ಹೆಲ್ತ್ ಇನ್ಶೂರೆನ್ಸ್ ಇರುವುದು ಕಾಯಿಲೆ, ಅನಾರೋಗ್ಯ ಅಥವಾ ಅಪಘಾತದ ಕಾರಣದಿಂದಾಗಿ ಆರೋಗ್ಯ ಪರಿಸ್ಥಿತಿಗಳು ಅಥವಾ ಮೆಡಿಕಲ್ ತುರ್ತುಸ್ಥಿತಿಗಳು ಎದುರಾದಾಗ ಹಣಕಾಸಿನ ನಷ್ಟದಿಂದ ನಿಮ್ಮನ್ನು ರಕ್ಷಿಸಲು. ಆದಾಗ್ಯೂ, ಇದು ಕೆಲವು ಪ್ರಮುಖ ನಿಯಮಗಳು ಮತ್ತು ಷರತ್ತುಗಳೊಂದಿಗೆ ಬರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಇವುಗಳಲ್ಲಿ ಲೋಡಿಂಗ್ ಒಂದಾಗಿದೆ.
ಹೆಲ್ತ್ ಇನ್ಶೂರೆನ್ಸ್ ನಲ್ಲಿ, ಲೋಡಿಂಗ್ ಎಂದರೆ ಕೆಲವು "ಅಪಾಯಕಾರಿ ವ್ಯಕ್ತಿಗಳ" ಪ್ರೀಮಿಯಂಗೆ ಸೇರಿಸಲಾಗುವ ಹೆಚ್ಚುವರಿ ಮೊತ್ತವಾಗಿದೆ. ಅಪಾಯಗಳು ವ್ಯಕ್ತಿಯ ಮೆಡಿಕಲ್ ಇತಿಹಾಸ, ಅಭ್ಯಾಸಗಳು ಅಥವಾ ಅಪಾಯಕಾರಿ ಉದ್ಯೋಗದ ಕಾರಣದಿಂದಾಗಿರಬಹುದು.
ಇಂಥವರು ಕೆಲವು ಆರೋಗ್ಯ ಸಮಸ್ಯೆಗಳು ಅಥವಾ ಅನಾರೋಗ್ಯಗಳಿಗೆ ಹೆಚ್ಚಿನ ಅಪಾಯವನ್ನು ಹೊಂದಿರುವ ಜನರಾಗಿರುವುದರಿಂದ ಇವರು ಆ ಅವಧಿಗೆ ಹೆಚ್ಚಿನ ಅಪಾಯಗಳು ಮತ್ತು ನಷ್ಟಗಳಿಗೆ ಒಳಗಾಗುವ ಹೆಚ್ಚಿನ ಸಾಧ್ಯತೆಯನ್ನು ಹೊಂದಿರುತ್ತಾರೆ. ಇಂತಹ ವ್ಯಕ್ತಿಗಳೊಂದಿಗೆ ಉಂಟಾಗಬಹುದಾದ ಈ ಹೆಚ್ಚಿದ ಅಪಾಯಗಳು ಮತ್ತು ಸಂಭಾವ್ಯ ನಷ್ಟಗಳನ್ನು ಕವರ್ ಮಾಡಲು ಇನ್ಶೂರರ್ ಗಳು ಲೋಡಿಂಗ್ ಅನ್ನು ಬಳಸುತ್ತಾರೆ.
ನಾವು ನೋಡಿರುವಂತೆ, ಕೆಲವು ಕಾರಣಗಳಿಂದಾಗಿ ಹೆಚ್ಚಿನ ಆರೋಗ್ಯ ಅಪಾಯದಲ್ಲಿರುವ ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ ಹೆಲ್ತ್ ಇನ್ಶೂರೆನ್ಸ್ ನಲ್ಲಿ ಲೋಡಿಂಗ್ ಶುಲ್ಕಗಳು ಕಾರ್ಯರೂಪಕ್ಕೆ ಬರುತ್ತವೆ. ಇಂತಹ ಜನರಿಗೆ, ಇನ್ಶೂರೆನ್ಸ್ ಕಂಪನಿಯು ಅವರ ಅಪಾಯಗಳಿಂದ ಉಂಟಾಗುವ ಯಾವುದೇ ಹೆಚ್ಚುವರಿ ನಷ್ಟವನ್ನು ಕವರ್ ಮಾಡಲು ಹೆಚ್ಚಿನ ಪ್ರೀಮಿಯಂ ಅನ್ನು ಕೇಳುತ್ತದೆ.
