ಹೆಲ್ತ್ ಕೇರ್ ಸೌಲಭ್ಯಗಳ ಹೆಚ್ಚುತ್ತಿರುವ ಬೆಲೆಗಳೊಂದಿಗೆ, ಆರೋಗ್ಯ ತುರ್ತುಸ್ಥಿತಿಗಳು ತೀವ್ರ ಆರ್ಥಿಕ ಸಮಸ್ಯೆಗಳನ್ನು ತಮ್ಮೊಂದಿಗೆ ತರುತ್ತವೆ. ಸಾಮಾನ್ಯವಾಗಿ ಈ ದುರದೃಷ್ಟಕರ ಬಿಕ್ಕಟ್ಟುಗಳು ಕುಟುಂಬದ ಉಳಿತಾಯವನ್ನು ಬರಿದುಮಾಡುತ್ತವೆ ಮತ್ತು ಅವರನ್ನು ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ದುರ್ಬಲಗೊಳಿಸುತ್ತವೆ.
ವಿಶೇಷವಾಗಿ, ಈ ಹೆಲ್ತ್ ಕೇರ್ ಅವಶ್ಯಕತೆಯು, ತ್ವರಿತ ಕ್ರಮ ಅತ್ಯಗತ್ಯವಾಗಿರುವ ಅಪಘಾತದಂತಹ ಒಂದು ತುರ್ತುಸ್ಥಿತಿಯಾಗಿದ್ದರೆ, ರೋಡ್ ಆ್ಯಂಬುಲೆನ್ಸ್ ಸೇವೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಆಧುನಿಕ ಆ್ಯಂಬುಲೆನ್ಸ್ಗಳು 24 x 7 ಲಭ್ಯತೆ, ಕ್ಷಿಪ್ರ ಪ್ರತಿಕ್ರಿಯೆ, ತರಬೇತಿ ಪಡೆದ ಆರೈಕೆದಾರರು ಮತ್ತು ಹೆಚ್ಚು ಸುಸಜ್ಜಿತ ಸುಧಾರಿತ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದರಿಂದ, ಅವುಗಳು ಗಗನಕ್ಕೇರಿದ ಶುಲ್ಕಗಳನ್ನು ಕೇಳುತ್ತವೆ.
ಒಂದು ಆ್ಯಂಬುಲೆನ್ಸ್ ಇನ್ಶೂರೆನ್ಸ್ ಕವರ್, ಪಾಲಿಸಿದಾರರ ವೈದ್ಯಕೀಯ ತುರ್ತುಸ್ಥಿತಿಯ ಸಮಯದಲ್ಲಿ ಉಂಟಾಗುವ ಆ್ಯಂಬುಲೆನ್ಸ್ ವೆಚ್ಚಗಳ ವಿರುದ್ಧ ಹಣಕಾಸಿನ ಪರಿಹಾರವನ್ನು ಒದಗಿಸುತ್ತದೆ.
ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಹೆಲ್ತ್ ಇನ್ಶೂರರ್ ಗಳು ತಮ್ಮ ನಿಯಮಿತ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಆ್ಯಂಬುಲೆನ್ಸ್ ಕವರೇಜ್ ಅನ್ನು ಒಂದು ಅಪ್ಪರ್ ಕ್ಯಾಪ್ ನೊಂದಿಗೆ ಒದಗಿಸುತ್ತಾರೆ. ಈ ಮೇಲಿನ ಕ್ಯಾಪ್ ಹೆಚ್ಚಾಗಿ ಸಮ್ ಇನ್ಶೂರ್ಡ್ನ ಒಂದು ನಿರ್ದಿಷ್ಟ ಶೇಕಡಾವಾರು ಆಗಿರುತ್ತದೆ.
