ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
2019 ರ ವರದಿಯ ಪ್ರಕಾರ, ಭಾರತದಲ್ಲಿ 1.3 ಬಿಲಿಯನ್ ನಾಗರಿಕರಲ್ಲಿ ಸುಮಾರು 472 ಮಿಲಿಯನ್ ವ್ಯಕ್ತಿಗಳು ಮಾತ್ರ ಮಾನ್ಯವಾಗಿರುವ ಮೆಡಿಕಲ್ ಇನ್ಶೂರೆನ್ಸ್ ಕವರೇಜನ್ನು ಹೊಂದಿದ್ದಾರೆ.
ಹೀಗಾಗಿ, ಜನಸಂಖ್ಯೆಯ ಅರ್ಧದಷ್ಟು ಜನರು ವೈದ್ಯಕೀಯ ವೆಚ್ಚದ ವಿರುದ್ಧ ಯಾವುದೇ ರಕ್ಷಣೆಯನ್ನು ಹೊಂದಿಲ್ಲ. ಗಣನೀಯ ಬಡತನದ ಕಾರಣದಿಂದಾಗಿ ಸಮಾಜದ ದೊಡ್ಡ ಭಾಗವೊಂದು ಗುಣಮಟ್ಟದ ಆರೋಗ್ಯ ಸೇವೆಗಳನ್ನು ಪಡೆಯಲು ಸಾಧ್ಯವಿಲ್ಲ ಎನ್ನುವುದನ್ನು ನೀವು ಗ್ರಹಿಸಬಹುದು.
ಆದ್ದರಿಂದ, ಪ್ರಮುಖ ವೈದ್ಯಕೀಯ ಸೇವೆಗಳು ಭಾರತೀಯರಿಗೆ ಹೇಗೆ ಹೆಚ್ಚಾಗಿ ಕೈಸೇರಬಹುದು?
ಇದರ ಉತ್ತರ ಸರಳ. ಭಾರತ ಸರ್ಕಾರದಿಂದ ಬೆಂಬಲಿತವಾಗಿರುವ ಹೊಸ ಹೊಸ ಮತ್ತು ಸಹಾಯಕಾರಿ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳ ಸಹಾಯದಿಂದ ಇದು ಸಾಧ್ಯ.
ನೀವು ತಿಳಿದುಕೊಳ್ಳಬೇಕಾದ ಕೆಲವು ಪ್ರಮುಖ ಯೋಜನೆಗಳು ಇಲ್ಲಿವೆ. ಇವು ಲಕ್ಷಾಂತರ ಭಾರತೀಯರಿಗೆ ಅಗತ್ಯವಿದ್ದಾಗ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಗಳನ್ನು ಮತ್ತು ಕಾರ್ಯವಿಧಾನಗಳನ್ನು ಪಡೆಯಲು ಅವಕಾಶ ಮಾಡಿಕೊಟ್ಟಿವೆ.
ಪಿಎಮ್-ಜೆಎವೈ ಯು ವಿಶೇಷ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಸೂಚಿಸುತ್ತದೆ. ಇದು ಆರ್ಥಿಕವಾಗಿ-ಹಿಂದುಳಿದ ಭಾರತದ ಎಲ್ಲ ನಾಗರಿಕರಿಗೆ ಲಭ್ಯವಿದೆ.
ಅಂತಹ ಒಂದು ಕುಟುಂಬ ವಾರ್ಷಿಕವಾಗಿ ₹30 ಗಳ ಪ್ರೀಮಿಯಂಗಳನ್ನು ಪಾವತಿಸುವ ಮೂಲಕ, ವರ್ಷಕ್ಕೆ ₹5 ಲಕ್ಷಗಳವರೆಗೆ ಮೆಡಿಕಲ್ ಇನ್ಶೂರೆನ್ಸ್ ರಕ್ಷಣೆಯನ್ನು ಪಡೆಯಬಹುದು.
ಈ ಮೆಡಿಕಲ್ ರಕ್ಷಣೆಯೊಂದಿಗೆ, ಈ ಯೋಜನೆಯು ರಾಷ್ಟ್ರದಾದ್ಯಂತ ಸುಮಾರು 1.5 ಲಕ್ಷ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳ ನಿರ್ಮಾಣಕ್ಕೆ ಕಾರಣವಾಗಿದೆ.
