ಹೆಲ್ತ್ ಇನ್ಶೂರೆನ್ಸ್ ಆನ್‌ಲೈನ್‌ನಲ್ಲಿ ಖರೀದಿಸಿ

ಡಿಜಿಟ್ ಹೆಲ್ತ್ ಇನ್ಶೂರೆನ್ಸ್ ಗೆ ಬದಲಾಯಿಸಿ.

ಇಎಂಐ ನಲ್ಲಿ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಒಳ್ಳೆಯ ಉಪಾಯವೇ?

ಹೆಲ್ತ್ ಇನ್ಶೂರೆನ್ಸ್‌ನ ಪ್ರಾಮುಖ್ಯತೆಯನ್ನು ಉತ್ಪ್ರೇಕ್ಷೆ ಮಾಡಿ ಹೇಳಲಾಗುವುದಿಲ್ಲ. ಆದರೆ, ಅನೇಕ ಜನರು ಹೆಲ್ತ್ ಇನ್ಶೂರೆನ್ಸ್ ಖರೀದಿಸುವುದರ ಬಗ್ಗೆ ಗಂಭೀರವಾಗಿ ಪರಿಗಣಿಸದಿರಬಹುದು ಮತ್ತು ಇದಕ್ಕೆ ಮುಖ್ಯ ಕಾರಣವೆಂದರೆ ವೆಚ್ಚ. ತಿಂಗಳ ಅಥವಾ ಸ್ಥಿರ ಆದಾಯವನ್ನು ಅವಲಂಬಿಸಿರುವ ಜನರಿಗೆ ವಾರ್ಷಿಕ ಪ್ರೀಮಿಯಂ ಅನ್ನು ಒಂದೇ ಮೊತ್ತದಲ್ಲಿ ಪಾವತಿಸಲು ಕಷ್ಟವಾಗಬಹುದು.

ಆದ್ದರಿಂದ, ಭಾರತೀಯರಿಗೆ ಹೆಲ್ತ್ ಇನ್ಶೂರೆನ್ಸ್‌ನ ಕೈಗೆಟುಕುವಿಕೆಯನ್ನು ಹೆಚ್ಚಿಸಲು, 2019 ರಲ್ಲಿ ಇನ್ಶೂರೆನ್ಸ್ ರೆಗ್ಯುಲೇಟರಿ ಆ್ಯಂಡ್ ಡೆವಲಪ್ ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐ.ಆರ್.ಡಿ.ಎ.ಐ) ಹೆಲ್ತ್ ಇನ್ಶೂರೆನ್ಸ್ ಕಂಪನಿಗಳಿಗೆ ತನ್ನ ಪಾಲಿಸಿಹೋಲ್ಡರ್ಸ್ ಗೆ ಇಎಂಐ ಗಳಲ್ಲಿ ವಾರ್ಷಿಕ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಪಾವತಿಸುವ ಆಯ್ಕೆಯನ್ನು ನೀಡುವಂತೆ ಕೇಳಿದೆ. ಹೀಗಾಗಿ, ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಾಗಿ ತ್ರೈಮಾಸಿಕ, ಮಾಸಿಕ ಮತ್ತು ಅರ್ಧವಾರ್ಷಿಕ ಪ್ರೀಮಿಯಂಗಳಲ್ಲಿ ನಿಗದಿತ ಮೊತ್ತವನ್ನು ಪಾವತಿಸಲು ಸಾಧ್ಯವಿದೆ.

