ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
ಭಾರತದಲ್ಲಿಯ ನಗರಗಳನ್ನು ಅವುಗಳ ಜನಸಂಖ್ಯೆಗೆ ಅನುಗುಣವಾಗಿ ಮೂರು ಹಂತಗಳಾಗಿ ವರ್ಗೀಕರಿಸಲಾಗಿದೆ. ಈಗ, ಈ ವರ್ಗೀಕರಣವನ್ನು ಮನೆ ಬಾಡಿಗೆ ಭತ್ಯೆ ಹಂಚಿಕೆಗೆ ಅಳವಡಿಸಲಾಗಿತ್ತಾದರೂ, ಇದು ಹಲವಾರು ಇತರ ಉಪಯೋಗಗಳನ್ನು ಸಹ ಹೊಂದಿದೆ; ಅವುಗಳಲ್ಲಿ ಪ್ರಮುಖವಾದವುಗಳಲ್ಲಿ ಒಂದಾಗಿದೆ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳ ವೆಚ್ಚ.
ಹೌದು, ಇದು ನಿಜ!
ನಿಮ್ಮ ಆರೋಗ್ಯ ಮತ್ತು ನಿಮ್ಮ ಹೆಲ್ತ್ಕೇರ್ ಪಾಲಿಸಿಯ ಇನ್ಶೂರ್ಡ್ ಮೊತ್ತ ಮಾತ್ರ ನಿಮ್ಮ ಪಾಲಿಸಿಯ ಪ್ರೀಮಿಯಂ ಪಾವತಿಯನ್ನು ನಿರ್ಧರಿಸುವ ಅಂಶಗಳಲ್ಲ. ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ವೆಚ್ಚವನ್ನು ನಿರ್ಧರಿಸುವಲ್ಲಿ ನೀವು ವಾಸಿಸುವ ನಗರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ವರ್ಗೀಕರಣವನ್ನು ಝೋನ್ ಆಧಾರಿತ ಹೆಲ್ತ್ ಇನ್ಶೂರೆನ್ಸ್ ಎಂದು ಕರೆಯಲಾಗುತ್ತದೆ.
ಇದರ ಪರಿಣಾಮಗಳ ಬಗ್ಗೆ ಈಗ ನಾವು ವಿವರವಾಗಿ ಕಲಿಯೋಣ.
ದೊಡ್ಡ ಮೆಟ್ರೋಪಾಲಿಟನ್ ನಗರಗಳಲ್ಲಿಯ ಆರೋಗ್ಯ ಸೇವೆಯು ಚಿಕ್ಕ ನಗರಗಳಿಗಿಂತ ದುಬಾರಿಯಾಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅದಕ್ಕಾಗಿಯೇ, ಸಣ್ಣ ನಗರಗಳಲ್ಲಿರುವವರಿಗೆ ಆರೋಗ್ಯ ಸೇವೆಗಳನ್ನು ಇನ್ನಷ್ಟು ಕೈಗೆಟುಕುವಂತೆ ಮಾಡಲು, ಇನ್ಶೂರೆನ್ಸ್ ಪೂರೈಕೆದಾರರು ಝೋನ್ -ಆಧಾರಿತ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳನ್ನು ಸಿದ್ಧಪಡಿಸಿದ್ದಾರೆ.
ಆದರೆ ಈ ಸಂದರ್ಭದಲ್ಲಿ "ಝೋನ್ " ಪದದ ಅರ್ಥವೇನು?
