ಹದಗೆಡುತ್ತಿರುವ ಆರೋಗ್ಯವು ಯಾವಾಗಲೂ ಚಿಂತೆಗೆ ಕಾರಣವಾಗುತ್ತದೆ. ಇದು ಸರಳವಾದ ಶೀತವಾಗಿರಲಿ ಅಥವಾ ಹೆಚ್ಚು ತೀವ್ರತರದ ಸ್ಥಿತಿಯಾಗಿರಲಿ, ಅನಾರೋಗ್ಯಗಳು ಜೀವನದಲ್ಲಿ ಅನೇಕ ಸಹಜ ಕೆಲಸಗಳನ್ನೂ ಮಾಡದಂತೆ ತಡೆಯುತ್ತವೆ. ಇದಲ್ಲದೆ, ನೀವು ಉನ್ನತ ಅಧ್ಯಯನದಲ್ಲಿ ಅಥವಾ ಉದ್ಯೋಗದಲ್ಲಿ ತೊಡಗಿದ್ದರೆ, ಇಂತಹ ಆರೋಗ್ಯ ಪರಿಸ್ಥಿತಿಗಳು ನಿಮಗೆ ಮುಖ್ಯವಾದ ನಿಗದಿತ ವೇಳಾಪಟ್ಟಿಯಲ್ಲಿ ರಾಜಿಯಾಗುವಂತೆ ಮಾಡಬಹುದು.
ಅಲ್ಲದೆ, ಇವು ಸಂಭವಿಸಿದಾಗ, ಕೆಲವು ಕಾಯಿಲೆಗಳು ಹೆಚ್ಚು ದುಃಖ ತಂದುಕೊಡುತ್ತವೆ ಮತ್ತು ನಂತರದಲ್ಲಿ ಅವು ತೀವ್ರವಾದ ಡ್ಯಾಮೇಜ್ ಅನ್ನು (ಆರೋಗ್ಯ ಮತ್ತು ಹಣಕಾಸಿನ ವಿಷಯದಲ್ಲಿ) ಉಳಿಸಿಹೋಗುತ್ತವೆ. ಇವುಗಳನ್ನು ಕ್ರಿಟಿಕಲ್ ಇಲ್ನೆಸ್ ಎಂದು ಕರೆಯಲಾಗುತ್ತದೆ ಮತ್ತು ನೀವು ಅವುಗಳಿಗೆ ಸೂಕ್ತವಾಗಿ ಸಿದ್ಧರಾಗಿರದಿದ್ದರೆ ನಿಮ್ಮ ಜೀವನದಲ್ಲಿ ಅವು ಡ್ಯಾಮೇಜ್ ಅನ್ನು ಉಂಟುಮಾಡಬಹುದು.
ಇವುಗಳನ್ನು ಹೆಚ್ಚು ವಿವರವಾಗಿ ನೋಡೋಣ.
ಕ್ರಿಟಿಕಲ್ ಇಲ್ನೆಸ್ ಮಾರಣಾಂತಿಕ ಮತ್ತು ತೀವ್ರವಾದ ಆರೋಗ್ಯ ಪರಿಸ್ಥಿತಿಗಳನ್ನು ಸೂಚಿಸುತ್ತವೆ. ಇವುಗಳಿಗೆ ತೀವ್ರವಾದ ಮೆಡಿಕಲ್ ಕೇರ್ ಅಗತ್ಯವಿರುತ್ತದೆ. ಸಾಮಾನ್ಯವಾಗಿ, ಅಂತಹ ಕಾಯಿಲೆಗಳಿಗೆ ದೀರ್ಘಕಾಲದ ಮೆಡಿಕಲ್ ಕೇರ್ ಅಗತ್ಯವಿರುತ್ತದೆ, ಆಸ್ಪತ್ರೆ ಅಥವಾ ಮನೆಯಲ್ಲಿಯೇ ಚಿಕಿತ್ಸೆ ನೀಡಬಹುದಾಗಿರುತ್ತದೆ.
ಆದ್ದರಿಂದ, ಇತರ ಕಾಯಿಲೆಗಳ ಚಿಕಿತ್ಸೆಗೆ ಹೋಲಿಸಿದರೆ ಕ್ರಿಟಿಕಲ್ ಇಲ್ನೆಸ್ ಚಿಕಿತ್ಸೆಗಳಿಗೆ ಖರ್ಚಾಗುವ ವೆಚ್ಚವು ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ.