ಸ್ಪಷ್ಟ ತಿಳುವಳಿಕೆಗಾಗಿ ನಾವು ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ:
ನೀವು 5 ಲಕ್ಷಗಳ ಸಮ್ ಇನ್ಶೂರ್ಡ್ ಹೆಲ್ತ್ ಇನ್ಶೂರೆನ್ಸ್ ಅನ್ನು ಹೊಂದಿದ್ದೀರಿ ಎಂದು ಭಾವಿಸೋಣ. ಇದು ಸಮ್ ಇನ್ಶೂರ್ಡ್ ನ 1% ಆ್ಯಂಬುಲೆನ್ಸ್ ಕವರ್ ಅನ್ನು ಒದಗಿಸುತ್ತದೆ, ಅಂದರೆ, ರೂ. 5000. ಈಗ, ಒಂದು ದುರದೃಷ್ಟಕರ ಘಟನೆಯಲ್ಲಿ, ನೀವು ಆ್ಯಂಬುಲೆನ್ಸ್ ಅನ್ನು ಬುಕ್ ಮಾಡಬೇಕಾಗಿತ್ತು, ಹಾಗೂ ಅದಕ್ಕಾಗಿ ನಿಮಗೆ ರೂ. 6000 ಖರ್ಚಾಯಿತು. ಈ ಸಂದರ್ಭದಲ್ಲಿ, ಇನ್ಶೂರೆನ್ಸ್ ಪೂರೈಕೆದಾರರು ನಿಮ್ಮ ಆ್ಯಂಬುಲೆನ್ಸ್ ವೆಚ್ಚದಲ್ಲಿ ರೂ. 5000 ಕವರ್ ಮಾಡುತ್ತಾರೆ ಮತ್ತು ಉಳಿದ ರೂ.1000 ನಿಮ್ಮ ಕಡೆಯಿಂದ ನೀವು ಪಾವತಿಸಬೇಕಾಗುತ್ತದೆ.
ಕೆಲವು ಇನ್ಶೂರೆನ್ಸ್ ಪೂರೈಕೆದಾರರು ತಮ್ಮ ಪಾಲಿಸಿಯ ಭಾಗವಾಗಿ ಆ್ಯಂಬುಲೆನ್ಸ್ ಕವರ್ ಅನ್ನು ಒದಗಿಸುವುದಿಲ್ಲ ಆದರೆ ಪ್ರತ್ಯೇಕವಾಗಿ ಖರೀದಿಸಬಹುದಾದ ಮತ್ತು ಅದಕ್ಕೆ ಅನುಗುಣವಾಗಿ ಪಾವತಿಸಬಹುದಾದ ಒಂದು ಆಡ್-ಆನ್ ಅಡಿಯಲ್ಲಿ ಇದನ್ನು ಕವರ್ ಮಾಡುತ್ತಾರೆ.
ಡಿಜಿಟ್ನಲ್ಲಿ, ನಮ್ಮ ಹೆಲ್ತ್ ಯೋಜನೆಗಳ ಅಡಿಯಲ್ಲಿ ನಾವು ರೋಡ್ ಆ್ಯಂಬುಲೆನ್ಸ್ ವೆಚ್ಚಗಳನ್ನು ಒಂದು ಪಾಲಿಸಿ ವೈಶಿಷ್ಟ್ಯವಾಗಿ ಭರಿಸುತ್ತೇವೆ. ಕವರೇಜ್ ಸಾಮಾನ್ಯವಾಗಿ ಸಮ್ ಇನ್ಶೂರ್ಡ್ ನ 1% ಆಗಿರುತ್ತದೆ, ನಿಮ್ಮ ಪಾಲಿಸಿಯನ್ನು ಅವಲಂಬಿಸಿ, ಒಂದು ಅಪ್ಪರ್ ಕ್ಯಾಪಿನ ಜೊತೆ.
ರೋಡ್ ಆ್ಯಂಬುಲೆನ್ಸ್ ಕವರ್ ಇರುವಾಗ, ನಾವು ಸೌಲಭ್ಯದ ವೆಚ್ಚದ ಬಗ್ಗೆ ಚಿಂತಿಸುವ ಅಗತ್ಯವಿಲ್ಲದಿರುವಾಗ, ನಾವು ನಮ್ಮ ಪ್ರಾಥಮಿಕ ಉದ್ದೇಶದ ಮೇಲೆ ಉತ್ತಮವಾಗಿ ಗಮನಹರಿಸಬಹುದಾಗಿದೆ, ಅಂದರೆ, ರೋಗಿಗಾಗಿ ಅಗತ್ಯವಾದ ವೈದ್ಯಕೀಯ ನೆರವನ್ನು ಪಡೆಯುವುದು.