ಉದಾಹರಣೆ 1 : ನೀವು ಮತ್ತು ನಿಮ್ಮ ಸ್ನೇಹಿತರು ಒಂದೇ ರೀತಿಯ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿದ್ದೀರಿ ಎಂದು ಹೇಳೋಣ, ಆದರೆ ನಿಮ್ಮ ಸ್ನೇಹಿತ ನಿಮಗಿಂತ 5 ವರ್ಷ ದೊಡ್ಡವರಾಗಿದ್ದಾರೆ. ಈ ಸಂದರ್ಭದಲ್ಲಿ, ಪಾಲಿಸಿಗಳು ಒಂದೇ ಆಗಿದ್ದರೂ, ಪ್ರೀಮಿಯಂ ಮೊತ್ತಗಳು ವಿಭಿನ್ನವಾಗಿರುತ್ತವೆ ಎಂದು ನೀವು ಕಂಡುಕೊಳ್ಳುತ್ತೀರಿ. ನಿಮ್ಮ ಸ್ನೇಹಿತರ ಇನ್ಶೂರೆನ್ಸ್ ನಿಮ್ಮದಕ್ಕಿಂತ ಹೆಚ್ಚಾಗಿರುತ್ತದೆ. ಏಕೆಂದರೆ ಒಬ್ಬ ವ್ಯಕ್ತಿಗೆ ವಯಸ್ಸು ಹೆಚ್ಚಾದಂತೆ, ಲೋಡಿಂಗ್ ಸಹ ಹೆಚ್ಚಾಗುತ್ತದೆ, ಏಕೆಂದರೆ ಅವರು ಹೆಚ್ಚಿನ ಅನಾರೋಗ್ಯ ಮತ್ತು ಮೆಡಿಕಲ್ ಪರಿಸ್ಥಿತಿಗಳ ಅಪಾಯವನ್ನು ಹೊಂದಿರುತ್ತಾರೆ.
ಉದಾಹರಣೆ 2 : ನಿಮ್ಮ ತಂದೆ ಯಾವಾಗಲೂ ತಮ್ಮ ಪ್ರೀಮಿಯಂ ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸುತ್ತಾರೆ ಎಂದು ಭಾವಿಸಿ, ಆದರೆ ಒಂದು ದಿನ ಅವರು ಕೆಲವು ಮೆಡಿಕಲ್ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ. ಇದು ಅವರ ಇನ್ಶೂರೆನ್ಸ್ ಪಾಲಿಸಿಯಲ್ಲಿ ಕವರ್ ಆಗಿರುತ್ತದೆ ಮತ್ತು ಅವರ ಕ್ಲೈಮ್ ಸರಾಗವಾಗಿ ಕವರ್ ಆಯಿತು ಎಂದು ಅವರು ಆರಂಭದಲ್ಲಿ ಸಂತೋಷಪಡುತ್ತಾರೆ. ಆದರೆ, ನವೀಕರಣದ ಸಮಯದಲ್ಲಿ, ಅವರು ತಮ್ಮ ಪ್ರೀಮಿಯಂ ಅನ್ನು ಹೆಚ್ಚಿಸಿರುವುದನ್ನು ನೋಡಿ ಆಶ್ಚರ್ಯಚಕಿತರಾಗುತ್ತಾರೆ. ಈ ಸಂದರ್ಭದಲ್ಲಿ, ಒಬ್ಬ ಅಪಾಯಕಾರಿ ವ್ಯಕ್ತಿಯನ್ನು ಕವರ್ ಮಾಡಲು ಇನ್ಶೂರೆನ್ಸ್ ಪೂರೈಕೆದಾರರಿಂದ ಹೆಚ್ಚುವರಿ ಮೊತ್ತವನ್ನು ವಿಧಿಸಲಾಗಿದೆ.
