ಸೆಕ್ಷನ್ 80C ಅಡಿಯಲ್ಲಿ ಇನ್ಕಮ್ ಟ್ಯಾಕ್ಸ್ ಡಿಡಕ್ಷನ್
ಸೆಕ್ಷನ್ 80C ಅಡಿಯಲ್ಲಿ ಡಿಡಕ್ಷನ್ ಬಗ್ಗೆ ಎಲ್ಲ ಮಾಹಿತಿ
ಭಾರತದ ಸಂವಿಧಾನದ ಪ್ರಕಾರ, ಭಾರತ ಸರ್ಕಾರವು ಭಾರತದಲ್ಲಿ ಜನರೇಟ್ ಆಗುವ ಯಾವುದೇ ಇನ್ಕಮ್ ಮೇಲೆ (ಕೃಷಿ ಆದಾಯವನ್ನು ಹೊರತುಪಡಿಸಿ) ಇನ್ಕಮ್ ಟ್ಯಾಕ್ಸ್ ಆ್ಯಕ್ಟ್, 1961 ರ ಅಡಿಯಲ್ಲಿ ನಿಯಮಾವಳಿಗಳಿಗೆ ಅನುಗುಣವಾಗಿ, ಟ್ಯಾಕ್ಸ್ ಅನ್ನು ವಿಧಿಸಬಹುದು.
ಈ ಟ್ಯಾಕ್ಸ್ ಅನ್ನು ವ್ಯಕ್ತಿಗಳು, ಹಿಂದೂ ಅವಿಭಜಿತ ಕುಟುಂಬಗಳು, ಸಂಸ್ಥೆಗಳು, ಕಂಪನಿಗಳು, ಎಲ್ಎಲ್‌ಪಿಗಳು, ಏಕವ್ಯಕ್ತಿ ಸಂಸ್ಥೆಗಳು, ವ್ಯಕ್ತಿಗಳ ಸಂಘಗಳು ಅಥವಾ ಇತರ ಕೃತಕ ನ್ಯಾಯಾಂಗ ವ್ಯಕ್ತಿಗಳಿಂದ ಗಳಿಸಿದ ಇನ್ಕಮ್‌ನ ಮೇಲೆ ವಿಧಿಸಲಾಗುತ್ತದೆ.
ಈ ಟ್ಯಾಕ್ಸೇಶನ್ ಲಯಬಿಲಿಟಿಗಳನ್ನು ಕಡಿಮೆ ಮಾಡಲು, ಇನ್ಕಮ್ ಟ್ಯಾಕ್ಸ್ ಆ್ಯಕ್ಟ್ ಕೆಲವು ಟ್ಯಾಕ್ಸ್ ವಿನಾಯಿತಿ ಷರತ್ತುಗಳನ್ನು ಮುಂದಿಡುತ್ತದೆ. ಇದು ಜನರಿಗೆ ತಮ್ಮ ಇನ್ಕಮ್ ಟ್ಯಾಕ್ಸ್ ಪಾವತಿಗಳಲ್ಲಿ ಗಣನೀಯ ಮೊತ್ತವನ್ನು ಉಳಿಸಲು ಸಹಾಯ ಮಾಡುತ್ತದೆ.
ಇನ್ಕಮ್ ಟ್ಯಾಕ್ಸ್ ಆ್ಯಕ್ಟ್, 1961 ರ ಸೆಕ್ಷನ್ 80C
ಸೆಕ್ಷನ್ 80C ಅಡಿಯಲ್ಲಿ, ನೀವು ಗಣನೀಯ ಪ್ರಮಾಣದ ಕ್ವಾಂಟಮ್‌ನ ಕ್ಯುಮುಲೇಟಿವ್ ಟ್ಯಾಕ್ಸ್ ಸೇವಿಂಗ್ಸ್ ಅನ್ನು ಪಡೆಯುವ ವಿವಿಧ ಇನ್ಸ್ಟ್ರುಮೆಂಟ್‌ಗಳನ್ನು ನೀವು ಕಾಣಬಹುದು. ಸೆಕ್ಷನ್ 80C ಅಡಿಯಲ್ಲಿ ಡಿಡಕ್ಷನ್‌ಗಳೊಂದಿಗೆ, ನೀವು ವಿಭಿನ್ನ ಸ್ಕೀಮ್‌ಗಳಿಂದ (₹1,50,000 + ₹50,000) ವರೆಗೆ ಸೇವ್ ಮಾಡಲು ಸಾಧ್ಯವಾಗುತ್ತದೆ.