ಯಾವುದೇ ಮೆಡಿಕಲ್ ಅಲ್ಲದ, ಸಾರಿಗೆ ಪ್ರಯಾಣಕ್ಕಿಂತ ಹೊರತಾಗಿ ಮತ್ತು ಮಿಗಿಲಾಗಿ, ರೋಡ್ ಆ್ಯಂಬುಲೆನ್ಸ್ ಇನ್ನಷ್ಟು ಪ್ರಯೋಜನಗಳನ್ನು ಹೊಂದಿದೆ:
ತುರ್ತು ಸಾರಿಗೆ ಪೂರೈಕೆದಾರರಾಗಿರುವ ಜೊತೆಗೆ, ಸುಧಾರಿತ ಮೆಡಿಕಲ್ ಸೌಲಭ್ಯಗಳನ್ನು ಹೊಂದಿರುವುದರಿಂದ, ರೋಡ್ ಆ್ಯಂಬುಲೆನ್ಸ್ ಪೂರ್ವ ಆಸ್ಪತ್ರೆ ಮೆಡಿಕಲ್ ಆರೈಕೆಯನ್ನು ಒದಗಿಸುವ ಸೇವೆಯನ್ನು ಸಹ ಸಲ್ಲಿಸುತ್ತದೆ.
ಆ್ಯಂಬುಲೆನ್ಸ್ಗಳ ಕ್ಲಿನಿಕಲ್ ಪರಿಸರವು ತುರ್ತುಸ್ಥಿತಿಯ ಸ್ಥಳದಿಂದ ಆಸ್ಪತ್ರೆವರೆಗೆ ರೋಗಿಯ ಸ್ಥಿರವಾದ ಆರೈಕೆಯನ್ನು ಖಚಿತಪಡಿಸುತ್ತದೆ.
ಆ್ಯಂಬುಲೆನ್ಸ್ ರೋಗಿಗೆ ಸಂಪರ್ಕದ ಮೊದಲ ಪಾಯಿಂಟ್ ಆಗಿರುವುದರಿಂದ ಮತ್ತು ಅದರಲ್ಲಿ ತರಬೇತಿ ಪಡೆದ ಸಿಬ್ಬಂದಿ ಪ್ರಾಥಮಿಕ ವೈದ್ಯಕೀಯ ಆರೈಕೆಯನ್ನು ಒದಗಿಸುವುದರಿಂದ, ಇದು ಆಸ್ಪತ್ರೆಯನ್ನು ಮುಂದಿರುವ ಪರಿಸ್ಥಿತಿಯನ್ನು ಎದುರಿಸಲು ಉತ್ತಮವಾಗಿ ಸಿದ್ಧಪಡಿಸಬಹುದು.
ರೋಡ್ ಆ್ಯಂಬುಲೆನ್ಸ್ಗಳನ್ನು ನುರಿತ ಚಾಲಕರು ಮತ್ತು ತರಬೇತಿ ಪಡೆದ ಮೆಡಿಕಲ್ ಸಿಬ್ಬಂದಿ ನಿರ್ವಹಿಸುತ್ತಾರೆ. ಇದರಿಂದಾಗಿ, ಇವುಗಳು ನಿಗದಿತ ಸಮಯದೊಳಗೆ ಬಿಕ್ಕಟ್ಟಿನ ಸ್ಥಳವನ್ನು ತಲುಪಬಹುದು. ಇವು ರೋಗಿಗಳಿಗೆ ತ್ವರಿತ ಮತ್ತು ಪರಿಣಾಮಕಾರಿ ಸೇವೆಯನ್ನು ಒದಗಿಸುತ್ತವೆ.
ಹೆಚ್ಚಿನ ಇನ್ಶೂರೆನ್ಸ್ ಕಂಪೆನಿಗಳು ಈ ಕೆಳಗಿನ ಷರತ್ತುಗಳೊಂದಿಗೆ ತುರ್ತು ಹಾಸ್ಪಿಟಲೈಸೇಷನ್ಗಳಿಗಾಗಿ ರೋಡ್ ಆ್ಯಂಬುಲೆನ್ಸ್ ವೆಚ್ಚಗಳನ್ನು ಕವರ್ ಮಾಡುತ್ತವೆ:
ಇನ್ಶೂರರ್, ತಮ್ಮ ಹಾಸ್ಪಿಟಲೈಸೇಷನ್ ಕವರ್ ಅಡಿಯಲ್ಲಿ ಒಂದು ಕ್ಲೈಮ್ ಅನ್ನು ಒಪ್ಪಿಕೊಂಡರೆ, ಮೇಲೆ ತಿಳಿಸಲಾದ ವೆಚ್ಚವನ್ನು ಪಾವತಿಸುತ್ತಾರೆ.