ಇಎಂಐ (EMI) ನಲ್ಲಿ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವುದರ ಪ್ರಯೋಜನಗಳು

ತಿಂಗಳ ಆಧಾರದ ಮೇಲೆ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಪಾವತಿಸಲು ಸಾಧ್ಯವಾಗುವ ಅನೇಕ ಪ್ರಯೋಜನಗಳಿವೆ:

1. ಹೆಚ್ಚಿನ ಅನುಕೂಲತೆ

ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಇಎಂಐ ಗಳ ರೂಪದಲ್ಲಿ ಪಾವತಿಸುವ ಆಯ್ಕೆಯಿಂದಾಗಿ, ತಿಂಗಳ ಆದಾಯವನ್ನು ಅವಲಂಬಿಸಿರುವ ಬಹಳಷ್ಟು ಜನರಿಗೆ ಹೆಚ್ಚು ಅನುಕೂಲಕರವಾಗಿದೆ. ಹೆಚ್ಚುವರಿಯಾಗಿ, ಆನ್‌ಲೈನ್‌ನಲ್ಲಿ ಪಾವತಿಗಳನ್ನು ಮಾಡುವ ಸುಲಭತೆಯು, ಅದನ್ನು ಇನ್ನಷ್ಟೂ ತೊಂದರೆ-ಮುಕ್ತ ಅನುಭವವನ್ನಾಗಿ ಮಾಡುತ್ತದೆ. ಈ ಎರಡೂ ಫೀಚರ್‌ಗಳು ಗ್ರಾಮೀಣ ಪ್ರದೇಶದ ಜನರಿಗೆ ಹೆಲ್ತ್ ಇನ್ಶೂರೆನ್ಸ್ ಅನ್ನು ಹೆಚ್ಚು ಕೈಗೆಟುಕುವಂತೆ ಮಾಡಿದೆ.

2. ಹೆಚ್ಚುತ್ತಿರುವ ಮೆಡಿಕಲ್ ವೆಚ್ಚಗಳೊಂದಿಗೆ ವ್ಯವಹರಿಸಿ

ಈ ದಿನಗಳಲ್ಲಿ, ಹೆಚ್ಚುತ್ತಿರುವ ಮೆಡಿಕಲ್ ವೆಚ್ಚಗಳೊಂದಿಗೆ, ಆರೋಗ್ಯ ವೆಚ್ಚಗಳನ್ನು ಸರಿದೂಗಿಸಬೇಕಿದ್ದರೆ, ಆರ್ಥಿಕ ಬೆಂಬಲಕ್ಕಾಗಿ ಹೆಲ್ತ್ ಇನ್ಶೂರೆನ್ಸ್ ಅನ್ನು ಹೊಂದುವುದು ಅತ್ಯಂತ ಅವಶ್ಯಕ. ಇದರರ್ಥ ಹೆಚ್ಚಿನ ಪ್ರಮಾಣದ ಸಮ್ ಇನ್ಶೂರ್ಡ್ ಪಡೆಯುವುದು ಮುಖ್ಯವಾಗಿದ್ದರೂ ಅದು ಹೆಚ್ಚಿನ ಪ್ರೀಮಿಯಂಗೆ ಕಾರಣವಾಗಬಹುದು. ಮತ್ತು ಇಎಂಐ ಗಳಲ್ಲಿ ಹೆಲ್ತ್ ಇನ್ಶೂರೆನ್ಸ್ ಅನ್ನು ಪಾವತಿಸುವ ಆಯ್ಕೆಯೊಂದಿಗೆ, ಇದು ಅನೇಕರಿಗೆ ಹೆಚ್ಚು ಉಪಯುಕ್ತವಾಗಿದೆ ಮತ್ತು ಈ ಮೂಲಕ ಹೆಚ್ಚುತ್ತಿರುವ ವೆಚ್ಚಗಳನ್ನು ನಿಭಾಯಿಸಲು ಅವರಿಗೆ ದಾರಿ ಮಾಡಿಕೊಡುತ್ತದೆ.

