ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
ಹೆಲ್ತ್ಕೇರ್ ನಮ್ಮ ಯೋಗಕ್ಷೇಮವನ್ನು ಕಾಪಾಡುವ ಮತ್ತು ಮೆಡಿಕಲ್ ಎಮರ್ಜೆನ್ಸಿಗಳಲ್ಲಿ ಆರ್ಥಿಕ ಭದ್ರತೆಯನ್ನು ನೀಡುವ ಅಮೂಲ್ಯವಾದ ಆಸ್ತಿಯಾಗಿದೆ. ನಾವು ನಮ್ಮ ಪ್ರೀತಿಪಾತ್ರರ ಆರೋಗ್ಯಕ್ಕೆ ಆದ್ಯತೆ ನೀಡುವುದರಿಂದ, ದೃಢವಾದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ಹೊಂದುವುದರ ಮಹತ್ವವನ್ನು ನಿರಾಕರಿಸುವುದು ಸಾಧ್ಯವಾಗುವುದಿಲ್ಲ.
ಈ ನಿಟ್ಟಿನಲ್ಲಿ, ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಕಾಂಪ್ರೆಹೆನ್ಸಿವ್ ಮತ್ತು ವೆಚ್ಚ-ಪರಿಣಾಮಕಾರಿ ಪರಿಹಾರವಾಗಿ ಹೊರಹೊಮ್ಮುತ್ತದೆ, ಒಂದೇ ಪಾಲಿಸಿಯಡಿಯಲ್ಲಿ ಇಡೀ ಕುಟುಂಬಕ್ಕೆ ಸಾಮೂಹಿಕ ಕವರೇಜ್ ಅನ್ನು ಒದಗಿಸುತ್ತದೆ.
ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಒಂದು ವಿಧದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಆಗಿದ್ದು, ಅದು ಒಂದೇ ಪಾಲಿಸಿಯ ಅಡಿಯಲ್ಲಿ ಕುಟುಂಬದ ಎಲ್ಲಾ ಸದಸ್ಯರಿಗೆ ಕವರೇಜ್ ನೀಡುತ್ತದೆ. ಪ್ರತಿ ಕುಟುಂಬದ ಸದಸ್ಯರಿಗೆ ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳ ಬದಲಿಗೆ, ಫ್ಯಾಮಿಲಿ ಫ್ಲೋಟರ್ ಪಾಲಿಸಿಯು ಒಟ್ಟು ಸಮ್ ಇನ್ಶೂರ್ಡ್ ಅನ್ನು ಸಂಯೋಜಿಸುತ್ತದೆ, ಅಗತ್ಯವಿದ್ದಾಗ ಯಾವುದೇ ಸದಸ್ಯರು ಇದನ್ನು ಬಳಸಿಕೊಳ್ಳಬಹುದಾಗಿದೆ.
ಒಂದೇ ಪ್ರೀಮಿಯಂನೊಂದಿಗೆ ನಿಮ್ಮ ಇಡೀ ಕುಟುಂಬದ ಆರೋಗ್ಯವನ್ನು ರಕ್ಷಿಸಲು ಈ ಯೋಜನೆಯು ಪರಿಣಾಮಕಾರಿ ಮತ್ತು ವೆಚ್ಚ-ಪರಿಣಾಮಕಾರಿ ಮಾರ್ಗವಾಗಿದೆ.
ನಮ್ಮ ಸರಳೀಕೃತ ವೀಡಿಯೊ ವಿವರಣೆಯನ್ನು ಪರಿಶೀಲಿಸಿ:
ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು, ಕುಟುಂಬದ ಉದಾಹರಣೆಯನ್ನು ನೋಡೋಣ:
ಅವರು ರೂ. 10 ಲಕ್ಷಗಳ ಸಮ್ ಇನ್ಶೂರ್ಡ್ ಇರುವ ಫ್ಯಾಮಿಲಿ ಫ್ಲೋಟರ್ ಪಾಲಿಸಿಯನ್ನು ಹೊಂದಿದ್ದಾರೆ.
ಒಂದು ದಿನ, ಆರ್ಯನ್ ಅನಾರೋಗ್ಯಕ್ಕೆ ಒಳಗಾಗುತ್ತಾನೆ ಮತ್ತು ಮೆಡಿಕಲ್ ಸ್ಥಿತಿಯಿಂದಾಗಿ ಹಾಸ್ಪಿಟಲೈಸೇಷನ್ ಮಾಡಬೇಕಾಗುತ್ತದೆ. ಆತನ ಚಿಕಿತ್ಸೆಯ ಸಮಯದ ಒಟ್ಟು ಮಡಿಕಲ್ ವೆಚ್ಚ ರೂ. 2 ಲಕ್ಷಗಳು.
ಕುಟುಂಬವು ರೂ. 10 ಲಕ್ಷಗಳ ಕವರೇಜ್ ಅನ್ನು ಹೊಂದಿದೆ. ಆರ್ಯನ್ ಮೆಡಿಕಲ್ ವೆಚ್ಚವು ರೂ. 2 ಲಕ್ಷಗಳಷ್ಟಿರುವುದರಿಂದ, ಇನ್ಶೂರರ್ ಈ ವೆಚ್ಚವನ್ನು ಶೇರ್ಡ್ ಸಮ್ ಇನ್ಶೂರ್ಡ್ ನಿಂದ ಕವರ್ ಮಾಡುತ್ತಾರೆ. ಆರ್ಯನ್ ಚಿಕಿತ್ಸೆಯ ನಂತರ, ರೂ. 8 ಲಕ್ಷಗಳ ಉಳಿದ ಸಮ್ ಇನ್ಶೂರ್ಡ್ ಅಗತ್ಯವಿದ್ದಲ್ಲಿ, ಶ್ರೀ ಆದಿತ್ಯ, ಶ್ರೀಮತಿ ರುಚಿ, ರಿಯಾ ಮತ್ತು ಮತ್ತೆ ಆರ್ಯನ್ ಸೇರಿದಂತೆ ಇತರ ಕುಟುಂಬದ ಸದಸ್ಯರ ಮೆಡಿಕಲ್ ಅಗತ್ಯಗಳಿಗಾಗಿ ಲಭ್ಯವಿದೆ.
