ಮೋಡ್ ಅಡಿಯಲ್ಲಿ "ಅಪ್ಲೋಡ್ ಎಕ್ಸ್‌ಎಂಎಲ್‌" ಮೇಲೆ ಕ್ಲಿಕ್ ಮಾಡಿ.

ಹಂತ 9: ಐಟಿಆರ್‌ ಅನ್ನು ವೆರಿಫೈ ಮಾಡುವ ಆಯ್ಕೆಗಳಿಂದ ಆರಿಸಿಕೊಳ್ಳಿ ಮತ್ತು "ಕಂಟಿನ್ಯೂ" ಒತ್ತಿರಿ.

ಹಂತ 10: ನಿಮ್ಮ ಐಟಿಆರ್‌ ಎಕ್ಸ್‌ಎಂಎಲ್‌ ಫೈಲ್ ಅನ್ನು ಅಪ್‌ಲೋಡ್ ಮಾಡಿ ಮತ್ತು ನೀವು ಆಯ್ಕೆಮಾಡಿದ ವೆರಿಫಿಕೇಷನ್‌ ವಿಧವನ್ನು ಅವಲಂಬಿಸಿ ಇತರ ಅಗತ್ಯ ಡಾಕ್ಯಮೆಂಟ್‌ಗಳನ್ನು ಲಗತ್ತಿಸಿ. "ಸಬ್‌ಮಿಟ್‌" ಮೇಲೆ ಕ್ಲಿಕ್ ಮಾಡಿ.

ನಾನ್‌-ಸ್ಯಾಲರೀಡ್‌ ವ್ಯಕ್ತಿಗೆ ವಿವಿಧ ರೀತಿಯಲ್ಲಿ ಐಟಿಆರ್ ಅನ್ನು ಫೈಲ್‌ ಮಾಡುವುದು ಹೇಗೆ ಎಂಬುದರ ವಿವರವಾದ ವಿವರಣೆಯನ್ನು ನೀವು ಹೊಂದಿದ್ದೀರಿ.

ನಾನ್-ಟ್ಯಾಕ್ಸೇಬಲ್ ಇನ್‌ಕಮ್‌ಗೆ ಐಟಿಆರ್ ಅನ್ನು ಫೈಲ್‌ ಮಾಡುವುದು ಹೇಗೆ ಎಂಬುದನ್ನು ಸಹ ನೀವು ತಿಳಿದುಕೊಳ್ಳಬೇಕು ಎಂಬುದನ್ನು ನೆನಪಿನಲ್ಲಿಡಿ.

[ಮೂಲ]

ನಾನ್‌-ಸ್ಯಾಲರೀಡ್‌ ವ್ಯಕ್ತಿಗೆ ಐಟಿಆರ್‌(ITR) ಫೈಲ್‌ ಮಾಡುವ ಪ್ರಯೋಜನಗಳು

ಈಗ, ಐಟಿಆರ್ ಫೈಲಿಂಗ್‌ನ ಸುದೀರ್ಘ ಪ್ರೊಸೆಸ್ ಮೂಲಕ ಮುಂದುವುರಿಯುವುದು ನಿಜವಾಗಿಯೂ ಯೋಗ್ಯವೇ ಎಂದು ನೀವು ಆಶ್ಚರ್ಯ ಪಡಬಹುದು. ಸರಿಯಾಗಿದೆ, ಅದು ಹೌದು, ಮತ್ತು ಅದಕ್ಕೆ ಪುರಾವೆಯಾಗಿ, ಈ ಪ್ರೊಸೆಸ್ ಅನ್ನು ಪೂರ್ಣಗೊಳಿಸುವುದರಿಂದಾಗುವ ಪ್ರಯೋಜನಗಳನ್ನು ನಾವು ಈ ಕೆಳಗೆ ಪಟ್ಟಿ ಮಾಡಿದ್ದೇವೆ.