3. ಹೆಚ್ಚು ಕೈಗೆಟುಕುವಿಕೆ

ತಿಂಗಳ ಆದಾಯವನ್ನೇ ಅವಲಂಬಿಸಿರುವ ಜನರು ತಮ್ಮ ಪ್ರೀಮಿಯಂಗಾಗಿ ಒಂದು ದೊಡ್ಡ ಮೊತ್ತದ ಪಾವತಿ ಮಾಡುವುದು ನಿಜಕ್ಕೂ ಸವಾಲಿನ ಸಂಗತಿಯಾಗಿದೆ. ಹೀಗಾಗಿ, ಅವರು ಮಾಸಿಕ, ತ್ರೈಮಾಸಿಕ ಅಥವಾ ಅರ್ಧ-ವಾರ್ಷಿಕದ ಆಧಾರದ ಮೇಲೆ, ಇಎಂಐ ಗಳ ಮೂಲಕ ಹೆಚ್ಚು ಅನುಕೂಲಕರ ಪ್ರೀಮಿಯಂ ಪಾವತಿಯನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾದರೆ, ಅವರು ಸಹ ಹೆಚ್ಚು ಕೈಗೆಟುಕುವ ಹೆಲ್ತ್ ಇನ್ಶೂರೆನ್ಸ್ ಕವರೇಜ್ ಅನ್ನು ಸುಲಭವಾಗಿ ಪಡೆಯಬಹುದು ಮತ್ತು ಚಿಕಿತ್ಸೆಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬೇಕಾಗಿಲ್ಲ.

4. ಸೀನಿಯರ್ ಸಿಟಿಜನ್ ಗಳಿಗೆ ಪ್ರಯೋಜನಕಾರಿ

ಹಿರಿಯ ನಾಗರಿಕರು ಆರೋಗ್ಯದ ಅಪಾಯಗಳಿಗೆ ಹೆಚ್ಚು ಗುರಿಯಾಗುತ್ತಾರೆ. ಹೀಗಾಗಿ ಅವರ ಹೆಲ್ತ್ ಇನ್ಶೂರೆನ್ಸ್‌ಗಾಗಿ ಹೆಚ್ಚಿನ ಪ್ರೀಮಿಯಂಗಳನ್ನು ಪಾವತಿಸಬೇಕಾಗುತ್ತದೆ. ಹೆಚ್ಚುವರಿಯಾಗಿ, ಹಿರಿಯರು ಸೀಮಿತ ತಿಂಗಳ ಆದಾಯವನ್ನು ಹೊಂದಿರಬಹುದು. ಹೀಗಾಗಿ, ಇಎಂಐ ನಲ್ಲಿ ಹೆಲ್ತ್ ಇನ್ಶೂರೆನ್ಸ್‌ನ ಲಭ್ಯತೆಯೊಂದಿಗೆ, ಅವರು ಈಗ ಅಗತ್ಯ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆದುಕೊಳ್ಳಬಹುದು ಮತ್ತು ತಮ್ಮ ಉಳಿತಾಯದ ಬಗ್ಗೆ ಚಿಂತಿಸದೆ, ಮೆಡಿಕಲ್ ಚಿಕಿತ್ಸೆಯನ್ನು ಪಡೆಯಬಹುದು.

5. ಹೆಚ್ಚಿನ ಕವರೇಜನ್ನು ಆಯ್ಕೆಮಾಡಿ

ಹೆಚ್ಚಿನ ಕವರೇಜ್ ಅಥವಾ ಹೆಚ್ಚಿನ ಪ್ರಮಾಣದ ಸಮ್ ಇನ್ಶೂರ್ಡ್ ಗಾಗಿ ಆದ್ಯತೆ ನೀಡುವ ಅನೇಕ ಪಾಲಿಸಿಹೋಲ್ಡರ್ ಗಳಿದ್ದಾರೆ. ಆದರೆ ಹೆಚ್ಚಿನ ಪ್ರೀಮಿಯಂ ವೆಚ್ಚವನ್ನು ಒಂದೇ ಪಾವತಿಯಲ್ಲಿ ಪಾವತಿಸಲು ಸಾಧ್ಯವಾಗುವುದಿಲ್ಲ. ಆದರೆ, ತಿಂಗಳ ಇಎಂಐ ಪಾವತಿಗಳೊಂದಿಗೆ, ಅವರು ಸಹ ಈಗ ಒಂದೇ ಬಾರಿಗೆ ಪಾವತಿ ಮಾಡದ ಆಯ್ಕೆಯೊಂದಿಗೆ ಹೆಚ್ಚಿನ ಕವರೇಜನ್ನು ಆಯ್ಕೆ ಮಾಡಿಕೊಳ್ಳಬಹುದು.