ಆದಾಗ್ಯೂ, ಸೆಕ್ಷನ್ 80C ಅಡಿಯಲ್ಲಿ ಟ್ಯಾಕ್ಸ್ ವಿನಾಯಿತಿಗಳನ್ನು ಹಿಂದೂ ಅವಿಭಜಿತ ಕುಟುಂಬದ ವ್ಯಕ್ತಿಗಳು ಅಥವಾ ಸದಸ್ಯರು ಮಾತ್ರ ಪಡೆಯಬಹುದು. ಕಂಪನಿಗಳು, ಪಾರ್ಟ್ನರ್‌ಶಿಪ್‌ಗಳು ಅಥವಾ ಯಾವುದೇ ಇತರ ಕಾರ್ಪೊರೇಟ್ ಸಂಸ್ಥೆಗಳಿಗೆ ಇವು ಲಭ್ಯವಿಲ್ಲ.
ಈ ಕೆಳಗಿನ ವಿವರಣೆಯು ಸೆಕ್ಷನ್ 80C ಅಡಿಯಲ್ಲಿ ವಿಭಿನ್ನ ಇನ್ಕಮ್ ಟ್ಯಾಕ್ಸ್ ಡಿಡಕ್ಷನ್‌ಗಳು ಮತ್ತು ಐಟಿಎ ನ 80CCC ಮತ್ತು 80CCD ನಂತಹ ಅದರ ಸಂಬಂಧಿತ ಸೆಕ್ಷನ್‌ಗಳು, ನಿಮ್ಮ ಟ್ಯಾಕ್ಸ್ ಲಯಬಿಲಿಟಿಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತವೆ.
ಸೆಕ್ಷನ್ 80C ಅಡಿಯಲ್ಲಿ ಇನ್ಕಮ್ ಟ್ಯಾಕ್ಸ್ ಡಿಡಕ್ಷನ್‌ಗಳು
ಇನ್ವೆಸ್ಟ್‌ಮೆಂಟ್‌ಗಳು | ಲಾಕ್-ಇನ್ ಅವಧಿ | ರಿಟರ್ನ್ಸ್ |
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) | 15 ವರ್ಷಗಳು | 7%-8% |
ಇಕ್ವಿಟಿ ಲಿಂಕ್ಡ್ ಉಳಿತಾಯ ಸ್ಕೀಮ್‌ಗಳು | 3 ವರ್ಷಗಳು | 12% - 15% |
ಎಂಪ್ಲಾಯೀಗಳ ಪ್ರಾವಿಡೆಂಟ್ ಫಂಡ್ | ರಿಟೈರ್‌ಮೆಂಟ್‌ವರೆಗೆ | 8.5% |
ನ್ಯಾಷನಲ್ ಪೆನ್ಷನ್ ಸ್ಕೀಮ್ | 5 ವರ್ಷಗಳು | 12% - 14% |
ಟ್ಯಾಕ್ಸ್ ಸೇವಿಂಗ್ ಫಿಕ್ಸೆಡ್ ಡೆಪಾಸಿಟ್‌ಗಳು | 5 ವರ್ಷಗಳು | 6.50%- 7.25% |
ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ | 5 ವರ್ಷಗಳು | 7% - 8% |
ಸುಕನ್ಯಾ ಸಮೃದ್ಧಿ ಯೋಜನೆ | ಮಗುವಿಗೆ 21 ವರ್ಷವಾಗುವವರೆಗೆ | 7.60% |
ಸೀನೀಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ | 5 ವರ್ಷಗಳು | 7.40% |
80C ಅಡಿಯಲ್ಲಿ ಟ್ಯಾಕ್ಸ್ ಸೇವಿಂಗ್ ಇನ್ವೆಸ್ಟ್‌ಮೆಂಟ್‌ಗಳು
1. ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF)
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ ಖಚಿತವಾದ ಇನ್ಕಮ್ ಅನ್ನು ನೀಡುವ ಸರಕಾರಿ ಸೇವಿಂಗ್ಸ್ ಸ್ಕೀಮ್‌ಗಳಲ್ಲಿ ಒಂದಾಗಿದೆ. ಪಿಪಿಎಫ್ 15 ವರ್ಷಗಳ ನಂತರ ಮೆಚ್ಯೂರಿಟಿಯಾಗುತ್ತದೆ.
ಪಿಪಿಎಫ್ ನಿಂದ ಜನರೇಟ್ ಆಗುವ ರಿಟರ್ನ್ಸ್‌ಗೆ, ಸೆಕ್ಷನ್ 80C ಅಡಿಯಲ್ಲಿ ಟ್ಯಾಕ್ಸ್‌ನಿಂದ ವಿನಾಯಿತಿ ನೀಡಲಾಗಿದೆ. ಆದಾಗ್ಯೂ, ಪ್ರತಿ ವರ್ಷ ನಿಮ್ಮ ಇನ್ಕಮ್ ಟ್ಯಾಕ್ಸ್ ರಿಟರ್ನ್‌ಗಳನ್ನು ಫೈಲ್ ಮಾಡುವಾಗ ನೀವು ಪಿಪಿಎಫ್‌ನಿಂದ ಜನರೇಟ್ ಅಗುವ ರಿಟರ್ನ್‌ಗಳನ್ನು ಡಿಕ್ಲೇರ್ ಮಾಡಬೇಕಾಗುತ್ತದೆ.
