ಹೆಲ್ತ್ ಇನ್ಶೂರೆನ್ಸ್ ಕ್ಷೇತ್ರದಲ್ಲಿ ಬಳಸುವ ಪರಿಭಾಷೆಗಳು ಅರ್ಥಮಾಡಿಕೊಳ್ಳುವುದು ಕೊಂಚ ಕಷ್ಟ. ಆದರೆ ಅವುಗಳನ್ನು ನಿಸ್ಸಂಶಯವಾಗಿ ನಿರ್ಲಕ್ಷ್ಯಿಸುವುದು ಸಾಧ್ಯವಿಲ್ಲ. ಈ ಕ್ಷೇತ್ರದಲ್ಲಿ ನಿರ್ಲಕ್ಷ್ಯ ಅನ್ನುವುದು ಖುಷಿಯಂತೂ ಅಲ್ಲ. ಹೆಚ್ಚು ತಿಳಿದುಕೊಂಡಷ್ಟೂ ನಿಮ್ಮ ಒಳಿತಿಗಾಗಿ ಒಳ್ಳೆಯ ಆಯ್ಕೆಯನ್ನು ಮಾಡುವುದು ಸುಲಭ.
ಹೆಲ್ತ್ ಇನ್ಶೂರೆನ್ಸ್ ಕ್ಷೇತ್ರದಲ್ಲಿ ಡಿಡಕ್ಟಿಬಲ್ ಅನ್ನುವುದು ಅಂಥದ್ದೊಂದು ಪರಿಭಾಷೆ. ಈ ಕುರಿತು ನಿಮಗೆ ಗೊಂದಲವಿದ್ದರೆ ತಲೆಕೆಡಿಸಿಕೊಳ್ಳದಿರಿ. ನೀವು ಸುಲಭವಾಗಿ ಅರ್ಥೈಸಿಕೊಳ್ಳುವಂತೆ ಮಾಡಲು ನಾವು ಸರಳವಾಗಿ ತಿಳಿಸಿಕೊಡುತ್ತೇವೆ.
ಗ್ರಾಹಕರಿಗಾಗಿ ಎಲ್ಲಾ ನಿಯಮಗಳನ್ನೂ ತುಂಬಾ ಸರಳವಾಗಿ ವಿವರಿಸಬೇಕು ಎಂಬುದನ್ನು ಡಿಜಿಟ್ ತಂಡ ನಂಬುತ್ತದೆ ಮತ್ತು ಅದನ್ನು ಪಾಲಿಸುತ್ತದೆ. ಸರಳತೆಯಿಂದ ಪಾರದರ್ಶಕತೆ ಸಾಧ್ಯ. ಅಂತಿಮವಾಗಿ ನಮಗೆಲ್ಲರಿಗೂ ಬೇಕಿರುವುದು ಪಾರದರ್ಶಕತೆ. ಅಲ್ವೇ?
ಡಿಡಕ್ಟಿಬಲ್ ಎಂದರೆ ಕ್ಲೈಮ್ ಮಾಡುವ ಸಂದರ್ಭದಲ್ಲಿ ಅದರ ಭಾಗವಾಗಿ ಇನ್ಶೂರ್ಡ್ ಪಾವತಿಸಬೇಕಾದ ಅಮೌಂಟ್, ಮತ್ತು ಬಾಕಿ ಉಳಿದ ಅಮೌಂಟನ್ನೆಲ್ಲಾ ಇನ್ಶೂರೆನ್ಸ್ ಕಂಪನಿ ಪಾವತಿಗೊಳಿಸುತ್ತದೆ. ಉದಾಹರಣೆ ಬೇಕೇ? ಕೆಳಗಿನ ವಿವರಗಳನ್ನು ಓದಿ.