6. ಟ್ಯಾಕ್ಸ್ ಪ್ರಯೋಜನಗಳನ್ನು ಪಡೆಯಿರಿ

ವ್ಯಕ್ತಿಯೊಬ್ಬರು ತಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಇಎಂಐ ಗಳ ಮೂಲಕ ಪಾವತಿಸಿದರೂ ಸಹ, ಆದಾಯ ಟ್ಯಾಕ್ಸ್ ಕಾಯಿದೆಯ ಸೆಕ್ಷನ್ 80D ಪ್ರಕಾರ ಅವರು ತೆರಿಗೆ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ. ಇನ್ಶೂರೆನ್ಸ್‌ಗಾಗಿ ಪಾವತಿಸಿದ ಪ್ರೀಮಿಯಂ ಪ್ರಕಾರ ಅವರು ತಮ್ಮ ಆದಾಯ ಟ್ಯಾಕ್ಸ್ ನಲ್ಲಿ ಕಡಿತಗಳನ್ನು ಪಡೆಯಬಹುದು.

ಇಎಂಐ (EMI) ನಲ್ಲಿ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವುದರ ಅನಾನುಕೂಲಗಳು ಯಾವುವು?

ನಿರ್ಲಕ್ಷಿಸಲಾಗದ ಇಎಂಐ ಗಳ ಮೂಲಕ ಹೆಲ್ತ್ ಇನ್ಶೂರೆನ್ಸ್ ಅನ್ನು ಪಡೆಯುವಲ್ಲಿ, ಕೆಲವು ಬಾಧಕಗಳು ಅಥವಾ ಅನಾನುಕೂಲತೆಗಳಿವೆ:

  • ಹೆಚ್ಚುವರಿ ಪ್ರೀಮಿಯಂ - ಅನೇಕ ಸಂದರ್ಭಗಳಲ್ಲಿ, ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳಿಗಾಗಿ ಮಾಸಿಕ ಇಎಂಐ ಪಾವತಿಗಳು, ಪ್ರೀಮಿಯಂನ ಮೇಲೆ ಹೆಚ್ಚುವರಿ ಲೋಡ್ ಆಗಬಹುದು. ಉದಾಹರಣೆಗೆ, ಪಾಲಿಸಿಹೋಲ್ಡರ್ ಅದನ್ನು ಒಟ್ಟು ಮೊತ್ತವಾಗಿ ಪಾವತಿಸುವುದಕ್ಕಿಂತ, 3 ರಿಂದ 5 ಪ್ರತಿಶತದಷ್ಟು ಹೆಚ್ಚು ಪಾವತಿಸಬಹುದು.
  • ಕ್ಲೈಮ್‌ಗಳಿಗಾಗಿ ಕಾಯುವಿಕೆ - ನಿರ್ದಿಷ್ಟ ಸಂಖ್ಯೆಯ ಪ್ರೀಮಿಯಂಗಳನ್ನು ಪಾವತಿಸುವವರೆಗೆ ಪಾಲಿಸಿದಾರರು ಪಾಲಿಸಿಯ ಅಡಿಯಲ್ಲಿ ಕ್ಲೈಮ್ ಮಾಡಲು ಸಾಧ್ಯವಾಗದಿರಬಹುದು. ಆದರೆ ಇದು ವಾರ್ಷಿಕ ಪ್ರೀಮಿಯಂಗಳ ಸಂದರ್ಭದಲ್ಲಿ ಅಲ್ಲ.
  • ಹೆಚ್ಚಿನ ಎಸ್ಐ (SI) ನ ಅಗತ್ಯವಿರಬಹುದು - ಅನೇಕ ಹೆಲ್ತ್ ಇನ್ಶೂರೆನ್ಸ್ ಕಂಪನಿಗಳು, ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿನ ಸಮ್ ಇನ್ಶೂರ್ಡ್ ಮಾಡಿಸಿದರೆ ಮಾತ್ರ, ಇಎಂಐ ಆಯ್ಕೆಯನ್ನು ನೀಡುತ್ತವೆ. ಉದಾಹರಣೆಗೆ, ₹5 ಲಕ್ಷಗಳ ಎಸ್ಐ, ಮತ್ತು ಕಡಿಮೆ ಮೊತ್ತದ ಸಮ್ ಇನ್ಶೂರ್ಡ್ ಆಯ್ಕೆ ಮಾಡುವವರು ಈ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
  • ಡಿಸ್ಕೌಂಟ್‌ಗಳು ತಪ್ಪುತ್ತವೆ - ಪ್ರೀಮಿಯಂ ಮೊತ್ತವನ್ನು ಒಟ್ಟು ಮೊತ್ತದಲ್ಲಿ ಪಾವತಿಸಿದಾಗ ನೀಡಲಾಗುವ ಕೆಲವು ಡಿಸ್ಕೌಂಟ್‌ಗಳನ್ನು, ಇಎಂಐ ನಲ್ಲಿ ತಮ್ಮ ಹೆಲ್ತ್ ಇನ್ಸೂರೆನ್ಸ್ ಪ್ರೀಮಿಯಂಗಳನ್ನು ಪಾವತಿಸುವ ಪಾಲಿಸಿದಾರರು ಕಳೆದುಕೊಳ್ಳಬಹುದು.