2. ಟ್ಯಾಕ್ಸ್ ಸೇವಿಂಗ್ ಮ್ಯೂಚುಯಲ್ ಫಂಡ್‌ಗಳಲ್ಲಿ ಇನ್ವೆಸ್ಟ್‌ಮೆಂಟ್‌ಗಳು (ELSS)
ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ ಎಂದು ಕರೆಯಲ್ಪಡುವ ಈ ಟ್ಯಾಕ್ಸ್-ಸೇವಿಂಗ್ ಮ್ಯೂಚುಯಲ್ ಫಂಡ್‌ಗಳು, 3 ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿವೆ ಮತ್ತು ಅವು ಒಟ್ಟು ಕಾರ್ಪಸ್‌ನ 80% ಅನ್ನು ಇಕ್ವಿಟಿಗಳಲ್ಲಿ ಇನ್ವೆಸ್ಟ್ ಮಾಡುವುದರಿಂದ ಅವುಗಳನ್ನು ಹೆಸರಿಸಲಾಗಿದೆ.
ಇಎಲ್ಎಸ್ಎಸ್ ನಿಂದ ಬರುವ ರಿಟರ್ನ್ಸ್ ₹1 ಲಕ್ಷದ ಮಿತಿಯವರೆಗೆ ಟ್ಯಾಕ್ಸ್-ಫ್ರೀ ಆಗಿರುತ್ತದೆ. ನಿರ್ದಿಷ್ಟಪಡಿಸಿದ ಮಿತಿಯನ್ನು ಮೀರಿದ ರಿಟರ್ನ್ಸ್‌ಗಾಗಿ, ನೀವು 10% ದರದಲ್ಲಿ ಲಾಂಗ್ ಟರ್ಮ್ ಕ್ಯಾಪಿಟಲ್ ಟ್ಯಾಕ್ಸ್‌ಗೆ ಒಳಪಡುತ್ತೀರಿ.
3. ಎಂಪ್ಲಾಯೀಗಳ ಪ್ರಾವಿಡೆಂಟ್ ಫಂಡ್ (EPF)
ಎಂಪ್ಲಾಯೀಗಳ ಪ್ರಾವಿಡೆಂಟ್ ಫಂಡ್‌ಗೆ ಎಂಪ್ಲಾಯೀಗಳ ಕೊಡುಗೆಯಿಂದ ರಚಿತವಾದ ಭಾಗವನ್ನು ಸೆಕ್ಷನ್ 80C ಅಡಿಯಲ್ಲಿ ಡಿಡಕ್ಷನ್‌ಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಫಂಡ್‌ಗೆ ಎಂಪ್ಲಾಯರ್‌ಗಳ ಕೊಡುಗೆಯು ಸಹ ಟ್ಯಾಕ್ಸ್-ಫ್ರೀ ಆಗಿದ್ದು, ಇದನ್ನು ಸೆಕ್ಷನ್ 80C ಅಡಿಯಲ್ಲಿ ಸೇರಿಸಲಾಗಿಲ್ಲ.
ಇಪಿಎಫ್ ಬಡ್ಡಿ ದರವೂ ಟ್ಯಾಕ್ಸ್-ಫ್ರೀ ಆಗಿದೆ. ಆದರೆ ಈ ಕೆಳಗಿನ ಸಂದರ್ಭಗಳಲ್ಲಿ ಅದು ಟ್ಯಾಕ್ಸ್‌ಗೆ ಒಳಪಡುತ್ತದೆ:
- ನೀವು ಇಪಿಎಫ್ ರಿಜಿಸ್ಟರ್ಡ್ ಕಂಪನಿಯಲ್ಲಿ ನಿಮ್ಮ ಸರ್ವೀಸ್ ಅನ್ನು ಬಿಟ್ಟರೆ.
- ಯಾವುದೇ ಇಪಿಎಫ್ ರಿಜಿಸ್ಟರ್ಡ್ ಕಂಪನಿಯಲ್ಲಿ 5 ವರ್ಷಗಳನ್ನು ಪೂರ್ಣಗೊಳಿಸುವ ಮೊದಲು ನೀವು ಇಪಿಎಫ್‌ನಿಂದ ವಿದ್‌ಡ್ರಾ ಮಾಡಿದರೆ.
4. ನ್ಯಾಷನಲ್ ಪೆನ್ಷನ್ ಸ್ಕೀಮ್ (NPS)
ಸೆಕ್ಷನ್ 80C ಅಡಿಯಲ್ಲಿ, ಎಂಪ್ಲಾಯೀ ಮತ್ತು ಎಂಪ್ಲಾಯರ್‌ಗಳ ಕೊಡುಗೆಗಳು ಟ್ಯಾಕ್ಸ್‌ನಿಂದ ವಿನಾಯಿತಿ ಪಡೆಯುತ್ತವೆ. ಆದರೆ ಈ ಸಂದರ್ಭದಲ್ಲಿ, ಎಂಪ್ಲಾಯರ್‌ಗಳ ಕೊಡುಗೆಗಳು ಎಂಪ್ಲಾಯೀಯ ಬೇಸಿಕ್ ಸ್ಯಾಲರಿಯ 10% + ತುಟ್ಟಿಭತ್ಯೆಗಿಂತ ಹೆಚ್ಚಿರಬಾರದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ.
