ಒಂದು ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ಖರೀದಿಸುವ ಸಂದರ್ಭದಲ್ಲಿ ನೀವು ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಮತ್ತು ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ನಡುವೆ ಆಯ್ಕೆಯನ್ನು ಮಾಡಬೇಕಾಗುತ್ತದೆ.
ಈ ಎರಡರ ನಡುವೆ ಇರುವ ಪ್ರಮುಖ ವ್ಯತ್ಯಾಸಗಳನ್ನು ಈ ರೀತಿ ಪಟ್ಟಿ ಮಾಡಬಹುದು: ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್, ಕುಟುಂಬದ ಎಲ್ಲ ಸದಸ್ಯರೂ ಒಂದೇ ಪ್ಲಾನ್ ಅಡಿಯಲ್ಲಿ ಇನ್ಶೂರೆನ್ಸ್ ರಕ್ಷಣೆಯನ್ನು ಪಡೆಯುತ್ತಾರೆ; ಇದರರ್ಥ ಪ್ರೀಮಿಯಂ ಮತ್ತು ಒಟ್ಟು ಸಮ್ ಇನ್ಶೂರ್ಡ್ ಅನ್ನು ಕುಟುಂಬದ ಎಲ್ಲ ಸದಸ್ಯರು ಹಂಚಿಕೊಳ್ಳುತ್ತಾರೆ; ಆದರೆ ಇಂಡಿವಿಜುವಲ್ ಹೆಲ್ತ್ ವಿಮಾ ಯೋಜನೆ ಒಬ್ಬ ವ್ಯಕ್ತಿಗೆ ಸಮರ್ಪಿತವಾಗಿದೆ, ಇದರಲ್ಲಿ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಮತ್ತು ಸಮ್ ಇನ್ಶೂರ್ಡ್ ಒಬ್ಬ ವ್ಯಕ್ತಿಗೆ ಮೀಸಲಾಗಿರುತ್ತದೆ.
"ಹೆಲ್ತ್ ಈಸ್ ವೆಲ್ತ್" ಎಂದು ಹೇಳುವುದನ್ನು ನಾವು ಆಗಾಗ ಕೇಳಿರುತ್ತೇವೆ. ಬಹುಶಃ ಚಿಕ್ಕವರಾಗಿದ್ದಾಗ ನಾವು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಸಮಯ ಕಳೆದಂತೆ, ನಮಗೆ ವಯಸ್ಸಾದಂತೆ ಮತ್ತು ಕಳೆದು ಹೋಗುತ್ತಿರುವ ಪ್ರತಿಯೊಂದು ವರ್ಷದಲ್ಲೂ ಇಡೀ ಜಗತ್ತು ನಮಗಿಂತ ಮುಂದೆ ಸಾಗುತ್ತಿರುವಾಗ ಈ ಮಾತಿನ ಸತ್ಯ ಮತ್ತು ಮಹತ್ವವು ನಮ್ಮ ಅರಿವಿಗೆ ಬರುತ್ತದೆ.
ಅಷ್ಟಲ್ಲದೆ, ಹೆಲ್ತ್ ಗೆ ಸಂಬಂಧಿಸಿದ ವೆಚ್ಚಗಳೂ ಹೆಚ್ಚಾಗುತ್ತಲೇ ಇವೆ. ನಮ್ಮ ಹೆಲ್ತ್ ಅನ್ನು ಕಾಪಾಡಿಕೊಳ್ಳಲು ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗಳ ಹಲವು ಆಯ್ಕೆಗಳು ನಮ್ಮ ಮುಂದಿರುವುದೂ ಬಹುಶಃ ಒಂದು ಕಾರಣವಾಗಿದೆ; ಇದು ನಮ್ಮ ಹೆಲ್ತ್ ಮತ್ತು ಯೋಗಕ್ಷೇಮವನ್ನು ಭದ್ರಪಡಿಸಿಕೊಳ್ಳಲು ಹಾಗೂ ಆರ್ಥಿಕವಾಗಿ ಸುರಕ್ಷಿತವಾಗಿರಲು ನಮಗೆ ಅವಕಾಶ ನೀಡುತ್ತದೆ.
