ಡೇಕೇರ್ ಚಿಕಿತ್ಸೆಗಳು ಹಾಸ್ಪಿಟಲೈಸೇಷನ್ ಅಗತ್ಯವಿರುವ ಮೆಡಿಕಲ್ ಚಿಕಿತ್ಸೆಗಳು ಮತ್ತು ಪ್ರೊಸೀಜರ್ ಗಳನ್ನು ಸೂಚಿಸುತ್ತವೆ. ಅಂದರೆ 24-ಗಂಟೆಗಳ ಅವಧಿಯನ್ನು ಮೀರಬಾರದು. ಆದರೆ ಮೆಡಿಕಲ್ ಪ್ರಗತಿಗಳು ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ, ಈಗ ಚಿಕಿತ್ಸಾ ಪ್ರೊಸೀಜರ್ ಗಳು ಸಾಕಷ್ಟು ವೇಗವಾಗಿ, ಅಲ್ಪ ಸಮಯದಲ್ಲೇ ಆಗುತ್ತವೆ!
ಡೇಕೇರ್ ಚಿಕಿತ್ಸೆಗಳ ಜನಪ್ರಿಯ ಉದಾಹರಣೆಗಳು ಎಂದರೆ ಕಣ್ಣಿನ ಪೊರೆ (ಕ್ಯಾಟರಾಕ್ಟ್) ಶಸ್ತ್ರಚಿಕಿತ್ಸೆಗಳು, ಮೂಗಿನ ಸೈನಸ್ ಆಸ್ಪಿರೇಶನ್, ಕ್ಯಾನ್ಸರ್ ಕೀಮೋಥೆರಪಿ, ಕ್ಯಾನ್ಸರ್ ರೇಡಿಯೊಥೆರಪಿ, ಇತ್ಯಾದಿ.
ಡಿಜಿಟ್ ಸರಳೀಕರಣ: ಅಗತ್ಯವಿರುವ ಪ್ರೊಸೀಜರ್ ಕೇವಲ ಒಂದು ದಿನದ ಸಮಯ ತೆಗೆದುಕೊಳ್ಳುವಾಗ, ಅನಗತ್ಯವಾಗಿ ಆಸ್ಪತ್ರೆಯಲ್ಲಿ ಏಕೆ ಉಳಿಯಬೇಕು!
ಗಮನಿಸಿ: ಡೇಕೇರ್ ಪ್ರೊಸೀಜರ್ ಗಳ ಬಗ್ಗೆ ನೆನಪಿನಲ್ಲಿಡಬೇಕಾದ ಪ್ರಮುಖ ವಿಷಯವೆಂದರೆ, ಎಲ್ಲಾ ಅಲ್ಪಾವಧಿಯ ಚಿಕಿತ್ಸೆಗಳನ್ನು ಡೇಕೇರ್ ಪ್ರೊಸೀಜರ್ ಗಳೆಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ, ಇದನ್ನು ಒಪಿಡಿ ಸಮಾಲೋಚನೆಗಳೊಂದಿಗೆ ಗೊಂದಲ ಮಾಡಿಕೊಳ್ಳಬಾರದು.
ಡೇಕೇರ್ ಚಿಕಿತ್ಸೆಯು ಕಟ್ಟುನಿಟ್ಟಾಗಿ ಚಿಕಿತ್ಸೆಗಳು, ಶಸ್ತ್ರಚಿಕಿತ್ಸೆಗಳು ಮತ್ತು ಆಪರೇಷನ್ಗಳನ್ನು ಸೂಚಿಸುತ್ತದೆ. ಈ ಚಿಕಿತ್ಸೆಗಳಿಗೆ ಮೆಡಿಕಲ್ ತಂತ್ರಜ್ಞಾನ ಮತ್ತು ಪ್ರೊಸೀಜರ್ ಗಳ ಪ್ರಗತಿಯಿಂದಾಗಿ 24-ಗಂಟೆಗಳ ಕಡಿಮೆ ಹಾಸ್ಪಿಟಲೈಸೇಷನ್ ಅಗತ್ಯವಿರುತ್ತದೆ.