ಇಎಂಐ (EMI) ನಲ್ಲಿ ಸರಿಯಾದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡುವುದು ಹೇಗೆ?

ಹಲವಾರು ವಿಭಿನ್ನ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳು ಇಎಂಐ ಗಳನ್ನು ನೀಡುವುದರಿಂದ, ಅವುಗಳಲ್ಲಿ ಯಾವುದನ್ನು ಆಯ್ಕೆ ಮಾಡಬೇಕೆಂದು ನಿರ್ಧರಿಸುವುದು ಕಷ್ಟಕರವಾಗಿರುತ್ತದೆ. ಗಮನಹರಿಸಬೇಕಾದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ, ಅವುಗಳೆಂದರೆ:

  • ಯಾವುದೇ ವೆಚ್ಚ ಇಲ್ಲದ ಇಎಂಐ (ನೋ ಕಾಸ್ಟ್ ಇಎಂಐ) ನೀಡುವ ಹೆಲ್ತ್ ಇನ್ಶೂರೆನ್ಸ್‌ಗಾಗಿ ನೋಡಿ. ಅಂದರೆ ಒಂದೇ ವಾರ್ಷಿಕ ಪ್ರೀಮಿಯಂಗೆ ಹೋಲಿಸಿದರೆ, ಯಾವುದೇ ಹೆಚ್ಚುವರಿ ವೆಚ್ಚಗಳಿರದ ಹೆಲ್ತ್ ಇನ್ಶೂರೆನ್ಸ್‌ ಅನ್ನು ಆಯ್ಕೆ ಮಾಡಿ.
  • ಪಾಲಿಸಿಯು ನಿಮ್ಮ ಆರೋಗ್ಯ ರಕ್ಷಣೆಯ ಅಗತ್ಯತೆಗಳಿಗೆ ಮತ್ತು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ನೀವು ಕವರ್ ಮಾಡಲು ಬಯಸುವ ಜನರಿಗೆ, ಕವರೇಜ್ ನೀಡುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ನಿಯಮಗಳು ಮತ್ತು ಷರತ್ತುಗಳನ್ನು ಓದುವ ಮೂಲಕ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಯಾವ ಅಂಶಗಳನ್ನು ಹೊರತುಪಡಿಸಲಾಗಿದೆ ಎಂಬುದನ್ನು ಪರಿಶೀಲಿಸಿ.
  • ಇನ್ಶೂರೆನ್ಸ್ ಕಂಪನಿಗಳು ಕ್ಯಾಶ್‌ಲೆಸ್ ಆಸ್ಪತ್ರೆಯನ್ನು ಒದಗಿಸುತ್ತಾರೆ ಮತ್ತು ಪ್ರತಿಷ್ಠಿತ ಕಸ್ಟಮರ್ ಸರ್ವೀಸ್ ರೆಕಾರ್ಡ್ ಹೊಂದಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ತೀರ್ಮಾನ

