ಕೊರೋನಾ ರಕ್ಷಕ್ ನೀತಿ ಎಂದರೇನು?
ಕೊರೋನಾ ರಕ್ಷಕ್ ಪಾಲಿಸಿಯು ನೀವು ಅಥವಾ ಕುಟುಂಬದ ಸದಸ್ಯರು ಸೋಂಕಿಗೆ ಒಳಗಾಗಿದ್ದರೆ ಮತ್ತು ಕೊರೋವೈನಾರಸ್ನಿಂದ ಆಸ್ಪತ್ರೆಗೆ ದಾಖಲಾದರೆ ಸಂಭಾವ್ಯ ಮೆಡಿಕಲ್ ವೆಚ್ಚಗಳಿಗಾಗಿ ನಿಮ್ಮನ್ನು ಕವರ್ ಮಾಡುವ ಒಂದು ಲಂಪ್ಸಮ್(ಭಾರೀ ಮೊತ್ತದ)ಪ್ರಯೋಜನದ ಪಾಲಿಸಿಯಾಗಿದೆ. ಈ ಕೋವಿಡ್ ಇನ್ಶೂರೆನ್ಸ್ ಕವರ್ ಅನ್ನು ವಿಭಿನ್ನವಾಗಿಸುವುದು ಏನೆಂದರೆ, ಇದು ರಿಇಂಬರ್ಸ್‌ಮೆಂಟ್ ಅಥವಾ ಕ್ಯಾಶ್ಲೆಸ್ ಚಿಕಿತ್ಸೆ ಸೌಲಭ್ಯಗಳನ್ನು ನೀಡುವ ಬದಲು ಕ್ಲೈಮ್ನ ಸಂದರ್ಭದಲ್ಲಿ ಸಂಪೂರ್ಣ ಸಮ್ ಇನ್ಶೂರ್ಡ್ ಅನ್ನು ಒದಗಿಸುತ್ತದೆ.
ಕೊರೋನಾ ರಕ್ಷಕ್ ಪಾಲಿಸಿಯ ವೈಶಿಷ್ಟ್ಯಗಳು
ಕೊರೋನಾ ರಕ್ಷಕ್ ಅಡಿಯಲ್ಲಿ ಏನೆಲ್ಲಾ ಕವರ್ ಆಗಿದೆ?
ಕೊರೋನಾ ರಕ್ಷಕ್ ಅಡಿಯಲ್ಲಿ ಏನೆಲ್ಲಾ ಕವರ್ ಆಗಿರುವುದಿಲ್ಲ?
ಕೊರೋನಾ ರಕ್ಷಕ್ ಪಾಲಿಸಿ ಪ್ರೀಮಿಯಂ ಕ್ಯಾಲ್ಕುಲೇಟರ್
ನೀವು ಯಾವ ರೀತಿಯ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದರ ಆಧಾರದ ಮೇಲೆ, ಕೊರೋನಾ ರಕ್ಷಕ್ ಯೋಜನೆಗಾಗಿ ನಿಮ್ಮ ಪ್ರೀಮಿಯಂ ಹೇಗಿರಬಹುದು ಎಂಬುದರ ಸಾರಾಂಶ ಇಲ್ಲಿದೆ:
ಸಮ್ ಇನ್ಶೂರ್ಡ್ | ಪ್ರೀಮಿಯಂ (ಅವಧಿ- 3.5 ತಿಂಗಳು) | ಪ್ರೀಮಿಯಂ (ಅವಧಿ- 6.5 ತಿಂಗಳು) | ಪ್ರೀಮಿಯಂ (ಅವಧಿ- 9.5 ತಿಂಗಳು) |
₹50,000 | ₹700 ರಿಂದ | ₹900 ರಿಂದ | ₹1000 ದಿಂದ |
₹1 ಲಕ್ಷ | ₹1500 ರಿಂದ | ₹1800 ರಿಂದ | ₹2000 ದಿಂದ |
₹1.5 ಲಕ್ಷ | ₹2300 ರಿಂದ | ₹2700 ರಿಂದ | ₹3,100 ರಿಂದ |
₹2 ಲಕ್ಷ | ₹3000 ದಿಂದ | ₹3600 ರಿಂದ | ₹4,100 ರಿಂದ |