  • ಒಂದು ವೇಳೆ ನೀವು ಮೌಲ್ಯಮಾಪನ ವರ್ಷಕ್ಕೆ ನಿಮ್ಮ ಲಯಬಿಲಿಟಿಯನ್ನು ಮೀರಿದ ಟ್ಯಾಕ್ಸ್‌ಗಳನ್ನು ಪಾವತಿಸಿದ್ದರೆ, ನೀವು ಈ ಹೆಚ್ಚುವರಿ ಮೊತ್ತವನ್ನು ಐಟಿಆರ್‌ ಫೈಲಿಂಗ್ ಮೂಲಕ ರಿಫಂಡ್ ಆಗಿ ಕ್ಲೈಮ್ ಮಾಡಿ ಮತ್ತು ನಿಮ್ಮ ಇನ್‌ಕಮ್‌ ಅನ್ನು ಉಳಿಸಿ.
  • ಅಂತಿಮ ದಿನಾಂಕದೊಳಗೆ ರಿಟರ್ನ್‌ಗಳನ್ನು ಫೈಲ್ ಮಾಡುವುದರಿಂದ ಟ್ಯಾಕ್ಸ್‌ಪೇಯರ್‌ ತಮ್ಮ "ಲಾಸ್ ಆಫ್ ಇನ್‌ಕಮ್‌" ಅನ್ನು ಮುಂದಿನ ವರ್ಷಗಳಿಗೆ ಕ್ಯಾರಿ ಫಾರ್ವರ್ಡ್ ಮಾಡಲು ಅನುಕೂಲ ಆಗುತ್ತದೆ, ಒಂದು ವೇಳೆ ಅಮೌಂಟ್ ಪ್ರಸಕ್ತ ವರ್ಷದ ಇನ್‌ಕಮ್‌ ಮೀರಿದ್ದರೆ.
  • ಹೆಚ್ಚಿನ ಹಣಕಾಸು ಸಂಸ್ಥೆಗಳು ಲೋನ್ ಮಂಜೂರು ಮಾಡುವಾಗ ಐಟಿಆರ್ ಕಾಪಿಗಳನ್ನು ಕೇಳುತ್ತವೆ. ಆದ್ದರಿಂದ, ನಿಮ್ಮ ರಿಟರ್ನ್‌ಗಳನ್ನು ಫೈಲ್ ಮಾಡುವುದು ಅಂತಹ ಹಣಕಾಸು ಉತ್ಪನ್ನಗಳನ್ನು ತ್ವರಿತವಾಗಿ ಅಪ್ರೂವ್ ಮಾಡಲು ನಿಮಗೆ ಸಹಾಯ ಮಾಡುತ್ತದೆ.
  • ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್ ನಿಮ್ಮ ನಿವಾಸದ ಪುರಾವೆಯಾಗಿ ಕಾರ್ಯನಿರ್ವಹಿಸಬಹುದು. ಇದು ಇನ್‌ಕಮ್‌ನ ಪುರಾವೆಯಾಗಿ ಕಾರ್ಯನಿರ್ವಹಿಸಬಹುದು, ಅದು ಸ್ವತಂತ್ರ ವೃತ್ತಿಪರರು ಮತ್ತು ಫ್ರೀಲಾನ್ಸರ್‌ಗಳಿಗೆ ವರದಾನವಾಗಿದೆ.
  • ವೀಸಾ ಅಪ್ಲಿಕೇಷನ್‌ಗಳಿಗೆ ಐಟಿಆರ್ ಕಾಪಿಗಳು ಕಡ್ಡಾಯ ಡಾಕ್ಯುಮೆಂಟ್ ಆಗಿದೆ.
  • ನಿಮ್ಮ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಕಾಪಿಗಳು ಅಗತ್ಯವಿರುವ ಇತರ ಪ್ರಕ್ರಿಯೆಗಳೆಂದರೆ ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ ಮತ್ತು ಹೆಚ್ಚಿನ ಕವರೇಜ್‌ನ ಇನ್ಶೂರೆನ್ಸ್ ಪಾಲಿಸಿಗಳನ್ನು ಪಡೆಯುವಾಗ.
  • ಬಹು ಮುಖ್ಯವಾಗಿ, ಅಂತಿಮ ದಿನಾಂಕದೊಳಗೆ ನಿಮ್ಮ ರಿಟರ್ನ್‌ಗಳನ್ನು ಫೈಲ್ ಮಾಡುವುದರಿಂದ ಭವಿಷ್ಯದಲ್ಲಿ ಭಾರೀ ಪೆನಲ್ಟಿಗಳು, ಇಂಟರೆಸ್ಟ್‌ಗಳು ಮತ್ತು ಕಾನೂನು ತೊಡಕುಗಳನ್ನು ತಪ್ಪಿಸಲು ಸಹಾಯ ಆಗುತ್ತದೆ.