ಹೆಲ್ತ್ ಇನ್ಶೂರೆನ್ಸ್ ಅನೇಕ ಆಯ್ಕೆಗಳು ಇಂದು ನಮ್ಮ ಮುಂದೆ ಇರುವ ಕಾರಣ, ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಸವಾಲಿನ ಕೆಲಸವಾಗಿದೆ. ಸರಿಯಾದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ಆಯ್ಕೆಮಾಡುವ ಸಂದರ್ಭದಲ್ಲಿ ಜನರಲ್ಲಿ ಒಂದು ಅನುಮಾನ ಸಾಮಾನ್ಯವಾಗಿ ಇರುವುದನ್ನು ನಾವು ಗಮನಿಸಿದ್ದೇವೆ: ಅದೆಂದರೆ, ತಮಗೆ ಅತ್ಯಂತ ಸೂಕ್ತವಾದ ರೀತಿಯ ಪ್ಲಾನ್ ಅನ್ನು ಆರಿಸುವುದು.
ಸ್ಥೂಲವಾಗಿ ಹೇಳುವುದಾದರೆ, ಹೆಲ್ತ್ ಇನ್ಶೂರೆನ್ಸ್ ವಿಷಯಕ್ಕೆ ಬಂದಾಗ, ಆಯ್ದುಕೊಳ್ಳಲು ನಿಮ್ಮ ಮುಂದೆ ಎರಡು ಬಗೆಯ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗಳು ಲಭ್ಯವಿವೆ: ಅಂದರೆ, ಒಂದು ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಮತ್ತು ಇನ್ನೊಂದು ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್. ಇನ್ಶೂರೆನ್ಸ್ ವಿಚಾರಕ್ಕೆ ಬಂದಾಗ ಪಾರದರ್ಶಕತೆಯ ಮೇಲೆ ನಾವು ನಂಬಿಕೆ ಇರಿಸುತ್ತೇವೆ.
ಎಲ್ಲಕ್ಕಿಂತ ಹೆಚ್ಚಾಗಿ, ಇದು ನಿರ್ಣಾಯಕ ಆರ್ಥಿಕ ನಿರ್ಧಾರವಾಗಿರುವುದರಿಂದ, ಸರಿಯಾದ ಆಯ್ಕೆಯನ್ನು ಮಾಡಿಕೊಳ್ಳಲು ನಿಮಗೆ ನೆರವಾಗುವ ಉದ್ದೇಶ ನಮ್ಮದು. ಆದ್ದರಿಂದ, ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಮತ್ತು ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ನೀವು ತಿಳಿದುಕೊಳ್ಳಬೇಕಾದ ಎಲ್ಲ ಸಂಗತಿಗಳನ್ನು ನಾವು ಇಲ್ಲಿ ನೀಡಿದ್ದೇವೆ.
ಹೋಲಿಕೆಯ ಅಂಶಗಳು |
ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ |
ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ |
ವ್ಯಾಖ್ಯಾನ |
ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ಪ್ರತಿ ಯೋಜನೆಯಲ್ಲಿ ಒಬ್ಬ ವ್ಯಕ್ತಿಯನ್ನು ಮಾತ್ರ ಒಳಗೊಳ್ಳಬಹುದಾದ ರೀತಿಯ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಆಗಿದೆ. ಇದರರ್ಥ, ಹೆಲ್ತ್ ಇನ್ಸೂರೆನ್ಸ್ ಪ್ರೀಮಿಯಂ ಮತ್ತು ಸಮ್ ಇನ್ಶೂರ್ಡ್ ಒಬ್ಬ ವ್ಯಕ್ತಿಗೆ ಮಾತ್ರ ಮೀಸಲಾಗಿರುತ್ತದೆ ಮತ್ತು ಅದನ್ನು ಹಂಚಲು ಸಾಧ್ಯವಿಲ್ಲ. |
ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಎಂದರೆ, ನೀವು ಮತ್ತು ನಿಮ್ಮ ಕುಟುಂಬದ ಸದಸ್ಯರು ಒಂದೇ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ಹಂಚಿಕೊಳ್ಳುವುದಾಗಿದೆ. ಇದರರ್ಥ, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಮತ್ತು ಸಮ್ ಇನ್ಶೂರ್ಡ್ ಅನ್ನು ಪ್ಲಾನ್ ನಲ್ಲಿ ಒಳಗೊಂಡಿರುವ ಎಲ್ಲ ಸದಸ್ಯರ ನಡುವೆ ಹಂಚಲಾಗುತ್ತದೆ. |
ಕವರೇಜ್ |
ಈ ಯೋಜನೆಯಲ್ಲಿ ಇನ್ಶೂರೆನ್ಸ್ ಮಾಡಲಾದ ಒಬ್ಬ ವ್ಯಕ್ತಿಗಷ್ಟೇ ಈ ಯೋಜನೆಯು ರಕ್ಷಣೆಯನ್ನು ನೀಡುತ್ತದೆ. ಉದಾಹರಣೆಗೆ, ನೀವು 10 ಲಕ್ಷ ರೂ. ಮೊತ್ತದ ಎಸ್ಐ ಪ್ಲಾನ್ ಅನ್ನು ತೆಗೆದುಕೊಂಡರೆ, ಪಾಲಿಸಿಯ ಪೂರ್ಣ ಅವಧಿಯಲ್ಲಿ 10 ಲಕ್ಷ ರೂ.ವರೆಗಿನ ಪ್ರಯೋಜನವನ್ನು ಪಡೆಯಲು ನಿಮಗೊಬ್ಬರಿಗೆ ಮಾತ್ರ ಅವಕಾಶವಿರುತ್ತದೆ. |
ಇದು ಈ ಯೋಜನೆಯಲ್ಲಿ ಇನ್ಶೂರೆನ್ಸ್ ಗೆ ಒಳಪಡಿಸಲಾದ ಕುಟುಂಬದ ಎಲ್ಲಾ ಸದಸ್ಯರಿಗೂ ರಕ್ಷಣೆಯನ್ನು ಒದಗಿಸುತ್ತದೆ. ಉದಾಹರಣೆಗೆ, ನಿಮ್ಮ ಯೋಜನೆ ಎಸ್ಐ ರೂ. 10 ಲಕ್ಷ ಇದ್ದರೆ, ಪಾಲಿಸಿಯ ಅವಧಿಯಲ್ಲಿ ಈ ಮೊತ್ತವನ್ನು ಇಡೀ ಕುಟುಂಬವು ಹಂಚಿಕೊಳ್ಳಬೇಕಾಗುತ್ತದೆ. |
ಅನುಕೂಲಗಳು |
ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ನ ದೊಡ್ಡ ಪ್ರಯೋಜನವೆಂದರೆ ಪ್ರತಿಯೊಬ್ಬರೂ ಅವರದೇ ಸ್ವಂತ ಸಮ್ ಇನ್ಸೂರ್ಡ್ ಹೊಂದಿರುವುದರಿಂದ ಕವರೇಜ್ ಹೆಚ್ಚು ತೀವ್ರವಾಗಿರುತ್ತದೆ. ಆದರೆ ಫ್ಲಾಮಿಲಿ ಫ್ಲೋಟರ್ನಲ್ಲಿ ಸಮ್ ಇನ್ಶೂರ್ಡ್ ಪ್ಲಾನ್ನಲ್ಲಿ ಇನ್ಶೂರ್ಡ್ ಆಗಿರುವ ಎಲ್ಲರಿಗೂ ಹಂಚಲ್ಪಡುತ್ತದೆ. ವಿಶೇಷವಾಗಿ, ವಯೋವೃದ್ಧರಾಗಿರುವ ಹಿರಿಯ ಪೋಷಕರ ವಿಚಾರದಲ್ಲಿ ಇದು ಅತ್ಯಂತ ಸೂಕ್ತವಾಗಿದೆ. |
ಫ್ಯಾಮಿಲಿ ಫ್ಲೋಟರ್ ಯೋಜನೆಯ ಅತಿದೊಡ್ಡ ಪ್ರಯೋಜನವೆಂದರೆ, ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಮಿತವ್ಯಯಕಾರಿಯಾಗಿದೆ, ಏಕೆಂದರೆ, ಇದರಲ್ಲಿ ಪ್ರೀಮಿಯಂ ಅನ್ನು ಕುಟುಂಬದ ಎಲ್ಲ ಸದಸ್ಯರಿಗೂ ಒಟ್ಟಿಗೆ ಪಾವತಿಸಲಾಗುತ್ತದೆ. |
