ಇಷ್ಟರಲ್ಲಿ, ಆರೋಗ್ಯ-ಸಂಬಂಧಿತ ಬಿಕ್ಕಟ್ಟಿನ ಸಂದರ್ಭದಲ್ಲಿ ನಿಮ್ಮನ್ನು ಆರ್ಥಿಕವಾಗಿ ರಕ್ಷಿಸಲು ಒಂದು ಹೆಲ್ತ್ ಇನ್ಶೂರೆನ್ಸ್ ಯೋಜನೆ ಯನ್ನು ಹೊಂದುವ ಮಹತ್ವವನ್ನು ನೀವು ತಿಳಿದಿರಬೇಕು. ಆದರೆ ನಿಮ್ಮ ಕುಟುಂಬದ ಸದಸ್ಯರು ಅಥವಾ ಅವಲಂಬಿತರು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಎಲ್ಲಾ ಪ್ರಯೋಜನಗಳಿಂದ ವಂಚಿತರಾಗದೆ ಇರುವುದನ್ನು ಖಚಿತಪಡಿಸಿಕೊಳ್ಳಲು, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಾಗಿ ನೀವು ನಾಮಿನಿಯನ್ನು ಆಯ್ಕೆ ಮಾಡುವುದು ಮುಖ್ಯ.
ನಾಮಿನಿ ಎಂದರೆ ಪಾಲಿಸಿದಾರರಿಂದ ಆಯ್ಕೆಯಾದ ವ್ಯಕ್ತಿ (ಅಥವಾ ಜನರು). ಸಾಮಾನ್ಯ ಸಂದರ್ಭಗಳಲ್ಲಿ, ನೀವು ಆಸ್ಪತ್ರೆ ದಾಖಲಾತಿ ಅಥವಾ ವೈದ್ಯಕೀಯ ಚಿಕಿತ್ಸೆಗಾಗಿ ಹೆಲ್ತ್ ಕ್ಲೈಮ್ ಮಾಡಿದಾಗ ,ಆ ಮೊತ್ತವನ್ನು ನೀವೇ ಮರಳಿ ಪಡೆಯುತ್ತೀರಿ.
ಆದರೆ, ಹಾಸ್ಪಿಟಲೈಸೇಷನ್ ಸಮಯದಲ್ಲಿ ಅಥವಾ ಅಪಘಾತದ ಪರಿಣಾಮವಾಗಿ ನಿಮ್ಮ ಸಾವಿನ ದುರದೃಷ್ಟಕರ ಸಂದರ್ಭದಲ್ಲಿ, ಹೆಲ್ತ್ ಇನ್ಶೂರೆನ್ಸ್ ಕಂಪೆನಿಯು ಈ ನಾಮಿನಿಗೆ ಕ್ಲೈಮ್ ಮೊತ್ತವನ್ನು ಪಾವತಿಸುತ್ತದೆ.
ಲೈಫ್ ಇನ್ಶೂರೆನ್ಸ್ ನಲ್ಲಿ ಇದು ಕಡ್ಡಾಯವಾಗಿದ್ದರೂ, ಹೆಲ್ತ್ ಇನ್ಶೂರೆನ್ಸ್ ಅಥವಾ ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಯೋಜನೆಯಲ್ಲಿ ಸಹ ನಾಮಿನಿಯನ್ನು ನೇಮಿಸಲು ಸಾಧ್ಯವಿದೆ.
ಗಮನಿಸಿ: ಕ್ಯಾಶ್ ಲೆಸ್ ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ ನ ಸಂದರ್ಭದಲ್ಲಿ ಇದು ಅನ್ವಯಿಸುವುದಿಲ್ಲ, ಇಲ್ಲಿ ಮೊತ್ತವನ್ನು ನೇರವಾಗಿ ನೆಟ್ವರ್ಕ್ ಆಸ್ಪತ್ರೆಯೊಂದಿಗೆ ಇತ್ಯರ್ಥಗೊಳಿಸಲಾಗುತ್ತದೆ.
ನಿಮ್ಮ ಪಾಲಿಸಿಗೆ ನೀವು ಯಾರನ್ನು ನಾಮಿನೇಟ್ ಮಾಡಿದ್ದೀರಿ ಎಂಬುದರ ಕುರಿತು ನಿಮ್ಮ ಹೆಲ್ತ್ ಇನ್ಶೂರರ್ ಗೆ ತಿಳಿಸುವುದು ಮುಖ್ಯ. ಇದರಿಂದ, ನಿಮ್ಮ ಆರೋಗ್ಯದಲ್ಲಿ ಏರುಪೆರಾದಲ್ಲಿ, ನಿಮ್ಮ ಪ್ರೀತಿಪಾತ್ರರು ಆರ್ಥಿಕವಾಗಿ ಸುರಕ್ಷಿತವಾಗಿರುತ್ತಾರೆಂದು ನೀವು ಖಚಿತಪಡಿಸಿಕೊಳ್ಳಬಹುದು.