ಹೇಗೆ ಕೆಲಸ ಮಾಡುತ್ತದೆ? - ನಿಮ್ಮ ಪ್ಲಾನ್ ಪ್ರಕಾರ ಡಿಡಕ್ಟಿಬಲ್ ಅಮೌಂಟ್ ರೂ.10000 ಎಂದಿಟ್ಟುಕೊಳ್ಳಿ. ಹೆಲ್ತ್ ಕೇರ್ ಕ್ಲೈಮ್ ರೂ.35000 ಇದೆ. ಆಗ ನಿಮ್ಮ ಇನ್ಶೂರೆನ್ಸ್ ಕಂಪನಿ ನಿಮಗೆ ಪಾವತಿಸುವ ಹೊಣೆಗಾರಿಕೆ ಹೊಂದಿರುವುದು ರೂ.35000- ರೂ.10000= ರೂ.25000. ರೂ.10000ದಷ್ಟನ್ನು ನೀವು ನಿಮ್ಮ ಜೇಬಿನಿಂದ ಕೊಡಬೇಕಾಗುತ್ತದೆ. ಯಾಕೆಂದರೆ ಅದು ನಿಮ್ಮ ಪಾಲಿಸಿ ಪ್ಲಾನ್ ಪ್ರಕಾರ ಡಿಡಕ್ಟಿಬಲ್ ಅಮೌಂಟ್.
ಅಥವಾ ಒಂದು ವೇಳೆ ನಿಮ್ಮ ಹೆಲ್ತ್ ಕೇರ್ ಕ್ಲೈಮ್ ರೂ.15000 ಆಗಿದ್ದು, ನಿಮ್ಮ ಪ್ಲಾನ್ ಪ್ರಕಾರ ಡಿಡಕ್ಟಿಬಲ್ ಅಮೌಂಟ್ ರೂ.20000 ಆಗಿದ್ದರೆ, ನಿಮ್ಮ ಇನ್ಶೂರೆನ್ಸ್ ಕಂಪನಿ ಯಾವುದೇ ಅಮೌಂಟನ್ನು ನಿಮಗೆ ಪಾವತಿಸುವುದಿಲ್ಲ. ಯಾಕೆಂದರೆ ಅಮೌಂಟ್ ಡಿಡಕ್ಟಿಬಲ್ ಮಿತಿಗಿಂತ ಕಡಿಮೆ ಇರುತ್ತದೆ.
ಅಮೌಂಟ್ ಡಿಡಕ್ಟಿಬಲ್ ಅಮೌಂಟ್ಗಿಂತ ಜಾಸ್ತಿ ಇದ್ದರೆ ಮಾತ್ರ ಇನ್ಶೂರೆನ್ಸ್ ಕಂಪನಿ ಪಾವತಿಸುವ ಹೊಣೆಗಾರಿಕೆ ಹೊಂದಿರುತ್ತದೆ.
ಇನ್ನೂ ಗೊಂದಲವಿದೆಯೇ? ಈ ಕೆಳಗಿನ ರೀತಿ ಅರ್ಥ ಮಾಡಿಕೊಳ್ಳಿ:
ಒಂದು ಸಣ್ಣ ಹಡುಗಿಗೆ ಒಂದು ಗೊಂಬೆ ಕೊಡಲಾಗುತ್ತದೆ. ಒಂದು ವೇಳೆ ಈ ಗೊಂಬೆ ಗಾಯಗೊಂಡರೆ ಅವಳು ಆಕೆಯ ಪಿಗ್ಗಿ ಬ್ಯಾಂಕಿನಿಂದ ಸ್ವಲ್ಪ ಹಣ ಕೊಡಬೇಕು ಎಂದು ಹೇಳಲಾಗುತ್ತದೆ ಎಂದಿಟ್ಟುಕೊಳ್ಳಿ. ಈಗ ನಿಮಗೇನನ್ನಿಸುತ್ತದೆ? ಈಗ ಆಕೆ ಆ ಗೊಂಬೆಯ ಜೊತೆ ಆಟ ಆಡುವಾಗ ಎಚ್ಚರಿಕೆಯಿಂದ ಇರುತ್ತಾಳೆ ಅಲ್ಲವೇ.