ನೀವು ಮಾರಣಾಂತಿಕ ಸ್ಥಿತಿಯಿಂದ ಪೀಡನೆಗೆ ಒಳಗಾಗಿದ್ದರೆ ಸ್ಟ್ಯಾಂಡರ್ಡ್ ಹೆಲ್ತ್ ಪ್ಲಾನ್ ಅದಕ್ಕೆ ಅಗತ್ಯವಿರುವ ಸೂಕ್ತ ರಕ್ಷಣೆ ನೀಡಲು ವಿಫಲವಾಗಬಹುದು. ಉದಾಹರಣೆಗೆ ಕ್ಯಾನ್ಸರ್ ಒಂದು ಕ್ರಿಟಿಕಲ್ ಇಲ್ನೆಸ್ ಆಗಿದ್ದು, ಚಿಕಿತ್ಸೆಗೆ ಗಣನೀಯ ವೆಚ್ಚಗಳನ್ನು ಒಳಗೊಂಡಿರುತ್ತದೆ. ಆ ಚಿಕಿತ್ಸೆ ಸಾಮಾನ್ಯ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ನಲ್ಲಿ ಸಮ್ ಇನ್ಶೂರ್ಡ್ ಗಿಂತ ತುಂಬಾ ಹೆಚ್ಚಿನ ಮೊತ್ತವನ್ನು ಬಯಸುತ್ತದೆ.
ವಿಶೇಷವಾಗಿ ಭಾರತದಲ್ಲಿ ಇಂದು ಗುಣಮಟ್ಟದ ಆರೈಕೆ ತುಂಬಾ ದುಬಾರಿಯಾಗಿದೆ. ಆದ್ದರಿಂದ ಅಂಥಾ ತೀವ್ರ ಪರಿಸ್ಥಿತಿಗಳನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುವ ನಿರ್ದಿಷ್ಟ ಇನ್ಶೂರೆನ್ಸ್ ಪಾಲಿಸಿಯು ಅಗತ್ಯವಾಗಿದೆ. ಈ ಕ್ರಿಟಿಕಲ್ ಇಲ್ನೆಸ್ ಇನ್ಶೂರೆನ್ಸ್ ಪ್ಲಾನ್ ಗಳು ಕಡಿಮೆ ತೀವ್ರತೆಯ ರೋಗಗಳು ಮತ್ತು ಹಾಸ್ಪಿಟಲೈಸೇಷನ್ ವಿರುದ್ಧ ಯಾವುದೇ ಕವರೇಜನ್ನು ನೀಡುವುದಿಲ್ಲ. ಆದರೆ ಪಟ್ಟಿ ಮಾಡಲಾದ ತೀವ್ರತರದ ಪರಿಸ್ಥಿತಿಗಳಲ್ಲಿ ಒಂದನ್ನು ಗುರುತಿಸಿದಾಗ ಮಾತ್ರ ಅನ್ವಯವಾಗುತ್ತದೆ.
ರೆಗ್ಯುಲರ್ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳಲ್ಲಿ ವೈದ್ಯಕೀಯ ಆರೈಕೆಯ ಸಂದರ್ಭದಲ್ಲಿ ಉಂಟಾದ ಖರ್ಚುವೆಚ್ಚಗಳ ಮರುಪಾವತಿಯನ್ನು ನೀವು ಸ್ವೀಕರಿಸುತ್ತೀರಿ.
ಆದಾಗ್ಯೂ, ಕ್ರಿಟಿಕಲ್ ಇಲ್ನೆಸ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಯಾವುದೇ ಕ್ರಿಟಿಕಲ್ ಇಲ್ನೆಸ್ ಪತ್ತೆಯಾದ ಸಂದರ್ಭದಲ್ಲಿ ಅದರ ಚಿಕಿತ್ಸೆಯ ವೆಚ್ಚವನ್ನು ಸರಿದೂಗಿಸುವಷ್ಟು ಒಂದು ದೊಡ್ಡ ಮೊತ್ತವನ್ನು ನೀವು ಪಡೆಯಬಹುದು.