ಈಗ ನೀವು ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡುವ ಹಲವಾರು ಪ್ರಯೋಜನಗಳ ಬಗ್ಗೆ ತಿಳಿದಿರುವಿರಿ, ಕೆಲವು ಮುನ್ನೆಚ್ಚರಿಕೆಗಳ ಬಗ್ಗೆಯೂ ಗಮನವಿರಲಿ.

ಐಟಿಆರ್(ITR) ಫೈಲ್ ಮಾಡುವಾಗ ನೀವು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?

ಟ್ಯಾಕ್ಸ್‌ಪೇಯರ್‌ ತಮ್ಮ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್ ಫೈಲ್ ಮಾಡುವಾಗ ಗಮನಹರಿಸಬೇಕಾದ ಕೆಲವು ಕ್ರಮಗಳು ಇಲ್ಲಿವೆ.

  • ಅಂತಿಮ ದಿನಾಂಕದೊಂದಿಗೆ ಯಾವಾಗಲೂ ಅಪ್‌ಡೇಟ್ ಆಗಿರಿ ಮತ್ತು ಅದಕ್ಕೂ ಮೊದಲು ನಿಮ್ಮ ರಿಟರ್ನ್‌ಗಳನ್ನು ಫೈಲ್ ಮಾಡಲು ಪ್ರಯತ್ನಿಸಿ.
  • ಒಂದು ವೇಳೆ ಅಂತಿಮ ದಿನಾಂಕ ಮೀರಿದರೆ ಮತ್ತು ನೀವು ತಡವಾಗಿ ರಿಟರ್ನ್ ಅನ್ನು ಫೈಲ್ ಮಾಡುತ್ತಿದ್ದರೆ, ಅಪ್ಲಿಕೇಬಲ್ ಆಗುವ ಹಲವಾರು ತಡವಾದ ಪೆನಲ್ಟಿಗಳನ್ನು ನೆನಪಿನಲ್ಲಿಡಿ. [ಮೂಲ]
  • ಅಪ್ಲಿಕೇಬಲ್ ಆಗುವ ರಿಟರ್ನ್‌ಗಳನ್ನು ಫೈಲ್ ಮಾಡುವ ಮೊದಲು ಪಾವತಿಸಿದ ನಿಮ್ಮ ನಿಜವಾದ ಟ್ಯಾಕ್ಸ್ ಅನ್ನು ಚೆಕ್ ಮಾಡಲು ಫಾರ್ಮ್ 26AS ಅನ್ನು ಡೌನ್‌ಲೋಡ್ ಮಾಡಲು ಮರೆಯಬೇಡಿ.
  • ನಿಮ್ಮ ಟ್ಯಾಕ್ಸೇಷನ್ ವರ್ಗಕ್ಕೆ ಅನುಗುಣವಾಗಿ ನೀವು ಸರಿಯಾದ ಐಟಿಆರ್ ಫಾರ್ಮ್ ಅನ್ನು ಆರಿಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ನಿಮ್ಮ ಒಟ್ಟು ಇನ್‌ಕಮ್‌, ಟ್ಯಾಕ್ಸ್‌ ಲಯಬಿಲಿಟಿ ಮತ್ತು ಪಾವತಿಸಿದ ಟ್ಯಾಕ್ಸ್ ಅನ್ನು ಎಚ್ಚರಿಕೆಯಿಂದ ಕ್ಯಾಲ್ಕುಲೇಟ್ ಮಾಡಿ. ರಿಟರ್ನ್ಸ್ ಫೈಲ್ ಮಾಡಲು ಮುಂದುವರಿಯುವ ಮೊದಲು ಎಲ್ಲಾ ಬಾಕಿಗಳನ್ನು ತೆರವುಗೊಳಿಸಿ.
  • ತೊಂದರೆ-ಮುಕ್ತ ಪ್ರಕ್ರಿಯೆಗಾಗಿ ಐಟಿಆರ್ ಫೈಲಿಂಗ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳ ಪಟ್ಟಿಯನ್ನು ಚೆಕ್‌ ಮಾಡಿ.
  • ನಿಮ್ಮ ಐಟಿಆರ್ ಫಾರ್ಮ್ ಅನ್ನು ಭರ್ತಿ ಮಾಡುವಾಗ, ನಮೂದಿಸಿದ ಎಲ್ಲಾ ವಿವರಗಳು ಸರಿಯಾಗಿವೆಯೇ ಎಂದು ಎರಡು ಬಾರಿ ಚೆಕ್ ಮಾಡಿ.

