ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ಪ್ರೊಸೆಸ್‌ಗಳಲ್ಲಿ ನಿಮ್ಮ ಐಟಿಆರ್ ಅನ್ನು ನೀವು ಫೈಲ್ ಮಾಡಬಹುದು.
ಆನ್‌ಲೈನ್ ವಿಧಾನ
ನಾನ್-ಸ್ಯಾಲರೀಡ್ ಉದ್ಯೋಗಿಗಳಿಗೆ ಆನ್‌ಲೈನ್‌ನಲ್ಲಿ ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡುವುದು ಹೇಗೆ ಎಂಬುದರ ಕುರಿತು ಹಂತ ಹಂತವಾದ ಗೈಡ್ ಇಲ್ಲಿದೆ.
ಹಂತ 1: ಇನ್‌ಕಮ್ ಟ್ಯಾಕ್ಸ್ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ.
ಹಂತ 2: ಬಲ ಸೈಡ್‌ಬಾರ್‌ನಲ್ಲಿರುವ "ಐಟಿ ರಿಟರ್ನ್ ಪ್ರಿಪರೇಷನ್ ಸಾಫ್ಟ್‌ವೇರ್" ಮೇಲೆ ಕ್ಲಿಕ್ ಮಾಡಿ.
ಹಂತ 3 (Step 3): ಮುಂದಿನ ಸ್ಕ್ರೀನ್ ನಲ್ಲಿ, ಡ್ರಾಪ್-ಡೌನ್ ಮೆನುನಲ್ಲಿ ಸರಿಯಾದ ಮೌಲ್ಯಮಾಪನ ವರ್ಷವನ್ನು ಆಯ್ಕೆ ಮಾಡಿ.
ಐಟಿಆರ್ ಡ್ರಾಪ್ ಡೌನ್
ಹಂತ 4 (Step 4): ಕೆಳಗೆ ಸ್ಕ್ರೋಲ್ ಮಾಡುತ್ತಾ, ನೀವು ಡೌನ್‌ಲೋಡ್ ಮಾಡಬಹುದಾದ ಸ್ವರೂಪಗಳಲ್ಲಿ ಪಟ್ಟಿ ಮಾಡಲಾದ ಎಲ್ಲಾ ಐಟಿಆರ್ ಫಾರ್ಮ್‌ಗಳನ್ನು ಕಾಣಬಹುದು.
ಐಟಿಆರ್ ಫಾರ್ಮ್‌ಗಳು
ನಾನ್-ಸ್ಯಾಲರೀಡ್ ವ್ಯಕ್ತಿಯಾಗಿ ಐಟಿಆರ್ ಫೈಲ್ ಮಾಡಲು, ನಿಮ್ಮ ಸೂಕ್ತತೆಗೆ ಅನುಗುಣವಾಗಿ ಐಟಿಆರ್ -5, ಐಟಿಆರ್ -6 ಮತ್ತು ಐಟಿಆರ್ -7 ಫಾರ್ಮ್‌ಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ. ಎಂಎಸ್ ಎಕ್ಸೆಲ್ ಅಥವಾ ಜಾವಾ ಆವೃತ್ತಿ ಇವೆರಡರಲ್ಲಿ ನಿಮ್ಮ ಡಿವೈಸ್ ಯಾವುದನ್ನು ಸಪೋರ್ಟ್ ಮಾಡುತ್ತದೆ ಎಂಬುದರ ಆಧಾರದಲ್ಲಿ ಒಂದನ್ನು ಡೌನ್‌ಲೋಡ್ ಮಾಡಿ.
ಹಂತ 5 (Step 5): ಫೈಲ್ ಅನ್ನು ಜಿಪ್ ಸ್ವರೂಪದಲ್ಲಿ ಡೌನ್‌ಲೋಡ್ ಮಾಡಲಾಗುತ್ತದೆ. ಅದನ್ನು ಎಕ್ಸ್‌ಟ್ರಾಕ್ಟ್ ಮಾಡಿ ಮತ್ತು ಫಾರ್ಮ್ ಅನ್ನು ತೆರೆಯಿರಿ.
ಹಂತ 6 (Step 6): ಫೈಲ್ ಅನ್ನು ತೆರೆಯುವಾಗ, ನೀವು ಹಲವಾರು ಟ್ಯಾಬ್‌ಗಳು/ಸೆಕ್ಷನ್‌ಗಳನ್ನು ಕಾಣಬಹುದು, ಅದರ ಅಡಿಯಲ್ಲಿ ನೀವು ವಿವಿಧ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ.