ಸರಿ, ಇದು ಭಾರತೀಯ ನಗರಗಳನ್ನು ವರ್ಗೀಕರಿಸಿದ ಮೂರು ಝೋನ್ ಗಳನ್ನು ಸೂಚಿಸುತ್ತದೆ, ಈ ಕೆಳಗಿನ ಕೋಷ್ಟಕದಲ್ಲಿ ವಿವರಿಸಿದಂತೆ:
ಝೋನ್ A |
ಝೋನ್ B |
ಝೋನ್ C |
ದೆಹಲಿ/ಎನ್ಸಿಆರ್, ಮುಂಬೈ ಸೇರಿದಂತೆ (ನವಿ ಮುಂಬೈ, ಥಾಣೆ ಮತ್ತು ಕಲ್ಯಾಣ್ ಸೇರಿದಂತೆ) |
ಹೈದರಾಬಾದ್, ಸಿಕಂದರಾಬಾದ್, ಬೆಂಗಳೂರು, ಕೋಲ್ಕತ್ತಾ, ಅಹಮದಾಬಾದ್, ವಡೋದರಾ, ಚೆನ್ನೈ, ಪುಣೆ ಮತ್ತು ಸೂರತ್. |
A ಮತ್ತು B ಅನ್ನು ಹೊರತುಪಡಿಸಿ ಎಲ್ಲಾ ನಗರಗಳು ಝೋನ್ Cಗೆ ಸೇರಿವೆ |
ಆದರೆ ಚಿಕಿತ್ಸಾ ವೆಚ್ಚದ ಪ್ರಕಾರ ನಗರಗಳ ವರ್ಗೀಕರಣವು ಒಬ್ಬ ಇನ್ಶೂರೆನ್ಸ್ ಪೂರೈಕೆದಾರರಿಂದ ಇನ್ನೊಂದಕ್ಕೆ ಬದಲಾಗಬಹುದು (ಮೇಲಿನ ವರ್ಗೀಕರಣವು ಡಿಜಿಟ್ ಇನ್ಶೂರೆನ್ಸ್ ನದ್ದಾಗಿದೆ ).
ಈಗ, ಝೋನ್ A ಯ ನಗರಗಳಲ್ಲಿ ಭರಿಸುವ ಚಿಕಿತ್ಸೆಯ ವೆಚ್ಚವು ಝೋನ್ B ಯ ನಗರಗಳಿಗಿಂತ ಗಮನಾರ್ಹವಾಗಿ ಹೆಚ್ಚಿರುತ್ತದೆ. ಝೋನ್ C ನಗರಗಳಿಗೆ ಬಂದಾಗ ವೈದ್ಯಕೀಯ ವೆಚ್ಚಗಳು ಮತ್ತಷ್ಟು ಕಡಿಮೆ ಇರುತ್ತವೆ. ಅದಕ್ಕಾಗಿಯೇ, ಝೋನ್- ಆಧಾರಿತ ಇನ್ಶೂರೆನ್ಸ್ ಯೋಜನೆಗಳೊಂದಿಗೆ, ಪ್ರತಿ ನಗರದಲ್ಲಿನ ಚಿಕಿತ್ಸಾ ವೆಚ್ಚದ ಪ್ರಕಾರ ಅವುಗಳಿಗಾಗಿ ಪಾವತಿಸಬೇಕಾದ ಪ್ರೀಮಿಯಂ ವೆಚ್ಚವನ್ನು ನಿರ್ಧರಿಸಲಾಗುತ್ತದೆ.
ಇವುಗಳ ಬಗ್ಗೆ ಇನ್ನಷ್ಟು ತಿಳಿಯಿರಿ:
ಝೋನ್ -ಆಧಾರಿತ ಹೆಲ್ತ್ ಇನ್ಶೂರೆನ್ಸ್ ನ ಪ್ರಮುಖ ಪ್ರಯೋಜನವೆಂದರೆ ಅದು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಿಗಾಗಿ ಪಾವತಿಸುವ ಪ್ರೀಮಿಯಂ ಅನ್ನು 10%-20% ರಷ್ಟು ಕಡಿಮೆ ಮಾಡುತ್ತದೆ.
ಉದಾಹರಣೆಗೆ, ನೀವು ದೆಹಲಿಯ (ಝೋನ್ A ನಗರ) ನಿವಾಸಿಯಾಗಿದ್ದರೆ, ನೀವು ರೂ. 10 ಲಕ್ಷಗಳ ಇನ್ಶೂರೆನ್ಸ್ ಗಾಗಿ ರೂ.6,448 ವರೆಗಿನ ಪ್ರೀಮಿಯಂ ಅನ್ನು ಪಾವತಿಸಬೇಕಾಗಬಹುದು. ಆದರೆ ನೀವು ಸೂರತ್ನಲ್ಲಿ (ಝೋನ್ B ನಗರ) ವಾಸಿಸುತ್ತಿದ್ದರೆ ಇದೇ ನಿಮಗೆ ಸುಮಾರು ರೂ.5,882 ಗಳಲ್ಲಿ ಲಭ್ಯವಾಗುತ್ತಿತ್ತು. ಇದಲ್ಲದೆ, ನೀವು ಯಾವುದೇ ಝೋನ್ C ನಗರದಲ್ಲಿ ವಾಸಿಸುತ್ತಿದ್ದರೆ, ನಿಮ್ಮ ಪ್ರೀಮಿಯಂ ವೆಚ್ಚವನ್ನು ಇನ್ನಷ್ಟು ಕಡಿಮೆ ಮಾಡಲಾಗುತ್ತದೆ (ರೂ. 5,315 ಮಾತ್ರ).