ಉದಾಹರಣೆಗೆ, ಪಾಲಿಸಿಯ ಸಮ್ ಇನ್ಶೂರ್ಡ್ ₹25 ಲಕ್ಷ ಆಗಿದೆ ಎಂದಿಟ್ಟುಕೊಳ್ಳಿ. ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ನೀಡಿರುವ ಕ್ರಿಟಿಕಲ್ ಇಲ್ನೆಸ್ ಪಟ್ಟಿಯಲ್ಲಿ ಇರುವ ಮಾರಣಾಂತಿಕ ಕಾಯಿಲೆಗಳಲ್ಲಿ ಯಾವುದೋ ಒಂದು ಕಾಯಿಲೆ ನಿಮ್ಮಲ್ಲಿ ಕಂಡುಬಂದರೆ, ಆ ತಕ್ಷಣ ನೀವು ಈ ಸಂಪೂರ್ಣ ಮೊತ್ತವನ್ನು ಕ್ಲೈಮ್ ಮಾಡಬಹುದು.
ಇನ್ನಷ್ಟು ಓದಿ: ಕೋವಿಡ್ 19 ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಏನನ್ನು ಕವರ್ ಮಾಡುತ್ತದೆ?
ಕ್ರಿಟಿಕಲ್ ಇಲ್ನೆಸ್ ಗಳ ಪಟ್ಟಿಯಲ್ಲಿ ಬರುವ ಕೆಲವು ಕಾಯಿಲೆಗಳು ಈ ಕೆಳಗಿನಂತಿವೆ, ಅವುಗಳ ಚಿಕಿತ್ಸಾ ವೆಚ್ಚವು ಸಾಮಾನ್ಯವಾಗಿ ಸ್ಟ್ಯಾಂಡರ್ಡ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳ ಸಮ್ ಇನ್ಶೂರ್ಡ್ ಅನ್ನು ಮೀರುತ್ತದೆ.
ಮಯೋಕಾರ್ಡಿಯಲ್ ಇನ್ ಫಾರ್ಕ್ಷನ್ ಅಥವಾ ಹೃದಯಾಘಾತ |
ಮಹಾಪಧಮನಿಯ ಸರ್ಜರಿ |
ಕೊನೆಯ ಹಂತದ ಯಕೃತ್ತಿನ ವೈಫಲ್ಯ |
ತೆರೆದ ಹೃದಯ ಸಿ.ಎ.ಬಿ.ಜಿ (CABG) ಅಥವಾ ಬೈಪಾಸ್ ಸರ್ಜರಿ |
ಅಪಾಲಿಕ್ ಸಿಂಡ್ರೋಮ್ ಅಥವಾ ಪರ್ಸಿಸ್ಟೆಂಟ್ ವೆಜಿಟೇಟಿವ್ ಸ್ಥಿತಿ |
ಹಾನಿಕರವಲ್ಲದ ಬ್ರೈನ್ ಟ್ಯೂಮರ್ ಗಳು |
ಎಂಡ್-ಸ್ಟೇಜ್ ಲಂಗ್ ಫೇಲ್ಯೂರ್ |
ಅಲ್ಜೈಮರ್ ಕಾಯಿಲೆ |
ಮೋಟಾರ್ ನ್ಯೂರಾನ್ ಕಾಯಿಲೆ |
ಒಂದು ನಿರ್ದಿಷ್ಟ ಹಂತವನ್ನು ದಾಟಿದ ಕ್ಯಾನ್ಸರ್ |
ಪೋಲಿಯೊಮೈಲಿಟಿಸ್ |
ಶಾಶ್ವತ ಅಂಗ ಪಾರ್ಶ್ವವಾಯು |
ಲಾಸ್ ಆಫ್ ಲಿಂಬ್ |
ತೀವ್ರತರದ ತಲೆಗೆ ಪೆಟ್ಟು |
ನಿರ್ದಿಷ್ಟ ತೀವ್ರತೆ ಮೀರಿದ ಕೋಮಾ |
ಮಸ್ಕ್ಯೂಲರ್ ಡಿಸ್ಟ್ರೋಫಿ |
ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುವ ಪಾರ್ಶ್ವವಾಯು |
