ಡಯಾಬಿಟೀಸ್ ಹೆಲ್ತ್ ಇನ್ಶೂರೆನ್ಸ್,ಡಯಾಬಿಟೀಸ್ ಚಿಕಿತ್ಸೆ ಮತ್ತು ಅದಕ್ಕೆ ಸಂಬಂಧಿತ ಆಸ್ಪತ್ರೆ ದಾಖಲಾತಿಗಳಲ್ಲಿ ತಗಲುವ ವೆಚ್ಚವನ್ನು ಕವರ್ ಮಾಡುವ ಒಂದು ಕಸ್ಟಮೈಸ್ಡ್(ತಕ್ಕಂತೆ ತಯಾರಿಸಿದ) ಹೆಲ್ತ್ ಇನ್ಶೂರೆನ್ಸ್ ಯೋಜನೆಯಾಗಿದೆ. ಇದರ ಜೊತೆ, ಡಯಾಬಿಟೀಸ್ ಹೆಲ್ತ್ ಇನ್ಶೂರೆನ್ಸ್, ತನ್ನ ಲಾಭಗಳ ಮಿತಿಯೊಳಗೆಯೇ ಡಯಾಬಿಟೀಸ್ ಕವರೇಜ್ ಅನ್ನೂ ಹೊಂದಿರುವ ಒಂದು ಸಮಗ್ರ ಹೆಲ್ತ್ ಇನ್ಶೂರೆನ್ಸ್ ಯೋಜನೆ ಸಹ ಆಗಿರಬಹುದು, ಉದಾಹರಣೆಗೆ ಡಿಜಿಟ್ ಹೆಲ್ತ್ ಇನ್ಶೂರೆನ್ಸ್.
ಡಿಜಿಟ್ ಹೆಲ್ತ್ ಇನ್ಶೂರೆನ್ಸ್ ಅಡಿಯಲ್ಲಿ ಡಯಾಬಿಟೀಸ್ ಕವರ್ ಆಗಿದ್ದರೂ, ಈ ರೋಗದ ಲಕ್ಷಣಗಳು ಹಾಗೂ ಇದರಿಂದ ಆಗಬಲ್ಲ ಭಿನ್ನ ಭಿನ್ನ ಹೆಲ್ತ್ ಸಮಸ್ಯೆಗಳಿಂದಾಗಿ - ಡಯಾಬಿಟೀಸ್ ಗಾಗಿ ಇರುವ ಹೆಲ್ತ್ ಇನ್ಶೂರೆನ್ಸ್ ಕವರೇಜ್ ನ ವಿಷಯ ಬಂದಾಗ ನಿಮಗೆ ತಿಳಿಯಬೇಕಾದ ಕೆಲವು ನಿರ್ದಿಷ್ಟ ನಿಯಮಗಳಿವೆ. ಇದನ್ನು ತಿಳಿದುಕೊಳ್ಳುವುದು ಅಗತ್ಯ ಯಾಕೆಂದರೆ ನಿಮಗೆ ಕೊನೆ ಕ್ಷಣದಲ್ಲಿ ಅಚ್ಚರಿಯಾಗಬಾರದು ಹಾಗೂ ನಾವು ಸಂಪೂರ್ಣ ಪಾರದರ್ಶಕತೆಯಲ್ಲಿ ವಿಶ್ವಾಸವಿಡುವ ಕಾರಣ ಏನೆಲ್ಲ ಕವರ್ ಆಗಿರುತ್ತದೆ ಮತ್ತು ಆಗಿರುವುದಿಲ್ಲ ಎಂದು ಮುಂಚಿತವಾಗಿಯೇ ನಿಮಗೆ ತಿಳಿಸುತ್ತೇವೆ!
ಟೈಪ್ 1 ಡಯಾಬಿಟೀಸ್, ಹೆಚ್ಚಾಗಿ ಮಕ್ಕಳಲ್ಲಿ ಹಾಗೂ ಯುವಕರಲ್ಲಿ ಆರಂಭದಲ್ಲೇ ಪತ್ತೆಯಾಗುತ್ತದೆ, ಹಾಗೂ ಇದಕ್ಕೆ ತುತ್ತಾದವರು ಇನ್ಸುಲಿನ್ ಮೇಲೆ ಬಹಳವಾಗಿ ಅವಲಂಬಿತರಾಗಿರುತ್ತಾರೆ.
ದುರಾದೃಷ್ಟವೆಂದರೆ, ( ಹೀಗಿರುವುದಕ್ಕೆ ನಮಗೆ ಬಹಳ ಬೇಸರವಿದೆ!) ನೀವು ಹೆಲ್ತ್ ಇನ್ಶೂರೆನ್ಸ್ ಖರೀದಿಸುತ್ತಿರುವ ಸಮಯದಲ್ಲಿ ಟೈಪ್ 1 ಡಯಾಬಿಟೀಸ್ ರೋಗಿಯಾಗಿದ್ದು ಇನ್ಸುಲಿನ್ ಮೇಲೆ ಅವಲಂಬಿತರಾಗಿದ್ದರೆ, ಡಿಜಿಟ್ ನ ಸ್ಟಾಂಡರ್ಡ್ ಹೆಲ್ತ್ ಇನ್ಶೂರೆನ್ಸ್ ಅಡಿಯಲ್ಲಿ ನಿಮ್ಮನ್ನು ಕವರ್ ಮಾಡಲಾಗುವುದಿಲ್ಲ, ಕಾರಣ, ಟೈಪ್ 1 ಡಯಾಬಿಟೀಸ್ ನಲ್ಲಾಗುವ ಬದಲಾಗುವ ಆರೋಗ್ಯದ ಅಪಾಯಗಳು ಮತ್ತು ಸಮಸ್ಯೆಗಳು. ಇದರ ಬದಲಿಗೆ, ಟೈಪ್ 1 ಡಯಾಬಿಟೀಸ್ ರೋಗಿಗಳಿಗೆಂದೇ ತಯಾರಿಸಲಾದ ನಿರ್ದಿಷ್ಟ ಡಯಾಬಿಟೀಸ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು ಪಡೆಯುವುದು ಸೂಕ್ತವಾಗಿರುತ್ತದೆ.
ಭಾರತದಲ್ಲಿ ಟೈಪ್ 2 ಡಯಾಬಿಟೀಸ್ ತೀರಾ ಸಾಮಾನ್ಯ ಎಂದು ನಮಗೆ ತಿಳಿದಿದೆ ಹಾಗೂ ಅದಕ್ಕಾಗಿಯೇ ನಾವು ಅದನ್ನು ನಮ್ಮ ಅರೋಗ್ಯ ಇನ್ಶುರೆನ್ಸ್ ಯೋಜನೆಯಲ್ಲಿ ಕವರ್ ಮಾಡುತ್ತೇವೆ.
ಆದರೆ, ಡಯಾಬಿಟೀಸ್ ಸೇರಿ ಎಲ್ಲಾ ಮೊದಲೇ ಇರುವ ರೋಗಗಳಿಗೆ, ಒಂದು ಕಾಯುವಿಕೆ ಅವಧಿ ಇರುತ್ತದೆ.
