ಹೆಲ್ತ್ ಇನ್ಶೂರೆನ್ಸ್ನ ಪ್ರಾಮುಖ್ಯತೆಯನ್ನು ಉತ್ಪ್ರೇಕ್ಷೆ ಮಾಡಿ ಹೇಳಲಾಗುವುದಿಲ್ಲ. ಆದರೆ, ಅನೇಕ ಜನರು ಹೆಲ್ತ್ ಇನ್ಶೂರೆನ್ಸ್ ಖರೀದಿಸುವುದರ ಬಗ್ಗೆ ಗಂಭೀರವಾಗಿ ಪರಿಗಣಿಸದಿರಬಹುದು ಮತ್ತು ಇದಕ್ಕೆ ಮುಖ್ಯ ಕಾರಣವೆಂದರೆ ವೆಚ್ಚ. ತಿಂಗಳ ಅಥವಾ ಸ್ಥಿರ ಆದಾಯವನ್ನು ಅವಲಂಬಿಸಿರುವ ಜನರಿಗೆ ವಾರ್ಷಿಕ ಪ್ರೀಮಿಯಂ ಅನ್ನು ಒಂದೇ ಮೊತ್ತದಲ್ಲಿ ಪಾವತಿಸಲು ಕಷ್ಟವಾಗಬಹುದು.
ಆದ್ದರಿಂದ, ಭಾರತೀಯರಿಗೆ ಹೆಲ್ತ್ ಇನ್ಶೂರೆನ್ಸ್ನ ಕೈಗೆಟುಕುವಿಕೆಯನ್ನು ಹೆಚ್ಚಿಸಲು, 2019 ರಲ್ಲಿ ಇನ್ಶೂರೆನ್ಸ್ ರೆಗ್ಯುಲೇಟರಿ ಆ್ಯಂಡ್ ಡೆವಲಪ್ ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐ.ಆರ್.ಡಿ.ಎ.ಐ) ಹೆಲ್ತ್ ಇನ್ಶೂರೆನ್ಸ್ ಕಂಪನಿಗಳಿಗೆ ತನ್ನ ಪಾಲಿಸಿಹೋಲ್ಡರ್ಸ್ ಗೆ ಇಎಂಐ ಗಳಲ್ಲಿ ವಾರ್ಷಿಕ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಪಾವತಿಸುವ ಆಯ್ಕೆಯನ್ನು ನೀಡುವಂತೆ ಕೇಳಿದೆ. ಹೀಗಾಗಿ, ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಾಗಿ ತ್ರೈಮಾಸಿಕ, ಮಾಸಿಕ ಮತ್ತು ಅರ್ಧವಾರ್ಷಿಕ ಪ್ರೀಮಿಯಂಗಳಲ್ಲಿ ನಿಗದಿತ ಮೊತ್ತವನ್ನು ಪಾವತಿಸಲು ಸಾಧ್ಯವಿದೆ.
ತಿಂಗಳ ಆಧಾರದ ಮೇಲೆ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಪಾವತಿಸಲು ಸಾಧ್ಯವಾಗುವ ಅನೇಕ ಪ್ರಯೋಜನಗಳಿವೆ:
ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಇಎಂಐ ಗಳ ರೂಪದಲ್ಲಿ ಪಾವತಿಸುವ ಆಯ್ಕೆಯಿಂದಾಗಿ, ತಿಂಗಳ ಆದಾಯವನ್ನು ಅವಲಂಬಿಸಿರುವ ಬಹಳಷ್ಟು ಜನರಿಗೆ ಹೆಚ್ಚು ಅನುಕೂಲಕರವಾಗಿದೆ. ಹೆಚ್ಚುವರಿಯಾಗಿ, ಆನ್ಲೈನ್ನಲ್ಲಿ ಪಾವತಿಗಳನ್ನು ಮಾಡುವ ಸುಲಭತೆಯು, ಅದನ್ನು ಇನ್ನಷ್ಟೂ ತೊಂದರೆ-ಮುಕ್ತ ಅನುಭವವನ್ನಾಗಿ ಮಾಡುತ್ತದೆ. ಈ ಎರಡೂ ಫೀಚರ್ಗಳು ಗ್ರಾಮೀಣ ಪ್ರದೇಶದ ಜನರಿಗೆ ಹೆಲ್ತ್ ಇನ್ಶೂರೆನ್ಸ್ ಅನ್ನು ಹೆಚ್ಚು ಕೈಗೆಟುಕುವಂತೆ ಮಾಡಿದೆ.