ಪಾಲಿಸಿಯು, ಕೇರಳದಲ್ಲಿ ವೈದ್ಯಕೀಯ ರಕ್ಷಣೆಯಿಲ್ಲದ ಅಂತರ-ರಾಜ್ಯ ಕಾರ್ಮಿಕರನ್ನು ಒಳಗೊಳ್ಳುತ್ತದೆ.
ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಹಣಕಾಸಿನ ನೆರವಿನೊಂದಿಗೆ, ಈ ಯೋಜನೆಯು ಪಾಲಿಸಿದಾರರ ಕುಟುಂಬ ಸದಸ್ಯರಿಗೆ ಮರಣ ಪ್ರಯೋಜನವನ್ನು ಸಹ ನೀಡುತ್ತದೆ.
ಅಂತಹ ಯೋಜನೆಯಿಂದ ನೀವು ₹15000 ವರೆಗೆ ವೈದ್ಯಕೀಯ ರಕ್ಷಣೆಯನ್ನು ಪಡೆಯಬಹುದು. ಮರಣ ಪ್ರಯೋಜನವು ಪಾಲಿಸಿದಾರನ ಮರಣದ ನಂತರ, ಕುಟುಂಬದ ಉಳಿದ ಸದಸ್ಯರಿಗೆ ₹2 ಲಕ್ಷಗಳ ಪೇಔಟ್ ಅನ್ನು ನೀಡುತ್ತದೆ.
ಆದಾಗ್ಯೂ, ಈ ಸೌಲಭ್ಯವು 18 ರಿಂದ 60 ವರ್ಷ ವಯಸ್ಸಿನ ಕಾರ್ಮಿಕರಿಗೆ ಮಾತ್ರ ಲಭ್ಯವಿದೆ. ಆದ್ದರಿಂದ, ಹಿರಿಯ ನಾಗರಿಕರು ಇದರ ವ್ಯಾಪ್ತಿಗೆ ಅರ್ಹರಾಗಿರುವುದಿಲ್ಲ
ಭಾಮಾಶಾಃ ಸ್ವಾಸ್ಥ್ಯ ಬಿಮಾ ಯೋಜನೆಯು, ರಾಜಸ್ಥಾನದ ಗ್ರಾಮೀಣ ನಿವಾಸಿಗಳಿಗೆ ಆರೋಗ್ಯ ರಕ್ಷಣೆಯನ್ನು ನೀಡುವ ಒಂದು ಪ್ರಾರಂಭಿಕ ಹೆಜ್ಜೆಯಾಗಿದೆ.
ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (ಎನ್.ಎಫ್.ಎಸ್.ಎ) ಇವುಗಳಿಂದ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುವ ವ್ಯಕ್ತಿಗಳು, ಈ ಯೋಜನೆಯನ್ನೂ ಆಯ್ಕೆ ಮಾಡಲು ಅರ್ಹರಾಗಿರುತ್ತಾರೆ.
ನೆನಪಿಡಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ, ಪಾಲಿಸಿದಾರರ ವಯಸ್ಸಿನ ವಿಷಯಕ್ಕೆ ಬಂದರೆ, ಈ ಯೋಜನೆ ಯಾವುದೇ ಗರಿಷ್ಠ ಮಿತಿಯನ್ನು ಹೊಂದಿಲ್ಲ.
ತಮಿಳುನಾಡು ಸರ್ಕಾರವು, ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯ ಸಹಯೋಗದೊಂದಿಗೆ, ರಾಜ್ಯದ ಅಗತ್ಯವಿರುವ ಸಾರ್ವಜನಿಕರಿಗೆ ಈ ಅತ್ಯುತ್ತಮ ಫ್ಯಾಮಿಲಿ ಫ್ಲೋಟರ್ ಮೆಡಿಕಲ್ ಇನ್ಶೂರೆನ್ಸ್ ನೀಡುತ್ತದೆ.
ನಿರ್ದಿಷ್ಟವಾಗಿ, ವಾರ್ಷಿಕವಾಗಿ ₹ 75000 ಕ್ಕಿಂತ ಕಡಿಮೆ ಆದಾಯ ಗಳಿಸುವ ವ್ಯಕ್ತಿಗಳು ಈ ಯೋಜನೆಗೆ ಅರ್ಹರಾಗಿರುತ್ತಾರೆ. ನೀವು ಈ ಕೊಡುಗೆಯನ್ನು ಪಡೆದರೆ ಆಯ್ದ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಸೌಲಭ್ಯಗಳಿಗೆ, ನೀವು ₹5 ಲಕ್ಷಗಳವರೆಗೆ ಹಾಸ್ಪಿಟಲೈಸೇಷನ್ ವೆಚ್ಚವನ್ನು ಕ್ಲೈಮ್ ಮಾಡಬಹುದು.