ಮೇಲಿನ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದರಿಂದ ತಡೆರಹಿತ ಐಟಿಆರ್ ಫೈಲಿಂಗ್ ಪ್ರೊಸೆಸ್‌ನಲ್ಲಿ, ನೀವು ಈಗಾಗಲೇ ಕಲಿತಿರುವ ಹಂತಗಳಲ್ಲಿ ಮಾತ್ರ ಸಹಾಯ ಆಗುತ್ತದೆ. ನಾನ್‌-ಸ್ಯಾಲರೀಡ್‌ ವ್ಯಕ್ತಿಗೆ ಐಟಿಆರ್ ಅನ್ನು ಫೈಲ್‌ ಮಾಡುವುದು ಹೇಗೆ ಎಂಬುದರ ಕುರಿತು ಈಗ ನಿಮಗೆ ತಿಳಿದಿದೆ, ನಿಮಗೆ ಅಪ್ಲಿಕೇಬಲ್ ಆಗುವ ಅಂತಿಮ ದಿನಾಂಕದೊಳಗೆ ಪ್ರೊಸೆಸ್ ಅನ್ನು ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಿ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ಐಟಿಆರ್(ITR) ಫೈಲ್ ಮಾಡುವಾಗ ನನ್ನ ಡಿಜಿಟಲ್ ಸಹಿಯನ್ನು ಅಟ್ಯಾಚ್ ಮಾಡಲು ನಾನು ಮರೆತರೆ ನಾನು ಏನು ಮಾಡಬೇಕು?

ನೀವು ಫೈಲ್ ಮಾಡಿದ ಐಟಿಆರ್ ಫಾರ್ಮ್‌ನೊಂದಿಗೆ ನಿಮ್ಮ ಡಿಜಿಟಲ್ ಸಹಿಯನ್ನು ಅಟ್ಯಾಚ್ ಮಾಡಲು ನೀವು ಮರೆತಿದ್ದರೆ, ಇ-ಫೈಲಿಂಗ್ ಮಾಡಿದ 30 ದಿನಗಳ ಒಳಗಾಗಿ ನಿಮ್ಮ ಸಹಿ ಮಾಡಿದ ಐಟಿಆರ್-ವಿ ಅನ್ನು ಬೆಂಗಳೂರಿನ ಸಿಪಿಸಿಗೆ ಸಬ್‌ಮಿಟ್‌ ಮಾಡುವ ಮೂಲಕ ನಿಮ್ಮ ಟ್ಯಾಕ್ಸ್ ರಿಟರ್ನ್ಸ್ ಅನ್ನು ನೀವು ವೆರಿಫೈ ಮಾಡಬಹುದು. 

[ಮೂಲ]

ನಾನು ಈಗ 2 ವರ್ಷಗಳಿಂದ ಐಟಿಆರ್(ITR) ಅನ್ನು ಫೈಲ್ ಮಾಡದೇ ಇದ್ದಲ್ಲಿ ನಾನು ಅದನ್ನು ಫೈಲ್‌ ಮಾಡುವುದು ಹೇಗೆ?

ಪೆನಲ್ಟಿಯನ್ನು ಪಾವತಿಸುವ ಮೂಲಕ ಮತ್ತು ಸೆಕ್ಷನ್ 139(8A)ನ ಎಲ್ಲಾ ಷರತ್ತುಗಳನ್ನು ಅನುಸರಿಸುವ ಮೂಲಕ ಮೌಲ್ಯಮಾಪನ ವರ್ಷದ ಅಂತ್ಯದಿಂದ 24 ತಿಂಗಳೊಳಗೆ ನೀವು ಅಪ್‌ಡೇಟೆಡ್‌ ರಿಟರ್ನ್ ಅನ್ನು ಫೈಲ್ ಮಾಡಬಹುದು. 

[ಮೂಲ]

ನನಗೆ ಇನ್‌ಕಮ್‌ ಇಲ್ಲದಿದ್ದರೂ ಐಟಿಆರ್(ITR) ಫೈಲ್ ಮಾಡಬಹುದೇ?

ಹೌದು, ನೀವು ಯಾವುದೇ ವಿಧದ ಐಟಿಆರ್ ಅನ್ನು ಫೈಲ್ ಮಾಡುವಾಗ ಇದೇ ಪ್ರೊಸೆಸ್‌ನಲ್ಲಿ ನಿಲ್ ರಿಟರ್ನ್ ಅನ್ನು ಫೈಲ್ ಮಾಡಬಹುದು.