ಕವರೇಜ್ ಹೊಂದಿಕೊಳ್ಳುವಂತೆ ಇರುತ್ತದೆ ಮತ್ತು ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿ ಇರುವುದಿಲ್ಲ.
ಕವರೇಜ್ ಗಳು
ಡಬಲ್ ವ್ಯಾಲೆಟ್ ಪ್ಲಾನ್
ಇನ್ಫಿನಿಟಿ ವ್ಯಾಲೆಟ್ ಪ್ಲಾನ್
ವರ್ಲ್ಡ್ ವೈಡ್ ಟ್ರೀಟ್ ಮೆಂಟ್ ಪ್ಲಾನ್
ಪ್ರಮುಖ ವೈಶಿಷ್ಟ್ಯಗಳು
ಅನಾರೋಗ್ಯ, ಅಪಘಾತ, ಕ್ರಿಟಿಕಲ್ ಇಲ್ ನೆಸ್ ಅಥವಾ ಕೋವಿಡ್ 19 ನಂತಹ ಸಾಂಕ್ರಾಮಿಕ ರೋಗಗಳು ಸೇರಿದಂತೆ ಎಲ್ಲಾ ಹಾಸ್ಪಿಟಲೈಸೇಷನ್ ವೆಚ್ಚಗಳನ್ನು ಇದು ಕವರ್ ಮಾಡುತ್ತದೆ. ನಿಮ್ಮ ಸಮ್ ಇನ್ಶೂರ್ಡ್ ಒಟ್ಟು ವೆಚ್ಚಗಳು ಇರುವವರೆಗೆ ಇದನ್ನು ಬಹು ಹಾಸ್ಪಿಟಲೈಸೇಷನ್ ಕವರ್ ಮಾಡಲು ಬಳಸಬಹುದು.
ಯಾವುದೇ ಆಕಸ್ಮಿಕವಲ್ಲದ ಅನಾರೋಗ್ಯಕ್ಕೆ ಸಂಬಂಧಿಸಿದ ಚಿಕಿತ್ಸೆಗಾಗಿ ಕವರೇಜ್ ಪಡೆಯಲು ನಿಮ್ಮ ಪಾಲಿಸಿಯ ಮೊದಲ ದಿನದಿಂದ ನೀವು ನಿರ್ದಿಷ್ಟ ಅವಧಿಯವರೆಗೆ ಕಾಯಬೇಕಾಗುತ್ತದೆ. ಇದು ಇನಿಷಿಯಲ್ ವೇಟಿಂಗ್ ಪೀರಿಯಡ್ ಆಗಿದೆ.
ಹೋಮ್ ಹೆಲ್ತ್ಕೇರ್, ಟೆಲಿ ಕನ್ಸಲ್ಟೇಷನ್ ಗಳು, ಯೋಗ ಮತ್ತು ಮನಸ್ವಾಸ್ಥ್ಯ ಇನ್ನೂ ಹಲವು ವಿಶೇಷವಾದ ವೆಲ್ನೆಸ್ ಪ್ರಯೋಜನಗಳು ನಮ್ಮ ಆ್ಯಪ್ ನಲ್ಲಿ ಲಭ್ಯವಿದೆ.
ನಿಮ್ಮ ಸಮ್ ಇನ್ಶೂರ್ಡ್ ಅಮೌಂಟ್ ನ 100% ರಷ್ಟಿರುವ ಬ್ಯಾಕ್-ಅಪ್ ಸಮ್ ಇನ್ಶೂರ್ಡ್ ಅನ್ನು ನಾವು ಒದಗಿಸುತ್ತೇವೆ. ಸಮ್ ಇನ್ಶೂರ್ಡ್ ಬ್ಯಾಕಪ್ ಹೇಗೆ ಕೆಲಸ ಮಾಡುತ್ತದೆ? ನಿಮ್ಮ ಪಾಲಿಸಿ ಸಮ್ ಇನ್ಶೂರ್ಡ್ ರೂ. 5 ಲಕ್ಷ ಆಗಿದ್ದರೆ. ನೀವು ರೂ.50,000 ಕ್ಲೈಮ್ ಮಾಡುತ್ತೀರಿ. ಡಿಜಿಟ್ ವ್ಯಾಲೆಟ್ ಪ್ರಯೋಜನವನ್ನು ಸ್ವಯಂಚಾಲಿತವಾಗಿ ಒದಗಿಸುತ್ತದೆ. ಆದ್ದರಿಂದ ನೀವು ಈಗ ವರ್ಷಕ್ಕೆ 4.5 ಲಕ್ಷ + 5 ಲಕ್ಷ ಸಮ್ ಇನ್ಶೂರ್ಡ್ ಅನ್ನು ಹೊಂದಿದ್ದೀರಿ. ಆದಾಗ್ಯೂ, ಒಂದೇ ಒಂದು ಕ್ಲೈಮ್, ಮೇಲಿನ ಪ್ರಕರಣದಲ್ಲಿ ಇರುವಂತೆ 5 ಲಕ್ಷದ ಮೂಲ ಸಮ್ ಇನ್ಶೂರ್ಡ್ ಗಿಂತ ಹೆಚ್ಚಿರಬಾರದು. .
ಪಾಲಿಸಿ ವರ್ಷದಲ್ಲಿ ಯಾವುದೇ ಕ್ಲೈಮ್ಗಳಿಲ್ಲವೇ? ಹಾಗಿದ್ದಲ್ಲಿ ನೀವು ಬೋನಸ್ ಅನ್ನು ಪಡೆಯುತ್ತೀರಿ - ಆರೋಗ್ಯವಾಗಿರಲು ಮತ್ತು ಉಚಿತವಾಗಿ ಕ್ಲೈಮ್ ಮಾಡಲು ನಿಮ್ಮ ಒಟ್ಟು ಸಮ್ ಇನ್ಶೂರ್ಡ್ ಜೊತೆ ಹೆಚ್ಚುವರಿ ಅಮೌಂಟ್!
