{{UI_help.isMobileView ? ' To visit our TPAs network hospitals ' : 'For the list of network hospitals associated with our TPAs, '}} Click here
Search By
{{hospitalInputs.searchMode}}
{{hospitalInputs.searchMode.toLowerCase() === 'city' ? hospitalInputs.city : hospitalInputs.searchMode.toLowerCase() === 'state' ? hospitalInputs.state : hospitalInputs.searchMode.toLowerCase() === 'pincode' ? hospitalInputs.pincode : ''}}
Hospital
{{hospitalInputs.hospitalName ? hospitalInputs.hospitalName : '---' }}
- {{filter.name}}
To visit our TPAs network hospitals Click here
{{data.hospitalName}}
{{data.primaryAddress}}
To visit our TPAs network hospitals Click here
ಡಿಜಿಟ್ ನ ಕ್ಯಾಶ್ ಲೆಸ್ ನೆಟ್ ವರ್ಕ್ ಆಸ್ಪತ್ರೆಗಳು
ಕ್ಯಾಶ್ಲೆಸ್ ಅಥವಾ ನೆಟ್ವರ್ಕ್ ಆಸ್ಪತ್ರೆ ಎಂದರೇನು?
ಕ್ಯಾಶ್ಲೆಸ್ ಅಥವಾ ನೆಟ್ವರ್ಕ್ ಆಸ್ಪತ್ರೆಯು, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪೂರೈಕೆದಾರರ ನೆಟ್ವರ್ಕ್ನ ಭಾಗವಾಗಿರುವ ಆಸ್ಪತ್ರೆಯಾಗಿದೆ. ಇದರರ್ಥನೀವು ನಿಮ್ಮ ಚಿಕಿತ್ಸೆಗಾಗಿ ಈ ಆಸ್ಪತ್ರೆಗಳಲ್ಲಿ ಕ್ಲೈಮ್ ಮಾಡುವುದಾದರೆ, ಕ್ಯಾಶ್ಲೆಸ್ ಕ್ಲೈಮ್ ಆಯ್ಕೆಯನ್ನು ಆಯ್ಕೆ ಮಾಡಬಹುದು. ಅಂದರೆ ಯಾವುದೇ ಹಣವನ್ನು ಮುಂಚಿತವಾಗಿ ಪಾವತಿಸದೆ, ನಿಮ್ಮ ಚಿಕಿತ್ಸೆಯೊಂದಿಗೆ ಮುಂದುವರೆಯಿರಿ.
ನೀವು ನೆಟ್ವರ್ಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕ್ಯಾಶ್ಲೆಸ್ ಕ್ಲೈಮ್ಗಳನ್ನು ಆಯ್ಕೆ ಮಾಡಿಕೊಂಡಾಗ, ನಿಮ್ಮ ಬಿಲ್ಗಳನ್ನು ನೇರವಾಗಿ ನೆಟ್ವರ್ಕ್ ಆಸ್ಪತ್ರೆ ಮತ್ತು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಕಂಪನಿಯವರು ನೋಡಿಕೊಳ್ಳುತ್ತಾರೆ.
ಡಿಜಿಟ್ನಲ್ಲಿ, ನಾವು 16400+ ನೆಟ್ವರ್ಕ್ ಆಸ್ಪತ್ರೆಗಳ ನೆಟ್ವರ್ಕ್ ಅನ್ನು ಹೊಂದಿದ್ದೇವೆ. ಇಲ್ಲಿ ನೀವು ಕ್ಯಾಶ್ಲೆಸ್ ಚಿಕಿತ್ಸೆಗಳನ್ನು ಆಯ್ಕೆ ಮಾಡಬಹುದು.
ಆದ್ಯತೆಯಿಲ್ಲದ ಆಸ್ಪತ್ರೆಗಳ ಪಟ್ಟಿಯನ್ನು ಪ್ರವೇಶಿಸಲು ಇಲ್ಲಿ ಕ್ಲಿಕ್ ಮಾಡಿ
ಡಿಜಿಟ್ನ ನೆಟ್ವರ್ಕ್ ಆಸ್ಪತ್ರೆಗಳೊಂದಿಗೆ ಕ್ಯಾಶ್ಲೆಸ್ ಕ್ಲೈಮ್ ಮಾಡುವುದು ಹೇಗೆ?