ಇದಲ್ಲದೆ, ಸ್ವಯಂ ಉದ್ಯೋಗಸ್ಥ ವ್ಯಕ್ತಿಯು ತನ್ನ ಒಟ್ಟು ಇನ್ಕಮ್‌ನ 20% ವರೆಗಿನ ಕೊಡುಗೆಗಳಿಗಾಗಿ ಸೆಕ್ಷನ್ 80C ಅಡಿಯಲ್ಲಿ ಈ ಟ್ಯಾಕ್ಸ್ ಡಿಡಕ್ಷನ್ ಅನ್ನು ಸಹ ಕ್ಲೈಮ್ ಮಾಡಬಹುದು.
ಮತ್ತೊಮ್ಮೆ, ನ್ಯಾಷನಲ್ ಪೆನ್ಷನ್ ಸ್ಕೀಮ್‌ಗಾಗಿ ಮಾಡಿದ ಸ್ವಯಂಪ್ರೇರಿತ ಕೊಡುಗೆಗಳನ್ನು ಸಹ ₹ 1,50,000 ವರೆಗಿನ ಲಭ್ಯವಿರುವ ವಿನಾಯಿತಿ ಮಿತಿಗಿಂತ ₹ 50,000 ವರೆಗೆ ವಿನಾಯಿತಿ ನೀಡಲಾಗುತ್ತದೆ. ಹೀಗಾಗಿ, ಎನ್‌ಪಿಎಸ್‌ಗೆ ಸ್ವಯಂಪ್ರೇರಿತ ಕೊಡುಗೆಗಳನ್ನು ನೀಡುವ ವ್ಯಕ್ತಿಗಳು ಈ ಸೆಕ್ಷನ್‌ನ ಅಡಿಯಲ್ಲಿ ₹2 ಲಕ್ಷದವರೆಗೆ ವಿನಾಯಿತಿ ಪಡೆಯಬಹುದು.
ಆದಾಗ್ಯೂ, ಎನ್‌ಪಿಎಸ್‌ನಿಂದ ಬರುವ ರಿಟರ್ನ್ಸ್, ಮೆಚ್ಯೂರಿಟಿಯಾಗುವವರೆಗೆ ಮಾತ್ರ ಟ್ಯಾಕ್ಸೇಶನ್‌ನಿಂದ ವಿನಾಯಿತಿ ಪಡೆಯುತ್ತದೆ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಸ್ಕೀಮ್ ಮೆಚ್ಯೂರಿಟಿಯಾದ ನಂತರ, ಸಂಗ್ರಹವಾದ ಮೊತ್ತವು 60% ಟ್ಯಾಕ್ಸ್‌ಗೆ ಒಳಪಡುತ್ತದೆ.
5. ಟ್ಯಾಕ್ಸ್ ಸೇವಿಂಗ್ ಫಿಕ್ಸೆಡ್ ಡೆಪಾಸಿಟ್
ನೀವು ಬ್ಯಾಂಕ್‌ಗಳು ಮತ್ತು ಪೋಸ್ಟ್ ಆಫೀಸ್ ಮೂಲಕ ತೆರೆಯಬಹುದಾದ 5 ವರ್ಷಗಳ ಅವಧಿಯ ಟ್ಯಾಕ್ಸ್-ಸೇವಿಂಗ್ ಫಿಕ್ಸೆಡ್ ಡೆಪಾಸಿಟ್‌ಗಳು, 80C ಅಡಿಯಲ್ಲಿ ಇನ್ಕಮ್ ಟ್ಯಾಕ್ಸ್ ವಿನಾಯಿತಿಗೆ ಅರ್ಹವಾಗಿವೆ. ಆದಾಗ್ಯೂ, ಈ ಎಫ್.ಡಿ ಗಳಲ್ಲಿ ಸಂಗ್ರಹವಾದ ಇಂಟರೆಸ್ಟ್ ಸಂಪೂರ್ಣವಾಗಿ ಟ್ಯಾಕ್ಸ್‌ಗೆ ಒಳಪಡುತ್ತದೆ.
6. ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (NSC)
ಇವು 5 ವರ್ಷಗಳ ಅವಧಿಯ ಸರ್ಕಾರಿ ಬೆಂಬಲಿತ ಸೇವಿಂಗ್ಸ್ ಸ್ಕೀಮ್‌ಗಳಾಗಿವೆ. ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್‌ನ ಅಡಿಯಲ್ಲಿ ಸಂಗ್ರಹವಾದ ಇಂಟರೆಸ್ಟ್ , 80C ಅಡಿಯಲ್ಲಿ ಟ್ಯಾಕ್ಸ್ ವಿನಾಯಿತಿಗೆ ಅರ್ಹವಾಗಿದೆ.