24-ಗಂಟೆಗಳನ್ನು ಮೀರಿದ ಹಾಸ್ಪಿಟಲೈಸೇಷನ್ ಆದರೆ, ಅವು ನಿಮ್ಮ ಹೆಲ್ತ್ ಇನ್ಶೂರೆನ್ಸ್ನಲ್ಲಿ "ಆಸ್ಪತ್ರೆ ವೆಚ್ಚಗಳು" ಎಂದು ಕವರ್ ಆಗುತ್ತದೆ. ಮತ್ತು ಮುರಿತಗಳು, ಉಳುಕು ಹಾಗೂ ವೈದ್ಯರ ಸಮಾಲೋಚನೆಗಳಂತಹ ಇತರ ಸಣ್ಣ ಮೆಡಿಕಲ್ ಸಮಸ್ಯೆಗಳಿಗೆ ಅಗತ್ಯವಿರುವ ಒಪಿಡಿ ಸಮಾಲೋಚನೆಗಳು, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ನಿರ್ದಿಷ್ಟಪಡಿಸಿದಂತೆ 'ಒಪಿಡಿ ಪ್ರಯೋಜನ' ಅಥವಾ 'ಒಪಿಡಿ ಕವರ್' ಅಡಿಯಲ್ಲಿ ಕವರ್ ಆಗುತ್ತವೆ.
ಆಗಿನ ದಿನದಲ್ಲಿ, ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು 24-ಗಂಟೆಗಳನ್ನು ಮೀರಿದ ಚಿಕಿತ್ಸೆ ಮತ್ತು ಹಾಸ್ಪಿಟಲೈಸೇಷನ್ ಗಳನ್ನು ಮಾತ್ರ ಕವರ್ ಮಾಡುತ್ತಿದ್ದವು. ಆದರೆ, ಮೆಡಿಕಲ್ ಪ್ರಗತಿ ಮತ್ತು ತಂತ್ರಜ್ಞಾನಕ್ಕೆ ಧನ್ಯವಾದಗಳು. ಇವುಗಳ ಕಾರಣದಿಂದಬಇಂದು ಅನೇಕ ಚಿಕಿತ್ಸೆಗಳನ್ನು ಮೊದಲಿಗಿಂತ ಕಡಿಮೆ ಸಮಯದಲ್ಲಿ ಮಾಡಬಹುದು.
ಇವುಗಳಲ್ಲಿ ಕಣ್ಣಿನ ಪೊರೆ (ಕ್ಯಾಟರಾಕ್ಟ್) ಶಸ್ತ್ರಚಿಕಿತ್ಸೆಗಳು, ಕೀಮೋಥೆರಪಿ, ವಿಕಿರಣ (ರೇಡಿಯೇಶನ್) ಚಿಕಿತ್ಸೆ, ಡಯಾಲಿಸಿಸ್, ಹೈಮೆನೆಕ್ಟಮಿ ಮತ್ತು ಆರ್ತ್ರೋಸ್ಕೊಪಿಕ್ ಮೊಣಕಾಲಿನ ಆಸ್ಪಿರೇಷನ್ ಮುಂತಾದ ಚಿಕಿತ್ಸೆಗಳು ಸೇರಿವೆ.
ಇಂತಹ ಅನೇಕ ಚಿಕಿತ್ಸೆಗಳನ್ನು 24-ಗಂಟೆಗಳ ಒಳಗೆ ಮಾಡಿ ಮುಗಿಸಬಹುದಾಗಿದೆ ಮತ್ತು ಇದರ ಅಗತ್ಯ ಕೇವಲ ಹೆಚ್ಚಿನ ರೋಗಿಗಳಿಗೆ ಮಾತ್ರವಲ್ಲದೆ, ಇದು ಅಧಿಕ ಆರೋಗ್ಯ ವೆಚ್ಚವನ್ನು ಕವರ್ ಮಾಡುವುದರಿಂದ, ಐ.ಆರ್.ಡಿ.ಎ.ಐ (ಇನ್ಶೂರೆನ್ಸ್ ರೆಗ್ಯುಲೇಟರಿ ಆ್ಯಂಡ್ ಡೆವಲಪ್ ಮೆಂಟ್ ಅಥಾರಿಟಿ ಆಫ್ ಇಂಡಿಯಾ) ಸಹ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಇದನ್ನು ಪರಿಚಯಿಸಿದೆ.
ಅದಕ್ಕಾಗಿ ದೇವರಿಗೆ ಧನ್ಯವಾದಗಳು! ಆ ಮೂಲಕ, ಡೇಕೇರ್ ಪ್ರೊಸೀಜರ್ ಗಳು ಮೆಡಿಕಲ್ ಪ್ರಗತಿಯಿಂದಾಗಿ 24-ಗಂಟೆಗಳಿಗಿಂತ ಕಡಿಮೆ ಅವಧಿಯ ಹಾಸ್ಪಿಟಲೈಸೇಷನ್ ಅಗತ್ಯವಿರುವ ಚಿಕಿತ್ಸೆಗಳನ್ನು ಸೂಚಿಸುತ್ತವೆ.