ಹಂತ 7 (Step 7): ಮೊದಲ ಟ್ಯಾಬ್ “ಪಾರ್ಟ್ ಎ – ಜನರಲ್ (1)”, ಅಡಿಯಲ್ಲಿ ನೀವು ಹೆಸರು, ಜನನ ದಿನಾಂಕ, ವಿಳಾಸ ಮುಂತಾದ ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಬೇಕಾಗುತ್ತದೆ. ಈ ವಿವರಗಳನ್ನು ತ್ವರಿತವಾಗಿ ತುಂಬಲು ನೀವು ಬಯಸಿದರೆ, ಮೇಲೆ ಇರುವ "ಪ್ರೀ-ಫಿಲ್" ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 8 (Step 8): ಮುಂದೆ, "ಪ್ರಿ-ಫಿಲ್ ಐಟಿಆರ್" ಶೀರ್ಷಿಕೆಯ ಡೈಲಾಗ್ ಬಾಕ್ಸ್ ಪಾಪ್ ಅಪ್ ಆಗುತ್ತದೆ, ಅಲ್ಲಿ ನಿಮ್ಮ ಇ-ಫೈಲಿಂಗ್ ಯೂಸರ್ ಐಡಿ, ಪಾಸ್‌ವರ್ಡ್ ಮತ್ತು ಇನ್‌ಕಾರ್ಪೋರೇಷನ್/ಎರಡರ ದಿನಾಂಕವನ್ನು ನಮೂದಿಸಬೇಕು. "ಪ್ರೀ-ಫಿಲ್ ಅಡ್ರೆಸ್" ಜೊತೆಗೆ, "ಫ್ರಮ್ ಪ್ಯಾನ್ ಡೀಟೇಲ್ಸ್" ಮತ್ತು "ಫ್ರಮ್ ಐಟಿಆರ್ ಫಾರ್ಮ್ ಫೈಲ್‌ಡ್" ಇವುಗಳಲ್ಲಿ ಒಂದನ್ನು ಆಯ್ಕೆಮಾಡಿ. ನಂತರ, "ಪ್ರಿ-ಫಿಲ್" ಒತ್ತಿ ಮತ್ತು ಆಮೇಲೆ "ಓಕೆ" ಕ್ಲಿಕ್ ಮಾಡಿ. ಅಗತ್ಯವಿರುವ ಮಾಹಿತಿ ಬೇಕಾದಲ್ಲಿ ಇದು ಹೆಚ್ಚಿನ ಫೀಲ್ಡ್ ಗಳನ್ನು ತುಂಬುತ್ತದೆ.
ಹಂತ 9 (Step 9): ಈಗ, ನೀವು ಇನ್ನೂ ಖಾಲಿ ಇರುವ ಇತರ ಕಡ್ಡಾಯ ಫೀಲ್ಡ್ ಗಳನ್ನು ಮ್ಯಾನ್ಯುವಲೀ ಭರ್ತಿ ಮಾಡಬೇಕಾಗುತ್ತದೆ. ಅಲ್ಲದೆ, ಕಂಪನಿಯ ವಿಧವನ್ನು ಆಯ್ಕೆಮಾಡಿ ಮತ್ತು ಅದು ಖಾಸಗಿ ಅಥವಾ ಸಾರ್ವಜನಿಕ ಕಂಪನಿಯಾಗಿದ್ದರೆ ನಮೂದಿಸಿ.
ಹಂತ 10 (Step 10): ಮುಂದೆ, "ಫೈಲಿಂಗ್ ಸ್ಟೇಟಸ್" ಅಡಿಯಲ್ಲಿ, ಫೈಲಿಂಗ್ ಮಾಡುವ ಸಮಯವನ್ನು ಅವಲಂಬಿಸಿ ಸೆಕ್ಷನ್ ಅನ್ನು ಆಯ್ಕೆಮಾಡಿ, ಅಂದರೆ, ಅಂತಿಮ ದಿನಾಂಕದ ಮೊದಲು ಅಥವಾ ನಂತರ, ಮತ್ತು ರಿಟರ್ನ್ ಪ್ರಕಾರ, ಅದೆಂದರೆ, ಪರಿಷ್ಕೃತ ಮಾಡಿರುವುದು ಅಥವಾ ಮಾರ್ಪಡಿಸಲಾಗಿರುವುದು. ನೀವು ಆಯ್ಕೆ ಮಾಡಬೇಕಾದ ಉಳಿದ ಫೀಲ್ಡ್ ಗಳನ್ನು "ಯೆಸ್" ಮತ್ತು "ನೋ" ಎಂಬುದರ ನಡುವೆ ಭರ್ತಿ ಮಾಡಿ.