ಹಂತ 1: ನೀವು ಚಿಕಿತ್ಸೆ ಪಡೆಯಲು ಬಯಸುವ ನೆಟ್ವರ್ಕ್ ಆಸ್ಪತ್ರೆಯನ್ನು ಆಯ್ಕೆಮಾಡಿ. ಮೇಲೆ ಸಂಪೂರ್ಣ ಡಿಜಿಟ್ ಹೆಲ್ತ್ ಇನ್ಶೂರೆನ್ಸ್ ನೆಟ್ವರ್ಕ್ ಆಸ್ಪತ್ರೆಯ ಪಟ್ಟಿಯನ್ನು ನೀವು ಕಾಣಬಹುದು.
ಹಂತ 2: ನೀವು ಯೋಜಿತ ಆಸ್ಪತ್ರೆಗೆ/ಚಿಕಿತ್ಸೆಗೆ ಹೋಗುವ ಸಂದರ್ಭದಲ್ಲಿ ಕನಿಷ್ಠ 72-ಗಂಟೆಗಳ ಮುಂಚಿತವಾಗಿ ಮತ್ತು ತುರ್ತು ಸಂದರ್ಭದಲ್ಲಿ 24-ಗಂಟೆಗಳ ಒಳಗಾಗಿ ನಿಮ್ಮ ಹೆಲ್ತ್ ಇನ್ಶೂರರ್ ಗೆ (ಅಂದರೆ ನಮಗೆ!) ತಿಳಿಸಿ.
ಹಂತ 3: ನಿಮ್ಮ ಇ-ಹೆಲ್ತ್ ಕಾರ್ಡ್ ಅನ್ನು ನೆಟ್ವರ್ಕ್ ಆಸ್ಪತ್ರೆಯ ಹೆಲ್ಪ್ಡೆಸ್ಕ್ನಲ್ಲಿ ತೋರಿಸಿ ಮತ್ತು ಕ್ಯಾಶ್ಲೆಸ್ ರಿಕ್ವೆಸ್ಟ್ ಫಾರ್ಮ್ ಅನ್ನು ಕೇಳಿ. ಒಮ್ಮೆ ನೀವು ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ ಮತ್ತು ಎಲ್ಲ ಮಾಹಿತಿಯೂ ಸರಿಯಾಗಿದ್ದರೆ, ನಿಮ್ಮ ಕ್ಯಾಶ್ಲೆಸ್ ಕ್ಲೈಮ್ ಅನ್ನು ಆಸ್ಪತ್ರೆಯಲ್ಲಿಯೇ ಪ್ರಕ್ರಿಯೆಗೊಳಿಸಲಾಗುತ್ತದೆ.
ಸಲಹೆ: ನೀವು ಆಯ್ಕೆಮಾಡಲಿರುವ ಚಿಕಿತ್ಸೆಯು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಕವರ್ ಆಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಯಾವಾಗಲೂ ಪರಿಶೀಲಿಸಿ. ಅಲ್ಲದೇ ಹಾಸ್ಪಿಟಲೈಸೇಷನ್ ಮತ್ತು ಕ್ಯಾಶ್ಲೆಸ್ ಕ್ಲೈಮ್ ಪ್ರಕ್ರಿಯೆಯ ಸಮಯದಲ್ಲಿ ಅವುಗಳಿಗೆ ತಗಲುವ ವೆಚ್ಚ ಎಷ್ಟು ಎಂದು ಪರಿಶೀಲಿಸಿ- ಕೊನೆಯ ಕ್ಷಣದಲ್ಲಿ ಯಾವುದೇ ಅಚ್ಚರಿಗಳು ಮತ್ತು ವಿಳಂಬಗಳು ಆಗದಿರಲಿ!