ಮುಖ್ಯವಾಗಿ, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗೆ ನಾಮಿನಿಯನ್ನು ನೇಮಿಸುವುದರಿಂದ ಕೆಟ್ಟದ್ದೆನಾದರೂ ಸಂಭವಿಸಿದಲ್ಲಿ ಆದಷ್ಟು ಕಡಿಮೆ ತೊಂದರೆಗಳಿರುವುದನ್ನು ಇದು ಖಚಿತಪಡಿಸುತ್ತದೆ. ಹೀಗಾಗಿ, ಇದು ನಿಮ್ಮ ಪ್ರೀತಿಪಾತ್ರರಿಗೆ ಎದುರಾದ ಅತೀ ಕಠಿಣ ಪರಿಸ್ಥಿತಿಯನ್ನು ಸ್ವಲ್ಪಮಟ್ಟಿಗೆ ಸುಲಭಗೊಳಿಸುತ್ತದೆ.
ನಿಮ್ಮ ಹೆಲ್ತ್ ಇನ್ಶೂರೆನ್ಸ್ ಯೋಜನೆಗೆ ನೀವು ಯಾರನ್ನು ನಾಮಿನಿಯಾಗಿ ಆಯ್ಕೆ ಮಾಡಬಹುದು ಎಂಬುದರ ಮೇಲೆ ಯಾವುದೇ ನೈಜ ನಿರ್ಬಂಧಗಳಿಲ್ಲ. ಹತ್ತಿರದ ಕುಟುಂಬ ಸದಸ್ಯರನ್ನು ನಾಮಿನೇಟ್ ಮಾಡಲು ಸಾಧ್ಯವಿದೆ, ಇವರಂತೆ
ಅಪ್ರಾಪ್ತ ವಯಸ್ಕರನ್ನು (18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಸಹ ನಾಮಿನಿಯಾಗಿ ಮಾಡಲು ಸಾಧ್ಯವಿದೆ. ಈ ಸಂದರ್ಭದಲ್ಲಿ, ಅಪ್ರಾಪ್ತ ವಯಸ್ಕರು ಕ್ಲೈಮ್ ಮೊತ್ತವನ್ನು ಕಾನೂನುಬದ್ಧವಾಗಿ ನಿಭಾಯಿಸಲು ಸಾಧ್ಯವಿಲ್ಲದ ಕಾರಣ, ನೀವು ಒಬ್ಬ ರಕ್ಷಕರನ್ನು ಅಥವಾ ನಿಯುಕ್ತ ವ್ಯಕ್ತಿಯನ್ನು ಸಹ ನಮೂದಿಸಬೇಕಾಗುತ್ತದೆ.
ಇದರ ಜೊತೆ, ನಾಮಿನಿಯು ಪಾಲಿಸಿದಾರರಿಗಿಂತ ಮೊದಲು ಮರಣಹೊಂದಿದರೆ, ಕ್ಲೈಮ್ ಮೊತ್ತವು ನಿಮ್ಮ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಹೋಗುತ್ತದೆ ಎಂಬುದನ್ನು ನೆನಪಿಡಿ. ಇದನ್ನು ನಿಮ್ಮ ವಿಲ್(ಉಯಿಲು) ಪ್ರಕಾರ ನಿರ್ಧರಿಸಲಾಗುತ್ತದೆ ಅಥವಾ ನ್ಯಾಯಾಲಯಗಳು ನಿರ್ಧರಿಸುತ್ತವೆ.
ವಿಶೇಷವಾಗಿ ಕ್ಲೈಮ್ ಮೊತ್ತವು ಕಷ್ಟಕರ ಸಮಯದಲ್ಲಿ ಅಗತ್ಯ ಹಣಕಾಸಿನ ಬೆಂಬಲವನ್ನು ಒದಗಿಸುವುದರಿಂದ ಸಾಮಾನ್ಯವಾಗಿ, ತಕ್ಷಣದ ವಯಸ್ಕ ಕುಟುಂಬ ಸದಸ್ಯರನ್ನು ನಿಮ್ಮ ನಾಮಿನಿಗಳಾಗಿ ಹೆಸರಿಸಲು ಸಲಹೆ ನೀಡಲಾಗುತ್ತದೆ.