ಮುಖ್ಯಮಂತ್ರಿಗಳ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಯೋಜನೆಯ ಬಗ್ಗೆ ಇನ್ನಷ್ಟು ತಿಳಿಯಿರಿ
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಹೆಚ್ಚು ಉಪಯುಕ್ತವಾದ ಆರೋಗ್ಯ ವಿಮಾ ಯೋಜನೆಯೆಂದರೆ, ಅದು ಆಮ್ ಆದ್ಮಿ ಬಿಮಾ ಯೋಜನೆ ಅಥವಾ ಎ.ಎ.ಬಿ.ವೈ ಆಗಿದೆ. ಆದಾಗ್ಯೂ, ಇದು ಆಯ್ದ ವೃತ್ತಿಗಳಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಮಾತ್ರ ಲಭ್ಯವಿರುತ್ತದೆ.
ಈ ಯೋಜನೆಯು 48 ವಿವಿಧ ವೃತ್ತಿಗಳನ್ನು ಬೆಂಬಲಿಸುತ್ತದೆ. ಹೆಚ್ಚಾಗಿ ಬೀಸುವಿಕೆ, ಮರಗೆಲಸ, ಮೀನುಗಾರಿಕೆ ಮತ್ತು ಮುಂತಾದವುಗಳಿಗೆ ಸಂಬಂಧಿಸಿದೆ.
ವೃತ್ತಿಗಳಲ್ಲಿ ಒಂದಾದ ನಿಮ್ಮ ಕೆಲಸವನ್ನು ಹೊರತುಪಡಿಸಿ, ಅರ್ಜಿದಾರನನು ತನ್ನ ಕುಟುಂಬಕ್ಕಾಗಿ ಗಳಿಸುವ ಮುಖ್ಯಸ್ಥನಾಗಿರಬೇಕು.
ಪಾಲಿಸಿಹೋಲ್ಡರ್ ಗಳು ₹200 ವಾರ್ಷಿಕ ಪ್ರೀಮಿಯಂ ಪಾವತಿಸುವ ಮೂಲಕ ಅಂತಹ ಯೋಜನೆಯಿಂದ ₹30000 ವರೆಗಿನ ಕವರೇಜ್ ಅನ್ನು ಕ್ಲೈಮ್ ಮಾಡಬಹುದು.
ಈ ಇನ್ಶೂರೆನ್ಸ್ ಯೋಜನೆಯು ಕೇಂದ್ರ ಸರ್ಕಾರದಿಂದ ನಿರ್ವಹಿಸಲ್ಪಡುತ್ತದೆ. ಇದು ಕೇವಲ ಕೇಂದ್ರ ಸರ್ಕಾರಿ ನೌಕರರಿಗೆ ಮಾತ್ರ ಇನ್ಶೂರೆನ್ಸ್ ಪೂರೈಸುವ ಗುರಿಯನ್ನು ಹೊಂದಿದೆ.
ಭಾರತೀಯ ರೈಲ್ವೇಯ ಉನ್ನತ ಶ್ರೇಣಿಯ ಉದ್ಯೋಗಿಗಳು, ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮತ್ತು ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುವ ಪ್ರಮುಖ ಕೆಲಸಗಾರರು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು.
ಇದು ಆಸ್ಪತ್ರೆಗೆ ದಾಖಲಾಗುವ ಪ್ರಯೋಜನಗಳ ಜೊತೆಗೆ ಮನೆಯ ಚಿಕಿತ್ಸೆಯನ್ನು ನೀಡುತ್ತದೆ. ಇಷ್ಟೇ ಅಲ್ಲದೇ, ನೀವು ಈ ಪಾಲಿಸಿಯಿಂದ ಹೋಮಿಯೋಪತಿ ಮತ್ತು ನ್ಯಾಚುರೋಪಥಿ ಚಿಕಿತ್ಸೆಯ ವೆಚ್ಚಗಳನ್ನು ಪಡೆಯಬಹುದು.