7. ಸುಕನ್ಯಾ ಸಮೃದ್ಧಿ ಯೋಜನೆ
ಹೆಣ್ಣು ಮಗುವಿನ ಶಿಕ್ಷಣ ಮತ್ತು ನಂತರ ಅವಳ ಮದುವೆಗೆ ಆರ್ಥಿಕವಾಗಿ ಬೆಂಬಲ ನೀಡಲು ಭಾರತ ಸರ್ಕಾರ ಪರಿಚಯಿಸಿದ ಸೇವಿಂಗ್ಸ್ ಸ್ಕೀಮ್‌ಗಳಲ್ಲಿ ಇದೂ ಒಂದು.
ಈ ಅಕೌಂಟ್ ಅನ್ನು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿನ ಪೋಷಕರು ತೆರೆಯಬಹುದು; ಅಕೌಂಟ್ 21 ವರ್ಷಗಳ ನಂತರ ಮೆಚ್ಯೂರಿಟಿಯಾಗುತ್ತದೆ ಮತ್ತು ಸುಕನ್ಯಾ ಸಮೃದ್ಧಿ ಯೋಜನೆ ಸ್ಕೀಮ್‌ನಡಿಯಲ್ಲಿ ಪಡೆದ ರಿಟರ್ನ್ಸ್ ಟ್ಯಾಕ್ಸ್-ಫ್ರೀ ಆಗಿರುತ್ತದೆ.
8. ಸೀನೀಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ (SCSS)
ಇವು 5 ವರ್ಷಗಳ ಅವಧಿಯ ಸರ್ಕಾರಿ ಬೆಂಬಲಿತ ಸೇವಿಂಗ್ಸ್ ಸ್ಕೀಮ್‌ಗಳಾಗಿವೆ. ನೀವು 3 ವರ್ಷಗಳವರೆಗೆ ಅವಧಿಯನ್ನು ವಿಸ್ತರಿಸಲು ಆಯ್ಕೆ ಮಾಡಬಹುದು;
ಈ ಸ್ಕೀಮ್‌ನ ಅಡಿಯಲ್ಲಿ ಮಾಡಿದ ಇನ್ವೆಸ್ಟ್‌ಮೆಂಟ್‌ಗಳು ಸೆಕ್ಷನ್ 80C ಅಡಿಯಲ್ಲಿ ಟ್ಯಾಕ್ಸ್‌ನಿಂದ ವಿನಾಯಿತಿ ಪಡೆದಿವೆ. ಆದಾಗ್ಯೂ, ಈ ಸ್ಕೀಮ್‌ನಿಂದ ಸಂಗ್ರಹವಾದ ರಿಟರ್ನ್ಸ್ ನಿಮ್ಮ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ನ ಪ್ರಕಾರ ಸಂಪೂರ್ಣವಾಗಿ ಟ್ಯಾಕ್ಸ್‌ಗೆ ಒಳಪಡುತ್ತದೆ.
ಇನ್ನಷ್ಟು ಓದಿ: ಸೀನೀಯರ್ ಸಿಟಿಜನ್ ಹೆಲ್ತ್ ಇನ್ಶೂರೆನ್ಸ್
ಈ ಇನ್ವೆಸ್ಟ್‌ಮೆಂಟ್‌ನ ಆಯ್ಕೆಗಳ ಹೊರತಾಗಿ, ಸೆಕ್ಷನ್ 80C ಅಡಿಯಲ್ಲಿ ಡಿಡಕ್ಷನ್‌ಗಳು ಸಹ ಲಭ್ಯವಿವೆ:
9. ಹೋಮ್ ಲೋನ್‌ಗಳು
ಈ ವಿನಾಯಿತಿಯು ಸ್ವಯಂ-ನೆಲೆಸಿರುವ ಮತ್ತು ಬಾಡಿಗೆಗೆ ನೀಡಿರುವ ಪ್ರಾಪರ್ಟಿಗಳೆರಡಕ್ಕೂ, ಪ್ರತಿ ವರ್ಷ ಹೋಮ್ ಲೋನ್‌ನ ಅಸಲು ಮೊತ್ತದಲ್ಲಿ ಲಭ್ಯವಿದೆ. ಆದಾಗ್ಯೂ, ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಲು, ನೀವು ಮನೆಯನ್ನು ಪಡೆದ 5 ವರ್ಷಗಳಲ್ಲಿ ಅದನ್ನು ಮಾರಾಟ ಮಾಡಲು ಸಾಧ್ಯವಿಲ್ಲ.