ಖಂಡಿತಾ ಹೌದು. ಆಕೆ ತುಂಬಾ ಎಚ್ಚರಿಕೆಯಿಂದ ಇರುತ್ತಾಳೆ. ಯಾಕೆಂದರೆ ಒಂದು ವೇಳೆ ಗೊಂಬೆ ಹಾಳಾದರೆ ಅವಳು ಆಕೆಯ ಪಿಗ್ಗಿ ಬ್ಯಾಂಕಿನಿಂದ ಅಥವಾ ಉಳಿತಾಯದಿಂದ ದುಡ್ಡು ಕಳೆದುಕೊಳ್ಳಬಹುದು ಎಂದು ಆಕೆಗೆ ತಿಳಿದಿರುತ್ತದೆ. ಆಕೆ ಆಕೆಯ ಪಿಗ್ಗಿ ಬ್ಯಾಂಕಿನಿಂದ ಕೊಡಬೇಕಾದ ಅಮೌಂಟೇ ಡಿಡಕ್ಟಿಬಲ್ ಅಮೌಂಟ್. ಸರಳವಾಗಿದೆ, ಅಲ್ಲವೇ?
ಎಲ್ಲಾ ಇನ್ಶೂರೆನ್ಸ್ ಕಂಪನಿಗಳೂ ಈ ರೀತಿಯ ನಿಯಮವನ್ನು ಹಾಕಿಕೊಂಡಿರುತ್ತವೆ. ಇನ್ಶೂರರ್ ಸಣ್ಣಪುಟ್ಟ ಕಾರಣಕ್ಕೆ ಕ್ಲೈಮ್ ಮಾಡುವುದನ್ನು ಮಿತಿಗೊಳಿಸಲು ಮತ್ತು ಒಟ್ಟು ಸಮ್ನ ಒಂದು ಭಾಗವನ್ನು ಅವರೇ ಪಾವತಿಸಬೇಕು ಎಂಬುದನ್ನು ಮೊದಲೇ ತಿಳಿಸಲು ಈ ರೀತಿ ಮಾಡಲಾಗುತ್ತದೆ.
ನಿಜವಾದ ಕ್ಲೈಮ್ಗಳು ಮಾತ್ರ ಸಾಧ್ಯವಾಗಬೇಕು ಅನ್ನುವುದು ಇದರ ಉದ್ದೇಶ. ಇವೆಲ್ಲಾ ಕಾರಣಗಳಿಂದಾಗಿ ಯಾವುದೇ ನಿರ್ದಿಷ್ಟ ಹೆಲ್ತ್ ಇನ್ಶೂರೆನ್ಸ್ ಪಡೆಯುವ ಮೊದಲೇ ಹೆಲ್ತ್ ಇನ್ಶೂರೆನ್ಸ್ನ ಡಿಡಕ್ಟಿಬಲ್ ವಿನ್ಯಾಸವನ್ನು ಅರ್ಥೈಸಿಕೊಳ್ಳುವುದು ತುಂಬಾ ಮುಖ್ಯ.