ಅನನುಕೂಲತೆಗಳು |
ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ಏಕೈಕ ಅನನುಕೂಲವೆಂದರೆ, ಒಂದು ಪಾಲಿಸಿಯ ವರ್ಷದಲ್ಲಿ ಒಬ್ಬರಿಗೆ ಸಾಕಾಗುವಷ್ಟು ಇನ್ಶೂರೆನ್ಸ್ ರಕ್ಷಣೆ ಮಾತ್ರವೇ ಇರುತ್ತದೆ. ಹೆಚ್ಚುವರಿಯಾಗಿ, ಇನ್ಶೂರೆನ್ಸ್ ಜಾರಿಯಲ್ಲಿರುವ ವರ್ಷದಲ್ಲಿ ಅವರು ಕ್ಲೈಮ್ ಮಾಡದಿದ್ದರೆ, ಅವರು ನೋ ಕ್ಲೈಮ್ ಬೋನಸ್ ಪ್ರಯೋಜನವನ್ನು ಪಡೆಯಬಹುದು.😊 |
ಫ್ಯಾಮಿಲಿ ಫ್ಲೋಟರ್ ಯೋಜನೆಯ ಮುಖ್ಯ ಅನನುಕೂಲವೆಂದರೆ, ಇನ್ಶೂರೆನ್ಸ್ ಮಾಡಿದ ಮೊತ್ತವು ಕುಟುಂಬದ ಎಲ್ಲ ಸದಸ್ಯರಿಗೂ ಸಾಕಾಗುವುದಿಲ್ಲ. |
ಉದಾಹರಣೆ |
30ರ ಆಸುಪಾಸಿನ ವಯಸ್ಸಿನ ಉದ್ಯೋಗಸ್ಥ ಮಹಿಳೆಯು ತನಗೆ ಮತ್ತು ವಯಸ್ಸಾಗಿರುವ ತನ್ನ ತಂದೆಗೆ ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ತೆಗೆದುಕೊಳ್ಳಲು ನಿರ್ಧರಿಸುತ್ತಾರೆ. ಅವರು ಇಬ್ಬರಿಗೂ ತಲಾ 5 ಲಕ್ಷದ ವರೆಗಿನ ಎಸ್ಐ ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ಆಯ್ದುಕೊಳ್ಳುತ್ತಾರೆ. ಇದರ ಅರ್ಥ, ಅವರು ಮತ್ತು ಅವರ ತಂದೆ ಇಬ್ಬರೂ ತಮ್ಮ ಆರೋಗ್ಯ ಅಗತ್ಯಗಳಿಗಾಗಿ ವರ್ಷಪೂರ್ತಿ ತಲಾ 5 ಲಕ್ಷ ರೂಪಾಯಿಗಳ ಇನ್ಶೂರೆನ್ಸ್ ಹೊಂದಿರುತ್ತಾರೆ. |
ಇಬ್ಬರು ಮಕ್ಕಳಿರುವ ದಂಪತಿಯು ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ತೆಗೆದುಕೊಳ್ಳಲು ಆಯ್ಕೆ ಮಾಡುತ್ತಾರೆ; ಇದರ ಅಡಿಯಲ್ಲಿ ಸಮ್ ಇನ್ಶೂರ್ಡ್ ಅನ್ನು ಈ ನಾಲ್ವರು ಸದಸ್ಯರು ತಮ್ಮ ನಡುವೆ ಒಟ್ಟಾಗಿ ಹಂಚಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ, ಅವರು ರೂ. 5 ಲಕ್ಷ ಎಸ್ಐ ಪ್ಲಾನ್ ಅನ್ನು ತೆಗೆದುಕೊಂಡಿದ್ದರೆ, ಇಡೀ ವರ್ಷದಲ್ಲಿ ತಮ್ಮೆಲ್ಲ ಆರೋಗ್ಯ ಕ್ಲೈಮ್ ಗಳಿಗಾಗಿ ರೂ. 5 ಲಕ್ಷಗಳ ವರೆಗಿನ ಮೊತ್ತವನ್ನು ಮಾತ್ರವೇ ಅವರು ಬಳಸಬಹುದು. |
ಆದ್ಯತೆಯ ಆಯ್ಕೆ |