ಮೇಲಿನ ಈ ಉದಾಹರಣೆಗಳಲ್ಲಿ ಕಂಡಂತೆ, ಲೋಡಿಂಗ್ ಹೆಚ್ಚಿನ ಅಪಾಯದ ವ್ಯಕ್ತಿಗೆ ಇನ್ಶೂರೆನ್ಸ್ ದರಗಳನ್ನು ಹೆಚ್ಚಿಸುತ್ತದೆ. ಇದು ಪ್ರೀಮಿಯಂ ಮೊತ್ತದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಆದಾಗ್ಯೂ, ಈ ಹೆಚ್ಚಳವು ವಿಭಿನ್ನ ವ್ಯಕ್ತಿಗಳಿಗೆ ವಿಭಿನ್ನವಾಗಿರುತ್ತದೆ, ಏಕೆಂದರೆ ಲೋಡಿಂಗ್ ಅನ್ನು ಹಲವಾರು ಅಂಶಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಒಬ್ಬ ವ್ಯಕ್ತಿಯ ಪ್ರೀಮಿಯಂ ಎಷ್ಟು ಹೆಚ್ಚಾಗಿದೆ ಎಂಬುದನ್ನು ಇದು ಮೆಡಿಕಲ್ ಅಪಾಯಗಳ ಆಧಾರದ ಮೇಲೆ ನಿರ್ಧರಿಸುತ್ತದೆ.
ನಿಮ್ಮ ಪಾಲಿಸಿಗೆ ಅನ್ವಯಿಸಲಾದ ಲೋಡಿಂಗ್ ಮೊತ್ತದ ಮೇಲೆ ಪರಿಣಾಮ ಬೀರುವ ಕೆಲವು ಪ್ರಮುಖ ಅಂಶಗಳು ಇಲ್ಲಿವೆ:
ಹೆಲ್ತ್ ಇನ್ಶೂರೆನ್ಸ್ ನಲ್ಲಿ ಪ್ರೀಮಿಯಂಗಳನ್ನು ಮತ್ತು ಲೋಡಿಂಗ್ ಅನ್ನು ನಿರ್ಧರಿಸುವಾಗ ಪರಿಗಣನೆಗೆ ತೆಗೆದುಕೊಳ್ಳಲಾದ ವಿಷಯಗಳಲ್ಲಿ ಒಂದಾಗಿರುತ್ತದೆ, ವ್ಯಕ್ತಿಯ ವಯಸ್ಸು. ಏಕೆಂದರೆ ಒಬ್ಬ ವ್ಯಕ್ತಿಗೆ ವಯಸ್ಸಾದಂತೆ, ಮರಣ, ಹಾಸ್ಪಿಟಲೈಸೇಷನ್ ಮತ್ತು ಅನಾರೋಗ್ಯ ಹಾಗೂ ಕಾಯಿಲೆಗಳ ಪ್ರತಿ ಮೆಡಿಕಲ್ ವೆಚ್ಚಗಳು ಅಧಿಕವಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಆದ್ದರಿಂದ, 50 ವರ್ಷ ವಯಸ್ಸಿನ ವ್ಯಕ್ತಿಗೆ ಪ್ರೀಮಿಯಂ 25 ವರ್ಷ ವಯಸ್ಸಿನ ವ್ಯಕ್ತಿಗಿಂತ ಗಮನಾರ್ಹವಾಗಿ ಹೆಚ್ಚಾಗಿರುತ್ತದೆ.