ಇನ್ನಷ್ಟು ತಿಳಿದುಕೊಳ್ಳಲು:
ಕಂಪಲ್ಸರಿ ಡಿಡಕ್ಟಿಬಲ್ |
ವಾಲಂಟರಿ ಡಿಡಕ್ಟಿಬಲ್ |
ಇದು ಇನ್ಶೂರೆನ್ಸ್ ಕಂಪನಿ ನಿಗದಿಗೊಳಿಸಿರುವ, ಯಾವಾಗಲಾದರೂ ಕ್ಲೈಮ್ ಮಾಡುವ ಸಂದರ್ಭದಲ್ಲಿ ಇನ್ಶೂರ್ಡ್ ಪಾವತಿಗೊಳಿಸಬೇಕಾದ ಅಮೌಂಟ್. |
ಇದು ಇನ್ಶೂರ್ಡ್ ಆಯ್ಕೆ ಮಾಡಿಕೊಂಡ ಅಮೌಂಟ್, ಕ್ಲೈಮ್ ಮಾಡುವ ಸಂದರ್ಭದಲ್ಲಿ ತಾನೇ ತನ್ನ ಜೇಬಿನಿಂದ ಪಾವತಿ ಮಾಡುತ್ತೇನೆ ಎಂದು ಒಪ್ಪಿಕೊಂಡಿರುವ ಅಮೌಂಟ್. ಆರ್ಥಿಕ ಸ್ಥಿತಿಗತಿ ಮತ್ತು ಮೆಡಿಕಲ್ ವೆಚ್ಚಗಳಿಗೆ ಅನುಗುಣವಾಗಿ ಪಾಲಿಸಿಹೋಲ್ಡರ್ ಗಳು ಆಯ್ಕೆ ಮಾಡಿದ ಅಮೌಂಟ್ ಬದಲಾಗುತ್ತದೆ. |
ಕಂಪಲ್ಸರಿ ಡಿಡಕ್ಟಿಬಲ್ ಅಮೌಂಟ್ ಪ್ರಕಾರ ಪ್ರೀಮಿಯಂನಲ್ಲಿ ಕಡಿಮೆ ಆಗುವುದಿಲ್ಲ, ಪ್ರೀಮಿಯಂ ಅದೇ ಇರುತ್ತದೆ. |
ಡಿಡಕ್ಟಿಬಲ್ ಅಮೌಂಟ್ ಹೆಚ್ಚು ಇದ್ದಾಗ ಪ್ರೀಮಿಯಂ ಕಡಿಮೆ ಇರುತ್ತದೆ. |
ಕ್ಲೈಮ್ ಮಾಡುವ ಸಂದರ್ಭದಲ್ಲಿ ಇನ್ಶೂರ್ಡ್ ಇನ್ಶೂರೆನ್ಸ್ ಕಂಪನಿ ನಿಗದಿಗೊಳಿಸಿರುವ ಕಂಪಲ್ಸರಿ ಡಿಡಕ್ಟಿಬಲ್ ಅಮೌಂಟನ್ನು ಮಾತ್ರ ಪಾವತಿಸುತ್ತಾರೆ. |
ಕ್ಲೈಮ್ ಮಾಡುವ ಸಂದರ್ಭದಲ್ಲಿ ಇನ್ಶೂರ್ಡ್ ಇನ್ಶೂರೆನ್ಸ್ ಕಂಪನಿ ನಿಗದಿಗೊಳಿಸಿರುವ ಕಂಪಲ್ಸರಿ ಡಿಡಕ್ಟಿಬಲ್ ಅಮೌಂಟನ್ನು ಮಾತ್ರ ಪಾವತಿಸುತ್ತಾರೆ. |
ಈಗ ಯೋಚನೆ ಮಾಡಿ. ಒಂದು ವೇಳೆ ಕ್ಲೈಮ್ ಮಾಡುವ ಹಂತದಲ್ಲಿ ಒಂದು ಭಾಗವನ್ನು ನೀವು ನಿಮ್ಮ ಜೇಬಿನಿಂದ ಪಾವತಿ ಮಾಡಬೇಕಾಗಿ ಬಂದರೆ, ಅನಗತ್ಯವಾಗಿ ಕ್ಲೈಮ್ ಮಾಡುವಾಗ ನೀವು ಎರಡು ಬಾರಿ ಯೋಚನೆ ಮಾಡುವುದಿಲ್ಲವೇ? ಖಂಡಿತಾ ಯೋಚಿಸುತ್ತೀರಿ. ಇವೆಲ್ಲವೂ ನಿಮ್ಮ ಒಳಿತಿಗಾಗಿಯೇ ಎಂಬುದು ನೀವು ನಂಬಬೇಕು.