ಡಿಜಿಟ್ ನಲ್ಲಿ ಮೊದಲೇ ಇರುವ ರೋಗವಾದ ಡಯಾಬಿಟೀಸ್ ನ ಕಾಯುವಿಕೆಯ ಅವಧಿಯು, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಖರೀದಿಯ ದಿನದಿಂದ 4 ವರ್ಷಗಳಾಗಿವೆ. ಇದರ ನಂತರ ನೀವು ಇದರ ಮೇಲೆ ಕ್ಲೈಮ್ ಮಾಡಬಹುದು.
ಪ್ರತೀ ಹೆಲ್ತ್ ಇನ್ಶೂರೆನ್ಸ್ ನಲ್ಲಿ ತನ್ನದೇ ಆದ ಮಿತಿ ಇರುತ್ತದೆ ಹಾಗೂ ದುರಾದೃಷ್ಟವಶಾತ್ ಇದು ನಮ್ಮದಾಗಿದೆ; 10 ವರ್ಷಗಳಿಗಿಂತ ಹೆಚ್ಚಿನ ಅವಧಿಯಿಂದ ಡಯಾಬಿಟೀಸಿಗೆ ಚಿಕಿತ್ಸೆ ಪಡೆಯುತ್ತಿದ್ದವರನ್ನು ನಾವು ಕವರ್ ಮಾಡುವುದಿಲ್ಲ.
ಇದಕ್ಕೆ ಮುಖ್ಯ ಕಾರಣ ಇದರಿಂದ ಉಂಟಾಗುವ ಅನೇಕ ಆರೋಗ್ಯ ಅಪಾಯಗಳು ಮತ್ತು ಸಮಸ್ಯೆಗಳು ಆಗಿದೆ. ಅದಕ್ಕಾಗಿಯೇ, ನಮ್ಮ ಸಲಹೆ ಏನೆಂದರೆ 10 ವರ್ಷಗಳಿಗಿಂತ ಹೆಚ್ಚಿನ ಅವಧಿಯಿಂದ ಡಯಾಬಿಟೀಸಿಗೆ ಚಿಕಿತ್ಸೆ ಪಡೆಯುತ್ತಿದ್ದವರು ಅವರಿಗೆ ಹೊಂದುವಂತಹ ಡಯಾಬಿಟೀಸ್ ನಿರ್ದಿಷ್ಟ ಯೋಜನೆಯನ್ನು ಆಯ್ಕೆ ಮಾಡಬಹುದು.
ಕೆಟ್ಟ ಸುದ್ದಿಯೇನೆಂದರೆ ಭಾರತವು ವಿಶ್ವದಲ್ಲೇ ಎರಡನೇಯ ಅತೀ ಹೆಚ್ಚು ಡಯಾಬಿಟೀಸ್ ಜನಸಂಖ್ಯೆಯನ್ನು ಹೊಂದಿದೆ ಹಾಗೂ ಇದಕ್ಕೆ ಮುಖ್ಯ ಕಾರಣ ವಿಶೇಷವಾಗಿ ಆಧುನಿಕ ಜೀವನಶೈಲಿಯಿಂದಾಗಿ ನಗರದ ಜನರಲ್ಲಿ ಸಾಮಾನ್ಯವಾಗುತ್ತಿರುವ ಹಾಗೂ ಹೆಚ್ಚಾಗುತ್ತಿರುವ ಟೈಪ್ 2 ಡಯಾಬಿಟೀಸ್ ಆಗಿದೆ.
ಆದರೆ, ಒಳ್ಳೆಯ ಸುದ್ದಿಯೇನೆಂದರೆ ನೀವು ಈಗಾಗಲೇ ಡಯಾಬಿಟೀಸ್ ರೋಗಿಯಾಗಿದ್ದಲ್ಲಿ ಅಥವಾ ಭವಿಷ್ಯದಲ್ಲಿ ನಿಮ್ಮಲ್ಲಿ ಡಯಾಬಿಟೀಸ್ ಪತ್ತೆಯಾದಲ್ಲಿ( ಹಾಗಾಗದಿರಲಿ ಎಂದುಕೊಳ್ಳೋಣ!),ಕಾಯುವಿಕೆಯ ಅವಧಿಯ ನಂತರ, ಡಿಜಿಟ್ ನ ಹೆಲ್ತ್ ಇನ್ಶೂರೆನ್ಸ್ ಅದನ್ನು ಕವರ್ ಮಾಡುತ್ತದೆ .
ಹಕ್ಕು ನಿರಾಕರಣೆ (ಡಿಸ್ಕ್ಲೈಮರ್) - ಇವುಗಳು ನಮ್ಮ ಹೆಲ್ತ್ ಇನ್ಶೂರೆನ್ಸ್ ನಲ್ಲಿ ಡಯಾಬಿಟೀಸಿಗೆ ಅನ್ವಯಿಸುವ ಸಾಮಾನ್ಯ ಷರತ್ತುಗಳಾಗಿವೆ. ಆದರೆ, ನೀವು ಕವರ್ ಆಗಿದ್ದೀರೋ ಇಲ್ಲವೋ ಎನ್ನುವುದು ನಿಮ್ಮ ಒಟ್ಟಾರೆ ವೈದ್ಯಕೀಯ ಪರಿಸ್ಥಿತಿ ಮೇಲೆ ಅವಲಂಬಿಸುತ್ತದೆ, ಹಾಗೂ ಇದನ್ನು ನೀವು ಡಿಜಿಟ್ ನ ಹೆಲ್ತ್ ಇನ್ಶೂರೆನ್ಸ್ ಖರೀದಿಸುವ ವೇಳೆ ನಮ್ಮ ಹೆಲ್ತ್ ತಜ್ಞರು ನಿರ್ಧರಿಸುತ್ತಾರೆ. ಇದ್ದನ್ನು ಅಗತ್ಯ ವೈದ್ಯಕೀಯ ತಪಾಸಣೆಗಳಿಂದ ನಿರ್ಧರಿಸಲಾಗುತ್ತದೆ.
ಕವರೇಜುಗಳು
ಡಬಲ್ ವಾಲೆಟ್ ಪ್ಲಾನ್
ಇಂಫಿನಿಟಿ ವಾಲೆಟ್ ಪ್ಲಾನ್
ವಿಶ್ವಾದ್ಯಂತ ಚಿಕಿತ್ಸಾ ಯೋಜನೆ
ಪ್ರಮುಖ ವೈಶಿಷ್ಟ್ಯಗಳು
ಅನಾರೋಗ್ಯ, ಅಪಘಾತ, ಗಂಭೀರ ಕಾಯಿಲೆ ಅಥವಾ ಕೋವಿಡ್ 19 ನಂತಹ ಸಾಂಕ್ರಾಮಿಕ ರೋಗಗಳು ಸೇರಿದಂತೆ ಎಲ್ಲಾ ಆಸ್ಪತ್ರೆ ದಾಖಲಾತಿ ವೆಚ್ಚಗಳನ್ನು ಇದು ಕವರ್ ಮಾಡುತ್ತದೆ. ನಿಮ್ಮ ಇನ್ಶೂರ್ಡ್ ಮೊತ್ತದ ಒಟ್ಟು ವೆಚ್ಚಗಳು ಇರುವವರೆಗೆ ಇದನ್ನು ಬಹು ಆಸ್ಪತ್ರೆಗೆ ಭರಿಸಲು ಬಳಸಬಹುದು.