ಪ್ರಸ್ತುತ, ಸಿ.ಜಿ.ಹೆಚ್.ಎಸ್ ಭಾರತದ 71 ನಗರಗಳಲ್ಲಿ ಲಭ್ಯವಿದೆ. ಅದೇನೇ ಇದ್ದರೂ, ಅಂತಿಮವಾಗಿ ಈ ಪಟ್ಟಿಗೆ ಇನ್ನಷ್ಟು ನಗರಗಳನ್ನು ಸೇರಿಸಬಹುದೆಂದು ನಿರೀಕ್ಷಿಸಬಹುದು.
ಕಾರುಣ್ಯ ಆರೋಗ್ಯ ಯೋಜನೆಯು ಕೇರಳ ಸರ್ಕಾರದ ಮತ್ತೊಂದು ಜನಪ್ರಿಯ ಯೋಜನೆಯಾಗಿದೆ. ಕಾರುಣ್ಯ ಮೆಡಿಕಲ್ ಇನ್ಶೂರೆನ್ಸ್ ಯೋಜನೆಯು ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲವಿರುವ ವರ್ಗದ ವ್ಯಕ್ತಿಗಳಿಗೆ, ಕ್ರಿಟಿಕಲ್ ಅನಾರೋಗ್ಯದ ವಿರುದ್ಧ ರಕ್ಷಣೆಯನ್ನು ನೀಡುತ್ತದೆ.
ಕ್ಯಾನ್ಸರ್ನಿಂದ ಹಿಡಿದು ಹೃದಯ ಸಂಬಂಧಿ ಕಾಯಿಲೆಗಳವರೆಗೆ, ಈ ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ದೀರ್ಘಕಾಲದ ಕಾಯಿಲೆಗಳೆಂದು ವರ್ಗೀಕರಿಸಲಾಗಿದೆ. ಹೆಚ್ಚಿನ ಸ್ಟ್ಯಾಂಡರ್ಡ್ ಪಾಲಿಸಿ ಅಡಿಯಲ್ಲಿ, ಪ್ರಮುಖ ಕಾಯಿಲೆಗಳಿಗೆ ಹಣಕಾಸಿನ ಕವರೇಜ್ ಸೀಮಿತವಾಗಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ.
ಈ ಯೋಜನೆಯನ್ನು ಆಯ್ಕೆ ಮಾಡಲು, ನಿಮ್ಮ ಆಧಾರ್ ಕಾರ್ಡ್ನ ಫೋಟೊಕಾಪಿಯೊಂದಿಗೆ ನಿಮ್ಮ ಆದಾಯ ಪ್ರಮಾಣಪತ್ರವನ್ನು ನೀವು ಸಲ್ಲಿಸಬೇಕಾಗುತ್ತದೆ.
ನೀವು ಕಾರ್ಖಾನೆಯ ಕೆಲಸಗಾರರಾಗಿದ್ದರೆ, ಸರ್ಕಾರದ ಈ ಕ್ರಮವು ನಿಮ್ಮ ಕಲ್ಯಾಣಕ್ಕೆ ಸಂಬಂಧಿಸಿದ್ದಾಗಿದೆ. ಸ್ವಾತಂತ್ರ್ಯದ ನಂತರ ಭಾರತ ದೇಶದ ಕಾರ್ಖಾನೆಗಳಲ್ಲಿ ಸಾವುಗಳ ಮತ್ತು ಅಂಗವೈಕಲ್ಯಗಳ ಸಂಖ್ಯೆಯನ್ನು ಕಡಿಮೆಗೊಳಿಸಲು, ಸರ್ಕಾರವು ಕಾರ್ಖಾನೆಯ ಉದ್ಯೋಗಿಗಳಿಗೆ ಈ ಇನ್ಶೂರೆನ್ಸ್ ಸೌಲಭ್ಯವನ್ನು ಪ್ರಾರಂಭಿಸಿತು.
ಈ ಯೋಜನೆಯು ಆರಂಭದಲ್ಲಿ ಕಾನ್ಪುರ ಮತ್ತು ದೆಹಲಿ ಕಾರ್ಖಾನೆಗಳಿಗೆ ಮಾತ್ರ ಸೀಮಿತವಾಗಿತ್ತು. ನಂತರ ಭಾರತದಾದ್ಯಂತ 7 ಲಕ್ಷಕ್ಕೂ ಹೆಚ್ಚು ಕಾರ್ಖಾನೆಗಳಿಗೆ ವಿಸ್ತರಿಸಲು ಯೋಜನೆಯನ್ನು ನವೀಕರಿಸಲಾಯಿತು.
