ಹೆಲ್ತ್ ಇನ್ಶೂರೆನ್ಸ್ ಆನ್‌ಲೈನ್‌ನಲ್ಲಿ ಖರೀದಿಸಿ

ಡಿಜಿಟ್ ಹೆಲ್ತ್ ಇನ್ಶೂರೆನ್ಸ್ ಗೆ ಬದಲಾಯಿಸಿ.

ಎನ್‌ಆರ್‌ಐ ಗಳು ಭಾರತದಲ್ಲಿ ವಾಸಿಸುವ ತಮ್ಮ ಪೋಷಕರಿಗೆ ಹೆಲ್ತ್ ಇನ್ಶೂರೆನ್ಸ್ ಖರೀದಿಸಬಹುದೇ?

ಹೆಚ್ಚುತ್ತಿರುವ ಆನ್‌ಸೈಟ್ ಉದ್ಯೋಗಾವಕಾಶಗಳೊಂದಿಗೆ, ಜನರು ತಮ್ಮ ವೃತ್ತಿಯನ್ನು ಮುಂದುವರಿಸಲು ತಮ್ಮ ಕುಟುಂಬಗಳಿಂದ ಮೈಲುಗಟ್ಟಲೆ ದೂರ ಹೋಗುತ್ತಿದ್ದಾರೆ. ಇದು ಯಾವುದೇ ಆದರೆಗಳಿಲ್ಲದ ಲಾಭದಾಯಕ ಆಯ್ಕೆಯಾಗಿ ಕಾಣಿಸಬಹುದಾದರೂ, ಒಬ್ಬರು ಹೊರದೇಶಕ್ಕೆ ಹೋಗುವ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಪರಿಶೀಲನೆ ನಡೆಸಬೇಕಾದಂತಹ ಹಲವಾರು ಅಂಶಗಳಿವೆ; ಪಾಲಕರ ಆರೈಕೆಯು ಇಲ್ಲಿ ಮೊಟ್ಟಮೊದಲ ಕಾಳಜಿಗಳಲ್ಲಿ ಒಂದಾಗಿದೆ. ಇತ್ತೀಚಿನ ಕೋವಿಡ್ 19 ಸಾಂಕ್ರಾಮಿಕವು ಅವರ ಪೋಷಕರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಎನ್‌ಆರ್‌ಐಗಳ ಈ ಕಾಳಜಿಯನ್ನು ಮತ್ತಷ್ಟು ಹೆಚ್ಚಿಸಿದೆ. 

ಕೌಟುಂಬಿಕ ಆರೋಗ್ಯದ ಕಡೆಗೆ ತೆಗೆದುಕೊಳ್ಳಲಾದ ಪ್ರಮುಖ ಹೆಜ್ಜೆಗಳಲ್ಲಿ ಒಂದೆಂದರೆ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಮತ್ತು ಇದು ಎನ್‌ಆರ್‌ಐಗಳಿಗೂ ಅನ್ವಯಿಸುತ್ತದೆ. ಈ ನಿಟ್ಟಿನಲ್ಲಿ, ಆಗಾಗ್ಗೆ ಉದ್ಭವಿಸುವ ಸಾಮಾನ್ಯ ಪ್ರಶ್ನೆಯೆಂದರೆ, "ಎನ್‌ಆರ್‌ಐಗಳು ಭಾರತದಲ್ಲಿ ವಾಸಿಸುವ ತಮ್ಮ ಪೋಷಕರಿಗೆ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸಬಹುದೇ?" ಈ ಪ್ರಶ್ನೆಗೆ ಉತ್ತರಿಸುತ್ತಾ, ಐಆರ್‌ಡಿಎ ಪ್ರಕಾರ, ಹೌದು, ಎನ್‌ಆರ್‌ಐಗಳು ಖಂಡಿತವಾಗಿಯೂ ಭಾರತದಲ್ಲಿ ವಾಸಿಸುವ ತಮ್ಮ ಪೋಷಕರಿಗೆ ಹೆಲ್ತ್ ಇನ್ಶೂರೆನ್ಸ್ ಖರೀದಿಸಬಹುದು.