₹2.5 ಲಕ್ಷಗಳು | ₹3800 ರಿಂದ | ₹4600 ರಿಂದ | ₹5,100 ರಿಂದ |
ಕೊರೋನಾ ರಕ್ಷಕ್ ಇನ್ಶೂರೆನ್ಸ್ ಪಾಲಿಸಿಯ ಅನುಕೂಲಗಳು ಮತ್ತು ಅನಾನುಕೂಲಗಳು
ಅನುಕೂಲಗಳು |
ಅನಾನುಕೂಲಗಳು |
ಒಂದು-ಬಾರಿ ಪ್ರೀಮಿಯಂ ಪಾವತಿ: ಕೊರೋನಾ ರಕ್ಷಕ್ ಅಲ್ಪಾವಧಿಯ ಕವರ್ ಆಗಿರುವುದರಿಂದ, ಖರೀದಿಯ ಸಮಯದಲ್ಲಿ ನೀವು ಒಮ್ಮೆ ಮಾತ್ರ ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ. |
ಅಲ್ಪಾವಧಿಯ ಕವರ್ ಮಾತ್ರ: ಕೊರೋನಾ ರಕ್ಷಕ್ ನ ಪ್ರಮುಖ ಅನಾನುಕೂಲವೆಂದರೆ, ಇದು ಅಲ್ಪಾವಧಿಗೆ ಮಾತ್ರ ಮಾನ್ಯವಾಗಿರುತ್ತದೆ, 3.5 ತಿಂಗಳಿಂದ 9.5 ತಿಂಗಳ ನಂತರ ಪಾಲಿಸಿ ಮುಕ್ತಾಯವಾಗುತ್ತದೆ. |
ಲಂಪ್ಸಮ್ ಮೊತ್ತ: ಬಿಲ್‌ಗಳನ್ನು ರಿಇಂಬರ್ಸ್‌ಮೆಂಟ್ ಮಾಡಿಸುವ ಬದಲು, ಕೊರೋನಾ ರಕ್ಷಕ್ ನ ಬಗ್ಗೆ ಉತ್ತಮವಾದ ವಿಷಯವೆಂದರೆ ಕ್ಲೈಮ್‌ಗಳ ಸಮಯದಲ್ಲಿ ನೀವು ಸಂಪೂರ್ಣ ಸಮ್ ಇನ್ಶೂರ್ಡ್ ಅನ್ನು ಒಂದು ದೊಡ್ಡ ಮೊತ್ತ ಅಂದರೆ ಲಂಪ್ಸಮ್ ಆಗಿ ಸ್ವೀಕರಿಸುತ್ತೀರಿ. |
ಸೀಮಿತ ಸಮ್ ಇನ್ಶೂರ್ಡ್: ಇದು ಕೊರೋನಾವೈರಸ್ ಸಂಬಂಧಿತ ಚಿಕಿತ್ಸೆಗೆ ಮಾತ್ರ ನಿರ್ದಿಷ್ಟವಾದ ಹೆಲ್ತ್ ಇನ್ಶೂರೆನ್ಸ್ ಆಗಿರುವುದರಿಂದ, ಸಮ್ ಇನ್ಶೂರ್ಡ್ ಗರಿಷ್ಠ 2.5 ಲಕ್ಷ ರೂ.ಗಳಿಗೆ ಮಾತ್ರ ಸೀಮಿತವಾಗಿರುತ್ತದೆ. |
ಕೈಗೆಟುಕುವ ದರದ ಪ್ರೀಮಿಯಂ: ಕೊರೋನಾ ರಕ್ಷಕ್ ಕೇವಲ ಅಲ್ಪಾವಧಿಯ ಕವರ್ ಆಗಿರುವುದರಿಂದ, ಅದರ ಪ್ರೀಮಿಯಂ ಪ್ರಮಾಣಿತ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಿಗಿಂತ ಹೆಚ್ಚು ಕೈಗೆಟುಕುವಂತದ್ದಾಗಿದೆ. |
ಸೀಮಿತ ಪ್ರಯೋಜನಗಳು: ಕೋವಿಡ್ ರಕ್ಷಣೆಯನ್ನು ಹೊರತುಪಡಿಸಿ, ಕೊರೋನಾ ರಕ್ಷಕ್ ಪಾಲಿಸಿಯ ಪ್ರಯೋಜನಗಳು ಯಾವುದೂ ಇಲ್ಲ. |