ವಿವಿಧ ವರ್ಗದ ಕೊಠಡಿಗಳು ವಿಭಿನ್ನ ಬಾಡಿಗೆಗಳನ್ನು ಹೊಂದಿವೆ. ಹೋಟೆಲ್ ಕೊಠಡಿಗಳು ಹೇಗೆ ವಿಭಿನ್ನ ಶುಲ್ಕವನ್ನು ಹೊಂದಿರುತ್ತವೆಯೋ ಹಾಗೆ. ಡಿಜಿಟ್ ಪ್ಲಾನ್ಗಳು ಶುಲ್ಕ ನಿಮ್ಮ ಸಮ್ ಇನ್ಶೂರ್ಡ್ ಗಿಂತ ಕಡಿಮೆ ಇರುವವರೆಗೆ ರೂಮ್ ರೆಂಟ್ ಕ್ಯಾಪ್ ಇಲ್ಲದ ಪ್ರಯೋಜನವನ್ನು ನೀಡುತ್ತದೆ.
ಹೆಲ್ತ್ ಇನ್ಶೂರೆನ್ಸ್ 24 ಗಂಟೆಗಳನ್ನು ಮೀರಿದ ಹಾಸ್ಪಿಟಲೈಸೇಷನ್ ಗೆ ಮಾತ್ರ ಮೆಡಿಕಲ್ ವೆಚ್ಚವನ್ನು ಕವರ್ ಮಾಡುತ್ತದೆ. ಡೇ ಕೇರ್ ಪ್ರಕ್ರಿಯೆಗಳು ಆಸ್ಪತ್ರೆಯಲ್ಲಿ ಕೈಗೊಳ್ಳಲಾದ ಮೆಡಿಕಲ್ ಚಿಕಿತ್ಸೆಗಳನ್ನು ಉಲ್ಲೇಖಿಸುತ್ತವೆ, ಕಣ್ಣಿನ ಪೊರೆ, ಡಯಾಲಿಸಿಸ್ ಮುಂತಾದ ಚಿಕಿತ್ಸೆಗಳಿಗೆ ತಾಂತ್ರಿಕ ಪ್ರಗತಿಯಿಂದಾಗಿ 24 ಗಂಟೆಗಳಿಗಿಂತ ಕಡಿಮೆ ಸಮಯ ಸಾಕಾಗುತ್ತದೆ.
ವರ್ಲ್ಡ್ವೈಡ್ ಕವರೇಜ್ನೊಂದಿಗೆ ವಿಶ್ವ ದರ್ಜೆಯ ಚಿಕಿತ್ಸೆಯನ್ನು ಪಡೆಯಿರಿ! ಭಾರತದಲ್ಲಿ ನಿಮ್ಮ ಆರೋಗ್ಯ ಪರೀಕ್ಷೆಯ ಸಮಯದಲ್ಲಿ ನಿಮ್ಮ ವೈದ್ಯರು ಅನಾರೋಗ್ಯವನ್ನು ಗುರುತಿಸಿದರೆ ಮತ್ತು ನೀವು ವಿದೇಶದಲ್ಲಿ ಚಿಕಿತ್ಸೆ ಪಡೆಯಲು ಬಯಸಿದರೆ, ನಾವು ನಿಮಗಾಗಿ ಇದ್ದೇವೆ. ನೀವು ಕವರೇಜ್ ಪಡೆಯುತ್ತೀರಿ!
ನಿಮ್ಮ ಪ್ಲಾನ್ ನಲ್ಲಿ ನಮೂದಿಸಲಾದ ಅಮೌಂಟ್ ವರೆಗೆ ನಿಮ್ಮ ಆರೋಗ್ಯ ತಪಾಸಣೆ ವೆಚ್ಚಗಳನ್ನು ನಾವು ಪಾವತಿಸುತ್ತೇವೆ. ಪರೀಕ್ಷೆಯ ರೀತಿಯ ಮೇಲೆ ಯಾವುದೇ ನಿರ್ಬಂಧಗಳಿಲ್ಲ! ಅದು ಇಸಿಜಿ ಅಥವಾ ಥೈರಾಯ್ಡ್ ಪರೀಕ್ಷೆಯೂ ಆಗಿರಬಹುದು. ಕ್ಲೈಮ್ ಲಿಮಿಟ್ ಅನ್ನು ಚೆಕ್ ಮಾಡಲು ನಿಮ್ಮ ಪಾಲಿಸಿ ಶೆಡ್ಯೂಲ್ ಅನ್ನು ನೀವು ಅನುಸರಿಸಿರುವಿರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಎಮರ್ಜೆನ್ಸಿ ಜೀವ-ಹಾನಿಯ ಆರೋಗ್ಯ ಪರಿಸ್ಥಿತಿಗಳು ಎದುರಾಗಬಹುದು, ಈ ಸಂದರ್ಭದಲ್ಲಿ ಆಸ್ಪತ್ರೆಗೆ ಸಾಗಿಸಲು ತಕ್ಷಣದ ಸಾರಿಗೆ ಅಗತ್ಯವಿರುತ್ತದೆ. ನಾವು ಇದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ ಮತ್ತು ವಿಮಾನ ಅಥವಾ ಹೆಲಿಕಾಪ್ಟರ್ನಲ್ಲಿ ನಿಮ್ಮನ್ನು ಆಸ್ಪತ್ರೆಗೆ ಸಾಗಿಸಲು ತಗಲುವ ವೆಚ್ಚವನ್ನು ರೀಇಂಬರ್ಸ್ ಮಾಡುತ್ತೇವೆ.
ಕೋ-ಪೇಮೆಂಟ್ ಎಂದರೆ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ವೆಚ್ಚ ಹಂಚಿಕೆಯ ಅಗತ್ಯತೆ, ಇದು ಪಾಲಿಸಿಹೋಲ್ಡರ್/ಇನ್ಶೂರ್ಡ್ ರ ಸ್ವೀಕಾರಾರ್ಹ ಕ್ಲೈಮ್ಗಳ ನಿರ್ದಿಷ್ಟ ಪರ್ಸಂಟೇಜ್ ಅಮೌಂಟ್ ಅನ್ನು ಭರಿಸುತ್ತಾರೆ. ಇದು ಸಮ್ ಇನ್ಶೂರ್ಡ್ ಅನ್ನು ಕಡಿಮೆ ಮಾಡುವುದಿಲ್ಲ. ಈ ಪರ್ಸಂಟೇಜ್ ವಯಸ್ಸಿನಂತಹ ವಿವಿಧ ಅಂಶಗಳ ಮೇಲೆ ಅಥವಾ ಕೆಲವೊಮ್ಮೆ ನಿಮ್ಮ ಚಿಕಿತ್ಸಾ ನಗರವನ್ನು ಅವಲಂಬಿತವಾಗಿರುತ್ತದೆ, ಅದನ್ನು ವಲಯ ಆಧಾರಿತ ಕೋ ಪೇಮೆಂಟ್ ಎಂದು ಕರೆಯಲಾಗುತ್ತದೆ. ನಮ್ಮ ಪ್ಲಾನ್ ಗಳಲ್ಲಿ, ಯಾವುದೇ ವಯಸ್ಸು ಆಧಾರಿತ ಅಥವಾ ವಲಯ ಆಧಾರಿತ ಕೋ ಪೇಮೆಂಟ್ ಪಾವತಿ ಒಳಗೊಂಡಿಲ್ಲ.