ಇದಕ್ಕೆ ಉತ್ತಮ ಉದಾಹರಣೆಯೆಂದರೆ, ಯಾರಾದರೂ ಕಣ್ಣಿನ ಪೊರೆ (ಕ್ಯಾಟರಾಕ್ಟ್) ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಬೇಕಾದರೆ, ಅವರು ಆಸ್ಪತ್ರೆಯಲ್ಲಿ ಆರೈಕೆಯನ್ನು ಪಡೆಯುತ್ತಾರೆ ಮತ್ತು ನಂತರ ಅದೇ ದಿನದೊಳಗೆ ಡಿಸ್ಚಾರ್ಜ್ ಆಗುತ್ತಾರೆ.
|
ಡೇಕೇರ್ ಪ್ರೊಸೀಜರ್ ಗಳು |
ಒಪಿಡಿ (OPD) |
ಅದರ ಅರ್ಥವೇನು? |
ಡೇಕೇರ್ ಪ್ರೊಸೀಜರ್ ಗಳು ಹಾಸ್ಪಿಟಲೈಸೇಷನ್ ಅಗತ್ಯವಿರುವ ಚಿಕಿತ್ಸೆಗಳನ್ನು ಸೂಚಿಸುತ್ತವೆ, ಆದರೆ ಮೆಡಿಕಲ್ ಪ್ರಗತಿಯಿಂದಾಗಿ 24-ಗಂಟೆಗಳನ್ನು ಮೀರದ ಪಕ್ಷದಲ್ಲಿ ಮಾತ್ರ. |
ಒಪಿಡಿ ಅನ್ನು ಔಟ್ ಪೇಷಂಟ್ ಡಿಪಾರ್ಟ್ಮೆಂಟ್ ಎಂದು ಹೇಳಲಾಗುತ್ತದೆ ಮತ್ತು ನಿಮ್ಮ ದಿನನಿತ್ಯದ ವೈದ್ಯರ ಸಮಾಲೋಚನೆಗಳು ಅಥವಾ ಸಣ್ಣ ಹೊಲಿಗೆಗಳು ಹಾಗೂ ಮುರಿತಗಳಂತಹ ಸಣ್ಣ ಚಿಕಿತ್ಸೆಗಳನ್ನು ಇದು ಸೂಚಿಸುತ್ತದೆ. |
ಹಾಸ್ಪಿಟಲೈಸೇಷನ್ |
< 24 ಗಂಟೆಗಳ ಚಿಕಿತ್ಸೆಯ ಅಗತ್ಯವಿದೆ |
ಯಾವುದೇ ಹಾಸ್ಪಿಟಲೈಸೇಷನ್ ಅಗತ್ಯವಿಲ್ಲ |
ಉದಾಹರಣೆಗಳು |
ಡೇಕೇರ್ ಪ್ರೊಸೀಜರ್ ಗಳ ಉದಾಹರಣೆಗಳಲ್ಲಿ ಚರ್ಮಕ್ಕೆ ಕೀಮೋಸರ್ಜರಿ, ಚರ್ಮದ ಕಸಿ ಮತ್ತು ಪುನಃಸ್ಥಾಪನೆ, ಲಿಗ್ಮೇಂಟ್ ಟಿಯರ್, ಕ್ಯಾಟರಾಕ್ಟ್ ಆಪರೇಷನ್, ಕಾರ್ನಿಯಲ್ ಇನ್ಸಿಶನ್, ರೇಡಿಯೊಥೆರಪಿ ಮತ್ತು ಕೀಮೋಥೆರಪಿ ಸೇರಿದಂತೆ ಅನೇಕ ಮುಂತಾದವುಗಳು ಸೇರಿವೆ. |
ಒಪಿಡಿ ಯ ಉದಾಹರಣೆಗಳಲ್ಲಿ ಸಾಮಾನ್ಯ ಜ್ವರ, ಗಾಯಕ್ಕಾಗಿ ಸಣ್ಣ ಡ್ರೆಸ್ಸಿಂಗ್, ನಿಯಮಿತ ಆರೋಗ್ಯ ತಪಾಸಣೆ ಮತ್ತು ಯಾವುದೇ ಅನಾರೋಗ್ಯ ಅಥವಾ ಕಾಯಿಲೆಗಾಗಿ ನಿಯಮಿತ ವೈದ್ಯರ ಸಮಾಲೋಚನೆಗಳು ಸೇರಿವೆ. |