ಮೆಡುಲ್ಲರಿ ಸಿಸ್ಟಿಕ್ ಕಾಯಿಲೆ |
ಅಪ್ಲಾಸ್ಟಿಕ್ ಅನೀಮಿಯಾ |
ತೀವ್ರ ಅಥವಾ ಥರ್ಡ್-ಡಿಗ್ರಿ ಸುಟ್ಟಗಾಯಗಳು |
ಆಂಜಿಯೋಪ್ಲಾಸ್ಟಿ |
ಪಾರ್ಕಿನ್ಸನ್ ಕಾಯಿಲೆ |
ಕಾರ್ಡಿಯೊಮಿಯೊಪತಿ ಅಥವಾ ಹೃದಯ ಸ್ನಾಯುವಿನ ಕಾಯಿಲೆ |
ಕುರುಡುತನ |
ದೀರ್ಘಕಾಲದ ಶ್ವಾಸಕೋಶದ ಕಾಯಿಲೆ |
ಬೋನ್ ಮ್ಯಾರೊ ಟ್ರಾನ್ಸ್ ಪ್ಲಾಂಟ್ |
ಮಲ್ಟಿಪಲ್ ಸ್ಕ್ಲೆರೋಸಿಸ್ಗೆ ಸಂಬಂಧಿಸಿದ ನಿರಂತರ ಲಕ್ಷಣಗಳು |
ಹೃದಯ ಕವಾಟ ಶಸ್ತ್ರಚಿಕಿತ್ಸೆ |
ಮೂತ್ರಪಿಂಡ ವೈಫಲ್ಯ |
ಆರ್ಗನ್ ಟ್ರಾನ್ಸ್ ಪ್ಲಾಂಟ್ |
ಬ್ರೈನ್ ಸರ್ಜರಿ |
ಸ್ವತಂತ್ರ ಅಸ್ತಿತ್ವವನ್ನು ಕಳೆದುಕೊಂಡಿರುವುದು |
ಕಿವುಡುತನ |
ಮಾತು ಕಳೆದುಕೊಂಡಿರುವುದು |
ಆದಾಗ್ಯೂ, ಕ್ರಿಟಿಕಲ್ ಇಲ್ನೆಸ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಬರುವ ಕಾಯಿಲೆಗಳ ಸಂಖ್ಯೆಯು ಒಂದು ಇನ್ಶೂರೆನ್ಸ್ ಕಂಪನಿಯಿಂದ ಇನ್ನೊಂದು ಕಂಪನಿಗೆ ಬದಲಾಗಬಹುದು. ಹೆಚ್ಚಿನ ಮಾಹಿತಿಗಾಗಿ, ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರೊಂದಿಗೆ ನೀವು ಚರ್ಚಿಸಬಹುದು.
ಅಂತಹ ವಿಶೇಷ ಪ್ಲಾನ್ ಗಳ ಅಡಿಯಲ್ಲಿ ಬರುವ ಕ್ರಿಟಿಕಲ್ ಇಲ್ನೆಸ್ ಗಳ ಸಂಪೂರ್ಣ ಪಟ್ಟಿಯನ್ನು ಕಂಪನಿಯು ನಿಮಗೆ ಒದಗಿಸಬಹುದು.
ಕ್ರಿಟಿಕಲ್ ಇಲ್ನೆಸ್ ಪಟ್ಟಿಯ ಬಗ್ಗೆ ನಿಮಗೆ ಈಗಾಗಲೇ ತಿಳಿದಿದೆ. ಈಗ ನೀವು ಪಾಲಿಸಿಯನ್ನು ಖರೀದಿಸುವ ಪ್ರಕ್ರಿಯೆಯನ್ನು ತಿಳಿಯಬೇಕು. ಕ್ರಿಟಿಕಲ್ ಇಲ್ನೆಸ್ ಪಾಲಿಸಿಯನ್ನು ಪಡೆಯಲು ನಿಮಗೆ ಎರಡು ಉಪಯುಕ್ತ ಆಯ್ಕೆಗಳಿವೆ.
ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರದ ವ್ಯಕ್ತಿಗಳು ಸ್ವತಂತ್ರ ಕ್ರಿಟಿಕಲ್ ಇಲ್ನೆಸ್ ಪಾಲಿಸಿ ಖರೀದಿಸುವುದು ಒಳಿತು.