ಹಂತ 11 (Step 11): ನೀವು ಮೊದಲ ಸೆಕ್ಷನ್ ಭರ್ತಿ ಮಾಡಿದ ನಂತರ, ಮುಂದಿನದಕ್ಕೆ ಹೋಗಿ ಮತ್ತು ಅದೇ ರೀತಿ ಅಗತ್ಯವಿರುವ ಎಲ್ಲಾ ಫೀಲ್ಡ್ ಗಳನ್ನು ಭರ್ತಿ ಮಾಡಿ. ಸಂಪೂರ್ಣ ಫಾರ್ಮ್ ತುಂಬುವವರೆಗೆ ಪ್ರೊಸೆಸ್ ಅನ್ನು ಮುಂದುವರಿಸಿ.
ಹಂತ 12 (Step 12): ನೀವು ಅಂತಿಮ ದಿನಾಂಕದ ನಂತರ ರಿಟರ್ನ್ ಫೈಲ್ ಮಾಡುತ್ತಿದ್ದರೆ ಮತ್ತು ಪೆನಲ್ಟಿ ಪಾವತಿಸುವಂತಿದ್ದರೆ, "ಪಾರ್ಟ್ ಬಿ - ಟಿಟಿಐ" ಅಡಿಯಲ್ಲಿರುವ "ಇ-ಪೇ ಟ್ಯಾಕ್ಸ್" ಮೇಲೆ ಕ್ಲಿಕ್ ಮಾಡಿ. ಅದರ ನಂತರ, ನೀವು ಪೇಮೆಂಟ್ ಅನ್ನು ಪೂರ್ಣಗೊಳಿಸಿದ ಬಳಿಕ ಚಲನ್ ಅನ್ನು ರಚಿಸಲಾಗುತ್ತದೆ.
ಹಂತ 13 (Step 13): "ವೆರಿಫಿಕೇಷನ್" ಶೀರ್ಷಿಕೆಯ ಕೊನೆಯ ಟ್ಯಾಬ್ ಅಡಿಯಲ್ಲಿ ನಿಮ್ಮ ಹೆಸರು, ನಿಮ್ಮ ತಂದೆಯ ಹೆಸರು, ಸಂಬಂಧಪಟ್ಟ ಸಂಸ್ಥೆಯಲ್ಲಿನ ನಿಮ್ಮ ಹುದ್ದೆ, ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ದಿನಾಂಕವನ್ನು ನಿಮ್ಮ ಡಿಕ್ಲರೇಷನ್ ಪೂರ್ಣಗೊಳಿಸಲು ನಮೂದಿಸಿ.
ಹಂತ 14 (Step 14): ಯಾವುದೇ ತಪ್ಪಿದೆಯೇ ಎಂದು ಎಲ್ಲಾ ಭರ್ತಿ ಮಾಡಿದ ವಿವರಗಳನ್ನು ಚೆಕ್ ಮಾಡಿ. ಯಾವುದೇ ಎರರ್‌ಗಳಿಲ್ಲದಿದ್ದರೆ, "ಸಬ್‌ಮಿಟ್" ಬಟನ್ ಕ್ಲಿಕ್ ಮಾಡಿ.
ಹಂತ 15 (Step 15): ಸಬ್‌ಮಿಷನ್ ಅನ್ನು ದೃಢೀಕರಿಸಲು ನೀವು ಹೊಸ ವಿಂಡೋದಲ್ಲಿ ನಿಮ್ಮ ಯೂಸರ್ ಐಡಿ, ಪಾಸ್‌ವರ್ಡ್ ಮತ್ತು ಜನನ ದಿನಾಂಕವನ್ನು ನಮೂದಿಸಬೇಕಾಗುತ್ತದೆ. ಅಂತಿಮವಾಗಿ "ಓಕೆ" ಕ್ಲಿಕ್ ಮಾಡುವ ಮೊದಲು ಮುಂದಿನ ಡಯಲಾಗ್ ಬಾಕ್ಸ್‌ನಲ್ಲಿ ನಿಮ್ಮ ಯೂಸರ್ ಪಿನ್ ಅನ್ನು ಸಹ ನೀವು ನಮೂದಿಸಬೇಕಾಗುತ್ತದೆ.