ಕಾರ್ಮಿಕರ ರಾಜ್ಯ ಇನ್ಶೂರೆನ್ಸ್ ಯೋಜನೆಯ ಬಗ್ಗೆ ಇನ್ನಷ್ಟು ತಿಳಿಯಿರಿ
ಸಂಖ್ಯೆಯನ್ನು ಹೆಚ್ಚಿಸಲು ಪ್ರತಿಜ್ಞೆ ಮಾಡಿದೆ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯು ಈ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ. ಇದು ಪಾಲಿಸಿಹೋಲ್ಡರ್ ಗೆ ಆಕಸ್ಮಿಕ ಮರಣ ಮತ್ತು ಅಂಗವೈಕಲ್ಯ ಪ್ರಯೋಜನಗಳನ್ನು ನೀಡುತ್ತದೆ.
ಭಾಗಶಃ ಅಂಗವೈಕಲ್ಯದಿಂದ ಬಳಲುತ್ತಿರುವ ವ್ಯಕ್ತಿಗಳು ಈ ಯೋಜನೆಯಿಂದ ₹1 ಲಕ್ಷದವರೆಗೆ ಕ್ಲೈಮ್ ಮಾಡಬಹುದು. ಆದರೆ ಸಂಪೂರ್ಣ ಅಂಗವೈಕಲ್ಯ ಬಳಲುತ್ತಿರುವವರು/ ಸಾವಿಗೀಡಾದವರು ₹2 ಲಕ್ಷದವರೆಗಿನ ಪ್ರಯೋಜನಗಳನ್ನು ಆಯ್ಕೆ ಮಾಡಿಕೊಳ್ಳಲು ಅರ್ಹರು. ಅಂತಹ ಕವರೇಜ್ ಪಡೆಯಲು, ನೀವು ₹12 ರ ವಾರ್ಷಿಕ ಪ್ರೀಮಿಯಂಗಳನ್ನು ಪಾವತಿಸಬೇಕಾಗುತ್ತದೆ.
ಯಾವುದೇ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ಹೊಂದಿರುವ 18 ರಿಂದ 70 ವರ್ಷ ವಯಸ್ಸಿನವರು ಈ ಯೋಜನೆಗೆ ಸಂಬಂಧಿಸಿದ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳಿಗಾಗಿ ಮಹಾರಾಷ್ಟ್ರ ಸರ್ಕಾರವು ಈ ನಿರ್ದಿಷ್ಟ ಮೆಡಿಕಲ್ ಇನ್ಶೂರೆನ್ಸ್ ಯೋಜನೆಯನ್ನು ಪ್ರಾರಂಭಿಸಿತು.
ಆದಾಗ್ಯೂ, ಆಯ್ದ ಜಿಲ್ಲೆಯ ನಿವಾಸಿಗಳು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಪಾಲಿಸಿಹೋಲ್ಡರ್ ಗಳು ಕವರೇಜ್ನ ಮೊದಲ ದಿನದಿಂದ ಕಾಯಿಲೆಗಳಿಗೆ, ಗುರುತಿಸಲಾದ ಸೇರ್ಪಡೆಗಳಿಗೆ ಆರ್ಥಿಕ ಲಾಭವನ್ನು ಪಡೆಯಬಹುದು. ಗರಿಷ್ಠ ಕವರೇಜ್ ಮೊತ್ತವು ₹1.5 ಲಕ್ಷದವರೆಗೆ ಇರುತ್ತದೆ.
ಮಹಾತ್ಮಾ ಜ್ಯೋತಿಬಾ ಫುಲೆ ಜನ ಆರೋಗ್ಯ ಯೋಜನೆಯ ಬಗ್ಗೆ ಇನ್ನಷ್ಟು ತಿಳಿಯಿರಿ
ಒಂದು ಯೋಜನೆಯಾಗಿರುವುದಕ್ಕಿಂತ ಹೆಚ್ಚಾಗಿ, ಇದು ಆಂಧ್ರ ಪ್ರದೇಶದ ನಿವಾಸಿಗಳಿಗೆ ನಾಲ್ಕು ವಿಭಿನ್ನ ರೀತಿಯ ಪಾಲಿಸಿಗಳನ್ನು ಒಳಗೊಂಡಿರುವ ಒಂದು ಸೂರಾಗಿದೆ.