ಡಿಜಿಟ್ನ ನೆಟ್ವರ್ಕ್ ಆಸ್ಪತ್ರೆಗಳ ಮೂಲಕ ಕ್ಲೈಮ್ ಮಾಡುವ ಪ್ರಯೋಜನಗಳು
ನೆಟ್ವರ್ಕ್ ಆಸ್ಪತ್ರೆ ಹೇಗೆ ಕೆಲಸ ಮಾಡುತ್ತದೆ?
ನೆಟ್ವರ್ಕ್ ಆಸ್ಪತ್ರೆಗಳು ಸಾಮಾನ್ಯವಾಗಿ ನಿಮ್ಮ ಹೆಲ್ತ್ ಇನ್ಶೂರರ್ ರೊಂದಿಗೆ ಟೈ-ಅಪ್ ಹೊಂದಿದ್ದು, ಅದು ಪ್ರಮುಖವಾಗಿ ನಿಮಗೆ ಕ್ಯಾಶ್ಲೆಸ್ ಕ್ಲೈಮ್ಗಳನ್ನು ಆಯ್ಕೆ ಮಾಡುವ ಪ್ರಯೋಜನವನ್ನು ನೀಡುತ್ತದೆ.
ಇದು ಅಗತ್ಯವಿರುವ ಸಮಯದಲ್ಲಿ ಹೆಲ್ತ್ ಇನ್ಶೂರೆನ್ಸ್ ಅನ್ನು ತುಂಬಾ ಉಪಯುಕ್ತವಾಗಿಸುತ್ತದೆ. ಏಕೆಂದರೆ ನೀವು ಈಗಾಗಲೇ ಸಂಕಷ್ಟದಲ್ಲಿರುವುದರಿಂದ ಪಾವತಿಗಳ ಬಗ್ಗೆ ಮತ್ತಷ್ಟು ಚಿಂತಿಸಬೇಕಾಗಿಲ್ಲ.
ಕ್ಯಾಶ್ಲೆಸ್ ಕ್ಲೈಮ್ಗಳ ವಿಷಯದಲ್ಲಿ ನೆಟ್ವರ್ಕ್ ಆಸ್ಪತ್ರೆಗಳು ಪ್ರಾಥಮಿಕವಾಗಿ ಎರಡು ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತವೆ; ಯೋಜಿತ ಹಾಸ್ಪಿಟಲೈಸೇಷನ್ ಸಂದರ್ಭದಲ್ಲಿ ಮತ್ತು ಮೆಡಿಕಲ್ ತುರ್ತುಸ್ಥಿತಿಯ ಸಂದರ್ಭದಲ್ಲಿ.
a) ಯೋಜಿತ ಹಾಸ್ಪಿಟಲೈಸೇಷನ್
ನೀವು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಬೇಕು ಅಥವಾ ಡೇಕೇರ್ ಪ್ರಕ್ರಿಯೆಗೆ ಒಳಗಾಗಬೇಕು ಎಂದು ಹೇಳಿ ಮತ್ತು ಅದೇ ಕಾರಣಕ್ಕೆ ನೀವು ನಿರ್ದಿಷ್ಟ ದಿನಾಂಕದಂದು ನಿಮ್ಮ ಆಸ್ಪತ್ರೆಗೆ ದಾಖಲಾಗಿರುವಿರಿ.
ಈ ಸಂದರ್ಭದಲ್ಲಿ, ನಿಮ್ಮ ಹೆಲ್ತ್ ಇನ್ಶೂರರ್ ಗೆ ನೀವು ಕನಿಷ್ಟ 72-ಗಂಟೆಗಳ ಮುಂಚಿತವಾಗಿಯೇ ತಿಳಿಸಬೇಕು. ಇದರಿಂದ ಕ್ಲೈಮ್ ಪ್ರಕ್ರಿಯೆಯು ಸಮಯಕ್ಕೆ ಸರಿಯಾಗಿ ಪ್ರಾರಂಭವಾಗಬಹುದು ಮತ್ತು ಅಗತ್ಯವಿರುವ ಯಾವುದೇ ಅನುಮೋದನೆಗಳನ್ನು ನೀವು ಸಮಯಕ್ಕೆ ಸರಿಯಾಗಿ ಪಡೆಯಬಹುದು.