ಕಾರ್ಪೊರೇಟ್ ಹೆಲ್ತ್ ಇನ್ಶೂರೆನ್ಸ್ ಹೊಂದಿರುವವರಿಗೆ ಸೂಕ್ತವಾಗಿರುತ್ತದೆ: ನೀವು ಈಗಾಗಲೇ ಕಾರ್ಪೊರೇಟ್ ಹೆಲ್ತ್ ಇನ್ಶೂರೆನ್ಸ್ ಹೊಂದಿರುವವರಾಗಿದ್ದರೆ ಮತ್ತು ಕೊರೋನಾವೈರಸ್ ನಿರ್ದಿಷ್ಟ ಕವರ್‌ಗಾಗಿ ಮಾತ್ರ ಹುಡುಕುತ್ತಿದ್ದರೆ, ಇದು ನಿಮಗೆ ಸೂಕ್ತವಾದ ಕವರ್ ಆಗುತ್ತದೆ. |
ನೀವು ಈಗಾಗಲೇ ಹೆಲ್ತ್ ಇನ್ಶೂರೆನ್ಸ್ ಅನ್ನು ಹೊಂದಿದ್ದರೆ ಹೆಚ್ಚು ಉಪಯುಕ್ತವಲ್ಲ: ನೀವು ಈಗಾಗಲೇ ಉತ್ತಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ, ಕೊರೊನಾವೈರಸ್ ಚಿಕಿತ್ಸೆಗಳು ಈಗಾಗಲೇ ನಿಮ್ಮ ಪಾಲಿಸಿಯ ಅಡಿಯಲ್ಲಿ ಕವರ್ ಆಗಿರುತ್ತವೆ ಮತ್ತು ಹೀಗಾಗಿ ಹೆಚ್ಚುವರಿ ಕೋವಿಡ್-ನಿರ್ದಿಷ್ಟ ನೀತಿಯು ಸಹಾಯಕವಾಗದಿರಬಹುದು. |
ಕೊರೋನಾ ಕವಚ್ ಮತ್ತು ಕೊರೋನಾ ರಕ್ಷಕ್ ನಡುವಿನ ವ್ಯತ್ಯಾಸ
|
ಕೊರೋನಾ ಕವಚ್ |
ಕೊರೋನಾ ರಕ್ಷಕ್ |
ಪಾಲಿಸಿ ವಿಧ |
ಕೊರೋನಾ ಕವಚ್ ಎಂಬುದು ಒಂದು ಕೋವಿಡ್-ಇನ್ಡೆಮ್ನಿಟಿ ಯೋಜನೆ ಅಂದರೆ ನಷ್ಟ ಪರಿಹಾರ ಯೋಜನೆಯಾಗಿದ್ದು, ಒಬ್ಬ ವ್ಯಕ್ತಿಯು ಕೋವಿಡ್-19 ಗೆ ಚಿಕಿತ್ಸೆ ಪಡೆಯುತ್ತಿರುವಾಗ ಅವರ ಆಸ್ಪತ್ರೆಯ ಬಿಲ್‌ಗಳನ್ನು ಕವರ್ ಮಾಡಲು ಸಹಾಯ ಮಾಡುತ್ತದೆ. |
ಕೊರೋನಾ ರಕ್ಷಕ್ ಒಂದು ಕೋವಿಡ್-ಪ್ರಯೋಜನ ಪಾಲಿಸಿಯಾಗಿದೆ. ಇಲ್ಲಿ, ನಿರ್ದಿಷ್ಟ ಆಸ್ಪತ್ರೆ ಬಿಲ್‌ಗಳನ್ನು ಕವರ್ ಮಾಡುವ ಬದಲು ಒಂದು ಲಂಪ್ಸಮ್ ಪ್ರಯೋಜನವನ್ನು ನೀಡಲಾಗುತ್ತದೆ, ಅಂದರೆ ವೈರಸ್‌ಗೆ ಚಿಕಿತ್ಸೆ ಪಡೆಯಬೇಕಾದರೆ ಪಾಲಿಸಿದಾರರು ಸಂಪೂರ್ಣ ಸಮ್ ಇನ್ಶೂರ್ಡ್ ಅನ್ನು ಪಡೆಯುತ್ತಾರೆ. |