ಒಂದು ಯೋಜನೆಯಿಂದ ಬಡವರಿಗೆ ಲಾಭವಾದರೆ, ಇನ್ನೊಂದು ಯೋಜನೆ ಬಡತನ ರೇಖೆಗಿಂತ ಮೇಲಿರುವ ವ್ಯಕ್ತಿಗಳಿಗೆ ಪ್ರಯೋಜನಕಾರಿ. ಮೂರನೇ ವಿಧವು ಪತ್ರಕರ್ತರನ್ನು ಒಳಗೊಂಡಿದ್ದು, ಅವರಿಗೆ ಕ್ಯಾಶ್ ಲೆಸ್ ಚಿಕಿತ್ಸೆಯ ಪ್ರಯೋಜನ ನೀಡುತ್ತದೆ. ಕೊನೆಯದಾಗಿ, ಈ ಸೂರಿನ ಯೋಜನೆಯ ಇನ್ನೊಂದು ಭಾಗವೆಂದರೆ, ಅದು ಈ ರಾಜ್ಯದ ಉದ್ಯೋಗಿಗಳಿಗೆ ಮಾತ್ರ ಸೇವೆ ಒದಗಿಸುತ್ತದೆ.
ಡಾ ವೈಎಸ್ಆರ್ ಆರೋಗ್ಯಶ್ರೀ ಹೆಲ್ತ್ ಕೇರ್ ಟ್ರಸ್ಟ್ ಆಂಧ್ರ ಪ್ರದೇಶ ರಾಜ್ಯ ಸರ್ಕಾರದ ಬಗ್ಗೆ ಇನ್ನಷ್ಟು ತಿಳಿಯಿರಿ
ಮುಖ್ಯಮಂತ್ರಿ ಅಮೃತಂ ಯೋಜನೆಯು ಗುಜರಾತ್ ಸರ್ಕಾರದ ಭಾಗವಾಗಿದ್ದು, ಇದು 2012 ರಲ್ಲಿ ಪ್ರಾರಂಭಿಸಲಾದ ನಿರ್ದಿಷ್ಟ ಯೋಜನೆಯಾಗಿದೆ. ಇದು ಕೆಳಮಧ್ಯಮ ವರ್ಗಕ್ಕೆ ಸೇರಿದ ರಾಜ್ಯದ ನಾಗರಿಕರಿಗೆ ಮತ್ತು ಬಡತನ ರೇಖೆಗಿಂತ ಕೆಳಗಿರುವವರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ.
ಫ್ಯಾಮಿಲಿ ಫ್ಲೋಟರ್ ಪಾಲಿಸಿಯ ಭಾಗವಾಗಿ ಫಲಾನುಭವಿಗಳಿಗೆ ₹3 ಲಕ್ಷ ಸಮ್ ಇನ್ಶೂರ್ಡ್ ಲಭ್ಯವಿದೆ. ಟ್ರಸ್ಟ್ ಆಧಾರಿತ ಆಸ್ಪತ್ರೆಗಳು, ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿದಂತೆ ವಿವಿಧ ವೈದ್ಯಕೀಯ ಸೌಲಭ್ಯಗಳಲ್ಲಿ ನೀವು ಚಿಕಿತ್ಸೆ ಪಡೆಯಬಹುದು.
ಕಾರ್ಮಿಕರು ಮತ್ತು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಸಾಮಾನ್ಯವಾಗಿ ಯಾವುದೇ ಹೆಲ್ತ್ ಇನ್ಶೂರೆನ್ಸ್ ರಕ್ಷಣೆಯನ್ನು ಹೊಂದಿರುವುದಿಲ್ಲ. ಆದಾಗ್ಯೂ, ಇತರರಂತೆ ಇವರೂ ಸಹ ಅನಾರೋಗ್ಯ ಮತ್ತು ಅಪಘಾತಗಳಿಗೆ ಈಡಾಗುತ್ತಾರೆ. ಹೀಗಾಗಿ, ವೈದ್ಯಕೀಯ ರಕ್ಷಣೆಯ ಅಗತ್ಯವು ಇತರರಿಗೆ ಇರುವಂತೆಯೇ ಅವರಿಗೂ ಸ್ಪಷ್ಟವಾಗಿದೆ.