ಇದರ ನಂತರ, ನೀವು ಆಸ್ಪತ್ರೆಗೆ ದಾಖಲಾಗಬೇಕಾದಾಗ, ನೀವು ನಿಮ್ಮ ಇ-ಹೆಲ್ತ್ ಕಾರ್ಡ್ ಅನ್ನು ನೆಟ್ವರ್ಕ್ ಆಸ್ಪತ್ರೆಯ ಡೆಸ್ಕ್ನಲ್ಲಿ ತೋರಿಸಬೇಕು ಮತ್ತು ನಿಮ್ಮ ಕ್ಯಾಶ್ಲೆಸ್ ಕ್ಲೈಮ್ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಈಗ ನೀವು ಹೋಗುವುದು ಉತ್ತಮ.
ಯೋಜಿತ ಹಾಸ್ಪಿಟಲೈಸೇಷನ್ ಸಂದರ್ಭದಲ್ಲಿ, ನಿಮ್ಮ ಚಿಕಿತ್ಸೆಯ ಯಾವುದೇ ವಿಳಂಬವನ್ನು ತಪ್ಪಿಸಲು ಯಾವುದಾದರೂ ನಿಯಮಗಳಿದ್ದಲ್ಲಿ, ಅವುಗಳನ್ನು ಮೊದಲೇ ಅನುಸರಿಸುವುದು ಉತ್ತಮ.
b) ವೈದ್ಯಕೀಯ ತುರ್ತುಸ್ಥಿತಿಗಳು
ಕೆಲವೊಮ್ಮೆ, ದುರದೃಷ್ಟವಶಾತ್ ನಾವು ಕನಿಷ್ಟ ನಿರೀಕ್ಷಿಸಿದಾಗ - ವೈದ್ಯಕೀಯ ತುರ್ತುಸ್ಥಿತಿಗಳು ಉದ್ಭವಿಸುತ್ತವೆ! ಈ ಸಂದರ್ಭದಲ್ಲಿ, ಯೋಜಿತ ಹಾಸ್ಪಿಟಲೈಸೇಷನ್ುದು ಅಸಾಧ್ಯ. ಆದರೆ ನೀವು ನೆಟ್ವರ್ಕ್ ಆಸ್ಪತ್ರೆಯಲ್ಲಿ ಕ್ಯಾಶ್ಲೆಸ್ ಕ್ಲೈಮ್ ಆಯ್ಕೆಯನ್ನು ಬಯಸಿದರೆ, 24-ಗಂಟೆಗಳ ಒಳಗೆ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪೊರಕೆದಾರರಿಗೆ ತಿಳಿಸಬೇಕು.
ಇದರ ಹೊರತಾಗಿ, ಪ್ರಕ್ರಿಯೆಗಳು ಒಂದೇ ಆಗಿರುತ್ತವೆ - ನೀವು ನಿಮ್ಮ ಇ-ಹೆಲ್ತ್ ಕಾರ್ಡ್ ಅನ್ನು ಪ್ರದರ್ಶಿಸಬೇಕು ಮತ್ತು ಹಾಸ್ಪಿಟಲೈಸೇಷನ್ ಸಮಯದಲ್ಲಿ ಅಗತ್ಯವಿರುವ ಕ್ಯಾಶ್ಲೆಸ್ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ.
ನನ್ನ ಸ್ಥಳದ ಹತ್ತಿರದಲ್ಲಿ ಯಾವುದೇ ನೆಟ್ವರ್ಕ್ ಆಸ್ಪತ್ರೆಗಳು ಇಲ್ಲದಿದ್ದರೆ ನಾನು ಕ್ಲೈಮ್ ಮಾಡುವುದು ಹೇಗೆ?