ಭಾರತದಲ್ಲಿರುವ ಪೋಷಕರಿಗೆ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವ ಪ್ರಯೋಜನಗಳು

  • ಹೆಚ್ಚಿನ ವೈದ್ಯಕೀಯ ವೆಚ್ಚಗಳು : ಕಳೆದ ಕೆಲವು ದಶಕಗಳಲ್ಲಿ ಆಗಿರುವ ಜೀವಿತಾವಧಿಯಲ್ಲಿಯ ಹೆಚ್ಚಳವು ಒಂದು ಅನವಶ್ಯಕ ತಿರುವನ್ನೂ ಹೊಂದಿದೆ. ವೈದ್ಯಕೀಯ ವೆಚ್ಚಗಳು ಗಗನಕ್ಕೇರುತ್ತಿವೆ ಮತ್ತು ವಿಶೇಷವಾಗಿ ವೃದ್ಧಾಪ್ಯದಲ್ಲಿ ದುಬಾರಿ ವೈದ್ಯಕೀಯ ನೆರವು ಅಗತ್ಯವಿರುವ ಅನೇಕ ಘಟನೆಗಳು ಸಂಭವಿಸುತ್ತವೆ. ಇಂತಹ ಸಂದರ್ಭಗಳಲ್ಲಿ, ಒಂದು ಹೆಲ್ತ್ ಇನ್ಶೂರೆನ್ಸ್ ನಿಮ್ಮ ಉಳಿತಾಯಕ್ಕೆ ಕುಶನ್ ನೀಡುತ್ತದೆ.

  • ಪಿಂಚಣಿಯನ್ನು ಸಂತೋಷದ ದಿನಗಳಿಗಾಗಿ ಉಳಿಸಿ : ನಿಮ್ಮ ಪೋಷಕರು ಪಿಂಚಣಿದಾರರಾಗಿದ್ದರೂ ಸಹ, ಆ ಪಿಂಚಣಿಯನ್ನು ಅವರ ವೈಯಕ್ತಿಕ ವೆಚ್ಚಗಳಿಗಾಗಿ ಸುರಕ್ಷಿತವಾಗಿರಿಸಿಕೊಳ್ಳಿ. ಉಳಿತಾಯದ ಪ್ರಮುಖ ಭಾಗವನ್ನು ನುಂಗಿಬಿಡುವ ವೈದ್ಯಕೀಯ ತುರ್ತುಸ್ಥಿತಿಗಳಿಗಾಗಿ, ಹೆಲ್ತ್ ಇನ್ಶೂರೆನ್ಸ್ ಅನ್ನು ಹೊಂದುವುದು ಎಂದಿಗೂ ಜಾಣ್ಮೆಯ ನಿರ್ಧಾರವಾಗಿರುತ್ತದೆ. 

  • ಅನಿರೀಕ್ಷಿತ ಸಮಯಕ್ಕಾಗಿ ನಿಮ್ಮ ಪೋಷಕರನ್ನು ಸ್ವಾವಲಂಬಿಗಳನ್ನಾಗಿ ಮಾಡಿ : ಭಾರತೀಯ ಜನಸಂಖ್ಯೆಯ ಬಹುಪಾಲು ಭಾಗವು ಪಿಂಚಣಿ ಸೌಲಭ್ಯವನ್ನೂ ಹೊಂದಿಲ್ಲ. ಇಂತಹ ಸಂದರ್ಭಗಳಲ್ಲಿ, ಪೋಷಕರು ಹೆಚ್ಚಾಗಿ ತಮ್ಮ ಗಳಿಸುವ ಮಕ್ಕಳ ಮೇಲೆ ಅಥವಾ ಅವರ ಜೀವಮಾನದ ಉಳಿತಾಯದ ಮೇಲೆ ಅವಲಂಬಿತರಾಗಿರುತ್ತಾರೆ. ಈ ಎರಡೂ ಸಂದರ್ಭಗಳಲ್ಲಿ, ಹೆಲ್ತ್ ಇನ್ಶೂರೆನ್ಸ್ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ನಮ್ಮ ಉಳಿತಾಯಕ್ಕೆ ಹೊಡೆತ ಬೀಳದಂತೆ ಅದನ್ನು ರಕ್ಷಿಸುತ್ತದೆ. ಅಲ್ಲದೆ, ಕೈಯಲ್ಲಿ ನಗದು ರಹಿತ ಇನ್ಶೂರೆನ್ಸ್ ಇರುವುದರಿಂದ, ನಾವು ಅವರೊಂದಿಗೆ ಇಲ್ಲದಿದ್ದರೂ ಸಹ ನಮ್ಮ ಪೋಷಕರು ಸರಳವಾದ ಗೊಂದಲ ಮುಕ್ತ ಹೆಲ್ತ್ ಕೇರ್ ಅನ್ನು ಪಡೆಯಬಹುದು. 

