ಹೆಲ್ತ್ ಇನ್ಶೂರೆನ್ಸ್ ನಲ್ಲಿ ಬಳಸುವ ಎಲ್ಲಾ ಸಂಕೀರ್ಣ ಪದಗಳು ಮತ್ತು ಪರಿಭಾಷೆಯನ್ನು ಅರ್ಥಮಾಡಿಕೊಳ್ಳಲು ನಿಮಗೆ ಕಷ್ಟವಾಗುತ್ತಿದೆಯೇ? ಚಿಂತಿಸಬೇಡಿ, ನೀವು ಒಬ್ಬರೇ ಅಲ್ಲ. ಅಂದಾಜು 50 ಪುಟಗಳ ಇನ್ಶೂರೆನ್ಸ್ ಡಾಕ್ಯುಮೆಂಟುಗಳನ್ನು ಓದಲು ನೀವು ಪ್ರಯತ್ನಿಸುತ್ತಿರಬಹುದೆಂದು ನಾವು ಅರ್ಥಮಾಡಿಕೊಂಡಿದ್ದೇವೆ.
ಆದರೆ ಚಿಂತಿಸಬೇಡಿ, ನಿಮಗಾಗಿ ಇನ್ಶೂರೆನ್ಸ್ ಅನ್ನು ಸರಳಗೊಳಿಸಲು ನಾವಿದ್ದೇವೆ. ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವ ಮೊದಲು ಕೆಲವು ಪ್ರಮುಖ ನಿಯಮಗಳನ್ನು ತಿಳಿದುಕೊಳ್ಳುವ ಮೂಲಕ ಸರ್ವಸನ್ನದ್ಧರಾಗಲು ನಾವು ನಿಮಗೆ ಸಹಾಯ ಮಾಡುತ್ತೇವೆ.
ಮತ್ತು ನೀವು ತಿಳಿದಿರಬೇಕಾದ ಒಂದು ಪ್ರಮುಖ ಪದವೆಂದರೆ ಸಮ್ ಇನ್ಶೂರ್ಡ್.
ಸಮ್ ಇನ್ಶೂರ್ಡ್ (SI) ಎನ್ನುವುದು ವೈದ್ಯಕೀಯ ತುರ್ತುಸ್ಥಿತಿ, ಅನಾರೋಗ್ಯದ ಚಿಕಿತ್ಸೆ ಇತ್ಯಾದಿಗಳಿಗಾಗಿ ನೀವು ಕ್ಲೈಮ್ ಮಾಡಿದ ಸಂದರ್ಭದಲ್ಲಿ ನಿಮಗೆ (ಇನ್ಶೂರ್ಡ್) ಒದಗಿಸಲಾಗುವ ಗರಿಷ್ಠ ಮೊತ್ತವಾಗಿದೆ. ಇದು ನೇರವಾಗಿ ನಷ್ಟ ಪರಿಹಾರ ಪರಿಕಲ್ಪನೆಯನ್ನು ಆಧರಿಸಿದೆ. ಆದ್ದರಿಂದ, ನೀವು ಕ್ಲೈಮ್ ಮಾಡಿದಾಗ ವೈದ್ಯಕೀಯ ಚಿಕಿತ್ಸೆಗಾಗಿ ಖರ್ಚು ಮಾಡಿದ ವೆಚ್ಚಗಳ ರಿಇಂಬರ್ಸ್ ಮೆಂಟ್ ಅನ್ನು ನೀವು ಪಡೆಯುತ್ತೀರಿ.
ಚಿಕಿತ್ಸೆಯ ವೆಚ್ಚವು ಸಮ್ ಇನ್ಶೂರ್ಡ್ ಗಿಂತ ಕಡಿಮೆ ಅಥವಾ ಅದಕ್ಕೆ ಸಮಾನವಾಗಿದ್ದರೆ ಸಂಪೂರ್ಣ ಬಿಲ್ನ ಅಮೌಂಟ್ ಅನ್ನು ಇನ್ಶೂರೆನ್ಸ್ ಕಂಪನಿಯು ಕವರ್ ಮಾಡುತ್ತವೆ.