ಆರೋಗ್ಯ ಕಾಳಜಿ ವೆಚ್ಚಗಳಲ್ಲಿ ಗಣನೀಯ ಪ್ರಮಾಣದ ಏರಿಕೆ ಆಗಿರುವುದು ಒತ್ತಡಕ್ಕೆ ಮತ್ತು ಆರೋಗ್ಯ ಹದಗೆಡುವಿಕೆಗೆ ಕಾರಣವಾಗಿದೆ. ವರದಿಯೊಂದರ ಪ್ರಕಾರ 2018-19ರ ಭಾರತದ ಹೆಲ್ತ್ ಕೇರ್ ಹಣದುಬ್ಬರವು ಸುಮಾರು ಶೇ.7.4ರಷ್ಟಿದೆ. ಇದು ದೇಶದ ಒಟ್ಟಾರೆ ಹಣದುಬ್ಬರ ದರವಾದ ಶೇ.3.4ಗಿಂತ ಎರಡು ಪಟ್ಟು ಹೆಚ್ಚು. (1)
ನಿಮ್ಮ ರೆಗ್ಯುಲರ್ ಮೆಡಿಕಲ್ ಇನ್ಶೂರೆನ್ಸ್ ಪ್ಲಾನ್ ಕ್ರಿಟಿಕಲ್ ಇಲ್ನೆಸ್ ಚಿಕಿತ್ಸೆ ವೆಚ್ಚಗಳ ವಿರುದ್ಧ ರಕ್ಷಣೆ ನೀಡಲು ವಿಫಲವಾದಾಗ ಕ್ರಿಟಿಕಲ್ ಇಲ್ನೆಸ್ ಪಾಲಿಸಿಗಳಿಂದ ಬರುವ ಹೆಚ್ಚುವರಿ ಹಣಕಾಸಿನ ನೆರವು ನಿಮಗೆ ಸಹಾಯ ಮಾಡಬಹುದು.
ಹೀಗಾಗಿ, ದೇಶದಲ್ಲಿ ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯಸೇವೆಗಳ ಬಗ್ಗೆ ನಿಮಗಿರುವ ಚಿಂತೆ ಸಮರ್ಥನೀಯವಾದುದು.
ಗುಣಮಟ್ಟದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳನ್ನು ಪಡೆದುಕೊಳ್ಳುವ ಪ್ರಯೋಜನವೆಂದರೆ ಕೆಲವು ತೀವ್ರ ಕಾಯಿಲೆಗಳು ತಂದೊಡ್ಡುವ ಆರ್ಥಿಕ ಹೊಣೆಗಾರಿಕೆಗಳನ್ನು ಈ ಪಾಲಿಸಿಗಳು ಒದಗಿಸುವ ಭಾಗಶಃ ರಕ್ಷಣೆಯಿಂದ ದೂರ ಮಾಡಬಹುದು. ನಿಮಗೆ ಕೆಲವು ಅನಾರೋಗ್ಯದ ಪರಿಸ್ಥಿತಿಗಳು ಕಂಡುಬಂದಲ್ಲಿ ಈ ಪ್ಲಾನ್ ಗಳು ಹಾಸ್ಪಿಟಲೈಸೇಷನ್ ಶುಲ್ಕಗಳು, ಹಾಸ್ಪಿಟಲೈಸೇಷನ್ ಪೂರ್ವ ಮತ್ತು ನಂತರದ ವೆಚ್ಚಗಳು, ಔಷಧೀಯ ವೆಚ್ಚಗಳು ಮತ್ತು ಹೆಚ್ಚಿನ ವೆಚ್ಚಗಳನ್ನು ಒಳಗೊಂಡಂತೆ ಎಲ್ಲಾ ಚಿಕಿತ್ಸಾ ವೆಚ್ಚವನ್ನು ನಿಮಗೆ ಮರುಪಾವತಿಸುತ್ತವೆ.
ಆದ್ದರಿಂದ, ನೀವು ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸಿದರೆ ಅಲ್ಲಿಗೆ ನೀವು ಸುರಕ್ಷಿತವಾಗಿರುತ್ತೀರಿ, ಹೌದು ತಾನೇ? ತಪ್ಪು!