ಪಾಲಿಸಿದಾರರು ಝೋನ್ C ಅಥವಾ ಝೋನ್ B ಯಲ್ಲಿರುವಾಗ ಮತ್ತು ಚಿಕಿತ್ಸೆ ಪಡೆಯಲು ಮೇಲಿನ ಝೋನ್ ಗಳಿಗೆ ತೆರಳಲು ಬಯಸಿದಾಗ ಝೋನ್ ಅಪ್ಗ್ರೇಡ್ ಕವರ್ ಕಾರ್ಯರೂಪಕ್ಕೆ ಬರುತ್ತದೆ.
ಇಲ್ಲಿ ಝೋನ್ ಅಪ್ಗ್ರೇಡ್ ಕವರ್, ಪಾಲಿಸಿದಾರಿಗೆ ಅವರು ತೆರಳುತ್ತಿರುವ ನಗರದಲ್ಲಿನ ಚಿಕಿತ್ಸಾ ವೆಚ್ಚದ ಪ್ರಕಾರ ಪ್ರೀಮಿಯಂ ಪಾವತಿಸಲು ಅನುಮತಿಸುತ್ತದೆ ಹಾಗೂ ಈ ರೀತಿ ಇದು ಪ್ರೀಮಿಯಂ ಪಾವತಿಗಳ ಮೇಲೆ ಪರಿಣಾಮ ಬೀರುತ್ತದೆ.
ನಾವು ಮೇಲೆ ಉಲ್ಲೇಖಿಸಿದ ಉದಾಹರಣೆಯನ್ನು ನೋಡಿದರೆ, ಮತ್ತು ನೀವು ಸೂರತ್ನಿಂದ ದೆಹಲಿಗೆ ಹೋಗಲು ಬಯಸಿದರೆ, ಚಿಕಿತ್ಸೆಯ ವೆಚ್ಚವು ತನ್ನಷ್ಟಕ್ಕೇ ಹೆಚ್ಚಾಗುತ್ತದೆ. ಇಲ್ಲಿ, ನೀವು ಝೋನ್ ಅಪ್ಗ್ರೇಡ್ ಕವರ್ ಅನ್ನು ಪಡೆದುಕೊಳ್ಳಬಹುದು ಮತ್ತು ದೆಹಲಿಯ ಅವಶ್ಯಕತೆಗಳಿಗೆ ಅನುಗುಣವಾಗಿ ಹೆಚ್ಚಿನ ಪ್ರೀಮಿಯಂ ಪಾವತಿಸಬಹುದು.
ಉತ್ತಮ ತಿಳುವಳಿಕೆಗಾಗಿ ಕೆಳಗಿನ ಕೋಷ್ಟಕದಲ್ಲಿ ಈ ಉದಾಹರಣೆಯನ್ನು ವಿವರಿಸೋಣ:
ಝೋನ್ C |
ಝೋನ್ B |
ಝೋನ್ A |
20% ಸಹ-ಪಾವತಿಯೊಂದಿಗೆ ಪ್ರೀಮಿಯಂ ರೂ. 5315 ಆಗಿರುತ್ತದೆ. |
10% ಸಹ-ಪಾವತಿಯೊಂದಿಗೆ ಪ್ರೀಮಿಯಂ ರೂ. 5882 ಆಗಿರುತ್ತದೆ. |
0% ಸಹ-ಪಾವತಿಯೊಂದಿಗೆ ಪ್ರೀಮಿಯಂ ರೂ. 6448 ಆಗಿರುತ್ತದೆ. |
NA |
ಝೋನ್ ಅಪ್ಗ್ರೇಡ್ ಆಡ್-ಆನ್ ಶುಲ್ಕವಾಗಿ ರೂ. 567 (ಝೋನ್ C -> B) ಪಾವತಿಸಿ |
ಝೋನ್ ಅಪ್ಗ್ರೇಡ್ ಆಡ್-ಆನ್ ಶುಲ್ಕವಾಗಿ ರೂ.1133 (ಝೋನ್ C -> A) ಪಾವತಿಸಿ |
NA |
10% ಸಹ-ಪಾವತಿ ಶುಲ್ಕಗಳನ್ನು ಉಳಿಸಿ |
20% ಸಹ-ಪಾವತಿ ಶುಲ್ಕಗಳನ್ನು ಉಳಿಸಿ |
ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳ ಝೋನ್ ಆಧಾರಿತ ಬೆಲೆಗಳು ಈ ಕೆಳಗಿನ ವಿವರಗಳಿಗೆ ಸಹ ಬದ್ಧವಾಗಿರಬೇಕು:
ಪಾಲಿಸಿದಾರರ ನಿವಾಸದಲ್ಲಿ ಬದಲಾವಣೆ - ನೀವು ಮೀರತ್ನ ನಿವಾಸಿ ಎಂದು ಭಾವಿಸೋಣ, ಆದರೆ ಕೆಲಸದ ಕಾರಣ, ನೀವು ಮುಂಬೈಗೆ ಸ್ಥಳಾಂತರಗೊಳ್ಳಬೇಕಾಗುತ್ತದೆ. ಆದ್ದರಿಂದ, ನೀವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ನೀವು ಝೋನ್ ಅಪ್ಗ್ರೇಡ್ ಕವರ್ ಅನ್ನು ಪಡೆದುಕೊಳ್ಳಬಹುದು ಮತ್ತು ನಿಮ್ಮ ಝೋನ್ ಅನ್ನು ಮೀರತ್ನಿಂದ ಮುಂಬೈಗೆ ಅಪ್ಗ್ರೇಡ್ ಮಾಡಬಹುದು.
ಚಿಕಿತ್ಸಾ ವೆಚ್ಚವು ಮೀರತ್ (ಝೋನ್ B ನಗರ) ಗಿಂತ ಮುಂಬೈನಲ್ಲಿ (ಝೋನ್ A ನಗರ) ಹೆಚ್ಚಿರುವುದರಿಂದ, ಇನ್ಶೂರೆನ್ಸ್ ಕಂಪನಿಯು ನಿಮ್ಮ ಪ್ರೀಮಿಯಂ ಪಾವತಿಯನ್ನು ಅದಕ್ಕೆ ಅನುಗುಣವಾಗಿ ಹೊಂದಿಸುತ್ತದೆ ಮತ್ತು ನೀವು ಹೆಚ್ಚಿನ ಪ್ರೀಮಿಯಂ ಪಾವತಿಸಬೇಕಾಗುತ್ತದೆ.
ಮತ್ತೊಂದೆಡೆ, ನೀವು ಝೋನ್ B ಅಥವಾ C ನಗರದಲ್ಲಿ ವಾಸಿಸುತ್ತಿದ್ದರೂ ಯಾವುದೇ ಝೋನ್ A ನಗರಗಳಲ್ಲಿ ನಿಮ್ಮ ಚಿಕಿತ್ಸೆಯನ್ನು ಪಡೆಯಲು ಬಯಸಿದರೆ (ಉತ್ತಮ ಆಸ್ಪತ್ರೆಗಳು ಮತ್ತು ಸೌಲಭ್ಯಗಳ ಕಾರಣದಿಂದಾಗಿ), ನೀವು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ಝೋನ್ ಅಪ್ಗ್ರೇಡ್ ಕವರ್ ಅನ್ನು ಪಡೆದುಕೊಳ್ಳಬೇಕು.
ಸುಧಾರಿತ ಚಿಕಿತ್ಸೆಯ ನಿಬಂಧನೆ - ಪಾಲಿಸಿದಾರರು ಝೋನ್ C ನಗರದಿಂದ ಝೋನ್ B ಅಥವಾ ಝೋನ್ A ನಗರಕ್ಕೆ ಸ್ಥಳಾಂತರಗೊಂಡಾಗ ಅವರ ಪಾಲಿಸಿ ವ್ಯಾಪ್ತಿಯನ್ನು ಮಿತಿಗೊಳಿಸುವ ಕೆಲವು ಇನ್ಶೂರೆನ್ಸ್ ಪಾಲಿಸಿಗಳು ಇವೆ.