ನೀವು ಹಾಸ್ಪಿಟಲೈಸ್ ಆದರೆ ರಸ್ತೆ ಆಂಬ್ಯುಲೆನ್ಸ್ನ ವೆಚ್ಚವನ್ನು ರೀಇಂಬರ್ಸ್ ಪಡೆಯಿರಿ.
ರೋಗನಿರ್ಣಯ, ಪರೀಕ್ಷೆಗಳು ಮತ್ತು ಚೇತರಿಕೆಯಂತಹ ಹಾಸ್ಪಿಟಲೈಸೇಷನ್ ಮೊದಲು ಮತ್ತು ನಂತರದ ಎಲ್ಲಾ ವೆಚ್ಚಗಳಿಗೆ ಈ ಕವರ್ ಆಗಿ ಬರುತ್ತದೆ.
ಇತರೆ ವೈಶಿಷ್ಟ್ಯಗಳು
ನೀವು ಈಗಾಗಲೇ ಬಳಲುತ್ತಿರುವ ಮತ್ತು ಪಾಲಿಸಿಯನ್ನು ತೆಗೆದುಕೊಳ್ಳುವ ಮೊದಲು ನಮಗೆ ತಿಳಿಸಿದ ಮತ್ತು ನಮ್ಮಿಂದ ಒಪ್ಪಿಗೆಗೆ ಒಳಪಟ್ಟಿರುವ ರೋಗ ಅಥವಾ ಸ್ಥಿತಿಯು ಉಲ್ಲೇಖಿಸಿರುವ ಪ್ಲಾನ್ ನ ಪ್ರಕಾರ ವೇಟಿಂಗ್ ಪೀರಿಯಡ್ ಅನ್ನು ಹೊಂದಿದೆ ಮತ್ತು ನಿಮ್ಮ ಪಾಲಿಸಿ ಶೆಡ್ಯೂಲ್ ನಲ್ಲಿ ನಮೂದಿಸಲಾಗಿದೆ.
ನಿರ್ದಿಷ್ಟ ಕಾಯಿಲೆಗೆ ನೀವು ಕ್ಲೈಮ್ ಮಾಡುವವರೆಗೆ ನೀವು ಕಾಯಬೇಕಾದ ಸಮಯ ಇದು. ಡಿಜಿಟ್ನಲ್ಲಿ ಇದು 2 ವರ್ಷಗಳು ಇರುತ್ತದೆ ಮತ್ತು ಪಾಲಿಸಿಯನ್ನು ಸಕ್ರಿಯಗೊಳಿಸಿದ ದಿನದಿಂದ ಪ್ರಾರಂಭವಾಗುತ್ತದೆ. ಎಕ್ಸ್ ಕ್ಲೂಷನ್ ಗಳ ಸಂಪೂರ್ಣ ಪಟ್ಟಿಗಾಗಿ, ನಿಮ್ಮ ಪಾಲಿಸಿ ವರ್ಡಿಂಗ್ಸ್ ನಲ್ಲಿನ ಸ್ಟಾಂಡರ್ಡ್ ಎಕ್ಸ್ ಕ್ಲೂಷನ್ ಗಳನ್ನು (ಇಎಕ್ಸ್ಸಿಎಲ್02) ಓದಿ.
ಪಾಲಿಸಿ ಅವಧಿಯಲ್ಲಿ ನೀವು ಆಕಸ್ಮಿಕ ದೈಹಿಕ ಗಾಯವನ್ನು ಅನುಭವಿಸಿದರೆ, ಅಪಘಾತದ ದಿನಾಂಕದಿಂದ ಹನ್ನೆರಡು (12) ತಿಂಗಳೊಳಗೆ ನಿಮ್ಮ ಮರಣಕ್ಕೆ ಏಕೈಕ ಮತ್ತು ನೇರ ಕಾರಣವಾದರೆ, ನಂತರ ನಾವು ಪಾಲಿಸಿ ಶೆಡ್ಯೂಲ್ ನಲ್ಲಿ ಉಲ್ಲೇಖಿಸಿರುವಂತೆ ಈ ಕವರ್ ಮತ್ತು ಪ್ಲಾನ್ ಪ್ರಕಾರ ಸಮ್ ಇನ್ಶೂರ್ಡ್ ನ 100% ಅನ್ನು ಪಾವತಿಸುತ್ತೇವೆ.
ನಿಮ್ಮ ಆರ್ಗನ್ ಡೋನರ್ ನಿಮ್ಮ ಪಾಲಿಸಿಯಲ್ಲಿ ಕವರ್ ಆಗುತ್ತಾರೆ. ಡೋನರ್ ನ ಪ್ರೀ ಆಂಡ್ ಪೋಸ್ಟ್ ಹಾಸ್ಪಿಟಲೈಸೇಷನ್ ವೆಚ್ಚಗಳನ್ನು ಸಹ ನಾವು ನೋಡಿಕೊಳ್ಳುತ್ತೇವೆ. ಅಂಗಾಂಗ ದಾನವು ಕರುಣೆಯ ಕಾರ್ಯಗಳಲ್ಲಿ ಒಂದಾಗಿದೆ ಮತ್ತು ನಾವು ಯಾಕೆ ಅದರ ಭಾಗವಾಗಬಾರದು ಎಂದು ನಾವು ಯೋಚಿಸಿ ಹೆಜ್ಜೆ ಇಟ್ಟಿದ್ದೇವೆ!