ಹಾಗಾಗದಿರಲಿ ಎಂದು ನಾವು ಬಯಸುತ್ತೇವೆ. ಒಂದುವೇಳೆ ಹಾಗಾದಲ್ಲಿ - ಕ್ಯಾಶ್ಲೆಸ್ ಆಯ್ಕೆಯ ಬದಲಿಗೆ ನಿಮ್ಮ ಆಯ್ಕೆಯ ಯಾವುದೇ ಆಸ್ಪತ್ರೆಯಲ್ಲಿ ರಿಇಂಬರ್ಸ್ಮೆಂಟ್ ಕ್ಲೈಮ್ ಅನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ರಿಇಂಬರ್ಸ್ಮೆಂಟ್ ಕ್ಲೈಮ್ ಮಾಡುವುದು ಹೇಗೆ ಎಂಬುದಕ್ಕೆ ಉತ್ತರ ಇಲ್ಲಿದೆ:
- ಹಂತ 1: ಯೋಜಿತ ಹಾಸ್ಪಿಟಲೈಸೇಷನ್ ಸಂದರ್ಭದಲ್ಲಿ, ನಮಗೆ 48 ಗಂಟೆಗಳ ಮುಂಚಿತವಾಗಿ ತಿಳಿಸಿ ಅಥವಾ ವೈದ್ಯಕೀಯ ತುರ್ತುಸ್ಥಿತಿಯ ಸಂದರ್ಭದಲ್ಲಿ - ಹಾಸ್ಪಿಟಲೈಸೇಷನ್ ದಿನಾಂಕದಿಂದ 48 ಗಂಟೆಗಳ ಒಳಗೆ ನಮಗೆ ತಿಳಿಸಿ.
- ಹಂತ 2: ಹಾಸ್ಪಿಟಲೈಸೇಷನ್ ನಂತರ, ನಿಮ್ಮ ಡಿಸ್ಚಾರ್ಜ್ ದಿನಾಂಕದಿಂದ 30 ದಿನಗಳೊಳಗೆ ಅಗತ್ಯವಿರುವ ಎಲ್ಲಾ ಡಾಕ್ಯುಮೆಂಟುಗಳನ್ನು ಸಲ್ಲಿಸಿ ಅಥವಾ ಅಪ್ಲೋಡ್ ಮಾಡಿ. ಪ್ರಕ್ರಿಯೆಯನ್ನು ತ್ವರಿತವಾಗಿಸಲು ಮತ್ತು ಸುಗಮಗೊಳಿಸಲು ಆದಷ್ಟು ವಿಳಂಬ ಮಾಡುವುದನ್ನು ತಪ್ಪಿಸಿ. ನಾವೂ ಸಹ ಯಾವಾಗಲೂ ಇದನ್ನೇ ಶಿಫಾರಸು ಮಾಡುತ್ತೇವೆ.
- ಹಂತ 3: ಒಮ್ಮೆ ಎಲ್ಲಾ ಡಾಕ್ಯುಮೆಂಟುಗಳನ್ನು ಸ್ವೀಕರಿಸಿದ ನಂತರ, ನಾವು ಕ್ಲೈಮ್ ಅನ್ನು ಪ್ರಕ್ರಿಯೆಗೊಳಿಸುತ್ತೇವೆ ಹಾಗೂ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ನಿಯಮ ಮತ್ತು ಷರತ್ತುಗಳ ಪ್ರಕಾರ - 30-ದಿನಗಳೊಳಗೆ ಅಗತ್ಯವಿರುವ ಮತ್ತು ಅನುಮೋದಿತ ಕ್ಲೈಮ್ ಮೊತ್ತವನ್ನು ರಿಇಂಬರ್ಸ್ ಮಾಡುತ್ತೇವೆ.