ಯಾವುದೇ ಆಕಸ್ಮಿಕವಲ್ಲದ ಅನಾರೋಗ್ಯಕ್ಕೆ ಸಂಬಂಧಿಸಿದ ಚಿಕಿತ್ಸೆಗಾಗಿ ಕವರ್ ಪಡೆಯಲು ನಿಮ್ಮ ಪಾಲಿಸಿಯ ಮೊದಲ ದಿನದಿಂದ ನೀವು ನಿರ್ದಿಷ್ಟ ಅವಧಿಯವರೆಗೆ ಕಾಯಬೇಕಾಗುತ್ತದೆ. ಇದು ಆರಂಭಿಕ ಕಾಯುವ ಅವಧಿಯಾಗಿದೆ.
ಹೋಮ್ ಹೆಲ್ತ್‌ಕೇರ್, ಟೆಲಿ ಸಮಾಲೋಚನೆ, ಯೋಗ ಮತ್ತು ಮೈಂಡ್‌ಫುಲ್‌ನೆಸ್‌ನಂತಹ ವಿಶೇಷ ವೆಲ್‌ನೆಸ್ ಪ್ರಯೋಜನಗಳು ಮತ್ತು ನಮ್ಮ ಅಪ್ಲಿಕೇಶನ್‌ನಲ್ಲಿ ಇನ್ನೂ ಹಲವು ಲಭ್ಯವಿದೆ.
ನಿಮ್ಮ ಇನ್ಶೂರ್ಡ್ ಮೊತ್ತದ 100% ರಷ್ಟಿರುವ ಬ್ಯಾಕ್-ಅಪ್ ಇನ್ಶೂರ್ಡ್ ಮೊತ್ತವನ್ನು ನಾವು ಒದಗಿಸುತ್ತೇವೆ. ಇನ್ಶೂರ್ಡ್ ಮೊತ್ತದ ಬ್ಯಾಕಪ್ ಹೇಗೆ ಕೆಲಸ ಮಾಡುತ್ತದೆ? ನಿಮ್ಮ ಪಾಲಿಸಿ ಇನ್ಶೂರ್ಡ್ ಮೊತ್ತ ರೂಪಾಯಿ 5 ಲಕ್ಷ ನೀವು ರೂಪಾಯಿ 50,000 ಕ್ಲೈಮ್ ಮಾಡುತ್ತೀರಿ. ಡಿಜಿಟ್ ವ್ಯಾಲೆಟ್ ಪ್ರಯೋಜನವನ್ನು ಸ್ವಯಂಚಾಲಿತವಾಗಿ ಪ್ರಚೋದಿಸುತ್ತದೆ. ಆದ್ದರಿಂದ ನೀವು ಈಗ ವರ್ಷಕ್ಕೆ 4.5 ಲಕ್ಷ + 5 ಲಕ್ಷ ಇನ್ಶೂರ್ಡ್ ಮೊತ್ತವನ್ನು ಹೊಂದಿದ್ದೀರಿ. ಆದಾಗ್ಯೂ, ಒಂದು ಸಿಂಗಲ್ ಕ್ಲೈಮ್, ಮೇಲಿನ ಪ್ರಕರಣದಲ್ಲಿ, 5 ಲಕ್ಷದ ಮೂಲ ಇನ್ಶೂರ್ಡ್ ಮೊತ್ತಕ್ಕಿಂತ ಹೆಚ್ಚಿರಬಾರದು.
ಪಾಲಿಸಿ ವರ್ಷದಲ್ಲಿ ಯಾವುದೇ ಕ್ಲೈಮ್‌ಗಳಿಲ್ಲವೇ? ನೀವು ಬೋನಸ್ ಅನ್ನು ಪಡೆಯುತ್ತೀರಿ - ಆರೋಗ್ಯವಾಗಿರಲು ಮತ್ತು ಉಚಿತವಾಗಿ ಕ್ಲೈಮ್ ಮಾಡಲು ನಿಮ್ಮ ಒಟ್ಟು ಇನ್ಶೂರ್ಡ್ ಮೊತ್ತದಲ್ಲಿ ಹೆಚ್ಚುವರಿ ಮೊತ್ತ!
ವಿವಿಧ ವರ್ಗದ ಕೊಠಡಿಗಳು ವಿಭಿನ್ನ ಬಾಡಿಗೆಗಳನ್ನು ಹೊಂದಿರುತ್ತವೆ. ಹೇಗೆ ಹೋಟೆಲ್ ಕೊಠಡಿಗಳು ಸುಂಕವನ್ನು ಹೊಂದಿರುತ್ತವೆಯೋ ಇದು ಹಾಗೆಯೇ. ಡಿಜಿಟ್‌ನ, ಕೆಲವು ಯೋಜನೆಗಳು ನಿಮಗೆ ನಿಮ್ಮ ಇನ್ಶೂರೆನ್ಸ್ ಮೊತ್ತಕ್ಕಿಂತ ಕಡಿಮೆ ಇರುವ, ಕೊಠಡಿ ಬಾಡಿಗೆ ಮಿತಿಯನ್ನು ಹೊಂದಿರದ ಪ್ರಯೋಜನವನ್ನು ನೀಡುತ್ತದೆ.
ಹೆಲ್ತ್ ಇನ್ಶೂರೆನ್ಸಗಳು ಸಾಮಾನ್ಯವಾಗಿ 24 ಗಂಟೆಗಳನ್ನು ಮೀರುವ ಚಿಕಿತ್ಸೆಗಳಿಗೆ ಮಾತ್ರ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುತ್ತವೆ. ಇದು ತಾಂತ್ರಿಕ ಪ್ರಗತಿಯಿಂದಾಗಿ ಆಸ್ಪತ್ರೆಯಲ್ಲಿ ಕೈಗೊಳ್ಳಲಾಗುವ 24 ಗಂಟೆಗಳಿಗಿಂತ ಕಡಿಮೆ ಸಮಯದ ವೈದ್ಯಕೀಯ ಚಿಕಿತ್ಸೆಗಳನ್ನು ಕವರ್ ಮಾಡುತ್ತದೆ.
ವರ್ಲ್ಡ್‌ವೈಡ್ ಕವರೇಜ್‌ನೊಂದಿಗೆ ವಿಶ್ವ ದರ್ಜೆಯ ಚಿಕಿತ್ಸೆಯನ್ನು ಪಡೆಯಿರಿ! ಭಾರತದಲ್ಲಿ ನಿಮ್ಮ ಆರೋಗ್ಯ ಪರೀಕ್ಷೆಯ ಸಮಯದಲ್ಲಿ ನಿಮ್ಮ ವೈದ್ಯರು ಅನಾರೋಗ್ಯವನ್ನು ಗುರುತಿಸಿದರೆ ಮತ್ತು ನೀವು ವಿದೇಶದಲ್ಲಿ ಚಿಕಿತ್ಸೆ ಪಡೆಯಲು ಬಯಸಿದರೆ, ನಿಮಗಾಗಿ ನಾವಿದ್ದೇವೆ. ನೀವು ಕವರ್ ಪಡೆಯುತ್ತೀರಿ!