ಆದರೆ, ಚಿಕಿತ್ಸೆ ಅಥವಾ ಆಸ್ಪತ್ರೆಗೆ ದಾಖಲಾದ ವೆಚ್ಚಗಳು ಸಮ್ ಇನ್ಶೂರ್ಡ್ ಅನ್ನು ಮೀರಿದರೆ ಸಮ್ ಇನ್ಶೂರ್ಡ್ ಗಿಂತ ಹೆಚ್ಚಿನ ವೆಚ್ಚವನ್ನು ನೀವೇ ಭರಿಸಬೇಕಾಗುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಸಮ್ ಇನ್ಶೂರ್ಡ್ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಕಂಪನಿಯೊಂದಿಗೆ ನೀವು ಕ್ಲೈಮ್ ಮಾಡಿದಾಗ ನೀವು ಪಡೆಯಬಹುದಾದ ನಷ್ಟ ಪರಿಹಾರ ಆಧಾರಿತ ರಿಇಂಬರ್ಸ್ ಮೆಂಟ್ ಆಗಿದೆ.
ಹೆಲ್ತ್ ಇನ್ಶೂರೆನ್ಸ್, ಹೋಮ್ ಇನ್ಶೂರೆನ್ಸ್, ಮೋಟಾರ್ ಇನ್ಶೂರೆನ್ಸ್ ಮುಂತಾದ ಎಲ್ಲಾ ನಾನ್-ಲೈಫ್ ಇನ್ಶೂರೆನ್ಸ್ಗಳು ಈ ಸಮ್ ಇನ್ಶೂರ್ಡ್ ಅನ್ನು ಒದಗಿಸುತ್ತವೆ.
ನಿಮ್ಮ ಸಮ್ ಇನ್ಶೂರ್ಡ್ ಅನ್ನು ಹೆಚ್ಚಿಸಲು ಅನೇಕ ಮಾರ್ಗಗಳಿವೆ:
ರಿನೀವಲ್ ಸಮಯದಲ್ಲಿ - ನೀವು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ರಿನೀವಲ್ ಮಾಡುವಾಗ ಸಮ್ ಇನ್ಶೂರ್ಡ್ ಅನ್ನು ನೀವು ಬಯಸಿದ ಅಮೌಂಟ್ ಗೆ ಹೆಚ್ಚಿಸಿಕೊಳ್ಳಲು ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರನ್ನು ಕೇಳಿಕೊಳ್ಳಿ. (ಇದು ನಿಮ್ಮ ಪ್ರೀಮಿಯಂ ಅನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸುತ್ತದೆ ಎಂಬುದನ್ನು ನೆನಪಿಡಿ)
ಕ್ಯುಮುಲೇಟಿವ್ ಬೋನಸ್ ಮೂಲಕ - ಪ್ರತಿ ಕ್ಲೈಮ್-ಫ್ರೀ ವರ್ಷದಲ್ಲಿ ಕೆಲವು ಇನ್ಶೂರೆನ್ಸ್ ಕಂಪನಿಗಳು ನಿಮ್ಮ ಸಮ್ ಇನ್ಶೂರ್ಡ್ ಗೆ ನಿರ್ದಿಷ್ಟ ಅಮೌಂಟ್ ಅನ್ನು ಹೆಚ್ಚಿಸುತ್ತವೆ. ಡಿಜಿಟ್ ನ ಕಂಫರ್ಟ್ ಪ್ಲಾನ್ ನಲ್ಲಿ ಪ್ರತಿ ಕ್ಲೈಮ್-ಫ್ರೀ ವರ್ಷ ನಿಮ್ಮ ಸಮ್ ಇನ್ಶೂರ್ಡ್ ಶೇ.100 (ಗರಿಷ್ಠ ಶೇ.200ವರೆಗೆ) ಹೆಚ್ಚಾಗುತ್ತದೆ!