ಆಸ್ಪತ್ರೆಗಳಲ್ಲಿ ಹಾಸಿಗೆಗಳು ಸಿಗದೇ ಹೋಗಬಹುದು ಅಥವಾ ಆಸ್ಪತ್ರೆಯಲ್ಲಿ ದಾಖಲಾಗಲು ರೋಗಿಗೆ ಕಷ್ಟವಾಗಬಹುದು. ಭೀತಿಗೊಳಗಾಗಬೇಡಿ! ನೀವು ಮನೆಯಲ್ಲಿ ಚಿಕಿತ್ಸೆ ಪಡೆದರೂ ಮೆಡಿಕಲ್ ವೆಚ್ಚವನ್ನು ನಾವು ಕವರ್ ಮಾಡುತ್ತೇವೆ.
ಸ್ಥೂಲಕಾಯತೆಯು ಅನೇಕ ಆರೋಗ್ಯ ಸಮಸ್ಯೆಗಳಿಗೆ ಮೂಲ ಕಾರಣವಾಗಿರಬಹುದು. ನಾವು ಇದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ ಮತ್ತು ಮೆಡಿಕಲ್ ಕಾರಣಕ್ಕೆ ಅಗತ್ಯವಿದ್ದಾಗ ಮತ್ತು ನಿಮ್ಮ ವೈದ್ಯರು ಸಲಹೆ ನೀಡಿದಾಗ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಕವರೇಜ್ ನೀಡುತ್ತೇವೆ. ಆದಾಗ್ಯೂ, ಈ ಚಿಕಿತ್ಸೆಗಾಗಿ ಹಾಸ್ಪಿಟಲೈಸೇಷನ್ ಆಗುವುದು ಸೌಂದರ್ಯದ ಕಾರಣಗಳಿಗಾಗಿ ಆಗಿದ್ದರೆ ನಾವು ಕವರೇಜ್ ನೀಡುವುದಿಲ್ಲ.
ಆಘಾತದಿಂದಾಗಿ, ಒಬ್ಬ ಸದಸ್ಯರು ಮನೋವೈದ್ಯಕೀಯ ಚಿಕಿತ್ಸೆಗಾಗಿ ಹಾಸ್ಪಿಟಲೈಸ್ ಆಗಬೇಕಾದರೆ, ಈ ಪ್ರಯೋಜನದ ಅಡಿಯಲ್ಲಿ ರೂ. 1,00,000 ವರೆಗೆ ಕವರ್ ಮಾಡಲಾಗುತ್ತದೆ. ಆದಾಗ್ಯೂ, ಓಪಿಡಿ ಸಮಾಲೋಚನೆಗಳು ಇದರ ಅಡಿಯಲ್ಲಿ ಕವರ್ ಆಗುವುದಿಲ್ಲ. ಸೈಕಿಯಾಟ್ರಿಕ್ ಇಲ್ನೆಸ್ ಕವರ್ಗಾಗಿ ವೇಟಿಂಗ್ ಪೀರಿಯಡ್ ಸ್ಪೆಸಿಫಿಕ್ ಇಲ್ ನೆಸ್ ವೇಟಿಂಗ್ ಪೀರಿಯಡ್ ನಂತೆಯೇ ಇರುತ್ತದೆ.
ಹಾಸ್ಪಿಟಲೈಸೇಷನ್ ಗೆ ಮೊದಲು, ಆ ಸಮಯದಲ್ಲಿ ಮತ್ತು ನಂತರ, ವಾಕಿಂಗ್ ಏಡ್ಸ್, ಕ್ರೆಪ್ ಬ್ಯಾಂಡೇಜ್ಗಳು, ಬೆಲ್ಟ್ಗಳು ಇತ್ಯಾದಿಗಳಂತಹ ಇತರ ಅನೇಕ ಮೆಡಿಕಲ್ ಸಹಾಯಗಳು ಮತ್ತು ಖರ್ಚುಗಳು ನಿಮ್ಮ ಖರ್ಚನ್ನು ಬಯಸುತ್ತವೆ. ಈ ಕವರ್ ಪಾಲಿಸಿಯಿಂದ ಹೊರಗಿಡಲಾದ ಈ ವೆಚ್ಚಗಳನ್ನು ನೋಡಿಕೊಳ್ಳುತ್ತದೆ.
ಮೆಡಿಕಲ್ ವೆಚ್ಚ ಮಾತ್ರ ಹೆಚ್ಚುತ್ತಲೇ ಇದೆ. ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ನಿಮ್ಮ ಉಳಿತಾಯವನ್ನು ರಕ್ಷಿಸುತ್ತದೆ ಮತ್ತು ಒಂದೇ ಪ್ಲಾನ್ ಅಡಿಯಲ್ಲಿ ಎಲ್ಲಾ ಇನ್ಶೂರ್ಡ್ ಕುಟುಂಬ ಸದಸ್ಯರಿಗೆ ಮೆಡಿಕಲ್ ಬಿಲ್ಗಳನ್ನು ಪಾವತಿಸಲು ಸಹಾಯ ಮಾಡುತ್ತದೆ.
ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಸಾಮಾನ್ಯವಾಗಿ ಪ್ರತಿ ಕುಟುಂಬದ ಸದಸ್ಯರಿಗೆ ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳನ್ನು ಖರೀದಿಸುವುದಕ್ಕಿಂತ ಹೆಚ್ಚು ವೆಚ್ಚ-ಪರಿಣಾಮಕಾರಿಯಾಗಿದೆ. ಏಕೆಂದರೆ ಇದು ಇಡೀ ಕುಟುಂಬವನ್ನು ಒಂದು ಪ್ರೀಮಿಯಂ ಅಡಿಯಲ್ಲಿ ಕವರ್ ಮಾಡುತ್ತದೆ. ವಾಸ್ತವವಾಗಿ, ಪ್ರೀಮಿಯಂ ತೀರಾ ಕಡಿಮೆಯಿರುವುದರಿಂದ ಮತ್ತು ವೇಟಿಂಗ್ ಪೀರಿಯಡ್ ಬೇಗನೆ ಪೂರ್ಣಗೊಳ್ಳುವುದರಿಂದ ನಿಮ್ಮ ಚಿಕ್ಕ ಮಕ್ಕಳನ್ನು ಪ್ಲಾನ್ ನಲ್ಲಿ ಸಾಧ್ಯವಾದಷ್ಟು ಬೇಗ ಸೇರಿಸಲು ಸಲಹೆ ನೀಡಲಾಗುತ್ತದೆ.