ಸಮ್ ಇನ್ಶೂರ್ಡ್ |
ಕನಿಷ್ಠ ರೂ 50,000 ಮತ್ತು ಗರಿಷ್ಠ ರೂ 5 ಲಕ್ಷಗಳ ನಡುವೆ ಆಯ್ಕೆಮಾಡಿ. |
ಕನಿಷ್ಠ ರೂ 50,000 ರಿಂದ ಗರಿಷ್ಠ ರೂ 2.5 ಲಕ್ಷಗಳ ನಡುವೆ ಆಯ್ಕೆಮಾಡಿ. |
ಹಾಸ್ಪಿಟಲೈಸೇಷನ್ ಷರತ್ತುಗಳು |
ಒಬ್ಬ ವ್ಯಕ್ತಿಗೆ 24-ಗಂಟೆಗಳಿಗಿಂತ ಹೆಚ್ಚು ಕಾಲ ಹಾಸ್ಪಿಟಲೈಸೇಷನ್ಯ ಅಗತ್ಯವಿದ್ದರೆ ಅವರು ಕೊರೋನಾ ಕವಚ್ ಕವರ್ ಮೂಲಕ ಕ್ಲೈಮ್ ಮಾಡಬಹುದು. |
ವ್ಯಕ್ತಿಯ ಹಾಸ್ಪಿಟಲೈಸೇಷನ್ 72-ಗಂಟೆಗಳನ್ನು ಮೀರಿದರೆ ಮಾತ್ರ ಅವರು ತಮ್ಮ ಕೊರೋನಾ ರಕ್ಷಕ್ ಮೂಲಕ ಕ್ಲೈಮ್ ಮಾಡಿ ಲಂಪ್ಸಮ್ ಅನ್ನು ಪಡೆಯಬಹುದು. |
ಲಭ್ಯವಿರುವ ಯೋಜನೆಗಳ ವಿಧ |
ಕೊರೋನಾ ಕವಚ್‌ನಲ್ಲಿ, ನೀವು ಫ್ಯಾಮಿಲಿ ಫ್ಲೋಟರ್ ಮತ್ತು ವೈಯಕ್ತಿಕ ಯೋಜನೆಯ ನಡುವೆ ಆಯ್ಕೆ ಮಾಡಬಹುದು. |
ಕೊರೋನಾ ರಕ್ಷಕ್ ಕವರ್‌ನಲ್ಲಿ, ನೀವು ವೈಯಕ್ತಿಕ ಯೋಜನೆಯನ್ನು ಮಾತ್ರ ಆರಿಸಿಕೊಳ್ಳಬಹುದು, ಇಲ್ಲಿ ಫ್ಯಾಮಿಲಿ ಫ್ಲೋಟರ್ ನ ಆಯ್ಕೆ ಇಲ್ಲ. |
ಹೆಚ್ಚುವರಿ ಪ್ರಯೋಜನಗಳು |
ಕೊರೋನಾ ಕವಚ್ ಪಾಲಿಸಿಯಲ್ಲಿ, ನೀವು ದೈನಂದಿನ ಆಸ್ಪತ್ರೆಯ ಕ್ಯಾಷ್ ಕವರ್ ಅನ್ನು ಸಹ ಆರಿಸಿಕೊಳ್ಳಬಹುದು, ಇದರಲ್ಲಿ ನೀವು ಆಸ್ಪತ್ರೆಗೆ ದಾಖಲಾದ ಪ್ರತಿ ದಿನಕ್ಕೆ ನಿಮ್ಮ ಸಮ್ ಇನ್ಶೂರ್ಡ್ ನ 0.5% ಅನ್ನು ಪಡೆಯಬಹುದು. |
ಕೊರೋನಾ ರಕ್ಷಕ್ ಪಾಲಿಸಿಯಲ್ಲಿ ಯಾವುದೇ ಹೆಚ್ಚುವರಿ ಪ್ರಯೋಜನಗಳು ಅಥವಾ ಕವರ್‌ಗಳು ಲಭ್ಯವಿಲ್ಲ. |
ಕೊರೋನಾ ರಕ್ಷಕ್ ಮತ್ತು ಒಂದು ಪ್ರಮಾಣಿತ ಹೆಲ್ತ್ ಇನ್ಶೂರೆನ್ಸ್ ನಡುವಿನ ವ್ಯತ್ಯಾಸ
ಕೊರೋನಾ ರಕ್ಷಕ್ |
ಸ್ಟಾಂಡರ್ಡ್ ಹೆಲ್ತ್ ಇನ್ಶೂರೆನ್ಸ್ |