  • ಉಳಿತಾಯಕ್ಕೆ ಆರ್ಥಿಕ ಕುಶನ್ : ಮೆಡಿಕಲ್ ಬಿಲ್‌ಗಳನ್ನು ಪಾವತಿಸುವುದು ಖಂಡಿತವಾಗಿಯೂ ಶ್ರಮದಾಯಕ ಕೆಲಸವಾಗಿದೆ ಮತ್ತು ಒಂದು ಯೋಜಿತ ಉದ್ದೇಶಕ್ಕಾಗಿ ಬಳಸಬಹುದಾದ ಉಳಿತಾಯದ ಮೇಲೆ ಭಾರೀ ಹೊಡೆತವನ್ನು ನೀಡುತ್ತದೆ. ಮತ್ತು ಈ ಆರೋಗ್ಯದ ಅವಶ್ಯಕತೆಗಳು ಅತ್ಯಂತ ಅನಿರೀಕ್ಷಿತ ಸಮಯದಲ್ಲಿಯೇ ಬರುತ್ತವೆ. ಅಂತಹ ಸಮಯಗಳಿಗಾಗಿ, ನಿಮ್ಮ ಯೋಜನೆಗಳು ಮತ್ತು ಸಂತೋಷದ ಸಮಯಗಳು ಕೆಡದಂತೆ ಹೆಲ್ತ್ ಇನ್ಶೂರೆನ್ಸ್ ಅನ್ನು ಪಡೆಯಿರಿ. 

  • ಸ್ವಲ್ಪ ಹೆಚ್ಚು ಟ್ಯಾಕ್ಸ್ ಉಳಿತಾಯ ಯಾವಾಗಲೂ ಸ್ವಾಗತಾರ್ಹವಾಗಿದೆ : ಭಾರತದಲ್ಲಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗೆ ಪಾವತಿಸುವ ಪ್ರೀಮಿಯಂ ಭಾರತೀಯ ಆದಾಯ ತೆರಿಗೆ ಕಾಯಿದೆಯ ಪ್ರಕಾರ ಟ್ಯಾಕ್ಸ್ ವಿನಾಯಿತಿ ಅಡಿಯಲ್ಲಿ ಬರುತ್ತದೆ. ಇದು ಸ್ವಂತ, ಸಂಗಾತಿ, ಅವಲಂಬಿತ ಮಕ್ಕಳು ಮತ್ತು ಅವಲಂಬಿತ ಪೋಷಕರಿಗೆ ಪಾವತಿಸಿದ ಯಾವುದೇ ಪ್ರೀಮಿಯಂ ಅನ್ನು ಒಳಗೊಂಡಿರುತ್ತದೆ. ಆದ್ದರಿಂದ, ಎನ್‌ಆರ್‌ಐ ಗಳು ಸೆಕ್ಷನ್ 80ಡಿ ಅಡಿಯಲ್ಲಿ ತಮ್ಮ ಭಾರತೀಯ ಆದಾಯದ ಮೇಲೆ ರಿಯಾಯಿತಿಯನ್ನು ಪಡೆಯಬಹುದಾಗಿದೆ. 

     

ಟ್ಯಾಕ್ಸ್ ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿಯಿರಿ: 