ಟಾಪ್-ಅಪ್ ಪ್ಲಾನ್ ಪಡೆಯಿರಿ - ನಿಮ್ಮ ಮೂಲ ಸಮ್ ಇನ್ಶೂರ್ಡ್ ಗಿಂತ ಹೆಚ್ಚಿನ ಕವರೇಜ್ ಪಡೆಯಲು ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರಿಂದ ನೀವು ಟಾಪ್-ಅಪ್ ಅಥವಾ ಸೂಪರ್ ಟಾಪ್-ಅಪ್ ಪ್ಲಾನ್ ಅನ್ನು ಖರೀದಿಸಬಹುದು.
ಗಮನಿಸಿ: ಕೊರೊನಾವೈರಸ್ ಹೆಲ್ತ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ನಿಮ್ಮ ಪಾಲಿಸಿಗೆ ಸರಿಯಾದ ಸಮ್ ಇನ್ಶೂರ್ಡ್ ಅನ್ನು ಬಳಸುವುದು ಬಹಳ ಮುಖ್ಯ. ಈ ಕೇಳಗಿನ ಉದಾಹರಣೆಯ ಬಗ್ಗೆ ಸ್ವಲ್ಪ ಯೋಚಿಸಿ. ಈಗಷ್ಟೇ ನೀವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿದ್ದೀರಿ. ಅದು ಬಹಳಷ್ಟು ಕಾಯಿಲೆಗಳು ಮತ್ತು ಚಿಕಿತ್ಸೆಗಳನ್ನು ಕವರ್ ಮಾಡುತ್ತದೆ ಮತ್ತು ನಿಮಗೆ ರಕ್ಷಣೆಯಿರುವ ಕಾರಣದಿಂದ ಸಂತೋಷವಾಗಿರುತ್ತೀರಿ. ನಂತರ ನೀವು ವೈದ್ಯಕೀಯ ಸಂಕಷ್ಟದಲ್ಲಿರುವ ಪರಿಸ್ಥಿತಿ ಬರುತ್ತದೆ ಮತ್ತು ಚಿಕಿತ್ಸೆಯ ವೆಚ್ಚಗಳನ್ನು ನಿಭಾಯಿಸುವುದು ನಿಮಗೆ ಭಾರಿ ಎನಿಸುತ್ತದೆ.
ನೀವು ಕ್ಲೈಮ್ ಮಾಡುತ್ತೀರಿ, ಆದರೆ ನಿಮ್ಮ ಇನ್ಶೂರೆನ್ಸ್ ಕಂಪನಿಯು ಪಾವತಿಸಿದ ಸಮ್ ಇನ್ಶೂರ್ಡ್ ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುವುದಿಲ್ಲ ಎಂಬುದನ್ನು ತಿಳಿದಾಗ ನೀವು ಆಘಾತಕ್ಕೊಳಗಾಗುತ್ತೀರಿ! ಇದರರ್ಥ ನೀವು ನಿಮ್ಮ ಜೇಬಿನಿಂದ ಬಹಳಷ್ಟು ಪಾವತಿಸಬೇಕಾಗುತ್ತದೆ ಮತ್ತು ನಿಮ್ಮ ಎಲ್ಲಾ ಉಳಿತಾಯವನ್ನು ಚಿಕಿತ್ಸೆಗಾಗಿ ಖರ್ಚು ಮಾಡಬೇಕಾಗುತ್ತದೆ. ಇದೊಂಥರ ಒತ್ತಡದಾಯಕ ಸ್ಥಿತಿ, ಅಲ್ಲವೇ?