ಇಡೀ ಕುಟುಂಬಕ್ಕೆ ಒಂದೇ ಪಾಲಿಸಿಯನ್ನು ನಿರ್ವಹಿಸುವುದು ಅನುಕೂಲಕರವಾಗಿದೆ ಮತ್ತು ಬಹು ಪಾಲಿಸಿಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಆಡಳಿತಾತ್ಮಕ ಹೊರೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಶೇರ್ ಡ್ ಕವರೇಜ್ ಪಾಲಿಸಿ ಸದಸ್ಯರು ಲಭ್ಯವಿರುವ ಕವರೇಜ್ ಅನ್ನು ಮತ್ತು ಅಗತ್ಯವಿದ್ದಾಗ ಬಳಸಿಕೊಳ್ಳಲು ಅನುಮತಿಸುತ್ತದೆ, ಹೀಗಾಗಿ ಬಳಕೆಯನ್ನು ಉತ್ತಮಗೊಳಿಸುತ್ತದೆ.
ಜೀವನಶೈಲಿ ಸಂಬಂಧಿತ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿವೆ. ಭಾರತದಲ್ಲಿ 61% ಕ್ಕಿಂತ ಹೆಚ್ಚು ಪ್ರಮುಖ ಆರೋಗ್ಯ ಪರಿಸ್ಥಿತಿಗಳು ಮತ್ತು ಮರಣಗಳು ಇಂದು ಜೀವನಶೈಲಿ ರೋಗಗಳಿಂದ ಉಂಟಾಗುತ್ತವೆ. ಕುಟುಂಬ ಹೆಲ್ತ್ ಇನ್ಶೂರೆನ್ಸ್ ನೀವು ಮತ್ತು ನಿಮ್ಮ ಕುಟುಂಬವು ರೋಗನಿರ್ಣಯದಿಂದ ಚಿಕಿತ್ಸೆಯವರೆಗೆ ಅವರು ರಕ್ಷಿಸಲ್ಪಟ್ಟಿರುವುದನ್ನು ಖಚಿತಪಡಿಸುತ್ತದೆ.
ಯಾವುದೇ ಮೆಡಿಕಲ್ ಎಮರ್ಜೆನ್ಸಿಯ ವಿರುದ್ಧ ಆರ್ಥಿಕ ರಕ್ಷಣೆಯೊಂದಿಗೆ, ನಿಮ್ಮ ಎಲ್ಲಾ ಕುಟುಂಬಕ್ಕೆ, ನೀವು ತೃಪ್ತಿ ಮತ್ತು ಮಾನಸಿಕ ಶಾಂತಿಯನ್ನು ಹೊಂದಿರುತ್ತೀರಿ.
ಇನ್ಕಮ್ ಟ್ಯಾಕ್ಸ್ ಆಕ್ಟ್ ಸೆಕ್ಷನ್ 80ಡಿ ಅಡಿಯಲ್ಲಿ, ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಿಗೆ ಪಾವತಿಸಿದ ಪ್ರೀಮಿಯಂಗಳು ಡಿಡಕ್ಷನ್ ಗಳಿಗೆ ಅರ್ಹವಾಗಿವೆ. ವ್ಯಕ್ತಿಗಳು ತಮಗೆ, ತಮ್ಮ ಸಂಗಾತಿಗೆ, ಮಕ್ಕಳಿಗೆ ಮತ್ತು ಪೋಷಕರಿಗೆ ನಿರ್ದಿಷ್ಟ ಲಿಮಿಟ್ ವರೆಗೆ ಹೆಲ್ತ್ ಇನ್ಶೂರೆನ್ಸ್ ಕಂತುಗಳ ಮೇಲಿನ ಡಿಡಕ್ಷನ್ ಗಳನ್ನು ಕ್ಲೈಮ್ ಮಾಡಬಹುದು.
ಕೋ-ಪೇಮೆಂಟ್ |
ಇಲ್ಲ |
ರೂಮ್ ರೆಂಟ್ ಕ್ಯಾಪಿಂಗ್ |
ಇಲ್ಲ |
ಕ್ಯಾಶ್ ಲೆಸ್ ಆಸ್ಪತ್ರೆಗಳು |
ಭಾರತದಾದ್ಯಂತ 16400+ ನೆಟ್ವರ್ಕ್ ಆಸ್ಪತ್ರೆಗಳು |
ವೆಲ್ ನೆಸ್ ಪ್ರಯೋಜನಗಳು |
10+ ವೆಲ್ನೆಸ್ ಪಾಲುದಾರರಿಂದ ಲಭ್ಯವಿದೆ |
ನಗರ ಆಧಾರಿತ ರಿಯಾಯಿತಿ |
10% ವರೆಗೆ ರಿಯಾಯಿತಿ |
ವರ್ಲ್ಡ್ ವೈಡ್ ಕವರೇಜ್ |
ಹೌದು* |
ಗುಡ್ ಹೆಲ್ತ್ ರಿಯಾಯಿತಿ |
5% ವರೆಗೆ ರಿಯಾಯಿತಿ |
ಕನ್ಸ್ಯೂಮೇಬಲ್ಸ್ ಕವರ್ |
ಆ್ಯಡ್-ಆನ್ ನಂತೆ ಲಭ್ಯವಿದೆ |
ಹೋಲಿಕೆಯ ಅಂಶ |
ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ |
ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ |
ಡೆಫಿನಿಷನ್ |
ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ಒಂದು ರೀತಿಯ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಆಗಿದ್ದು, ಪ್ರತಿ ಪ್ಲಾನ್ ನಲ್ಲಿ ಒಬ್ಬ ವ್ಯಕ್ತಿಯನ್ನು ಮಾತ್ರ ಕವರ್ ಮಾಡಬಹುದು. ಇದರರ್ಥ, ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಮತ್ತು ಸಮ್ ಇನ್ಶೂರ್ಡ್ ಎರಡನ್ನೂ ಒಬ್ಬ ವ್ಯಕ್ತಿಗೆ ಮಾತ್ರ ಮೀಸಲಿಡಲಾಗಿದೆ ಮತ್ತು ಹಂಚಿಕೊಳ್ಳಲಾಗುವುದಿಲ್ಲ. |
ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ನೀವು ಮತ್ತು ನಿಮ್ಮ ಕುಟುಂಬದ ಸದಸ್ಯರು ಒಂದು ಪ್ಲಾನ್ ಅನ್ನು ಹಂಚಿಕೊಳ್ಳುವ ಒಂದು ರೀತಿಯ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಆಗಿದೆ. ಇದರರ್ಥ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಮತ್ತು ಸಮ್ ಇನ್ಶೂರ್ಡ್ ಎರಡನ್ನೂ ಪ್ಲಾನ್ ನಲ್ಲಿನ ಎಲ್ಲಾ ಸದಸ್ಯರ ನಡುವೆ ಹಂಚಲಾಗುತ್ತದೆ. |
ಕವರೇಜ್ |
ಈ ಪ್ಲಾನ್ ನಲ್ಲಿ ಒಬ್ಬ ಇಂಡಿವಿಜುವಲ್ ಇನ್ಶೂರ್ಡ್ ಗೆ ಮಾತ್ರ ಈ ಪ್ಲಾನ್ ಕವರೇಜ್ ನೀಡುತ್ತದೆ. ಉದಾಹರಣೆಗೆ; ನೀವು ಎಸ್ಐ ರೂ 10 ಲಕ್ಷಗಳ ಪ್ಲಾನ್ ಅನ್ನು ತೆಗೆದುಕೊಂಡಿದ್ದರೆ, ಸಂಪೂರ್ಣ ಪಾಲಿಸಿ ಅವಧಿಗೆ ನೀವು ಮಾತ್ರ 10 ಲಕ್ಷಗಳವರೆಗಿನ ಪ್ರಯೋಜನವನ್ನು ಪಡೆಯುತ್ತೀರಿ. |
ಈ ಪ್ಲಾನ್ ಪ್ಲಾನ್ ನಲ್ಲಿರುವ ಎಲ್ಲಾ ಕುಟುಂಬ ಸದಸ್ಯರಿಗೆ ಕವರೇಜ್ ನೀಡುತ್ತದೆ. ಉದಾಹರಣೆಗೆ; ನಿಮ್ಮ ಪ್ಲಾನ್ ಎಸ್ಐ 10 ಲಕ್ಷ ರೂ ಆಗಿದ್ದರೆ, ಪಾಲಿಸಿಯ ಅವಧಿಗೆ ಇಡೀ ಕುಟುಂಬ ಈ ಅಮೌಂಟ್ ಅನ್ನು ಹಂಚಿಕೊಳ್ಳಬೇಕಾಗುತ್ತದೆ. |
ಅನುಕೂಲಗಳು |
ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ನ ದೊಡ್ಡ ಪ್ರಯೋಜನವೆಂದರೆ, ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಸಮ್ ಇನ್ಶೂರ್ಡ್ ಅನ್ನು ಹೊಂದಿರುವುದರಿಂದ ಕವರೇಜ್ ಹೆಚ್ಚು ವಿಸ್ತಾರವಾಗಿದೆ. ಫ್ಯಾಮಿಲಿ ಫ್ಲೋಟರ್ ನಂತೆ ಸಮ್ ಇನ್ಶೂರ್ಡ್ ಅನ್ನು ಪ್ಲಾನ್ ನಲ್ಲಿರುವ ಎಲ್ಲಾ ಇನ್ಶೂರ್ಡ್ ಗಳ ನಡುವೆ ಹಂಚಿಕೊಳ್ಳಲಾಗುವುದಿಲ್ಲ. ಇದು ವಿಶೇಷವಾಗಿ ಸೀನಿಯರ್ ಸಿಟಿಜನ್ ಗಳಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. |
ಫ್ಯಾಮಿಲಿ ಫ್ಲೋಟರ್ ಪ್ಲಾನ್ ನ ದೊಡ್ಡ ಪ್ರಯೋಜನವೆಂದರೆ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ವೆಚ್ಚ ಪರಿಣಾಮಕಾರಿಯಾಗಿದೆ, ಏಕೆಂದರೆ ಪ್ರೀಮಿಯಂ ಎಲ್ಲಾ ಕುಟುಂಬ ಸದಸ್ಯರಿಗೆ ವನ್ ಟೈಮ್ ಪ್ರೀಮಿಯಂ ಆಗಿದೆ. |
ಅನನುಕೂಲಗಳು |
ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ನ ಏಕೈಕ ಅನನುಕೂಲವೆಂದರೆ ಒಂದು ಪಾಲಿಸಿ ವರ್ಷದಲ್ಲಿ ಒಬ್ಬರು ಅವರಿಗೆ ಸಾಕಷ್ಟು ಕವರೇಜ್ ಅನ್ನು ಹೊಂದಿರುತ್ತಾರೆ. ಹೆಚ್ಚುವರಿಯಾಗಿ, ಅವರು ವರ್ಷದಲ್ಲಿ ಕ್ಲೈಮ್ ಮಾಡದಿದ್ದರೂ ಸಹ, ಅವರು ನೋ ಕ್ಲೈಮ್ ಬೋನಸ್ನಿಂದ ಪ್ರಯೋಜನ ಪಡೆಯಬಹುದು 😊 |
ಫ್ಯಾಮಿಲಿ ಫ್ಲೋಟರ್ ಪ್ಲಾನ್ನ ಒಂದು ಮುಖ್ಯ ಅನನುಕೂಲವೆಂದರೆ, ಸಮ್ ಇನ್ಶೂರ್ಡ್ ಎಲ್ಲಾ ಕುಟುಂಬ ಸದಸ್ಯರಿಗೆ ಸಾಕಾಗುವುದಿಲ್ಲ. |
ಉದಾಹರಣೆ |
30 ವರ್ಷ ವಯಸ್ಸಿನ ಕೆಲಸ ಮಾಡುವ ಮಹಿಳೆ ತನಗಾಗಿ ಮತ್ತು ತನ್ನ ಹಿರಿಯ ತಂದೆಗಾಗಿ ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ತೆಗೆದುಕೊಳ್ಳಲು ಆಯ್ಕೆ ಮಾಡಿಕೊಳ್ಳುತ್ತಾಳೆ. ಅವಳು ಪ್ರತಿ ಎಸ್ಐ 5 ಲಕ್ಷದವರೆಗಿನ ಇಂಡಿವಿಜುವಲ್ ಪ್ಲಾನ್ ಅನ್ನು ತೆಗೆದುಕೊಳ್ಳುತ್ತಾಳೆ. ಇದರರ್ಥ, ವರ್ಷವಿಡೀ ಅವರ ಆರೋಗ್ಯ ಅಗತ್ಯಗಳಿಗಾಗಿ ಅವಳು ಮತ್ತು ಅವಳ ತಂದೆ ಇಬ್ಬರೂ ತಲಾ 5 ಲಕ್ಷಗಳನ್ನು ಹೊಂದಿರುತ್ತಾರೆ. |