ಉದಾಹರಣೆಗೆ, 25 ವರ್ಷ ವಯಸ್ಸಿನ ವ್ಯಕ್ತಿಯು ಹೆಲ್ತ್ ಇನ್ಶೂರೆನ್ಸ್ ಗಾಗಿ 3 ಲಕ್ಷಗಳ ಸಮ್ ಇನ್ಶೂರ್ಡ್ ಗಾಗಿ ₹2,414/ವರ್ಷ ಪ್ರೀಮಿಯಂ ಅನ್ನು ಪಾವತಿಸಬೇಕಾಗಬಹುದು, 50 ವರ್ಷ ವಯಸ್ಸಿನವರು ಅದೇ ಮೊತ್ತವನ್ನು ಪಡೆಯಲು ₹6,208/ವರ್ಷ ಪಾವತಿಸಬೇಕಾಗಬಹುದು.
ಹೆಚ್ಚುವರಿಯಾಗಿ, ಹೆಚ್ಚಿನ ಇನ್ಶೂರೆನ್ಸ್ ಕಂಪನಿಗಳು ಹೊಸ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ವ್ಯಕ್ತಿಗಳಿಗೆ ವಯಸ್ಸಿನ ಮಿತಿಯನ್ನು ಸಹ ಹೊಂದಿವೆ. ಇದು ಸಾಮಾನ್ಯವಾಗಿ 65-80 ವರ್ಷಗಳ ಮಧ್ಯೆ ಬದಲಾಗುತ್ತದೆ, ವ್ಯಕ್ತಿಗೆ ವಯಸ್ಸಾದಂತೆ, ಅವರ ಅಪಾಯಕಾರಿ ಅಂಶಗಳನ್ನು ಮತ್ತು ಆರೋಗ್ಯ-ಸಂಬಂಧಿತ ವೆಚ್ಚಗಳನ್ನು ಅಂದಾಜು ಮಾಡುವುದು ಹೆಚ್ಚು ಕಷ್ಟಕರವಾಗಿರುತ್ತದೆ.
ಲೋಡಿಂಗ್ ನಲ್ಲಿ ಮುಖ್ಯವಾದ ಮತ್ತೊಂದು ಅಂಶವೆಂದರೆ ವ್ಯಕ್ತಿಯ ಮೆಡಿಕಲ್ ಸ್ಥಿತಿ. ಯಾರಾದರೂ ಶಸ್ತ್ರಚಿಕಿತ್ಸೆಗಳು, ಗಂಭೀರ ಕಾಯಿಲೆಗಳು ಅಥವಾ ಇತರ ಮೆಡಿಕಲ್ ಸಮಸ್ಯೆಗಳ ಇತ್ತೀಚಿನ ಇತಿಹಾಸವನ್ನು ಹೊಂದಿರುವಾಗ ಇದು ಆಗಬಹುದು, ಉದಾಹರಣೆಗೆ ಹೆಚ್ಚಿದ ಸಕ್ಕರೆ ಮಟ್ಟ. ಈ ಸಂದರ್ಭದಲ್ಲಿ, ರಿನೀವಲ್ ಆದ ನಂತರ ಲೋಡಿಂಗ್ ಅನ್ವಯವಾಗಬಹುದು.
ಆದಾಗ್ಯೂ, ಇಂತಹ ನಿದರ್ಶನಗಳಲ್ಲಿ, ವ್ಯಕ್ತಿಯ ಪರಿಸ್ಥಿತಿಯು ಬದಲಾದಾಗ (ಉದಾಹರಣೆಗೆ ವ್ಯಕ್ತಿಯು ತಮ್ಮ ಸಕ್ಕರೆ ಮಟ್ಟವನ್ನು ಕಡಿಮೆಗೊಳಿಸಿದಾಗ) ಲೋಡಿಂಗ್ ಅನ್ನು ಮರು ಪರಿಶೀಲಿಸಬಹುದು ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.