ಇವೆಲ್ಲವೂ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿರುವ ಗಮನಾರ್ಹ ಅಂಶಗಳು. ಹಾಗಾಗಿ ಹೆಲ್ತ್ ಇನ್ಶೂರೆನ್ಸ್ ಪಡೆಯುವಾಗ ಈ ಮೇಲೆ ಚರ್ಚಿಸಿದ ಅಂಶಗಳನ್ನು ತುಂಬಾ ಎಚ್ಚರಿಕೆಯಿಂದ ಗಮನಿಸಿ ಯೋಚಿಸಿ ನಿರ್ಧರಿಸಿ. ವಾಲಂಟರಿ ಡಿಡಕ್ಟಿಬಲ್ ಆರಿಸಿಕೊಳ್ಳುವಾಗ ಪ್ರೀಮಿಯಂ ಕಡಿಮೆ ಇರುತ್ತದೆ ಎಂಬ ಒಂದು ಅಂಶ ಮಾತ್ರ ನಿಮ್ಮ ನಿರ್ಧಾರಕ್ಕೆ ಕಾರಣವಾಗಬಾರದು. ನಿಮಗೆ ಇರಬಹುದಾದ ಆರೋಗ್ಯ ಸಮಸ್ಯೆ ಮತ್ತು ನೀವು ಕ್ಲೈಮ್ ಮಾಡಬೇಕಾಗಿರುವಾಗಿನ ಸಂದರ್ಭದ ತೀವ್ರತೆ ಎಲ್ಲವನ್ನೂ ಗಮನಿಸಿರಬೇಕು. ಮೆಡಿಕಲ್ ವೆಚ್ಚಗಳು ಕಡಿಮೆ ಬರಬಹುದು ಎಂದುಕೊಂಡಿರುವವರು ಹೆಚ್ಚು ಡಿಡಕ್ಟಿಬಲ್ ಅಮೌಂಟ್ ಇರುವ ಯೋಜನೆಯನ್ನು ಆರಿಸಿಕೊಳ್ಳಬಹುದು. ಒಂದು ವೇಳೆ ನೀವು ಇನ್ಶೂರೆನ್ಸ್ ಕ್ಲೈಮ್ ಮಾಡುವ ಸಂದರ್ಭದಲ್ಲಿ ಹೆಚ್ಚು ಹಣ ಪಾವತಿ ಮಾಡುವುದನ್ನು ಬಯಸುವವರು ಅಲ್ಲವಾದರೆ ವಾಲಂಟರಿ ಡಿಡಕ್ಟಿಬಲ್ ವಿಧಾನವನ್ನು ಆರಿಸಿಕೊಳ್ಳದೇ ಇರುವುದೇ ಒಳಿತು ಅಥವಾ ಕಡಿಮೆ ಅಮೌಂಟ್ ಆರಿಸಿಕೊಳ್ಳಿ. ನೀವು ಆಯ್ಕೆ ಮಾಡಿಕೊಳ್ಳುತ್ತಿರುವ ಯೋಜನೆಯ ಅಮೌಂಟ್ ನಿಮಗೆ ಸೂಕ್ತವಾಗಿದೆ ಎಂಬುದು ನಿಮಗೆ ನಿಶ್ಚಿತವಾಗಿ ಗೊತ್ತಿದ್ದರೆ ಮಾತ್ರ ನೀವು ವಾಲಂಟರಿ ಡಿಡಕ್ಟಿಬಲ್ ಆಯ್ಕೆ ಮಾಡಿಕೊಳ್ಳಬಹುದು.
ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದರೆ ನಮ್ಮನ್ನು ಸಂಪರ್ಕಿಸಿ. ನಮಗೂ ನಿಮಗೂ ಇರುವುದು ಒಂದು ಕ್ಲಿಕ್ನ ಅಂತರ ಮಾತ್ರ.