ಕೊರೋನಾ ರಕ್ಷಕ್ ಪಾಕೆಟ್ ಗಾತ್ರದ ಇನ್ಶೂರೆನ್ಸ್ ಪಾಲಿಸಿಯಾಗಿದ್ದು, ಇದು ಕೇವಲ ಕೋವಿಡ್-19 ಗೆ ಸಂಬಂಧಿಸಿದ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಒಂದು ದೊಡ್ಡ ಮೊತ್ತದ ಪ್ರಯೋಜನ ಅಥವಾ ಲಂಪ್ಸಮ್ ಅನ್ನು ಒದಗಿಸುತ್ತದೆ. |
ಕೊರೋನಾವೈರಸ್ ಅನ್ನು ಕವರ್ ಮಾಡುವ ಹೆಲ್ತ್ ಇನ್ಶೂರೆನ್ಸ್ ಎಂದರೆ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಇತರ ಕಾಯಿಲೆಗಳು ಮತ್ತು ರೋಗಗಳ ಜೊತೆ ಕೊರೋನವೈರಸ್ ಅನ್ನು ಸಹ ಕವರ್ ಮಾಡುತ್ತದೆ. ಪ್ರತ್ಯೇಕ ರೋಗಕ್ಕಾಗಿ ನೀವು ಪ್ರತ್ಯೇಕ ಕವರ್ ಅಥವಾ ಪಾಲಿಸಿಯನ್ನು ಖರೀದಿಸಬೇಕಾಗಿಲ್ಲ. ನಿಮ್ಮ ಹೆಲ್ತ್ ಇನ್ಶೂರೆನ್ಸ್ ಎಲ್ಲವನ್ನೂ ಒಳಗೊಂಡಿರುತ್ತದೆ. |
ಕೊರೋನಾ ರಕ್ಷಕ್ ಅಲ್ಪಾವಧಿಯ ಪಾಲಿಸಿಯಾಗಿದೆ ಮತ್ತು ಒಮ್ಮೆ ಕ್ಲೈಮ್ ಮಾಡಿದ ನಂತರ ಅಥವಾ 3.5 ರಿಂದ 9.5 ತಿಂಗಳ ಅವಧಿಯ ನಂತರ (ಆಯ್ಕೆ ಮಾಡಿದ ಯೋಜನೆಯನ್ನು ಆಧರಿಸಿ) ಪಾಲಿಸಿಯು ಮಾನ್ಯವಾಗಿರುವುದಿಲ್ಲ. |
ಹೆಲ್ತ್ ಇನ್ಶೂರೆನ್ಸ್ ದೀರ್ಘಾವಧಿಯ ಪಾಲಿಸಿಯಾಗಿದೆ (ನೀವು 1 ವರ್ಷದಿಂದ ಬಹು-ವರ್ಷದ ಯೋಜನೆಗಳ ಆಯ್ಕೆ ಮಾಡಬಹುದು) ಮತ್ತು ನಿಮ್ಮ ಒಟ್ಟು ಕ್ಲೈಮ್‌ಗಳು ನಿಮ್ಮ ಒಟ್ಟು ಸಮ್ ಇನ್ಶೂರ್ಡ್ ಗಿಂತ ಹೆಚ್ಚಿಗೆ ಹೋಗದಿರುವವರೆಗೆ ನೀವು ವರ್ಷದಲ್ಲಿ ಹಲವು ಬಾರಿ ಕ್ಲೈಮ್ ಮಾಡಬಹುದು. |
ಕೊರೋನವೈರಸ್ ಅನ್ನು ಕವರ್ ಮಾಡುವ ಹೊರತಾಗಿ, ಒಂದು ಕೊರೋನಾವೈರಸ್ ಇನ್ಶೂರೆನ್ಸ್ ನ ಯಾವುದೇ ಹೆಚ್ಚುವರಿ ಪ್ರಯೋಜನಗಳಿಲ್ಲ. |
ಕೊರೋನವೈರಸ್ ಅನ್ನು ಕವರ್ ಮಾಡುವ ಹೊರತಾಗಿ, ಒಂದು ಪ್ರಮಾಣಿತ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಮೆಟರ್ನಿಟಿ ಮತ್ತು ನವಜಾತ ಶಿಶುಗಳ ಕವರ್, ಒಪಿಡಿ, ಡೇಕೇರ್ ಕಾರ್ಯವಿಧಾನಗಳು ಮತ್ತು ಇತರ ಹಲವು ಪ್ರಯೋಜನಗಳೊಂದಿಗೆ ಬರುತ್ತದೆ. |