ಭಾರತದಂತಹ ದೇಶದಲ್ಲಿ, ಹೆಲ್ತ್ ಇನ್ಶೂರೆನ್ಸ್‌ನ ಕೈಗೆಟುಕುವಿಕೆ ಒಂದು ಸಮಸ್ಯೆಯಾಗಿದೆ. ತಿಂಗಳ ಇಎಂಐ ಗಳ ಮೂಲಕ ತೆಗೆದುಕೊಳ್ಳುವ ಆಯ್ಕೆಯು ಉತ್ತಮ ಪ್ರಯೋಜನವಾಗಿದೆ. ಆ ಪಾಲಿಸಿಗಳು ಮೂಲತಃ ಪಾಲಿಸಿದಾರರ ವ್ಯಾಪ್ತಿಯಿಂದ ಹೊರಗಿದ್ದಾಗಲೂ ಸಹ, ಅವರಿಗೆ ಕಾಂಪ್ರಹೆನ್ಸಿವ್ ಹೆಲ್ತ್ ಕವರೇಜನ್ನು ಪಡೆಯಲು ಇದು ಅನುಮತಿಸುತ್ತದೆ.

ಹೀಗಾಗಿ, ಇಎಂಐ ನಲ್ಲಿ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವ ಅನಾನುಕೂಲಗಳ ಬಗ್ಗೆ ಹೆಚ್ಚು ಚಿಂತಿಸದೇ ಮುಂದುವರೆದರೆ, ಹೆಚ್ಚುತ್ತಿರುವ ಮೆಡಿಕಲ್ ವೆಚ್ಚಗಳಿಂದ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಲು ಇದು ಅತ್ಯುತ್ತಮವಾದ ಮತ್ತು ಕೈಗೆಟುಕುವ ಮಾರ್ಗವಾಗಿದೆ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ಇಎಂಐ ಗಳಲ್ಲಿ ಹೆಲ್ತ್ ಇನ್ಶೂರೆನ್ಸ್ ಅನ್ನು ಪಾವತಿಸಲು ನೀವು ಹೇಗೆ ಆಯ್ಕೆ ಮಾಡಬೇಕು?

ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಸಮಯದಲ್ಲಿ, ನಿಮಗೆ ಅನುಕೂಲವಾಗುವ ಪಾವತಿ ಆಯ್ಕೆಗಳ ಬಗ್ಗೆ ನಿಮ್ಮ ಇನ್ಶೂರರ್ ರೊಂದಿಗೆ ಮಾತನಾಡಿ. ಒಂದುವೇಳೆ ಅವರು ಈ ಸೌಲಭ್ಯವನ್ನು ಹೊಂದಿದ್ದರೆ, ನೀವು ಅವರ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಮಾಸಿಕ, ತ್ರೈಮಾಸಿಕ ಅಥವಾ ಅರ್ಧ-ವಾರ್ಷಿಕ ಆಧಾರದ ಮೇಲೆ, ಕಂತುಗಳಲ್ಲಿ ಪಾವತಿಸಲು ಸಾಧ್ಯವಾಗುತ್ತದೆ.