ಮುಂದಿನ ಸ್ಕ್ರೀನ್ "ಐಟಿಆರ್ ಸಬ್‌ಮಿಟ್ಟೆಡ್ ಸಕ್ಸಸ್‌ಫುಲಿ" ಎಂಬ ಸಂದೇಶವನ್ನು ಪ್ರದರ್ಶಿಸುತ್ತದೆ. ಹಾಗಾಗಿ ನಾನ್-ಸ್ಯಾಲರೀಡ್ ವ್ಯಕ್ತಿಗೆ ಆನ್‌ಲೈನ್‌ನಲ್ಲಿ ಐಟಿಆರ್ ಅನ್ನು ಫೈಲ್ ಮಾಡುವುದು ಹೇಗೆ ಎಂಬುದರ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿದುಕೊಂಡಿದ್ದೀರಿ.
[ಮೂಲ]
[ಮೂಲ]
ಆಫ್‌ಲೈನ್ ವಿಧಾನ
ನಾನ್-ಸ್ಯಾಲರೀಡ್ ವ್ಯಕ್ತಿಗೆ ಆಫ್‌ಲೈನ್‌ನಲ್ಲಿ ಐಟಿಆರ್ ಅನ್ನು ಫೈಲ್ ಮಾಡುವುದು ಹೇಗೆ ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಈ ಪ್ರಕ್ರಿಯೆಯ ಕುರಿತು ವಿವರವಾದ ಮಾಹಿತಿಯೂ ಇಲ್ಲಿದೆ.
ಹಂತ 1: ಇನ್‌ಕಮ್ ಟ್ಯಾಕ್ಸ್ ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಿ.
ಹಂತ 2: ಆನ್‌ಲೈನ್ ಫೈಲಿಂಗ್ ಪ್ರೊಸೆಸ್‌ನ 1 ರಿಂದ 3 ಹಂತಗಳನ್ನು ಅನುಸರಿಸಿ.
ಹಂತ 3: ಈಗ, ಎಂಎಸ್ ಎಕ್ಸೆಲ್ ಫಾರ್ಮ್ಯಾಟ್‌ನಲ್ಲಿ ಫೈಲ್ ಅನ್ನು ಡೌನ್‌ಲೋಡ್ ಮಾಡಿ. ಇದು ನಿಮ್ಮ ಡಿವೈಸ್‌ನಲ್ಲಿ ಜಿಪ್ ಫೈಲ್ ಆಗಿ ಸೇವ್ ಆಗುತ್ತದೆ. ನಂತರ, ಫೈಲ್ ಅನ್ನು ಎಕ್ಟ್‌ಟ್ರಾಕ್ಟ್ ಮಾಡಿ ಮತ್ತು ಅದನ್ನು ತೆರೆಯಿರಿ. ನೀವು ನಿಮ್ಮ ಖಾತೆಗೆ ಲಾಗ್ ಇನ್ ಆಗಬಹುದು ಮತ್ತು "ಡೌನ್‌ಲೋಡ್ ಪ್ರೀ-ಫಿಲ್ಲ್‌ಡ್ ಎಕ್ಸ್‌ಎಂಎಲ್" ಅನ್ನು ಆಯ್ಕೆ ಮಾಡಿ ಮತ್ತು ಲಭ್ಯವಿರುವ ವಿವರಗಳನ್ನು ಪ್ರಿ-ಫಿಲ್ ಆಗುವುದನ್ನು ಬಳಸಲು ಇಂಪೋರ್ಟ್ ಮಾಡಿಕೊಳ್ಳಬಹುದು.
ಹಂತ 4: ಮುಂದೆ, ಆನ್‌ಲೈನ್ ವಿಧಾನದಲ್ಲಿ ವಿವರಿಸಿದ ಪ್ರೊಸೆಸ್‌ನಂತೆಯೇ ಅಗತ್ಯವಿರುವ ಮಾಹಿತಿಯೊಂದಿಗೆ ಎಲ್ಲಾ ಫೀಲ್ಡ್ ಗಳನ್ನು ಭರ್ತಿ ಮಾಡಿ.