ನೀವು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು, ಆನ್ಲೈನ್ನಲ್ಲಿ ಅಥವಾ ಆಫ್ಲೈನ್ನಲ್ಲಿ, ಹೇಗೆ ಖರೀದಿಸಿದರೂ, ಖರೀದಿಸುವಾಗ ನಾಮಿನಿ ವಿವರಗಳನ್ನು ನೀವು ಸೇರಿಸಬಹುದು. ಆದಾಗ್ಯೂ, ನಿಮ್ಮ ಇನ್ಶೂರರ್ ಗೆ ತಿಳಿಸುವ ಮೂಲಕ ಯಾವುದೇ ಸಮಯದಲ್ಲಿ ಹೊಸ ನಾಮಿನಿಯನ್ನು ನೇಮಿಸಲು ಸಾಧ್ಯವಿದೆ.
ನವೀಕರಣದ ಸಮಯದಲ್ಲಿ ಅಥವಾ ಪಾಲಿಸಿಯ ಅವಧಿಯಲ್ಲಿ ಸಹ ವ್ಯಕ್ತಿಗಳನ್ನು ನಾಮಿನಿಗಳಾಗಿ ಬದಲಾಯಿಸಲು ಅಥವಾ ತೆಗೆದುಹಾಕಲು ಸಾಧ್ಯವಿದೆ. ಇದನ್ನು ಸಹ, ನೀವು ನಿಮ್ಮ ಇನ್ಶೂರರ್ ಅನ್ನು ಸಂಪರ್ಕಿಸುವ ಮೂಲಕ ಮಾಡಬಹುದು.
ಕ್ಲೈಮ್ ಮಾಡುವಾಗ ಯಾವುದೇ ಸಮಸ್ಯೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾಮಿನಿಯ ಸರಿಯಾದ ಮಾಹಿತಿಯನ್ನು ಒದಗಿಸುವುದು ಅವಶ್ಯಕವಾಗುತ್ತದೆ. ಇದರಲ್ಲಿ ಇವುಗಳು ಸೇರಿವೆ:
ದುರಾದೃಷ್ಟವಶಾತ್ ನೀವು (ಪಾಲಿಸಿ ಹೊಂದಿರುವವರು) ಹಾಸ್ಪಿಟಲೈಸೇಷನ್ ಸಮಯದಲ್ಲಿ ಮರಣಹೊಂದಿದಾಗ, ರಿಇಂಬರ್ಸ್ಮೆಂಟ್ ಕ್ಲೈಮ್ ಮಾಡುವುದು ನಾಮಿನಿಗೆ ಬಿಟ್ಟದ್ದು. ರಿಇಂಬರ್ಸ್ಮೆಂಟ್ ಕ್ಲೈಮ್ ಸಂದರ್ಭದಲ್ಲಿ ಅವರು ಇದನ್ನು ಈ ಕೆಳಗಿನಂತೆ ಮಾಡಬಹುದು:
ಹೆಲ್ತ್ ಇನ್ಶೂರೆನ್ಸ್ ನಲ್ಲಿ ನಾಮಿನಿಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ. ಸಾವಿನ ಸಂದರ್ಭದಲ್ಲಿ, ಇದು ಒಬ್ಬರ ಅವಲಂಬಿತರಿಗೆ ಹಣಕಾಸಿನ ರಕ್ಷಣೆಯನ್ನು ಒದಗಿಸುತ್ತದೆ ಮತ್ತು ಯಾವುದೇ ವಿವಾದಗಳು ಉದ್ಭವಿಸದಂತೆ ಸಹ ತಡೆಯುತ್ತದೆ. ನಿಮ್ಮ ನಾಮಿನಿಯಾಗಿ ಯಾರನ್ನು ಬೇಕಾದರೂ ಆಯ್ಕೆ ಮಾಡಲು ಸಾಧ್ಯವಿದೆ, ಅಪ್ರಾಪ್ತ ವಯಸ್ಕರನ್ನೂ ಸಹ. ಹೀಗಾಗಿ, ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು ಆಯ್ಕೆಮಾಡುವಾಗ, ಸರಿಯಾಗಿ ಯೋಚಿಸಿ ನಾಮಿನಿಯನ್ನು ಆಯ್ಕೆ ಮಾಡುವುದು ಬಹಳ ಮುಖ್ಯವಾಗಿದೆ.