ಝೋನ್ -ಆಧಾರಿತ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಇಂತಹ ಪ್ರಕರಣಗಳಲ್ಲಿ, ಇನ್ಶೂರೆನ್ಸ್ ಪೂರೈಕೆದಾರರು ಹೆಚ್ಚಾಗಿ ಸಹ-ಪಾವತಿ ನಿಬಂಧನೆ ವಿಧಿಸುತ್ತಾರೆ ಹಾಗೂ ಇದರಲ್ಲಿ ಪಾಲಿಸಿದಾರರು ತಮ್ಮ ಆರೋಗ್ಯ ರಕ್ಷಣೆಗಾಗಿ ಮಾಡಿದ ವೆಚ್ಚದ ಒಂದು ಭಾಗವನ್ನು ಪಾವತಿಸಬೇಕಾಗುತ್ತದೆ.
ಇವುಗಳ ಬಗ್ಗೆ ಇನ್ನಷ್ಟು ತಿಳಿಯಿರಿ:
ಡಿಜಿಟ್ ಇನ್ಶೂರೆನ್ಸ್ನಂತಹ ಇನ್ಶೂರೆನ್ಸ್ ಪೂರೈಕೆದಾರರು ಝೋನ್ ಅಪ್ಗ್ರೇಡ್ ಆಡ್-ಆನ್ ಅನ್ನು ಒದಗಿಸುತ್ತಾರೆ ಹಾಗೂ ಇದು ಪಾಲಿಸಿದಾರರಿಗೆ ತಮ್ಮ ನಗರಗಳಲ್ಲಿನ ಚಿಕಿತ್ಸಾ ವೆಚ್ಚದ ಪ್ರಕಾರ ತಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳನ್ನು ಅಪ್ಗ್ರೇಡ್ ಮಾಡುವ ಪ್ರಯೋಜನಗಳನ್ನು ಪಡೆದುಕೊಳ್ಳಲು ಅನುವು ಮಾಡಿಕೊಡುತ್ತದೆ.
ಉದಾಹರಣೆಗೆ, ನೀವು ಝೋನ್ C ನಗರದ ನಿವಾಸಿಯಾಗಿದ್ದರೆ ಮತ್ತು ಆ ನಗರದಲ್ಲಿ ಮಾತ್ರ ಚಿಕಿತ್ಸೆಯ ವೆಚ್ಚವನ್ನು ಕವರ್ ಮಾಡಲು ಸೂಕ್ತವಾದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ, ನೀವು ಝೋನ್ - ಅಪ್ಗ್ರೇಡ್ ಆಡ್-ಆನ್ ಅನ್ನು ಪಡೆದು ನಿಮ್ಮ ಪಾಲಿಸಿಯನ್ನು ಝೋನ್ B ಅಥವಾ ಝೋನ್ A ನಗರಗಳಿಗೂ ಹೊಂದುವಂತೆ ಮಾಡಬಹುದು.
ಈ ಅಪ್ಗ್ರೇಡ್ನೊಂದಿಗೆ, ನೀವು ಯಾವುದೇ ಝೋನ್ B ಅಥವಾ ಝೋನ್ A ನಗರಗಳಲ್ಲಿ ಚಿಕಿತ್ಸೆ ಪಡೆಯಲು ಬಯಸಿದರೆ ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ನೀವು ಹೆಚ್ಚಿನ ಕವರೇಜ್ ಅನ್ನು ಪಡೆಯಬಹುದಾಗಿದೆ. ನೀವು ಕೇವಲ ಈ ಆಡ್-ಆನ್ ಕವರ್ ಅನ್ನು ಆಕೆ ಮಾಡಿ ನಿಮ್ಮ ಯೋಜನೆಗಾಗಿ ಝೋನ್ - ಆಧಾರಿತ ಅಪ್ಗ್ರೇಡ್ ಅನ್ನು ಪಡೆಯಬಹುದು.