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಇಂತಹ ಪಾಲಿಸಿಗಳನ್ನು ಅಸಂಘಟಿತ ವಲಯದ ಕಾರ್ಮಿಕರಿಗೆ ಮತ್ತು ಅವರ ಕುಟುಂಬಗಳಿಗೆ (5 ಜನರವರೆಗೆ) ನೀಡುವ ಜವಾಬ್ದಾರಿಯನ್ನು ಹೊಂದಿದೆ.
ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಿ ನೌಕರರು ಈ ನಿರ್ದಿಷ್ಟ ಮೆಡಿಕಲ್ ಇನ್ಶೂರೆನ್ಸ್ ಯೋಜನೆಯಿಂದ ಪ್ರಯೋಜನ ಪಡೆಯಬಹುದು. ಇದನ್ನು 2008 ರಲ್ಲಿ ಪರಿಚಯಿಸಲಾಯಿತು ಮತ್ತು ಉದ್ಯೋಗಿ ಹಾಗೂ ಅವರ ಕುಟುಂಬ ಸದಸ್ಯರಿಗೆ ₹1 ಲಕ್ಷಗಳ ಸಮ್ ಇನ್ಶೂರ್ಡ್ ಅನ್ನು ನೀಡುತ್ತದೆ. ಈ ಯೋಜನೆಯು ಕೆಲವು ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆಯ ವೆಚ್ಚಗಳು, ಹಾಗೆಯೇ ಓ.ಪಿ.ಡಿ ಚಿಕಿತ್ಸೆಗಳನ್ನು ಬೆಂಬಲಿಸುತ್ತದೆ.
ನೆನಪಿಡಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ, ಪ್ರಸ್ತುತ ಉದ್ಯೋಗಿಗಳ ಹೊರತಾಗಿ, ಈ ಯೋಜನೆಯು ಪಿಂಚಣಿದಾರರಿಗೂ ಇದೇ ರೀತಿಯ ನಿಬಂಧನೆಗಳನ್ನು ಹೊಂದಿದೆ.
ಪಶ್ಚಿಮ ಬಂಗಾಳದ ಆರೋಗ್ಯ ಯೋಜನೆಯ ಬಗ್ಗೆ ಇನ್ನಷ್ಟು ತಿಳಿಯಿರಿ
ಇದು ಭಾರತ ಸರ್ಕಾರದ ಬೆಂಬಲದೊಂದಿಗೆ ಅತ್ಯಂತ ಕೈಗೆಟುಕುವ ಸರ್ಕಾರಿ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳಲ್ಲಿ ಒಂದಾಗಿದೆ. 5 ರಿಂದ 70 ವರ್ಷ ವಯಸ್ಸಿನವರು ಇಂತಹ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಅಲ್ಲದೆ, ಬಡತನ ರೇಖೆಗಿಂತ ಕೆಳಗಿನವರೆಂದು ವರ್ಗೀಕರಿಸಬಹುದಾದ ವ್ಯಕ್ತಿಗಳು, ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ ಇದರ ಪ್ರಯೋಜನಗಳನ್ನು ಪಡೆಯಬಹುದು.
ಆಸ್ಪತ್ರೆಗೆ ದಾಖಲಾಗುವಿಕೆ, ಆಕಸ್ಮಿಕ ಅಂಗವೈಕಲ್ಯ ಮತ್ತು ಹೆಚ್ಚಿನವುಗಳು ಈ ಪಾಲಿಸಿಯ ಅಡಿಯಲ್ಲಿ ಕವರ್ ಆಗುತ್ತವೆ. ಆದಾಗ್ಯೂ, ಪಾಲಿಸಿ ಪ್ರೀಮಿಯಂ ನಿಮ್ಮ ಕುಟುಂಬದ ಗಾತ್ರ ಮತ್ತು ಯೋಜನೆಯಲ್ಲಿ ಒಳಗೊಂಡಿರುವ ವ್ಯಕ್ತಿಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ.
ಸಾರ್ವತ್ರಿಕ ಹೆಲ್ತ್ ಇನ್ಶೂರೆನ್ಸ್ ಯೋಜನೆಯ ಬಗ್ಗೆ ಇನ್ನಷ್ಟು ತಿಳಿಯಿರಿ
ಕರ್ನಾಟಕದ ರೈತರು, ಸಹಕಾರಿ ಸಂಘಕ್ಕೆ ಸಂಬಂಧಿಸಿದವರು ಈ ಯೋಜನೆಯ ಆರ್ಥಿಕ ಪ್ರಯೋಜನಗಳನ್ನು ಪಡೆಯಬಹುದು.