ಭಾರತದಲ್ಲಿರುವ ಪೋಷಕರಿಗಾಗಿ ಹೆಲ್ತ್ ಇನ್ಶೂರೆನ್ಸ್ ಖರೀದಿಸುವಾಗ ಪರಿಗಣಿಸಬೇಕಾದ ಅಂಶಗಳು

ವಯಸ್ಸಿನ ಮಿತಿ

ಪಾಲಿಸಿಯಲ್ಲಿ ವಯಸ್ಸಿನ ಮಿತಿಯನ್ನು ಪರಿಶೀಲಿಸಿ. ಇದು ಹಿರಿಯ ನಾಗರಿಕರಿಗಾಗಿ ಇರುವ ಪಾಲಿಸಿಯಾಗಿರುವುದರಿಂದ ಪ್ರವೇಶ ವಯಸ್ಸು ಹೆಚ್ಚಾಗಿ 60 ವರ್ಷಗಳು ಆಗಿರುತ್ತದೆ. ಹೆಚ್ಚಿನ ಇನ್ಶೂರರ್ ಗಳು 80 ವರ್ಷ ವಯಸ್ಸಿನವರೆಗೆ ಕವರೇಜ್ ಅನ್ನು ಒದಗಿಸಿದರೂ, ಕೆಲವರು ಕೇವಲ 65 ರವರೆಗೆ ಕವರ್ ನೀಡುತ್ತಾರೆ. ಅವುಗಳಲ್ಲಿ ಕೆಲವು ಖಚಿತವಾದ ಲೈಫ್ ಟೈಮ್ ನವೀಕರಣವನ್ನು ಸಹ ಒದಗಿಸುತ್ತವೆ.

ಸಮ್ ಇನ್ಶೂರ್ಡ್

ನಿಮ್ಮ ಪೋಷಕರ ಅವಶ್ಯಕತೆಗಳನ್ನು ಅರಿತುಕೊಳ್ಳಿ ಮತ್ತು ನಿಮ್ಮ ಹೆಲ್ತ್ ಪಾಲಿಸಿಯಲ್ಲಿ ನೀವು ತೆಗೆದುಕೊಳ್ಳಲು ಬಯಸುವ ಸಮ್ ಇನ್ಶೂರ್ಡ್ ಅನ್ನು ನಿರ್ಧರಿಸಿ.

ಸೇರ್ಪಡೆಗಳು ಮತ್ತು ಹೊರಗಿಡುವಿಕೆಗಳು

ಅತ್ಯಂತ ಮುಖ್ಯವಾದ ಅಂಶ. ಪಾಲಿಸಿಯಲ್ಲಿ ಒಳಗೊಂಡಿರುವ ಸೇರ್ಪಡೆಗಳು ಮತ್ತು ಹೊರಗಿಡುವಿಕೆಗಳನ್ನು ಗಮನವಿಟ್ಟು ಪರಿಶೀಲಿಸಿ. ಇದು ಒಂದು ಕ್ರಿಟಿಕಲ್ ಇಲ್ ನೆಸ್ ಪಾಲಿಸಿಯಾಗಿದ್ದರೆ, ಕವರ್ ಆಗಿರುವ ಕ್ರಿಟಿಕಲ್ ಇಲ್ ನೆಸ್ ಗಳ ಪಟ್ಟಿಯನ್ನು ಪರಿಶೀಲಿಸಿ, ಆಯುಷ್, ಕೋವಿಡ್ ಕವರ್, ಡೇ ಕೇರ್ ಪ್ರಕ್ರಿಯೆಗಳು, ಮನೆ ಚಿಕಿತ್ಸೆ ಇತ್ಯಾದಿಗಳಂತಹ ಇತರ ಕವರ್‌ಗಳನ್ನು ಪರಿಶೀಲಿಸಿ.

ಕ್ಯಾಶ್ ಲೆಸ್ ಚಿಕಿತ್ಸೆ

ನಿಮ್ಮ ಪಾಲಿಸಿಯಲ್ಲಿ ನೆಟ್‌ವರ್ಕ್ ಹಾಸ್ಪಿಟಲ್ ಕವರೇಜ್ ಅನ್ನು ಪರಿಶೀಲಿಸಿ ಇದರಿಂದ ಅಗತ್ಯವಿದ್ದಾಗ ಮತ್ತು ನೀವು ದೇಶದಲ್ಲಿ ಇಲ್ಲದಿದ್ದರೆ, ಯಾವುದೇ ಕ್ಯಾಶ್ ನ ಅಗತ್ಯವಿಲ್ಲದೆಯೇ ಪೋಷಕರು ಸುಲಭವಾಗಿ ಹೆಲ್ತ್ ಕೇರ್ ಸೌಲಭ್ಯಗಳನ್ನು ಪಡೆಯಬಹುದು. 