ಸ್ಪರ್ಧಾತ್ಮಕ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವ ವಿಷಯ ಬಂದಾಗ, ಹೆಚ್ಚಿನವರು ಝೋನ್ A ನಗರಗಳಿಗೆ ಆದ್ಯತೆ ನೀಡುತ್ತಾರೆ. ಅವುಗಳು ಝೋನ್ B ಅಥವಾ ಝೋನ್ C ನಗರಗಳಿಗಿಂತ ಹೆಚ್ಚು ದುಬಾರಿಯಾಗಿದ್ದರೂ ಸಹ, ನೀವು ಈ ನಗರಗಳಲ್ಲಿ ಅತ್ಯಾಧುನಿಕ ಆರೋಗ್ಯ ಸೇವೆಯನ್ನು ಪಡೆಯಬಹುದು. ಆದ್ದರಿಂದ ಈ ನಗರಗಳಲ್ಲಿ ಚಿಕಿತ್ಸೆಯ ವೆಚ್ಚವು ಇತರ ಎರಡು ಝೋನ್ ಗಳಿಗಿಂತ ಸಹಜವಾಗಿಯೇ ಹೆಚ್ಚಾಗಿರುತ್ತದೆ.
ಚಿಕಿತ್ಸೆಯ ವಿಷಯದಲ್ಲಿ ಝೋನ್ A ಉತ್ತಮವಾಗಿದ್ದರೂ ಸಹ, ಇದರ ಅರ್ಥ ಹೆಚ್ಚಿನ ವೆಚ್ಚಗಳು, ಪರಿಣಾಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂ ಕೂಡಾ ಹೆಚ್ಚಾಗಿರುತ್ತದೆ ಎಂದಾಗಿದೆ.
ಆದರೆ, ಕೇವಲ ಈ ಝೋನ್ ಅಪ್ಗ್ರೇಡ್ ಕವರ್ ಅನ್ನು ಪಡೆದುಕೊಳ್ಳುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಬಹುದು. ಕೇವಲ ಹೆಚ್ಚುವರಿ ಪ್ರೀಮಿಯಂ ಅನ್ನು ಪಾವತಿಸಿ ನೀವು ನಿಮ್ಮ ಅಸ್ತಿತ್ವದಲ್ಲಿರುವ ಪಾಲಿಸಿಯನ್ನು ಅಪ್ಗ್ರೇಡ್ ಮಾಡಬಹುದು.
ಈಗ ನಾವು ಝೋನ್ -ಆಧಾರಿತ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳ ಬಗ್ಗೆ ವಿವರವಾಗಿ ಕಲಿತಿರುವುದರಿಂದ, ಅದರ ಸಾಧಕ-ಬಾಧಕಗಳತ್ತ ಗಮನ ಹರಿಸೋಣ.
ಝೋನ್ B ಅಥವಾ ಝೋನ್ C ನಗರಗಳಲ್ಲಿ ವಾಸಿಸುವವರಿಗೆ ಮತ್ತು ನಗರದಲ್ಲಿಯೇ ಆರೋಗ್ಯ ರಕ್ಷಣೆಯನ್ನು ಬಯಸುವವರಿಗೆ, ಝೋನ್ -ಆಧಾರಿತ ಇನ್ಶೂರೆನ್ಸ್ ಯೋಜನೆಯು ಪ್ರೀಮಿಯಂ ಪಾವತಿಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ.
ವ್ಯಕ್ತಿಗಳು ತಮ್ಮ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳ ಕಡೆಗೆ ತಮ್ಮ ಹಣಕಾಸಿನ ಹೊಣೆಗಾರಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಸವಲತ್ತುಗಳಲ್ಲಿ ಇದೂ ಒಂದಾಗಿದೆ.
ಇದಲ್ಲದೆ, ಯಾವುದೇ ವ್ಯಕ್ತಿ ಝೋನ್ A ಯಲ್ಲಿ ಆರೋಗ್ಯ ಸೇವೆಯನ್ನು ಪಡೆಯಲು ಬಯಸಿದರೆ, ಅವರು ಯಾವಾಗ ಬೇಕಾದರೂ ಅದಕ್ಕಾಗಿ ಹೆಚ್ಚುವರಿ ಪ್ರೀಮಿಯಂ ಅನ್ನು ಪಾವತಿಸಿ ಅದನ್ನು ಅಪ್ ಗ್ರೇಡ್ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ. ಅವರು ಉನ್ನತ ಝೋನ್ ಗೆ ಅಪ್ಗ್ರೇಡ್ ಮಾಡಿದಾಗ, ಝೋನ್ A ನಗರದಲ್ಲಿನ ಚಿಕಿತ್ಸಾ ವೆಚ್ಚವನ್ನು ಕವರ್ ಮಾಡಲು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಸಾಕಾಗುತ್ತದೆ. ಕ್ಲೈಮ್ ಸಮಯದಲ್ಲಿ ಚಿಕಿತ್ಸಾ ವೆಚ್ಚವನ್ನು ಉಳಿಸಲು ಇದು ಅವರಿಗೆ ಅವಕಾಶ ನೀಡುತ್ತದೆ ಮತ್ತು ವಿವಿಧ ಝೋನ್ ಗಳಿಗೆ ಚಿಕಿತ್ಸಾ ವೆಚ್ಚದಲ್ಲಿನ ವ್ಯತ್ಯಾಸವನ್ನು ಅವರು ಪಾವತಿಸಬೇಕಾಗಿರುವುದಿಲ್ಲ.