ತೆರಿಗೆ ಉಳಿತಾಯಕ್ಕಾಗಿ ನೀವು ಇಂತಹ ಸಿಂಗಲ್ ಕವರ್ ಅನ್ನು ಬಳಸಲಾಗುವುದಿಲ್ಲ. |
ವಿಭಾಗ 80ಡಿ ಅಡಿಯಲ್ಲಿ, ಹೆಲ್ತ್ ಇನ್ಶೂರೆನ್ಸ್ 25,000 ವರೆಗಿನ ತೆರಿಗೆ ಉಳಿತಾಯಕ್ಕೆ ಅರ್ಹವಾಗಿದೆ |
ಇದು ಒಂದು ರೋಗಕ್ಕಾಗಿ ಮಾತ್ರ ನಿರ್ದಿಷ್ಟ ಕವರ್ ಆಗಿರುವುದರಿಂದ ಕೊರೋನಾವೈರಸ್ ಇನ್ಶೂರೆನ್ಸ್ ನ ಪ್ರೀಮಿಯಂ ಕಡಿಮೆ ಇರಬಹುದು. ಇಲ್ಲಿ ಪ್ರೀಮಿಯಂ ನಿಮ್ಮ ವಯಸ್ಸು, ಯೋಜನೆಯ ಅವಧಿ ಮತ್ತು ಆಯ್ಕೆಮಾಡಿದ ಸಮ್ ಇನ್ಶೂರ್ಡ್ ಅನ್ನು ಅವಲಂಬಿಸಿರುತ್ತದೆ. |
ಒಂದು ಪ್ರಮಾಣಿತ ಹೆಲ್ತ್ ಇನ್ಶೂರೆನ್ಸ್ ನ ಪ್ರೀಮಿಯಂ ಕೊರೋನಾ ರಕ್ಷಕ್ ನ ಪ್ರೀಮಿಯಂಗಿಂತ ತುಲನಾತ್ಮಕವಾಗಿ ಹೆಚ್ಚಾಗಿರುತ್ತದೆ. ಈ ಪ್ರೀಮಿಯಂ ಹೆಚ್ಚಾಗಿ ನಿಮ್ಮ ವಯಸ್ಸು, ಸ್ಥಳ, ಆಯ್ಕೆ ಮಾಡಿದ ಆಡ್-ಆನ್ ಕವರ್‌ಗಳು, ಯೋಜನೆ ಮತ್ತು ಆಯ್ಕೆಮಾಡಿದ ಸಮ್ ಇನ್ಶೂರ್ಡ್ ಅನ್ನು ಅವಲಂಬಿಸಿರುತ್ತದೆ. |
ಕೋವಿಡ್-19 ಗಾಗಿ ಹೆಲ್ತ್ ಇನ್ಶೂರೆನ್ಸ್ ಆಯ್ಕೆಗಳು
ಕೋವಿಡ್-19 ಅನ್ನು ಕವರ್ ಮಾಡುವ ಹೆಲ್ತ್ ಇನ್ಶೂರೆನ್ಸ್
ಇಂದು, ಹೆಚ್ಚಿನ ಗುಣಮಟ್ಟದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಕೊರೋನಾವೈರಸ್ ಅನ್ನು ಕವರ್ ಮಾಡುತ್ತವೆ, ಇದು ಒಂದು ಸಾಂಕ್ರಾಮಿಕವಾಗಿದ್ದರೂ ಸಹ. ನೀವು ಈಗಾಗಲೇ ಹೆಲ್ತ್ ಇನ್ಶೂರೆನ್ಸ್ ಅನ್ನು ಪಡೆದಿದ್ದರೆ, ನಿಮ್ಮ ಇನ್ಶೂರರ್ ನೊಂದಿಗೆ ಕೋವಿಡ್-19 ಕವರ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ದೃಢವಾಗಿ ಪರಿಶೀಲಿಸಿ.