ಇದಲ್ಲದೆ, ಸೆಕ್ಷನ್ 80C ನಿಮ್ಮ ಪ್ರಾಪರ್ಟಿಗೆ ಪಾವತಿಸಿದ ರಿಜಿಸ್ಟ್ರೇಷನ್ ಫೀಸ್ ಮತ್ತು ಸ್ಟ್ಯಾಂಪ್ ಡ್ಯುಟಿ ಮೇಲೆ ಡಿಡಕ್ಷನ್‌ಗಳನ್ನು ಪಡೆಯಲು ಸಹ ನಿಮಗೆ ಅನುಮತಿಸುತ್ತದೆ.
10. ಲೈಫ್ ಇನ್ಶೂರೆನ್ಸ್ ಪಾಲಿಸಿಗಳ ಮೇಲಿನ ಪ್ರೀಮಿಯಂ ಪಾವತಿ
ಸ್ವತಃ ತಮಗೆ ಅಥವಾ ಕುಟುಂಬದ ಇತರ ಸದಸ್ಯರು, ಲೈಫ್ ಇನ್ಶೂರೆನ್ಸ್ ಪ್ರೀಮಿಯಂ ಪಾವತಿಯ ಮೇಲೆ ಈ ವಿನಾಯಿತಿಯನ್ನು ಪಡೆಯಬಹುದು. ಸಿಂಗಲ್ ಪ್ರೀಮಿಯಂ ಪಾಲಿಸಿಯ ಸಂದರ್ಭದಲ್ಲಿ, ಪಾಲಿಸಿ ಪ್ರಾರಂಭವಾದ 2 ವರ್ಷಗಳಲ್ಲಿ ನೀವು ಇನ್ಶೂರೆನ್ಸ್ ಪಾಲಿಸಿಯನ್ನು ಟರ್ಮಿನೇಟ್ ಮಾಡಲು ಸಾಧ್ಯವಿಲ್ಲ. ಮಲ್ಟಿಪಲ್ ಪ್ರೀಮಿಯಂ ಪಾಲಿಸಿಗಳಿಗಾಗಿ, ಟ್ಯಾಕ್ಸ್ ವಿನಾಯಿತಿಯನ್ನು ಪಡೆಯಲು ನೀವು ಕನಿಷ್ಟ 2 ವರ್ಷಗಳ ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ.
ನೀವು ಮೇಲೆ ತಿಳಿಸಿದ ನಿಯಮಗಳನ್ನು ಫಾಲೋ ಮಾಡದಿದ್ದರೆ, ಈ ಸೆಕ್ಷನ್‌ನ ಅಡಿಯಲ್ಲಿ ನಿಮ್ಮ ಟ್ಯಾಕ್ಸ್ ಡಿಡಕ್ಷನ್‌ಗಳು ರಿವರ್ಸ್ ಆಗುತ್ತವೆ.
ಯುನಿಟ್ ಲಿಂಕ್ಡ್ ಲೈಫ್ ಇನ್ಶೂರೆನ್ಸ್ ಪಾಲಿಸಿಗಳಲ್ಲಿ (ಯುಲಿಪ್ಸ್) ಪಾವತಿಸಿದ ಪ್ರೀಮಿಯಂ ಕೂಡ, ಸೆಕ್ಷನ್ 80C ಅಡಿಯಲ್ಲಿ ಟ್ಯಾಕ್ಸ್ ವಿನಾಯಿತಿಗೆ ಅರ್ಹವಾಗಿದೆ.
ಇನ್ನಷ್ಟು ಓದಿ: ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್
11. ನಿಮ್ಮ ಮಗುವಿನ ಶಿಕ್ಷಣಕ್ಕಾಗಿ ಪಾವತಿಸಿದ ಶಾಲೆ ಅಥವಾ ಟ್ಯೂಷನ್ ಫೀಸ್
ಈ ಸೆಕ್ಷನ್, ಎರಡು ಮಕ್ಕಳ ಶಿಕ್ಷಣಕ್ಕಾಗಿ ಯಾವುದೇ ಕಾಲೇಜು, ಶಾಲೆ, ವಿಶ್ವವಿದ್ಯಾನಿಲಯ ಇತ್ಯಾದಿಗಳಿಗೆ ಪಾವತಿಸುವ ಟ್ಯೂಷನ್ ಫೀಸ್ ಮೇಲೆ ವಿನಾಯಿತಿ ನೀಡುತ್ತದೆ.
ಟ್ಯಾಕ್ಸ್ ಡಿಡಕ್ಷನ್‌ಗಳು, ನಿಮ್ಮ ಟ್ಯಾಕ್ಸೇಬಲ್ ಇನ್ಕಮ್ ಅನ್ನು ಕಡಿಮೆ ಮಾಡುವ ಮಾರ್ಗಗಳಾಗಿವೆ. ಆದಾಗ್ಯೂ, ನೀವು ಕ್ಲೈಮ್ ಮಾಡುವ ಟ್ಯಾಕ್ಸ್ ಡಿಡಕ್ಷನ್‌ಗಳ ಪ್ರಕಾರಕ್ಕೆ ಅನುಗುಣವಾಗಿ ನಿಮ್ಮ ಡಿಡಕ್ಷನ್‌ನ ಮೊತ್ತವು ಬದಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು.