ನಿಮ್ಮ ಪ್ಲ್ಯಾನ್ ನಲ್ಲಿ ನಮೂದಿಸಲಾದ ಮೊತ್ತದವರೆಗೆ ನಿಮ್ಮ ಆರೋಗ್ಯ ತಪಾಸಣೆ ವೆಚ್ಚಗಳನ್ನು ನಾವು ಪಾವತಿಸುತ್ತೇವೆ. ಪರೀಕ್ಷೆಯ ರೀತಿಯ ಮೇಲೆ ಯಾವುದೇ ನಿರ್ಬಂಧಗಳಿಲ್ಲ! ಅದು ಇಸಿಜಿ ಅಥವಾ ಥೈರಾಯ್ಡ್ ಪ್ರೊಫೈಲ್ ಆಗಿರಬಹುದು. ಕ್ಲೈಮ್ ಮಿತಿಯನ್ನು ಪರಿಶೀಲಿಸಲು ನಿಮ್ಮ ಪಾಲಿಸಿ ವೇಳಾಪಟ್ಟಿಯನ್ನು ನೀವು ಅನುಸರಿಸಿರುವಿರಾ ಎಂದು ಖಚಿತಪಡಿಸಿಕೊಳ್ಳಿ.
ತುರ್ತು ಜೀವ-ಬೆದರಿಕೆಯ ಆರೋಗ್ಯ ಪರಿಸ್ಥಿತಿಗಳು ಉಂಟಾಗಬಹುದು , ಆಗ ಆಸ್ಪತ್ರೆಗೆ ತಕ್ಷಣದ ಸಾರಿಗೆ ಅಗತ್ಯವಿರುತ್ತದೆ. ನಾವು ಇದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ ಮತ್ತು ವಿಮಾನ ಅಥವಾ ಹೆಲಿಕಾಪ್ಟರ್‌ನಲ್ಲಿ ನಿಮ್ಮನ್ನು ಆಸ್ಪತ್ರೆಗೆ ಸಾಗಿಸಲು ತಗಲುವ ವೆಚ್ಚವನ್ನು ಮರುಪಾವತಿ ಮಾಡುತ್ತೇವೆ.
ಸಹ-ಪಾವತಿ ಎಂದರೆ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ವೆಚ್ಚ ಹಂಚಿಕೆಯ ಅಗತ್ಯತೆ, ಇದು ಪಾಲಿಸಿ ಹೋಲ್ಡರ್/ಇನ್ಶೂರ್ಡ್ ಸ್ವೀಕಾರಾರ್ಹ ಕ್ಲೈಮ್‌ಗಳ ನಿರ್ದಿಷ್ಟ ಶೇಕಡಾವಾರು ಮೊತ್ತವನ್ನು ಭರಿಸುತ್ತಾರೆ. ಇದು ಇನ್ಶೂರ್ಡ್ ಮೊತ್ತವನ್ನು ಕಡಿಮೆ ಮಾಡುವುದಿಲ್ಲ. ಈ ಶೇಕಡಾವಾರು ವಯಸ್ಸಿನಂತಹ ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ, ಅಥವಾ ಕೆಲವೊಮ್ಮೆ ನಿಮ್ಮ ಚಿಕಿತ್ಸಾ ನಗರವನ್ನು ಝೋನ್ ಆಧಾರಿತ ಮರುಪಾವತಿ ಎಂದು ಕರೆಯಲಾಗುತ್ತದೆ. ನಮ್ಮ ಪ್ಲ್ಯಾನುಗಳು, ಯಾವುದೇ ವಯಸ್ಸು ಆಧಾರಿತ ಅಥವಾ ಝೋನ್ ಆಧಾರಿತ ಸಹಪಾವತಿಯನ್ನು ಒಳಗೊಂಡಿಲ್ಲ.
ನೀವು ಆಸ್ಪತ್ರೆಗೆ ದಾಖಲಾದರೆ ರಸ್ತೆ ಆಂಬ್ಯುಲೆನ್ಸ್‌ನ ವೆಚ್ಚವನ್ನು ಮರುಪಾವತಿಸಲಾಗುತ್ತದೆ .
ರೋಗನಿರ್ಣಯ, ಪರೀಕ್ಷೆಗಳು ಮತ್ತು ಚೇತರಿಕೆಯಂತಹ ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರದ ಎಲ್ಲಾ ವೆಚ್ಚಗಳಿಗೆ ಈ ಕವರ್ ಆಗಿದೆ.
ಇತರೆ ವೈಶಿಷ್ಟ್ಯಗಳು
ನೀವು ಈಗಾಗಲೇ ಬಳಲುತ್ತಿರುವ ಮತ್ತು ಪಾಲಿಸಿಯನ್ನು ತೆಗೆದುಕೊಳ್ಳುವ ಮೊದಲು ನಮಗೆ ಬಹಿರಂಗಪಡಿಸಿದ ಮತ್ತು ನಮ್ಮಿಂದ ಸ್ವೀಕರಿಸಲ್ಪಟ್ಟಿರುವ ರೋಗ ಅಥವಾ ಸ್ಥಿತಿಯು ನಿಮ್ಮ ಪಾಲಿಸಿ ವೇಳಾಪಟ್ಟಿಯಲ್ಲಿ ಆಯ್ಕೆಮಾಡಿದ ಮತ್ತು ಉಲ್ಲೇಖಿಸಿರುವ ಯೋಜನೆಯ ಪ್ರಕಾರ ಕಾಯುವ ಅವಧಿಯನ್ನು ಹೊಂದಿರುತ್ತದೆ.
ನಿರ್ದಿಷ್ಟ ಕಾಯಿಲೆಗೆ ನೀವು ಕ್ಲೈಮ್ ಪಡೆಯುವವರೆಗೆ ನೀವು ಕಾಯಬೇಕಾದ ಸಮಯವಿದು. ಡಿಜಿಟ್‌ನಲ್ಲಿ ಇದು 2 ವರ್ಷಗಳು ಮತ್ತು ಪಾಲಿಸಿಯನ್ನು ಸಕ್ರಿಯಗೊಳಿಸಿದ ದಿನದಿಂದ ಪ್ರಾರಂಭವಾಗುತ್ತದೆ. ಹೊರಗಿಡುವಿಕೆಗಳ(ಒಳಗೊಳ್ಳದಿರುವುದರ ) ಸಂಪೂರ್ಣ ಪಟ್ಟಿಗಾಗಿ, ನಿಮ್ಮ ಪಾಲಿಸಿ ಪದಗಳ ಪ್ರಮಾಣಿತ ಹೊರಗಿಡುವಿಕೆಗಳನ್ನು (Excl02) ಓದಿ.
ಪಾಲಿಸಿ ಅವಧಿಯಲ್ಲಿ ನೀವು ಆಕಸ್ಮಿಕ ದೈಹಿಕ ಗಾಯವನ್ನು ಅನುಭವಿಸಿದರೆ, ಅಪಘಾತದ ದಿನಾಂಕದಿಂದ ಹನ್ನೆರಡು (12) ತಿಂಗಳೊಳಗೆ ನಿಮ್ಮ ಸಾವಿಗೆ ಏಕೈಕ ಮತ್ತು ನೇರ ಕಾರಣವಾದರೆ, ನಂತರ ನಾವು ಪಾಲಿಸಿ ವೇಳಾಪಟ್ಟಿಯಲ್ಲಿ ಉಲ್ಲೇಖಿಸಿರುವಂತೆ ಇನ್ಶೂರ್ಡ್ ಮೊತ್ತದ 100% ಅನ್ನು ಪಾವತಿಸುತ್ತೇವೆ ಈ ಕವರ್ ಮತ್ತು ಯೋಜನೆಯ ಪ್ರಕಾರ ಆಯ್ಕೆಮಾಡಲಾಗಿದೆ.