ಈ ಜನರು ವಿವಿಧ ವೈದ್ಯಕೀಯ ಕ್ಷೇತ್ರಗಳಲ್ಲಿ 800 ಕ್ಕೂ ಹೆಚ್ಚು ಕಾರ್ಯವಿಧಾನಗಳ ವಿರುದ್ಧ ವೈದ್ಯಕೀಯ ರಕ್ಷಣೆಯನ್ನು ಪಡೆಯಬಹುದು.
ಆದಾಗ್ಯೂ, ಚಿಕಿತ್ಸೆಯ ಸಮಯದಲ್ಲಿ ಫಲಾನುಭವಿಗಳು ಅಗತ್ಯ ಹಣಕಾಸಿನ ನೆರವು ಪಡೆಯಲು ಮಾತ್ರವೇ, ನೆಟ್ವರ್ಕ್ ವೈದ್ಯಕೀಯ ಸೌಲಭ್ಯಗಳನ್ನು ಭೇಟಿ ಮಾಡಬೇಕಾಗುತ್ತದೆ.
ಯಶಸ್ವಿನಿ ಹೆಲ್ತ್ ಇನ್ಶೂರೆನ್ಸ್ ಯೋಜನೆಯ ಬಗ್ಗೆ ಇನ್ನಷ್ಟು ತಿಳಿಯಿರಿ
ತೆಲಂಗಾಣ ರಾಜ್ಯ ಸರ್ಕಾರವು ತನ್ನ ಉದ್ಯೋಗಿಗಳಿಗೆ ಮತ್ತು ಪತ್ರಕರ್ತರಿಗೆ ಕಾಂಪ್ರೆಹೆನ್ಸಿವ್ ವೈದ್ಯಕೀಯ ರಕ್ಷಣೆಯನ್ನು ನೀಡುತ್ತದೆ. ಅಸ್ತಿತ್ವದಲ್ಲಿರುವ ಉದ್ಯೋಗಿಗಳ ಜೊತೆಗೆ, ಈ ಪಾಲಿಸಿಯು ನಿವೃತ್ತ ಅಥವಾ ಮಾಜಿ ಉದ್ಯೋಗಿಗಳನ್ನು ಸಹ ಕವರ್ ಮಾಡುತ್ತದೆ.
ಕ್ಯಾಶ್ ಲೆಸ್ ಚಿಕಿತ್ಸೆಯು ಈ ಯೋಜನೆಯ ಪ್ರಾಥಮಿಕ ಪ್ರಯೋಜನವಾಗಿದೆ. ಇದು ಪಾಲಿಸಿಹೋಲ್ಡರ್ ಗೆ ಆರ್ಥಿಕ ನ್ಯೂನತೆಗಳನ್ನು ಎದುರಿಸದೆ ಚಿಕಿತ್ಸೆ ಪಡೆಯಲು ಅನುವು ಮಾಡಿಕೊಡುತ್ತದೆ.
ಸರ್ಕಾರಿ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳು ಅನುಕೂಲಕರವಾಗಿವೆ. ಏಕೆಂದರೆ ಅವು ಸಾಮಾನ್ಯ ಯೋಜನೆಗಳಿಗೆ ಹೋಲಿಸಿದರೆ ಅತ್ಯಲ್ಪ ವೆಚ್ಚದಲ್ಲಿ ಲಭ್ಯವಿರುತ್ತವೆ.
ಮೇಲೆ ಪಟ್ಟಿ ಮಾಡಲಾದ ಆಯ್ಕೆಗಳು ಜನರಿಗೆ ಲಭ್ಯವಿರುವ ಕೆಲವು ಜನಪ್ರಿಯ ಸರ್ಕಾರಿ ಬೆಂಬಲಿತ ವೈದ್ಯಕೀಯ ಕವರೇಜ್ ಸೌಲಭ್ಯಗಳಾಗಿವೆ, ಇಲ್ಲದಿದ್ದರೆ ಜನಸಾಮಾನ್ಯರು ಇವುಗಳನ್ನು ಪಡೆಯಲು ಸಾಧ್ಯವಿಲ್ಲ.