ಈ ದಿನಗಳಲ್ಲಿ, ಹೆಚ್ಚುತ್ತಿರುವ ಮೆಡಿಕಲ್ ವೆಚ್ಚಗಳೊಂದಿಗೆ, ಆರೋಗ್ಯ ವೆಚ್ಚಗಳನ್ನು ಸರಿದೂಗಿಸಬೇಕಿದ್ದರೆ, ಆರ್ಥಿಕ ಬೆಂಬಲಕ್ಕಾಗಿ ಹೆಲ್ತ್ ಇನ್ಶೂರೆನ್ಸ್ ಅನ್ನು ಹೊಂದುವುದು ಅತ್ಯಂತ ಅವಶ್ಯಕ. ಇದರರ್ಥ ಹೆಚ್ಚಿನ ಪ್ರಮಾಣದ ಸಮ್ ಇನ್ಶೂರ್ಡ್ ಪಡೆಯುವುದು ಮುಖ್ಯವಾಗಿದ್ದರೂ ಅದು ಹೆಚ್ಚಿನ ಪ್ರೀಮಿಯಂಗೆ ಕಾರಣವಾಗಬಹುದು. ಮತ್ತು ಇಎಂಐ ಗಳಲ್ಲಿ ಹೆಲ್ತ್ ಇನ್ಶೂರೆನ್ಸ್ ಅನ್ನು ಪಾವತಿಸುವ ಆಯ್ಕೆಯೊಂದಿಗೆ, ಇದು ಅನೇಕರಿಗೆ ಹೆಚ್ಚು ಉಪಯುಕ್ತವಾಗಿದೆ ಮತ್ತು ಈ ಮೂಲಕ ಹೆಚ್ಚುತ್ತಿರುವ ವೆಚ್ಚಗಳನ್ನು ನಿಭಾಯಿಸಲು ಅವರಿಗೆ ದಾರಿ ಮಾಡಿಕೊಡುತ್ತದೆ.
ತಿಂಗಳ ಆದಾಯವನ್ನೇ ಅವಲಂಬಿಸಿರುವ ಜನರು ತಮ್ಮ ಪ್ರೀಮಿಯಂಗಾಗಿ ಒಂದು ದೊಡ್ಡ ಮೊತ್ತದ ಪಾವತಿ ಮಾಡುವುದು ನಿಜಕ್ಕೂ ಸವಾಲಿನ ಸಂಗತಿಯಾಗಿದೆ. ಹೀಗಾಗಿ, ಅವರು ಮಾಸಿಕ, ತ್ರೈಮಾಸಿಕ ಅಥವಾ ಅರ್ಧ-ವಾರ್ಷಿಕದ ಆಧಾರದ ಮೇಲೆ, ಇಎಂಐ ಗಳ ಮೂಲಕ ಹೆಚ್ಚು ಅನುಕೂಲಕರ ಪ್ರೀಮಿಯಂ ಪಾವತಿಯನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾದರೆ, ಅವರು ಸಹ ಹೆಚ್ಚು ಕೈಗೆಟುಕುವ ಹೆಲ್ತ್ ಇನ್ಶೂರೆನ್ಸ್ ಕವರೇಜ್ ಅನ್ನು ಸುಲಭವಾಗಿ ಪಡೆಯಬಹುದು ಮತ್ತು ಚಿಕಿತ್ಸೆಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬೇಕಾಗಿಲ್ಲ.
ಹಿರಿಯ ನಾಗರಿಕರು ಆರೋಗ್ಯದ ಅಪಾಯಗಳಿಗೆ ಹೆಚ್ಚು ಗುರಿಯಾಗುತ್ತಾರೆ. ಹೀಗಾಗಿ ಅವರ ಹೆಲ್ತ್ ಇನ್ಶೂರೆನ್ಸ್ಗಾಗಿ ಹೆಚ್ಚಿನ ಪ್ರೀಮಿಯಂಗಳನ್ನು ಪಾವತಿಸಬೇಕಾಗುತ್ತದೆ. ಹೆಚ್ಚುವರಿಯಾಗಿ, ಹಿರಿಯರು ಸೀಮಿತ ತಿಂಗಳ ಆದಾಯವನ್ನು ಹೊಂದಿರಬಹುದು. ಹೀಗಾಗಿ, ಇಎಂಐ ನಲ್ಲಿ ಹೆಲ್ತ್ ಇನ್ಶೂರೆನ್ಸ್ನ ಲಭ್ಯತೆಯೊಂದಿಗೆ, ಅವರು ಈಗ ಅಗತ್ಯ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆದುಕೊಳ್ಳಬಹುದು ಮತ್ತು ತಮ್ಮ ಉಳಿತಾಯದ ಬಗ್ಗೆ ಚಿಂತಿಸದೆ, ಮೆಡಿಕಲ್ ಚಿಕಿತ್ಸೆಯನ್ನು ಪಡೆಯಬಹುದು.