ಹೌದು, ನೀವು ಹೆಲ್ತ್ ಇನ್ಶೂರೆನ್ಸ್ ಖರೀದಿಸುವ ಕೆಲಸವನ್ನು ಸರಿಯಾಗಿಯೇ ಮಾಡಿದ್ದೀರಿ. ಆದರೆ ಸರಿಯಾದ ಸಮ್ ಇನ್ಶೂರ್ಡ್ ಅನ್ನು ಆಯ್ಕೆಮಾಡುವಾಗ ಅಷ್ಟೇ ಜಾಗರೂಕತೆ ಪಾಲಿಸಿದ್ದೀರಾ? ನಿಮ್ಮ ಉತ್ತರ 'ಇಲ್ಲ' ಎಂದು ಆಗಿರುತ್ತದೆ. ಅಂತಹ ಸಂದರ್ಭಗಳನ್ನು ತಪ್ಪಿಸಲು ಸರಿಯಾದ ಸಮ್ ಇನ್ಶೂರ್ಡ್ ಅನ್ನು ಆಯ್ಕೆ ಮಾಡುವುದು ಮತ್ತು ಕ್ಲೈಮ್ನ ಸಂದರ್ಭದಲ್ಲಿ ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ಗರಿಷ್ಠ ಅಮೌಂಟ್ ಅನ್ನು ಪಾವತಿಸುವಂತೆ ಮಾಡುವುದು ಬಹಳ ಮುಖ್ಯ. ಈ ರೀತಿಯಾಗಿ ನೀವು ನೆಮ್ಮದಿ ಪಡೆಯುವಿರಿ ಮತ್ತು ನಿಮ್ಮ ಉಳಿತಾಯವು ಭವಿಷ್ಯಕ್ಕಾಗಿ ಹಾಗೆಯೇ ಉಳಿಯುತ್ತದೆ.
ಕಡಿಮೆ ಸಮ್ ಇನ್ಶೂರ್ಡ್ ಎಂದರೆ ಕಡಿಮೆ ಪ್ರೀಮಿಯಂ ಎಂದರ್ಥ. ಆದರೆ ಅದರಿಂದ ನೀವು ಆಮೇಲೆ ಬಹಳಷ್ಟು ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ, ಅಧಿಕ ಸಮ್ ಇನ್ಶೂರ್ಡ್ ತುರ್ತು ಸಂದರ್ಭದಲ್ಲಿ ನೀವು ಅಧಿಕ ಅಮೌಂಟ್ ಅನ್ನು ಹೊಂದುವಂತೆ ಮಾಡುತ್ತದೆ.
ಉತ್ತಮ ಮೊತ್ತದ ಸಮ್ ಇನ್ಶೂರ್ಡ್ ಹೊಂದುವುದರಿಂದ ಅದು ನಿಮ್ಮ ಉಳಿತಾಯವನ್ನು ಹಾಗೆಯೇ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ.
ನಿಮಗೆ ಹಣಕಾಸಿನ ರಕ್ಷಣೆಯಿದೆ ಎಂದು ತಿಳಿಯುವುದರಿಂದ ವೈದ್ಯಕೀಯ ತುರ್ತುಸ್ಥಿತಿಗಳಲ್ಲಿ ಒತ್ತಡ ಕಡಿಮೆ ಇರುತ್ತದೆ.
ಈ ಕೆಳಗಿನ ಅಂಶಗಳ ಆಧಾರದ ಮೇಲೆ ನಿಮ್ಮ ಸಮ್ ಇನ್ಶೂರ್ಡ್ ಆಯ್ಕೆಗೆ ಯಾವ ಮೊತ್ತ ಆರಿಸಿಕೊಂಡರೆ ಒಳಿತು ಎಂಬುದನ್ನು ನಿರ್ಧರಿಸಿ:
ವಯಸ್ಸು ಮತ್ತು ಜೀವನ ಹಂತ - ನಿಮಗೆ ವಯಸ್ಸಾದಾಗ ಅಥವಾ ನೀವು ಮದುವೆಯಾದಾಗ ಅಥವಾ ಮಗುವನ್ನು ಹೊಂದುವವರಿದ್ದಾಗ ನಿಮಗೆ ಹೆಚ್ಚಿನ ಸಮ್ ಇನ್ಶೂರ್ಡ್ ಬೇಕಾಗಬಹುದು.
ಅವಲಂಬಿತರು - ಒಂದೇ ಪಾಲಿಸಿಯ ಅಡಿಯಲ್ಲಿ ಕುಟುಂಬದ ಎಲ್ಲಾ ಸದಸ್ಯರಿಗೆ ಇನ್ಶೂರೆನ್ಸ್ ಪಡೆಯುವಾಗ ಹೆಚ್ಚಿನ ಸಮ್ ಇನ್ಶೂರ್ಡ್ ಅಗತ್ಯವಿರುತ್ತದೆ.