ಹಂತ 5: ಎಕ್ಸ್‌ಎಂಎಲ್ ಅನ್ನು ರಚಿಸಿ ಮತ್ತು ಅದನ್ನು ಸೇವ್ ಮಾಡಿ.
ಹಂತ 6: ಮತ್ತೊಮ್ಮೆ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ ಮತ್ತು ನಿಮ್ಮ ಯೂಸರ್ ಐಡಿ, ಪಾಸ್‌ವರ್ಡ್ ಮತ್ತು ಸೆಕ್ಯುರಿಟಿ ಕೋಡ್‌ನೊಂದಿಗೆ ಸೈನ್ ಇನ್ ಆಗಿ.
ಹಂತ 7: "ಇ-ಫೈಲ್" ಮೆನುವಿನಿಂದ "ಇನ್‌ಕಮ್ ಟ್ಯಾಕ್ಸ್ ರಿಟರ್ನ್" ಆಯ್ಕೆಮಾಡಿ.
ಹಂತ 8: ಇನ್‌ಕಮ್ ಟ್ಯಾಕ್ಸ್ ರಿಟರ್ನ್ ಪೇಜಿಗೆ ನಿಮ್ಮನ್ನು ಮರುನಿರ್ದೇಶಿಸಲಾಗುತ್ತದೆ, ಅಲ್ಲಿ ನೀವು ಅಗತ್ಯವಿರುವ ಮೌಲ್ಯಮಾಪನ ವರ್ಷ, ಫೈಲಿಂಗ್ ವಿಧ ಮತ್ತು ಐಟಿಆರ್ ಫಾರ್ಮ್ ವಿಧವನ್ನು ಆಯ್ಕೆ ಮಾಡಬೇಕಾಗುತ್ತದೆ. ಸಬ್‌ಮಿಷನ್ ಮೋಡ್ ಅಡಿಯಲ್ಲಿ "ಅಪ್ಲೋಡ್ ಎಕ್ಸ್‌ಎಂಎಲ್" ಮೇಲೆ ಕ್ಲಿಕ್ ಮಾಡಿ.
ಹಂತ 9: ಐಟಿಆರ್ ಅನ್ನು ವೆರಿಫೈ ಮಾಡುವ ಆಯ್ಕೆಗಳಿಂದ ಆರಿಸಿಕೊಳ್ಳಿ ಮತ್ತು "ಕಂಟಿನ್ಯೂ" ಒತ್ತಿರಿ.
ಹಂತ 10: ನಿಮ್ಮ ಐಟಿಆರ್ ಎಕ್ಸ್‌ಎಂಎಲ್ ಫೈಲ್ ಅನ್ನು ಅಪ್‌ಲೋಡ್ ಮಾಡಿ ಮತ್ತು ನೀವು ಆಯ್ಕೆಮಾಡಿದ ವೆರಿಫಿಕೇಷನ್ ವಿಧವನ್ನು ಅವಲಂಬಿಸಿ ಇತರ ಅಗತ್ಯ ಡಾಕ್ಯಮೆಂಟ್‌ಗಳನ್ನು ಲಗತ್ತಿಸಿ. "ಸಬ್‌ಮಿಟ್" ಮೇಲೆ ಕ್ಲಿಕ್ ಮಾಡಿ.
ನಾನ್-ಸ್ಯಾಲರೀಡ್ ವ್ಯಕ್ತಿಗೆ ವಿವಿಧ ರೀತಿಯಲ್ಲಿ ಐಟಿಆರ್ ಅನ್ನು ಫೈಲ್ ಮಾಡುವುದು ಹೇಗೆ ಎಂಬುದರ ವಿವರವಾದ ವಿವರಣೆಯನ್ನು ನೀವು ಹೊಂದಿದ್ದೀರಿ.
ನಾನ್-ಟ್ಯಾಕ್ಸೇಬಲ್ ಇನ್‌ಕಮ್‌ಗೆ ಐಟಿಆರ್ ಅನ್ನು ಫೈಲ್ ಮಾಡುವುದು ಹೇಗೆ ಎಂಬುದನ್ನು ಸಹ ನೀವು ತಿಳಿದುಕೊಳ್ಳಬೇಕು ಎಂಬುದನ್ನು ನೆನಪಿನಲ್ಲಿಡಿ.
[ಮೂಲ]