ಮೊದಲ ಮೆಡಿಕಲ್ ಸೆಂಟರಿನಲ್ಲಿ ನೀವು ತೃಪ್ತಿಕರವಾಗಿ ಚಿಕಿತ್ಸೆ ಪಡೆಯದಿದ್ದಲ್ಲಿ ಇನ್ನೊಂದಕ್ಕೆ ಪ್ರಯಾಣಿಸಬೇಕಾಗಿ ಬಂದರೆ, ನೀವು ಈ ರೋಡ್ ಪ್ರಯಾಣ ವೆಚ್ಚಗಳಿಗೆ ಮರುಪಾವತಿಯನ್ನು ಪಡೆಯುತ್ತೀರಿ.
ಒಟ್ಟು ಕ್ಲೈಮ್ ನಿಮ್ಮ ಪಾಲಿಸಿ ಶೆಡ್ಯೂಲ್ನಲ್ಲಿ ಉಲ್ಲೇಖಿಸಿರುವ ಸಮ್ ಇನ್ಶೂರ್ಡ್ ನ ಲಭ್ಯತೆಯೊಳಗೆ ಇರಬೇಕು.
ಹೆಚ್ಚಿನ ಇನ್ಶೂರೆನ್ಸ್ ಪೂರೈಕೆದಾರರು ಕೆಲವು ಹೊರಗಿಡುವಿಕೆಗಳನ್ನು ಹೊಂದಿರುತ್ತಾರೆ, ಅವುಗಳೆಂದರೆ:
ಯೋಜಿತ ಹಾಸ್ಪಿಟಲೈಸೇಷನ್ ಸಂದರ್ಭದಲ್ಲಿ ಆ್ಯಂಬುಲೆನ್ಸ್ ಕವರ್ ಪ್ರಯೋಜನಗಳು ಲಭ್ಯವಿರುವುದಿಲ್ಲ. ಇದು ತುರ್ತು ಆಸ್ಪತ್ರೆಗೆ ದಾಖಲಾತಿ ಸಂದರ್ಭದಲ್ಲಿ ಮಾತ್ರ ವೆಚ್ಚಗಳನ್ನು ಕವರ್ ಮಾಡುತ್ತದೆ.
ಮನೆ ತಲುಪಿದ ನಂತರ ಉಂಟಾದ ಮರುಕಳಿಸುವ ಪ್ರಯಾಣ ವೆಚ್ಚಗಳು ಈ ಪ್ರಯೋಜನದಲ್ಲಿ ಕವರ್ ಆಗಿರುವುದಿಲ್ಲ.
ತುರ್ತು ವೈದ್ಯಕೀಯ ಸಹಾಯದ ಅಗತ್ಯವಿರುವ ಸಂದರ್ಭದಲ್ಲಿ ಒಂದು ಸುಸಜ್ಜಿತ ಆ್ಯಂಬುಲೆನ್ಸ್ ಅವಶ್ಯಕವಾಗುತ್ತದೆ. ಆದಾಗ್ಯೂ, ಇದು ನಿಮ್ಮ ಜೇಬಿಗೆ ಕತ್ತರಿ ಹಾಕಬಾರದು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳು ಇನ್ಶೂರ್ಡ್ ಮೊತ್ತದ ಒಂದು ನಿರ್ದಿಷ್ಟ ಶೇಕಡಾವಾರು ರೂಪದಲ್ಲಿ ಆ್ಯಂಬುಲೆನ್ಸ್ ಶುಲ್ಕಗಳನ್ನು ಕವರ್ ಮಾಡುತ್ತವೆ. ಆ್ಯಂಬುಲೆನ್ಸ್ ಕವರ್ ಬಗ್ಗೆ ಸಂಪೂರ್ಣ ವಿವರಗಳಿಗಾಗಿ ನಿಮ್ಮ ಪಾಲಿಸಿ ಡಾಕ್ಯುಮೆಂಟ್ ಅನ್ನು ನೀವು ಪರಿಶೀಲಿಸಬೇಕು.