ಮೊದಲೇ ಅಸ್ತಿತ್ವದಲ್ಲಿರುವ ರೋಗಗಳಿಗೆ ವೇಟಿಂಗ್ ಪೀರಿಯಡ್

ಹೆಚ್ಚಿನ ಪಾಲಿಸಿಗಳು ಮೊದಲೇ ಅಸ್ತಿತ್ವದಲ್ಲಿರುವ ಅನಾರೋಗ್ಯ ಕ್ಕಾಗಿ 24 ತಿಂಗಳಿಂದ 48 ತಿಂಗಳವರೆಗಿನ ವೇಟಿಂಗ್ ಪೀರಿಯಡ್ಯನ್ನು ಹೊಂದಿರುತ್ತವೆ. ಈ ವೇಟಿಂಗ್ ಪೀರಿಯಡ್ ಮುಗಿದ ನಂತರವೇ, ನೀವು ಮೊದಲೇ ಅಸ್ತಿತ್ವದಲ್ಲಿರುವ ಅನಾರೋಗ್ಯಕ್ಕಾಗಿ ಕ್ಲೈಮ್ ಮಾಡಬಹುದಾಗಿದೆ. ಆದ್ದರಿಂದಲೇ, ಕನಿಷ್ಠ ವೇಟಿಂಗ್ ಪೀರಿಯಡ್ ನೊಂದಿಗೆ ಬರುವ ಪಾಲಿಸಿಯನ್ನು ಆಯ್ಕೆಮಾಡಿ.

ಸುಗಮ ಮತ್ತು ತ್ವರಿತ ಕ್ಲೈಮ್ ಇತ್ಯರ್ಥ ಪ್ರಕ್ರಿಯೆ

ಸುಗಮ ಮತ್ತು ತ್ವರಿತ ಇತ್ಯರ್ಥ ಪ್ರಕ್ರಿಯೆ ಏಕೆಂದರೆ ಪೋಷಕರು ತಮ್ಮ ಮಕ್ಕಳು ಇಲ್ಲದಿದ್ದಾಗ ಸ್ಥಳದಿಂದ ಸ್ಥಳಕ್ಕೆ ಓಡಬೇಕಾಗಿರುವುದಿಲ್ಲ

ಡಿಜಿಟ್ ಹೆಲ್ತ್ ಇನ್ಶೂರೆನ್ಸ್ ನ ವಿಶೇಷತೆಯೇನು?

ಸರಳ ಆನ್‌ಲೈನ್ ಪ್ರಕ್ರಿಯೆಗಳು - ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಪ್ರಕ್ರಿಯೆಯಿಂದ ಹಿಡಿದು ಕ್ಲೈಮ್‌ಗಳನ್ನು ಮಾಡುವವರೆಗೆ ಎಲ್ಲವೂ ಪೇಪರ್ ಲೆಸ್, ಸುಲಭ, ತ್ವರಿತ ಮತ್ತು ಗೊಂದಲರಹಿತವಾಗಿದೆ! ಕ್ಲೈಮ್‌ಗಳಿಗೂ ಸಹ ಯಾವುದೇ ಹಾರ್ಡ್ ಕಾಪಿಗಳ ಅಗತ್ಯವಿಲ್ಲ!

ವಯಸ್ಸು-ಆಧಾರಿತ ಅಥವಾ ವಲಯ-ಆಧಾರಿತ ಸಹ-ಪಾವತಿ ಇಲ್ಲ - ನಮ್ಮ ಹೆಲ್ತ್ ಇನ್ಶೂರೆನ್ಸ್ ವಯಸ್ಸು ಆಧಾರಿತ ಅಥವಾ ವಲಯ-ಆಧಾರಿತವಲ್ಲದ ಸಹ-ಪಾವತಿಯೊಂದಿಗೆ ಬರುತ್ತದೆ. ಇದರರ್ಥ, ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ ಗಳ ಸಮಯದಲ್ಲಿ, ನಿಮ್ಮ ಜೇಬಿನಿಂದ ನೀವು ಏನನ್ನೂ ಪಾವತಿಸಬೇಕಾಗಿಲ್ಲ. 