ಸೆಕ್ಷನ್ 80C ಯನ್ನು ಹೊರತುಪಡಿಸಿ ಟ್ಯಾಕ್ಸ್ ವಿನಾಯಿತಿಗಳು
ಸೆಕ್ಷನ್ 80C ಯ ಹೊರತಾಗಿ, ನೀವು ಸೆಕ್ಷನ್ 80 ರ ವಿವಿಧ ಸಬ್‌ಸೆಕ್ಷನ್‌ಗಳಿಂದ ಟ್ಯಾಕ್ಸ್ ವಿನಾಯಿತಿಯನ್ನು ಸಹ ಪಡೆಯಬಹುದು. ಉದಾಹರಣೆಗೆ:
- ಸೆಕ್ಷನ್ 80D - ನೀವು ಸ್ವತಃ ನಿಮಗಾಗಿ, ನಿಮ್ಮ ಸಂಗಾತಿ, ಮಕ್ಕಳು ಮತ್ತು ಪೋಷಕರಿಗಾಗಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಿಗೆ ಪಾವತಿಸಿದ ಪ್ರೀಮಿಯಂ ಮೇಲೆ ಟ್ಯಾಕ್ಸ್ ವಿನಾಯಿತಿಗಳನ್ನು ಪಡೆಯಬಹುದು. ನೀವು ಸ್ವತಃ ನಿಮಗಾಗಿ ಮತ್ತು ನಿಮ್ಮ ಸಂಗಾತಿಗಾಗಿ ಈ ಸೆಕ್ಷನ್‌ನ ಅಡಿಯಲ್ಲಿ ₹25,000 ಮತ್ತು ನಿಮ್ಮ ಪೋಷಕರಿಗೆ ಹೆಚ್ಚುವರಿ ₹25,000 ವರೆಗೆ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಬಹುದು. ಈ ಸೆಕ್ಷನ್‌ನ ಅಡಿಯಲ್ಲಿ ವಿನಾಯಿತಿಯು ₹1 ಲಕ್ಷದವರೆಗೆ ಹೋಗಬಹುದು.
- ಸೆಕ್ಷನ್ 80G - ಈ ಸೆಕ್ಷನ್ ವಿವಿಧ ಚಾರಿಟಿಗಳು ಮತ್ತು ಸಾಮಾಜಿಕ ಕಾರಣಗಳಿಗಾಗಿ ಡೊನೇಶನ್‌ಗಳನ್ನು ಒಳಗೊಂಡಿದೆ. ಈ ಡೊನೇಶನ್‌ಗಳು ನೀವು ದೇಣಿಗೆ ನೀಡುತ್ತಿರುವ ಕಾರಣವನ್ನು ಅವಲಂಬಿಸಿ, ನಿರ್ಬಂಧಗಳಿಲ್ಲದೆ 50% ಅಥವಾ 100% ವಿನಾಯಿತಿಗಳಿಗೆ ಅರ್ಹವಾಗಿರುತ್ತವೆ.
- ಸೆಕ್ಷನ್ 80GGC - ಈ ಸೆಕ್ಷನ್ ಯಾವುದೇ ರಾಜಕೀಯ ಪಕ್ಷಕ್ಕೆ ನೀಡಿದ ಡೊನೇಶನ್‌ಗಳನ್ನು ಒಳಗೊಂಡಿರುತ್ತದೆ. ನಗದು ಹೊರತುಪಡಿಸಿ ಇತರ ವಿಧಾನಗಳ ಮೂಲಕ ಪಾವತಿ ಮಾಡಿದರೆ ಮಾತ್ರ ಈ ವಿನಾಯಿತಿಗಳು ಲಭ್ಯವಿರುತ್ತವೆ.
ಹೀಗಾಗಿ, ಇಂತಹ ಡಿಡಕ್ಷನ್‌ಗಳು ಮತ್ತು ಹೆಚ್ಚಿನವುಗಳೊಂದಿಗೆ, ಟ್ಯಾಕ್ಸ್ ಪೇಯರ್‌ಗಳ ಮೇಲಿನ ಟ್ಯಾಕ್ಸ್ ಲಯಬಿಲಿಟಿಯನ್ನು ಸಾಕಷ್ಟು ಮಟ್ಟಿಗೆ ಕಡಿಮೆ ಮಾಡಬಹುದು. ಆದ್ದರಿಂದ, ನಿಮ್ಮ ಇನ್ಕಮ್ ಟ್ಯಾಕ್ಸ್ ರಿಟರ್ನ್‌ಗಳನ್ನು ಫೈಲ್ ಮಾಡುವ ಮೊದಲು, ನೀವು ಗರಿಷ್ಠ ಟ್ಯಾಕ್ಸ್ ವಿನಾಯಿತಿಗಳನ್ನು ಪಡೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು, ಸೆಕ್ಷನ್ 80C ಮತ್ತು ಸೆಕ್ಷನ್ 80 ರ ಇತರ ಸಬ್-ಸೆಕ್ಷನ್‌ಗಳ ಅಡಿಯಲ್ಲಿ ಎಲ್ಲಾ ಪ್ರಾವಿಷನ್‌ಗಳನ್ನು ಪರಿಶೀಲಿಸುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಸೆಕ್ಷನ್ 80C ಅಡಿಯಲ್ಲಿ ಟ್ಯಾಕ್ಸ್ ಸೇವಿಂಗ್ ಇನ್ವೆಸ್ಟ್‌ಮೆಂಟ್‌ಗಳ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು
ಎಂಪ್ಲಾಯರ್‌ಗಳಿಗೆ ಪುರಾವೆ ಸಲ್ಲಿಸದಿದ್ದರೂ ಸಹ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡುವಾಗ ಸೆಕ್ಷನ್ 80C ಅಡಿಯಲ್ಲಿ ಡಿಡಕ್ಷನ್‌ಗಳು ಕ್ಲೈಮ್ ಮಾಡಬಹುದೇ?