ಹೆಚ್ಚಿನ ಕವರೇಜ್ ಅಥವಾ ಹೆಚ್ಚಿನ ಪ್ರಮಾಣದ ಸಮ್ ಇನ್ಶೂರ್ಡ್ ಗಾಗಿ ಆದ್ಯತೆ ನೀಡುವ ಅನೇಕ ಪಾಲಿಸಿಹೋಲ್ಡರ್ ಗಳಿದ್ದಾರೆ. ಆದರೆ ಹೆಚ್ಚಿನ ಪ್ರೀಮಿಯಂ ವೆಚ್ಚವನ್ನು ಒಂದೇ ಪಾವತಿಯಲ್ಲಿ ಪಾವತಿಸಲು ಸಾಧ್ಯವಾಗುವುದಿಲ್ಲ. ಆದರೆ, ತಿಂಗಳ ಇಎಂಐ ಪಾವತಿಗಳೊಂದಿಗೆ, ಅವರು ಸಹ ಈಗ ಒಂದೇ ಬಾರಿಗೆ ಪಾವತಿ ಮಾಡದ ಆಯ್ಕೆಯೊಂದಿಗೆ ಹೆಚ್ಚಿನ ಕವರೇಜನ್ನು ಆಯ್ಕೆ ಮಾಡಿಕೊಳ್ಳಬಹುದು.
ವ್ಯಕ್ತಿಯೊಬ್ಬರು ತಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಇಎಂಐ ಗಳ ಮೂಲಕ ಪಾವತಿಸಿದರೂ ಸಹ, ಆದಾಯ ಟ್ಯಾಕ್ಸ್ ಕಾಯಿದೆಯ ಸೆಕ್ಷನ್ 80D ಪ್ರಕಾರ ಅವರು ತೆರಿಗೆ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ. ಇನ್ಶೂರೆನ್ಸ್ಗಾಗಿ ಪಾವತಿಸಿದ ಪ್ರೀಮಿಯಂ ಪ್ರಕಾರ ಅವರು ತಮ್ಮ ಆದಾಯ ಟ್ಯಾಕ್ಸ್ ನಲ್ಲಿ ಕಡಿತಗಳನ್ನು ಪಡೆಯಬಹುದು.
ನಿರ್ಲಕ್ಷಿಸಲಾಗದ ಇಎಂಐ ಗಳ ಮೂಲಕ ಹೆಲ್ತ್ ಇನ್ಶೂರೆನ್ಸ್ ಅನ್ನು ಪಡೆಯುವಲ್ಲಿ, ಕೆಲವು ಬಾಧಕಗಳು ಅಥವಾ ಅನಾನುಕೂಲತೆಗಳಿವೆ:
ಹಲವಾರು ವಿಭಿನ್ನ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳು ಇಎಂಐ ಗಳನ್ನು ನೀಡುವುದರಿಂದ, ಅವುಗಳಲ್ಲಿ ಯಾವುದನ್ನು ಆಯ್ಕೆ ಮಾಡಬೇಕೆಂದು ನಿರ್ಧರಿಸುವುದು ಕಷ್ಟಕರವಾಗಿರುತ್ತದೆ. ಗಮನಹರಿಸಬೇಕಾದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ, ಅವುಗಳೆಂದರೆ:
ಭಾರತದಂತಹ ದೇಶದಲ್ಲಿ, ಹೆಲ್ತ್ ಇನ್ಶೂರೆನ್ಸ್ನ ಕೈಗೆಟುಕುವಿಕೆ ಒಂದು ಸಮಸ್ಯೆಯಾಗಿದೆ. ತಿಂಗಳ ಇಎಂಐ ಗಳ ಮೂಲಕ ತೆಗೆದುಕೊಳ್ಳುವ ಆಯ್ಕೆಯು ಉತ್ತಮ ಪ್ರಯೋಜನವಾಗಿದೆ. ಆ ಪಾಲಿಸಿಗಳು ಮೂಲತಃ ಪಾಲಿಸಿದಾರರ ವ್ಯಾಪ್ತಿಯಿಂದ ಹೊರಗಿದ್ದಾಗಲೂ ಸಹ, ಅವರಿಗೆ ಕಾಂಪ್ರಹೆನ್ಸಿವ್ ಹೆಲ್ತ್ ಕವರೇಜನ್ನು ಪಡೆಯಲು ಇದು ಅನುಮತಿಸುತ್ತದೆ.
ಹೀಗಾಗಿ, ಇಎಂಐ ನಲ್ಲಿ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವ ಅನಾನುಕೂಲಗಳ ಬಗ್ಗೆ ಹೆಚ್ಚು ಚಿಂತಿಸದೇ ಮುಂದುವರೆದರೆ, ಹೆಚ್ಚುತ್ತಿರುವ ಮೆಡಿಕಲ್ ವೆಚ್ಚಗಳಿಂದ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಲು ಇದು ಅತ್ಯುತ್ತಮವಾದ ಮತ್ತು ಕೈಗೆಟುಕುವ ಮಾರ್ಗವಾಗಿದೆ.