ನಿಮ್ಮ ಅಂಗ ದಾನಿಯು ನಿಮ್ಮ ಪಾಲಿಸಿಯಲ್ಲಿ ಕವರ್ ಆಗಿರುತ್ತಾರೆ. ದಾನಿಯ ಆಸ್ಪತ್ರೆ ಚಿಕಿತ್ಸೆಯ ಪೂರ್ವ ಮತ್ತು ನಂತರದ ವೆಚ್ಚಗಳನ್ನು ಸಹ ನಾವು ನೋಡಿಕೊಳ್ಳುತ್ತೇವೆ. ಅಂಗಾಂಗ ದಾನವು ಕರುಣಾಜನಕ ಕಾರ್ಯಗಳಲ್ಲಿ ಒಂದಾಗಿದೆ ಮತ್ತು ನಾವು ಅದರ ಭಾಗವಾಗಬಾರದು ಎಂದು ನಾವು ಯೋಚಿಸಿದ್ದೇವೆ!
ಆಸ್ಪತ್ರೆಗಳು ಹಾಸಿಗೆಯಿಂದ ಹೊರಗೆ ಹೋಗಬಹುದು ಅಥವಾ ಆಸ್ಪತ್ರೆಯಲ್ಲಿ ದಾಖಲಾಗಲು ರೋಗಿಯ ಸ್ಥಿತಿ ಒರಟಾಗಿರಬಹುದು. ಭೀತಿಗೊಳಗಾಗಬೇಡಿ! ನೀವು ಮನೆಯಲ್ಲಿ ಚಿಕಿತ್ಸೆ ಪಡೆದರೂ ವೈದ್ಯಕೀಯ ವೆಚ್ಚವನ್ನು ನಾವು ಭರಿಸುತ್ತೇವೆ.
ಸ್ಥೂಲಕಾಯತೆಯು ಅನೇಕ ಆರೋಗ್ಯ ಸಮಸ್ಯೆಗಳಿಗೆ ಮೂಲ ಕಾರಣವಾಗಿರಬಹುದು. ನಾವು ಇದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ ಮತ್ತು ವೈದ್ಯಕೀಯವಾಗಿ ಅಗತ್ಯವಿದ್ದಾಗ ಮತ್ತು ನಿಮ್ಮ ವೈದ್ಯರು ಸಲಹೆ ನೀಡಿದಾಗ ಬಾರಿಯಾಟ್ರಿಕ್ ಸರ್ಜರಿಗೆ ಕವರ್ ನೀಡುತ್ತೇವೆ. ಆದಾಗ್ಯೂ, ಈ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವುದು ಸೌಂದರ್ಯದ ಕಾರಣಗಳಿಗಾಗಿ ಆಗಿದ್ದರೆ ನಾವು ಕವರ್ ನೀಡುವುದಿಲ್ಲ.
ಆಘಾತದಿಂದಾಗಿ, ಒಬ್ಬ ಸದಸ್ಯರು ಮನೋವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಬೇಕಾದರೆ, ಈ ಪ್ರಯೋಜನದ ಅಡಿಯಲ್ಲಿ ರೂಪಾಯಿ 1,00,000 ವರೆಗೆ ಕವರ್ ನೀಡಲಾಗುತ್ತದೆ. ಆದಾಗ್ಯೂ, ಒಪಿಡಿ ಸಮಾಲೋಚನೆಗಳು ಇದರ ಅಡಿಯಲ್ಲಿ ಒಳಗೊಂಡಿರುವುದಿಲ್ಲ. ಮನೋವೈದ್ಯಕೀಯ ಕಾಯಿಲೆ ಕವರ್‌ಗಾಗಿ ಕಾಯುವ ಅವಧಿಯು ನಿರ್ದಿಷ್ಟ ಅನಾರೋಗ್ಯದ ಕಾಯುವ ಅವಧಿಯಂತೆಯೇ ಇರುತ್ತದೆ.
ಆಸ್ಪತ್ರೆಗೆ ದಾಖಲಾಗುವ ಮೊದಲು, ಸಮಯದಲ್ಲಿ ಮತ್ತು ನಂತರ, ವಾಕಿಂಗ್ ಏಡ್ಸ್, ಕ್ರೆಪ್ ಬ್ಯಾಂಡೇಜ್‌ಗಳು, ಬೆಲ್ಟ್‌ಗಳು ಇತ್ಯಾದಿಗಳಂತಹ ಇತರ ಅನೇಕ ವೈದ್ಯಕೀಯ ಸಹಾಯಗಳು ಮತ್ತು ಖರ್ಚುಗಳು ನಿಮ್ಮ ಪಾಕೆಟ್‌ನ ಗಮನವನ್ನು ಬಯಸುತ್ತವೆ. ಈ ಕವರ್ ಪಾಲಿಸಿಯಿಂದ ಹೊರಗಿಡಲಾದ ಇಂತಹ ವೆಚ್ಚಗಳನ್ನು ನೋಡಿಕೊಳ್ಳುತ್ತದೆ.
ಸಹಪಾವತಿ |
ಇಲ್ಲ |
ರೂಮ್ ಬಾಡಿಗೆ ಮಿತಿ |
ಇಲ್ಲ |
ಕ್ಯಾಶ್ಲೆಸ್ ಆಸ್ಪತ್ರೆಗಳು |
ಭಾರತದಾದ್ಯಂತ 10500+ ಕ್ಯಾಶ್ಲೆಸ್ ಆಸ್ಪತ್ರೆಗಳು |
ಅಂತರ್ಗತ ವೈಯಕ್ತಿಕ ಅಪಘಾತ ಕವರ್ |
ಹೌದು |
ವೆಲ್ ನೆಸ್ ಪ್ರಯೋಜನಗಳು |
10+ ವೆಲ್‌ನೆಸ್ ಪಾಲುದಾರರಿಂದ ಲಭ್ಯವಿದೆ |
ನಗರ ಆಧಾರಿತ ಡಿಸ್ಕೌಂಟ್ |
10% ವರೆಗೆ ಡಿಸ್ಕೌಂಟ್ |
ವಿಶ್ವಾದ್ಯಂತ ಕವರೇಜ್ |
ಹೌದು* |
ಉತ್ತಮ ಆರೋಗ್ಯ ಡಿಸ್ಕೌಂಟ್ |
10% ವರೆಗೆ ಡಿಸ್ಕೌಂಟ್ |
ಉಪಭೋಗ್ಯ ಕವರ್ |
ಆಡ್-ಆನ್ ಆಗಿ ಲಭ್ಯವಿದೆ |
*ವಿಶ್ವಾದ್ಯಂತ ಚಿಕಿತ್ಸಾ ಯೋಜನೆಯಲ್ಲಿ ಮಾತ್ರ ಲಭ್ಯವಿದೆ
“ಯಾಕೆಂದರೆ ಡಯಾಬಿಟೀಸ್, ಅದರ ಬದಲಾಗುತ್ತಿರುವ ಹೆಲ್ತ್ ಸಮಸ್ಯೆಗಳಿಂದಾಗಿ ದುಬಾರಿ ಖಾಯಿಲೆ ಆಗಬಹುದು” ಭಾರತೀಯ ವೈದ್ಯರ ಒಕ್ಕೂಟ ನೀಡಿರುವ ಇತ್ತೀಚಿನ ವರದಿಯ ಪ್ರಕಾರ, ನಗರದ ಬಡ ಕುಟುಂಬಗಳು ಡಯಾಬಿಟೀಸ್ದ ಚಿಕಿತ್ಸೆ ಮೇಲೆ ತಮ್ಮ ಆದಾಯದ 34% ದಷ್ಟು ಖರ್ಚು ಮಾಡುತ್ತವೆ ಹಾಗೂ ಗ್ರಾಮೀಣ ಜನಸಂಖ್ಯೆಯು 27%ದಷ್ಟು ಖರ್ಚು ಮಾಡುತ್ತದೆ.