ನಿಮ್ಮ ಇನ್ವೆಸ್ಟ್‌ಮೆಂಟ್‌ಗಳ ಪುರಾವೆಯನ್ನು ಹಣಕಾಸು ವರ್ಷದ ಅಂತ್ಯದ ಮೊದಲು ಸಬ್ಮಿಟ್ ಮಾಡಬೇಕು. ಟ್ಯಾಕ್ಸ್ ವಿನಾಯಿತಿಗಳು ಮತ್ತು ಟ್ಯಾಕ್ಸ್‌ಗೊಳಪಡುವ ಆದಾಯವನ್ನು ನಿರ್ಧರಿಸುವಾಗ ನಿಮ್ಮ ಎಂಪ್ಲಾಯರ್‌ಗಳು ಅವುಗಳನ್ನು ಗಣನೆಗೆ ತೆಗೆದುಕೊಳ್ಳಲು ಇದು ಅನುಮತಿಸುತ್ತದೆ.
ಆದರೆ, ನೀವು ಪುರಾವೆಗಳನ್ನು ಸಬ್ಮಿಟ್ ಮಾಡಲು ಮರೆತರೂ ಸಹ, ನಿಮ್ಮ ಇನ್ಕಮ್ ಟ್ಯಾಕ್ಸ್ ರಿಟರ್ನ್‌ಗಳನ್ನು ಫೈಲ್ ಮಾಡುವ ಮೊದಲು ಈ ಇನ್ವೆಸ್ಟ್‌ಮೆಂಟ್‌ಗಳಿಗೆ ನೀವು ಕ್ಲೈಮ್‌ಗಳನ್ನು ಮಾಡಬಹುದು. ಅಂದರೆ ಸಂಬಂಧಿತ ಹಣಕಾಸು ವರ್ಷದ ಮೊದಲು ಇನ್ವೆಸ್ಟ್‌ಮೆಂಟ್‌ಗಳನ್ನು ಮಾಡುವವರೆಗೆ.
ನಾನು 15ನೇ ಏಪ್ರಿಲ್ 2019 ರಂದು ಸೆಕ್ಷನ್ 80C ಅಡಿಯಲ್ಲಿ ಟ್ಯಾಕ್ಸ್ ಪ್ರಯೋಜನಕ್ಕೆ ಅರ್ಹವಾದ ಇನ್ವೆಸ್ಟ್‌ಮೆಂಟ್‌ಗಳನ್ನು ಮಾಡಿದ್ದರೆ, ನನ್ನ ಟ್ಯಾಕ್ಸ್ ಡಿಡಕ್ಷನ್‌ಗಳನ್ನು ನಾನು ಯಾವಾಗ ಕ್ಲೈಮ್ ಮಾಡಬಹುದು?
ಈ ಸಂದರ್ಭದಲ್ಲಿ, 2019-20ರ ಹಣಕಾಸು ವರ್ಷದಲ್ಲಿ ಈ ಇನ್ವೆಸ್ಟ್‌ಮೆಂಟ್‌ನ ಅಡಿಯಲ್ಲಿ ನೀವು ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಲು ಸಾಧ್ಯವಾಗುತ್ತದೆ.
ಸೆಕ್ಷನ್ 80C ಹಿಂದೂ ಅವಿಭಜಿತ ಕುಟುಂಬಕ್ಕೆ ಅನ್ವಯಿಸುತ್ತದೆಯೇ?
ಹೌದು, ವ್ಯಕ್ತಿಗಳು ಅಥವಾ ಹೆಚ್.ಯು.ಎಫ್ ಗಳು ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 80C ಅಡಿಯಲ್ಲಿ ಲಭ್ಯವಿರುವ ಟ್ಯಾಕ್ಸ್ ಪ್ರಯೋಜನಗಳನ್ನು ಆನಂದಿಸಬಹುದು.