ಒಬ್ಬ ವ್ಯಕ್ತಿಯು ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ಆಸ್ತಮಾದಂತಹ ಮೊದಲೇ ಅಸ್ತಿತ್ವದಲ್ಲಿರುವ ಮೆಡಿಕಲ್ ಸ್ಥಿತಿಯಿಂದ ಬಳಲುತ್ತಿದ್ದರೆ, ಅದೇ ವಯಸ್ಸಿನ ಆರೋಗ್ಯವಂತ ಜನರಿಗೆ ಹೋಲಿಸಿದರೆ ಅವರು ಹೆಚ್ಚಿನ ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ.
ಇದು ಸಾಮಾನ್ಯವಾಗಿ ಏಕಿರುತ್ತದೆ ಎಂದರೆ ಯಾರಾದರೂ ಮೊದಲೇ ಅಸ್ತಿತ್ವದಲ್ಲಿರುವ ಸ್ಥಿತಿಯನ್ನು ಹೊಂದಿದ್ದರೆ, ಇದು ಆಸ್ಪತ್ರೆಯ ವೆಚ್ಚಗಳ ಹೆಚ್ಚಿನ ಕ್ಲೈಮ್ಗಳಿಗೆ ಮತ್ತು ಹೆಚ್ಚಿನ ಮೆಡಿಕಲ್ ಬಿಲ್ಗಳಿಗೆ ಸಹ ಕಾರಣವಾಗಬಹುದು. ಹೀಗಾಗಿ, ಇನ್ಶೂರೆನ್ಸ್ ಕಂಪನಿಗಳು ಇವುಗಳನ್ನು ಹೆಚ್ಚಿನ ಅಪಾಯವೆಂದು ನೋಡಬಹುದು ಮತ್ತು ಅವರ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ನ ಲೋಡಿಂಗ್ ಅನ್ನು ಪರಿಗಣಿಸಬಹುದು.
ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ನ ಲೋಡಿಂಗ್ ಮೇಲೆ ಪ್ರಮುಖ ಪರಿಣಾಮವನ್ನು ಬೀರುವ ಒಂದು ಅಂಶವೆಂದರೆ ತಂಬಾಕು ಅಥವಾ ನಿಕೋಟಿನ್ ಬಳಕೆ. ಇದು ಧೂಮಪಾನವಾಗಿರಲಿ ಅಥವಾ ತಂಬಾಕು ಜಗಿಯುವುದಾಗಿರಲಿ, ಶ್ವಾಸಕೋಶದ ಸೋಂಕುಗಳು, ಕ್ಯಾನ್ಸರ್ ಮತ್ತು ಇತರ ಗಂಭೀರ ಕಾಯಿಲೆಗಳ ಸಾಧ್ಯತೆಗಳು ಇವುಗಳಿಂದಾಗಿ ತೀವ್ರವಾಗಿ ಹೆಚ್ಚಾಗುವುದರಿಂದ ವ್ಯಕ್ತಿಯನ್ನು ಕವರ್ ಮಾಡುವುದರಲ್ಲಿ ಹೆಚ್ಚಿನ ಅಪಾಯವಿರುತ್ತದೆ.
ವಾಸ್ತವವಾಗಿ, ಧೂಮಪಾನಿಗಳಿಗೆ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಗಳು ಧೂಮಪಾನಿಗಳಲ್ಲದವರಿಗಿಂತ ಸುಮಾರು ದ್ವಿಗುಣವಾಗಿರುತ್ತದೆ. 25 ವರ್ಷ ವಯಸ್ಸಿನ ಧೂಮಪಾನಿಗಳಲ್ಲದವರು ₹1 ಕೋಟಿ ಮೊತ್ತಕ್ಕೆ ₹5,577/ವರ್ಷ ಪಾವತಿಸಬೇಕಾಗಬಹುದು, 25 ವರ್ಷ ವಯಸ್ಸಿನ ಧೂಮಪಾನಿಗಳು ಅದೇ ಮೊತ್ತಕ್ಕೆ ವರ್ಷಕ್ಕೆ ₹9,270 ಪಾವತಿಸುತ್ತಾರೆ.