ರೂಮ್ ಬಾಡಿಗೆ ನಿರ್ಬಂಧವಿಲ್ಲ- ಪ್ರತಿಯೊಬ್ಬರ ಆದ್ಯತೆಗಳು ಭಿನ್ನವಾಗಿರುತ್ತವೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಅದಕ್ಕಾಗಿಯೇ ನಮ್ಮಲ್ಲಿ ರೂಮ್ ಬಾಡಿಗೆ ನಿರ್ಬಂಧಗಳಿಲ್ಲ. ನೀವು ಇಷ್ಟಪಡುವ ಯಾವುದೇ ಆಸ್ಪತ್ರೆಯ ರೂಮ್ ಅನ್ನು ಆರಿಸಿ. 

ಎಸ್‌ಐ ವಾಲೆಟ್ ಪ್ರಯೋಜನ - ಪಾಲಿಸಿ ಅವಧಿಯಲ್ಲಿ ನಿಮ್ಮ ಸಮ್ ಇನ್ಶೂರ್ಡ್ ಅನ್ನು ನೀವು ಖಾಲಿ ಮಾಡಿದರೆ, ನಾವು ಅದನ್ನು ನಿಮಗಾಗಿ ಪುನಃ ಭರಿಸುತ್ತೇವೆ.

ಯಾವ ಆಸ್ಪತ್ರೆಯಲ್ಲಿ ಬೇಕಾದರೂ ಚಿಕಿತ್ಸೆ ಪಡೆಯಿರಿ - ನಗದುರಹಿತ ಚಿಕಿತ್ಸೆಗಾಗಿ ಭಾರತದಲ್ಲಿನ ನಮ್ಮ 10500+ ನೆಟ್‌ವರ್ಕ್ ಆಸ್ಪತ್ರೆ ಗಳಿಂದ ಆಯ್ಕೆಮಾಡಿ ಅಥವಾ ರಿಇಂಬರ್ಸ್ ಮೆಂಟ್ ಅನ್ನು ಆರಿಸಿಕೊಳ್ಳಿ. 

ವೆಲ್‌ನೆಸ್ ಪ್ರಯೋಜನಗಳು  - ಡಿಜಿಟ್ ಅಪ್ಲಿಕೇಶನ್‌ನಲ್ಲಿ ವಿಶೇಷವಾದ ವೆಲ್‌ನೆಸ್ ಪ್ರಯೋಜನ ಗಳನ್ನು ಪಡೆಯಿರಿ ಉನ್ನತ ದರ್ಜೆಯ ಆರೋಗ್ಯ ಮತ್ತು ವೆಲ್‌ನೆಸ್ ಪಾಲುದಾರರ ಸಹಯೋಗದೊಂದಿಗೆ.

ಡಿಜಿಟ್ ಹೆಲ್ತ್ ಇನ್ಶೂರೆನ್ಸ್ ನ ಪ್ರಮುಖ ಪ್ರಯೋಜನಗಳು

ಸಹ-ಪಾವತಿ ಇಲ್ಲ
ರೂಮ್ ಬಾಡಿಗೆಗೆ ಮಿತಿ ಇಲ್ಲ
ಕ್ಯಾಶ್ ಲೆಸ್ ಆಸ್ಪತ್ರೆಗಳು ಭಾರತದಾದ್ಯಂತ 10500+ ನೆಟ್ವರ್ಕ್ ಆಸ್ಪತ್ರೆಗಳು
ಅಂತರ್ಗತ ವೈಯಕ್ತಿಕ ಅಪಘಾತ ಕವರ್ ಹೌದು
ವೆಲ್‌ನೆಸ್ ಪ್ರಯೋಜನಗಳು 10+ ವೆಲ್‌ನೆಸ್ ಪಾಲುದಾರರಿಂದ ಲಭ್ಯವಿದೆ
ನಗರ ಆಧಾರಿತ ರಿಯಾಯಿತಿ 10% ವರೆಗಿನ ರಿಯಾಯಿತಿ
ವಿಶ್ವಾದ್ಯಂತ ಕವರೇಜ್ ಹೌದು*
ಒಳ್ಳೆಯ ಆರೋಗ್ಯದ ರಿಯಾಯಿತಿ 5% ವರೆಗಿನ ರಿಯಾಯಿತಿ
ಕನ್ಸ್ಯೂಮೇಬಲ್ಸ್ ಕವರ್ ಆಡ್-ಆನ್ ಆಗಿ ಲಭ್ಯವಿದೆ