ಡಯಾಬಿಟೀಸಿನ ವೈದ್ಯಕೀಯ ವೆಚ್ಚಗಳು ಹೆಚ್ಚಿರಲು ಕಾರಣ ಅದಕ್ಕಾಗಿ ಮಾಡಬೇಕಾಗುವ ದಿನನಿತ್ಯದ ಖರ್ಚುಗಳು, ಹೆಲ್ತ್ ಸಮಸ್ಯೆಗಳು ಮತ್ತು ಹೆಚ್ಚಿದ ಹೆಲ್ತ್ ಅಪಾಯಗಳಾಗಿವೆ. ನಿಮ್ಮ ಬಳಿ ಡಯಾಬಿಟೀಸ್ ಅನ್ನು ಕವರ್ ಮಾಡುವ ಹೆಲ್ತ್ ಇನ್ಶೂರೆನ್ಸ್ ಇದ್ದರೆ ನೀವು ಇಂತಹ ಖರ್ಚುಗಳನ್ನು ಆರ್ಥಿಕವಾಗಿ ಉತ್ತಮವಾಗಿ ನಿರ್ವಹಿಸಬಹುದು.
“ಯಾಕೆಂದರೆ ಭಾರತದಲ್ಲಿ ವೈದ್ಯಕೀಯ ಹಣದುಬ್ಬರ ಪ್ರತೀವರ್ಷ ಏರುತ್ತಿದೆ”. ದುರಾದೃಷ್ಟವೆಂಬಂತೆ ಭಾರತದಲ್ಲಿ ವೈದ್ಯಕೀಯ ಖರ್ಚುಗಳು ವರ್ಷದಿಂದ ವರ್ಷಕ್ಕೆ ಏರುತ್ತಲೇ ಇವೆ. ನೀವು ಡಯಾಬಿಟೀಸ್ಕ್ಕೆ ತುತ್ತಾಗುವ ಸಂಭಾವನೆ ಹೆಚ್ಚಿದೆಯೋ ಇಲ್ಲವೋ ಆದರೆ, ನಿಮಗೆ ಚಿಕಿತ್ಸೆ ಬೇಕಾಗುವ ಎಲ್ಲಾ ತರಹದ ಅನಾರೋಗ್ಯ ಮತ್ತು ಖಾಯಿಲೆಗಳಿಗೆ, ಹೆಲ್ತ್ ಇನ್ಶೂರೆನ್ಸ್ ಕವರ್ ಪಡೆಯುವುದು ಯಾವಾಗಲೂ ಲಾಭದಾಯಕ, ಅದು ಸಣ್ಣ ವೈದ್ಯಕೀಯ ಸಮಾಲೋಚನೆಯೇ ಇರಲಿ.
“ಯಾಕೆಂದರೆ ಡಯಾಬಿಟೀಸ್ದ ರೋಗಿಗಳಲ್ಲಿ ಗಂಭೀರ ಖಾಯಿಲೆಗಳ ಅಪಾಯ ಹೆಚ್ಚಿರುತ್ತದೆ” ಕಹಿಸತ್ಯ ಏನೆಂದರೆ ಡಯಾಬಿಟೀಸ್ ರೋಗಿಗಳಲ್ಲಿ ಗಂಭೀರ ಖಾಯಿಲೆಗಳಿಗೆ ತುತ್ತಾಗುವ ಅಪಾಯ ಹೆಚ್ಚಿರುತ್ತದೆ. ಡಯಾಬಿಟೀಸ್ ರೋಗಿಗಳು ತುತ್ತಾಗುವ ಅತ್ಯಂತ ಸಾಮಾನ್ಯ ಗಂಭೀರ ಖಾಯಿಲೆಗಳಲ್ಲಿ ಹೃದಯ ಸಂಬಂಧೀ ಖಾಯಿಲೆಗಳು ಹಾಗೂ ಮೂತ್ರಪಿಂಡ ವೈಫಲ್ಯಗಳು ಸೇರಿವೆ.
ಆದ್ದರಿಂದ, ಇವುಗಳನ್ನು ತಪ್ಪಿಸಲು ಉತ್ತಮ ವೈದ್ಯಕೀಯ ಆರೈಕೆ ಪಡೆದು ಡಯಾಬಿಟೀಸ್ ಅನ್ನು ನಿಯಂತ್ರಣದಲ್ಲಿಡುವುದು ಮಾತ್ರವಲ್ಲದೆ, ಬೇಕಾದಷ್ಟು ಹೆಲ್ತ್ ಇನ್ಶೂರೆನ್ಸ್ ಯೋಜನೆಯಿಂದ ಇವುಗಳನ್ನೆಲ್ಲಾ ಕವರ್ ಮಾಡುವುದು ತುಂಬಾ ಮುಖ್ಯವಾಗಿದೆ.
“ಯಾಕೆಂದರೆ ಒಂದು ಒಳ್ಳೆಯ ಹೆಲ್ತ್ ಇನ್ಶೂರೆನ್ಸ್ ಯೋಜನೆ ಒಳಗೊಂಡಿರುವ ವಾರ್ಷಿಕ ಹೆಲ್ತ್ ತಪಾಸಣೆಗಳ ಮೂಲಕ ನಾವು ಯಾವತ್ತೂ ನಮ್ಮ ಹೆಲ್ತ್ ದ ಬಗ್ಗೆ ಅರಿತಿರುತ್ತೇವೆ” ಡಿಜಿಟ್ ಸೇರಿ ಕೆಲವು ಹೆಲ್ತ್ ಇನ್ಶೂರೆನ್ಸ್ ಯೋಜನೆಗಳು, ನಿಮ್ಮ ಕವರೇಜ್ ಬೆನಿಫಿಟ್ ನ ಭಾಗವಾಗಿ ನಿಮಗೆ ಪೂರಕ ವಾರ್ಷಿಕ ಹೆಲ್ತ್ ತಪಾಸಣೆಗಳನ್ನೂ ನೀಡುತ್ತವೆ ಎದು ನಿಮಗೆ ತಿಳಿದಿತ್ತೇ? ಯಾಕೆಂದರೆ, ಅಗತ್ಯವಿಲ್ಲದಿದ್ದರೆ ನಮ್ಮಲ್ಲಿ ಯಾರೂ ವಾರ್ಷಿಕ ಹೆಲ್ತ್ ತಪಾಸಣೆ ಮಾಡಿಸಲು ಹೋಗುವುದಿಲ್ಲ ಎಂದು ನಾವೆಲ್ಲರೂ ಒಪ್ಪಿಕೊಳ್ಳಬೇಕಾದ ಮಾತು, ಅಲ್ಲವೇ?