ಕ್ಯಾಶ್ಲೆಸ್ ಸೌಲಭ್ಯಕ್ಕಾಗಿ ನೆಟ್ವರ್ಕ್ ಆಸ್ಪತ್ರೆಗಳು
ಡಿಜಿಟ್ ವೆಬ್ಸೈಟ್ನಲ್ಲಿ ತೋರಿಸಿರುವ ಎಂಪನೆಲ್ಡ್ ಆಸ್ಪತ್ರೆಗಳನ್ನು ಸರಿಯಾದ ಸಮಯದಲ್ಲಿ ನವೀಕರಿಸಿರುವುದಿಲ್ಲ. ರಿನೀವಲ್ ಮಾಡಿದ ಮಾಹಿತಿಗಾಗಿ ದಯವಿಟ್ಟು ಕೆಳಗಿನ ಟಿ.ಪಿ.ಎ ಪಟ್ಟಿಗಳು ಮತ್ತು ಸಂಬಂಧಿತ ಟಿ.ಪಿ.ಎ ಗಳನ್ನು ಪರಿಶೀಲಿಸಿ.
ಟಿ.ಪಿ.ಎ ನ ಹೆಸರು |
ಪಾಲಿಸಿಯ ವಿಧ |
ಲಿಂಕ್ |
ಮೆಡಿ ಅಸಿಸ್ಟ್ ಇನ್ಶೂರೆನ್ಸ್ ಟಿ.ಪಿ.ಎ ಪ್ರೈವೇಟ್ ಲಿಮಿಟೆಡ್. |
ರಿಟೇಲ್ ಅಂಡ್ ಗ್ರೂಪ್ |
|
ಪ್ಯಾರಾಮೌಂಟ್ ಹೆಲ್ತ್ ಸರ್ವೀಸಸ್ ಅಂಡ್ ಇನ್ಶೂರೆನ್ಸ್ ಟಿ.ಪಿ.ಎ ಪ್ರೈವೇಟ್ ಲಿಮಿಟೆಡ್. |
ಗ್ರೂಪ್ |
|
ಹೆಲ್ತ್ ಇಂಡಿಯಾ ಇನ್ಶೂರೆನ್ಸ್ ಟಿ.ಪಿ.ಎ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ |
ಗ್ರೂಪ್ |
|
ಗುಡ್ ಹೆಲ್ತ್ ಇಂಡಿಯಾ ಇನ್ಶೂರೆನ್ಸ್ ಟಿ.ಪಿ.ಎ ಲಿಮಿಟೆಡ್ |
ಗ್ರೂಪ್ |
|
ಫ್ಯಾಮಿಲಿ ಹೆಲ್ತ್ ಪ್ಲಾನ್ ಇನ್ಶೂರೆನ್ಸ್ ಟಿ.ಪಿ.ಡಿ ಲಿಮಿಟೆಡ್ (ಎಫ್.ಹೆಚ್.ಪಿ.ಎಲ್) |
ಗ್ರೂಪ್ |
ನಾವು ಕೆಲವು ಆಸ್ಪತ್ರೆಗಳೊಂದಿಗೆ ನೇರ ಟೈ-ಅಪ್ ವ್ಯವಸ್ಥೆ ಮಾಡಿದ್ದೇವೆ. ಇವುಗಳು ನಾವು ನಮ್ಮ ಟಿ.ಪಿ.ಎ ಗಳೊಂದಿಗೆ ನಿರ್ವಹಿಸುವ ಆಸ್ಪತ್ರೆ ನೆಟ್ವರ್ಕ್ಗೆ ಹೆಚ್ಚುವರಿಯಾಗಿವೆ
ನಮ್ಮ ಗ್ರಾಹಕರ ಅನುಭವವನ್ನು ಸುಧಾರಿಸುವುದರ ಜೊತೆಗೆ ನಮ್ಮ ಕ್ಲೈಮ್ ಪ್ರಕ್ರಿಯೆಗೆ ಪಾರದರ್ಶಕತೆಯನ್ನು ತರುವುದಕ್ಕಾಗಿ 'ಆದ್ಯತೆಯಿರದ ಆಸ್ಪತ್ರೆಗಳ' ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಈ ಆಸ್ಪತ್ರೆಗಳ ಚಿಕಿತ್ಸೆ/ಕ್ಲೈಮ್ಗಳ ಅನುಭವದ ಆಧಾರದ ಮೇಲೆ ಇದನ್ನು ಸಿದ್ಧಪಡಿಸಲಾಗಿದೆ. ಯೋಜಿತವಾಗಿ/ಪೂರ್ವ-ಯೋಜಿತವಾಗಿ ಈ ಆಸ್ಪತ್ರೆಗಳಲ್ಲಿ ಪಡೆದ ಯಾವುದೇ ಚಿಕಿತ್ಸೆಗಾಗಿ, ಯಾವುದೇ ಕ್ಯಾಶ್ಲೆಸ್ ಅಥವಾ ರಿಇಂಬರ್ಸ್ಮೆಂಟ್ ಕ್ಲೈಮ್ ಅನ್ನು ನೀಡುವ ಸ್ಥಿತಿಯಲ್ಲಿ ಕಂಪನಿಯಿರುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ವಂಚನೆ ಮತ್ತು ತಪ್ಪು ಅಭಿಪ್ರಾಯದ ಅಂಶವನ್ನು ಕಡಿಮೆ ಮಾಡಲು ಮತ್ತು ನಾವು ನಿಜವಾದ ಕ್ಲೈಮ್ಗಳನ್ನು ಪೂರೈಸಲು ಸಮರ್ಥರಾಗಿದ್ದೇವೆ ಎಂದು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ. ಆದಾಗ್ಯೂ, ಈ ಆಸ್ಪತ್ರೆಗಳಲ್ಲಿ ಸ್ವೀಕರಿಸಿದ ತುರ್ತು ಚಿಕಿತ್ಸೆಗೆ ಸಂಬಂಧಿಸಿದ ಯಾವುದೇ ಕ್ಲೈಮ್ ಅನ್ನು ಅರ್ಹತೆಯ ಮೇಲೆ ಪರಿಗಣಿಸಲಾಗುತ್ತದೆ. ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ಅಂತಹ ಕ್ಲೈಮ್ ಅನ್ನು ನಿರ್ಧರಿಸುವ ಮೊದಲು ಸಂಪೂರ್ಣ ಡಾಕ್ಯುಮೆಂಟುಗಳನ್ನು ಪರಿಶೀಲಿಸುವ ಹಕ್ಕನ್ನು ಡಿಜಿಟ್ ಕಾಯ್ದಿರಿಸುತ್ತದೆ.
ಡಿಸ್ಕ್ಲೈಮರ್:
- ನೆಟ್ವರ್ಕ್ ಆಸ್ಪತ್ರೆಯ ಪಟ್ಟಿಯು ತಾತ್ಕಾಲಿಕ ಮತ್ತು ಪೂರೈಕೆದಾರರ ವಿಮರ್ಶೆಯ ಆಧಾರದ ಮೇಲೆ ಬದಲಾವಣೆಗೆ ಒಳಪಟ್ಟಿರುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಅಂತಿಮ ಸ್ಥಿತಿಗಾಗಿ, ದಯವಿಟ್ಟು ನಮ್ಮ ಕಾಲ್ ಸೆಂಟರ್ 1800-258-4242 ನಲ್ಲಿ ಸಂಪರ್ಕಿಸಿ
- ನೀಡಿರುವ ಪಟ್ಟಿಯಿಂದ ಯಾವುದೇ ಆಸ್ಪತ್ರೆಯನ್ನು ಸೇರಿಸುವ/ತೆಗೆದುಹಾಕುವ ಹಕ್ಕನ್ನು ಡಿಜಿಟ್ ಕಾಯ್ದಿರಿಸಿದೆ.
- ಡಿಜಿಟ್ ತನ್ನ ಗ್ರಾಹಕರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ಬದ್ಧವಾಗಿದೆ. ನಾವು ಅಗತ್ಯವಿರುವ ಸಮಯದಲ್ಲಿ ಗ್ರಾಹಕರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದಕ್ಕಾಗಿ ಆಸ್ಪತ್ರೆಗಳ ಎಂಪನೆಲ್ಮೆಂಟ್ ಮಾಡಲಾಗುತ್ತದೆ ಎಂಬುದನ್ನು ತಿಳಿಸಲು ಬಯಸುತ್ತೇವೆ.