*ವಿಶ್ವಾದ್ಯಂತ ಚಿಕಿತ್ಸಾ ಯೋಜನೆಯಲ್ಲಿ ಮಾತ್ರ ಲಭ್ಯವಿದೆ

ಪದೇ ಪದೇ ಕೇಳಲಾದ ಪ್ರಶ್ನೆಗಳು

ಎನ್‌ಆರ್‌ಐ ಗಳು ಭಾರತದಲ್ಲಿರುವ ತಮ್ಮ ಕುಟುಂಬಗಳಿಗೆ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸಬಹುದೇ?

ಹೌದು, ಎನ್‌ಆರ್‌ಐಗಳು ಭಾರತದಲ್ಲಿರುವ ತಮ್ಮ ಕುಟುಂಬಗಳಿಗೆ ಹೆಲ್ತ್ ಇನ್ಶೂರೆನ್ಸ್ ಅನ್ನು ಖಂಡಿತವಾಗಿ ಖರೀದಿಸಬಹುದು. ಇದು ಅವರ ಸಂಗಾತಿ, ಅವಲಂಬಿತ ಮಕ್ಕಳು ಮತ್ತು ಅವಲಂಬಿತ ಪೋಷಕರನ್ನು ಒಳಗೊಂಡಿರುತ್ತದೆ.

ಹೆಲ್ತ್ ಇನ್ಶೂರೆನ್ಸ್ ಕಂಪೆನಿಗಳು ಅನಿವಾಸಿ ಭಾರತೀಯರನ್ನು ಕವರ್ ಮಾಡುತ್ತವೆಯೇ?

ಹೌದು. ಹೆಲ್ತ್ ಇನ್ಶೂರೆನ್ಸ್ ಕಂಪೆನಿಗಳು ಅನಿವಾಸಿ ಭಾರತೀಯರಿಗೆ ಭಾರತದಲ್ಲಿ ತಗಲುವ ವೈದ್ಯಕೀಯ ವೆಚ್ಚಗಳಿಗೆ ಕವರ್ ಅನ್ನು ಒದಗಿಸುತ್ತವೆ. ಆದಾಗ್ಯೂ, ಇತ್ತೀಚೆಗೆ, ಕೆಲವು ಇನ್ಶೂರೆನ್ಸ್ ಪೂರೈಕೆದಾರರು ನಿಯಮಗಳು ಮತ್ತು ಷರತ್ತುಗಳನ್ನು ಅವಲಂಬಿಸಿ ಇತರ ದೇಶಗಳಲ್ಲಿ ಸಹ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡಲು ಪ್ರಾರಂಭಿಸಿದ್ದಾರೆ.

ಎನ್‌ಆರ್‌ಐ ಗಳು ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂನಲ್ಲಿ ಟ್ಯಾಕ್ಸ್ ಡಿಡಕ್ಶನ್ ಅನ್ನು ಕ್ಲೈಮ್ ಮಾಡಬಹುದೇ?

ಹೌದು, ಭಾರತದಲ್ಲಿ ಯಾವುದೇ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗೆ ಪಾವತಿಸಿದ ಪ್ರೀಮಿಯಂ ಸೆಕ್ಷನ್ 80ಡಿ ಅಡಿಯಲ್ಲಿ ಬರುತ್ತದೆ ಮತ್ತು ಇದನ್ನು ಅವರ ಭಾರತೀಯ ಆದಾಯದಲ್ಲಿ ಟ್ಯಾಕ್ಸ್ ಡಿಡಕ್ಶನ್ ಗಾಗಿ ಕ್ಲೈಮ್ ಮಾಡಬಹುದು. 

 ನಿಮ್ಮ ಪೋಷಕರಿಗಾಗಿ ಹೆಲ್ತ್ ಇನ್ಶೂರೆನ್ಸ್ ಮತ್ತು ಸೀನಿಯರ್ ಸಿಟಿಜನ್ ಹೆಲ್ತ್ ಇನ್ಶೂರೆನ್ಸ್ಅನ್ನು ಖರೀದಿಸುವ ಕುರಿತು ಇನ್ನಷ್ಟು ಓದಿ.