ನಿಜ ಹೇಳಬೇಕೆಂದರೆ, ಇಂತಹ ವಾರ್ಷಿಕ ಹೆಲ್ತ್ ತಪಾಸಣೆಗಳು ನಮಗೆ ನಮ್ಮ ದೇಹಸ್ಥಿತಿ ಬಗ್ಗೆ ತಿಳಿದಿರಲು ತುಂಬಾ ಮುಖ್ಯವಾಗಿರುತ್ತವೆ ಯಾಕೆಂದರೆ ಹೆಚ್ಚಾಗಿ ಡಯಾಬಿಟೀಸ್ದಂತಹ ಖಾಯಿಲೆಗಳಿಗೆ ತುತ್ತಾಗಿರುವುದು ನಮಗೆ ಪರಿಸ್ಥಿತಿ ಹದಗೆಡುವ ತನಕ ತಿಳಿದೇ ಇರುವುದಿಲ್ಲ.
ವಾರ್ಷಿಕ ಹೆಲ್ತ್ ತಪಾಸಣೆಗಳನ್ನು ಒಳಗೊಂಡಿರುವ ಹೆಲ್ತ್ ಇನ್ಶೂರೆನ್ಸ್ ನಿಮಗೆ ಹೀಗೆಲ್ಲಾ ಆಗದಂತೆ ಖಚಿತಪಡಿಸುತ್ತದೆ.
“ಹೆಲ್ತ್ ಇನ್ಶೂರೆನ್ಸ್ ನಲ್ಲಿ ಡಯಾಬಿಟೀಸ್ ಕವರ್ ಆಗಿರುವುದಿಲ್ಲ”ಇದು ನಿಜವಲ್ಲ. ಅನಾರೋಗ್ಯ ಮತ್ತು ಖಾಯಿಲೆಗಳ ಕವರೇಜ್ ಇನ್ಶೂರರ್ ನಿಂದ ಇನ್ಶೂರರ್ ಗೆ ಬದಲಾಗುತ್ತದೆ. ಇದನ್ನು ಈ ಮೇಲೆ ನೀವೇ ಓದಿದ್ದೀರಿ.
ಡಯಾಬಿಟೀಸ್ ಹೆಲ್ತ್ ಇನ್ಶೂರೆನ್ಸ್ ನಲ್ಲಿ ಕವರ್ ಆಗಿರುತ್ತದೆ ಆದರೆ ಕೆಲವು ಷರತ್ತುಗಳ ಮೇಲೆ ಅವಲಂಬಿಸುತ್ತದೆ. ಅವೇನೆಂದರೆ, ನೀವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಖರೀದಿಸುವ ಸಮಯದಲ್ಲಿ ಡಯಾಬಿಟೀಸ್ಕ್ಕೆ ತುತ್ತಾಗಿದ್ದರೆ, ನಿಮಗಿರುವ ಡಯಾಬಿಟೀಸ್ದ ಪ್ರಕಾರ, ನಿಮ್ಮ ಡಯಾಬಿಟೀಸ್ ನಿಯಂತ್ರಣದ ಮಟ್ಟ ಮತ್ತು ಎಷ್ಟು ಸಮಯದಿಂದ ನೀವು ಇದನ್ನು ಹೊಂದಿದ್ದೀರಿ, ಇತ್ಯಾದಿ.
“ಕೇವಲ ಸ್ಥೂಲಕಾಯದವರಿಗೆ ಡಯಾಬಿಟೀಸ್ ಬರುತ್ತದೆ” ಇದು ನಿಜವಲ್ಲ. ಸ್ಥೂಲಕಾಯ ಇಲ್ಲದವರೂ ಡಯಾಬಿಟೀಸಿಗೆ ತುತ್ತಾಗಲು ಸಾಧ್ಯ ಹಾಗೂ ದಪ್ಪವಿದ್ದವರೂ ಸಹ ಇದಕ್ಕೆ ತುತ್ತಾಗದೇ ಇರಬಹುದು.
ಡಯಾಬಿಟೀಸಿಗೆ ತುತ್ತಾಗಲು ಯಾವುದೇ ಒಂದು ಅಂಶ ಕಾರಣವಲ್ಲ ಆದರೆ ಹಲವು ಕಾರಣಗಳಿರಬಹುದು ಇವುಗಳಲ್ಲಿ ಕೌಟುಂಬಿಕ ಇತಿಹಾಸ, ಆಲಸ್ಯಭರಿತ ಜೀವನಶೈಲಿ, ದೇಹದಲ್ಲಿ ಗ್ಲುಕೋಸ್ ಅಥವಾ ಇನ್ಸುಲಿನ್ ನ ತಯಾರಿ ಹಾಗೂ ವಿತರಣೆಯಲ್ಲಿ ಕೆಲವು ಕಾರಣಗಳಿಂದ ಆಗುವ ತೊಡಕುಗಳು, ಇಂತಹ ಕಾರಣಗಳು ಸೇರಿವೆ ಹಾಗೂ ಇದು ಮುಂದೆ ಹೋಗಿ ನಿಮಗೆ ಡಯಾಬಿಟೀಸ್ ಅನ್ನು ನೀಡಬಹುದು.
“ಅತಿಯಾಗಿ ಸಿಹಿತಿಂಡಿಗಳನ್ನು ಸೇವಿಸಿದರೆ ನಿಮಗೆ ಡಯಾಬಿಟೀಸ್ ಬರುವುದು!” ಇಲ್ಲ ಅನಾರೋಗ್ಯಕರ ಹಾಗೂ ಸರಿಯಲ್ಲದ ಆಹಾರ ಅಪಾಯಕಾರಿಯಾಗಿದ್ದರೂ, ಅತಿಯಾದ ಸಕ್ಕರೆ ಸೇವನೆಯಂತೂ ಡಯಾಬಿಟೀಸಿಗೆ ತುತ್ತಾಗಲೂ ಏಕೈಕ ಕಾರಣವಲ್ಲ.