- ಈ ವೆಬ್ಸೈಟ್ನಲ್ಲಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಮಾಹಿತಿಯನ್ನು ಗೊಡಿಜಿಟ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಒದಗಿಸಿದೆ ಮತ್ತು ನಾವು ಮಾಹಿತಿಯನ್ನು ನವೀನತೆಯಿಂದ ಮತ್ತು ಸರಿಯಾಗಿ ಇರಿಸಲು ಪ್ರಯತ್ನಿಸುತ್ತಿರುವಾಗ, ವೆಬ್ಸೈಟ್ಗೆ ಸಂಬಂಧಿಸಿದಂತೆ ಅಥವಾ ಯಾವುದೇ ಉದ್ದೇಶಕ್ಕಾಗಿ ವೆಬ್ಸೈಟ್ನಲ್ಲಿರುವ ಮಾಹಿತಿ, ಉತ್ಪನ್ನಗಳು, ಸೇವೆಗಳು ಅಥವಾ ಸಂಬಂಧಿತ ಗ್ರಾಫಿಕ್ಸ್ಗೆ ಸಂಬಂಧಿಸಿದಂತೆ ಪರಿಪೂರ್ಣತೆ, ನಿಖರತೆ, ವಿಶ್ವಾಸಾರ್ಹತೆ, ಸೂಕ್ತತೆ ಅಥವಾ ಲಭ್ಯತೆಯ ಬಗ್ಗೆ ನಾವು ಯಾವುದೇ ರೀತಿಯ ಪ್ರಾತಿನಿಧ್ಯಗಳು ಅಥವಾ ವಾರಂಟಿಗಳನ್ನು ವ್ಯಕ್ತಪಡಿಸುವುದಿಲ್ಲ. ಅಂತಹ ಮಾಹಿತಿಯ ಮೇಲೆ ನೀವಿಡುವ ಯಾವುದೇ ನಂಬಿಕೆಯು ಕಟ್ಟುನಿಟ್ಟಾಗಿ ನಿಮ್ಮ ಸ್ವಂತ ಜವಾಬ್ದಾರಿಯಲ್ಲಿರುತ್ತದೆ.
- ಈ ವೆಬ್ಸೈಟ್ನ ಬಳಕೆಯಿಂದ ಉಂಟಾಗುವ ಡೇಟಾದ ನಷ್ಟ/ಲಾಭ ಅಥವಾ ಅದರಿಂದ ಉಂಟಾಗುವ ಯಾವುದೇ ಮಿತಿಯಿಲ್ಲದ, ಪರೋಕ್ಷ ಅಥವಾ ಪರಿಣಾಮದ ನಷ್ಟ/ಹಾನಿ ಸೇರಿದಂತೆ ಯಾವುದೇ ಸಂದರ್ಭದಲ್ಲಿ ಯಾವುದೇ ನಷ್ಟ ಅಥವಾ ಹಾನಿಗೆ ನಾವು ಜವಾಬ್ದಾರರಾಗಿರುವುದಿಲ್ಲ
ಯಾವುದೇ ಡಿಜಿಟ್ ಉದ್ಯೋಗಿ ಅಥವಾ ಏಜೆಂಟ್ಗಳು ಅಥವಾ ಥರ್ಡ್ ಪಾರ್ಟಿಯು ಪ್ರೊಸೆಸಿಂಗ್ ಶುಲ್ಕವನ್ನು ಕೇಳುತ್ತಿರುವುದನ್ನು ಆಸ್ಪತ್ರೆಯು ಗಮನಿಸಿದರೆ, ಅದನ್ನು ತಕ್ಷಣವೆ ನಮ್ಮ ಗಮನಕ್ಕೆ ತರುವಂತೆ ನಾವು ನಿಮ್ಮನ್ನು ವಿನಂತಿಸುತ್ತೇವೆ. ಇದಕ್ಕಾಗಿ health.network@godigit.com ಗೆ ಮೇಲ್ ಮಾಡುವ ಮೂಲಕ ದೂರು ಸಲ್ಲಿಸಿ