ಉದ್ಯೋಗ - ನಿಮ್ಮ ಉದ್ಯೋಗವು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿಯಾದ ಕೆಲಸವನ್ನು ಒಳಗೊಂಡಿದ್ದರೆ, ಇನ್ಶೂರರ್ ಗಳು ನಿಮಗೆ ಹೆಲ್ತ್ ಇನ್ಶೂರೆನ್ಸ್ ಮೇಲೆ ಹೆಚ್ಚಿನ ಪ್ರೀಮಿಯಂ ಅನ್ನು ಕೇಳಬಹುದು.
ನಿವಾಸದ ಸ್ಥಳ - ನೀವು ವಾಸಿಸುವ ಪ್ರದೇಶವು ಹವಾಮಾನ ಸಮಸ್ಯೆಗಳು ಅಥವಾ ಅಶಾಂತಿಯ ಹೆಚ್ಚಿನ ಘಟನೆಗಳನ್ನು ಹೊಂದಿದ್ದರೆ, ನೀವು ರೆಸಿಡೆೆನ್ಶಿಯಲ್ (ವಸತಿ) ಲೋಡಿಂಗ್ ಅನ್ನು ಎದುರಿಸಬೇಕಾಗಬಹುದು.
ಸ್ಥೂಲಕಾಯತೆ - ಅಧಿಕ ತೂಕ ಹೊಂದಿರುವ ವ್ಯಕ್ತಿಗಳು (ಬಿಎಂಐ ಆಧಾರದ ಮೇಲೆ) ಮಧುಮೇಹ, ಅಧಿಕ ರಕ್ತದೊತ್ತಡ, ಇತ್ಯಾದಿ ಕಾಯಿಲೆಗಳಿಗೆ ಹೆಚ್ಚು ಒಳಗಾಗುತ್ತಾರೆ ಎಂದು ಇನ್ಶೂರೆನ್ಸ್ ಕಂಪೆನಿಗಳು ಪರಿಗಣಿಸುತ್ತವೆ. ಇದು ಹೆಚ್ಚಿನ ಕ್ಲೈಮ್ಗಳಿಗೆ ಕಾರಣವಾಗಬಹುದಾದ್ದರಿಂದ, ಅವರು ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಲೋಡಿಂಗ್ ಮಾಡುವುದನ್ನು ಪರಿಗಣಿಸುತ್ತಾರೆ.
ನಾವು ನೋಡಿರುವಂತೆ, ಒಬ್ಬರು ಕ್ಲೈಮ್ ಮಾಡುವ ಅಪಾಯವು ಸಾಮಾನ್ಯಕ್ಕಿಂತ ಅಧಿಕವಿದೆ ಎಂದು ಭಾವಿಸಿದಾಗ ಇನ್ಶೂರರ್ ಗಳು ಸಾಮಾನ್ಯವಾಗಿ ಲೋಡಿಂಗ್ ಅನ್ನು ಬಳಸುತ್ತಾರೆ.
ಆದಾಗ್ಯೂ, ಕೆಲವು ಇನ್ಶೂರೆನ್ಸ್ ಕಂಪನಿಗಳು, ಲೋಡಿಂಗ್ ಬದಲು ಹೊರಗಿಡುವಿಕೆಗಳ ಪರಿಕಲ್ಪನೆಯನ್ನು ಬಳಸುತ್ತವೆ. ಹೊರಗಿಡುವಿಕೆ ಎಂದರೆ ಒಬ್ಬ ವ್ಯಕ್ತಿಯು ಅದೇ ಪ್ರೀಮಿಯಂ ಅನ್ನು ಪಾವತಿಸುವುದನ್ನು ಮುಂದುವರಿಸಬಹುದು (ಲೋಡಿಂಗ್ ಇಲ್ಲದೆಯೇ), ಆದರೆ ಕೆಲವು ಷರತ್ತುಗಳು ಅಥವಾ ಹೊರಗಿಡುವಿಕೆಗಳಿಗೆ ಒಳಪಟ್ಟಿರುವಂತೆ.
ಉದಾಹರಣೆಗೆ, ನಿಮ್ಮ ಇನ್ಶೂರೆನ್ಸ್ ಪಾಲಿಸಿಯು ಕ್ಯಾನ್ಸರ್-ಸಂಬಂಧಿತ ವೆಚ್ಚಗಳು ಅಥವಾ ಚಿಕಿತ್ಸೆಗಳು, ಅಥವಾ ಹೆರಿಗೆ ಸಂಬಂಧಿತ ವೆಚ್ಚಗಳು ಅಥವಾ ಸಾಹಸ ಕ್ರೀಡೆಗಳಿಗೆ ಸಂಬಂಧಿಸಿದ ಗಾಯಗಳನ್ನು ಹೊರತುಪಡಿಸಬಹುದು. ಹೀಗಿದ್ದರೆ, ಈ ಸನ್ನಿವೇಶಗಳಿಗೆ ನೀವು ಕ್ಲೈಮ್ ಮಾಡಲು ಸಾಧ್ಯವಾಗುವುದಿಲ್ಲ.
ಇತ್ತೀಚಿನ ದಿನಗಳಲ್ಲಿ, ಅನೇಕ ಇನ್ಶೂರೆನ್ಸ್ ಕಂಪನಿಗಳು ನಿಮಗೆ ಲೋಡಿಂಗ್ ಅಥವಾ ಹೊರಗಿಡುವಿಕೆಯ ನಡುವೆ ಆಯ್ಕೆಯನ್ನು ನೀಡುತ್ತವೆ. ಇದರರ್ಥ ನೀವು ಹೆಚ್ಚು ಕಾಂಪ್ರೆಹೆನ್ಸಿವ್ ಕವರೇಜ್ ಅನ್ನು ಇನ್ನೂ ಸಹ ಪಡೆಯುತ್ತೀರಿ, ಆದರೆ ಹೆಚ್ಚುವರಿ ದರದೊಂದಿಗೆ.
ಹೆಚ್ಚಿನ ಇನ್ಶೂರರ್ ಗಳು ಮತ್ತು ಹಣಕಾಸು ತಜ್ಞರು ಇನ್ಶೂರರ್ ಮತ್ತು ಗ್ರಾಹಕರು ಇಬ್ಬರನ್ನೂ ರಕ್ಷಿಸಲು ಅನೇಕ ಸಂದರ್ಭಗಳಲ್ಲಿ ಲೋಡಿಂಗ್ ನ ಅಗತ್ಯವಿದೆ ಎಂದು ನಂಬುತ್ತಾರೆ.
ಮೆಡಿಕಲ್ ಕ್ಲೈಮ್ ಮಾಡುವಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಅಪಾಯದಲ್ಲಿರುವ ವ್ಯಕ್ತಿಗಳಿಂದ ಆಗುವ ನಷ್ಟದ ವಿರುದ್ಧ, ಇದು ಇನ್ಶೂರರ್ ಗಳಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸುತ್ತದೆ. ಮತ್ತು, ಗ್ರಾಹಕರ ದೃಷ್ಟಿಕೋನದಿಂದ, ಹೆಚ್ಚಿನ ಅಪಾಯದ ಅಂಶವನ್ನು ಹೊಂದಿರುವ ಅನೇಕ ಜನರಿಗೆ ಹೆಚ್ಚು ಕಾಂಪ್ರೆಹೆನ್ಸಿವ್ ಆದ ಇನ್ಶೂರೆನ್ಸ್ ಕವರೇಜ್ ಪಡೆಯಲು ಇದು ಅನುಮತಿಸುತ್ತದೆ.