ಮೇಲೆ ಕೊಟ್ಟಿರುವ ಹಾಗೆ, ಡಯಾಬಿಟೀಸಿನ ಹಲವು ಅಂಶಗಳ ಸಂಯೋಜನೆಯಿಂದ ಬರಬಹುದು. ಅವುಗಳು ಹೀಗಿವೆ, ಜನನದ ಸಮಯದ ಗರ್ಭಾಶಯದ ಮೇಲಾದ ಪರಿಣಾಮಗಳು, ಕೌಟುಂಬಿಕ ಇತಿಹಾಸ, ಜೀವನಶೈಲಿ, ದೈಹಿಕ ಬಲಿಷ್ಠತೆ ಇಲ್ಲದೇ ಇರುವುದು, ಹೆಚ್ಚುತ್ತಿರುವ ವಯಸ್ಸು, ಅಧಿಕ ರಕ್ತದೊತ್ತಡ, ಅಧಿಕ ಕೊಬ್ಬಿನಾಂಶ, ಇತ್ಯಾದಿ. ಸರಳ ಶಬ್ದಗಳಲ್ಲಿ ಹೇಳಬೇಕೆಂದರೆ, ಒಬ್ಬ ವ್ಯಕ್ತಿ ಅಧಿಕ ಸಿಹಿಯನ್ನು ಸೇವಿಸದೇ ಇದ್ದರೂ ಸಹ ಡಯಾಬಿಟೀಸಿಗೆ ತುತ್ತಾಗಬಹುದು!
“ಡಯಾಬಿಟೀಸ್ ಕೇವಲ ವಯಸ್ಸಾದವರಿಗೆ ಬರುತ್ತದೆ” ವಯಸ್ಸದಾವರು(45+ ಕ್ಕಿಂತ ಮೇಲ್ಪಟ್ಟವರು) ಡಯಾಬಿಟೀಸಿಗೆ ತುತ್ತಾಗುವ ಸಂಭಾವನೆ ಹೆಚ್ಚಿದ್ದರೂ, ಇತ್ತೀಚಿನ ಪ್ರವೃತ್ತಿ, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಹೇಗಿದೆಯೆಂದರೆ ಹೆಚ್ಚು ಹೆಚ್ಚು ಯುವಕರು ಇದಕ್ಕೆ ತುತ್ತಾಗುತ್ತಿದ್ದಾರೆ.
ಅನಾರೋಗ್ಯಕರ ಜೀವನಶೈಲಿಯೇ ಇದಕ್ಕೆ ಮುಖ್ಯ ಕಾರಣವಾಗಿದೆ - ಹೆಲ್ತ್ ಕರ ಆಹಾರ ಸೇವಿಸದೇ ಇರುವುದನ್ನು ಸೇರಿ, ಆದರೆ ಅಷ್ಟಕ್ಕೆ ಸೀಮಿತವಾಗದೆ, ಹೆಚ್ಚು ದೇಹ ಚಲನೆ ಇಲ್ಲದೆ ಇರುವುದು ಎಂದರೆ ದೈಹಿಕ ಪುಷ್ಠಿ ಇಲ್ಲದೇ ಇರುವುದು ಇತ್ಯಾದಿ. ಹೀಗಾಗಿ ಇಂದಿನ ಕಾಲದಲ್ಲಿ ಕೇವಲ ವಯಸ್ಸಾದವರಿಗೆ ಮಾತ್ರ ಡಯಾಬಿಟೀಸ್ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ!
“ನಿಮ್ಮ ಅಜ್ಜ ಅಜ್ಜಿಗೆ ಡಯಾಬಿಟೀಸ್ ಇದ್ದರೆ ನಿಮಗೂ ಡಯಾಬಿಟೀಸ್ ಆಗುತ್ತದೆ!” ಡಯಾಬಿಟೀಸ್ ಯಾಗುವುದರಲ್ಲಿ ನಿಮ್ಮ ಕೌಟುಂಬಿಕ ಇತಿಹಾಸ ಹಾಗೂ ಅನುವಂಶಿಯತೆ ಪಾತ್ರ ವಹಿಸಿದರೂ, ಅದೇ ಒಂದು ಕಾರಣ ಆಗಲಾರದು, ವಾಸ್ತವದಲ್ಲಿ, ಯಾವುದೇ ಕೌಟುಂಬಿಕ ಇತಿಹಾಸ ಇಲ್ಲದಿದ್ದರೂ ನೀವು ಡಯಾಬಿಟೀಸಿಗೆತುತ್ತಾಗಬಹುದು.
ಜೊತೆಯಲ್ಲಿ, ನಿಮ್ಮ ಅಜ್ಜ ಅಜ್ಜಿ ಡಯಾಬಿಟೀಸ್ ರೋಗಿಯಾಗಿದ್ದ ಮಾತ್ರಕ್ಕೆ ನಿಮಗೂ ಡಯಾಬಿಟೀಸ್ ಆಗುವುದು ಖಚಿತವೇನಲ್ಲ! ನಮ್ಮ ವಿಸ್ತಾರವಾದ ಡಯಾಬಿಟೀಸ್ ಹೆಲ್ತ್ ಮಾರ್ಗದರ್ಶಿಯಲ್ಲಿ ಡಯಾಬಿಟೀಸ್ ನಿವಾರಣೆ ಹಾಗೂ ಇದರ ಕಾರಣಗಳ ಬಗ್ಗೆ ಹೆಚ್ಚಾಗಿ ತಿಳಿಯಿರಿ.
“ನೀವು ಡಯಾಬಿಟೀಸ್ ರೋಗಿ ಆಗಿರುವ ಬಗ್ಗೆ ನಿಮ್ಮ ಇನ್ಶೂರರ್ ಗೆ ತಿಳಿಸಬಾರದು” . - ದುರಾದೃಷ್ಟ ಏನೆಂದರೆ ಈಗಲೂ ಜನರಿಗೆ ಇನ್ಶೂರೆನ್ಸ್ ನ ಪ್ರತಿ ಅವಿಶ್ವಾಸವಿದೆ. ಆದರೆ, ನಾವು ನಮ್ಮ ಎಲ್ಲಾ ಕಾರ್ಯಗಳ ಬಗ್ಗೆ ಪಾರದರ್ಶಕವಾಗಿದ್ದು, ಈ ಭಾವನೆಯನ್ನು ಬದಲಿಸಲು ಪ್ರಯತ್ನಿಸುತ್ತಿರುತ್ತೇವೆ.
ನೀವು ನಿಮ್ಮ ಇನ್ಶೂರೆನ್ಸ್ ಪಾಲಿಸಿಯನ್ನು ನಮ್ಮಿಂದ ಅಥವಾ ಇತರ ಯಾವುದೇ ಇನ್ಶೂರರ್ ಇಂದ ಖರೀದಿಸುವಾಗ, ನೀವು ನಿಮ್ಮ ಪ್ರಸ್ತುತ ಹಾಗೂ ವಾಸ್ತವ ಹೆಲ್ತ್ ಸ್ಥಿತಿಯನ್ನು ಅವರಿಗೆ ತಿಳಿಸದೇ ಇದ್ದರೆ, ಇದು ನಿಮಗೆ ಮುಂಬರುವ ಹಂತಗಳಲ್ಲಿ ಅಥವಾ ಅದಕ್ಕಿಂತ ಮುಂಚೆಯೇ ತೊಂದರೆಗಳನ್ನೇ ಉಂಟುಮಾಡುವುದು - ಅಂದರೆ ನಿಮ್ಮ ಆರಂಭಿಕ ವೈದ್ಯಕೀಯ ತಪಾಸಣೆಗಳ ಸಮಯದಲ್ಲಿ. ಅದಕ್ಕಾಗಿ ಯಾವತ್ತಿದ್ದರೂ ಪಾರದರ್ಶಕವಾಗಿರುವುದೇ ಒಳಿತು.