ನೀವು ಇನ್ನೂ ಯಾವುದೇ ಹೆಲ್ತ್ ಇನ್ಶೂರೆನ್ಸ್ ಅನ್ನು ಹೊಂದಿಲ್ಲದಿದ್ದರೆ, ನಿಮ್ಮ ಆಯ್ಕೆಗಳ ಮೌಲ್ಯಮಾಪನವನ್ನು ಮಾಡಲು ಮತ್ತು ಕೋವಿಡ್-19 ಗಾಗಿ ಮಾತ್ರವಲ್ಲದೆ, ದೀರ್ಘಾವಧಿಯಲ್ಲಿ ನಿಮ್ಮ ಎಲ್ಲಾ ಇತರ ಆರೋಗ್ಯ ಅಗತ್ಯಗಳಿಗಾಗಿಯೂ ಸಹ ಒಂದನ್ನು ಪಡೆಯಲು ನಿರ್ಧರಿಸಲು ಇದು ಸರಿಯಾದ ಸಮಯವಾಗಿದೆ.
ಇವುಗಳ ಬಗ್ಗೆ ಇನ್ನಷ್ಟು ತಿಳಿಯಿರಿ
ಕೊರೊನಾ ಕವಚ್ ಹೆಲ್ತ್ ಇನ್ಶೂರೆನ್ಸ್
ಕೊರೋನಾ ಕವಚ್ ಪಾಕೆಟ್-ಗಾತ್ರದ ಇನ್ಡೆಮ್ನಿಟಿ ಕವರ್ ಅಂದರೆ ನಷ್ಟ ಪರಿಹಾರ ಕವರ್ ಆಗಿದ್ದು, ಇದು ಒಬ್ಬ ವ್ಯಕ್ತಿಗೆ ತಮ್ಮ ವೈದ್ಯಕೀಯ ವೆಚ್ಚಗಳನ್ನು ಮತ್ತು ಕೋವಿಡ್-19 ಚಿಕಿತ್ಸೆಗಳನ್ನು ಕವರ್ ಮಾಡಲು ಸಹಾಯ ಮಾಡುತ್ತದೆ. ಇದೊಂದು ಅಲ್ಪಾವಧಿಯ ಕವರ್ ಆಗಿದೆ.
ಗ್ರೂಪ್ ಹೆಲ್ತ್ ಇನ್ಶೂರೆನ್ಸ್ - ಕೊರೊನಾವೈರಸ್ ಕವರ್
ಇಂದಿನ ಪರಿಸ್ಥಿತಿಯನ್ನು ಪರಿಗಣಿಸಿ, ಎಲ್ಲಾ ದೊಡ್ಡ ಮತ್ತು ಸಣ್ಣ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಒದಗಿಸುವಂತೆ ಶಿಫಾರಸು ಮಾಡಲಾಗಿದೆ.
ಆದಾಗ್ಯೂ, ಕೆಲವು ಸಣ್ಣ ವ್ಯಾಪಾರಗಳು ಸಮಗ್ರ ಆರೋಗ್ಯ ಯೋಜನೆಗಳನ್ನು ಪಡೆಯಲು ಸಾಧ್ಯವಾಗದಿರಬಹುದು ಎಂದು ನಾವು ಅರ್ಥಮಾಡಿಕೊಂಡಿದ್ದೇವೆ, ಬದಲಿಗೆ ಅವರು ತಮ್ಮ ಉದ್ಯೋಗಿಗಳನ್ನು ಕೊರೋನಾವೈರಸ್ ವಿರುದ್ಧ ಕವರ್ ಮಾಡಲು ಗ್ರೂಪ್ ಕೊರೋನವೈರಸ್ ಕವರ್ ಅನ್ನು ಆಯ್ಕೆ ಮಾಡಬಹುದು.
ಇವುಗಳ ಬಗ್ಗೆ ಇನ್ನಷ್ಟು ತಿಳಿಯಿರಿ