ಇದು 65-80 ವರ್ಷಕ್ಕಿಂತ ಮೇಲ್ಪಟ್ಟವರು, ಅಧಿಕ ರಕ್ತದೊತ್ತಡ ಅಥವಾ ಮಧುಮೇಹದಂತಹ ಪ್ರಮುಖ ಕಾಯಿಲೆಗಳಿಂದ, ಪ್ರಮುಖ ಶಸ್ತ್ರಚಿಕಿತ್ಸೆಯ ಇತಿಹಾಸ, ಪ್ರತಿಕೂಲ ಕುಟುಂಬ ಇತಿಹಾಸ ಅಥವಾ ಧೂಮಪಾನದಂತಹ ಕೆಟ್ಟ ಅಭ್ಯಾಸಗಳಿಂದ ಬಳಲುತ್ತಿರುವವರನ್ನು ಒಳಗೊಂಡಿರುತ್ತದೆ. ಹೀಗಾಗಿ, ಒಬ್ಬ ವ್ಯಕ್ತಿಯ ಪ್ರೀಮಿಯಂ ಅನ್ನು ಲೆಕ್ಕಾಚಾರ ಮಾಡುವಾಗ ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವ ಮೂಲಕ, ಇನ್ಶೂರೆನ್ಸ್ ಕಂಪನಿಗಳು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಕಡಿಮೆ ಇರುವ ಗ್ರಾಹಕರಿಗೆ ಈ ದಾರಿಯನ್ನು ಸುಲಭವಾಗಿಸುತ್ತದೆ.
ಉದಾಹರಣೆಗೆ, ಒಂದೇ ರೀತಿಯ ಇನ್ಶೂರೆನ್ಸ್ ಕವರೇಜ್ ಅನ್ನು ಹೊಂದಿರುವ ಇಬ್ಬರನ್ನು ನಾವು ನೋಡೋಣ, ಆದರೆ ಅವರಲ್ಲಿ ಒಬ್ಬರು ಹೆಚ್ಚಿನ ಆರೋಗ್ಯ ಅಪಾಯವನ್ನು ಹೊಂದಿರುತ್ತಾರೆ. ಲೋಡಿಂಗ್ ಇಲ್ಲದೆ, ಇಬ್ಬರೂ ಒಂದೇ ಪ್ರೀಮಿಯಂ ಅನ್ನು ಪಾವತಿಸುತ್ತಾರೆ, ಇದು ಕಡಿಮೆ-ಅಪಾಯದ ವ್ಯಕ್ತಿಗೆ ಅನ್ಯಾಯವಾಗುತ್ತದೆ, ಏಕೆಂದರೆ ಕೊನೆಗೆ ಅವರು ಹೆಚ್ಚು ಪಾವತಿಸಲಿದ್ದಾರೆ.
ಆದಾಗ್ಯೂ, ಲೋಡಿಂಗ್ ಅನ್ನು ಸಮರ್ಥಿಸಲಾಗದ ಸಂದರ್ಭಗಳು ಸಹ ಇರುತ್ತವೆ, ಯಾವಾಗವೆಂದರೆ, ಸುಲಭವಾಗಿ ಚಿಕಿತ್ಸೆ ನೀಡಬಹುದಾದ ಮತ್ತು ಹೆಚ್ಚಿನ ತೊಡಕುಗಳ ಕಡಿಮೆ ಅಪಾಯವನ್ನು ಹೊಂದಿರುವ ಕಾರ್ಯವಿಧಾನದ ನಂತರ ವ್ಯಕ್ತಿಗಳಿಗೆ ಇದನ್ನು ಅನ್ವಯಿಸಿದಾಗ. ಉದಾಹರಣೆಗೆ, ಕ್ಯಾಟರಾಕ್ಟ್ ಅಥವಾ ಹರ್ನಿಯಾದಂತಹ ಶಸ್ತ್ರಚಿಕಿತ್ಸೆಗಳ ಇತಿಹಾಸ ಹೊಂದಿರುವ ವ್ಯಕ್ತಿಗಳು.