ಇದು ಆರೋಗ್ಯ ಸೇವೆಯ ಪ್ರಯೋಜನಗಳನ್ನು ಪಡೆಯಲು ಅತ್ಯಂತ ಅನುಕೂಲಕರವಾದ ಮಾರ್ಗವಾಗಿದೆ.
ಹೆಚ್ಚಾಗಿ, ಇನ್ಶೂರೆನ್ಸ್ ಪೂರೈಕೆದಾರರು ಝೋನ್ -ಆಧಾರಿತ ಯೋಜನೆಗಳ ವಿಷಯ ಬಂದಾಗ ಸಹಪಾವತಿ ನಿಬಂಧನೆ ವಿಧಿಸುತ್ತಾರೆ. ಈ ಸಹಪಾವತಿ ನಿಬಂಧನೆಯೊಂದಿಗೆ, ಇನ್ಶೂರೆನ್ಸ್ ಕಂತುಗಳು ಅಗ್ಗವಾಗಬಹುದು, ಆದರೆ ದೀರ್ಘಾವಧಿಯಲ್ಲಿ ನಿಮ್ಮ ಚಿಕಿತ್ಸಾ ವೆಚ್ಚವನ್ನು ಕವರ್ ಮಾಡಲು ನೀವು ಹೆಚ್ಚಿನ ಖರ್ಚನ್ನು ಮಾಡಬೇಕಾಗಬಹುದು. ಇದರಿಂದ ಈ ಪಾಲಿಸಿಯು ನಿಮಗೆ ಅನನುಕೂಲಕರವೆಂದು ಅನಿಸಬಹುದು.
ಆಡ್-ಆನ್ ಝೋನ್ -ಆಧಾರಿತ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವುದು ಪ್ರಯೋಜನಕಾರಿಯಾಗಿದೆ ಏಕೆಂದರೆ ಇದು ನಿಮ್ಮ ಹೆಲ್ತ್ಕೇರ್ ಪಾಲಿಸಿಗಾಗಿ ನೀವು ಪಾವತಿಸುವ ಪ್ರೀಮಿಯಂ ನಲ್ಲಿ ಸಾಕಷ್ಟು ಮೊತ್ತವನ್ನು ಉಳಿಸಲು ನಿಮಗೆ ಅನುವು ಮಾಡಿಕೊಡುತ್ತದೆ.
ಆದರೆ, ನಿಮ್ಮ ಹೆಲ್ತ್ಕೇರ್ ಪಾಲಿಸಿಯ ಈ ನಿಬಂಧನೆಯ ಮೂಲಕ ನೀವು ಏನನ್ನು ಪಡೆಯುತ್ತಿದ್ದೀರಿ ಎಂಬುದರ ಕುರಿತು ನೀವು ಚೆನ್ನಾಗಿ ಅರಿತಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ಷರತ್ತುಗಳನ್ನು ನೋಡುವುದು ಮುಖ್ಯವಾಗಿದೆ!
ಆದ್ದರಿಂದ, ಚೆನ್ನಾಗಿ ಸಂಶೋಧನೆ ಮಾಡಿ, ಪಾಲಿಸಿ ನಿಯಮಗಳನ್ನು ಪರಿಶೀಲಿಸಿ ಮತ್ತು ಝೋನ್ -ಆಧಾರಿತ ಬೆಲೆ ನಿಬಂಧನೆಯೊಂದಿಗೆ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಇನ್ನಷ್ಟು ಪ್ರಯೋಜನಕಾರಿಯಾಗಿಸಿ!