ಏನನ್ನು ಒಳಗೊಂಡಿದೆ? |
ಹೆಲ್ತ್ ಇನ್ಶೂರೆನ್ಸ್ನಲ್ಲಿ, ಡೇಕೇರ್ ಚಿಕಿತ್ಸೆಗಳನ್ನು ಸಾಮಾನ್ಯವಾಗಿ ಒಟ್ಟು ಸಮ್ ಇನ್ಶೂರ್ಡ್ ವರೆಗೆ ಕವರ್ ಮಾಡಲಾಗುತ್ತದೆ. ಇದು ಡೇಕೇರ್ ಚಿಕಿತ್ಸೆಗಾಗಿ ಕ್ಲೈಮ್ ಮಾಡಲಾದ ಎಲ್ಲಾ ಚಿಕಿತ್ಸಾ ಪೂರ್ವ ಮತ್ತು ಚಿಕಿತ್ಸಾ ನಂತರದ ವೆಚ್ಚಗಳನ್ನು ಒಳಗೊಂಡಿರುತ್ತದೆ. |
ಹೆಲ್ತ್ ಇನ್ಶೂರೆನ್ಸ್ನಲ್ಲಿನ ಒಪಿಡಿ ಪ್ರಯೋಜನಗಳು ಅಥವಾ ಒಪಿಡಿ ಕವರ್ಗಳು ಸಾಮಾನ್ಯವಾಗಿ ನಿರ್ದಿಷ್ಟ ಮೊತ್ತಕ್ಕೆ ಸೀಮಿತವಾಗಿರುತ್ತವೆ ಮತ್ತು ಒಂದು ಇನ್ಶೂರೆನ್ಸ್ ಕಂಪನಿಯಿಂದ ಮತ್ತೊಂದು ಇನ್ಶೂರೆನ್ಸ್ ಕಂಪನಿಗೆ ಭಿನ್ನವಾಗಿರುತ್ತವೆ. ಉದಾಹರಣೆಗೆ, ಅನೇಕ ಹೆಲ್ತ್ ಇನ್ಶೂರೆನ್ಸ್ ಕಂಪನಿಗಳು ವರ್ಷಕ್ಕೆ ₹5,000 ವರೆಗೆ ಒಪಿಡಿ ಅನ್ನು ನೀಡುತ್ತಾರೆ. |
ಡೇಕೇರ್ ಪ್ರೊಸೀಜರ್ ಗಳ ವೆಚ್ಚಗಳು ಆಪರೇಷನ್ ಅಥವಾ ಶಸ್ತ್ರಚಿಕಿತ್ಸೆಯನ್ನು ಮೀರಿ ಹೋಗುತ್ತವೆ. ಡೇಕೇರ್ ಚಿಕಿತ್ಸೆಗಳು ಸಾಮಾನ್ಯವಾಗಿ ಡಯಾಗ್ನೋಸ್ಟಿಕ್ಸ್, ಔಷಧಿಗಳು, ಆಸ್ಪತ್ರೆಯ ದಾಖಲಾತಿ, ವೈಟಲ್ಗಳು, ಚುಚ್ಚುಮದ್ದುಗಳು ಮತ್ತು ಹಾಸ್ಪಿಟಲೈಸೇಷನ್ ನಂತರದ ವೆಚ್ಚಗಳಂತಹ ಅನೇಕ ವೆಚ್ಚಗಳನ್ನು ಒಳಗೊಂಡಿರುತ್ತವೆ.
ಆದ್ದರಿಂದ, ನೀವು ಇವೆಲ್ಲವನ್ನು ಒಟ್ಟಿಗೆ ಸೇರಿಸಿದಾಗ; ನಿರ್ದಿಷ್ಟ ಚಿಕಿತ್ಸೆಯ ಒಟ್ಟು ಬಿಲ್ ನಿಜವಾಗಿಯೂ ಹೆಚ್ಚಾಗಬಹುದು ಮತ್ತು ಆಗ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರಯೋಜನಕ್ಕೆ ಬರುತ್ತದೆ. ಏಕೆಂದರೆ ಇದು ನಿಮ್ಮ ಚಿಕಿತ್ಸೆಗಾಗಿ ಆರ್ಥಿಕವಾಗಿ ನಿಮ್ಮನ್ನು ಕವರ್ ಮಾಡುತ್ತದೆ.