ಇಬ್ಬರು ಮಕ್ಕಳಿರುವ ದಂಪತಿ ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗೆ ಹೋಗಲು ಆಯ್ಕೆ ಮಾಡುತ್ತಾರೆ; ಇದರ ಅಡಿಯಲ್ಲಿ ಎಲ್ಲಾ ನಾಲ್ಕು ಸದಸ್ಯರು ಒಟ್ಟು ಸಮ್ ಇನ್ಶೂರ್ಡ್ ಅನ್ನು ತಮ್ಮ ನಡುವೆ ಹಂಚಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ; ಅವರು ಎಸ್ಐ 5 ಲಕ್ಷಗಳ ಪ್ಲಾನ್ ಅನ್ನು ತೆಗೆದುಕೊಂಡಿದ್ದರೆ, ಅವರು ವರ್ಷದಲ್ಲಿ ತಮ್ಮ ಎಲ್ಲಾ ಹೆಲ್ತ್ ಕ್ಲೈಮ್ ಗಳಿಗಾಗಿ 5 ಲಕ್ಷದವರೆಗೆ ಮಾತ್ರ ಬಳಸಬಹುದು. |
ಆದ್ಯತೆಯ ಆಯ್ಕೆ |
ದೊಡ್ಡ ಕುಟುಂಬಗಳಿಗೆ ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ಹೆಚ್ಚು ಶಿಫಾರಸು ಮಾಡಲಾಗುತ್ತದೆ ಅಥವಾ ಹಿರಿಯ ಪೋಷಕರನ್ನು ಹೊಂದಿರುವವರಿಗೆ ಫ್ಯಾಮಿಲಿ ಫ್ಲೋಟರ್ ಸಾಕಾಗುವುದಿಲ್ಲ. |
ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಯುವ ದಂಪತಿಗಳಿಗೆ ಅಥವಾ ಸಣ್ಣ ಮತ್ತು ವಿಭಕ್ತ ಕುಟುಂಬಗಳಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. |
ಸಲಹೆಗಳು ಮತ್ತು ಶಿಫಾರಸುಗಳು |
ನೀವು ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗೆ ಹೋಗುತ್ತಿದ್ದರೆ, ಪ್ರತಿ ಸದಸ್ಯರಿಗೂ ಸಂಬಂಧಿತ ಆ್ಯಡ್-ಆನ್ಗಳನ್ನು ನೀವು ಆರಿಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಉದಾಹರಣೆಗೆ; ನಿಮ್ಮ ಪೋಷಕರಿಗಾಗಿ ನೀವು ಇಂಡಿವಿಜುವಲ್ ಪ್ಲಾನ್ ಅನ್ನು ತೆಗೆದುಕೊಳ್ಳುತ್ತಿದ್ದರೆ ಆಯುಷ್ ಆ್ಯಡ್-ಆನ್ ನಿಮ್ಮ ಪ್ಲಾನ್ ನಲ್ಲಿ ಸೇರಿಸಲು ಶಿಫಾರಸು ಮಾಡಲಾದ ಆ್ಯಡ್-ಆನ್ ಆಗಿರುತ್ತದೆ. |
ನೀವು ಫ್ಯಾಮಿಲಿ ಫ್ಲೋಟರ್ ಪ್ಲಾನ್ ಅನ್ನು ಆಯ್ಕೆ ಮಾಡಲು ಹೋದರೆ, ಹೆಚ್ಚಿನ ಸಮ್ ಇನ್ಶೂರ್ಡ್ ಅನ್ನು ಆರಿಸಿಕೊಳ್ಳಿ ಏಕೆಂದರೆ ಎಲ್ಲಾ ಕುಟುಂಬ ಸದಸ್ಯರಿಗೆ ಒಟ್ಟು ಸಮ್ ಇನ್ಶೂರ್ಡ್ ಸಾಕಾಗುತ್ತದೆ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು. |
ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಒಂದು ಅಮೂಲ್ಯವಾದ ಹೂಡಿಕೆಯಾಗಿದ್ದು, ಅದು ನಿಮ್ಮ ಇಡೀ ಕುಟುಂಬಕ್ಕೆ ಒಂದೇ ಪಾಲಿಸಿಯಡಿಯಲ್ಲಿ ಕಾಂಪ್ರೆಹೆನ್ಸಿವ್ ಹೆಲ್ತ್ ಕವರೇಜ್ ಅನ್ನು ಒದಗಿಸುತ್ತದೆ. ಅದರ ವೆಚ್ಚ-ಪರಿಣಾಮಕಾರಿತ್ವ, ಅನುಕೂಲತೆ ಮತ್ತು ಶೇರ್ ಡ್ ಕವರೇಜ್ ಪ್ರಯೋಜನಗಳೊಂದಿಗೆ, ಇದು ಮೆಡಿಕಲ್ ಎಮರ್ಜೆನ್ಸಿ ಸಂದರ್ಭಗಳಲ್ಲಿ ಹಣಕಾಸಿನ ರಕ್ಷಣೆಯನ್ನು ಖಾತ್ರಿಗೊಳಿಸುತ್ತದೆ ಮತ್ತು ನಿಮಗೆ ಮನಃಶಾಂತಿಯನ್ನು ನೀಡುತ್ತದೆ. ವಿವೇಕಯುಕ್ತ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ, ನಿಮ್ಮ ಪ್ರೀತಿಪಾತ್ರರ ಯೋಗಕ್ಷೇಮವನ್ನು ನೀವು ಭದ್ರಪಡಿಸಬಹುದು ಮತ್ತು ಅವರಿಗೆ ಹೆಚ್ಚು ಅಗತ್ಯವಿರುವಾಗ ಅವರು ಸಾಧ್ಯವಾದಷ್ಟು ಉತ್ತಮ ಆರೋಗ್ಯವನ್ನು ಪಡೆಯುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.