ಸ್ಟ್ಯಾಂಡರ್ಡ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಕೇವಲ ಕೆಲವು ನಿರ್ದಿಷ್ಟಪಡಿಸಿದ ರೋಗ ಮತ್ತು ಅವುಗಳ ಕಾರ್ಯವಿಧಾನಗಳಿಂದ ಉಂಟಾಗುವ ಹಣಕಾಸಿನ ಲಯಬಿಲಿಟಿಗಳಿಂದ ಮಾತ್ರ ರಕ್ಷಿಸುತ್ತವೆ. ನಿಮ್ಮ ಸಾಮಾನ್ಯ ಮೆಡಿಕಲ್ ಇನ್ಶೂರೆನ್ಸ್ ಪಾಲಿಸಿಯು ಸಾಮಾನ್ಯ ಅನ್ನಿಸುವ ತೀವ್ರವಾದ ಕಾಯಿಲೆಗಳ ಚಿಕಿತ್ಸಾ ವೆಚ್ಚವನ್ನು ಸರಿದೂಗಿಸಲು ಅಗತ್ಯವಿರುವ ಸಮ್ ಇನ್ಶೂರ್ಡ್ ಅನ್ನು ನೀಡುವುದಿಲ್ಲ ಎಂಬುದು ನೀವು ಅರ್ಥಮಾಡಿಕೊಳ್ಳಬೇಕಾದ ಪ್ರಮುಖ ಅಂಶ.
ಉದಾಹರಣೆಗೆ, ನೀವು ಕ್ಯಾನ್ಸರ್, ಹೃದ್ರೋಗ ಅಥವಾ ಅಂಗಾಂಗ ಕಸಿಯ ಅಗತ್ಯ ಹೊಂದಿದ್ದರೆ ಅಂತಹ ಕಾಯಿಲೆಗಳ ಚಿಕಿತ್ಸೆಯ ವೆಚ್ಚವನ್ನು ಭರಿಸಲು ನಿಮ್ಮ ಮೆಡಿಕಲ್ ಇನ್ಶೂರೆನ್ಸ್ ಪಾಲಿಸಿಯು ಸಾಕಾಗುವುದಿಲ್ಲ. ಈ ಪರಿಸ್ಥಿತಿಗಳು ಮತ್ತು ಸನ್ನಿವೇಶಗಳ ವಿರುದ್ಧ ಆರ್ಥಿಕವಾಗಿ ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ಕ್ರಿಟಿಕಲ್ ಇಲ್ನೆಸ್ ಪಾಲಿಸಿಯನ್ನು ಪಡೆದುಕೊಳ್ಳಬೇಕು.
ಕ್ರಿಟಿಕಲ್ ಇಲ್ನೆಸ್ ಪಾಲಿಸಿಯ ಪ್ರಯೋಜನಗಳನ್ನು ನಿರ್ಧರಿಸುವಾಗ ಕೆಳಗೆ ತಿಳಿಸಲಾದ ನಾಲ್ಕು ಅಂಶಗಳ ಬಗ್ಗೆ ನೀವು ತಿಳಿದಿರಬೇಕು.
ಕ್ರಿಟಿಕಲ್ ಇಲ್ನೆಸ್ ಗಳು ಇತರ ಯಾವುದೇ ಪರಿಸ್ಥಿತಿಗಳಂತೆ ಸಾಮಾನ್ಯವಾಗಿವೆ ಮತ್ತು ವ್ಯಾಪಕವಾಗಿವೆ. ಸ್ಟ್ಯಾಂಡರ್ಡ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಅಗತ್ಯತೆಯನ್ನು ನೀವು ಅರ್ಥಮಾಡಿಕೊಂಡರೆ ಕ್ರಿಟಿಕಲ್ ಇಲ್ನೆಸ್ ಪಾಲಿಸಿಯನ್ನು ಆಯ್ಕೆಮಾಡುವುದು ಏಕೆ ಅತ್ಯಗತ್ಯ ಎಂಬುದನ್ನು ಗ್ರಹಿಸಲು ನಿಮಗೆ ಸಾಧ್ಯವಾಗುತ್ತದೆ.