ಆರೋಗ್ಯ ಸ್ಥಿತಿಗಳು - ನೀವು ಯಾವುದಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಕುಟುಂಬದಲ್ಲಿ ಆನುವಂಶಿಕ ಕಾಯಿಲೆಯ ಇತಿಹಾಸ ಇದ್ದರೆ ನೀವು ಹೆಚ್ಚಿನ ಸಮ್ ಇನ್ಶೂರ್ಡ್ ಮುಖ್ಯವೆಂದು ಪರಿಗಣಿಸಬೇಕು.
ಜೀವನಶೈಲಿ - ನೀವು ಹೆಚ್ಚಿನ ಒತ್ತಡದ ಅಥವಾ ವೇಗದ ಜೀವನಶೈಲಿಯನ್ನು ನಡೆಸುತ್ತಿದ್ದರೆ ಅಥವಾ ನೀವು ವಿಪರೀತ ಕ್ರೀಡೆಗಳು ಮತ್ತು ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೆ ನೀವು ಅನಾರೋಗ್ಯಕ್ಕೆ ಒಳಗಾಗುವ ಅಪಾಯ ಹೆಚ್ಚಿರಬಹುದು. ಹಾಗಾಗಿ ನಿಮ್ಮನ್ನು ನೀವು ಉತ್ತಮ ರೀತಿಯಲ್ಲಿ ರಕ್ಷಿಸಿಕೊಳ್ಳಬೇಕಾಗುತ್ತದೆ.
ಸಾಮಾನ್ಯವಾಗಿ ಬಳಸುವ ಎರಡನೆಯ ಪ್ರಮುಖ ಶಬ್ದವೆಂದರೆ, ಸಮ್ ಅಶ್ಯೂರ್ಡ್ . ಇದು ಟರ್ಮ್ ಇನ್ಶೂರೆನ್ಸ್ನ ಕೊನೆಯಲ್ಲಿ ನೀವು ಪಡೆಯುವ ನಿರ್ದಿಷ್ಟ ಮೊತ್ತವಾಗಿದೆ. ಇದನ್ನು ಹೆಚ್ಚಾಗಿ ಲೈಫ್ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಬಳಸಲಾಗುತ್ತದೆ.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಸಮ್ ಅಶ್ಯೂರ್ಡ್ ನೀವು ಆರಂಭದಲ್ಲಿ ಒಪ್ಪಿಕೊಂಡು ಸಹಿ ಮಾಡಿದ ಮೊತ್ತವಾಗಿದ್ದು, ಇದು ನಿಮಗೆ ಅಥವಾ ನಿಮ್ಮ ಫಲಾನುಭವಿಗೆ ಬರುವ ಖಾತರಿಯ ಮೂಲ ಮೊತ್ತವಾಗಿದೆ. ನಿಮ್ಮ ಪಾಲಿಸಿ ಅವಧಿಯ ಅಂತ್ಯದಲ್ಲಿ ಸಮ್ ಅಶ್ಯೂರ್ಡ್ ಬದಲಾಗದೆ ಹಾಗೇ ಉಳಿಯುತ್ತದೆ. ಇದು ಇನ್ಶೂರ್ಡ್ ಪಡೆಯುವ ಪೂರ್ವ-ನಿರ್ಧರಿತ ಪ್ರಯೋಜನವಾಗಿದೆ.
ಉದಾಹರಣೆಗೆ, ಒಂದು ಲೈಫ್ ಇನ್ಶೂರೆನ್ಸ್ ಪಾಲಿಸಿಯು ಮರಣದ ಸಂದರ್ಭದಲ್ಲಿ ₹15 ಲಕ್ಷಗಳ ಸಮ್ ಅಶ್ಯೂರ್ಡ್ ಮಿತಿಯನ್ನು ಹೊಂದಿರಬಹುದು. ಅಂದರೆ ಅಂತಹ ಘಟನೆ ಸಂಭವಿಸಿದಲ್ಲಿ ವ್ಯಕ್ತಿಯ ನಾಮಿನಿಗಳಿಗೆ ₹15 ಲಕ್ಷಗಳ ಸಮ್ ಅಶ್ಯೂರ್ಡ್ ಅನ್ನು ನೀಡಲಾಗುತ್ತದೆ.