ದೊಡ್ಡ ಗಾತ್ರದ ಕುಟುಂಬಗಳಿಗೆ ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ಅನ್ನು ಹೆಚ್ಚು ಶಿಫಾರಸು ಮಾಡಲಾಗುತ್ತದೆ, ಇಲ್ಲದಿದ್ದರೆ, ವಯಸ್ಸಿನಲ್ಲಿ ಹಿರಿಯರಾಗಿರುವ ಪೋಷಕರಿರುವ ಕುಟುಂಬಕ್ಕೆ ಫ್ಯಾಮಿಲಿ ಫ್ಲೋಟರ್ ಯೋಜನೆ ಪರ್ಯಾಪ್ತವಾಗುವುದಿಲ್ಲ. |
ಯುವ ದಂಪತಿ ಅಥವಾ ಸಣ್ಣ ಮತ್ತು ನ್ಯೂಕ್ಲಿಯರ್ ಕುಟುಂಬಗಳಿಗೆ ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಅತ್ಯಂತ ಸೂಕ್ತವಾಗಿರುತ್ತದೆ. |
ಸಲಹೆಗಳು ಮತ್ತು ಶಿಫಾರಸುಗಳು |
ನೀವು ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ಆಯ್ದುಕೊಳ್ಳುತ್ತಿದ್ದರೆ, ಪ್ರತಿ ಸದಸ್ಯರಿಗೂ ಸಂಬಂಧಿಸಿದ ಆಡ್-ಆನ್ ಸೌಲಭ್ಯಗಳನ್ನೂ ಆರಿಸಿಕೊಳ್ಳಲು ಮರೆಯಬೇಡಿ. ಉದಾಹರಣೆಗೆ, ನಿಮ್ಮ ಪೋಷಕರಿಗೆ ನೀವು ಇಂಡಿವಿಜುವಲ್ ಯೋಜನೆಯನ್ನು ತೆಗೆದುಕೊಳ್ಳುತ್ತಿದ್ದರೆ, ನಿಮ್ಮ ಯೋಜನೆಯಲ್ಲಿ ಆಯುಷ್ (AYUSH) ಆಡ್-ಆನ್ ಅನ್ನು ಸೇರಿಸಲು ಶಿಫಾರಸು ಮಾಡಲಾಗುತ್ತದೆ. |
ನೀವು ಫ್ಯಾಮಿಲಿ ಫ್ಲೋಟರ್ ಪ್ಲಾನ್ ಅನ್ನು ಆಯ್ಕೆ ಮಾಡುತ್ತಿದ್ದರೆ, ಹೆಚ್ಚಿನ ಸಮ್ ಇನ್ಶೂರ್ಡ್ ತೆಗೆದುಕೊಳ್ಳಿ. ಏಕೆಂದರೆ, ನಿಮ್ಮ ಸಮ್ ಇನ್ಶೂರ್ಡ್ ಕುಟುಂಬದ ಎಲ್ಲ ಸದಸ್ಯರಿಗೂ ಸಾಕಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಿರುತ್ತದೆ. |
ಎರಡರಲ್ಲಿ ಒಂದನ್ನು ಆಯ್ಕೆಮಾಡುವಾಗ, ಪರಿಗಣಿಸಬೇಕಾದ ವಿಷಯಗಳಲ್ಲಿ ಪ್ರೀಮಿಯಂ ಮಾತ್ರವೇ ಇರುವುದಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ, ಫ್ಯಾಮಿಲಿ ಫ್ಲೋಟರ್ ಇನ್ಶೂರೆನ್ಸ್ು ಒಂದು ಪಾಲಿಸಿಯಲ್ಲಿ ಇಡೀ ಕುಟುಂಬಕ್ಕೆ, ಹಾಗೆಯೇ ಇಂಡಿವಿಜುವಲ್ ಇನ್ಶೂರೆನ್ಸ್ು ಇನ್ಶೂರೆನ್ಸ್ ಮಾಡಿಸಿದ ವ್ಯಕ್ತಿಗಷ್ಟೇ ರಕ್ಷಣೆಯನ್ನು ನೀಡುತ್ತದೆ. ಕುಟುಂಬದ ಎಲ್ಲ ಸದಸ್ಯರನ್ನು ಒಳಗೊಳ್ಳುವುದು ಮತ್ತು ಎರಡೂ ಪಾಲಿಸಿಗಳ ಗರಿಷ್ಠ ಪ್ರಯೋಜನಗಳನ್ನು ಪಡೆಯುವುದು ಸರಿಯಾದ ವಿಧಾನವಾಗಿರುತ್ತದೆ. ಎರಡೂ ಯೋಜನೆಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ, ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಯಾವುದು ಉತ್ತಮವಾದುದು ಎಂಬುದನ್ನು ಗುರುತಿಸಿ.