ನಂತರ ಆಫ್‌ಲೈನ್, ಆನ್‌ಲೈನ್ ಅಥವಾ ನಿಮ್ಮ ಅಕೌಂಟ್‌ನಿಂದ ಆಟೋ-ಡೆಬಿಟ್ ಅನ್ನು ಸಕ್ರಿಯಗೊಳಿಸುವ ಮೂಲಕ, ಸಾಮಾನ್ಯ ವಾರ್ಷಿಕ ಪ್ರೀಮಿಯಂ ಪಾವತಿಯ ರೀತಿಯಲ್ಲಿಯೇ ಇಎಂಐ ಪಾವತಿಯನ್ನು ಮಾಡಲಾಗುತ್ತದೆ.

ಇಎಂಐ ಗಳ ಮೇಲೆ ಹೆಲ್ತ್ ಇನ್ಶೂರೆನ್ಸ್ ಅನ್ನು ಯಾರು ಆಯ್ಕೆ ಮಾಡಿಕೊಳ್ಳಬೇಕು?

ಇಎಂಐ ನಲ್ಲಿ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ತಿಂಗಳ ಆದಾಯದ ಮೇಲೆ ಅವಲಂಬಿತರಾದವರಿಗೆ ಒಂದು ಉತ್ತಮ ಆಯ್ಕೆಯಾಗಿದೆ. ಒಂದೇ ಬಾರಿಗೆ ದೊಡ್ಡ ಮೊತ್ತವನ್ನು ಖರ್ಚು ಮಾಡಲು ಬಯಸದ ಯುವ ವೃತ್ತಿಪರರು, ಹಾಗೆಯೇ ದೊಡ್ಡ ಮೊತ್ತದ ಹೆಲ್ತ್ ಇನ್ಶೂರೆನ್ಸ್ ಕಂತುಗಳನ್ನು ಎದುರಿಸುವ ಹಿರಿಯ ನಾಗರಿಕರು, ಇತರರಿಗೆ ಇದು ಒಳ್ಳೆಯ ಆಯ್ಕೆಯಾಗಿದೆ.

ಇಎಂಐ ನಲ್ಲಿ ಪಾವತಿಸಿದಾಗ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಹೇಗೆ ಲೆಕ್ಕಾಚಾರ ಮಾಡಲಾಗುತ್ತದೆ?

ನೀವು ಇಎಂಐ ನಲ್ಲಿ ಪ್ರೀಮಿಯಂ ಪಾವತಿಸಿದರೂ ಪ್ರೀಮಿಯಂ ಅನ್ನು ಅದೇ ರೀತಿಯಲ್ಲಿ ಲೆಕ್ಕಹಾಕಲಾಗುತ್ತದೆ. ಇದು ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ:

  • ನೀವು ಆಯ್ಕೆ ಮಾಡಿದ ಸಮ್ ಇನ್ಶೂರ್ಡ್
  • ನೀವು ಆಯ್ಕೆ ಮಾಡಿರುವ ಹೆಲ್ತ್ ಇನ್ಶೂರೆನ್ಸ್ ಯೋಜನೆಯ ಪ್ರಕಾರ
  • ಕುಟುಂಬದಲ್ಲಿ ಇನ್ಶೂರೆನ್ಸ್ ಮಾಡಲಾದ ಸದಸ್ಯರ ಸಂಖ್ಯೆ
  • ಇನ್ಶೂರೆನ್ಸ್ ಮಾಡಿದ ಸದಸ್ಯರ ವಯಸ್ಸು
  • ಧೂಮಪಾನದಂತಹ ಜೀವನಶೈಲಿ ಅಭ್ಯಾಸಗಳು
  • ಮಧುಮೇಹ, ಅಧಿಕ ರಕ್ತದೊತ್ತಡ, ಅಥವಾ ಅಸ್ತಮಾದಂತಹ ಈ ಮೊದಲೇ ಅಸ್ತಿತ್ವದಲ್ಲಿರುವ ಮೆಡಿಕಲ್ ಪರಿಸ್ಥಿತಿಗಳು
  • ನೀವು ವಾಸಿಸುವ ನಗರ ಮತ್ತು ಅದರ ಮೆಡಿಕಲ್ ವೆಚ್ಚಗಳು ಅಥವಾ ಅಪಾಯಗಳು