ಸಮ್ ಇನ್ಶೂರ್ಡ್ |
ಸಮ್ ಅಶ್ಯೂರ್ಡ್ |
ಸಮ್ ಇನ್ಶೂರ್ಡ್ ನಾನ್-ಲೈಫ್ ಇನ್ಶೂರೆನ್ಸ್ಗೆ ಅನ್ವಯವಾಗುವ ಮೌಲ್ಯವಾಗಿದೆ. |
ಸಮ್ ಅಶ್ಯೂರ್ಡ್ ಲೈಫ್ ಇನ್ಸೂರೆನ್ಸ್ ಪಾಲಿಸಿಗಳಿಗೆ ಅನ್ವಯವಾಗುವ ಮೌಲ್ಯವಾಗಿದೆ. |
ಇದು ಮೂಲತಃ ನಷ್ಟ ಪರಿಹಾರ ತತ್ವವನ್ನು ಆಧರಿಸಿದೆ. ಇದು ಹಾನಿ/ನಷ್ಟಕ್ಕೆ ರಿಇಂಬರ್ಸ್ಮೆಂಟ್/ಪರಿಹಾರವನ್ನು ಒದಗಿಸುತ್ತದೆ. |
ಇದು ಇನ್ಶೂರರ್ ಒಂದು ಸಂಭವನೀಯ ಸಂದರ್ಭದಲ್ಲಿ ಪಾಲಿಸಿಹೋಲ್ಡರಿಗೆ ಪಾವತಿಸುವ ನಿಗದಿತ ಮೊತ್ತವಾಗಿದೆ. |
ಯಾವುದೇ ಹಣಕಾಸಿನ ಪ್ರಯೋಜನವನ್ನು ನೀಡಲಾಗುವುದಿಲ್ಲ. ಇದು ಸಮ್ ಇನ್ಶೂರ್ಡ್ ಪ್ರಕಾರ ರಿಇಂಬರ್ಸ್ಮೆಂಟ್ ಮಾತ್ರ. |
ಸಮ್ ಅಶ್ಯೂರ್ಡ್ ಹಣಕಾಸಿನ ಪ್ರಯೋಜನವಾಗಿದ್ದು, ಪಾಲಿಸಿಯ ಅವಧಿ ಮುಗಿದ ನಂತರ ಇನ್ಶೂರ್ಡ್ ಅಥವಾ ಅವನ/ಅವಳ ಕುಟುಂಬಕ್ಕೆ ನೀಡಲಾಗುತ್ತದೆ. |
ಸಮ್ ಇನ್ಶೂರ್ಡ್ ಮತ್ತು ಸಮ್ ಅಶ್ಯೂರ್ಡ್ ಬಗ್ಗೆ ನಿಮಗೀಗ ಸರಿಯಾದ ಕಲ್ಪನೆ ಮೂಡಿರಬಹುದುದೆಂದು ನಾವು ಭಾವಿಸುತ್ತೇವೆ. ನಿಮ್ಮ ಇನ್ಶೂರೆನ್ಸ್ ಪಾಲಿಸಿಯಲ್ಲಿ ಹೆಚ್ಚು ಪ್ರಯೋಜನ ಪಡೆಯಲು ಸರಿಯಾದ ಸಮ್ ಇನ್ಶೂರ್ಡ್ ಅನ್ನು ಆಯ್ಕೆಮಾಡಿ. ಜಾಗೃತರಾಗಿರಿ ಮತ್ತು ನಿಮ್ಮ ಭವಿಷ್ಯಕ್ಕಾಗಿ ಅತ್ಯುತ್ತಮ ನಿರ್ಧಾರವನ್ನು ತೆಗೆದುಕೊಳ್ಳಿ.